೩೭. ದ್ಯೋಮಣಿರ್ನ ಹೃತ ಇತ್ಯುಡರಾಜ
ಪ್ರತ್ಯಯಾಯ ದಶಾದಿಕ್ಪ್ರಮದಾಭಿಃ |
ಅಂತರಿಕ್ಷಫಣಸೀಮ್ನಿ ವಿಕೀರ್ಣೈ
ರಕ್ಷತೈರಿವ ನಿಶಾಫಣವತ್ಯಾಃ ||

ಸೂರ್ಯನೆಂಬ ಮಣಿಯನ್ನು ಯಾರೂ ಅಪಹರಿಸಿಲ್ಲ ಎಂದು ಉಡುರಾಜ ಚಂದ್ರನಿಗೆ ನಂಬಿಕೆ ಹುಟ್ಟಿಸಲು ದಶದಿಕ್ಕುಗಳೆಂಬ ಸ್ತ್ರೀಯರುಗಳಿಂದ ರಾತ್ರಿಯೆಂಬ ಹೆಣ್ಣು ಹಾವಿನ ಆಕಾಶವೆಂಬ ಹೆಡೆಯ ಮೇಲೆ ಉದುರಿಸಲ್ಪಟ್ಟ ಅಕ್ಷತೆಯ ಕಾಳುಗಳೋ ಎಂಬಂತೆ ನಕ್ಷತ್ರಗಳು ಹೊಳೆಯುತ್ತಿದ್ದವು.

೩೮. ನಾಕಯೋಷಿದುಪಭುಕ್ತನಖಾಗ್ರೋ
ನ್ಮುಕ್ತ ಚಂದನಲವೈರಿವ ಲಗ್ನೈಃ |
ಅಂಧಕಾರಭಕರ್ದಮಜಾತೈ
ರಾಂಗಜೈರಿವ ಯಶೋಂಕುರಜಾಲೈಃ ||

ಅಪ್ಸರಸ್ತ್ರೀಯರು ಉಪಯೋಗಿಸಿ ಉಗುರುಗಳಿಂದ ಆಚೆ ಎಸೆದಾಗ ಅಂಟಕೊಂಡ ಚಂದನರಸದ ಬಿಂದುಗಳೋ ಎಂಬಂತೆ, ಅಂಧಕಾರದ ರಾಶಿಯೆಂಬ ಕೆಸರಿನಲ್ಲಿ ಹುಟ್ಟಿದ ಮನ್ಮಥನ ಕೀರ್ತಿಯ ಮೊಳಕೆಗಳ ಸಮೂಹದಂತೆ ನಕ್ಷತ್ರಗಳು ಮೆರೆಯುತ್ತಿದ್ದುವು.

೩೯. ರೋಹಿಣೀಶಮನುಚಿಂತ್ಯ ತಮಿಸ್ರೈಃ
ರೋಮಹರ್ಷಣಜುಷಃ ಕ್ಷಣದಾಯಾಃ |
ನಿಃಸೃತೈರಿವ ನಿದಾಧಕಣೌಘೈಸ್ತಾ
ರಕೈಸ್ತಬಕಿತಂ ವಿಯದಾಸೀತ್ ||

ಚಂದ್ರನ ಬಗೆಗೆ ಚಿಂತಿಸಿ ಕತ್ತಲೆಯೆಂಬ ರೋಮಾಂಚನವನ್ನು ಪಡೆದ ರಾತ್ರಿಯ ಶರೀರದಿಂದ ಬಂದ ಬೆವರಿನ ಹನಿಗಳೋ ಎಂಬಂತಿದ್ದ ನಕ್ಷತ್ರಗಳಿಂದ ಆಕಾಶವು ಗೊಂಚಲೊಡೆಯಿತು.

೪೦. ಕೌಮುದೀಪಯಸಿಕಲ್ಪಿತ ಭೂಯಃ
ಕೇಲಿಷೂತ್ಪಿಬಕಿಶೋರಕುಲೇಷು |
ನಾಕಸೀಮ್ಮಿ ನಲಿನೀದಲಕೀರ್ಣೈ
ಸ್ತತ್ಕಣೌರುಡುಗಣೈಸ್ಸಮಭಾವಿ ||

ಬೆಳದಿಂಗಳಿನ ಹಾಲಿನಲ್ಲಿ ಚಕೋರಪಕ್ಷಿಗಳು ತುಂಬ ಆಟವಾಡಿದಾಗ ಆ ಹಾಲಿನ ಕಣಗಳೇ ನಕ್ಷತ್ರಗಳ ಗುಂಪುಗಳಾದವು.

೪೧. ಅರ್ದಿತಸ್ಯ ಜಗತಸ್ತಿಮಿರೌಘೈ
ರರ್ಪಿತೋ ನು ಕೃಪಯಾsಭಯಹಸ್ತಃ |
ಉದ್ಯಯೌ ಜಲನಿಧೇರುಡುಜಾನೇ
ರಂಶು ಪಲ್ಲವ ಮನುಬ್ಝೆತರಾಗಮ್ ||

ಕತ್ತಲೆಯ ಸಮೂಹದಿಂದ ಪೀಡೆಯನ್ನು ಅನುಭವಿಸಿದ ಜಗತ್ತಿಗೆ ಕರುಣೆಯಿಂದ ಕೊಟ್ಟ ಅಭಯಹಸ್ತವೋ ಎಂಬಂತೆ ಸಮುದ್ರದ ದೆಸೆಯಿಂದ ಚಂದ್ರನ ಕಿರಣಗಳು ಚಿಗುರು ರಾಗವನ್ನು ಪ್ರೀತಿಯನ್ನು ಮತ್ತು ಕೆಂಬಣ್ಣವನ್ನು ಹೊಂದಿ ಉದಯಿಸಿತು.

