೩೨. ನಾಭೀಭಾಜೋ ನಾಯಕಸ್ಯೋಕ್ತಿದೇವ್ಯಾ
ನಾನಾಸೂಕ್ತ್ಯಾ ನರ್ತಿತಸ್ವಾಪದಾನಮ್ |
ಅನಿಲಾನಾಮಂಗಭಾಸಾಂ ವಿಲಾಸಾ
ದಾಚಕ್ಷಣಂ ತತ್ವಮಂಬೋಧರಾಣಾಮ್ ||

ನಾಭಿಕಮಲದಲ್ಲಿದ್ದ ಬ್ರಹ್ಮನ ರಾಣಿ ಸರಸ್ವತಿಯ ನಾನಾ ಸೂಕ್ತಿಗಳು ಭಗವಂತನ ಪರಾಕ್ರಮಗಳನ್ನು ವರ್ಣಿಸುತ್ತಿದ್ದವು. ನೀಲವರ್ಣದ ಶರೀರದ ಕಾಂತಿಯಿಂದ ಮೋಡಗಳ ಸ್ವರೂಪವನ್ನು ಕುರಿತು ಕಥೆಯನ್ನು ಹೇಳುವಂತಿತ್ತು.

೩೩. ಸ್ವಾಧೀನೋಕ್ತಿಪ್ರೇಯಸೀಶೀರ್ಷರತ್ನಂ
ಸ್ವಾರಾಜ್ಯಶ್ರೀವಲ್ಲೀಕೋಪಘ್ನದಂಡಮ್ |
ಕಾರುಣ್ಯಾಂಭೋರಾಶಿಜೀಮೂತಮುರ್ವ್ಯಾಃ
ಕಾಂತೋsಪಶ್ಯತ್ಕೌಸ್ತುಭಾರ್ಕೋದಯಾದ್ರಿಮ್ ||

ವೇದೋಕ್ತಿಯೆಂಬ ಪ್ರೇಯಸಿಯ ಶಿರೋರತ್ನವಾಗಿರುವ, ಮೋಕ್ಷವೆಂಬ ಲಕ್ಷ್ಮೀ ಬಳ್ಳಿಗೆ ಊರುಗೋಲಾಗಿರುವ, ಜೀಮೂತನೆಂಬ ಭೂಮಿಗೆ ಕರುಣೆಯೆಂಬ ಮೇಘರಾಶಿಯಾದ, ಕೌಸ್ತುಭವೆಂಬ ಸೂರ್ಯನಿಗೆ ಉದಯಪರ್ವತವೆನಿಸಿದ ಪರಮಾತ್ಮನನ್ನು ನೋಡಿದನು.

೩೪. ದೇವಂ ದೂರಾದೇವ ದೇದೀಪ್ಯಮಾನಂ
ದೃಷ್ಟ್ವಾ ಭಕ್ತ್ಯಾ ಕ್ಲಪ್ತದಂಡಪ್ರಣಾಮಃ |
ಅಸಾದ್ಯಾಸಾವಾದ್ಯಮಭ್ಯರ್ಚ್ಯ ಪುಷ್ಪೈ
ರ್ವಾಕ್ ಪುಷ್ಪೈರಿತ್ಯರ್ಚಯದ್ವಾಸುದೇವಮ್ ||

ದೇದಿಪ್ಯಮಾನವಾಗಿ ಹೊಳೆಯುವ ದೇವನನ್ನು ದೂರದಿಂದಲೇ ನೋಡಿ, ಭಕ್ತಿಯಿಂದ ದಂಡವತ್ ಪ್ರಣಾಮಗಳನ್ನು ಸಲ್ಲಿಸಿದನು. ಜಗದಾದ್ಯನನ್ನು ಸಾಕ್ಷಾತ್ಕರಿಸಿಕೊಂಡು ಹೂಗಳಿಂದ ಪೂಜಿಸಿದ ನಂತರ ವಚನಕುಸುಮಗಳಿಂದ ವಾಸುದೇವನನ್ನು ಅರ್ಚಿಸಿದನು.

೩೫. ವಾಚೋರೀತ್ಯಾ ವೈಭವಂ ತಾವಕೀನಂ
ನಾಥಃ ಸ್ತೋತ್ತುಂ ನೈವಶಕ್ತಾಸ್ಸಮಸ್ತಾಃ |
ಪ್ರಾದುಶಶಾಖಾಚಂಕ್ರಮಾಃ ಪ್ರಾಯಶಸ್ತೇ
ಮಹಾತ್ಯೋಕ್ತೌ ಮಾದ್ಯಶಾಂ ಕೋsಧಿಕಾರಃ ||

ಎಲೈ ಪ್ರಭು, ನಿನ್ನ ವೈಭವವನ್ನು ವರ್ಣಿಸಲು ಅನೇಕ ಶಾಖೆಗಳಿಂದ ಕೂಡಿದ ಸಮಸ್ತ ವೇದಗಳೂ ಮಾತಿನ ರೀತಿಯಿಂದ ಪೂರ್ಣವಾಗಿ ಶಕ್ತವಲ್ಲ ಹೀಗಿರಲು ನಿನ್ನ ಮಹಾತ್ಮ್ಯವನ್ನು ಹೊಗಳುವದರಲ್ಲಿ ನನ್ನಂಥವರಿಗೆ ಯಾವ ಅಧಿಕಾರ?

