. ಪಶ್ಚಿಮಾಚಲದರೀ ಶಬರೀಭಿ
ಭ್ರಾಂತಿತೋs ಮಣಿಕಂದುಕಮಧ್ಯೆ |
ತಾಡಿತೋ ನು ಕರತಾಮರಸಾಭ್ಯಾಂ
ಭಾನುಮಾನಧಿತ ಪಾಟಲಿಮಾನಮ್ ||

ಪಶ್ಚಿಮ ಪರ್ವತದ ಗುಹೆಗಳಲ್ಲಿ ವಾಸಿಸುವ ಬೇಡತಿಯರ ಕರಕಮಲಗಳಿಂದ ‘ಇದೊಂದು ರತ್ನದ ಚೆಂಡು’ ಎಂಬ ಭಾವನೆಯಿಂದ ತಳ್ಳಲ್ಪಟ್ಟ ಕಾರಣದಿಂದಲೋ ಎಂಬಂತೆ ಸೂರ್ಯನು ಕೆಂಪು ಬಣ್ಣವನ್ನು ತಾಳಿದನು.

. ಆತವತ್ಯುದಯಮಂಬುಜಬಂಧಾ
ವಗ್ರತಃ ಪ್ರವವೃತೇs ಪತಿಷ್ಣೌ |
ಛಾಯಯಾ ನಿವವೃತೇ ಜಗತಿ ಸ್ಯಾ
ತ್ಸಂಪದೀವ ವಿಪದಿ ಕ್ವ ಸಹಾಯಃ ||

ಸೂರ್ಯನು ಉದಯಿಸಿದಾಗ ಅವನ ಮುಂದೆ ಛಾಯೆ ಹೊರಟಳು. ಆದರೆ ಅವನು ಮುಳುಗಿದಾಗ ಅವಳು ಹಿಂದಿರುಗಿ ಮಾಯವಾದಳು. ಈ ಜಗತ್ತಿನಲ್ಲಿ ಸಂಪತ್ತು ಬಂದಾಗ ಇರುವಂತೆ ವಿಪತ್ತಿನಲ್ಲಿ ಗೆಳೆಯರು ಎಲ್ಲಿರುತ್ತಾರೆ?

. ಕಿಂ ವ್ಯಪೋಹಿತುಮನಾ ಭೃಗುಪಾತಾ
ತ್ಸತ್ಪಥಾಕ್ರಮಣ ಸಂಭವ ಮಂಹಃ |
ಅಂಶು ಸಂತತಿರಶೀತ ಮರೀಚೇ
ರೈಕ್ಷತ ಕ್ಷಿತಿಭೃತಾಮಧಿಶೃಂಗಮ್ ||

ಸತ್ಪಥವನ್ನು ಆಕ್ರಮಿಸಿದುದರಿಂದ ಹುಟ್ಟಿದ ಪಾಪವನ್ನು ಭೃಗುಪತನದಿಂದ ಕಳೆದುಕೊಳ್ಳುವದಕ್ಕೊ ಎಂಬಂತೆ ಸೂರ್ಯನ ಕಿರಣಗಳ ಜಾಲವು ಬೆಟ್ಟಗಳ ಶಿಖರಗಳ ಮೇಲೆ ಕಾಣಿಸಿಕೊಂಡಿತು.

. ಗಾಧತತ್ತ್ವಮಧಿಗತ್ಯ ಗಭೀರೇ
ಮಂಕ್ತುಮೇಷ ಚರಮಾಂಬುಧಿಮಧ್ಯೇ |
ಅಯತಾನ್ ಕಿಮಪಿ ದಿಧೀತಿದಂಡಾ
ನಬ್ಜಿನೀಪತಿರಪಾತಯದಗ್ರೇ ||

ಮುಳುಗುವ ಕಲೆಯನ್ನು ಕಲಿತು ಸೂರ್ಯನು ಆಳವಾದ ಪಶ್ಚಿಮಸಮುದ್ರದ ಮಧ್ಯದಲ್ಲಿ ಮುಳುಗುವದಕ್ಕಾಗಿ ಉದ್ದವಾದ ಕಿರಣದಂಡಗಳನ್ನು ಮೊದಲು ಎಸೆದನು.

. ಪಶ್ಚಿಮಾಬ್ಧಿಲಹರೀಭರಡೋಲಾ
ಶಾಯಿನಾಂ ಸಲಿಲಮರ್ತ್ಯಶಿಶೂನಾಮ್ |
ರತ್ನಗುಚ್ಛ ಇವ ರಶ್ಮಿನಿಬದ್ಧಂ
ಲಂಬತೇಸ್ಮ ಗಗನೇ ರವಿಬಿಂಬಮ್ ||

ಪಶ್ಚಿಮ ಸಮುದ್ರದ ಅಲೆಗಳ ಸಮೂಹವೆಂಬ ತೊಟ್ಟಿಲಿನಲ್ಲಿ ಮಲಗಿದ್ದ ಜಲಮಾನವರ ಮಕ್ಕಳಿಗೆ ಆಟಕ್ಕಾಗಿ ಕಿರಣಗಳೆಂಬ ದಾರಗಳಿಂದ ಕಟ್ಟಿದ್ದ ರತ್ನಗಳ ಗೊಂಚಲಿನಂತೆ ಸೂರ್ಯಬಿಂಬವು ಆಕಾಶದಲ್ಲಿ ತೂರಾಡುತ್ತಿತ್ತು.