೪೨. ದ್ಯೋತಲಂ ತತಮಿವೋಪರಿ ನೀತಂ
ದೂರಿತಾ ಇವ ದಿಶೋ ವಿದಿಶೋsಪಿ |
ಪ್ರಾಪಿತೇವ ಧರಣೀ ಪರಿಣಾಹಂ
ರೋಹಿಣೀವಿಟರುಚಾಂ ನಿಚಯೇನ ||

ರೋಹಿಣಿಯ ಪ್ರಿಯಕರನಾದ ಚಂದ್ರನ ಕಾಂತಿಯ ರಾಶಿಯಿಂದ ಅಕಾಶವು ವಿಸ್ತರಿಸಿದಂತೆ, ಮೇಲಕ್ಕೆ ಒಯ್ಯಲ್ಪಟ್ಟಂತೆ, ದಿಕ್ಕುಗಳೂ ವಿದಿಕ್ಕುಗಳೂ ದೂರಕ್ಕೆ ಸರಿಸಲ್ಪಟ್ಟಂತೆ ಭೂಮಿಯು ವೈಶಾಲ್ಯವನ್ನು ಪಡೆದಂತೆ ಆಯಿತು.

೪೩. ಅರ್ಕಹೇಮಕಲಶೇsರ್ಣವಮಗ್ರೇ
ಕಾಲಚಕ್ರಘಟಿಯಂತ್ರವಶೇನ |
ಉತ್ಥಿತೋsಲಿಯಮಿತರೋಧೃತರಶ್ಮಿಃ
ಸಂಭೃತಾಮೃತರಸಶಶಶಿಕುಂಭಃ ||

ಸೂರ್ಯನೆಂಬ ಚಿನ್ನದ ಬಿಂದಿಗೆಯು ಕಾಲಚಕ್ರವೆಂಬ ಘಟೀಯಂತ್ರದ ಮಹಿಮೆಯಿಂದ ಸಮುದ್ರದಲ್ಲಿ ಮುಳುಗಿತು. ಇನ್ನೊಂದು ಕಡೆ ಹಗ್ಗವನ್ನು ಎಳೆದಾಗ ಅಮೃತರಸವನ್ನು ತುಂಬಿಕೊಂಡ ಚಂದ್ರನೆಂಬ ಈ ಕೊಡವು ಮೇಲಕ್ಕೆ ಎದ್ದಿತು.

೪೪. ಮಜ್ಜತೋ ಮಹತಿ ಸಂತಮಸಾಖ್ಯೇ
ವಾರಿಧೌ ತರಣಿಭಂಗವಶೇನ |
ಪಾಲನಾಯ ಜಗತಃ ಪರಮಾಸೀ
ದಾತ್ತರಶಮ್ಯುಡುಪಮಂಡಲಮಗ್ರೇ ||

ಸೂರ್ಯನು ಅಸ್ತಂಗತನಾದುದರಿಂದ ಇಲ್ಲವೇ ದೋಣಿಯು ಮುಳುಗುವಿಕೆಯಿಂದ ಕತ್ತಲೆಯೆಂಬ ಸಮುದ್ರದಲ್ಲಿ ಜಗತ್ತು ಮುಳುಗಿದಾಗ ಅದನ್ನು ರಕ್ಷಿಸುವದಕ್ಕಾಗಿ ರಶ್ಮಿ (ಕಿರಣ/ಹಗ್ಗಗಳನ್ನು) ಹಿಡಿದ ಚಂದ್ರನು ಮೇಲೆ ಬಂದನು.

೪೫. ಶರ್ವರೀರಮಣಬಿಂಬಮಲಾಸೀ
ಚ್ಛಾತಕುಂಭಭೃತಸಾಪ್ತಪದೀನಮ್ |
ಅಂಬರೇ ನವಯವಾಂಚಿತಲಾಕ್ಷಾ
ಮುದ್ರಿಕೇವ ಸಮಯೇನ ವಿತೀರ್ಣಾ ||

ರಾತ್ರಿಯ ರಮಣ ಚಂದ್ರನ ಬಿಂಬವು ಚಿನ್ನದಂತೆ ಹೊಳೆಯುತ್ತಿತ್ತು. ಆಕಾಶದಲ್ಲಿ ಕಾಲವು ಕಲ್ಪಿಸಿದ ಹೊಸ ಯವ (ಜವೆಗೋಧಿ) ಬೀಜಗಳಿಂದ ಅಲಂಕೃತವಾದ ಮುದ್ರಿಕೆಯಂತೆ ಅದು ರಾರಾಜಿಸುತ್ತಿತ್ತು.