೩೬. ಪ್ರಾದರ್ಭೂತೇ ತ್ವತ್ಪ್ರಿಯಾಯಾ ರಮಾಯಾ
ನಾಥ ಖ್ಯಾತೇ ನಂದನೇsನುಗ್ರಹಾಖ್ಯೇ |
ಮುಚ್ಯಂತೇsಮೀ ಮೌನಿನೋ ಮಾತೃಗರ್ಭಾ
ಗಾರಾತ್ಕಾರಾಗಾರತಃ ಕೈಟಭಾರೇ ||

ಕೈಟಭಾರೀ, ನಿನ್ನ ಪ್ರಿಯೆಯಾದ ಲಕ್ಷ್ಮಿಯ ಅನುಗ್ರಹವೆಂಬ ಪುತ್ರನು ಹುಟ್ಟಿದಾಗ ಮುನಿಗಳೆಲ್ಲರೂ ಮಾತೃಗರ್ಭವೆಂಬ ಸೆರೆಮನೆಯಿಂದ ಬಿಡುಗಡೆಯನ್ನು ಪಡೆಯುತ್ತಾರೆ.

೩೭. ಪಾರೀಣಾಸ್ತೇ ಚಿನ್ನಿದಾನಂ ಪದ್ಮಾಬ್ಜಂ
ಯೇನ ದೃಷ್ಟಾಂ ಪಾಟಲಂ ಕೈಟಭಾರೇ |
ದೇದೀಪ್ಯತೇ ಭಕ್ತಿದಿವ್ಯಾಂಜನೇನ
ಸ್ಪಷ್ಟಾಂ ದೃಷ್ಟಿಂ ಪ್ರಾಪ್ಯ ಎತೇಪ್ಯವನ್ಯಾಮ್ ||

ಚೇತನಮೂಲಕಾರಣವಾದ ನಿನ್ನ ಪಾದಕಮಲವನ್ನು ನೋಡಲು ಭಕ್ತಿ ಎಂಬ ದಿವ್ಯಾಂಜನದಿಂದ ಸ್ಪಷ್ಟವಾದ ದೃಷ್ಟಿಯನ್ನು ಪಡೆದುಕೊಂಡವರು ಈ ಭೂಮಿಯಲ್ಲಿದ್ದರೂ, ಸಂಸಾರ ಸಾಗರವನ್ನು ದಾಟಿದವರೇ ಆಗುವರು.

೩೮. ಚಿಂತಾಮಂತ್ತಸ್ವನ್ನಿಬಂಧಾಂ ಕದಾಚಿತ್
ಅಂತಾಹಂತಾ ಬಂಧವೋ ನಾಶ್ರಯಂತೇ |
ಮಂದಾಭೂಯೋ ಜನ್ಮಚಿಂತಾಂ ದುರಂತಾಂ
ಮಂದಾರುಣಾಂ ಯಾಂತಿ ಮಂದಾರಶಾಖಿನ್ ||

ವಂದಿಸುವವರಿಗೆ ಇಷ್ಟಪ್ರದವಾದ ಮಂದಾರ ವೃಕ್ಷದಂತಿರುವ ಭಗವಂತನೇ, ಅಹಂಕಾರ ಪೀಡಿತರಾದವರು ನಿನ್ನ ಸಂಬಂಧವಾದ ಚಿಂತನೆಯನ್ನೇ ಮಾಡುವುದಿಲ್ಲ ಅಂಥ ಮಂದಬುದ್ದಿಯ ಜನರು ಮತ್ತೆ ಮತ್ತೆ ದುರಂತವಾದ ಜನ್ಮದ ಚಿಂತೆಯನ್ನು ಪಡೆಯುತ್ತಾರೆ.

೩೯. ಪಾತಿವ್ರತ್ಯಂ ಯಾ ನೃಣಾಂ ತ್ಯಜಂತೀ
ಭಕ್ತಿಸ್ನಿಹ್ಯೋದ್ವೇದ್ಯಯೋಃ ಪಾದಯೋಸ್ತೇ |
ಸೇಯಂ ಸಂವಿತ್ಸೈವ ವಿದ್ಯಾsನವದ್ಯಾ
ಸೌಶೀಲ್ಯಂ ತತ್ಸೋನ್ವವಾಯೋsಪಿ ಧನ್ಯಃ ||

ಪಾತಿವ್ರತ್ಯವನ್ನು ಬಿಡದೇ ಯಾವಳು ಭಕ್ತಿ ಸ್ನೇಹಗಳಿಂದ ನಿನ್ನ ಪಾದಗಳನ್ನು ಸೇವಿಸುತ್ತಾಳೋ, ಅವಳು ವಿದ್ಯೆ, ಜ್ಞಾನ, ಸೌಶೀಲ್ಯಗಳಿಂದ ಅನ್ವಿತಳಾಗಿ ಧನ್ಯಳಾಗುತ್ತಾಳೆ.

