ನಾಲೀಕಾಕ್ಷಮಲೀಕಾಕ್ಷಂ ನಾಗೇಶಯಮಗೇಶಯಮ್ ||
ವಿಪುಂಗವಧ್ವಜಂ ಧಾಮ ಪುಂಗವಧ್ವಜಮಾಶ್ರಯೇ ||

(ಇದೊಂದು ಪ್ರಾರ್ಥನಾ ಪದ್ಯವಾಗಿದ್ದೂ ಒಂದೇ ವರ್ಣನೆಯಿಂದ ಎರಡು ಅಂಶಗಳನ್ನು ಇಲ್ಲಿ ಹೇಳಲಾಗಿದೆ. ಕಮಲದಂತಿರುವ ಕಣ್ಣುಳ್ಳ ಶೇಷಶಾಯಿಯಾದ, ಗರುಡಧ್ವಜನಾಗಿ ತೇಜಃಪುಂಜನಾದ ವಿಷ್ಣುವನ್ನು ಭಜಿಸಿರಿ. ಇನ್ನೊಂದರ್ಥದಲ್ಲಿ ಮುಕ್ಕಣ್ಣನು, ಪರ್ವತಶಾಯಿ, ವೃಷಭ ಧ್ವಜನಾಗಿ ತೇಜಃಪುಂಜನಾದ ಶಿವನನ್ನು ಭಜಿಸಿರಿ. ಒಂದರ್ಥದಿಂದ ವಿಷ್ಣುವನ್ನು ಇನ್ನೊಂದರ್ಥದಿಂದ ಶಿವನನ್ನು ಏಕಕಾಲಕ್ಕೆ ಸ್ತುತಿಸುತ್ತದೆ.)

. ಅವ್ಯಾದಪೂರ್ವೋ ನಿಧಿರಾರಗಮಾನಾ
ಮಾದ್ಯೋ ವೃಷಾದ್ರೇಃ ಪತಿರಚ್ಯುತೇಂದ್ರಮ್ |
ನಿರೀಕ್ಷಿತುಂ ನಿಃ ಸ್ಪೃಹಕಾಂಕ್ಷಿತಂ ಯಂ
ನಿರಂಜನಾ ಎವ ಜನಾಃ ಕ್ಷಮಂತೇ ||

ಅಪೂರ್ವವಾದ ನಿಧಿಯಾದ ವೇದ ಶಾಸ್ತ್ರಗಳು ಸರ್ವಜಗತ್ತಿಗೆ ಆದಿಯಾದವುಗಳು ಅಥವಾ ಈ ನಿಧಿಯು ಸರ್ವಜಗತ್ತಿಗೂ ಮೂಲವಾದುದು. ಅಂತಹ ನಿಧಿವೈಶಿಷ್ಟ್ಯದಿಂದ ಕೂಡಿದ ವೃಷಾದ್ರಿ ಒಡೆಯನಾದ ಶ್ರೀನಿವಾಸನು ಅಚ್ಯುತರಾಯನನ್ನು ರಕ್ಷಿಸಲಿ. ನಿಸ್ಪೃಹರಾದವರು. ನಿಧಿಯನ್ನು ಅಂಜನವಿಲ್ಲದೇ ಕಾಣಬಹುದಾದ/ನೋಡಲು ಸಾಧ್ಯವಿದೆ. [ಸಾಮಾನ್ಯವಾಗಿ ನಿಧಿ ಆಸೆಯಿರರುವವರು ಅಂಜನದಿಂದಲೇ ನಿಧಿಯ ಲಕ್ಷಣ ನೋಡುವರು]

. ಧಮ್ಮಿಲ್ಲಶೈವಾಲಧರಾ ವಿರಾಜ
ದಪಾಂಗಮೀನಾಥರ ವಿದ್ರುಮಾಪ್ತಾ |
ಧನ್ಯಾ ಪಿತೃಚ್ಛಾಯತಯಾಬ್ಧಿ ಕನ್ಯಾ
ತನ್ಯಾದವನ್ಯಾಂ ವಿಶ್ರಮಚ್ಯುತೇಂದ್ರೋ ||