. ದಿಕ್ಷು ವಿಶ್ಲಥಮವೇಕ್ಷ್ಯ ತರಕ್ಷೋ
ಶ್ಜರ್ಮಲಾಸ್ಯಸಮಯೇ ರಾಶಿಮೌಲೇಃ |
ವ್ಯಲೋಕಿ ನಲಿನಿಪರಿಣೇತು
ರ್ಗೋಕುಲಂ ನಿಖಿಲಮಾಕುಲಮೇವ ||

ನರ್ತನ ಮಾಡುತ್ತಿದ್ದ ಶಿವನ ಶಾರ್ದೂಲಚರ್ಮವು ಕಳಚಿಬಿದ್ದುದನ್ನು ನೋಡಿ ಹೆದರಿದ ಸೂರ್ಯನ ಕಿರಣಸಮೂಹವು (ಗೋವೃಂದವು) ದಿಕ್ಕುಗಳಲ್ಲೆಲ್ಲ ಚದುರಿ ಓಡಿಹೋದ ಕಾರಣದಿಂದ ಆಮೇಲೆ ಯಾರಿಗೂ ಕಾಣಿಸಲಿಲ್ಲ.

. ಕೂಜತಿ ಕ್ಕಚನ ಕೌಶಿಕಲೋಕೇ
ವಾಮಮೇವ ಪತಿರೇಷ ವಸೂನಾಮ್ |
ಆತತಾನ ಭೂವನಾಂತರಯಾತ್ರಾ
ತತ್ಫಲಂ ನಂ ಸುಖಮೇಷ್ಯತಿ ಭೂಯಃ ||

ಎಲ್ಲೋ ಗೂಬೆಗಳು ಕೂಗುತ್ತಿದ್ದರೆ, ವಸುಗಳ ಪತಿಯಾದ ಸೂರ್ಯನು ಬೇರೆ ಲೋಕದ ಯಾತ್ರೆಯನ್ನು ಆರಂಭಿಸಿದನು. ಅದರ ಫಲವಾಗಿ ಅವನು ಮತ್ತೆ ಸುಖವನ್ನು ಪಡೆಯುವನು.

. ಚಕ್ರವಾಕಮಿಥುನಸ್ಯ ಸರಸ್ಯಾಂ
ಮಾಂಸಲಶ್ವಸನ ಮಾರುತ ಎವ |
ವಿಪ್ರಯೋಗಪರಿರಂಭವಿಶೇಷಂ
ವಿಶ್ಲಥೀಕೃತಗರುಂ ವಿಷೇಹೇ ||

ಚಕ್ರವಾಕ ದಂಪತಿಗಳ ಮಿಲನವನ್ನು ಅಂದರೆ ವಿಯೋಗ ಕಾಲದ ಸೂಚನೆಯಾಗಿ ಸಡಿಲಗೊಳ್ಳುತ್ತಿದ್ದ ಬಲಗೊಳ್ಳುತ್ತಿರುವ ಆಲಿಂಗನವನ್ನು ಸರೋವರದಲ್ಲಿ ಏಳುವ ಗಾಳಿಯು ಸಹಿಸಲಿಲ್ಲ.

. ಚಂಚುವಿಶ್ಲಧಬಿಸಾಂಚಿತಮಾರ್ಗ
ಶ್ಚಕ್ರಯೋರ್ವಿಜಘತೇ ಸಾಮವಾಯಃ |
ಅಂಕನಂ ವಿರಚಯನ್ನಿವ ಭೂಯ
ಸ್ಸಂಗಮಸ್ಥಲಸುಖಾವಗಮಾಯ ||

ಕೊಕ್ಕಿನಿಂದ ತಾವರೆಯ ದಂಟು ಜಾರಿಬಿದ್ದು ಮಧ್ಯದಲ್ಲಿ ನಿಂತುದರಿಂದ ಚಕ್ರವಾಕ ಪಕ್ಷಿಗಳ ಒಂದುಗೂಡುವಿಕೆ ವಿಘಟಿತವಾಯಿತು. ಸಮಾಗಮದ ಸ್ಥಳದಲ್ಲಿ ಸುಖವನ್ನು ಪಡೆಯುವುದಕ್ಕಾಗಿ ಅದು ಗುರುತು ಮಾಡದೆಯೋ ಎನ್ನುವಂತಿತ್ತು.

೧೦. ಶಾಬಕಾನಧಿಮನಃ ಕಣಿಶಾಲಿಂ
ಚಂಚುಸಂತತಿಷು ಚರ್ವಿತಶೇಷಾಮ್ |
ನೀಡಸೀಮ್ನಿ ನಿಧಾಯ ಕಟಾಕ್ಷಾನ್
ಸತ್ವರಂ ಸಮವಲಂತ ಶಕುಂತಾಃ ||

ಮನಸ್ಸಿನಲ್ಲಿ ತಮ್ಮ ಮರಿಗಳನ್ನು ನೆನೆದು, ಕೊಕ್ಕುಗಳಲ್ಲಿ ಧಾನ್ಯಗಳ ತೆನೆಗಳನ್ನು ಅಗಿದು, ಉಳಿದ ಭಾಗಗಳನ್ನು, ಕಣ್ಣಿನ ನೋಟವನ್ನು ಗೂಡುಗಳ ದಿಕ್ಕಿನಲ್ಲೂ ಇಟ್ಟು ಪಕ್ಷಿಗಳು ತ್ವರೆಯಿಂದ ಹಿಂತಿರುಗಿದವು.