೪೦. ಪದ್ಮಾಬಂಧೋ ತೇ ಹೀ ಬಾಧಿರ್ಯವಂತೋ
ನಾಮಪ್ರೇಮ್ಲಾ ನೈವ ಶೃಣ್ವಂತಿ ಯೇ ತೇ |
ತೇ ಜಾತ್ಯಾಂಧಾ ಯೋ ಪರ್ಯಂತಿ ಹಿ ತ್ವಾಂ
ತೇ ಮೂಕಾ ಯೇ ಸ್ತುವಂತಿ ಸ್ಥಿರಂ ತ್ವಾಮ್ ||

ಲಕ್ಷ್ಮೀಪತಿಯಾದ ನಿನ್ನ ನಾಮವನ್ನು ಪ್ರೇಮದಿಂದ ಯಾರು ಕೇಳುವುದಿಲ್ಲವೋ ಅವರು ಕಿವುಡರು. ನಿನ್ನನ್ನು ನಿನ್ನನ್ನು ಯಾರು ನೋಡುವುದಿಲ್ಲವೋ ಅವರು ಹುಟ್ಟು ಕುರುಡರು. ಸ್ಥಿರವಾಗಿ ಯಾರು ನಿನ್ನನ್ನು ಸ್ತುತಿಸುವುದಿಲ್ಲವೋ ಅವರು ನಿಜವಾಗಿ ಮೂಕರು.

೪೧. ಮೂಲಂ ಮುಕ್ತೇರ್ಮೊಹತೃಷ್ಣಾಲವಿತ್ರಂ
ಲೋಲಂಬಶ್ರೀಲೋಭನೀಯಪ್ರತೀಕಮ್ |
ಅಲಂಬಂ ತ್ವಾಮಂತರೇಣ ಶ್ರುತೀನಾಂ
ಕೂಲಂ ನೇತುಂ ಕೋವಿದಃ ಕೋ ಭವಾಬ್ಧೇಃ ||

ಮುಕ್ತಿಗೆ ಮೂಲಕಾರಣನಾದ, ಮೋಹ ಮತ್ತು ಆಸೆಗಳಿಗೆ ಕೊಡಲಿಯಾಗಿರುವ ಚಂಚಲೆಯಾದ (ಭ್ರಮರದಂತೆ) ಲಕ್ಷ್ಮಿಗೂ, ಲೋಭದ ಪ್ರತೀಕನಾದ ಶ್ರುತಿಗಳಿಗೆ ಅವಲಂಬನನಾದ ನಿನ್ನ ಹೊರತಾಗಿ ಸಂಸಾರ ಸಾಗರದ ದಡಕ್ಕೆ ಕೊಂಡೊಯ್ಯುವ ಜಾಣನು ಬೇರೆ ಯಾವನಿದ್ದಾನೆ

೪೨. ಧನ್ಯಂ ಮಾನ್ಯಂ ಕೋsಪಿ ದೇವೈಸ್ತ್ವದನೈ
ರ್ಮಾನ್ಯಂತಾಂ ಸ್ವಂ ಮಾನವಾ ದಾನವಾರೇ |
ಅನ್ಯಂ ಕಂಚಿತ್ವಾಂ ವಿನಾಮ್ನಾಯಮಾರ್ಗಾ
ದ್ವನ್ಯಂ ನಾಹಂ ವೇದ್ಮಿ ಜಯಂತರೇsಪಿ ||

ರಾಕ್ಷಸರಿಗೆ ಶತ್ರುವಾದ ಹರಿಯೇ, ಮಾನವರಲ್ಲಿ ಕೆಲವರು ಬೇರೆ ದೇವರುಗಳಿಂದ ಕೃಪೆ ಪಡೆದು ತಮ್ಮನ್ನು ಧನ್ಯರೆಂದು ತಿಳಿದುಕೊಳ್ಳಲಿ, ವೇದಗಳ ಮಾರ್ಗದಲ್ಲಿ ಧ್ವನಿಸ್ವರೂಪನಾದ ನಿನ್ನನ್ನು ಬಿಟ್ಟು ಬೇರೆ ದೇವರನ್ನು ನಾನು ಜನ್ಮಾಂತರದಲ್ಲಿಯೂ ಪರಮಾತ್ಮನೆಂದು ಅಂಗೀಕರಿಸುವುದಿಲ್ಲ.

