೨೭. ಮರ್ತ್ಯೇಂದೋರತಿಬಲಸಿಂಧುವಾಹಿನೀಂ
ಸ್ವಾಮತ್ಯಾಕ್ಷೀದಯಮಪುನರ್ನಿವರ್ತನಾಯ |
ಚಾತುರ್ಯಾಚ್ಛಜುಲಮೃಗೇಂದ್ರಶಾತದಂಷ್ಟ್ರಾ
ಪರ್ಯಂಕ ಸ್ವಪನಪರಾಙ್ಮುಖಾಂತರಾತ್ಮಾ ||

ಭೂಮಿಯಲ್ಲಿ ಚಂದ್ರನ ಅತಿಬಲದಿಂದ ಉಕ್ಕೇರುವ ನದಿಪ್ರವಾಹದಂತೆ, ತನ್ನ ಎದುರಿಗೆ ಗೋಚರಿಸುವ ವಿಚಾರಗಳನ್ನು ತಡೆಯಲು, ಚಾತುರ್ಯ, ಚಂಚಲತೆ, ತೀಕ್ಷಣವಾದ ದಂತಗಳಿಂದ ಕೂಡಿದ ಮೃಗರಾಜನಂತೆ ಅಂತರಾತ್ಮದಿಂದ ಪರಾಙ್ಮುಖಗೊಂಡು ಆಸನದಲ್ಲಿ ಒರಗಿರುವ

೨೮. ಶಾರ್ದೂಲೈರಪಿ ಸಮಶೀರ್ಷಕಾಂಧು ನಾನಾ
ಸ್ಸಾಧರ್ಮ್ಯಂ ಯವನ ಶಕನೃಭೇಟೈಶ್ಚ ಸಂದಧಾನಾಃ |
ಪಾಥೋಧೀನಪಿ ತರೀನ್ವಿನಾ ತರೀತುಂ
ಪಾರೀಣಾಃ ಪವಿಪತನಂ ಸೋಢುಮೀಶಾಃ ||

ಸಿಂಹರೂಪದ ವಿವಿಧ ಸಾಮರ್ಥ್ಯವುಳ್ಳ ಶಕರಾಜನ ಸೈನಿಕರು ಬಂಧಿಸಲ್ಪಟ್ಟರು. ಸಮುದ್ರದಲ್ಲಿರುವ ತರಂಗಗಳನ್ನು ನಾವು ಇಲ್ಲದೇ ದಾಟುವದು ಕಷ್ಟಸಾಧ್ಯ. ಇಂತಹ ಶಕಸೈನಿಕರ ಉತ್ಪಾತಗಳನ್ನು ಸಹಿಸಿಕೊಂಡು ಅಚ್ಯುತರಾಯನ ಸೈನಿಕರು ಸಮರ್ಥವಾಗಿ ಎದುರಿಸಿದರು.

೨೯. ಆಯಾಂತೀಮಥ ಯವನಾವನೀಶಸೇನಾಂ
ನಿಷ್ಣಾತಾ ಯುಧಿ ರುರುಧುರ್ನೃಪಾಯಂಧೀಯಾಃ |
ಚರ್ಮಾಂತಪ್ರತಿಕಲಸಂಕುಚಚ್ಛರೀರಾ
ಸಂದೃಶ್ಯಾನನಚರಣಾಃ ಕ್ಷಣಂ ತದಗ್ರೇ ||

ಚರ್ಮದೊಳಗೆ ಪ್ರತಿಬಾರಿ ಸಂಕೋಚಗೊಂಡ ಶರೀರ ಮತ್ತೆ ಮುಂದಿನ ಕ್ಷಣದಲ್ಲಿ ಸುಸ್ಥಿತಿಗೆ ಬರುವಂತೆ, ಬರುತ್ತಿರುವ ಯವನ ರಾಜನ ಸೇನೆಯನ್ನು ಯುದ್ಧದಲ್ಲಿ ನಿಷ್ಣಾತನಾದ ರಾಜನು ಶಸ್ತ್ರಾಸ್ತ್ರಗಳಿಂದ ತಡೆದನು.

೩೦. ಸಂಗೋಪ್ಯಾಖಿಲಮಪಿ ಚರ್ಮಣಿ ಸ್ವಮಂಗಂ
ಸಂದೃಶ್ಯ ಸ್ಫುಟಚರಣಾ ನರಾಃ ಕ್ಷಣೇನ |
ಸಾಟೋಪಂ ಕತಿಚನ ಖೇಟಿಕಾಶಶಕಾರೇ
ಸ್ಸಂಚೇರುಃ ಕಮಠಸರೀತಯೋ ರಣಾಚ್ಛೌ ||

ಮಾನವರು ತಮ್ಮ ಅಂಗಗಳೆಲ್ಲವನ್ನು ಚರ್ಮದ ಮೂಲಕ ಪೋಷಿಸಿಕೊಂಡರೂ ಕೂಡಾ ರಣಾಂಗಣವೆಂಬ ಸರೋವರದಲ್ಲಿ ಬಿದ್ದಿರುವ ಅವರ ದರ್ಪದಿಂದ ಕೂಡಿದ ಶರೀರವು ಆಕಾಶದಲ್ಲಿ ಸಂಚರಿಸುವ ರಣಹದ್ದುಗಳಿಗೆ ನದಿಯಲ್ಲಿನ ಕೂರ್ಮವು ತೇಲುವಂತೆ ಕಾಣಿಸಿತು.