೧೧. ಅಸ್ತಶೈಲತಟಕಾನನಲೀನೈ
ರಂಧಕಾರಸುಭಟೈರೂಪರುದ್ಧಾ |
ಅಗ್ರತಃ ಪ್ರಚಲಿತಸ್ಯ ಖರಾಂಶೋ
ರಂಶುಸಂತತಿರಿವೈಕ್ಷ್ಯತ ಸಂಧ್ಯಾ ||

ಅಸ್ತಶೈಲದ ತಪ್ಪಲಿನಲ್ಲಿರುವ ಕಾಡುಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಕತ್ತಲೆಯೆಂಬ ಸೈನಿಕರು ಪಸರಿಸುತ್ತಿದ್ದಂತೆ ಸೂರ್ಯನು ಮುಂದೆ ಮುಂದೆ ನಡೆದನು. ಸೂರ್ಯನ ಎಲ್ಲ ಕಿರಣಗಳನ್ನು ಬಂಧಿಸಿದಂತೆ ಸಂಧ್ಯೆಯು ಕಾಣಿಸುತ್ತಿದ್ದಳು.

೧೨. ನೇಕ್ಷ್ಯತೇ ದಿನಪತಿರ್ನಲಿನೀನಾಂ
ನರ್ಮ ಕಿಂಚಿದಪಿ ನಾಂಕುರತೀತಿ |
ವ್ಯನಶೇ ದಶ ದಿಶೋಪಿ ವಿಜೇತುಂ
ತತ್ಸುತೇವ ತಮಸಾಂ ಪರಿಪಾಟೀ ||

ಸೂರ್ಯನು ಎಲ್ಲೂ ಕಾಣಿಸುತ್ತಿಲ್ಲ. ಪದ್ಮಗಳ ಶೋಭೆಯು ಸ್ವಲ್ಪವೂ ಗೋಚರಿಸುತ್ತಿಲ್ಲ ಎಂದು ಯೋಚಿಸಿ ಸಂಧ್ಯೆಯ ಮಗಳಾದ ಕತ್ತಲೆಯು ಹತ್ತು ದಿಕ್ಕುಗಳಲ್ಲೂ ವಿಜಯವನ್ನು ಪಡೆಯಲು ವ್ಯಾಪಿಸಿತು.

೧೩. ವೀಕ್ಷ್ಯ ಕಿಂಚಿದಭಿಲಕ್ಷ್ಯಮೂಡೂನಾಂ
ಮಂಡಲಂ ವಿಶಿಥಿಲಾಂಡವಿಮೋಹಾತ್ |
ಚುಕ್ರುಂಶುಶಶಕುನಯಃ ಕಿಮಶಕ್ತಾ
ವಿಪ್ರಕರ್ಷಿಣಿ ವಿಹಾಯಸಿಗಂತುಮ್ ||

ಸ್ವಲ್ಪ ಸ್ವಲ್ಪ ಕಾಣಿಸುತ್ತಿದ್ದ ನಕ್ಷತ್ರಗಳ ಮಂಡಲವನ್ನು ನೋಡಿ ಪಕ್ಷಿಗಳು ಜಾರಿಬಿದ್ದು ಹೋದ ತಮ್ಮ ಮೊಟ್ಟೆಗಳೋ ಎಂಬ ಭ್ರಾಂತಿಯಿಂದ, ದೂರದಲ್ಲಿದ್ದ ಆಕಾಶಕ್ಕೆ ಹಾರಲು ಅಶಕ್ತವಾಗಿ ಕೂಗಿಕೊಳ್ಳುತ್ತಿವೆಯೇನು

೧೪. ದೀಪಪಂಕ್ತಿರವಭಿದ್ಯ ತಮಿಸ್ರಂ
ದೀಪಿತಾ ಕಿಲ ರೂಕ್ಷಾ ಪುನರಸ್ಮಿನ್ |
ಕುತ್ರಚಿನ್ನಿಲಯಕೋಣನಿಲೀನೇ
ಕಜ್ಜಲಭ್ರೂಕಂಟಿಭಂಗಮಕಾರ್ಷಿತ್ ||

ಜ್ವಲಿಸಿದ ದೀಪಪಂಕ್ತಿಯು ಕತ್ತಲೆಯನ್ನು ಕತ್ತರಿಸಿ ಹಾಕಿತು. ಪುನಃ ಆ ಕತ್ತಲೆ ಮನೆಯ ಮೂಲೆಯಲ್ಲಿ ಎಲ್ಲೋ ಅಡಗಿರುವುದನ್ನು ತಿಳಿದು ರೋಷದಿಂದ ಮೇಲೇರುತ್ತಿದ್ದ ಕಾಡಿಗೆಯ ನೆವದಿಂದ ದೀಪಪಂಕ್ತಿಯು ತನ್ನ ಹುಬ್ಬುಗಳನ್ನು ಗಂಟಿಕ್ಕಿತು.

೧೫. ಇತ್ವರೀಜನಹಿತಂ ಕರವಾಣೀ
ತ್ಯುತ್ಥಿತಂ ಕಿಲ ನಿಪತ್ಯ ಕೃಶಾನೌ |
ದೃಶ್ಯತೇ ಸ್ಮ ತಿಮಿರಂ ದಿವಸಾಂತೇ
ದೀಪಿಕೋನ್ಮಿಷಿತಕಜ್ಜಲದಂಭಾತ್ ||

ಕುಲಟಿಯರಿಗೆ ಹಿತವನ್ನುಂಟು ಮಾಡೋಣ ಎಂದು ಹುಟ್ಟಿದ ಕತ್ತಲೆ ಬೆಂಕಿಯೊಳಗೆ ಬಿದ್ದು ಸಾಯಂಕಾಲದಲ್ಲಿ ದೀಪದಿಂದ ಮೇಲೆ ಬರುತ್ತಿದ್ದ ಕಪ್ಪು ಕಾಡಿಗೆಯ ನೆವದಿಂದ ಕಾಣಿಸಿಕೊಳ್ಳುತ್ತಿತ್ತು.