೪೩. ಕುಕ್ಷೌ ನಿಕ್ಷಿಪ್ಯೈವ ಲೋಕಾನವಂತಂ
ಕುಂಠೋತ್ಕಂಠಾಸ್ವಾಮುಪಾಸ್ಯಂ ನಿರಸ್ಯ |
ಮಾನ್ಯಾನ್ಕೇಚಿನ್ಮನ್ವಂತೇ ಯತ್ವದನ್ಯಾನ್
ಮಾಯಾಪ್ಯೇಷಾ ಮಾಧವ ತ್ವನ್ನಿಬಂಧಾ ||

ಮಾಧವನೇ, ಹೊಟ್ಟೆಯಲ್ಲಿ ಎಲ್ಲ ಲೋಕಗಳನ್ನು ಇಟ್ಟುಕೊಂಡು ರಕ್ಷಿಸುತ್ತಿರುವ, ಉಪಾಸನೆಗೆ ಯೋಗ್ಯನಾದ ನಿನ್ನನ್ನು ಬಿಟ್ಟು, ಕೆಲವರು ಬೇರೆ ದೇವತೆಗಳನ್ನು ಪೂಜಾರ್ಹರೆಂದು ತಿಳಿದುಕೊಂಡಿರುವುದು ಕೂಡ ನಿನ್ನ ಮಾಯೆಯೇ.

೪೪. ವೇತ್ತಾ ವೇದ್ಯೋ ವೀಕ್ಷಕೋ ವೀಕ್ಷಣೀಯೋ
ಭೋಕ್ತಾ ಭೋಜ್ಯಃ ಪಾಲಕಃ ಪಾಲನೀಯಃ |
ಧ್ಯಾತಾ ಧ್ಯೇಯಃ ಪೂಜಕಃ ಪೂಜನೀಯಃ
ಸ್ತೋತಾ ಸ್ತುತ್ಯೋ ರಂಗನಾಥ ತ್ವಮೇವ ||

\ಜಿಔ””ಂರಿಂರಿ^ಘೆ ವೇದ್ಯನು, ನೋಡುವವನಿಗೆ ವೀಕ್ಷಣೀಯನೂ, ಭೋಕ್ತೃವಿಗೆ ಭೋಜ್ಯನು, ಪಾಲಕನಿಗೆ ಪಾಲನೀಯನು, ಧ್ಯಾನಿಸುವವನಿಗೆ ಧ್ಯೇಯನು. ಪೂಜಕನಿಗೆ ಪೂಜ್ಯನು. ಸ್ತೋತ್ರಕ್ಕೆ ಸ್ತುತ್ಯನು ರಂಗನಾಥ ನೀನೇ ಆಗಿರುವೆ.

೪೫. ಮೀನಾಕಾರಾ ದೃಙನಿಮಜ್ಯೇಂದಿರಾಯಾ
ಸ್ಸೌಂದರ್ಯಾಬ್ದೌ ಶ್ರುತ್ಯವಾಪ್ತೇತಿ ಸತ್ಯಮ್ |
ಮುಕ್ತ್ವಾ ಸಿಂಧೌ ಮಾರ್ಗಣಾಯ ಶುತೀನಾಂ
ಪ್ರಾಯಃ ಪಾಠೀನಾತ್ಮನಾ ಪರ್ಯಣಂಸೀಃ ||

ಲಕ್ಷ್ಮೀಯ ಸೌಂದರ್ಯ ಸಮುದ್ರದಲ್ಲಿ ಮುಳುಗಿದ ನಿನ್ನ ಕಣ್ಣು ಮೀನಾಕಾರವಾಗಿ ಪರಿಣಮಿಸಿ ಶ್ರುತಿ (ಕಿವಿ)ಯವರೆಗೆ ಹೋಯಿತೆಂಬುದು ಸತ್ಯ. ಅದರಿಂದಲೇ ಶ್ರುತಿಗಳನ್ನು ಹುಡುಕುವುದಕ್ಕಾಗಿ ಸಮುದ್ರದಲ್ಲಿ ಮುಳುಗಿ ಬಹುಶಃ ನೀನು ಮೀನಿನ ರೂಪವನ್ನು ಹೊಂದಿದೆ.

೪೬. ಜೇತಾ ಕಶ್ಚಿನ್ಮೀನಲಕ್ಷ್ಮಾ ಜಗತ್ಯಾಮ
ಅನ್ಯಃ ಪಾಠೀನಾಲಯೋsಭೂದ್ಗರೀಯಾನ್ |
ಇತ್ಯೇತಸ್ಯ ಪ್ರಾಯಶೋ ಹೇತುರಾಸೀನ್
ಮೀನಾಕಾರಸ್ವೀಕ್ರಿಯಾ ತೇ ಮುರಾರೇ ||

ಈ ಜಗತ್ತನ್ನು ಗೆದ್ದ ಒಬ್ಬನು (ಮನ್ಮಥನು) ಮೀನನ್ನು ತನ್ನ ಚಿಹ್ನೆಯಾಗಿ ಇಟ್ಟುಕೊಂಡಿದ್ದಾನೆ. ಇನ್ನೊಬ್ಬನು (ಸಮದ್ರ) ಮೀನುಗಳಿಗೆ ಆಶ್ರಯನಾಗಿ ಬಹಳ ದೊಡ್ಡವನಾಗಿದ್ದಾನೆ. ಮುರಾರಿಯೇ ಇದಕ್ಕೆಲ್ಲ ಕಾರಣವು ಪ್ರಾಯಶಃ ನೀನು ಮೀನಿನ ಆಕಾರವನ್ನು ಧರಿಸಿರುವುದೇ ಆಗಿದೆ.