೩೧. ನಿಸ್ತ್ರಿಂಶೈರ್ನೃಪತಿಚಮೂಭಟಾ ನಿಹಂತುಂ
ರಕ್ಷಾಂಸಿ ಗ್ರಸೀತುಮಿಮಾಂಶ್ಚ ಮಾಂಸಲೋಭಾತ್ |
ವಾಮಾಕ್ಷ್ಯೋ ಬಲಪರಿಮಂಥಿನೋ ವರೀತುಂ
ಸಂರಂಭಾತ್ಸಮಸಮಯಂ ಶಕಾನ್ವಿಭೇಜುಃ ||

ಖಡ್ಗಗಳಿಂದ ಶಕರಾಜನ ಸೈನಿಕರೆಲ್ಲರೂ ಹತರಾಗಿ ಎರಡು ರೀತಿಯಲ್ಲಿ ವಿಭಾಗಮಾಡಲ್ಪಟ್ಟರು. ಪಿಶಾಚಿಗಳು ಮಾಂಸದ ಆಸೆಗಾಗಿ ಸೈನಿಕರನ್ನು ನುಂಗಲು ಬಂದವು. ಅಪ್ಸರಾ ಸ್ತ್ರೀಯರು ವೀರರನ್ನು ವರಿಸಲು ಬಂದರು. ಅವರದೇ ಆದ ಕಾರಣಗಳಿಗಾಗಿ ಶಕಸೈನಿಕರು ವಿಭಾಗಿಸಲ್ಪಟ್ಟರು.

೩೨. ವಾಹಿನ್ಯೋರಭಿಮುಖಮಂಜಸಾ ಚಲಂತ್ಯೋ
ದುರ್ವಾರೇ ಪ್ರಸರತಿ ಧೂಲಿಕಾನಿಕಾಯೇ |
ಭೂತಾನಿ ಧ್ರುವಮಿತರಾಣಿ ಭೂತಧಾತ್ರ್ಯಾಃ
ಸಾಯುಜ್ಯಂ ಕಿಮಪಿ ದಧುಶ್ಚತುರ್ವಿಧಾನಿ ||

ಧೂಳಿ ಪಸರಿಸುತ್ತಿರುವ ಇಂತಹ ಚಲಿಸುವ ಸೈನ್ಯಕ್ಕೆ ಅಭಿಮುಖವಾಗಿ ಧೂಳಿನಲ್ಲಿಯೇ ಜೀವಿಗಳೆಲ್ಲವೂ ನಿಶ್ಚಿತವಾಗಿ ಪಂಚಭೂತಗಳಲ್ಲಿ ಒಂದಾದ ಭೂಮಿಯಲ್ಲಿಯೇ ತಮ್ಮ ಸಾಯುಜ್ಯವನ್ನು ಪಡೆದುಕೊಳ್ಳುವಾಗ ಇತರ ನಾಲ್ಕು ವಿಧಗಳಿಂದ ಏನು ಪ್ರಯೋಜನ

೩೩. ವರ್ಷಂತಾವಭಿಮುಖಮೇವ ವಾರಿಧಾರಾ
ಪಾಧೋದಾವಿವ ಪವಮಾನತಃ ಪ್ರಣುನ್ನೌ |
ಪ್ರತ್ಯಗ್ರಪ್ರಹರಣವರ್ಷದುಷ್ಪ್ರಧಷೌ
ಸಾಮಷೌ ಪರಿಮಿಲಿತಸ್ವಸೈನ್ಯವರ್ಗೌ ||

ಮಳೆ ಸುರಿಸುವಂತೆ ಮುಖಮಾಡಿರುವ ಮೋಡವನ್ನು ನೀರಿನ ಧಾರೆಯಾಗಲು ಗಾಳಿಯು ಸ್ತುತಿಸುವ/ನಮಸ್ಕರಿಸುವ ನೆಪದಲ್ಲಿ ಮುಂದೆ ನೂಕುತ್ತಿರುವ, ಹೊಸ ಹೊಸ ಅಸ್ತ್ರಗಳ ಸುರಿಮಳೆಯಿಂದ ಅವಮಾನಮಾಡಲ್ಪಟ್ಟ ಹಯ ರಾಜನು ತನ್ನ ಸೈನ್ಯವರ್ಗದಿಂದ ತನ್ನನ್ನು ಮುಚ್ಚಿಕೊಳ್ಳುತ್ತಿದ್ದನು.

೩೪. ವ್ಯಗ್ರಾಸಿವ್ಯತಿಹತವೀರಜಾತಮೂರ್ಚ್ಛಾ
ಪ್ರತ್ಯೂಹಾಮರ ಪರಿಷತ್ ಪ್ರಸೂನವರ್ಷಮ್ |
ಆರ್ದ್ರಾಸೃಕ್ತುಮುಲನಿಷದ್ವರಾವಸೀದ
ತ್ಪಾದಾತೋದ್ಧಲನ ಪರಾಙ್ಮುಖಾಯುಧೀಯಮ್ ||

ವೀರನೊಬ್ಬನು ಅತ್ಯಂತ ಕಾರ್ಯತತ್ಪರತೆಯಿಂದ ಹೋರಾಡುವಾಗ ಮೂರ್ಛೆಗೊಂಡು ವಿಘ್ನ ಉಂಟಾಗಿ ಆ ಅನುಚರನ ಫಲವೆಲ್ಲ ಘನಘೋರ ಯುದ್ಧದ ಕೆಸರಿನಿಂದ ತಡೆಯಲ್ಪಟ್ಟು ಆಯುಧದಿಂದ ವಿಮುಖನಾದನು.