೧೬. ಆವೃತೇ ತಮಸಿ ಗಾಢಮಧಸ್ತಾತ್
ಛಾಯಯಾ ಪರಿಣತಾತ್ಮನಿ ದೀಪಾಃ |
ಕಜ್ಜಲಾಲಿಕಪಟೇನ ತದೀಯಂ
ವರ್ಗಮಾಲಯ ಗೃಹೀತಮಮುಂಚನ್ ||

ಲೋಕವನ್ನು ಆವರಿಸಿದ್ದ ಕತ್ತಲೆಯು, ದೀಪಗಳು ಉರಿಯಲಾರಂಭಿಸಿದಾಗ ಅವುಗಳ ಕೆಳಗಿನ ನೆರಳಾಗಿ ಪರಿಣಮಿಸಿತು. ಆಗ ದೀಪಗಳು ಕಾಡಿಗೆಯ ಸರಣಿಯ ನೆವದಿಂದ ಅದರ ರಾಶಿಯನ್ನೆಲ್ಲ ಉಗುಳಿ ಹೊರಗೆ ಹಾಕಿದುವು.

೧೭. ನೃತ್ಯತಃ ಪುರಹರಸ್ಯ ನಿಟಾಲ
ಜ್ವಾಲಜಾಲಮಿಲನೇನ ನಿಲೀಯ |
ಸ್ಯಂದಮಾನಮಿವ ಸಂತಮಸಾನಾಂ
ಛದ್ಮನಾ ತ್ರಿದಶವರ್ತ್ಮ ಚಕಾಶೇ ||

ನೃತ್ಯಮಾಡುತ್ತಿದ್ದ ಶಿವನ ಹಣೆಯ (ಕಣ್ಣಿನ ಬೆಂಕಿಯ) ಜ್ವಾಲೆಗಳ ಜಾಲದೊಂದಿಗೆ ಬೆರೆತಿದ್ದರಿಂದ ಕರಗಿ ಹೋಗಿ ಕತ್ತಲಿನ ನೆವದಿಂದ ಕೆಳಗೆ ಸುರಿಯುತ್ತಿದೆಯೋ ಎಂಬಂತೆ ಆಕಾಶವು ವಿರಾಜಿಸಿತು.

೧೮. ಪ್ರಚ್ಯುತಂ ದಿನಮಣಿಂ ಭುವನಶ್ರೀ
ಭೂಷಣಾರ್ಹಮಚಿರೇಣ ವಿಜೇತುಮ್ |
ದೀಪಿಕಾ ಇವ ವಿಶಾಭಿರುದಸ್ತಾ
ಸ್ತಾರಕಾಸ್ತತ ಇತೋ ದಿವಿ ರೇಜುಃ ||

ಮೂರುಲೋಕಗಳ ಲಕ್ಷ್ಮಿಯ ಒಡವೆಯಾಗಲು ಅರ್ಹವಾಗಿದ್ದ ದಿನಮಣಿಯು ಎಂದರೆ ಸೂರ್ಯನು ಜಾರಿ ಬಿದ್ದು ಕಳೆದು ಹೋದನೆಂದು ಅವನನ್ನು ಹುಡುಕಲು ದಿಕ್ಕುಗಳೆಂಬ ಸ್ತ್ರೀಯರು ಎತ್ತಿ ಹಿಡಿದ ದೀಪಗಳಂತೆ ನಕ್ಷತ್ರಗಳು ಆಕಾಶದಲ್ಲಿ ಅಲ್ಲಲ್ಲಿ ಹೊಳೆಯುತ್ತಿದ್ದುವು.

೧೯. ಅಂಗಜಾಗಮಲಿಪೇರುಡ್ಡನಾಮ್ನೋ
ವ್ಯಂಜನಾಯ ವಿಮಲಾಂಜನಲೇಪಃ |
ಶಾಮ್ಯದರ್ಯಮಶಿಲಾಶಿಖಿಧೂಮ
ಸ್ಸತ್ಪಥಾಖ್ಯವನಸಾಮಜಯೂಥಮ್ ||

ಗಾಢವಾದ ಕತ್ತಲೆಯು ನಕ್ಷತ್ರವೆಂಬ ಮನ್ಮಥವೇದದ ಲಿಪಿಯನ್ನು ಸ್ಪಷ್ಟಪಡಿಸುವದಕ್ಕಾಗಿ ಹಚ್ಚಿದ ವಿಮಲಾಂಜನದ ಲೇಪನ, ಸೂರ್ಯಕಾಂತಶಿಲೆಗಳ ಆರುತ್ತಿರುವ ಬೆಂಕಿಯ ಹೊಗೆ, ನಕ್ಷತ್ರಮಾರ್ಗ ಎಂಬ ಕಾಡಿನಲ್ಲಿರುವ ಆನೆಗಳ ಹಿಂಡು.

೨೦. ಸ್ಯಂದಮಾನಮಿವ ಸಿಂಧುರದಾನೇ
ಸಪ್ರರೋಹಮಿವ ಶಾಡ್ವಲದೇಶೇ |
ಉತ್ಪಲೇಷ್ವೀವ ವಿಕಸ್ವರಮುಚ್ಚೈ
ಷ್ಷಟ್ ಪದೇಷ್ವೀವ ಸಪಕ್ಷವಿತಾನಮ್ ||

ಕತ್ತಲೆಯು ಆನೆಗಳ ಮದಜಲವಾಗಿ ಸುರಿಯುತ್ತಿರುವಂತೆ, ಹುಲ್ಲುಗಾವಲಿನಲ್ಲಿ ಚಿಗುರೊಡೆಯುತ್ತಿರುವಂತೆ, ಕನ್ನೈದಿಲೆಗಳಲ್ಲಿ ಅರಳುತ್ತಿರುವಂತೆ, ದುಂಬಿಗಳಲ್ಲಿ ರೆಕ್ಕೆಗಳ ಚಪ್ಪರವನ್ನು ಹೊಂದಿರುವಂತೆ ಮೆರೆಯುತ್ತಿತ್ತು.