೪೭. ನಾಧಾರಶ್ಚೇನ್ನಾಥಕೂರ್ಮಾಕೃತಿಸ್ತೇ
ಕ್ಷ್ಮಾಭೃಚ್ಛಕ್ರಸ್ಯಾರ್ಣವೇ ಘೂರ್ಣೀತಸ್ಯ |
ಪ್ರಾದುರ್ಭೂಯಾತ್ಕಿಂ ಸುಧಾಪೂರ್ಣಕುಂಭಃ
ಕಿಂ ಪ್ರಾದುಷ್ಯಾತ್ಖೇಚರಾಹಾರವಾರ್ತಾ ||

ಸಮುದ್ರದಲ್ಲಿ ಮಥನಕ್ಕಾಗಿ ತಿರುಗಿಸಲ್ಪಟ್ಟ ಮಂದರ ಪರ್ವತ್ಕೆ ಆಮೆಯ ಆಕಾರವನ್ನು ಧರಿಸಿದ ನೀನು ಆಧಾರವಾಗಿ ನಿಲ್ಲದೇ ಹೋಗಿದ್ದರೆ ಅಮೃತದ ಕುಂಭವು ಹುಟ್ಟುತ್ತಿತ್ತೇ ದೇವತೆಗಳಿಗೆ ಆಹಾರದ ವ್ಯವಸ್ಥೆ ಆಗತ್ತಿತ್ತೇ?

೪೮. ಗಂಭೀರಾಂಭೋಗಾಧತತ್ವಂ ಸಮಸ್ತಂ
ದೃಷ್ಟ್ವಾ ಪಂಕಂ ದರ್ಶಯಂತೀವ ಸಿಂಧೋಃ |
ಉರ್ವಿಂ ಮಗ್ನಾಮುದ್ಧರಂತೀ ಕೇಷಾಂ
ವಾರಾಹೀ ತೇ ವ್ಯಕ್ತಿರಾರಾಧನೀಯಾ ||

ಗಂಭೀರವಾದ ಜಲದ ತತ್ವವನ್ನು ಪೂರ್ಣವಾಗಿ ತಿಳಿದುಕೊಂಡು ಸಮುದ್ರದ ಕೆಸರನ್ನು ತೋರಿಸುವುದಕ್ಕಾಗಿಯೇ ಎಂಬಂತೆ ಅದರೊಳಗೆ ಮುಳುಗಿದ್ದ ಭೂಮಿಯನ್ನು ಮೇಲೆ ಎತ್ತಿದ ನಿನ್ನ ವರಾಹರೂಪದ ಅಭಿವ್ಯಕ್ತಿಯು ಯಾರಿಗೆ ತಾನೇ ಆರಾಧನೆಗೆ ಅರ್ಹವಲ್ಲ?

೪೯. ಹಸ್ತೋದಸ್ತಸ್ವಾಂಶಲೀನಾsಸುರೋರಃ
ಪ್ರತ್ಯಗ್ರಾಂತ್ರಂ ತ್ವಾಂ ನೃಸಿಂಹ್ಮಪ್ರತೀಮಃ |
ಪಾರಾವಾರಂ ವೀಚೀಕೋತ್ಕಿಪ್ತಪಾಥಃ
ಪಾನಾಸೀದನ್ಮೇಘಸೌದಾಮಿನೀಕಮ್ ||

ಎಲೈ ನರಸಿಂಹನೇ, ಕೈಯಿಂದ ಎಸೆಯಲ್ಪಟ್ಟು, ಮಡಿಲಿನಲ್ಲಿ ಬಂದು ಬಿದ್ದ ಹಿರಣ್ಯಕಶ್ಚಿಪುವಿನ ಎದೆಯನ್ನು ಸೀಳಿ ಕೈಯಲ್ಲಿ ಅವನ ಕರುಳುಗಳನ್ನು ಹಿಡಿದ ನಿನ್ನನ್ನು ಅಲೆಗಳಿಂದ ಮೇಲೆ ಎಸೆಯಲ್ಪಟ್ಟು ಆಮೇಲೆ ನೀರನ್ನು ಕುಡಿಯುವದಕ್ಕಾಗಿ ಬಂದ ಮಿಂಚಿನಿಂದ ಕೂಡಿದ ಮೇಘವನ್ನು ಸಮುದ್ರವೆಂದು ಭಾವಿಸುತ್ತೇವೆ.

