. ಸತೋರಣಾಲಿಂ ಶನಕೈಃ ಪ್ರತೋಲಿಂ
ವಿಶಾಮಧೀಶೋs ವಿಗಾಹಮಾನೇ |
ಆಲೋಕನಾಯಾsಸ್ಯ ನಿರಸ್ಯಕಾರ್ಯಂ
ಪರ್ಯಾಕುಲಃ ಪೌರವಧೂಜನೋsಭೂತ್ ||

ತಳಿರುತೋರಣಗಳಿಂದ ಸಿದ್ಧಗೊಂಡ ರಾಜಮಾರ್ಗವನ್ನು ನಿಧಾನವಾಗಿ ರಾಜನು ಪ್ರವೇಶಿಸುವದನ್ನು ನೋಡುವದಕ್ಕಾಗಿ ಕೆಲಸವನ್ನು ಬಿಟ್ಟು ಪುರದ ಕುಲಸ್ತ್ರೀಯರು ನೆರೆದಿದ್ದರು.

. ದಿದೃಕ್ಷಯಾsಮುಷ್ಯ ಮೃಗೇಕ್ಷಣಾಭಿಃ
ಕ್ಷಿಪ್ತಾರರೀಬಂಧ ಲಸದ್ಗವಾಕ್ಷಾ |
ಪುರೀಚ ತದ್ದೀಕ್ಷಣಪುಂಖಿತಾಶಾ
ವಿಸ್ತಾರಿತಾಕ್ಷೀ ವಿಲಲಾಸ ನೂನಮ್ ||

ಈ ಮನಮೋಹಕ ನೋಟವನ್ನು ನೋಡುವದಕ್ಕಾಗಿ ಮೃಗನಯನೆಯರು, ವಿಸ್ತಾರವಾಗಿ ತೆರೆದಿರುವ ಕಿಟಕಿಗಳಿಂದ ಪುರದೊಳಗೆ ದೃಷ್ಟಿಯನ್ನು ಹಾಯಿಸಿ ಆ ನೋಟದಿಂದ ಆನಂದಗೊಂಡು ಕಣ್ಣುಗಳನ್ನು ಹಿಗ್ಗಿಸಿ ನಿಜವಾಗಿಯೂ ಸಂತಸಗೊಂಡರು.

. ವತಂಸಯಂತೀ ವಸುಧಾವಲಾರೆ
ಸ್ಸಮಾಗಮೋಕ್ತಿಸ್ತಬಕಂ ಸರಾಗಮ್ |
ಪರಾ ತ್ವರಾಯತ್ತತಯಾ ಪ್ರಯಾಂತೀ
ನವೋತ್ಪಲಂ ನಾರ್ಪಯತಿ ಸ್ಮಕಣೇ ||

ಒಬ್ಬಳ ಶಿರೋಭೂಷಣವು ಭೂಮಿ ಮತ್ತು ನೀರಿನ ಸಮಾಗಮದಂತೆ ಹೊಂಬಣ್ಣದ ಗುಚ್ಛದಂತೆ ತೋರುತ್ತಿತ್ತು. ಬೇರೊಬ್ಬಳು ಬೇಗನೆ ಹೊರಡುವ ಕಾರಣದಿಂದಾಗಿ ಕಿವಿಯಲ್ಲಿ ಹೊಸದಾದ ಉತ್ಪಲವನ್ನು ಧರಿಸಲಿಲ್ಲ.

. ಹಾರೈಸ್ತಥೋಚ್ಚೈಃ ಸ್ತನಭೂಭೃದಹೈಂ
ರಲಕೃತೋ ಭೂಮಿಭೃತೋ ನಿತಂಬಃ |
ಅರುಂಧ ಯಾಂತೀಂ ಬತ ಮಧ್ಯಮಸ್ಯಾ
ಪ್ಯಧಸ್ತನೋವೇತಿ ಕಿಮರ್ಹಣಾನಿ ||

ಮೇಲೆ ಧರಿಸಿರುವ ಹಾರಗಳಿಂದ ವಕ್ಷಸ್ಥಳವು ಅಲಂಕಾರಗೊಂಡರೆ ಇದಕ್ಕೆ ಪೂರಕವಾಗಿ ನಿತಂಬವು ಶ್ರೇಷ್ಠ ಅಲಂಕಾರವನ್ನೊದಗಿಸಿತು. ಅದಕ್ಕೆ ಪ್ರತಿರೋಧ ತೋರದಂತೆ ಮಧ್ಯಮ ಪ್ರದೇಶವು (ಕಟಿ ಪ್ರದೇಶವು) ಈ ಅಲಂಕಾರಕ್ಕೆ ಅರ್ಹವಾಯಿತು.

. ಅಭೋಗಿನಂ ಮೇಖಲಯಾ ಕುಚಾದ್ರಿಂ
ನಕ್ಷತ್ರದಾಮ್ನಾsಪಿ ನಭೋವಿಲಗ್ನಮ್ |
ಸಂಭಾವಯಂತ್ಯಾಸ್ತ್ವರಯಾ ಪರಸ್ಯಾಃ
ಕ್ರಮಃ ಕಿಲಾಸೀದಯಮಕ್ರಮೋsಪಿ ||

ಭೋಗಾಸಕ್ತರಿಗೆ ಒಡ್ಯಾಣ ಮೊದಲಾದವುಗಳೇ ತಿಳಿಯುವಂತೆ, ನಕ್ಷತ್ರಗಳ ಬಗೆಗೆ ಅಧ್ಯಯನ ಮಾಡಿದರೂ, ಆಕಾಶದಲ್ಲಿ ಎಲ್ಲ ಲಗ್ನಗಳು ಸೇರಿದಂತೆ ತೋರುತ್ತವೆ. ತ್ವರೆಯಿಂದ ನೋಡುವಾಗ ಇರುವದಕ್ಕಿಂತ ಭಿನ್ನವಾಗಿ ಗೋಚರಿಸುವದು ಕ್ರಮವಲ್ಲವೇ