೩೫. ಆಲಂಬ್ಯಾಯತಪುಥುಶುಂಡಯಾsಂಘ್ರಿಕಾಂಡೇ
ವೇತಂಡೋಧೃತನರಮಿಪ್ಲುತಾಜಿಶೌಂಡಮ್ |
ತದದೂರೋಪರಿ ಪರಿನುನ್ನಮುಂಡಷಂಡಂ
ಪ್ರಕ್ಷುಭ್ಯಧ್ವರವರಣಾಪತತ್ಸುರೀಕಮ್ ||

ಮದೋನ್ಮತ್ತವಾದ ಆನೆಗಳ ಕಾಲ್ತುಳಿತಕ್ಕೆ ಸಿಕ್ಕು, ಸೊಂಡಿಲಿನಿಂದ ಜೋಲಾಡಿಸುತ್ತ ಎತ್ತಿಹಾಕಲ್ಪಡುವ ಸಾಗಿಸುತ್ತಿರುವ ಸೈನಿಕರ ದೇಹಗಳು ಸ್ವಲ್ಪ ದೂರದಲ್ಲಿ ದಿಬ್ಬದ ಮೇಲೆ ಚೆಲ್ಲಾಪಿಲ್ಲಿಯಾದ ಆಯುಧಗಳಿಂದ, ರುಂಡಮುಂಡ ಬೇರೆಯಾಗಿ ವಿಲಿವಿಲಿ ಒದ್ದಾಡುತ್ತ ಬಿದ್ದಿದ್ದವು.

೩೬. ಅನೃತ್ಯತ್ತುರಗಖುರಾಭಿಘಾತಹಸ್ತಿ
ವ್ಯತ್ಯಾಸಾಹತಿರಣಸುಪ್ತವೀರವರ್ಗಮ್ |
ಅಸ್ತ್ರೌಘೈರಪಿ ನಿವಾರಿತಾಸ್ತ್ರಮಾಸೀ
ದನ್ಯೋನ್ಯಂ ನೃಪಶಕಸೈನ್ಯಯೋರನೀಕಮ್ ||

ಸಮರದಲ್ಲಿ ಅಚ್ಯುತರಾಯನ ಮತ್ತು ಶಕ ಸೈನ್ಯಗಳ ಮಧ್ಯೆ ಅಸ್ತ್ರಗಳ ವೇಗಕ್ಕೆ ಪ್ರತಿ ಅಸ್ತ್ರವನ್ನು ಉಪಯೋಗಿಸುವ ಮೂಲಕ ಒಬ್ಬರಿಗೊಬ್ಬರು ಕಾದಾಡುತ್ತಿದ್ದರು. ಕುದುರೆಗಳ ನರ್ತನದಿಂದುಂಟಾದ ಗೊರಸುಗಳ ಹೊಡೆತ ಆನೆಗಳ ಬಲದಿಂದ ರಣಾಂಗಣದಲ್ಲಿ ವೀರಸೈನಿಕ ಸಮೂಹವು ಮಲಗುವ ಮೂಲಕ ಪರಿವರ್ತನೆ ಹೊಂದುತ್ತಿದ್ದರು.

೩೭. ವ್ಯಾತ್ತಾಸ್ಯೋ ವಲಯಿತಕಾರ್ಮುಕಾಪದೇಶಾತ್
ವ್ಯಾವೃಣ್ವನ್ವಿಶಿಖಮಿಷೇಣ ತೀಕ್ಷದ್ಣಂಷ್ಟ್ರಾಮ್ |
ಸಂಹರ್ತಾ ಲಘುಸಮರಾಂತಕೋ ಭಟಾನಾಂ
ವಿಸ್ಫಾರೈರಜನಿ ವಿಕಸ್ವರಾಟ್ಟಹಾಸಃ ||

ಧನುಸ್ಸಿಗೆ ಬಾಣವನ್ನು ಹೂಡುವ ಮತ್ತು ಬಿಡುವ ಕ್ರಿಯೆಯಿಂದಾಗಿ ಶತ್ರುಪಕ್ಷಗಳ ಸೈನಿಕರಿಗೆ ತೀಕ್ಷಣವಾದ ಬಾಣಗಳು ನಾಟಿ ಅವರು ಆರ್ತನಾದದಿಂದ ಕೊಲ್ಲಲ್ಪಟ್ಟಾಗ ಯುದ್ಧದ ಕೊನೆಯಲ್ಲಿ ಸಂಹರಿಸಿದ ಸೈನಿಕರ ವಿಕಟವಾದ ಅಟ್ಟಹಾಸವು ದಟ್ಟವಾಗತೊಡಗಿತು.