ನಿಸ್ಪೃಹರಾದವರೂ, ಅಪೇಕ್ಷಿತರು ಅಂಜನವಿಲ್ಲದೇ ನೋಡಲು ಸಾಧ್ಯವಾಗುವ ಈ ವೃಷಾದ್ರಿ ಒಡೆಯನೆಂಬ ನಿಧಿಯು ವೇದಾದಿಶಾಸ್ತ್ರಗಳು ಆಗಮಗಳಿಗಿಂತಲೂ ಆದಿಯಾದುದು. ಅಂತಹ ನಿಧಿಯೆನಿಸಿರುವ ವೃಷಾದ್ರಿ ಒಡೆಯನಾದ ಶ್ರೀನಿವಾಸನು ಅಚ್ಯುತರಾಯನನ್ನು ರಕ್ಷಿಸಲಿ.

. ಸುವರ್ಣರೂಪೈಃ ಶುಭನಾಯಕಾಂಕೈ
ರೌಜ್ಜ್ವಲ್ಯವದ್ಭಿರ್ಧ್ವನಿಮಶ್ನುವಾನೈಃ
ಪರಿಷ್ಕೃತಾದಿಕ್ಷಿತಿಪಾನ್ಪ್ರಬಂಧೈಃ
ಪ್ರಾಚೇತಸಾದೀನ್ಪ್ರಣುಮಃ ವೀಂದ್ರಾನ್

ಪಾಚಿಯನ್ನು ಮುಡಿಗಂಟಾಗಿ ಹೊಂದಿರುವ, ಕಡೆಗಣ್ಣನೋಟದಿಂದ ವಿರಾಜಿಸುವ ಮೀನಿನಂಥ ಹವಳದ ತುಟಿ ಹೊಂದಿರುವ ಧನ್ಯಳಾದ, ಸಮುದ್ರಕನ್ಯೆಯಾದ ಲಕ್ಷ್ಮಿಯು ಪಿತೃಸದೃಶನಾಗಿ ಭೂಮಿಯನ್ನು ಪರಿಪಾಲಿಸುತ್ತಿರುವ ಅಚ್ಯುತೇಂದ್ರನನನ್ನು ಶ್ರೇಯೋಭಿ ವೃದ್ದಿಗಳಿಂದ ರಕ್ಷಿಸಲಿ.

. ಕಥಂ ನು ವರ್ಣ್ಯಾ ಭುವಿ ಕಾಲಿದಾಸ
ಮಯೂರಮಖಾದಿಮಹಾಕವೀಂದ್ರಾಃ |
ಪುರಾತನೀಂ ಪುರುಷಭೂಮಿಕಾಂ ಯರು
ದ್ವೇಷೇಣ ಧೃತ್ವಾ ವಿನನರ್ತ ವಾಣೀ ||

ಸುವರ್ಣಾಭರಣದ ಮಧ್ಯಮಣಿಯಂತೆ ಕಾಂತಿವಿಶಿಷ್ಟವಾದ, ಧ್ವನಿತತ್ವವನ್ನು ತಮ್ಮ ಕಾವ್ಯಾದಿ ಪ್ರಬಂಧಗಳಲ್ಲಿ ಪಡೆದು ಅಲಂಕೃತರಾದ, ವಾಲ್ಮೀಕಿಯೇ ಮೊದಲಾದ ಶ್ರೇಷ್ಠ ಕವಿಗಳು ರಾಮನಾದಿಯಾಗಿ ರಾಜರುಗಳನ್ನೆಲ್ಲ ಸ್ತುತಿಸಿದ್ದಾರೆ.

