ಉತಿಪ್ಯ ಕ್ಷಿತಿಕುಹರಾದುಪಾತ್ತನೃತೈ
ರ್ನಿಕ್ಷಿಪ್ತಂ ಸ್ವಯಮಿವ ನಿಹ್ನುತಂ ಪದಾರ್ಥಮ್ |
ಆಲೋಕ್ಯ ಕ್ಷಿತಿಪಮಣೇರಥಾಯುಧೀಯೈ
ರಾಕ್ರಾಂತಂ ಹಯಪತಿರಾಜ್ಯಮನ್ಯಭೋಜ್ಯಮ್ ||

ನೃತ್ಯದ ಮೂಲಕ, ಭೂಮಿಯ ಹೊಟ್ಟೆಯೊಳಗೆ ಅಡಗಿಸಿಟ್ಟಿರುವ ಪದಾರ್ಥವೆಂಬಂತಿದ್ದ ಅದನ್ನು ಭೂಮಿಯೊಳಗಿನಿಂದ ಮೇಲೆತ್ತಿ, ಅನ್ಯರ ಭೋಗಕ್ಕೆ ವಿಷಯವಾಗಿದ್ದ ಹಯಪತಿಯ ರಾಜ್ಯವನ್ನು ನೋಡಿ ಅಚ್ಯುತರಾಯನ ಸೈನಿಕರು ಅದನ್ನು ಆಕ್ರಮಿಸಿದರು.

. ಪ್ರಾಕಾರಾಂತರನಿಭೃತಾನ್ ಕ್ಷಿತಿಶಸೇನಾ
ಪಶ್ಚಾತ್ಯಾನಥ ಪರಿವಾರಯಾಂಬಭೂವ |
ಅರ್ಯಮ್ಣೋ ಹರಿತಿ ತಥಾ ಯಥಾಂಶುಧೋರ
ಣ್ಯದ್ರೀಂದ್ರಾವಟತಟಗೂಢಮಂಧಕಾರಮ್ ||

ಪ್ರಾಕಾರದೊಳಗೆ ಅಡಗಿರುವ ಹಯಪತಿಯ ಸೈನ್ಯವನ್ನು/ಸೈನಿಕರನ್ನು ಆಗ ಅಚ್ಯುತರಾಯನ ಸೈನ್ಯವು ಸೂರ್ಯನ ಕಿರಣಗಳು ಪೂರ್ವದಿಕ್ಕಿನಲ್ಲಿ ಪರ್ವತಪ್ರಪಾತದ ನಿಗೂಢವಾದ ಕತ್ತಲೆಯನ್ನು ಪ್ರವೇಶಿಸುವಂತೆ ಸುತ್ತುವರೆಯಿತು.

. ಸಂವರ್ತಾರ್ಣವಸಲಿಲೇನ ವಾ ಪರೀತಂ
ಪ್ರಜ್ವಾಲಾನಲಪರಿವಾರಿತಂ ಯಥೈವ |
ತತ್ಸೇನಾವಲಯಿತಮೈಕ್ಷಿ ದಂಡಪಾಣೇಃ
ಪಾಶೇನಾವೃತಮಿವ ಪಾರಸೀಕಸೈನ್ಯಮ್ ||

ಆಗ ಪಾರಶೀಕರ ಸೈನ್ಯವು ಅಚ್ಯುತರಾಯನ ಸೈನ್ಯದಿಂದ ಸುತ್ತುವರಿಯಲ್ಪಟ್ಟು ಪ್ರಳಯಕಾಲದ ಸಮುದ್ರದ ನೀರಿನಿಂದ ಸುತ್ತುವರೆಯಲ್ಪಟಂತೆ, ಜ್ವಾಲೆಗಳನ್ನುಳ್ಳ ಬೆಂಕಿಯಿಂದ ಸುತ್ತುವರಿಯಲ್ಪಟ್ಟಂತೆ, ಹಾಗೂ ಯಮನ ಪಾಶದಿಂದ ಕಟ್ಟಲ್ಪಟ್ಟಂತೆ ಕಾಣಿಸಿತು.