೫೦. ಪ್ರಾದುಸ್ತೋಯಂ ಪ್ರೌನ್ಮೀಷತ್ವತ್ಪದಾಂಕಂ
ವೈರಿಚ್ಚಾಂಡಂ ವಾರಿಜಾತಾಕ್ಷಮನ್ಯೇ |
ತ್ಯಕ್ತ್ವಾ ದೈತ್ಯಾಸ್ತ್ವಜ್ಜುಷೋ ಜೈತ್ರಲಕ್ಷ್ಮ್ಯಾಃ
ಪ್ರಾಯೋ ವ್ಯಜ್ಯತ್ಪಲ್ಲವಂ ಪೂರ್ಣಕುಂಭಮ್ ||

ಕಮಲಾಕ್ಷನೇ ನೀರು ಉಕ್ಕುತ್ತಿರುವ ನಿನ್ನ ಪಾದದ ಚಿಹ್ನೆಗಳು ಕಾಣಿಸುತ್ತಿದ್ದ ಬ್ರಹ್ಮಾಂಡವು, ದೈತ್ಯರನ್ನು ಪರಿತ್ಯಜಿಸಿ ನಿನ್ನನ್ನು ಆಶ್ರಯಿಸಿದ ಜನರ ಜಯಲಕ್ಷ್ಮಿಯ ಸ್ವಾಗತಕ್ಕಾಗಿ (ಮಾವಿನ) ಚಿಗುರಿನಿಂದ ಅಲಂಕೃತವಾದ ಪೂರ್ಣಕುಂಭವೆಂದು ತಿಳಿಯುತ್ತೇನೆ.

೫೧. ಪಾದೇನೋರ್ದ್ವಂ ಪ್ರಸ್ಥಿತಾಜಾಂಡರಂಧ್ರಾ
ದ್ಬಹ್ಯಾಕಾಶಂ ವ್ಯಾಪ್ಯ ತತ್ರಾಪ್ಯಮಾಂತೀ |
ವ್ಯಾವೃತ್ತಾಃ ಕಿಂ ಮಾಧವ ವ್ರೋ
ವ್ಯಾಜಾತ್ಕೀರ್ತಿವ್ಯಜ್ಯತೇ ತಾವಕೀನಾ ||

ತ್ರಿವಿಕ್ರಮಾವತಾರದಲ್ಲಿ ಸ್ವರ್ಗವನ್ನು ಅಳೆಯುವುದಕ್ಕಾಗಿ ಎತ್ತಿದ ಪಾದದಿಂದ ಮೇಲಕ್ಕೆ ಹೋಗಿ ಬ್ರಹ್ಮಾಂಡರಂಧ್ರದ ಮೂಲಕ ಬಾಹ್ಯಾಕಾಶವನ್ನು ತಲುಪಿ ಅಲ್ಲಿಯೂ ಹಿಡಿಸಲಾಗದೇ ಮತ್ತೆ ಹಿಂದೆ ಬಂದ ನಿನ್ನ ಕೀರ್ತಿಯು ಆಕಾಶಗಂಗೆಯ ನೆವದಿಂದ ಈಗ ಕಾಣಿಸುತ್ತಿದೆಯೇ?

೫೨. ನಾಲೀಕಾಕ್ಷ ತ್ವತ್ಕನಾರಾಚಧಾರಾ
ಕ್ರೂರಾಪಾತಾತ್ಪ್ರಸ್ಫುಟತ್ಕ್ರೌಂಚರಂಧ್ರಮ್ |
ಜಾನೀಮಸ್ತೇ ವಿಸ್ತೃತಂ ಜೈತ್ರಲಕ್ಷ್ಯ್ಮಾಃ
ಕೇಲಿಸೌಧಾಭೋಗಲಕ್ಷ್ಯಂ ಗವಾಕ್ಷಮ್ ||

ಕಮಲನೇತ್ರನೇ ನಿನ್ನ ಬಾಣದ ತೀಕ್ಷ್ಣವಾದ ಅಲುಗಿನ ಘೋರವಾದ ಹೊಡೆತದಿಂದ ಸೀಳಿದ ಕ್ರೌಂಚಪರ್ವತದ ರಂಧ್ರವು ನೀನು ಜಯಲಕ್ಷ್ಮಿಯ ಆಟಕ್ಕಾಗಿ ಕಟ್ಟಿದ ಅರಮನೆಯ ವಿಶಾಲತೆಯಲ್ಲಿ ಕಾಣಿಸುವ ಗವಾಕ್ಷವೆಂದು ತಿಳಿಯುತ್ತೇವೆ.