೪೬. ಕುಂಕುಮೇನ ರಜಸಾ ಕುನಟೀನಾಂ
ಕೋರಕೈರಪಿ ಕುಸುಂಭಜಪಾನಾಮ್ |
ರಂಜಿತಂ ನು ಸವಿಧೂದಯರಾಗಂ
ವಿಷ್ದಗಂಬರತಲಂ ವಿಲುಲೋಕೇ ||

ಭೂಲೋಕದ ನಟಿಯರ ಕುಂಕುಮದ ಧೂಳಿನಿಂದ, ಕೇಸರಿಯ ಮತ್ತು ದಾಸವಾಳದ ಹೂಗಳ ಕೊನರುಗಳಿಂದ ಬಣ್ಣವನ್ನು ಪಡೆದಿತ್ತೋ ಎಂಬಂತೆ ಚಂದ್ರೋದಯದಿಂದ ವರ್ಣರಂಜಿತವಾದ ಆಕಾಶವು ಕಾಣಿಸುತ್ತಿತ್ತು.

೪೭. ಸಂಧ್ಯಯಾ ಸರಸಕುಂಕುಮಚರ್ಚಾ
ಸಂಪದಂ ಚರಮಾದಿಕ್ ಶ್ರಯತೀತಿ |
ಈರ್ಷಯಾ ಕಿಮು ದಧೌ ಹರಿದೈಂದ್ರೀ
ತಾಂ ವಿಧೋರುದಯರಾಗನಿಭೇನ ||

ಪಶ್ಚಿಮದಿಕ್ಕು ಸಂಜೆಯ ಪ್ರಭಾವದಿಂದ ಸರಸವಾದ ಕುಂಕುಮ ಲೇಪದ ಶೋಭೆಯನ್ನು ಪಡೆದುಕೊಂಡಿದೆ ಎಂಬ ಅಸೂಯೆಯಿಂದ ಪೂರ್ವದಿಕ್ಕು ಚಂದ್ರೋದಯದ ಕೆಂಪುಬಣ್ಣದ ಮೂಲಕ ಆ ಶೋಭೆಯನ್ನು ಪಡೆದುಕೊಂಡಿತೇನೋ.

೪೮. ಸಂಚರತ್ಸು ದಿವಿ ಪತ್ರಿಷು ಸಂಧ್ಯಾ
ಬಾಲಿಕಾಂ ಬತ ನಿರೀಕ್ಷ್ಯ ಸದೋಷಾಮ್ |
ತಂತ್ರವಿದ್ರತಿಪತೇರ್ದ್ವಿಜರಾಜೋ
ವಿಪ್ರಯುಕ್ತಬಲಿಮೇವ ವಿತೇನೇ ||

ಆಕಾಶದಲ್ಲಿ ಪಕ್ಷಿಗಳು ಸಂಚರಿಸುತ್ತಿರಲು, ತಂತ್ರಜ್ಞದ್ವಿಜರಾಜ(ಚಂದ್ರ)ನು ಸದೋಷಳಾದ ಸಂಧ್ಯಾ ಎಂಬ ಬಾಲಿಕೆಯನ್ನು ನೋಡಿ ರತಿಪತಿಯಾದ ಮನ್ಮಥನಿಗೆ ವಿರಹಿಗಳನ್ನು ಬಲಿಯಾಗಿ ಕೊಟ್ಟನು.

೪೯. ಚಂಚುಕೋಟಿಮಿಷದಂಶಿಕಯಾssಶಾ
ಭೂಷಣಾಯ ನು ಚಕೋರಕಲಾದಾಃ |
ಸೌಧಜಾಲನಿಭಯಂತ್ರಣಪಟ್ಟಾ
ಚ್ಚಂದ್ರಧಾಮ ಚಕ್ರಷುಸ್ತಪನೀಯಮ್ ||

ಚಕೋರ ಪಕ್ಷಿಗಳೆಂಬ ಅಕ್ಕಸಾಲಿಗರು ದಿಕ್ಕುಗಳಿಗೆ ಆಭರಣಗಳನ್ನು ಮಾಡಲು ತಮ್ಮ ಕೊಕ್ಕೆಯೆಂಬ ಇಕ್ಕಳದಿಂದ ಸೌಧಗಳ ಸಾಲೆಂಬ ಒರೆಗಲ್ಲಿನ ಮೇಲೆ ಚಂದ್ರನ ಬೆಳೆಕೆಂಬ ಚಿನ್ನವನ್ನು ಉಜ್ಜಿ ನೋಡಿದರೋ ಎಂಬಂತ್ತಿತ್ತು.

೫೦. ರಾಗಶಾಲಿರುಚಿದಂಡಮಹೋಲ್ಕಾ
ಮಂಡಲಾನ್ಯಸಮಚಂಡಮರೀಚಿಃ |
ಶೀರ್ಣತಾರಕುಲಶೀಕರಜಾಲೇ
ಶಾರ್ವರದ್ವಿಪಚಯೇsಪಿ ಚಕಾರ ||

ಕಾಂತಿಹೀನವಾದ ನಕ್ಷತ್ರ ಸಮೂಹವೆಂಬ ನೀರಿನ ಹನಿಗಳನ್ನು ಹೊಂದಿದ್ದ ಕತ್ತಲೆಯೆಂಬ ಗಜಸಮೂಹದಲ್ಲಿ ಚಂದ್ರನು ಕೆಂಪುಬಣ್ಣದ ಕಾಂತಿಯ ದೊಡ್ಡ ಉಲ್ಕೆಗಳ ಮಂಡಲಗಳನ್ನು ನಿರ್ಮಿಸಿದನು.