೨೧. ಸಾನ್ವವಾಯುಮಿವ ಸೈರಿಭವರ್ಗೇ
ಸಾವಲೇಪಮಿವ ಶಕ್ರಶಿಲಾಸು |
ಸಾವಲಂಬನಮಿವೋತ್ಪಲಜಾಲೇ
ಸಪ್ರತಿಷ್ಠಮಿವ ಶೈವಲಿನೀಷು ||

ಕತ್ತಲೆ ಕಾಡೆಮ್ಮೆಗಳ ಹಿಂಡಿನಲ್ಲಿ ವಂಶವೃದ್ದಿಯನ್ನು ಪಡೆದಂತೆ, ಇಂದ್ರನೀಲಮಣಿಗಳಲ್ಲಿ ಗರ್ವದಿಂದ ತುಂಬಿದಂತೆ, ಕೈನ್ನೈದಿಲೆಗಳ ರಾಶಿಯಲ್ಲಿ ಅವಲಂಬನವನ್ನು ಪಡೆದಂತೆ, ನದಿಗಳಲ್ಲಿ ಪ್ರತಿಷ್ಠೆಯನ್ನು ಗಳಿಸಿದಂತ ಕಾಣುತ್ತಿತ್ತು

೨೨. ಪಾಣಿನೇರ್ಮತಮಿವಾಖಿಲಲಿಂಗ
ವ್ಯಕ್ತಿಕೃದ್ವಿವಿಧಶಬ್ದವಿಶೇಷಮ್ |
ನ್ಯಾಯಶಾಸ್ತ್ರಮಿವ ಸಾಧ್ವನುಮಾನ
ಗ್ರಾಹ್ಯನಿಹ್ನುತಸಮಸ್ತಪದಾರ್ಥಮ್ ||

ಪಾಣಿನಿಯ ವ್ಯಾಕರಣದಂತೆ ಕತ್ತಲೆಯು ಎಲ್ಲ ಲಿಂಗಗಳ ಅಭಿವ್ಯಕ್ತಿಯನ್ನುಳ್ಳ ವಿವಿಧ ಶಬ್ದವಿಶೇಷಗಳಿಂದ ಕೂಡಿತ್ತು. ನ್ಯಾಯಶಾಸ್ತ್ರದಂತೆ ಸರಿಯಾದ ಅನುಮಾನದಿಂದ, ಮರೆಯಾಗಿರುವ ಸಮಸ್ತ ಪದಾರ್ಥಗಳನ್ನು ಗ್ರಹಿಸುವ ಸಂದರ್ಭವನ್ನು ತಂದಿತ್ತು.

೨೩. ವಿಷ್ಣುರೂಪಮಿವ ಜಾತಮಹತ್ವಂ
ವ್ಯಾಪ್ಯವಿಶ್ವಮಖಿಲಂ ಬಹಿರಂತಃ |
ತತ್ತ್ವವಾಕ್ಯಮಿವ ತಾರಕರೂಪ
ವ್ಯಂಜಕಂ ವನಮಿವಾತ್ತಪಲಾಶಮ್ ||

ಅಂಧಕಾರವು ವಿಷ್ಣುರೂಪದಂತೆ, ಸಮಸ್ತ ವಿಶ್ವವನ್ನು ಒಳಗೆ ಮತ್ತು ಹೊರಗೆ ವ್ಯಾಪಿಸಿ ಮಹತ್ತ್ವವನ್ನು ಪಡೆದುಕೊಂಡಿತ್ತು. ತತ್ತ್ವವಾಕ್ಯದಂತೆ ತಾರಕರೂಪ ವ್ಯಂಜಕವಾಗಿಯೂ, ಪಲಾಶ ಸಹಿತವಾದ ವನದಂತೆ ಶೋಭಿಸುತ್ತಿತ್ತು.

೨೪. ಸಾಂಧ್ಯವೃತ್ಯಪಿ ನಿರಂಕುಶಾಚಾರಂ
ಭಾನುಯಾತಮಪಿ ವಿಶ್ಲಥಭಾನು |
ಕೃಷ್ಣರೂಪಮಪಿ ಸಂಕುಚದಬ್ಜಂ
ಕಿಂ ವಿಶ್ಲಥಸುದರ್ಶನಕೇಲಿ ||

ಸಾಂಧ್ಯವೃತ್ತಿಯಾದರೂ ನಿರಂಕುಶ ಸಂಚಾರವುಳ್ಳದ್ದೂ, ಭಾನುಯಾತವಾದರೂ ಭಾನುವನ್ನು ವಿಶ್ಲಥಗೊಳಿಸಿದ್ದು, ಕೃಷ್ಣರೂಪದಲ್ಲಿದ್ದರೂ ಅಬ್ಜಸಂಕೋಚವನ್ನುಂಟು ಮಾಡುವುದು ಮತ್ತು ಸುದರ್ಶನವನ್ನು ನಾಶಮಾಡುವದಾಗಿದೆ ಈ ಅಂಧತಮಸ್ಸು.