. ಮಂಜೀರಮನ್ಯಾ ಮಹಿಲಾಕರಸ್ಥ
ಮಂಘ್ರ್ಯೋರದತ್ತೈವ ರಯಾದಯಾಸೀತ್ |
ತಯೋ ಪರೀಕ್ಷ್ಯಾತಿಜವಂ ಸದೇಯೋ
ಜೇತುಃ ಪುರಸ್ತಾದಿತಿ ಜಾನತೀವ ||

ಮಹಿಳೆಯರ ಪಾದಗಳಿಂದ ಹೊರಟ ನೂಪುರ ಶಬ್ದ, ಕೈಯಲ್ಲಿರುವ ಬಳೆಗಳ ಶಬ್ದ ಇವೆರಡರಲ್ಲಿ ಯಾವುದು ವೇಗವಾದುದು ಎಂಬುದನ್ನು ಹಾಗೂ ಯಾವುದು ಅತ್ಯಂತ ಶ್ರೇಷ್ಠವಾದುದು, ಅಂದರೆ ಯಾವ ಶಬ್ದ ಯಾವುದನ್ನು ಗೆಲ್ಲುತ್ತದೆ ಎಂಬುದನ್ನು ಶಬ್ದವೇ ನಿರ್ಧರಿಸುವಂತಾಗಿತ್ತು.

. ನರೇಂದ್ರದೀಕ್ಷಾತ್ವರಯಾ ಮಾರ್ಗ
ಮಾಲೋಕಯೇದಕ್ಷಿ ಮಮೇತಿ ಕಾಚಿತ್ |
ಅಂಘ್ರಯೋಃಭ್ರಮಾದಂಜನಮಂಚಿತಾಕ್ಷಿ
ಪಾದಧ್ರುಮ ದೃಕ್ದ್ವಿತಯಂ ವಿಹಾಯ ||

ರಾಜನನ್ನು ಕೂಡಲೇ ನೋಡಲಾಗದಿದ್ದರೂ, ಮಾರ್ಗನಿರೀಕ್ಷೆಯಿಂದಾಗಿ ಕಾದು ಕಾದು, ನನ್ನ ಕಣ್ಣುಗಳು ಎಲ್ಲಿಯೋ, ಯಾವುದೋ ಓಡಾಡುವ ಶಬ್ದವಾದರೂ ಅಂಜನ ಹಾಕಿದ ಕಣ್ಣುಗಳಂತೆ ಎರಡೆರಡು ಬಾರಿ ನೋಡುವುದನ್ನು ಬಿಡಲಿಲ್ಲ.

. ವಿಹಾಯ ಡೋಲಾವಿಹೃತೀಂ ಪ್ರಯಾತಾ
ಕಾಚಿತ್ಕ್ಷಮಾಯಾಃ ಕಮಿತಾರಮೇತ್ಯ |
ಕಿಂ ಮಾಧವಃ ಕಿಂ ಮದನೋsಯಮಿತ್ಥಂ
ಸಮಾಶ್ರಿತಾ ಸಂಶಯರೂಪಡೋಲಾಮ್ ||

ಸ್ವರ್ಗದಲ್ಲಿ ಉಯ್ಯಾಲೆಯಾಡುತ್ತ ತೇಲುತ್ತ ಹೊರಟಿರುವ ಇವನನ್ನು ಕಾಮಿಯೋ, ಮಾಧವನೋ, ಮದನನೋ ಎಂಬ ಸಂಶಯ ಹೊಂದಿದ ಕೆಲವರು ಭೂಮಿಯಲ್ಲಿಯೇ ಸಂಶಯದ ಉಯ್ಯಾಲೆಯಲೆಯಲ್ಲಿಯೇ ತೇಲುತ್ತಿದ್ದರು.

. ಮಹೀಪತೇರಂತಿಕಮಾಸಸಾದ
ಮನೋಭುವಃ ಕಾಪ್ಯಸಮಾಪ್ಯ ಪೂಜಾಮ್ |
ನಿಜಾವಮಾನಾನ್ನಿಯತಂ ತಸ್ಯಾಂ
ನಿರೂಢಕೋಪೋ ನಿಚಖಾನ ರೋಪಾನ್ ||

ಮನ್ಮಥನ ಪೂಜೆ ಮುಗಿಸಿದ ಸುಂದರಿಯೋರ್ವಳು/ಕಾಮಪೀಡಿತಳಾದ ಯುವತಿಯೋರ್ವಳು ರಾಜನ ಹತ್ತಿರ ಹೋದರೂ ತನ್ನ ಅವಮಾನವನ್ನು ನಿಯಂತ್ರಿಸಲೋಸುಗ ರಾಜನು ಅವಳಲ್ಲಿ ಹೆಚ್ಚಾದ ಕೋಪದಿಂದ ಸಮೂಹದಲ್ಲಿ ಹಾಗೆ ಹೊರಟನು.

೧೦. ವಿಲಾಸಹಂಸೀವಿನಿಯುಕ್ತಶೇಷಂ
ಮೃಷೋದರಿ ಬಾಲಮೃಣಾಲಖಂಡಮ್ |
ಧೃತ್ವಾಗಮತದ್ವಪುಷೋ ವಿಶೇಷಾ
ನ್ವಿಲೇಖಿತಂ ವರ್ಣಶಿಲಾಮಿವಾsನ್ಯಾ ||

ಬೇರೊಬ್ಬಳು ವಿಲಾಸಹಂಸದ ರೂಪದಂತಿರುವ, ಸಹನಾಮೂರ್ತಿಯಾದ, ಎಳೇ ಮಣಾಲದೆಸಳನ್ನು ಧರಿಸಿರುವ, ದೇಹದ ವಿಶೇಷಗಳನ್ನು ಬರೆಯುವ ವರ್ಣಶಿಲೆಯಂತೆ ಇದ್ದಳು.