೫೧. ಪೀಡಯನ್ ರಥಪದಸ್ತನಯುಗ್ಮಂ
ಶ್ಲಿಷ್ಯತಿ ಸ್ಮರಜನೀಂ ಶಿಶಿರಾಂಶುಃ |
ಕುಲಮುದ್ರಜಮಲೀಯತ ಸಂಧ್ಯಾ
ಕುಂಕುಮದ್ರವ ವಿಲೇಪನ ಮಸ್ಯಾಃ ||

ಚಂದ್ರನು ಚಕ್ರವಾಕಗಳೆಂಬ ಸ್ತನಯುಗ್ಮವನ್ನು ಪೀಡಿಸುತ್ತಲೇ ರಾತ್ರಿಯನ್ನು ಆಲಂಗಿಸಿಕೊಂಡನು. ಅವಳ ಸಂಧ್ಯಾರೂಪದ ಕುಂಕುಮ ಲೇಪನವು ಮೀರಿ ಹರಿದು ಕರಗಿ ಹೋಯಿತು.

೫೨. ಬಿಂಬಿತಸ್ಸವಿಧಗೌರಿಕರಾಗಃ
ಪ್ರಾಗ್ಗಿಗರೆರುದಯರಾಗಮಿಷೇಣ |
ಪ್ರತ್ಯಭಾದುಡುವಿಟಸ್ಫಟಿಕೇsಸ್ಮಿ
ನ್ವಿಪ್ರಕಷಿಣಿ ಭಾತಿ ಯದೇಷಃ ||

ಉದಯಕಾಲದ ಕೆಂಬಣ್ಣದ ನೆವದಿಂದ ಪೂರ್ವಾಚಲದ ಗೈರಿಕಾದಿ ಧಾತುಗಳ ಬಣ್ಣವು ಚಂದ್ರನೆಂಬ ಸ್ಫಟಿಕಶಿಲೆಯಲ್ಲಿ ಪ್ರತಿಬಿಂಬಿತವಾಗಿ ಕಾಣಿಸಿತು. ಆ ಚಂದ್ರನು ದೂರ ಹೋದ ಮೇಲೆ ಆ ಕೆಂಬಣ್ಣವು ಕಾಣಿಸುವುದಿಲ್ಲವಷ್ಟೇ.

೫೩. ರಾಗವೇಷಜುಷಿ ರೋಷಕೃಶಾನೌ
ಶಮ್ಯತಿ ಪ್ರದಲನಾತ್ತಿಮಿರಾಣಾಮ್ |
ತದ್ದೃಢಸ್ಥಿತಿವಶೇನ ತಮೀಶೇ
ಕಾಲಿಮಾsಜನಿ ಕಲಂಕಮಿಷೇಣ ||

ಕೆಂಪುಬಣ್ಣದ ವೇಷವನ್ನು ಧರಿಸಿದ್ದ ರೋಷವೆಂಬ ಬೆಂಕಿಯು ಅಂಧಕಾರಗಳ ವಿನಾಶದಿಂದ ಶಾಂತವಾಗಲು, ಅದು ದೃಢವಾಗಿ ಅದುವರೆಗೆ ಇದ್ದ ಕಾರಣದಿಂದ ಚಂದ್ರನಲ್ಲಿ ಕಲಂಕದ ನೆವದಿಂದ ಕಪ್ಪು ಬಣ್ಣ ಉಂಟಾಯಿತು.

೫೪. ಆಲವಾಲಮನುರಾಗಲತಾಯಾಃ
ಕಾಲಶೂಲಧರಪಾಣಿಕಪಾಲಃ |
ಮಾರದಿಗ್ವಿಜಯಮಂಗಲಕುಂಭೋ
ಮರ್ಮಭಿದ್ವಿರಹಿಣಾಂ ಜಲಯಂತ್ರಮ್ ||

ಅನುರಾಗವೆಂಬ ಬಳ್ಳಿಗೆ ಪಾತಿ, ಕಾಲನೆಂಬ ಶಿವನು ಕೈಯಲ್ಲಿ ಹಿಡಿದಿರುವ ಕಪಾಲ, ಮನ್ಮಥನ ದಿಗ್ವಿಜಯದ ಮಂಗಳ ಕಲಶ, ವಿರಹಿಗಳಿಗೆ ಮರ್ಮಭೇದಕವಾದ ಜಲಯಂತ್ರ ಈ ಚಂದ್ರಬಿಂಬ.