೩೮. ನಿಸ್ತ್ರಿಂಶವ್ಯತಿಹನನಸ್ಫುಲಿಂಗದೀಪೈ
ರ್ನಿರ್ಯದ್ಭಿರ್ನಿಬಿಡ ಚಮೂಪರಾಗ ಧೂಮೈಃ |
ದುರ್ವಾರೈರಪಿ ಶರತೋರಣೈ ರಣೋರ್ವೀ
ವೀರಶ್ರೀಸುಭಟವಿವಾಹ ವೇದಾಕಸೀತ್ ||

ಕತ್ತಿಗಳ ಘರ್ಷಣೆಯಿಂದ ಉಂಟಾದ ಬೆಂಕಿಕಿಡಿಗಳಿಂದ, ಕೆಂಪಾದ ಜ್ವಾಲೆಗಳಿಂದ ಉಂಟಾದ ದಟ್ಟವಾದ ಹೊಗೆ ಹಾಗೂ ರಣಭೂಮಿಯಲ್ಲಿ ಹುಲ್ಲಿನ ಮೇಲೆ ಬಿದ್ದ ಬಾಣಗಳ ತೋರಣಗಳಿಂದ ವೀರರಾದ ಸೈನಿಕರ ವಿವಾಹ ವೇದಿಕೆಯಾಗಿ ತೋರುತ್ತಿತ್ತು.

೩೯. ಅಬದ್ಧಾಃ ಪರಿಶಿಥಿಲಾತಪತ್ರಕೂರ್ಮೈ
ರಾಭಿಲಾಶ್ಶ್ಲಥಕರಿಹಸ್ತದಂದಶೂಕೈಃ |
ಪ್ರಚ್ಛನ್ನಾಃ ಪ್ರಶಿಥಿಲಚಾಮರಾಲಿಫೇನೈಃ
ಪ್ರತ್ಯಗ್ರಾ ಯುಧಿರುಧಿರಾಪಗಾಃ ಪ್ರಸಸ್ರುಃ ||

ಸರಿಯಾಗಿ ಕಟ್ಟಿದ್ದರೂ ಸಡಿಲಗೊಂಡ ಕೂರ್ಮಛತ್ರಗಳಿಂದ, ಆನೆಗಳು ತಮ್ಮ ಸೊಂಡಿಲಿನಿಂದ ಇಚ್ಛಾನುಸಾರವಾಗಿ ಹಾಗೂ ವಿಷಯುಕ್ತ ಉಗುರುಗಳಿಂದ ಕೆದರಿರುವ, ಗುಪ್ತವಾದ ಮಂದ ಮಾರುತದ ನೊರೆಗಳಿಂದ ಕೂಡಿದ, ಹೊಸದಾದ ರಕ್ತದ ಹೊಳೆಯೇ ಯುದ್ಧಭೂಮಿಯಲ್ಲಿ ಪ್ರವಹಿಸುತ್ತಿತ್ತು.

೪೦. ಯೋಧೈರ್ನಸ್ಸಮಮುಪಯಾತಿ ಯುದ್ಧತಂತ್ರಂ
ಪ್ರಸ್ಮೇರಸ್ಮಯಮಿಹ ಪಾರಸೀಕಸೈನ್ಯಮ್ |
ಅಸ್ಮಾಕಂ ಪರಿಭವ ಇತ್ಯಾಪಾಂಗಿತಸ್ಸನ್
ಉತ್ಥಾಯ ಸ್ವಯಮುದಯುಂಕ ಪಾರ್ಥಿವೇಂದ್ರ ||

ಯುದ್ಧತಂತ್ರವು ಯೋಧರ ಹತ್ತಿರಕ್ಕೆ ಬಾರದೇ, ಮರೆತುಹೋದ ಕಾರಣದಿಂದಾಗಿ ಈ ಪಾರಸೀಕ ಸೈನ್ಯವು ತಮ್ಮ ಸೋಲು ಸಂಭವಿಸಿತೆಂದು ಅರಿತುಕೊಂಡು ತಾವೇ ಎದ್ದು ತಾವಾಗಿಯೇ ಸಂತೋಷದಿಂದ ಅಚ್ಯುತರಾಯನನ್ನು ಸ್ತುತಿಸಿದರು.

೪೧. ದಕ್ಷಸ್ಯಾಧ್ವರದಲನಾತ್ತಕಕ್ಷ್ಯಮೀಶಂ
ದೈತೇಯಪ್ರಲಯಕೃತೋದ್ಯಮಂಚ ದೇವಮ್ |
ಗಾಂಢೀವಾಂಕನಪಿ ಖಾಂಡವಾವತೀರ್ಣಂ
ಸಕ್ರೋಧಂ ಯುಧಿ ಸುಭಟಾಶಶ್ಶಂಕಿರೇ ತಮ್ ||

ದಕ್ಷಯಜ್ಞವನ್ನು ನಾಶಗೈದ ಮುಕ್ಕಣ್ಣನೇ, ದೈತ್ಯರ ನಾಶಕ್ಕೆ ಕೈಂಕರ್ಯಗೊಂಡ ದೇವನೇ, ಗಾಂqsವದ ಚಿಹ್ನೆಯನ್ನು ಹೊಂದಿದ್ದರೂ ಖಾಂಡವವನಕ್ಕೆ ಇಳಿದ ಕ್ರೋಧಗೊಂಡ ಅಗ್ನಿರೂಪನೇ, ಎಂದು ಅವನನ್ನು ಸಮರದಲ್ಲಿ ಯೋಧರೆಲ್ಲರೂ ತರ್ಕಿಸಿದರು.