. ಪರ್ಯಾಯಾತ್ಪ್ರತಿಭಟದಾರುಯಂತ್ರಮುಕ್ತೈಃ
ಪಾಷಾಣೈರಪಿ ಲಗುಡೈಃ ಪರಶ್ವಧೈಶ್ಚ |
ಸಕ್ರೋಧಂ ತದುಭಯಸೈನ್ಯಮಂಡಲಾನಾಂ
ಸಂಗ್ರಾಮಸ್ಸಮಜನಿ ಸಾಧುವಾದಪೂರ್ವಮ್ ||

ಶತ್ರುಸೈನ್ಯದವರು ದಾರಯಂತ್ರಗಳಿಂದ ಒಂದಾದ ಮೇಲೊಂದರಂತೆ ಎಸೆಯಲ್ಪಟ್ಟ ಕಲ್ಲುಗಳಿಂದಲೂ, ಕೋಲುಗಳಂದಲೂ, ಕೊಡಲಿಗಳಿಂದಲೂ ಕ್ರೋಧದಿಂದ ತುಂಬಿದ್ದ ಆ ಎರಡು ಸೈನ್ಯಗಳ ಮಧ್ಯೆ ಭಲಾ ಭೇಷ್ ಇತ್ಯಾದಿ ಘೋಷಣೆಗಳೊಡನೆ ಕೂಡಿದ ಯುದ್ಧವು ನಡೆಯಿತು.

. ಯಂತ್ರಾಶ್ಮಪ್ರತಿಭಯವರ್ಷಜೇಂದ್ರಗೋಪೈ
ರುದ್ಧಮ ಪ್ರಸರತಮಸ್ತಮೋಮಣೀಭಿಃ |
ಅದೀಂದ್ರಸ್ತದ ಭಿಹತಿಕ್ರಿಯಾಸ್ಪುಲಿಂಗೈ
ರಾಚಷ್ಟೋದ್ಯತಮವನೀಶರಾಗಮಂತಃ ||

ಯಂತ್ರದಿಂದ ಹೊರಬರುವ ಗುಂಡುಗಳಂತೆ ಭಯಂಕರವಾಗಿದ್ದ ಇಂದ್ರಗೋಪಗಳೆಂಬ ಕೀಟಗಳಿಂದಲೂ, ಹೊಗಯಾಡುತ್ತಲೆ ಕತ್ತಲೆಯನ್ನು ಹರಡುವ ತಮೋಮಣಿಗಳಿಂದಲೂ, ಏಟುಬಿದ್ದಾಗ ಹುಟ್ಟಿದ ಬೆಂಕಿಯ ಕಿಡಿಗಳಿಂದಲೂ ಪರ್ವತರಾಜನು ಅಚ್ಯುತರಾಯನ ಬಗೆಗೆ ತನ್ನಲ್ಲಿರುವ ಅನುರಾಗವನ್ನು ವ್ಯಕ್ತಪಡಿಸಿದನು.

. ಅಜ್ಞಾತಾಶನಿಪತನಾದಿಶಾಸು ಲೀಲಾಂ
ಕುರ್ವಂತಃ ಕಿಲ ಕುಲಭೂಭೃತಾಂ ಕುಮಾರಾಃ |
ಗಂಭೀರಧ್ವನಿಲಘು ಲೋಹನಾಲಕೀರ್ಣಾ
ಗ್ರಾವಾಣೋ ಗಗನವಿಗಾಹಿನೋ ನಿಪೇತುಃ ||

ಯಾರಿಗೂ ತಿಳಿಯದಂತೆ ಬಿದ್ದ ಸಿಡಿಲುಗಳಂತೆ ದಿಕ್ಕುಗಳಲ್ಲಿ ಲೀಲೆಯನ್ನು ಪ್ರದರ್ಶಿಸಿದ, ಕುಲಪರ್ವತಗಳ ಕುಮಾರರಾದ ದೊಡ್ಡ ಗುಂಡುಗಳು, ಗಂಭೀರ ಶಬ್ದವುಳ್ಳವುಗಳಾಗಿ, ಹಗುರವಾದ ಲೋಹದ ನಾಳದಿಂದ ಎಸೆಯಲ್ಪಟ್ಟು ಆಕಾಶಕ್ಕೆ ಹಾರಿ ಕೆಳಗೆ ಬೀಳುತ್ತಿದ್ದವು.