೫೫. ಧ್ವಾಂತಭೂತಶಮನಾಯ ದಿನಾಂತ
ಪ್ರಸ್ತುತೋ ವಿಮಲಾಭಾಸ್ಮನಯಂತ್ರಃ ||
ಅರ್ವಿತಸ್ಯ ಕಿರಣೈರಹಿಮಾಂಶೋ
ರಾತಪತ್ರಮಖಿಲಸ್ಯ ಜನಸ್ಯ ||

ಈ ಚಂದ್ರಬಿಂಬವು ಕತ್ತಲೆಯೆಂಬ ಭೂತದ ನಿವಾರಣೆಗಾಗಿ ಸಾಯಂಕಾಲವು ಪ್ರಸ್ತುತಪಡಿಸಿದ ಶುಭ್ರವಾದ ಭಸ್ಮಯಂತ್ರ ಸೂರ್ಯನ ಕಿರಣಗಳಿಂದ ಪೀಡಿತರಾದ ಸಮಸ್ತ ಜನಗಳಿಗೆ ತಂಪುನೀಡುವ ಕೊಡೆ.

೫೬. ಕೌಮುದೀಕಲಶಸಾಗರಮಧ್ಯ
ದ್ವೀಪಮಂಕತುಲಸೀಸಿತಧೀ ಷ್ಣ್ಯಮ್ |
ವಾಸರಾಧಿಪವಿಯೋಗಗೃಹಿತಂ
ವರ್ತುಲಂ ಫಲಕಮಂಬರಲಕ್ಷ್ಯಾಃ ||

ಈ ಚಂದ್ರಬಿಂಬವು ಬೆಳದಿಂಗಳೆಂಬ ಕ್ಷೀರಸಮುದ್ರದ ಮಧ್ಯದಲ್ಲಿರುವ ದ್ವೀಪ. ಕಳಂಕವೆಂಬ ತುಳಸಿಯನ್ನು ಹೊಂದಿರುವ ಶ್ವೇತಗೃಹ. ಸೂರ್ಯನ ವಿರಹವನ್ನು ತಾಳಲಾರದೆ ಆಕಾಶಲಕ್ಷ್ಮಿಯು ಹಿಡಿದಿರುವ ಗುಂಡಾದ ಗುರಾಣಿ.

೫೭. ನರ್ಮಮಾರುತಪಟಸ್ತಟಿನೀನಾಂ
ನಾಯಕೇನ ತತರಶ್ಮಿವಿಮುಕ್ತಃ |
ಇಂದುಬಿಂಬಮಿದಮೈಕ್ಷಿ ವಿಹಾಯೋ
ನಂದಗೋಪತಿಶಿಶೋರ್ನವನೀತಮ್ ||

ನದಿಗಳ ನಾಯಕನಾದ ಸಮುದ್ರದಿಂದ, ಹರಡಿದ ಕಿರಣಗಳ ದಾರದಿಂದ ಹಾರಿಸಲ್ಪಟ್ಟ ಮೃದುವಾದ ಗಾಳಿಯ ಪಟ ಹಾಗೂ ಆಕಾಶವೆಂಬ ನಂದಗೋಪನ ಮಗು ಕೃಷ್ಣನ ಪ್ರೀತಿಯ ಬೆಣ್ಣೆ ಮುದ್ದೆ ಎನಿಸಿದ ಚಂದ್ರಬಿಂಬವು ಆಕಾಶದಲ್ಲಿ ಕಾಣಿಸಿತು.

೫೮. ಪ್ರಸ್ಥಿತೇ ಸ್ಫುಟಗತೀಶ್ವರಚಾಪಾ
ರೋಪಣಾನುಗುಣಮಂಬರವನ್ಯಾಮ್ |
ರಾಮಚಂದ್ರ ಇವ ಪಾದನಿವೇಶಾ
ದಸ್ಯ ಜೀವನಮವಾಸ ಶಿಲಾsಪಿ ||

ಆಕಾಶವೆಂಬ ವನದಲ್ಲಿ ಮನ್ಮಥನ ಬಿಲ್ಲನ್ನು ಹೆದೆ ಏರಿಸಲು ಅನುಕೂಲವಾಗಿ ಚಂದ್ರನು ರಾಮಚಂದ್ರನಂತೆ ಹೊರಟಾಗ ಅವನ ಪಾದದ ಸ್ಪರ್ಶದಿಂದ ಶಿಲೆಯೂ ಜೀವನವನ್ನು ಪಡೆದುಕೊಂಡಿತು.

೫೯. ಪದ್ಮಿನೀ ತತಕರಂ ಹಿಮಭಾಸಾ
ಭಾನುಮಾಲಿನಿ ಗತೇ ಪರಿರಬ್ಧಾ |
ಮೀಲದಬ್ಜನಯನಾಜನಿ ಸೈಷಾ
ಪಾಂಸುಲ ಹಿ ಕಮಿತುಃ ಪುರಕೋsಪಿ ||

ಸೂರ್ಯನು ಅತ್ತ ಹೋಗುತ್ತಿದ್ದಂತೆ ಇತ್ತ ಪದ್ಮಿನಿಯನ್ನು ಚಂದ್ರನು ಕಿರಣಗಳನ್ನು ಚಾಚಿ ತಬ್ಬಿಕೊಂಡನು. ಅವಳು ತನ್ನ ಕಮಲಗಳೆಂಬ ಕಣ್ಣುಗಳನ್ನು ಮುಚ್ಚಿಕೊಂಡಳು. ತನ್ನ ಗಂಡನ ಎದುರಿಗೆ ಅವಳು ಸ್ವೈರಿಣಿಯಾಗಿದ್ದಳಲ್ಲವೇ