೨೫. ಮನ್ಮಥೇಭಮದಭೇಷಜಮಾಶಾ
ಮಾನಿನೀಮೃಗಮದದ್ರವಲೇಪಃ |
ಪಾಂಥಬೃಂದಗರಲಂ ಭುವನಾಂತಃ
ಸಾಂದ್ರಮಂಧತಮಸಂ ಸಮರುಂಧ ||

ಮನ್ಮಥನೆಂಬ ಗಜಕ್ಕೆ ಮದೋನ್ಮತ್ತ ಔಷಧ, ದಿಕ್ಕುಗಳೆಂಬ ಸ್ತ್ರೀಯರಿಗೆ ಕಸ್ತೂರಿಯ ಲೇಪ, ಪಥಿಕರ ಗುಂಪುಗಳಿಗೆ ವಿಷ ಎನಿಸಿದ ಗಾಢವಾದ ಅಂಧಕಾರವೂ ಸಕಲ ಭುವನವನ್ನು ಆವರಿಸಿತು.

೨೬. ಸಂಚಿತಂ ಕಿಮು ಪುಟೇಷ್ವವಟಾನಾಂ
ಪುಂಜಿತಂ ಕಿಮಚಲೇಷ್ವಖಿಲೇಷು |
ವಿಸ್ತೃತಂ ಕಿಮು ವಿಹಾಯಸಿ ಚಾಸೀ
ಚ್ಛಾರ್ವರಂ ಜಗತಿ ಸಾರ್ವಪಥಿನಮ್ ||

ಕತ್ತಲೆಯು ಜಗತ್ತಿನಲ್ಲಿ ಎಲ್ಲೆಲ್ಲೂ ಆವರಿಸಿ ಹಳ್ಳಗಳ ಖಾಲಿಜಾಗದಲ್ಲಿ ತುಂಬಿಕೊಂಡಿತೇನೋ, ಎಲ್ಲಾ ಬೆಟ್ಟಗಳ್ಲಿ ರಾಶಿಯಾಗ ಬಿದ್ದಿತೇನೋ ಆಕಾಶದಲ್ಲಿ ಹರಡಿಕೊಂಡಿತೇನೋ ಎಂಬಂತೆ ಎಲ್ಲೆಡೆ ವ್ಯಾಪಿಸಿತು.

೨೭. ಧ್ವಾಂತಪಂಕ್ತಿಭಿರಭೂಯತ ಮೇಘೈ
ರ್ಜ್ಯೋತಿರಿಂಗಣಮಯೈರ್ಹರಿಗೋಪೈಃ |
ಇತ್ವರೀಭಿರಪಿ ಚತ್ವರಕೋಣೇ
ಗತ್ವರೀಭಿರಚಿರಾಂಶುಭಿರೇವ ||

ಕತ್ತಲೆಯ ಸಾಲುಗಳು ಮೇಘಸಮೂಹಗಳಾದವು. ಇಂದ್ರಗೋಪಗಳೆಂಬ ಹುಳುಗಳು ನಕ್ಷತ್ರಗಳಾದವು. ಅಂಗಣದಲ್ಲಿ ಅಲೆದಾಡುತ್ತಿದ್ದ ಅಭಿಸಾರಿಕೆಯರೇ ಮಿಂಚುಗಳಾದರು. ಹೀಗೆ ಭೂಮಿಗೂ ಆಕಾಶಕ್ಕೂ ಸಾಮ್ಯವು ತೋರುತ್ತಿತ್ತು.

೨೮. ಅಂಶೂಮಾಲಿನಿ ವಿಶತ್ಯಪರಾದ್ರಿಂ
ಕೇಚಿದಸ್ಯ ಕಿರಣಾಸ್ಸವಿಲಂಬಾಃ |
ಶಾರ್ವರೈರ್ಜಗೃಹಿರೇ ಕಿಲಹಸ್ತ
ಗ್ರಾಹಮಂಚಿತತಮೋಮಣಿದಂಭಾತ್ ||

ಸೂರ್ಯನು ಪಶ್ಚಿಮಪರ್ವತವನ್ನು ಪ್ರವೇಶಿಸುತ್ತಿರಲು ಅವನನ್ನು ಅನುಸರಿಸುವುದರಲ್ಲಿ ವಿಳಂಬಮಾಡಿದ ಕೆಲು ಕಿರಣಗಳನ್ನು ಕತ್ತಲೆಯು ತಮೋಮಣಿ (ನಕ್ಷತ್ರಗಳ) ಹೆಸರಿನಲ್ಲಿ ಕೈ ಹಿಡಿದು ಕಟ್ಟಿಹಾಕಿದುವು.

೨೯. ಕ್ರೀಡತಾಂ ಕಿಮಪಿ ಕೀಟಮಣೀನಾಂ
ಕೈತವೇನ ಕನಕದ್ರವಚಿತ್ರೈಃ |
ರಚ್ಯಮಾನಮಿವ ರಾಜರಮಣ್ಯಾ
ಯುಕ್ತಮಂಬರಮುದೈಕ್ಷಿರಜನ್ಯಾಃ ||

ಆಟವಾಡುತ್ತಿದ್ದ ಕೀಟಗಳೆಂಬ ಮಣಿಗಳ ನೆವದಿಂದ ರಾತ್ರಿಯೆಂಬ ರಾಣಿಯ ಅಂಬರ ಬಟ್ಟೆ ಅಥವಾ ಆಕಾಶಕ್ಕೆ ಚಿನ್ನದ ದ್ರವದ ಚಿತ್ರಗಳಿಂದ ಅಲಂಕಾರದ ರಚನೆಯನ್ನು ಮಾಡುತ್ತಿರುವರೋ ಎಂಬಂತೆ ಕತ್ತಲೆ ಕಾಣಿಸುತ್ತಿತ್ತು.