೪೨. ಪ್ರಾಸಾಗ್ರಾತ್ಕತಿಚನ ಪಟ್ಟಸೇನ ಕಾಂಶ್ಚಿ
ತ್ಕಾನಪ್ಯಾಶುಗತಿಕರೈಃ ಕೃಪಾಣತೋsನ್ಯಾನ್ |
ನಿರ್ಭಿಂಧನ್ನಿಜಭುಜನೈಪುಣೇನ ಸೋsಯಂ
ಪೃಥ್ವೀಶಃ ಪ್ರತಿವಿಮತಂ ಪೃಥಕ್ಕಿಲಾಸೀತ್ ||

ಕೆಲವರನ್ನು ಭರ್ಜಿಯ ತುದಿಯಿಂದ, ಕೆಲವರನ್ನು ಪಟ್ಟವೆಂಬ ಆಯುಧದಿಂದ, ಕೆಲವರನ್ನು ಬಾಣ, ಖಡ್ಗಗಳಿಂದ ತುಂಡರಿಸುವ ಅಚ್ಯುತರಾಯನು ತಡೆಯಲಸಾಧ್ಯವಾದ ಭುಜಬಲದ ನಿಪುಣತೆಯಿಂದ ಶತ್ರುಸೈನ್ಯಕ್ಕಿಂತ ಬೇರೆಯಾಗಿದ್ದನು. ವಿಶೇಷವಾಗಿದ್ದನು.

೪೩. ದೀಪ್ತಾಯಾಂ ಭುಜಮಹಸಾ ದ್ವಿಪೇಂದ್ರಹಸ್ತಾ
ನುತ್ಖಾಯಾssಹವ ಭುವಿ ಪಾತಯನ್ನದಸ್ತಾನ್ |
ವೀರೋಯಂ ಹುತಭುಜಿ ಜುಹ್ವತೋ ದ್ವಿಜಿಹ್ವಾನ್
ವ್ಯಾಕಾರ್ಷಿದಿವ ಜನಮೇಜಯಸ್ಯ ವೃತ್ತಿಮ್ ||

ಭುಜಸಾಮರ್ಥ್ಯದಿಂದ ಉದ್ದೀಪನದಿಂದ ಆನೆಯ ಸೊಂಡಿಲಿನಿಂದ ಎರಡೆರಡು ಬಾರಿ ನೀರು ಕುಡಿಯುವಂತೆ ತನ್ನೆರಡು ಭುಜಗಳಿಂದ ಶತ್ರುಪಕ್ಷದವರನ್ನು ಕೆಳಗೆ ಬೀಳಿಸುತ್ತಿರುವ ವೀರನಾದ ರಾಜನು ಯಜ್ಞದೀಕ್ಷೆ ತೊಟ್ಟು ಸರ್ಪಯಾಗ ಮಾಡುವ ಜನಮೇಜಯನಂತೆ ರೂಪಾಂತರ ಹೊಂದಿದನು.

೪೪. ವಿಜ್ಞಾತುಂ ಚಪಲತಯಾ ರಸಾನ್ವಿಭಿನ್ನಾನ್
ಸೋತ್ಕಂಠಾ ಕಿಮಹಿತಕಂಠಶೋಣಿತೇಷು |
ವೈಯ್ಯಗ್ರಾನ್ನೃಪಕರವಾಲಿಕಾ ವಲಂತೀ
ವೀರಣಾಂ ಖಲು ವ್ಯಖಂಡನಾದ್ವಯರಂಸೀತ್ ||

ವಿಭಿನ್ನ ರಸವಿಶೇಷಗಳನ್ನು ತಿಳಿಯುವ ಕುತೂಹಲದಿಂದ ಕೂಡಿದ ಕಂಠಕ್ಕೆ ರಸಾಸ್ವಾದನೆಯಿಂದ ಅಹಿತವಾಗುವದೇನು? ಅದೇ ರೀತಿ ಹುಲಿಯ ಚರ್ಮದಿಂದಾದ ಢಾಲು ಅಸ್ತ್ರದಿಂದ ಕೂಡಿದ ರಾಜನ ಕತ್ತಿಯು ಚಕ್ರಾಕಾರಾಗಿ ಸುತ್ತುವರೆಯುವದರಿಂದ ವೀರರು ಖಂಡಿಸದೆ ಸುಮ್ಮನಿರುವರೇನು

೪೫. ಆಯಾತೋ ವಿಜಯಮನೋರಥಾಧಿರೂಢೋ
ವೈಯ್ಯಾಗ್ರಾತ್ತದಪಿ ವಿಖಂಡಿತೋರುಕಾಂಡಃ |
ಅಲೋಕಿ ಸ್ರವದಸೃಜಾರುಣೋsಶ್ವಸಾದೀ
ಸಾರಥ್ಯಂ ವಿದಧದಿವಾಸ್ಯ ಶೌರ್ಯಭಾನೋಃ ||

ವಿಜಯವೆಂಬ ಮನೋರಥಾದಿರೂಢನಾದ, ಹುಲಿಯ ಚರ್ಮದಿಂದ ಆಚ್ಛಾದಿತನಾದರೂ, ಒಡೆದು ತೋರಿ ಧಾರೆಯಾಗಿ ಸ್ರವಿಸುವ ಮೂಲಕ ಬೃಹತ್‌ಕಾಂಡದಂತೆ ತೋರುವ ಶೌರ್ಯನೆಂಬ ಸೂರ್ಯನಾದ ಇವನು ಅರುಣನ ಅಶ್ವಗಳ ಸಾರಥ್ಯದಿಂದೊಡಗೂಡಿ ಬರುತ್ತಿದ್ದನು.