. ಅಸ್ತಿ ಸ್ಮರಪ್ರಾಭೃತಮಕ್ಷಿ ಶೌರೇ
ರದಕ್ಷಿಣಂ ಶೇಖರಪುಷ್ಪಮೈಶಮ್ |
ಅಪಾಂನಿಧೇರದ್ಭುತನಾಟ್ಯವಿದ್ಯಾ
ಗುರುಶ್ಚಕೋರೀಕುಲಬಂಧುರಿಂದುಃ ||

ಮನ್ಮಥನಿಗೆ ಉಪಾಯನವಾಗಿ, ವಿಷ್ಣುವಿಗೆ ಎಡಗಣ್ಣಾಗಿ, ಶಿವನು ತಲೆಯಲ್ಲಿ ಧರಿಸಿದ ಶೇಖರ ಪುಷ್ಪವಾಗಿ, ಸಮುದ್ರದ ಅದ್ಭುತಕಾರೀ ನಾಟ್ಯರೂಪಕ್ಕೆ ಅಂದರೆ ಅಲ್ಲೋಲ ಕಲ್ಲೋಲಗಳಿಗೆ ಗುರುವಾಗಿ, ಚಕೋರಪಕ್ಷಿಗಳ ಕುಲಬಂಧುವಾಗಿ ಚಂದ್ರನಿರುವನು. (ಸೂರ್ಯ ಚಂದ್ರರು ವಿಷ್ಣುವಿನ ಕಣ್ಣುಗಳು ಎಂಬುದು ಲೋಕರೂಢಿ)

. ಪ್ರಾಯೇಣ ಯಃ ಕ್ಷೋಣಿಭೃದುತ್ತಮಾಂಗೇ
ಪಾದಾರ್ಪಣಂ ಸತ್ಪಥಸೇವನಂ |
ಕರೋತ್ಯರಿಶ್ರೇಣಿಕದರ್ಥನಂ
ಕುರ್ವಂತು ಸರ್ವೇ ಕುಲಜಾ ಮಮೇತಿ ||

ಇಂತಹ ಈ ಚಂದ್ರನು ಸ್ವತಃ ತನ್ನ ಕಿರಣಗಳನ್ನು ಪರ್ವತರಾಜನಾದ ಹಿಮಾಲಯ ಪರ್ವತದಲ್ಲಿ ಚೆಲ್ಲಿ, ಸಜ್ಜನರಿಗೆ ಸತ್ಪಥ ತೋರಿಸುವವನಾಗಿ, ಚಕ್ರವಾಕ ಸಮೂಹದ ಉಪಟಳವನ್ನು ಹೇಗೆ ನಾಶಪಡಿಸುವನೋ ಹಾಗೇ, ತನ್ನಂತೆಯೇ ತನ್ನ ವಂಶದವರೆಲ್ಲರೂ ಹಿಮಾಲಯದವರೆಗೂ ವಿಜಯಂಗೈದು, ಸಜ್ಜನರ ರಕ್ಷಕರಾಗಿ, ಶತ್ರುಗಳಿಗೆ ಶಿಕ್ಷಕರಾಗುವಂತೆ ಮಾಡಲಿ.

. ಸರೋಜಭದ್ರಾಸನಸೌಮನಸ್ಯಾ
ತ್ಸುಧಾಪ್ರದಾನಾತ್ಸುಮನೋಜನಾನಾಮ್ |
ಸದಾಪಿ ನಾಕಾಶ್ರಯ ಸೌಹೃದಾದ್ಯಃ
ಪುಷ್ಣಾತಿ ಚರ್ಯಾಂ ಪುರುಷತ್ರಯೀಯಾಮ್ ||

ಚಂದ್ರನು ಕಮಲಗಳ ವಿಕಾಸಕ್ಕೆ/ಮಂಗಳಕ್ಕೆ ಪ್ರೀತಿಯಿಂದ ಕಾರಣನಾಗುವನು ಇಲ್ಲವೇ ಕಮಲಗಳೆಂಬ ಸಿಂಹಾಸನದ ಮೇಲೆ ಪ್ರೀತಿಯಿಂದ ಅಲಂಕರಿಸಿರುವನು. ದೇವತೆಗಳಿಗೆ ಅಮೃತ ನೀಡುತ್ತ ಯಾವಾಗಲೂ ಸ್ವರ್ಗದ ಆಶ್ರಯದಲ್ಲಿ ಸ್ನೇಹದಿಂದಿರುವ ಇಲ್ಲವೇ ಶಿವನ ಧನುಸ್ಸಿನ ಆಶ್ರಯದಲ್ಲಿ ಸೌಹಾರ್ದವಾಗಿರುವ ಬ್ರಹ್ಮ, ವಿಷ್ಣು, ಶಿವ ತ್ರಿಮೂರ್ತಿಗಳ ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳಲ್ಲಿ ಸಹಕಾರಿಯಾಗಿರುವನು.