೬೦. ಮಂಜುಲಾಲಿವಲಯಾರಮಮದ್ಧಾ
ಮಂದಮುಂಚಲಿ ತಕೋರಕಹಸ್ತಾ |
ಉತ್ಪಲಿನ್ಯಧಿಭುವಾsರ್ಪಿತಮಂಕೇ
ಪಾದಪಲ್ಲವಮಸೌ ಸಮವೋಢ ||

ಉತ್ಪಲಿನಿಯಲ್ಲಿ ಭ್ರಮರಗಳ ಸಾಲಿನರೂಪದ ಬಳೆಗಳು ಸದ್ದು ಮಾಡುತ್ತಿರಲು, ಮೊಗ್ಗೆಂಬ ಹಸ್ತವನ್ನು ಮೆಲ್ಲಗೆ ಮುಂದಕ್ಕೆ ಚಾಚಿ ಚಂದ್ರನು ಅವಳ ಮಡಿಲಿನಲ್ಲಿಟ್ಟ ಚಿಗುರಿನಂತೆ ಕೋಮಲವಾದ ಪಾದಕಿರಣವನ್ನುಅವಳು ಒತ್ತುತ್ತಿದಳು.

೬೧. ಪದ್ಮಿನೀ ಪತಿಶುಚಾ ಮಕರಂದ
ಸ್ತನ್ಯತೋsಪ್ಯಲಿಶಶೂನ್ನ ಪುಪೋಷ |
ಕೂಜತಸ್ಸಮಪುಷನ್ಕುಮುದಿನ್ಯೋ
ಯುಜ್ಯತೇ ವಿಪದಿ ಸೌಹೃದಮೇತತ್ ||

ಗಂಡನ ವಿರಹದಿಂದ ದುಃಖಿತಳಾದ ಪದ್ಮಿನಿಯು ಮಕರಂದವೆಂಬ ಸ್ತನ್ಯವನ್ನಿತ್ತು ಭ್ರಮರಗಳೆಂಬ ಶಿಶುಗಳನ್ನು ಪೋಷಿಸಲಿಲ್ಲ. ಕೂಗಿಕೊಳ್ಳುತ್ತಿದ್ದ ಆ ಭ್ರಮರಗಳಿಗೆ ಕುಮುದಿನಿಯು ಮಕರಂದವನ್ನಿತ್ತು ಪೋಷಿಸಿದಳು. ವಿಪತ್ಕಾಲದಲ್ಲಿ ಇಂಥ ಸ್ನೇಹವು ಯುಕ್ತವಾಗಿಯೇ ಇದೆ.

೬೨. ಪಂಕಜೇಷು ವಸತಿಂ ಭ್ರಮರಾಣಾಂ
ನಾsಸಹಿಷ್ಟ ನಲಿನಿ ರವಿಶೂನ್ಯಾ |
ವಲ್ಲಭೇ ಕ್ವಚನ ಜಗ್ಮುಷಿ ಕಾ ವಾ
ವಾಂಛತೀತರಜನಸ್ಥಿತಿವಾದಮ್ ||

ರವಿಯಿಂದ ವಿರಹಿತಳಾದ ಪದ್ಮಿನಿಯು ತನ್ನ ಪದ್ಮಗಳಲ್ಲಿ ಭ್ರಮರಗಳು ಬಂದು ವಾಸಿಸುವದನ್ನು ಸಹಿಸಲಿಲ್ಲ. ಗಂಡನು ಬೇರೆಲ್ಲೋ ಹೋಗಿದ್ದಾಗ ಇತರ ಪುರುಷರು ಬಂದು ಮನೆಯಲ್ಲಿರುವದನ್ನು ಯಾವಳು ತಾನೆ ಸಹಿಸುತ್ತಾಳೆ

೬೩. ಚಾಲಯನ್ಸನಿನದಂ ಭ್ರಮರಲೀ
ಲೇಖಿನೀಂ ದಿನವಿರಾಮಸಮೀರಃ |
ನ್ಯೂನ ಮುತ್ಪಲದಲೇಷು ಸುಮೇಷೋ
ರ್ವಿಶ್ವಶಾಸನಲಿಪಿಂ ವಿಲಿಲೇಖ ||

ದುಂಬಿಗಳೆಂಬ ಸಾಲಿನ ಲೇಖನಿಯನ್ನು, ಶಬ್ದ ಸಹಿತವಾಗಿ ತಿರುಗಿಸುತ್ತಾ, ಸಾಯಂಕಾಲದ ಗಾಳಿಯು ನೈದಿಲೆಯ ದಳಗಳಲ್ಲಿ ಮನ್ಮಥನ ಆಜ್ಞೆಯನ್ನು ಬರೆಯುತ್ತಿದ್ದನೋ ಎಂಬಂತಿತ್ತು.

೬೪. ರೋಹಿಣೀರಮಣರಾಗಕೃಶಾನು
ಪ್ಲುಷ್ಟಸಂತಮಸಭಾಸ್ಮನರಾಶಿಃ |
ಶೀರ್ಣಸಾಂಧ್ಯರುಚಿಸೂನವಿತಾನ
ವ್ರೋ||

ಬೆಳದಿಂಗಳು ಚಂದ್ರನ ಕೆಂಬಣ್ಣವೆಂಬ ಬೆಂಕಿಯಲ್ಲಿ ಸುಟ್ಟ ಕತ್ತಲಿನ ಭಸ್ಮರಾಶಿ. ಸಂಧ್ಯಾಕಾಲದ ಕಾಂತಿಯೆಂಬ ಹೂಗಳ ಚಪ್ಪರವನ್ನು ಹಾಸಿದ್ದ ಆಕಾಶವೆಂಬ ಬೂರುಗದ ಮರದ ನಿರ್ಮಲವಾದ ಹತ್ತಿ.