. ಯಂತ್ರಾಶ್ಮಾಹತಿಪತಿತಾನಿ ಯಾನ್ಯಭೂವನ್
ತಾನ್ಯುಚ್ಚೈರ್ವರಣಶಿರಾಂಸಿ ತತ್ಕ್ಷಣೇನೆ |
ಉದ್ಭೂತಾನ್ಯುಪಲಮೃದರ್ಪಣೇನ ರಾಮ
ಚ್ಛಿನ್ನೋದ್ಯದ್ದಶಮುಖಶೀರ್ಷಧೋರಣೀವ ||

ಫಿರಂಗಿಗಳ ಗುಂಡುಗಳ ಏಟಿನಿಂದ ಕೋಟೆಗೋಡೆಯ ಯಾವ ಕೊತ್ತಲಗಳು ಉರುಳುತ್ತಿದ್ದುವೋ ಅವು ಕಲ್ಲುಮಣ್ಣುಗಳ ಜೋಡಣೆಯಿಂದಾಗಿ, ರಾಮನು ಕತ್ತರಿಸಿದ ರಾವಣನ ತಲೆಗಳಂತೆ ಮತ್ತೆ ಹುಟ್ಟಿಕೊಳ್ಳುತ್ತಿದ್ದವು.

. ಯೋಧಾಃ ಕೇಚನ ಯುಯುಧುರ್ನೃಪಾಲಮೌಲೇಃ
ಪ್ರಾಕಾರಂ ಕ್ವಚಿದಿತರೇsಖನನ್ಖನಿತ್ರೈಃ |
ಅರೂಹ್ಯ ದ್ರುತಮ ಪರೇಪತಚ್ಛಕಾನಾ
ಮೌನ್ನತ್ಯೇನ ಸಮಮಾಯುಷಾ ನಿಮೇಷಾತ್ ||

ನೈಪಾಲ ಮೌಲಿಯೆನಿಸಿದ ಅಚ್ಯುತರಾಯನ ಕೆಲವರು ಯೋಧರು ಯುದ್ಧ ಮಾಡುತ್ತಿದ್ದರು. ಇತರ ಕೆಲವರು ಗುದ್ದಲಿಗಳಿಂದ ಶತ್ರುಗಳ ಕೋಟೆಯನ್ನು ಅಗೆದು ಉರುಳಿಸುತ್ತಿದ್ದರು. ಇನ್ನೂ ಕೆಲವರು ವೇಗದಿಂದ ಕೋಟೆಯನ್ನೇರಿ ಶಕರ ಔನ್ನತ್ಯದೊಡನೆ ತಮ್ಮ ಆಯಸ್ಸುಮುಗಿಯಲು ಕೆಳಗೆ ಉರುಳುತ್ತಿದ್ದರು.

. ಪಾಷಾಣೈಃ ಫಣಿಮುಖತೋsಪಿ ಸಿಂಧುರೆಂದ್ರೈಃ
ಪ್ರಾಕಾರಂ ನೃಪಸುಭಟೇಷು ಪಾತಯಿತ್ವಾ |
ಆವಿಶ್ಯಾಹತಮಿಮತೇಷು ತೇ ಬಲಾನಾ
ಮಧ್ಯಕ್ಷರಂ ದ್ರುತಮನಮನ್ಹತಾವಶಿಷ್ಟಾಃ ||

ಗುಂಡುಗಳಿಂದಲೂ, ಫಣಿಮುಖಗಳೆಂಬ ಆಯುಧಗಳಿಂದಲೂ, ಆನೆಗಳಿಂದಲೂ, ಕೋಟೆಯನ್ನು ಉರುಳಿಸಿದ ಅಚ್ಯುತರಾಯನ ಸೈನಿಕರು ಹಿಂದೆ ಬರುತ್ತಿರುವಾಗ ಸಾಯದೇ ಬದುಕಿದ್ದ ಯುದ್ಧ ಮಾಡಲು ಇಷ್ಟವಿಲ್ಲದೆ ಶತ್ರುಸೈನಿಕರು ಅಚ್ಯುತರಾಯನ ದಂಡನಾಯಕನಿಗೆ ನಮಸ್ಕರಿಸಿದರು.

೧೦. ನಿರ್ಯಾತೇ ಮಲುಕಬರ್ಹಣಾಯ ತಸ್ಮಿನ್
ಪಾರೀಂದ್ರ ಪ್ರತಿಭಯವಿಕ್ರಮೇ ಪ್ರತೀಚ್ಯಾಮ್ |
ಸಾಶಂಕಸ್ಸಮಜನಿ ಶಾಂಕರಸ್ಸಖಾಪಿ
ಪ್ರಾದುಷ್ಯಾತ್ ಕ್ವ ಖಲು ಜಿಜೀವಿಷಾ ಪರೇಷಾಮ್ ||