. ವಿಯುಕ್ತವರ್ಗೇ ವಿಹಿತಪ್ರತಾಪಃ
ಸಂಯುಕ್ತಲೋಕೇ ಸರಸಪ್ರಭಾವಃ |
ಉದಂಚಿತೋ ರಾಜಪದಾನುಕೂಲಂ
ಯೋ ಮಂಡಲಂ ಧಾರಯತೇsನುರಕ್ತಮ್ ||

ರಾಜನು/ಚಂದ್ರನು ವಿರಹಿಗಳಿಗೆ/ಶತ್ರುಗಳಿಗೆ ಅತ್ಯಂತ ಪ್ರಚಂಡವಾದ ತಾಪವನ್ನು ಉಂಟುಮಾಡುವನು. ಮಿತ್ರತ್ವದಿಂದ ಜೊತೆಗೂಡಿ ಇರುವವರಿಗೆ ಸರಸವಾದ ಮಧುರಭಾವವನ್ನುಂಟು ಮಾಡುವನು. ಪೂಜನೀಯನಾಗಿ/ರಂಜಿಸುವ ಆಹ್ಲಾದಕಾರಿಯಾಗಿ ರಾಜಸ್ಥಾನಕ್ಕೆ ಅನುಗುಣವಾಗಿರುವನು. [ಇಲ್ಲಿ ರಾಜ ಎಂಬ ಪದವನ್ನು ಚಂದ್ರ ಮತ್ತು ರಾಜನಿಗೆ ಅನ್ವಯಿಸಿ ಹೇಳಲಾಗಿದೆ] ತನ್ನ ಬಿಂಬವನ್ನು ಕೆಂಬಣ್ಣವಾಗಿ, ಇಲ್ಲವೇ ರಾಷ್ಟ್ರವನ್ನು ಅನುರಾಗದಿಂದ ಪಡೆದವನಾಗಿರುತ್ತಾನೆ.

. ಆಶಾಭಿಪೂರ್ತೇರನುರೂಪಮೇವ
ವರ್ಷನ್ಪ್ರಕರ್ಷಾದ್ವಸುಮಂಡಲಾನಿ |
ಔದಾರ್ಯಭುಜಾಮದನೀರುಹಾಣಾಂ
ವ್ಯನಕ್ತಿ ಯಃ ಸೋದರತಾವಿಲಾಸಮ್ ||

ದಿಕ್ಕುಗಳ/ಮನೋರಥಗಳ ಪೂರ್ಣತೆಗಾಗಿ ಅನುರೂಪವಾಗಿರುವ ಕಿರಣಸಮೂಹದ/ಧನರಾಶಿಯ ಆಧಿಕ್ಯದಿಂದ ಕೂಡಿದ್ದರೂ ಔದಾರ್ಯವನ್ನು ಹೊಂದಿ ಕಲ್ಪತರುವಿಗೆ ಸಹೋದರನಾಗಿ ಶೋಭೆಯನ್ನು ತಂದುಕೊಡುತ್ತಾನೆ. [ಕಲ್ಪತರು, ಚಂದ್ರ ಸಮುದ್ರಮಥನದಲ್ಲಿ ಹುಟ್ಟಿರುವದರಿಂದ ಸೋದರತ್ವದ ಪ್ರತೀತಿ ಇದೆ]