೧೧. ವಿಲಂಬಸೇ ಕಿಂ ವಿಭುರಾಗತೋsಭೂ
ದಿತೀರಿತಾ ಮೀನದೃಗೇಕಯಾsನ್ಯಾ |
ತನ್ನಿಶ್ಚಯಜ್ಞಾನಕೃತೇ ಕಿಮಗ್ನೇ
ಪ್ರಸ್ಥಾಪ್ಯ ಚೇತಸ್ತದನುಪ್ರಯಾತಾ ||

ಮೀನಿನಂತೆ ಕಣ್ಣುಳ್ಳ ಇನ್ನೋರ್ವಳು ಅನುರಾಗದಿಂದ ಕೂಡಿದ್ದರೂ, ರಾಜನ ಬರುವಿಕೆ ವಿಲಂಬವಾಯಿತಲ್ಲವೆ ಈ ಕಾರಣದಿಂದ ಆಕೆ ನಿಶ್ಚಯಮಾಡಿಕೊಂಡು ಅಲ್ಲಿಂದ ಹೊರಟು ಹೋದಳು.

೧೨. ಈಷತ್ಸಹಸ್ವ ತ್ವರಿತೋಸ್ಮಿಸೋs
ಮಿತ್ಯರ್ದ್ಯಮಾನಾssಭರಣಾರಮೇಣ |
ಪ್ರಾಯೇಣ ಮಂಜೀರಸಮೇತಮೇಕಂ
ಪದಂ ಪದಂ ಪಾರ್ಥಯತಾsಪರಸ್ಯಾಃ ||

ಇನ್ನೋರ್ವಳು ತಾನೇ ಶ್ರೇಷ್ಠವೆಂಬ ಭಾವದಿಂದ ಆಭರಣಗಳು ಮಾಡುತ್ತಿದ್ದ ಶಬ್ದವನ್ನು ತಡೆಗಟ್ಟಿ ತಾಳ್ಮೆಯಿಂದ ನೂಪುರ ಶಬ್ದದ ಜೊತೆಗೆ ಒಂದೊಂದೆ ಹೆಜ್ಜೆ ಇಟ್ಟು ಮುಂದುವರೆಯುತ್ತಿದ್ದಳು.

೧೩. ಪ್ರಸೃತ್ಯ ನೀರಾಜನಪಾತ್ರಮಗ್ರೇ
ಪರಾಗತಾ ಸ್ನೇಹದಶಾಪ್ರದೀಪ್ತೈಃ |
ಸ್ಮರಾಗ್ನಿದೀಪೈಃ ಸ್ಫುರತಾssತ್ಮನೈವ
ನೀರಾಜನಾಂ ನಿರ್ವಹತಿ ಸ್ಮರಾಜ್ಞಃ ||

ಬೆಳಗುವ ನೀರಾಂಜನ ದೀಪದೆದುರು ರಾಜನು ಸ್ನೇಹದಿಂದ ಪ್ರಜ್ವಲಿಸುತ್ತಿದ್ದನು. ಮನ್ಮಥನ ಬೇಗೆಯಂತೆ ಜ್ವಲಿಸುತ್ತ, ತನ್ನ ಆತ್ಮದ ಸ್ಫುರಣೆಯಿಂದಲೇ ಸರ್ವತ್ರ ವ್ಯಾಪಿಸಿ ನೀರಾಂಜನ ದೀಪವನ್ನು ಉರಿಸುತ್ತಿದ್ದನು.

೧೪. ನಿಶಾಮ್ಯ ತಂ ದುರಿತನಾಮ್ಯಮಂತ
ರ್ನಿಖಾತಕಂದರ್ಪನಿಶಾತಬಾಣಾ |
ಆಮೀಲಯನ್ಮೀನ್ದೃಗಾಕ್ಷಿ ಕಾಚಿದ
ನ್ಯಂ ಪಶ್ಯಾಮ್ಯನು ನೇತಿ ನೂನಮ್ ||

ಇನ್ನೋರ್ವಳು ಮನ್ಮಥನ ಬಾಣಗಳಿಂದ ಘಾಸಿಗೊಂಡು ದಣಿವಿನಿಂದ ಬೇರೆ ಯಾರೂ ನೋಡಲು ಸಾಧ್ಯವಾಗದಂತೆ ನಿಜವಾಗಿ ಕಣ್ಣುಗಳನ್ನು ಮುಚ್ಚಿ ಒಳಗೆ ಕಷ್ಟಪಡುತ್ತಿದ್ದಳು.

೧೫. ವಿಮುಂಚ ಬಾಹೂ ಪುರೋ ವಿದೇಹಿ
ಕುಚೋಪಗೂಹಂ ಕುಟಿಲಾ ಹಿ ಸಖ್ಯಃ |
ಇತೀವ ಮೌಗ್ಧ್ಯಾದಿತರಾ ಯಯಾಚೇ
ಸನಿಂಸಿತಂ ಸ್ವೇವಿನಿ ತತ್ತದಂಗೇ ||

ಇನ್ನೋರ್ವಳಿಗೆ ಬಿಡಲ್ಪಟ್ಟ ತೋಳುಗಳು ವಕ್ಷಸ್ಥಳವನ್ನು ಸ್ನೇಹಕ್ಕಾಗಿಯೋ ಎಂಬಂತೆ ಆಶ್ರಯಿಸಿದ್ದವು. ಈ ರೀತಿಯಾದ ಮುಗ್ಧತೆಯಿಂದ ದೇಹವು ಬೇರೆಯದನ್ನು ಬೇಡಿತು. ಹಾಗಾಗಿ ಅವಳ ದೇಹವೆಲ್ಲ ಬೆವರೊಡೆಯಿತು.