ಸಿಂಹಕ್ಕೂ ಹೆದರಿಕೆಯನ್ನುಂಟುಮಾಡುವ ಪರಾಕ್ರಮಿ ಅಚ್ಯುತರಾಯನು ಮಲುಕನನ್ನು ನಿರ್ಮೂಲಗೊಳಿಸಲು ಪಶ್ಚಿಮಕ್ಕೆ ಹೊರಟಾಗ, ಮಿತ್ರನಾದ ಶಾಂಕರನೂ ಭಯಗ್ರಸ್ತನಾದನು. ಇನ್ನು ಶತ್ರುಗಳಿಗೆ ಜೀವಿತಾಶೆ ಹೇಗೆ ತಾನೆ ಹುಟ್ಟೀತು

೧೧. ಅಲೀಢಾಂಬರಮಪವಿಶ್ಯ ಧೂಮಜಾಲಂ
ನಿಗಚ್ಛತ್ಸಗರನಿವಾಸದುಷ್ಕೃತಾನಿ |
ಭೂಜಾನೇರ್ಬಲನಿಹಿತೇನ ಬಿರ್ಹಷಾssಪುಃ
ವಿದ್ವೇಷಿಕ್ಷಿತಿಪ ಪುರಾಣ್ಯಹೋ ವಿಶುದ್ದಿಮ್ ||

ಆಕಾಶವನ್ನು ಮುಟ್ಟುತ್ತಿದ್ದ ಹೊಗೆಯ ನೆವದಿಂದ ಪಾತಾಳದ ಪಾತಕಗಳೆಲ್ಲ ಹೊರಹೊಮ್ಮುತ್ತಿವೆಯೋ ಎಂಬಂತಾಗಲು ಅಚ್ಯುತರಾಯನ ಸೈನ್ಯಗಳು ಇಟ್ಟ ಬೆಂಕಿಯಿಂದ ಶತ್ರುರಾಜರ ನಗರಗಳು ಶುದ್ದಿಯನ್ನು ಪಡೆದುಕೊಂಡವು.

೧೨. ಕಿಂ ವಾಯಂ ತವ ಪತಿರೇಷ ವಾ ಕಿಮು ಸ್ಯಾ
ದಿತ್ಯೇತೈರರಿನಗರಾತ್ಕೃಮೇಣ ಯೋಧೈಃ |
ಧೃತ್ವಾsಗ್ರೇ ಯವನಶಿರಾಂಸಿ ದರ್ಶಯದ್ಭಿಃ
ಕಾರುಣ್ಯಂ ಶಶಕಮಲೇಕ್ಷಣಾಸ್ವನಾಚಿ ||

ಶಕಸುಂದರಿಯರ ಎದುರಿಗೆ ಇವನು ನಿನ್ನ ಗಂಡನೋ ಅಥವಾ ಎಂದು ಹೇಳುತ್ತ ಶತ್ರುಗಳ ನಗರವನ್ನು ಆಕ್ರಮಿಸಿದ ಅಚ್ಯುತರಾಯನ ಸೈನಿಕರು ಯವನರ ತಲೆಗಳನ್ನು ಮುಂದೆ ಹಿಡಿದು ತೋರಿಸಿ ಕಾರುಣ್ಯವನ್ನು ನಟಿಸುತ್ತಿದ್ದರು.

೧೩. ಪ್ರಜ್ವಾಲೋ ಬಲನಿಹಿತಃ ಪ್ರತೀಪಪುರ್ಯಾಃ
ಪ್ರಾಸಾದೋಪರಿ ಪರಿಜೃಂಭತೇsಸ್ಯ ವಹ್ನಿಃ |
ವ್ಯಾಲೀನಾಂದಿಶಿದಿಶಿ ವೀಕ್ಷಿತುಂ ವಿಪಕ್ಷಾ
ನುದ್ಗ್ರೀವೋ ಮನುಜಪತೇರಿವ ಪ್ರತಾಪಃ ||

ಶತ್ರುನಗರದ ಅರಮನೆಯ ಮೇಲೆ ಅಚ್ಯುತರಾಯನ ಸೈನಿಕರು ಹಾಕಿದ ಬೆಂಕಿಯು ಜ್ವಾಲೆಗಳನ್ನು ಚಾಚಿ ದಿಕ್ಕುದಿಕ್ಕುಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಶತ್ರುಗಳನ್ನು ನೋಡಲು ತಲೆಯೆತ್ತಿದ್ದ ಅಚ್ಯುತರಾಯನ ಪ್ರತಾಪವೋ ಎಂಬಂತೆ ವಿಜೃಂಭಿಸುತ್ತಿತ್ತು.