೪೬. ಎಕಸ್ಯೋಪಂ ಶರಮೇಕಮೇವ ಮುಕ್ತ್ವಾ
ಧಾನುಷ್ಕಸ್ಸ್ವಯಮಪಿಬತುರುಷ್ಯ(ಸೈನ್ಯಮ್) ಸೇನಾಮ್ |
ಉಚ್ಛೇಷಿಕೃತಮಿದಮಾಮಿಷಂ ಹಿ ಕೇನಾ
ಪ್ಯನ್ಯೇನ ಗ್ರಸೀತುಮಯುಕ್ತಿಮಿತ್ಯವೇತ್ಯ ||

ಒಂದರ ಮೇಲೊಂದರಂತೆ ಒಂದೊಂದೆ ಬಾಣಗಳಂತೆ ಬಿಟ್ಟ ಬೇಟೆಗಾರನಂತೆ ತಾನು ಕೂಡ ತುರುಷ್ಕ ಸೈನ್ಯವನ್ನು ಧೂಳಿಪಟವಾಗಿಸುವ ತನ್ನ ಆಸೆಯು ಬೇರೆ ಯಾವುದರಿಂದಲೋ ಸಂಹಾರ ಮಾಡಲು ಯೋಗ್ಯವೆಂದು ತಿಳಿದು

೪೭. ಶೌಂಡೀರ್ಯಾವಧಿರವತೀರ್ಯಸಾಹ್ಯವಾರ್ತಾಂ
ನಿಶಶಂಕೋ ಯುಧಿ ನಿರಶೇಷಯದ್ವಿಪಕ್ಷಾನ್ |
ನಿರ್ಮಾತುಂ ಪುನರಪಿ ತಾನ್ಯಥಾ ವಿಧಾತುಃ
ಪ್ರಾಯೇಣ ಪ್ರತಿಕೃತಿರೇಕಿಕಾsಪಿ ಸ್ಯಾತ್ ||

ಯುದ್ಧದಲ್ಲಿ ಶತ್ರುಸೈನ್ಯವು ನಿಶ್ಯೇಷ್ಯವಾಗಿರುವ ಹಿನ್ನೆಲೆಯಲ್ಲಿ ಬ್ರಹ್ಮನಿಗೆ ಪುನಃ ಸೃಷ್ಟಿಕಾರ್ಯದಲ್ಲಿ ಪ್ರಾಯಶಃ ಒಂದೇ ಒಂದು ಪ್ರತಿಕೃತಿಯೂ ಇರುವುದಿಲ್ಲವೆಂಬುದು ಸತ್ಯವಾದುದು.

೪೮. ನಿರ್ವ್ಯೂಢಾಹವನಿಯಮಪ್ರವರ್ತನೇsಸ್ಮಿ
ನ್ನೇಕಾಕೀ ಯವನಪತಿಃ ಪಲಾಯತೇ ಸ್ಮ |
ಪಾರೀಂದ್ರೇ ಪ್ರಕಟವಿಹಾರಪಾರತಂತ್ರ್ಯೇ
ವೇತಂಡಃ ಕಿಮು ವಿಹರೆದ್ವಿಧೂತಶಂಕಃ ||

ಅಚ್ಯುತರಾಯನು ಏಕಾಕಿಯಾಗಿ ಯುದ್ಧದಲ್ಲಿ ಮುನ್ನಡೆ ಸಾಧಿಸಿದರೆ ಯವನಪತಿಯು ಪಲಾಯನ ಮಾಡಿದನು. ಸಿಂಹ ಸ್ವತಂತ್ರವಾಗಿ ವಿಹರಿಸಿದರೆ ಆನೆ ನಡುಗುತ್ತ ಶಂಕೆಯಿಂದ ಪಾರತಂತ್ರ್ಯದಲ್ಲಿ ವಿಹರಿಸುವುದಿಲ್ಲವೇನು?

೪೯. ವೀರೋsಯಂ ಯುಧಿ ಹತಶೇಷಮಶ್ವಯೂಥಂ
ವೇತಂಡವ್ರಜಮಪಿ ವಿದ್ವಿಷೋ ಗೃಹೀತ್ವಾ |
ಕೃಷ್ಣಾಯಾಂ ಕೃತವಸತೀಂ ದಿನೈಸ್ಸ ಕೈಶ್ಚಿ
ನ್ನೇತಾರಂ ನಿಜಮಭಜನ್ನಿಧಿಂ ಬುಧಾನಾಮ್ ||

ಈ ಪರಾಕ್ರಮಶಾಲಿಯು ಯುದ್ಧದಲ್ಲಿ ಅಳಿದುಳಿದ ಕುದುರೆ, ಆನೆಗಳ ಸಮೂಹದೊಂದಿಗೆ ವೈರಿಗಳನ್ನು ಸೆರೆಹಿಡಿದು ಕೃಷ್ಣೆಯ ದಡದಲ್ಲಿ ಕೆಲವು ದಿನಗಳವರೆಗೆ ವಾಸವಾಗಿದ್ದನು. ಇಂತಹ ನಾಯಕನನ್ನು ವಿದ್ವಾಂಸರುಗಳು ಭಜಿಸಿದರು.