೧೬. ಉದಂಚಿತಂ ನ್ಯಂಚಿತಮುತ್ತರಂಗ
ಶ್ವಾಸಾದುರೋಜದ್ವಯಮಾಶು ಯಾಂತ್ಯಾಃ |
ಉದಸ್ಯ ಮಧ್ಯೇನ ಪುನರ್ಯಥಾವ
ನ್ನೀತಂ ಕಿಮೇತದ್ಭರನಿಜಸ್ಸಹೇನ ||

ಕೆಳಗೆ ಹೋಗುತ್ತಿರುವ ಶ್ವಾಸವನ್ನು ಮೇಲಕ್ಕೆ ಎತ್ತಲು ಮತ್ತು ಮಧ್ಯಕ್ಕೆ ಹೋಗುತ್ತಿರುವ ಶ್ವಾಸವನ್ನು ಯಥಾವತ್ತಾಗಿ ತರಲು ಏನು ಮಾಡಬೇಕೆಂದು ಒಬ್ಬಳು ಯೋಚಿಸುತ್ತಿದ್ದಳು.

೧೭. ವಿಸ್ಮೃತ್ಯ ಲಾಕ್ಷಾಂಜನಗಂಧಸಾರ
ವಿಶೇಷಮಂಗೇಷುವಿಧಾತುಮೇಕಾ |
ರಯಾದಯಾಸೀಲ್ಲಿಖಿತುಂ ನೃಪೇಂದುಂ
ರಾಗಾದಿಯಂ ರಕ್ಷಿತಸಾಧನೇವ ||

ಮತ್ತೊಬ್ಬಳು ರಾಜನನ್ನು ಸೆಳೆಯುವ ಪ್ರಮುಖ ಸಾಧನವಾಗಿರುವ ಲೇಪನ ದ್ರವ್ಯವನ್ನು ಲೇಪಿಸಲು ಮರೆತಿದ್ದಳು. ಆ ಕಾರಣಕ್ಕಾಗಿ ದ್ರವ್ಯವನ್ನು ಲಗುಬಗೆಯಿಂದ ಲೇಪಿಸಲು ಉದ್ಯುಕ್ತಳಾದಳು

೧೮. ಪರಾ ಕುಚಾಗ್ರಾತ್ಪತಿತಾಸು ಹಾರ
ಮುಕ್ತಾಸು ಸಂವೀಕ್ಷ್ಯಮುಹುಃ ಸ್ಖಲಂತಿಮ್ |
ಪ್ರಧಾವಮಾನಾ ಬಹುಮನ್ಯತೇ ಸ್ಮ
ವಿಭೂಷಣೇ ವಿಸ್ಮೃತಿಮೇವ ಕಾಚಿತ್ ||

ಇನ್ನೋರ್ವಳು ವಕ್ಷಸ್ಥಳದಲ್ಲಿ ಇಳಿಬಿದ್ದಿರುವ ಮುತ್ತಿನ ಹಾರಗಳನ್ನು ನೋಡಿ ಪದೇ ಪದೇ ಜಾರುತ್ತಿರವ ಆಭರಣಗಳಲ್ಲಿ ಪ್ರಧಾನವಾದುದನ್ನು ಮರೆತು ಯಾವುದನ್ನೋ ಬಹುವಾಗಿ ನೆಚ್ಚಿಕೊಂಡಿದ್ದಳು.

೧೯. ಅಸೀದತಿಕ್ಷ್ಮಾಭುಜಿ ಕಾಚಿದಂತ
ರತುಷ್ಯದಾಸೇಚನಕಾಭಿರೂಪ್ಯೇ |
ತಾವದನ್ಯಾ ಮುಮುದೇ ನತಾಂಗೀ
ತದ್ವಿಪ್ರಯೋಗಂ ಹೃದಿ ತರ್ಕಯಂತೀ ||

ಕೆಲವು ಸಮಯದ ನಂತರ ಸಂತೋಷದಾಯಕನಾದ, ಅಥವಾ ಸಂತೋಷದ ಪ್ರತಿರೂಪವೇ ಆಗಿರುವ ರಾಜನನ್ನು ಕುರಿತು ಬಗ್ಗಿದದೇಹವಿರುವ ಹೆಂಗಸೋರ್ವಳು ಕೂಡ ಹೃದಯಲ್ಲಿ ತನಗೊದಗಿದ ವಿಯೋಗವನ್ನು ನೆನೆಯುತ್ತಿದ್ದಳು.

೨೦. ವಿಲೋಲಹಾರಾವಲಿರೋಧಹೇತೋಃ
ಕರಂ ನಿಧಾಯೋರಸಿ ಕಾಪ್ಯಯಾಸೀತ್ |
ನಿರುಂಧತೀ ಸ್ವಾಂತಮಿವಾಗ್ರತಸ್ಸ್ವಂ
ವಿಹಾಯ ಯಾತುಂ ವಿಹಿತಾಭಿಲಾಷಾ ||

ಯಾರೋ ಒಬ್ಬಳು ಅಲುಗಾಡುತ್ತಿರುವ ಹಾರಗಳನ್ನು ಪ್ರತಿಬಿಂಬಿಸಿ ಇಡಲು ಸಾಧ್ಯವಾಗದೇ ತನ್ನಷ್ಟಕ್ಕೇ ತಾನೇ ಸಮಾಧಾನಪಡಲೂ ಸಾಧ್ಯವಾಗದೇ ಹೊರಡಲನುವಾದಳು.