೧೪. ಸಾಹಂಪೂರ್ವಿಕನೃಪಸೈನ್ಯಯೋಧ ವೀರೈ
ರಾನೀತಂ ಪರಿಭವಮಾಕಲಯ್ಯ ಸೀಮ್ನಃ |
ವಿಭ್ರಶ್ಯದ್ಧೃತಿವರಣೋ ವಿಲುಂಠಿತಾತ್ಮಾ
ವಾಹೇಂದ್ರಃ ಪ್ರತಿಘವಶಂವದೋ ದಿದೀಪೇ ||

ನಾನು ಮುಂದೆ ತಾನು ಮುಂದೆ ಎಂದು ಅಚ್ಯುತರಾಯನ ಸೈನಿಕರು ಶತ್ರುಸೈನ್ಯಕ್ಕೆ ಸೋಲನ್ನು ಉಂಟುಮಾಡಿದಾಗ ಧೃತಿಯನ್ನು ಕಳೆದುಕೊಂಡು ಕಂಗೆಟ್ಟ ಮನಸ್ಸಿನಿಂದ ಹಯಪತಿಯು ಅಚ್ಯುತರಾಯನಿಗೆ ಅಧೀನನಾಗಿ ಶೋಭಿಸಿದನು.

೧೫. ಅಕ್ಷೀಣಂ ದೃಗ್ರುಣಿಮಾನಮವ್ಯವಸ್ಥಾ
ಮುತ್ಥಾನಸ್ಥಿತಿಷುತಥೋತ್ತಮಾಂಗಕಂಪಮ್ |
ವಾಸೋ ವಿಚ್ಯುತಿಮವಕಲ್ಪ್ಯವಾಹನೇತು
ರ್ಮೈರೆಯಾಂತರಮಜನಿಷ್ಟ ಮನ್ಯುರೇವ ||

ಆಗ ಹಯಪತಿಗೆ ಉಂಟಾದ ದುಃಖವು ಕಣ್ಣಲ್ಲಿ ಅತ್ಯಧಿಕವಾದ ಕೆಂಪುಬಣ್ಣವನ್ನು ಹೊಂದುವದರೊಂದಿಗೆ, ಎದ್ದು ನಿಲ್ಲಲು ಸಾಧ್ಯವಾಗದ ಅವ್ಯವಸ್ಥೆಯನ್ನು, ತಲೆಯಲ್ಲಿ ನಡುಕವನ್ನು ಉಂಟುಮಾಡಿತಲ್ಲದೇ ಪ್ರಜ್ಞೆಯ ಅವ್ಯವಸ್ಥೆಯಿಂದಾಗಿ ಬಟ್ಟೆಯ ಜಾರುವಿಕೆಯು ಸಂಭವಿಸಿ ತಾನು ಮದ್ಯದ ಪ್ರತಿರೂಪವೆನಿಸಿತು.

೧೬. ಕ್ರೋಧಾಗ್ನೌ ಹೃದಿ ನಿಹಿತೋದಯೇ ಶಕೇಂದೋ
ರ್ನಿಶ್ವಾಸ ಪ್ರಸರಣ ಸಂಪದೋ ನಿದಾನೇ |
ವಾಯೋರಭ್ಯುದಯಪುಷಶ್ಚಿರಾಯ ವಹ್ನಿಃ
ಪ್ರಾಯಃ ಪ್ರತ್ಯುಪಕರಣಾಯ ಪರ್ಯಣಂಸೀತ್ ||

ಶಕರಾಜನ ಹೃದಯದಲ್ಲಿ ಹುಟ್ಟಿದ ಕೋಪವೆಂಬ ಬೆಂಕಿಯು ಅಧಿಕವಾಗಿ ನಿಶ್ವಾಸವಾಗಿ ಹೊರಗೆ ಬರಲು ಕಾರಣವಾಯಿತು. ಪ್ರಾಯಃ ಬೆಂಕಿಗೆ ಅಭ್ಯುದಯವನ್ನು ಉಂಟುಮಾಡುತ್ತಿದ್ದ ಗಾಳಿಗೆ ಇಲ್ಲಿ ಬೆಂಕಿ ಪ್ರತ್ಯುಪಕಾರಿಯಾಗಿ ಪರಿಣಮಿಸಿತು.