೫೦. ಶ್ರುತ್ವಾ ತಾಮಥ ಮಲುಕಪ್ರವೃತ್ತಿಮುರ್ವೀಂ
ಸುತ್ರಮ್ಣಾ ಸಹ ದೃಢಸೌಹೃದಂ ವಿಧಾತುಮ್ |
ಅಂತರ್ನಿಶ್ಚಿತಮತಿರಾದರಾತ್ಸಪಾದೋ
ನೀತಿಜ್ಞೋ ನಿಜಸಚಿವಾನಿತಿ ನ್ಯಗಾದೀತ್ ||

ಅನಂತರ ಅದನ್ನು ಕೇಳಿ ಮಲುಕನೆಂಬುವನು ಭೂಮಿಯನ್ನು ದೇವೇಂದ್ರನಂತೆ ಆಳುವ ಅಚ್ಯುತರಾಯನೊಂದಿಗೆ ಸೌಹಾರ್ದದಿಂದ ಕಾರ್ಯಸಾಧಿಸಲು ಮನಸ್ಸಿನಲ್ಲಿ ನಿರ್ಧರಿಸಿ ನೀತಿಜ್ಞನಾಗಿ ನಿಜಮಂತ್ರಿಯಂತೆ ಮಾತನಾಡಿದನು.

೫೧ ಸಂಗ್ರಾಮೇ ನರಸವಿಭುಸ್ಸ ತಾತಪಾದ
ತ್ರಾತಾಸೀದಯಮಂಪಿ ತತ್ತಪೋವಿಪಾಕಃ |
ಆನಮ್ರಾನವತಿತಮಾಂ ಕ್ಷ್ಮಾಭೃದಸ್ಮಾನಾ
ಚಾರೋ ನನು ಪಿತುರಾತ್ಮಜೈರಲಂಘ್ಯಃ ||

ನರಸರಾಜನ ಕಾಲದಿಂದಲೂ ಭೂಮಿಯ ಸಮಸ್ತ ಭಾಗವನ್ನು ಪಾಲಿಸುವ (೧/೪) ಭಾಗವನಾದ, ಆ ಬಗೆಯ ತಪಸ್ಸಿನ ವಿಶಿಷ್ಟತೆಯಿಂದ ಶೋಭಿತನಾದ ನರಸನಾಯಕನ ಮಗನಾದ ಅಚ್ಯುತರಾಯನನ್ನು ಅತಿಕ್ರಮಿಸದೇ ನಮ್ಮ ಧರ್ಮದಂತೆ ನಮ್ರವಾಗಿ ನಡೆದುಕೊಳ್ಳುವದೇ ಯುಕ್ತವಾದುದು ಎಂಬುದಾಗಿ

೫೨. ಆತ್ಮೀಯೈರಭಿಮತಭಾಷಿತಸ್ಸದಸ್ಯೈ
ರಾರೂಢೋ ಹಯಮತಿದೂರಲಂಘಿತಾಧ್ವಾ |
ಕೃಷ್ಣಾಯಾಂ ನ್ಯಧಿತಬಲಂ ಕ್ಷಿತಿಶಮೌಲೇ
ಸ್ಸಂಛನ್ನಾಪರತಟಸೀಮ್ನಿ ಸೈನ್ಯವರ್ಗೈಃ ||

ಆತ್ಮೀಯರೊಂದಿಗೆ ತಕ್ಕ ಹಾಗೆ ಮಾತನಾಡುತ್ತ, ಸಹಚರರೊಂದಿಗೆ ಕುದುರೆಯನ್ನೇರಿ, ಬಹಳ ದೂರ ಪಯಣಿಸಿ ಕೃಷ್ಣಾ ತೀರದಲ್ಲಿ ಸೈನ್ಯವನ್ನು ನಿಲ್ಲಿಸಿ ಏಕಾಂಗಿಯಾಗಿ ಸೈನ್ಯವರ್ಗದಿಂದ ಸನ್ನದ್ಧವಾದ ಆಚೆಯ ದಡಕ್ಕೆ ಹೊರಟನು.

೫೩. ಪ್ರಾಸನ್ನ್ಯಸ್ಪೃಶಿ ಸರಿತಃ ಪಯಸ್ಯಮುಷ್ಯಾ
ಸ್ಸಂಕ್ರಾಂತಾಸ್ತದುಭಯ ಸೈನಿಕಾನುಬಿಂಬಾಃ |
ಪಾತಾಲಾದುಪರಿ ಗತಾಃ ಪ್ರಜಾ ಇವಾಸನ್
ಸಂದ್ರಷ್ಟುಂ ನರಪತಿಸೈಂಧವೇಶಸಂಧಿಮ್ ||

ಆ ದಡಕ್ಕೆ ಸೇರಿದ ನಂತರ ನದಿಯ ನೀರಿನಲ್ಲಿ ಉಂಟಾದ ಉಭಯ ಸೈನಿಕರ ಬಿಂಬಗಳು ಅಲ್ಲಿಗೆ ಹೋದ ಸೈಂಧವ ರಾಜನ ಹಾಗೂ ಅಚ್ಯುತರಾಯನ ಸಂಧಿಯನ್ನು ನೋಡಲು ಪಾತಾಳದಿಂದಲೇ ಮೇಲಕ್ಕೆದ್ದು ಬಂದ ಪ್ರಜೆಗಳೋ ಎಂಬಂತೆ ತೋರಿದವು.