೨೧. ಆರಾಧಿತೋದ್ಯ ಪ್ರತಿಮಾಮನೋಭೂ
ರರ್ಜಾವಿಶೇಷಾರ್ಪಿತಜೀವನೋ ಮೇ |
ಪೂಜಾಂ ಗತಾಯಾಃ ಕಿಮು ಧಾತುಮಿಷ್ಟ
ಮಾಯಾತ ಇತ್ಯೇಕ್ಷ ಕಯಾಪ್ಯಧಾಯಿ ಪ್ಯತರ್ಕಿ ||

ಮೊದಲೇ ಆರಾಧಿಸಿದ ಮನೋಪ್ರತಿಮೆಯನ್ನು ಅರ್ಚಿಸಿ ತನ್ನ ಜೀವನವನ್ನು ವಿಶೇಷವಾಗಿ ಅರ್ಪಿಸಲು ಸಿದ್ಧಳಿರುವ ಮತ್ತೊಬ್ಬಳು ತನ್ನ ಜೀವನವನ್ನು ಅರ್ಪಿಸಲು ತನಗೇನು ಇಷ್ಟವಿಲ್ಲವೇನು ಬಂದರೆ ಬರಲಿ ಎಂದು ತರ್ಕ ಮಾಡಿ ಪೂಜೆಗೆ ಹೊರಟಳು.

೨೨. ಸಾಲಕ್ತಕಾಯಾಂ ಪದವೀಥಿಕಾಯಾಂ
ಸಂಚಾರ್ಯಸಂಚಾರ್ಯ ಸರೋಜಮೋಹಾತ್ |
ಅನುದ್ರುತಾ ಕಾಮಾಪಿ() ಹಂಸಿಕಾsಸ್ಯಾ
ನ್ಯವರ್ತಿ ನೃತ್ಯತ್ಕಚನೀರದೇನ ||

ಹಂಸಿಕೆಯ ಸಖಿಯೋರ್ವಳು ಅಲತಿಗೆ ರಸವನ್ನು ಲೇಪಿಸಿಕೊಂಡು, ಸೇವಕಿಯರು ಎಷ್ಟೆಲ್ಲ ಹುಡುಕಿದರೂ ಸಿಗದಿರುವ ಕಮಲದ ಆಸೆಯಿಂದ ಕಪ್ಪು ಮೋಡದಂತಿರುವ ಕೂದಲುಗಳನ್ನು ಹರಡಿ ನರ್ತಿಸಿದಳು.

೨೩. ಗತಿತ್ಪರಾ ಕೇಶಗಲತ್ಪ್ರಸೂನ
ಮವಾಪದಸ್ಯಾಂತಿಕಮಾಯತಾಕ್ಷೀ |
ಪ್ರಯುಜ್ಯ ಬಾಣಾನ್ ಪರಿತಃ ಪ್ರಸೂನ
ಮಾಲಾಮಯೀಂ ತಾಂ ಮದನೋ ವಿತೇನೇ ||

ಕುತ್ತಿಗೆಯವರೆಗೂ ದಟ್ಟಕೇಶರಾಶಿಯಿಂದ, ವಿಸ್ತಾರವಾದ ಕಣ್ಣುಗಳಿಂದ ಕೂಡಿರುವ ಆಕೆಯ ಕಡೆಗೆ ಮದನನು ಬಾಣಗಳನ್ನು ಮಾಲೆಯಂತೆ ಹೆಣೆದು ಪ್ರಯೋಗಿಸಿದರೂ ಕೂಡಾ ಅವಳನ್ನು ಆಕರ್ಷಿಸಲಾಗಲಿಲ್ಲ.

೨೪. ಅಸಂನಿಪತ್ಯಾಯತಲೋಚನಾನಾ
ಮಾರೂಢಹರ್ಮ್ಯಾಗ್ರಭುವಾಮಪಾಂಗಃ |
ವಿದೂರ ಪಾತಾದಿವ ನಾಕ್ಷಮಂತ
ವ್ಯಾವರ್ತಿತುಂ ಹಂತ ವಿಮೋಹವಂತಃ ||

ಕಣ್ಣುಗಳ ದೃಷ್ಟಿ ಕೆಳಗಿಟ್ಟು, ಅರಮನೆಗಳ ಉಪ್ಪರಿಗೆಯ ಮೇಲೆ ನಿಂತು ಕಡೆಗಣ್ಣ ನೋಟದಿಂದ ದೂರದಿಂದಲೇ ವ್ಯಾಪ್ತವಾದ, ಸೀಮಾತೀತವಾದ ಸಡಗರ ಮೋಹಿಗಳಲ್ಲಿ ತುಂಬಿತ್ತು.

೨೫. ವಿಭೋಃ ಪರಸ್ಯಾಶ್ಚ ವಿಲಾಸವತ್ಯಾ
ಮುಖಾಬ್ಜಸೌರಭ್ಯವಶಂವದಾಶಾಃ |
ಗತಾಗತಾನಿ ಗ್ರಥಯಾಂಬಭೂವು
ರ್ದೂತಾ ಇವಾಗ್ರೇ ಮುಖರಾ ದ್ವಿರೇಫಾಃ ||

ಸುಂದರಿಯೋರ್ವಳಿಗೆ ವಿಧಿಯ ವಿಲಾಸದಿಂದ, ಮುಖಕಮಲದ ಸೌರಭದಿಂದ ಆಕರ್ಷಿತವಾದ ಭೃಂಗಗಳು ಮುಖದ ಮೇಲಿರುವದರಿಂದ, ದೂತಿಯರೇ ಹಾಗೆ ಹೆಣೆದಿರುವರೋ ಎಂಬಂತೆ ಕಾಣುತ್ತಿತ್ತು.