೩೦. ಸಾಂದ್ರಸಂತಮಸಸಾಮಜಪಂಕ್ತೇ
ತಾರವಜ್ರಖಚಿತಾಭ್ರಕುಥಾಯಾಃ |
ಪ್ರಸ್ಫುರದ್ಧ್ಯುತಿತಮೋಮಣಿಜಾಲಂ
ಪದ್ಮಶಾಲಿವುಪುಷಾ ಪರಿಣೇಮಿ ||

ಗಾಢವಾದ ಕತ್ತಲೆಯೆಂಬ ಆನೆಗಳ ಹಿಂಡಿಗೆ ನಕ್ಷತ್ರಗಳೆಂಬ ವಜ್ರಗಳಿಂದ ಶೋಭಿಸುತ್ತಿದ್ದ ಆಕಾಶವೆಂಬ ಮೇಲ್ವಾಸನ್ನು ಹೊದಿಸಿದ್ದರು. ಹೊಳೆಯುತ್ತಿದ್ದ ನಕ್ಷತ್ರಗಳ ಸಮೂಹವು ಆನೆಗಳ ಸೊಂಡಿಲು ಮತ್ತು ಹಣೆಯ ಮೇಲಿರುವ ಪದ್ಮಕಗಳೆಂಬ ಚುಕ್ಕಿಗಳಾಗಿ ವಿರಾಜಿಸಿದುವು.

೩೧. ಸ್ಪೈರಿಣೀಯಮಮವಕುಂಠನವಾಸ
ಸ್ರಗ್ವಿಲೇಪನವಿಭೂಷಣಸಂಗಾತ್ |
ಸಖ್ಯಮಂಚತಿ ಮಮೇತಿ ಕಿಮಸ್ಯಾ
ಸಸ್ಪೈರಚಾರಮರುಧನ್ನ ತಮಿಸ್ರಮ್ ||

ಈ ರಾತ್ರಿಯೊಬ್ಬಳು ಸ್ವೈರಿಣಿ, ಏಕೆಂದರೆ ಇವಳು ಅವಗುಂಠನ ವಸ್ತ್ರವನ್ನು, ಹಾರವನ್ನು ವಿಲೇಪನವನ್ನು, ಒಡವೆಗಳನ್ನು ಧರಿಸಿದ್ದಾಳೆ. ಆದ್ದರಿಂದ ಇವಳು ನನ್ನ ಸ್ನೇಹವನ್ನು ಬಯಸುತ್ತಿದ್ದಾಳೆ ಎಂದು ಆಲೋಚಿಸಿದ ಕಾರಣದಿಂದಲೋ ಏನೋ ಕತ್ತಲೆಯು ಅವಳ ಸ್ವಚ್ಛಂದ ಸಂಚಾರವನ್ನು ತಡೆಯಲಿಲ್ಲ.

೩೨. ವಿಶ್ಲಥೇ ದಿನಮಣೌ ಹರಚೂಡಾ
ರತ್ನಮಭ್ರವಲಯೇ ಲಘುದಾತುಮ್ |
ತತ್ಸೃತಂಜತು ಕಿಲಾsಜನಿ ಸಂಧ್ಯಾ
ಪಾವಕೇ ಸಮಯತಾಪಿತಮಂಧಮ್ ||

ಆಕಾಶದಿಂದ ಸೂರ್ಯನು ಕಳಚಿಬಿದ್ದಾಗ ಕತ್ತಲೆಯು ಆಕಾಶದಲ್ಲಿ ಬೇಗನೆ ಶಿವನ ಚೂಡಾರತ್ನನಾದ ಚಂದ್ರನನ್ನು ಕೂಡಿಸಲು ಸರಿಯಾದ ಕಾಲದಲ್ಲಿ ಸಂಜೆಬೆಳಕೆಂಬ ಬೆಂಕಿಯಲ್ಲಿ ಕಾಯಿಸಲಾದ ಅರಗು ಆಯಿತು.

೩೩. ನಿಸ್ಸರತ್ತಿಮಿರದಸ್ಯುಸಹಸ್ರಾ
ನುದ್ರುತೇನ ಚರಮಾದ್ರಿನಿಕುಂಜೇ |
ಹಾರಮೌಕ್ತಿಕಚಯೈರಿವ ಕೀರ್ಣೈ
ರಾತ್ಮರಕ್ಷಣಕೃತೇ ಮಿಹಿರೇಣ ||

ನುಗ್ಗುತ್ತಿದ್ದ ಕತ್ತಲೆಯೆಂಬ ಸಾವಿರಾರು ಕಳ್ಳರ ಸಮೂಹದಿಂದ ಅಟ್ಟಲ್ಪಟ್ಟ ಸೂರ್ಯನು ಪಶ್ಚಿಮಾಚಲದ ಉದ್ಯಾನದಲ್ಲಿ ತನ್ನ ರಕ್ಷಣೆಗಾಗಿ ಚೆಲ್ಲಾಡಿದ ಹಾರದ ಮುತ್ತುಗಳಂತೆ ಇದ್ದ ನಕ್ಷತ್ರಗಳು ಆಕಾಶವನ್ನು ಅಲಂಕರಿಸಿದುವು.

೩೪. ಅಂಶುಕಂದಲರಸಾದಮೃತಾಂಶೋಃ
ಕ್ರೀಡತೋತ್ಪಿಬಕಿಶೋರಕುಲೇನ |
ಕೌಮುದೀಹೃದಜುಷಾ ಹೃತಮುಕ್ತೈಃ
ಕೋರಕೌರಿವ ಸುಧಾಪೃಷತಾನಾಮ್ ||

ಚಂದ್ರನ ಕಿರಣಗಳ ಚಿಗುರಿನ ಆಸೆಯಿಂದ ಆಟವಾಡುತ್ತಿದ್ದ ಚಕೋರ ಪಕ್ಷಿಗಳ ಮರಿಗಳ ಗುಂಪು ಬೆಳದಿಂಗಳಿನ ಕೊಳದಲ್ಲಿ ಮುಳುಗಿ ಆರಿಸಿಕೊಂಡು ಉಳಿಸಿರುವ ಅಮೃತದ ಹನಿಗಳ ಮೊಗ್ಗುಗಳಂತೆ ನಕ್ಷತ್ರಗಳು ಹೊಳೆಯುತ್ತಿದ್ದುವು.