೬೫. ತಾರಕಾಂಕುರಪಯಃ ಪರಿವಾಹ
ಸ್ತ್ಯಾಜೀತಸ್ತತಿತಸ್ಸಮಯೇನ |
ವ್ರೋವಿಧುಹಂಸ
ವ್ಯಾಪೃತಾ ವಿಶದಪಕ್ಷತೀಪಾಲೀ ||

ಬೆಳದಿಂಗಳು ಅದು ನಕ್ಷತ್ರಗಳಲ್ಲಿ ಅಂಕುರಿಸಿದ ಕಾಲದಿಂದ ಅತ್ತಿತ್ತ ಹರಿದ ಹಾಲಿನ ಪ್ರವಾಹ, ಆಕಾಶವನ್ನು ಲಂಘಿಸಿ ಹಾರಿಹೋಗುವದಕ್ಕಾಗಿ ಚಂದ್ರನೆಂಬ ಹಂಸವು ಹರಡಿದ ಬಿಳಿಯ ರೆಕ್ಕೆ.

೬೬. ಇಂದುಬಿಂಬನಿಭನೀವಿವಿರಾಜ
ಧ್ಯಾಮಿನೀವಿತತಧೌತದುಕೂಲಃ |
ಕಾಮಭೂರಮಣದಿಗ್ಜಯಯಾತ್ರಾ
ಕಾಲಸೂಚಕಶರದ್ಘನಸಂಘಃ ||

ಬೆಳದಿಂಗಳು ಚಂದ್ರಬಿಂಬದೊಂದಿಗೆ ಗಂಟು ಹಾಕಿರುವ, ವಿರಾಜಮಾನಳಾದ ರಾತ್ರಿಯೆಂಬ ಸ್ತ್ರೀಯು ವಿಶಾಲವಾದ ರೇಶ್ಮೆಯ ದುಕೂಲ. ಮನ್ಮಥ ಮಹಾರಾಜನ ದಿಗ್ವಿಜಯ ಯಾತ್ರೆಯ ಕಾಲವನ್ನು ಸೂಚಿಸುವ ಶರನ್ಮೇಘಗಳ ಸಮೂಹ.

೬೭. ಸಂಭದಕ್ಷಣಸಮುತ್ಥಿತಮಿಂದುಂ
ಕೌತುಕಾದನುಗತಃ ಕಲಶಾಬ್ಧಿಃ |
ಇಂದುರಾಗಲಹರೀಮಯಹೇಮ್ನಃ
ಪಾಂಡರೀಕರಣಪಾರದಜಾತಮ್ ||

ಬೆಳದಿಂಗಳು ಚಂದ್ರನು ಹುಟ್ಟಿದ ಕೂಡಲೇ ಅವನನ್ನು ಕುತೂಹಲದಿಂದ ಹಿಂಬಾಲಿಸಿ ಬಂದ ಕ್ಷೀರಸಾಗರ. ಚಂದ್ರನ ಕೆಂಪುಬಣ್ಣದಿಂದ ಕೂಡಿದ ಚಿನ್ನವನ್ನು ಬೆಳ್ಳಗೆ ಮಾಡಲು ತಂದಿರಿಸಿರುವ ಪಾದರಸದ ರಾಶಿ.

೬೮. ಅಂಧಕಾರ ವಿಜಯಾದಮೃತಾಂಶೋ
ರ್ನಿಸೃತಂ ನವಯಶೋನಿಕುರುಂಬಮ್ |
ಸತ್ಪಥಾಲಯಸುಧಾರಸಚರ್ಚಾ
ಚಂದ್ರಿಕಾ ದಿಶಿ ಚಮತ್ಕೃತಿಮೂಹೇ ||

ಬೆಳದಿಂಗಳು, ಕತ್ತಲೆಯ ಮೇಲೆ ಚಂದ್ರನು ವಿಜಯವನ್ನು ಸಾಧಿಸಿದ್ದರಿಂದ ಹುಟ್ಟಿದ ಹೊಸ ಯಶಸ್ಸಿನ ಸಮೂಹ ಹಾಗೂ ನಕ್ಷತ್ರಪಥದ ಮನೆಗೆ ಸುಣ್ಣದ ಲೇಪನ. ಇಂಥ ಬೆಳದಿಂಗಳು ದಿಕ್ಕು ದಿಕ್ಕಿನಲ್ಲಿ ಚಮತ್ಕಾರವನ್ನು ಉಂಟುಮಾಡಿತೆಂದು ಊಹಿಸುತ್ತೇನೆ.