೨೬. ನೃಪಾಲಕೋತ್ತಂಸನಿರೂಢಮಂತ
ರಾಪೂರ್ಯನಿರ್ಯಾತಮಿವಾನುರಾಗಾಮ್ |
ಪ್ರಧಾವಿನೀ ವಕ್ಷಸಿ ಕಾಪಿಹಾರ
ಪ್ರಹಾರತಃ ಪಾಟಲಿಮಾನಮೂಹೇ ||

ನೃಪಶ್ರೇಷ್ಠನೇ ಅಂತರಂಗದ ತುಂಬೆಲ್ಲ ತುಂಬಿಕೊಂಡಿರುವ ಕಾರಣದಿಂದ ಅನುರಾಗವನ್ನು ಪ್ರವಹಿಸುವ ಒಬ್ಬಳ ಎದೆಯಲ್ಲಿ ಹಾರಗಳ ಹೊಡೆತದಿಂದ ನಸುಗೆಂಪು ಬಣ್ಣವನ್ನು ಊಹಿಸುತ್ತೇನೆ.

೨೭. ಹಸ್ತೇ ದಧಾನಾ ನಿಜಕೇಶಹಸ್ತಂ
ವಿಸ್ರಸ್ತಮಾಲ್ಯಂ ವಿಪುಲೇಕ್ಷಣಾsನ್ಯಾ |
ನಖಶ್ರೀಯಾ ನಾಟಿತಕೈತವಾಂತ
ರ್ದಲಾವರೂಢಾ ದ್ರದತಿ ಸ್ಮಕಾಚಿತ್ ||

ಕೈಯಲ್ಲಿ ಹಿಡಿದಿರುವ ತನ್ನ ಕೂದಲನ್ನು ಹರಡಿಕೊಳ್ಳುತ್ತಾ, ಅರಳುಗಣ್ಣಿನಿಂದ ನೋಡುವ ಇನ್ನೋರ್ವಳು ತನ್ನ ಉಗುರುಗಳಿಂದ ಸರಿಪಡಿಸಿಕೊಳ್ಳುವ ಅಭಿನಯ ನೆಪದಿಂದ ಸೈನ್ಯಾರೂಢನಾಗಿ ಬರುವ ರಾಜನಲ್ಲಿ ಲೀನವಾದಳು.

೨೮. ನಿವೇದಯಂತೀವ ನಿಜಾಮವಸ್ಥಾ
ಮಪಾಂಗಭೇದೈರಪರಾಕೃಶಾಂಗೀ |
ನಿಶಾಮಯಾಮಾಸ ನೃಪಂ ಪ್ರಶಾಂತಂ
ನಿರ್ಭರ್ತ್ಸಯಂತೀವ ನಿರುಂಧತೀವ ||

ಕಡೆಗಣ್ಣಿನ ಭಿನ್ನವಾದ ನೋಟದಿಂದ ತನ್ನ ಅವಸ್ಥೆಯನ್ನು ನಿವೇದಿಸುವ ಆದರೆ ಹೆದರಿಕೆಯಿಂದ ಒಳಗೆ ಅಡಗಿಸಿಡುವ ಭಾವಗಳಿಂದ ಕೃಶಾಂಗಿಯೋರ್ವಳು ಶಾಂತನಾದ ರಾಜನನ್ನು ನೋಡಿದಳು.

೨೯. ಪರ್ಯಸ್ತಹಾರಸ್ತಬಕಂ ಪ್ರಯಾಂತ್ಯಾ
ಸ್ತನಾವಭೂತಾಂ ತರಲೋತ್ತರೀಯೌ |
ಅಂತಃಪುರಸ್ಯಾssವಿಶತೋsವನೀಂದೋ
ಪುರಃ ಪ್ರಣತಾವಿವ ಪೂರ್ಣಕುಂಭೌ ||

ಓಡಾಡುವಾಗ ಚೆಲ್ಲಾಡಿದಂತಿರುವ (ಹರಡಿದಂತಿರುವ) ಹಾರಗಳ ಗುಚ್ಛಗಳಿಂದ, ಅಲುಗಾಡುತ್ತಿರುವ (ಜಾರುತ್ತಿರುವ) ಉತ್ತರೀಯದಿಂದ ವಕ್ಷಸ್ಥಲವು ಅಂತಃಪುರವನ್ನು ಪ್ರವೇಶಿಸುವ ರಾಜನಿಗೆ ಪೂರ್ಣಕುಂಭದಿಂದ ಸ್ವಾಗತಿಸುವ ನೆಪವಾಗಿ ನಮಿಸುವಂತಿತ್ತು.

೩೦. ಪತ್ಯುಃ ಕ್ಷಮಾಯಾಃ ಪತಕೇ ಸರಕ್ತೇ
ಪರಾನತಾಂಗೀ ಪ್ರತಿಬಿಂಬಿತಾಂಗೀ |
ವಿಶ್ವಂಭರೋರಸ್ಥಲ ಮಂದಿರಾಯಾ
ವ್ಯಡಂಬಯದ್ವಿಭ್ರಮಮಿಂದಿರಾಯೋಃ ||

ಬೇರೊಬ್ಬ ಕೋಮಲಾಂಗಿಯು ಪ್ರತಿಫಲನೆಗೊಂಡ ದೃಷ್ಟಿಯಿಂದ, ಪತಿಯ ಕ್ಷಮೆಗಾಗಿ ಅನುರಾಗ ಪೂರ್ಣವಾಗಿ ಬೇಡುವಂತೆ ತೋರುತ್ತಿದ್ದಳು. ವಿಷ್ಣುಮಂದಿರದಿಂದ ವ್ಯಂಗ್ಯವಾಡುತ್ತ ತಿರುಗಾಡುವ ಲಕ್ಷ್ಮಿಯ ಹಾಗೇ ಶೋಭಿಸುತ್ತಿದ್ದಳು.