೫೪. ಪರ್ಯಸ್ತಸ್ತದುಭಯಸೈನ್ಯಯೋಃ ಪರಾಗೋ
ನಿಸ್ಸಾಣಧ್ವನಿರಪಿ ನಿಹ್ನುತಾಂತರಿಕ್ಷಃ |
ವಾತೋsಪಿ ಧ್ವಜವಸನೋದಿತೋ ಮಿಲಿತ್ವಾ
ಮತ್ಯೇಂಶಾಶ್ವಪತಿಮತಾಂ ಕಿಮನ್ವರುಂಧ ||

ಉಭಯ ಸೈನ್ಯಗಳಿಂದುಂಟಾದ ಧೂಳಿನಲ್ಲಿ ಕಳೆದುಹೋದ ಧ್ವನಿಯಿಂದಾಗಲಿ, ಧ್ವಜದ ಬಟ್ಟೆಯಿಂದುಂಟಾದ ಗಾಳಿಯಿಂದ ಘಾತಗೊಂಡ ಅಂತರಿಕ್ಷದಿಂದಾಗಲೀ, ಇವೆರಡೂ ಸೇರಿದರೂ ಸಹ ಭೂಮಿಯಲ್ಲಿರುವ ಸೇನಾ ಸಾಮರ್ಥ್ಯವನ್ನು ತಡೆಯಲು ಸಾಧ್ಯವೇ

೫೫. ವಾಹೇಂದ್ರಸ್ಸಿತರವಾರವಾಣಧಾರೀ
ನಿರ್ಮೋಕಾಂಚಿತ ಇವ ನಿರ್ವಿಷಃ ಫಣೀಂದ್ರಃ |
ಆನಮ್ರೀಭವದತಿನಮ್ರಪೂರ್ವಕಾಯಃ
ಪ್ರಾಣಂಸೀತ್ಪತಿಮವನೇಃ ಪ್ರಮೃಷ್ಪದರ್ಪಃ ||

ಭೂಮಿಯ ಪ್ರಾಣಪತಿಯಾದ ಅಚ್ಯುತರಾಯನಿಂದ ಸೋಲಿಸಲ್ಪಟ್ಟು, ಗರ್ವವನ್ನು ತೊರೆದ ಹಯಪತಿಯು ಕತ್ತಿಯನ್ನು ಹಿಡಿದು ಪೊರೆಬಿಟ್ಟಿದ್ದ ಆದಿಶೇಷನಂತೆ ಯಾವುದೇ ವಿಷಯಾಭಿಲಾಷ ಇಲ್ಲದೇ ನಮ್ರವಾಗಿ, ಬಾಗಿ ನಮಸ್ಕರಿಸಿದನು.

೫೬. ಚಮೂಮಯಪಯೋನಿಧೌ ಸಗರಕುಂಜರಂ ಸಾಧ್ವಸಾ
ವಹಾರಗಲಿತಂ ವರಾಚ್ಯುತನೃಪಸ್ಸಭಕ್ತಿಂ ಹರೌ |
ಅಪಾಲಯತ ತತ್ಕ್ಷಣಾದಭಯಹಸ್ತಚಕ್ರೋದಯಾ
ತ್ಕಥಂ ನು ಭವಿತಾಂತರಂ ಕಮಲನಾಭತದ್ಭಕ್ತಯೋಃ ||

ಸೇನಾಸಾಗರದಲ್ಲಿ ಸಗರ ವಂಶಜನಾದ ಅಚ್ಯುತರಾಯನು ಹರನಲ್ಲಿಯ ಭಕ್ತಿಯಿಂದ ವ್ಯಗ್ರತೆಯನ್ನು ತೊರೆದು ಸೇನೆಯನ್ನು ಹಿಂದಕ್ಕೆ ಒಯ್ಯುವ ಯುದ್ಧವನ್ನು ನಿಲ್ಲಿಸುವ ಹಾಗೂ ಏಕಕಾಲಕ್ಕೆ ಕಮಲನಾಭನ ಭಕ್ತನಾಗಿ ಆ ಕ್ಷಣದಲ್ಲಿ ಅಭಯ ಹಸ್ತದಲ್ಲಿ ಹುಟ್ಟಿದ ಚಕ್ರದಿಂದ ಪಾಲಿಸುವಲ್ಲಿ ಹೇಗೆ ಅಂತರವು ಆದೀತು

೫೭. ಸಂಪ್ರೇಷ್ಯಾಸೌ ಶಕಪರಿಬೃಢಶಶಾಸಿತಾ ದುರ್ಮದಾನಾಂ
ಪ್ರತ್ಯಂಯಾಸಿದ್ವಿಜಯನಗರಂ ಪಂಚಷೈರೇವ ವಾರೈಃ |
ಅಧ್ವಶ್ರಾಂತಾಮಿವ ನಿಜಚಮೂಮಗ್ರತೋ ವೀಜಯಂತೀಂ
ವಾರಂ ವಾರಂ ಭವನವಲಭೀ ವೈಜಯಂತೀ ಸಮೀರೈಃ ||

ಶಕರ ಅಧಿಪತಿಯಿಂದ ಕೊಡಲ್ಪಟ್ಟ ಮದೋನ್ಮತ್ತವಾದ ಆನೆಗಳಿಂದೊಡಗೂಡಿ ಐದಾರು ವಾರಗಳ ನಂತರ ವಿಜಯನಗರಕ್ಕೆ ಆಗಮಿಸಿದನು. ಆಯಾಸದಿಂದ ಬಳಲಿದ ಸೈನಿಕರಿಗೆ ಭವನಗಳ ಉಪ್ಪರಿಗೆಯಲ್ಲಿರುವ ಧ್ವಜಗಳಿಂದ ಹುಟ್ಟುವ ಗಾಳಿಯು ಪದೇ ಪದೇ ಬೀಸುವ ಮೂಲಕ ಸ್ವಾಗತಿಸುತ್ತಿತ್ತು.