೬೯. ಕಾಲಯೂನಿ ದಿವಿ ಕರ್ಷತಿ ಶಾಣೇ
ಶರ್ವರೀರಮಣ ಚಂದನಖಂಡಮ್ |
ತದ್ದ್ರವೈರಿವ ತಥಾ ದಧುರಾಶಾ
ಶ್ಚಂದ್ರಿಕಾಭಿರನುಲೇಪನ ಶೋಭಾಮ್ ||

ಕಾಲವೆಂಬ ಯುವಕನು ಚಂದ್ರನೆಂಬ ಶ್ರೀಗಂಧದ ತುಂಡನ್ನು ಆಕಾಶವೆಂಬ ಸಾಣೆಯ ಕಲ್ಲಿನ ಮೇಲೆ ತಿಕ್ಕಿದಾಗ ಉಂಟಾದ ಆ ಗಂಧದ ದ್ರವದಿಂದಲೋ ಎಂಬಂತೆ ಎಲ್ಲ ದಿಕ್ಕುಗಳು ಬೆಳದಿಂಗಳಿನಿಂದ ಲೇಪನವನ್ನು ಪಡೆದುಕೊಂಡವು.

೭೦. ವ್ರೋ
ಲ್ಯೂಧಸಸ್ಸ್ವಯಮಧಸ್ತನವಾಹಿ |
ಸಂಭ್ರಮೇಣ ಚಲಚಂಚುಚಕೋರೈ
ಶ್ಚಂದ್ರಿಕಾಲಹರಿದುಗ್ಧಮಧಾಯಿ ||

ಆಕಾಶವೆಂಬ ಕಾಮಧೇನುವಿನ ಕೆಚ್ಚಲು ಚಂದ್ರ. ಅದರಿಂದ ತಾನಾಗೆ ಕೆಳಕ್ಕೆ ಅಲೆ ಅಲೆಯಾಗಿ ಸುರಿಯುತಿದೆ ಬೆಳದಿಂಗಳೆಂಬ ಹಾಲು. ಸಂಭ್ರಮದಿಂದ ಕೊಕ್ಕುಗಳನ್ನು ತೆರೆದು ಆಡಿಸುತ್ತಿರುವ ಚಕೋರಗಳು ಆ ಹಾಲನ್ನು ಕುಡಿಯುತ್ತಿವೆ.

೭೧. ಪ್ರಾಂಗಣೇಷು ಪಟಮಂಡಪಿಕಾನಾಂ
ಪ್ರಸ್ತುತಾsಹವಕಥಾಪರಿವಾಹಮ್ |
ವೀಚಿಕಾಂ ಜಗದಿದಂ ವಿಧುಭಾಸಾಂ
ಶೀತಲಾಂ ಶಿಬಿರವಾಸಿ ಸಿಷೇವೇ ||

ಬಟ್ಟೆಯ ಗುಡಾರಗಳ ಅಂಗಣಗಳಲ್ಲಿ ಯುದ್ಧದ ಕಥೆಗಳನ್ನು ಹೇಳಿಕೊಳ್ಳುತ್ತಿದ್ದ ಶಿಬಿರವಾಸಿ ಜನರು ಚಂದ್ರನ ಬೆಳಕಿನ ಅಲೆಯನ್ನು ಸಂತೋಷದಿಂದ ಅನುಭವಿಸಿದರು.

೭೨. ಉಚ್ಛಂಡಾನ್ಮಂಡಲಾಗ್ರಾನ್ಮಲಿನತರತಮಃ ಕಂಟಕಾನ್ಖಂಡಯಿತ್ವಾ
ಸ್ವ್ಯೈರಂ ಜಾತಪ್ರಚಾರಂ ಸಕಲಮಪಿ ಜಗತ್ಕಲ್ಪಯನ್ನಮ್ಭತಶ್ರೀಃ |
ಜ್ಯೋತ್ಸ್ನಾಪೂರೈರಪಾರೈರ್ವಿಶದದಶದಿಶಸ್ಫೂರ್ತಿಮತ್ಯೇವ ಕೀರ್ತ್ಯಾ
ಖ್ಯಾತಂ ವೀರಾಚ್ಯುತೇಂದ್ರಕ್ಷಿತಿಪಮನುಯಯೌ ಬಂಧುರಿಂದೀವರಾಣಾಮ್ ||

ಉದ್ದಂಡರಾಗಿ, ಮಂಡಳದ ಮುಖ್ಯರು, ಮಲಿನಚರಿತರಾಗಿ ಕಂಟಕರಾದಾಗ ಅವರನ್ನು ಕತ್ತರಿಸಿ ಹಾಕಿ ಸಕಲ ಜಗತ್ತೂ ಸ್ವತಂತ್ರವಾಗಿ ಓಡಾಡುವಂತೆ ಮಾಡಿ ಅದ್ಭುತ ಸಂಪತ್ತನ್ನು ಪಡೆದ ಅಚ್ಯುತರಾಯನನ್ನು ಅಪಾರವಾದ ಬೆಳದಿಂಗಳಿನ ಪ್ರವಾಹದಿಂದ ಹತ್ತು ದಿಕ್ಕುಗಳಲ್ಲೂ ವಿಶದತೆಯ ಸ್ಫೂರ್ತಿಯನ್ನು ಕೀರ್ತಿಯಂತೆ ತುಂಬಿಸಿದ ಇಂದಿವರ ಬಂಧು ಚಂದ್ರನು ಅನುಸರಿಸಿದನು.