೩೧. ವಿಜಿತ್ಯಯಾಂತ್ಯಾ ಮರುತೋsಪಿ ವೇಗ
ಮಗ್ರೇ ಭವನ್ಕೇಲಿಮೃಗೋsಪರಸ್ಯಾಃ |
ತತಾನ ತದ್ವ್ಯಾಹತಯೇವ ಸೇರ್ಷ್ಯೋ
ಜವಾಂತರಾಯಂ ಜಲಜೇಕ್ಷಣಯಾಃ ||

ವಿಜಯಂಗೈದು ಹೊರಟಿರುವ ಗಾಳಿಯು (ವಾಯು ದೇವತೆಯು) ಕೂಡ ಮುಂದೆ ಮುಂದೆ ವೇಗವಾಗಿ ಹೋಗುವಾಗ ಭವನಗಳಲ್ಲಿರುವ ಬೇರೆ ಮೃಗಾಕ್ಷಿಯರೊಡನೆ ಆಟವಾಡುತ್ತ ಅನುಗಾಲವು ತಡೆಯಲ್ಪಡುವದರಿಂದ ಈರ್ಷ್ಯೆಯಿಂದ ಯಮನೂ ಕೂಡ ಕಣ್ಣಿನಲ್ಲಿ ನೀರು ತುಂಬಿಕೊಂಡನು.

೩೨. ಕರ್ಣೋತ್ಪಲಂ ಸ್ರಸ್ತಮಭೂತ್ಪ್ರಾಯಾಂತ್ಯಾಃ
ಕಸ್ಯಾಶ್ಚಿಮತ್ಸಾಹಯಿತುಂ ಪದಾಬ್ಜೇ |
ಸಂಪ್ರೇಷಿತಂ ವಾ ಸಹವಾಸಸಖ್ಯಾತ್
ದಿದೃಕ್ಷುಣಾ ದೃಗ್ದ್ವತಯೇನ ಭೂಪಮ್ ||

ಯಾವಳೋ ಹೊರಟಿರುವಾಗ ಕರ್ಣೋತ್ಪಲ ಜಾರಿಬಿದ್ದರೂ ಉತ್ಸಾಹವನ್ನುಂಟು ಮಾಡಲು ಪಾದಪದ್ಮದಲ್ಲಿ ಸಹವಾಸದ ನೆನಪಿನಿಂದ ರಾಜನನ್ನು ನೋಡಲು ತ್ವರಿತವಾಗಿ ಹೊರಟಳು.

೩೩. ಪದೇ ಪದೇ ಕೀರ್ಣವಿಭೂಷಣಾsನ್ಯಾ
ಪ್ರಧಾವತಿ ಸ್ಮ ಪ್ರಸಭಂ ನತಾಂಗೀ |
ಆಕೃಷ್ಟಕೋದಂಡಮನುದ್ರುತಾ ಕಿಂ
ಮನೋಭುವಾ ಮಾನವಿಮೋಚಕೇನ ||

ಇನ್ನೋರ್ವಳು ಹೆಜ್ಜೆ ಹೆಜ್ಜೆಗೂ ಆಭರಣಗಳು ಅತ್ತಿತ್ತ ಸರಿದಾಡುತ್ತ ಹರಡುವದರಿಂದ ವೇಗವಾಗಿ ಹೋಗುತ್ತಿದ್ದರೂ ಸರಿಪಡಿಸಿಕೊಳ್ಳುವ ನೆಪದಿಂದ ಬಾಗಿದ ದೇಹವಳ್ಳಂತಹ ಆಕೆಗೆ ಮನ್ಮಥನು ಧನುಸ್ಸನ್ನು ಹಿಗ್ಗಿಸಿ ಮೇಲಕ್ಕೆಳೆದು ಬಾಣ ಬಿಡುವದರಿಂದ ಮಾನಷ್ಟವಲ್ಲವೇನು?

೩೪. ಪರಾ ನೃಪಾಲೋಕನಪಾರವಶ್ಯಾ
ನ್ನ ಲಾಕ್ಷಯಾ ರಂಜಯತಿ ಸ್ಮಪಾದೌ |
ಅಲಕ್ತರಾಗಾದಪಿ ರಕ್ತಿಮಾನಂ
ಅವಾಪತ್ತುಸ್ತಾವತಿವೇಗಗತ್ಯಾ ||

ಬೇರೊಬ್ಬಳು ವೇಗವಾಗಿ ಹೋದರೂ ಕೂಡ ಪಾದಗಳಲ್ಲಿ ಅಲಕ್ತಕ ರಾಗವರ್ಣ ಸೂಚಿತವಾದರೂ ಅನುರಾಗವನ್ನು ಹೇಳಿಕೊಳ್ಳಲಾಗದೇ ರಾಜನನ್ನು ನೋಡಿದರೂ ಪರವಶಳಾಗಲಿಲ್ಲ.

೩೫. ಪರಿಶ್ಲಥಾ ಮಂಡನ ಪದ್ಮರಾಗ
ಮಾಲಾಕುಚಾಗ್ರಾನ್ ಮಹಿಲಾಮತಲ್ಯಾಃ |
ಚಕಾರ ಬಿಂಬಾಧರಸಾಮ್ಯಹೇತೋ
ರ್ಭೃತಾಭಿಲಾಷಾ ಭೃಗುಪಾತಮೇವ ||

ಪದ್ಮರಾಗ ಮಾಲೆಗಳಿಂದ ವಕ್ಷಸ್ಥಳವನ್ನು ಅಲಂಕರಿಸುವ ಮೂಲಕ ಮಹಿಳೆಯೊಬ್ಬಳು ಏನೂ ಕಾಣಿಸದಿರುವಂತೆ ಮಾಡಿದರೂ ಬಿಂಬಾಧರಗಳ ಸಾಮ್ಯಕಾರಣದಿಂದ ಭೃಗುಪಾತವು ರಾಜನ ಬಗೆಗಿನ ಅಭಿಲಾಷೆಯ ಅನುರಾಗವಾಗಿ ಹೊಂಬಣ್ಣದಿಂದ ಗೋಚರಿಸಿತು.