೧೭. ಹಸ್ತೇನಾssಹತಮಹುರಂಸಲನ್ನಿಜಾಂಸಂ
ಪ್ರಭೃಶ್ಯನ್ಮಣಿಮಯ ಪಾರಿಹಾರ್ಯಮೇಷಃ |
ಅಶಂಕ್ಯ ಸ್ವಯಮನುರಾಗಿಣೀಂ ನರೇಂದ್ರೇ
ಕ್ಷೇಪೀಯಃ ಕ್ಷಿತಿಮಿವ ಶಿಕ್ಷಯನ್ಭುಜಸ್ಥಾi ||

ಶಕರಾಜನು ಪದೇ ಪದೇ ಜಾರುತ್ತಿರುವ ಭುಜಭೂಷಣಪ್ರಾಯವಾದ ಭೂಮಿಯನ್ನು ಅನುರಕ್ತನಾಗಿ ಸರಿಯಾದ ಕ್ರಮಿಸಿದ ಭದ್ರಪಡಿಸಿಕೊಳ್ಳಲು ವಲಯಗಳಿಂದ ಶೃಂಗರಿತವಾದ ಭುಜಗಳಿಂದ ಸಿದ್ಧನಾದನು. [ಸಂಪದ್ಭರಿತವಾದ ವಲಯಗಳನ್ನು ಅಲಂಕಾರವಾಗಿ ಉಳ್ಳ ಭೂಮಿಯನ್ನು]

೧೮. ಅಬದ್ಧಭ್ರುಕುಟಿರಯಂ ವಿತಾನಮಾಲಾ
ಮಾಮೃದ್ನನ್ಮೃಧಮವಗಮ್ಯ ಪಿಷ್ಟಪಾಣಿಃ |
ಹುಂಕಾರೈರುಪಜನಯಂಜನಸ್ಯಭೀತೀಂ
ವಾಹೇಂದ್ರಸ್ಸಮಗತವಾನ್ನರೇಂದ್ರರೀತ್ಯಾ ||

ಹಯಪತಿಯು ಹುಬ್ಬನ್ನು ಗಂಟಿಕ್ಕಿ, ವಿಸ್ತಾರವಾದ ಸೈನ್ಯಸಮೂಹವನ್ನು ಪುಡಿಪುಡಿಯಾಗಿಸುವ ಯುದ್ಧದ ಬಗೆಯನ್ನು ಅರಿತು, ಚಂದನಪೂಸಿದ ಕೈಯಿಂದ ಧನುಸ್ಸಿನ ಮೌರ್ವಿಯ ಠೇಂಕಾರವನ್ನು ಮಾಡಿ, ಜನರಲ್ಲಿ ಭೀತಿಯನ್ನು ಹುಟ್ಟಿಸಿ ತ್ವರಿತವಾಗಿ ಚಕ್ರವರ್ತಿಯ ಠೀವಿಯಲ್ಲಿ ಹೊರಟನು.

೧೯. ಅಭೇತ್ಯ ಪ್ರತಿಘಧೀಶ್ವರಶಶಕಾನಾಂ
ಶ್ಮಶ್ರೂಣಾಂಚಯಮುದಲುಂಚಯಚ್ಛಯೇನ |
ಪುಂಸ್ತ್ವೇ ತು ಪ್ರಭುರಯಮಾತ್ತಪೌರುಷಸ್ಸ್ಯಾತ್
ಪುಂಭಾವಾಂಕನಮಿದಮಿತ್ಯವೇತ್ಯ ನೂನಮ್ ||

ಅಚ್ಯುತರಾಯನು ಕೋಪಗೊಂಡ ಶಕಸೈನ್ಯವನ್ನು ನಾಶಪಡಿಸಿ ಭೂಗತರನ್ನಾಗಿಸಿ ಅಂದರೆ ಶಾಶ್ವತವಾಗಿ ಭೂಮಿಯ ಮೇಲೆ ಮಲಗುವಂತೆ ಮಾಡಿ ಪೌರುಷವನ್ನು ಮೆರೆಯುವ ಮೂಲಕ ಕ್ಷಾತ್ರತೇಜಸ್ಸಿನಿಂದ ಮೂರ್ತಿಗೊಂಡಂತೆ ಕಂಡು ಬಂದನು.