೫೩. ಆಕೃಷ್ಟಾಸೀತ್ಕರ್ಕಶೇನಾರ್ಕಕನ್ಯಾ
ರಾಜೀವಾಕ್ಷ ತ್ವದ್ಭುಜಾಲಾಂಗಲೇನ |
ಪಾಥಸ್ತಸ್ಯಾಃ ಕಿಂ ಪ್ರಲಂಬಾವರೋಧ
ಸ್ತ್ರೈಣಸ್ಯಾ ರಾದಕ್ಷಿಕೋಣೇ ವಿಧಾತುಮ್ ||

ಪದ್ಮನಯನನೇ, ಯಮುನಾನದಿಯು ನಿನ್ನ ಕೈಯಲ್ಲಿದ್ದ ಒರಟು ನೇಗಿಲಿನಿಂದ (ಬೇರೆ ದಿಕ್ಕಿಗೆ) ತಿರುಗಿಸಲ್ಪಟ್ಟಳು. ಪ್ರಲಂಬಾಸುರನ ಅಂತಃಪುರದ ಸ್ತ್ರೀಯರ ಕಣ್ಣಿನ ತುದಿಯಲ್ಲಿ ಆ ನದಿಯ ನೀರನ್ನು ಇಡಲು ಹಾಗೆ ಮಾಡಿದೆಯೇನು?

೫೪. ರಾಮ ತ್ವತ್ಕೇನೇಷುಣಾ ರಾಕ್ಷಸೇಂದೋಃ
ಪಂಕ್ತೌ ಮೂರ್ಧ್ನಾಂ ಪ್ರಾಯಶಃ ಪಾತಿತಾಯಾಮ್ |
ಎಕಂ ಮುಕ್ತ್ವೋರ್ವಿಮಗುರ್ವಿಂ ದಧಾನಾ
ವ್ಯರ್ಥಾ ಮೂರ್ಧ್ಯಾಮಾಲಯೋ ವ್ಯಾಲನೇತುಃ ||

ಎಲೈ ರಾಮನೇ, ನಿನ್ನ ಬಾಣದಿಂದ ರಾಕ್ಷಸರಾಜ ರಾವಣನ ಹತ್ತು ತಲೆಗಳ ಸಾಲು ಕತ್ತರಿಸಿ ಕೆಡವಲ್ಪಟ್ಟ ಮೇಲೆ ಭೂಮಿಯ ಭಾರ ಕಡಿಮೆಯಾಯಿತು. ಹಗುರವಾದ ಭೂಮಿಯನ್ನು ಹೊತ್ತ ಒಂದು ಹೆಡೆಯನ್ನು ಬಿಟ್ಟು ಆದಿಶೇಷನ ಉಳಿದ ಹೆಡೆಗಳೆಲ್ಲ ವ್ಯರ್ಥವಾದುವು.

೫೫. ಕೇನಾಪ್ಯಕ್ಷ್ಣೋರ್ನೈವಲಕ್ಷೀಕೃತಾಂಘಿಃ
ಪುಷ್ಯದ್ಗಾತ್ರಃ ಪೂತನಾಪ್ರಾಣವಾತೈಃ |
ಗೋಪಸ್ತ್ರೀಣಾಂ ತ್ವಂ ಭುಜಂಗೋsಸಿ ವಿಷ್ಣೋ
ತನ್ಮೇ ಚಿತ್ರಂ ಭಾಸಿ ಯತ್ತಾರ್ಕ್ಷ್ಯವಾಹಃ ||

ಎಲೈ ವಿಷ್ಣುವೇ, ನಿನ್ನ ಹೆಜ್ಜೆಯನ್ನು ಯಾರ ಕಣ್ಣಿಗೂ ಕಾಣದಂತೆ ಮಾಡಿಕೊಂಡು ಪೂತನಾ ಎಂಬ ರಾಕ್ಷಸಿಯ ಪ್ರಾಣವಾಯುವನ್ನು ಹೀರಿ ಶರೀರವನ್ನು ಬೆಳೆಸಿಕೊಂಡು ನೀನು ಗೋಪಸ್ತ್ರೀಯರಿಗೆಲ್ಲ ಭುಜಂಗನಾದೆ ಆದರೂ ನೀನು ಗರುಡುವಾಹನ ಎಂಬುದು ನನಗೆ ವಿಸ್ಮಯವನ್ನುಂಟು ಮಾಡುತ್ತದೆ.