೩೫. ಸಂಧ್ಯಯಾ ನಟಿತಪಲ್ಲವಶೋಭಾ
ಸಂಪದಾಂ ಸಕಲದಿಗ್ಲತಿಕಾನಾಮ್ |
ಸ್ಫೋಟ ಪಂಕ್ತಿಭಿರಿವಾಕುಲಕೋಕ
ಶ್ವಾಸ ಪಾವಕಶಿಖಾಕ್ರಮ ಜಾತೈಃ ||

ಎಲ್ಲ ದಿಕ್ಕುಗಳೆಂಬ ಲತೆಗಳು ಚಿಗುರಿನ ಶೋಭಾ ಸಂಪತ್ತನ್ನು ಪಡೆದುಕೊಂಡಿರುವಾಗ ಸಂಧ್ಯೆಯು ಅವುಗಳನ್ನು ಕುಣಿಸುತ್ತಿತ್ತು. ವಿರಹ ಪೀಡಿತವಾದ ಚಕ್ರವಾಕಗಳ ನಿಟ್ಟುಸಿರಿನ ಬೆಂಕಿಯ ಜ್ವಾಲೆಗಳಿಂದ ಹುಟ್ಟಿದ ಸ್ಫೋಟ (ಬೊಬ್ಬೆಗಳಂತೆ) ನಕ್ಷತ್ರಗಳು ಕಾಣಿಸುತ್ತಿದ್ದವು.

೩೬. ಚಂಚರೀಕಕುಲಝಂಕೃತಿ ಮಂತ್ರಾ
ವೃತ್ತಿಪೂರ್ವಮಧಿ ವಿಷ್ಣುಪದಾಗ್ರಮ್ |
ಆದರೇಣ ಕುಸುಮೈರಿವ ಕೀರ್ಣೈ
ರಾಗಮಾಯ ಕಮಿತುಃ ಕುಮಿದಿನ್ಯಾಃ ||

ಕುಮುದಿನಿಯ ಪ್ರಿಯನಾದ ಚಂದ್ರನ ಆಗಮನಕ್ಕಾಗಿ ಮಂತ್ರಘೋಷ ನಡೆಯುತ್ತಿದೆಯೋ ಎಂಬಂತೆ ಭ್ರಮರಗಳು ಝೆಂಕಾರ ನಡೆಸುತ್ತಿರಲು ಆಕಾಶದಲ್ಲಿ ಆದರದಿಂದ ವಿರಚಿಸಿದ ಹೂಗಳಂತೆ ನಕ್ಷತ್ರಗಳು ವಿರಾಜಿಸಿದವು.

೩೭. ದ್ಯೋಮಣಿರ್ನ ಹೃತ ಇತ್ಯುಡರಾಜ
ಪ್ರತ್ಯಯಾಯ ದಶಾದಿಕ್ಪ್ರಮದಾಭಿಃ |
ಅಂತರಿಕ್ಷಫಣಸೀಮ್ನಿ ವಿಕೀರ್ಣೈ
ರಕ್ಷತೈರಿವ ನಿಶಾಫಣವತ್ಯಾಃ ||

ಸೂರ್ಯನೆಂಬ ಮಣಿಯನ್ನು ಯಾರೂ ಅಪಹರಿಸಿಲ್ಲ ಎಂದು ಉಡುರಾಜ ಚಂದ್ರನಿಗೆ ನಂಬಿಕೆ ಹುಟ್ಟಿಸಲು ದಶದಿಕ್ಕುಗಳೆಂಬ ಸ್ತ್ರೀಯರುಗಳಿಂದ ರಾತ್ರಿಯೆಂಬ ಹೆಣ್ಣು ಹಾವಿನ ಆಕಾಶವೆಂಬ ಹೆಡೆಯ ಮೇಲೆ ಉದುರಿಸಲ್ಪಟ್ಟ ಅಕ್ಷತೆಯ ಕಾಳುಗಳೋ ಎಂಬಂತೆ ನಕ್ಷತ್ರಗಳು ಹೊಳೆಯುತ್ತಿದ್ದವು.

೩೮. ನಾಕಯೋಷಿದುಪಭುಕ್ತನಖಾಗ್ರೋ
ನ್ಮುಕ್ತ ಚಂದನಲವೈರಿವ ಲಗ್ನೈಃ |
ಅಂಧಕಾರಭಕರ್ದಮಜಾತೈ
ರಾಂಗಜೈರಿವ ಯಶೋಂಕುರಜಾಲೈಃ ||

ಅಪ್ಸರಸ್ತ್ರೀಯರು ಉಪಯೋಗಿಸಿ ಉಗುರುಗಳಿಂದ ಆಚೆ ಎಸೆದಾಗ ಅಂಟಕೊಂಡ ಚಂದನರಸದ ಬಿಂದುಗಳೋ ಎಂಬಂತೆ, ಅಂಧಕಾರದ ರಾಶಿಯೆಂಬ ಕೆಸರಿನಲ್ಲಿ ಹುಟ್ಟಿದ ಮನ್ಮಥನ ಕೀರ್ತಿಯ ಮೊಳಕೆಗಳ ಸಮೂಹದಂತೆ ನಕ್ಷತ್ರಗಳು ಮೆರೆಯುತ್ತಿದ್ದುವು.