೨೦. ಆತನ್ವನ್ನಯಮಯಥಾತಥಂ ಯಧಾವ
ತ್ಕುರ್ವಾಣಃ ಕಿಲ ಕುರುವಿಂದ ಪಾರಿಹಾರ್ಯಮ್ |
ಸಂದಷ್ಟೋದರಪರಿಕಂಪ್ಯಮಾನಮೌಲಿ
ಸ್ಸಕ್ರೋಧಾರಭಟಿಸ್ಸಭಾಸದೋ ನ್ಯಗಾದೀತ್ ||

ಹಯಪತಿಯು ಹೇಗಾದರೂ ಮಾಡಿ ವಶಮಾಡಿಕೊಳ್ಳಲೇಬೇಕಾದ ಯುದ್ಧವನ್ನು ಕುರಿತು ಹೇಗೆ ಮಾಡಬೇಕೆಂಬ ಬಗೆಯನ್ನು ಮಣಿಮಯ ಕಂಕಣಗಳಿರುವ ಕೈಯಿಂದ, ಚೆನಾಗಿ ಒಳಸೇರಿಕೊಂಡಿರುವ ಹೊಟ್ಟೆ, ಸಕ್ರೋಧದಿಂದ ನಡುಗುತ್ತಿರುವ ತಲೆಯಿಂದ ಆರ್ಭಟಿಸುತ್ತಾ ಸೈನಿಕರನ್ನು ಉದ್ದೇಶಿಸಿ ಮಾತನಾಡಿದನು.

೨೧. ಪ್ರಾಚೀನಾನ್ ಪರಿಭವತಾ ಕೃತೋಸ್ಯ ಪಿತ್ರಾ
ಕಾಲಾನ್ಮೇ ಕಥಮಪಿ ಕಲ್ಪಿತ ಪ್ರಮೀಲಃ |
ಯಃ ಸುಪ್ತಃ ಕಿಲ ಹೃದಯೇsಭಿಯಾತಿ ವಾಹಿ
ನ್ಯಾರಾವೈಸ್ತ್ವರಿತಮಜಾಗರೀತ್ಸರೋಷಃ ||

ಮೊದಲಿನಿಂದಲೂ ಅಂದರೆ ತಂದೆ ಕಾಲದಿಂದ ಅವರಿಂದ ಸೋಲಿಸಲ್ಪಟ್ಟಿದ್ದ ನಮಗೆ ಕಲ್ಪಿತ ವಿಸ್ಮೃತಿ ಉಂಟಾಗಿ ಅದು ಸುಪ್ತವಾಗಿತ್ತಲ್ಲವೇ ವಿಸ್ತಾರವಾದ ಸೈನ್ಯದ ಶಬ್ದಗಳಿಂದ ಈ ವಿಷಯದ ರೋಷವು ಹೃದಯದಲ್ಲಿ ಜಾಗೃತವಾಯಿತು.

೨೨. ಗಿರ್ವಾಣಾವಸಥಗಿರೇರ್ಗರೀಯಸಸ್ಸ್ಯಾ
ಚ್ಚಾಂಚಲ್ಯಂ ಯಂದಿ ಸಹಕೃತ್ವನಾ ಕೃಶಾನೋಃ |
ಸಂಕ್ಷೋಭಶಶಕಧರಣೀಶಿತುಸ್ತದಾ
ಸ್ಯಾತ್ಸಂಗ್ರಾಮೇ ಚತುರಿಮಶಾಲಿನಾ ಪರೇಣ ||

ದೇವತೆಗಳ ವಾಸಸ್ಥಾನವೆನಿಸಿದ ಹಿಮಾಲಯ ಪರ್ವತದ ಮೇಲಿರುವ ಸಸ್ಯಗಳ ಚಾಂಚಲ್ಯವಾದ ಒಂದೊಮ್ಮೆ ವಾಯುವಿನ ಸಹಯೋಗದೊಂದಿಗೆ ಉಂಟಾದ ಬೆಂಕಿಯಂತೆ ಕ್ಷೋಭೆಗೊಂಡು ಕೃಶವಾದರೂ ಶತ್ರುಸೈನ್ಯದೊಡನೆ ಸಂಗ್ರಾಮದಲ್ಲಿ ಚಾತುರ್ಯದಿಂದ ಹೋರಾಡಿದನು.