೫೬. ಸಂವಿಜ್ಜ್ಯೋತಿಶ್ವಾದಯಿತ್ವಾsಂತರಾಂಧ್ಯಂ
ವ್ಯಾವೃಣ್ವಾನೇನಾರ್ಣವಂ ಚೋತ್ಪಥಾಖ್ಯಮ್ |
ಧೃತ್ವಾ ಪಿಚ್ಛಂ ದೇವ ವಿದ್ಯಾ ತ್ವಯಾsಗ್ರೇ
ದೈತೇಯಾನಾಂ ದರ್ಶಿತೇವೈಂದ್ರಜಾಲೀ ||

ಬುದ್ದಿಯೆಂಬ ಜ್ಯೋತಿಯನ್ನು ಮುಚ್ಚಿಟ್ಟು, ಒಳಗಿನ ಕತ್ತಲನ್ನು ಉತ್ಪಥವೆಂಬ ಸಮುದ್ರವನ್ನು ತೆರೆದು ತೋರಿಸುವ ನಿನ್ನ ಮುಂದೆ ತಲೆಯಲ್ಲಿ ನವಿಲುಗರಿಯನ್ನು ಧರಿಸಿದ ರಾಕ್ಷಸರ ಇಂದ್ರಜಾಲವಿದ್ಯೆಯು ದರ್ಶಿತವಾಯಿತಲ್ಲವೇ

೫೭. ಆಜಾನೇಯಸ್ಯಾಂಘ್ರಿನಿರ್ಘಾತಧಾರಾ
ಪಾತಕ್ಷುಣ್ಣೈಃ ಪಾಂಸುಭಿರ್ಧೂಸರಾಂಗಮ್ |
ಕ್ಷಿಪ್ರೋಬಾರಶಿಶಕ್ಷಣಾದ್ ದುರ್ಮದಾನಾ
ಮಿತ್ಯೇವೋರ್ವ್ಯಾಶಿಶ್ಲಷ್ದಮೀಡೇ ಭವಂತಮ್ ||

ಹೆಜ್ಜೆಯ ಇಡುವಿಕೆಯಿಂದ ಎದ್ದ ಧೂಳಿನಿಂದ ನಿನ್ನ ಶರೀರವು ಧೂಳಾಗಿದೆ. ಮದೋನ್ಮತ್ತರಾದ ರಾಕ್ಷಸರನ್ನು ಶಿಕ್ಷಿಸಿ ತನ್ನ ಭಾರವನ್ನು ಇಳಿಸಿದನೆಂದು ಭೂದೇವಿಯಿಂದ ಆಲಂಗಿಸಲ್ಪಟ್ಟಿರುವ ನಿನ್ನನ್ನು ಸ್ತುತಿಸುತ್ತೇನೆ.

೫೮. ಸ್ತಾಮಸ್ತಾವಂ ದೇವಮೇವಂವಿಧಾನಂ
ವಾಚಾಂಗುಂಫೈಃ ವಾವದೂಕೇಂದ್ರಕಲ್ಪಮ್ |
ಆನಂದಾಬ್ಧೌ ಕ್ರೀಡತಿ ಸ್ಮಾಂಗಲಗ್ನಾಂ
ರೋಮಾಂಚೈಃ ಕಿಂ ವ್ಯಂಜಯಂಛೈವಲಾಲೀಮ್ ||

ಈ ರೀತಿಯಾದ ವಚನಮಾಲೆಗಳಿಂದ ಭಗವಂತನನ್ನು ಬೃಹಸ್ಪತಿಗೆ ಸಮಾನನಾದ ರಾಜನು ಸ್ತುತಿಸಿದನು. ಮತ್ತೆ ಮತ್ತೆ ಹಾಗೆ ಸ್ತುತಿಸಿ ಶರೀರದ ರೋಮಾಂಚನದಿಂದ ಹಾವಸೆಯ ರಾಶಿಯನ್ನು ತೋರಿಸುತ್ತಿರುವನೋ ಎಂಬಂತೆ ಆನಂದ ಸಮುದ್ರದಲ್ಲಿ ಅವನು ಆಡುತ್ತಿದ್ದನು.

೫೯. ಹರಿಪದನುತಿಚರ್ಯಾನಂತರಂ ಮಾನವಾನಾ
ಮಧಿಪತಿರೂಪಕಾರ್ಯಾಮಾಸದನ್ನೀತಿಧುರ್ಯಃ |
ಅಧಿಪದಮಪಿ ವಿಷ್ಣೋಶ್ಚಾರಯನ್ ಗೋಪ್ರಪಂಚಾ
ನಪರಗಿರಿಮಕಾಂಕ್ಷಿದಾಪ್ತುಮಹ್ನಾಮಧೀಶೋ ||

ಹರಿಯ ಪಾದಗಳನ್ನು ಸ್ತುತಿಸಿದ ಮೇಲೆ ನೀತಿಶಾಸ್ತ್ರ ಕೋವಿದನಾದ ಆ ರಾಜನು ಅರಮನೆಗೆ ಬಂದನು. ಆಕಾಶದಲ್ಲಿ ತನ್ನ ಗೋಪ್ರಪಂಚ(ಕಿರಣಮಾಲೆ)ಗಳನ್ನು ಹರಡಿದ್ದ ಸೂರ್ಯನೂ ಅಷ್ಟು ಹೊತ್ತಿಗೆ ಪಶ್ಚಿಮಪರ್ವತವನ್ನು ಸೇರಲು ಅಪೇಕ್ಷಿಸಿದನು.