೩೬. ಕಯಾsಪಿ ಮುಂಚೇತಿ ಗವಾಕ್ಷಮೇಕಾ
ಕರ್ಣೋತ್ಪಲೇನಾಭಿಹತಾ ಸಲೀಲಮ್ |
ಸ್ಮರೇಷುಪಾತೇಷು ವಿವೇದನೇದಂ
ಖೇದೇsಧಿಕೇ ಖೇದಲವಃ ಕಿಯಾನ್ವಾ ||

ಕರ್ಣೋತ್ಪಲದಿಂದ ಹೊಡೆಯಲ್ಪಟ್ಟ ನೀರಿನಿಂದ, ಮದನನಿಂದ ಬಿಡಲ್ಪಟ್ಟ ಬಾಣಗಳಿಂದ ವೇದನೆಯು ಹೆಚ್ಚಾಯಿತು ವಿನಃ ಕಡಿಮೆಯಾಗಲಿಲ್ಲ. ಹಾಗಾಗಿ ಯಾವಳೂ ಕೂಡ ಕಿಟಕಿಯೊಂದನ್ನು ಬಿಡಲಿಲ್ಲ.

೩೭. ನೃಪಾಗಮಾಕರ್ಣನತಃ ಪರಸ್ಯಾ
ನೇತ್ರೇ ಮುದಾಕ್ರಾಂತವತಂಸಪುಷ್ಪೇ |
ಅನಂಗಮಸ್ರಂ ಕಿಮಲಂಘಯೇತಾಂ
ಭೋಜ್ಯಂ ವಿಭುಜ್ಯೇತಿ ತದಾಪ್ತಿಸೌಖ್ಯಮ್ ||

ಭೋಗಿಸಲು ಯುಕ್ತವಾದುದನ್ನು ಭೋಗಿಸಿದರೆ ಸುಖದೊರೆಯುವದು ಎಂಬ ಹಾಗೇ ರಾಜನು ಬರುವದನ್ನು ಕೇಳಿ ಬೇರೊಬ್ಬಳು ಕಣ್ಣುಗಳಲ್ಲೇ ಮುದಗೊಂಡಳು. ಮತಂಸಪುಷ್ಪಗಳಿಂದ ಮನ್ಮಥನಿಂದ ಹೊಡೆಯಲ್ಪಟ್ಟಳೇನೋ ಎನ್ನುವಂತೆ.

೩೮. ನೀಲಾರವಿಂದದಲವಂದನದಾಮಲಕ್ಷೀಂ
ನೇತಾ ಭುವೋs ವಿಪಣಿಂ ರಮಣೀಕಟಾಕ್ಷೈಃ |
ಉಲ್ಲಂಘ್ಯ ವಾಸಗೃಹಮಾಸದುತ್ತಮಾಂಗ
ಸಾಭೋಗನಾದಭರಸಂಕುಲಸೈನ್ಯಸಂಘಃ ||

ಕೆಲಭೋಗಗಳಿಂದ, ವಾದ್ಯವೈಭವದಿಂದ ಕೂಡಿ, ಸೈನ್ಯಸಮೂಹದಿಂದೊಡಗೂಡಿದ ನೀಲಾರವಿಂದದ ದಳಗಳಿಂದ ಪೂಜೆಗೊಂಡ ಲಕ್ಷ್ಮೀಪತಿಯನ್ನು ಭೂಮಿಯಲ್ಲಿ ನೋಡಲು ವ್ಯಾಪಾರಿಗಳು ಲಕ್ಷ್ಮೀಕಟಾಕ್ಷ ಬಿಟ್ಟುಕೊಟ್ಟು ತಮ್ಮ ವಾಸಗೃಹಗಳ ಮೇಲೇರಿ ನಿಂತಿದ್ದರು.

೩೯. ವರ್ಷನ್ನೇಕಂ ವಸಂತೇ ವಸುಚಸಮಧಿಕಂ ವಾಂಛಿತಾದ್ಯಾಚ ಕಾನಾಂ
ಮನ್ವಾದೀನಾಂ ವಿವೃಣ್ವನ್ನಿವ ನಯಪದವೀ ಮಾನವಾನ್ ರಂಜಯಿತ್ವಾ |
ಅತ್ವನ್ನರ್ಮಗೋಷ್ಠಿಂ ಕವಿಭಿರವಿರತಾಮಚ್ಯುತಕ್ಷೋಣಿಪಾಲಃ
ಪಾರವಾರೈಃ ಪರೀತಾಮವತಿ ವಸುಮತೀಂ ಪ್ರಾಜ್ಯ ಸಾಮ್ರಾಜ್ಯಲಕ್ಷ್ಮೀಮ್ ||

ಅನೇಕ ವಸಂತಗಳ ಕಾಲ ದೇವತೆಯಂತೆ ಸಮನಾಗಿ ಬೇಡಿಬಂದವರಿಗೆ ಯುಗಯುಗಳ ವರೆಗೆ ವಿವರಿಸುವ ಹೊಸಪದವಿಯನ್ನು ಅರಿತುಕೊಂಡು ಆನಂದದಿಂದ ವಿದ್ವಗೋಷ್ಠಿಗಳಲ್ಲಿ ಕವಿಗಳಲ್ಲಿ ತಾನೊಬ್ಬನಾಗುವ ಅಚ್ಯುತರಾಯನು ಪರಿವಾರದವರೊಡನೆ ಭೂಮಿಯನ್ನು ಪರಿಪಾಲಿಸುತ್ತಾ ಸಾಮ್ರಾಜ್ಯಲಕ್ಷ್ಮಿಯನ್ನು ಪಡೆದಿದ್ದನು.