೨೩. ಇತ್ಯುಕ್ತಾ ಪರಿಷದಮೀಶಿತಾ ಹಯಾನಾಂ ರಾ
ಯಚ್ಛೂರಾಹ್ವಯಪುರರಕ್ಷಣಾಯ ಯೋಧಾನ್ |
ಪ್ರಸ್ಥಾಪ್ಯಾಹವಕೃತಿನಃ ಪುರೂಢರಾಗಾನ್
ಸಂಜಜ್ಞೇ ಸ್ವಯಮಪಿ ಸಾವಧಾನ ಚೇತಾಃ ||

ಹೀಗೆಂದು ನುಡಿದು ಸೈನಾಧಿಪತಿಯಾದ ಹಯಪತಿಯು ರಾಯಚೂರು ನಗರದ ರಕ್ಷಣೆಗಾಗಿ ಯೋಧರನ್ನು ಹೊರಡಿಸಿ ಯುದ್ಧಮಾಡುವ ಬಗೆಯನ್ನು ಆಸಕ್ತಿಯಿಂದ ತಿಳಿಸಿ ತಾನೂ ಕೂಡ ಸಾವಧಾನ ಚಿತ್ತದಿಂದ

೨೪. ಸಕ್ಷ್ವೇಳಾರಭಟೀಚಮೂಭಟೋ ನಗರ್ಯಾಃ
ನಿರ್ಯಾತಃ ಪಟಹನಿನಾದ ನಿಹ್ನುತಾಶಾಃ |
ದುರ್ವಾರಾ ಯವನ ಬಲಸ್ಯ ಧೂಲಿರಗ್ರೇ
ನೇತ್ರಾಣಂ ನಿಪುಣಸುಹಾರಿಣೀ ಚಚಾಲ ||

ಭೇರಿಯ ಶಬ್ದದಿಂದ ತುಂಬಿದ ದಿಕ್ಕುಗಳು, ತಡೆಯಲಸಾಧ್ಯವಾದ ಸೈನ್ಯದ ಚಲನೆಯಿಂದುಂಟಾದ ಧೂಳಿಗಿಂತಲೂ ಮುಂದೆ, ರಣೋತ್ಸಾಹದಿಂದೊಡಗೂಡಿ ನೆಗೆಯುತ್ತ, ಆರ್ಭಟಿಸುತ್ತ ನಗರದಿಂದ ಹೊರಹೊರಟಿರುವ ಸೈನ್ಯ ಸಮೂಹದ ಕಣ್ಣುಗಳು ನುರಿತ ಬೇಟೆಗಾರರ ಗುರಿಯಂತೆ ಮುನ್ನಡೆದವು.

೨೫. ಆಯಾಂತೀ ಸ್ವಯಮವನೀವ ಯಾವನೀಯಂ
ಮರ್ತ್ಯಾನಾಂ ಪತಿಮಾಭಿ (ಮತಿ) ಮಾಂಸಲಾನುರಾಗಾ |
ಸಂರಂಭಾತ್ಸಹ ವಲತೋ ಬಲೈಶಶಕೇಂ
ದೋರಾಯಾಸೀದಭಿಮುಖಮಂಜಸಾ ಸಮೀರಃ ||

ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತ ಬರುತ್ತಿರುವ, ತಮ್ಮ ದೊರೆಯಲ್ಲಿ ಅತಿಯಾದ ಅನುರಾಗವಿಟ್ಟಿರುವ ಯವನ ಸೈನಿಕರು ಅತಿ ಉತ್ಸಾಹದಿಂದ ಹೊರಟಿರುವಾಗ ಅದೇ ಸೈನ್ಯದೊಂದಿಗೆ ಶಕರಾಜನು ಗಾಳಿಗೆ ಅಭಿಮುಖವಾಗಿ ಹೊರಟನು.

೨೬. ಅಭ್ಯೇತುಂ ಜಗಮಿಷುಮೈಷಯ್ಯೈಕ್ಯತಃ ಪ್ರರೂಢಾ
ದೌತ್ಸುಕ್ಯಾದಸುಪವನಂಕಿಲಾದಸೀಯಮ್ |
ಪಂಥಾನಂ ಕಿಮಪಿ ವಿಲಂಘ್ಯ ಪಾರಸೀಕ
ಕ್ಷೋಣೀಶಃ ಕೃತವಸತಿಃ ಕ್ವಚಿತ್ಪ್ರದೇಶೇ ||

ಶತ್ರುಗಳನ್ನು ಭೇದಿಸಲು ಇಚ್ಛಿಸಿ ಎಲ್ಲರೊಂದಿಗೆ ಸೇರಿ, ಅತ್ಯಂತ ಉತ್ಸಾಹದಿಂದ ಪಂಚಪ್ರಾಣಗಳು ಗಾಳಿಯಲ್ಲಿ ಲೀನವಾದಂತೆ, ಪಾರಸೀಕರ ಅಧಿಪತಿಯು ದಾರಿಯನ್ನು ಕ್ರಮಿಸಿ ಎಲ್ಲಿಯೋ ಒಂದು ಕಡೆ ನೆಲೆ ನಿಂತನು.