೧೦. ಕ್ಷೇಮಂಕರಃ ಕೈರವಸಂಸದಾಂ ಯೋ
ವಾಮಂ ಹರಸ್ಯೇಕ್ಷಣಮೇವ ನೈಕಮ್ |
ಉದಿರ್ಯತೇsಧ್ವನ್ಯಜನೌರ್ದ್ವಿತೀಯಂ
ಸಂಚಿಂತ್ಯತೇ ಚಕ್ರಕುಲೈಸ್ತೃತೀಯಮ್ ||

ಕುಮುದ ಮಂಡಲಕ್ಕೆ ಕ್ಷೇಮಕರನಾಗಿರುವನು ಈ ಚಂದ್ರನು. ಹರನ ಎಡಗಣ್ಣಾಗಿ ಪಥಿಕರಿಗೆ ದಾರಿಯಾಗುವನು. ಹರನ ಎರಡನೆಯ ಸೂರ್ಯರೂಪ ಕಣ್ಣಿನಿಂದ ಚಕ್ರವಾಕ ಸಂಕುಲಕ್ಕೆ ಉದ್ರೇಕಗೊಳಿಸುವನು. ಮೂರನೆಯ ಅಗ್ನಿರೂಪದ ಕಣ್ಣಿನಿಂದ ಪಥಿಕರು ಮತ್ತು ಚಕ್ರವಾಕಗಳಿಬ್ಬರ ವಿಷಯದಲ್ಲೂ ತಾಪವನ್ನುಂಟು ಮಾಡುತ್ತಾನೆ.

೧೧. ಕಥಂ ಬ್ರುವೇ ಯಸ್ಯ ಕಲಾನುಷಕ್ತಾ
ಆಲೋಕಮಾತ್ರಾದಪಿ ಚಂಚರೀಕಾಃ |
ವ್ಯಾಕುಂರ್ವತೇಕೈರವಪೀಠಿಕಾಸು
ವಿದ್ಯಾವಿಶೇಷಾನ್ವಿಷಮಾಯುಧೀಯಾನ್ ||

ಯಾವ ರೀತಿಯಿಂದ ಹೇಳಲಿ? ಭೃಂಗಗಳು ಹೇಗೆ ಚಂದ್ರನ ದರ್ಶನ ಮಾತ್ರದಿಂದ ತಮ್ಮ ಕಲೆಗಳಲ್ಲಿ ಆಸಕ್ತವಾಗುವವೋ ಅಥವಾ ಕುಮುದಗಳಲ್ಲಿ ಅವ್ಯಕ್ತವಾದ ಮಧುರಧ್ವನಿಯಿಂದ ಹಾರಾಡುತ್ತವೆಯೋ ಎಂಬುದನ್ನು ಅಥವಾ ಅಷ್ಟೇ ಅಲ್ಲದೆ ಈ ಮೂಲಕ ಮನ್ಮಥನಿಗೆ ಸಂಬಂಧಿಸಿದ ವಿಶಿಷ್ಟ ವಿದ್ಯೆಯನ್ನು ಪ್ರಸ್ತುತಪಡಿಸುವ ಬಗೆಯನ್ನು?

೧೨. ವಿಮೋಹಿನಿಂ ಯೋ ವಿಧುರೇತ್ಯ ಮೂರ್ತಿಂ
ಸುಧಾಂ ದದಾನಃ ಸುಮನೋಜನಾಯ |
ಅಸ್ವಪ್ನವೃತ್ತ್ಯಾಶ್ರಯತೋವತಾರ
ಅಲಕ್ಷತೇ ಯಸ್ತಮಸೋ ನಿಹಂತಾ ||

ವಿಷ್ಣುವು ದೇವತೆಗಳಿಗೆ ಅಮೃತವನ್ನು ಕೊಡುತ್ತಾನೆ. ಮೋಹಿನಿ ಎಂಬ ವಿಶೇಷ ರೂಪದಿಂದ ಆಶ್ರಯ ಬೇಡಿದ ದೇವತೆಗಳನ್ನು ರಕ್ಷಿಸುತ್ತಾನೆ. ಆಶ್ರಯ ಹೊಂದದ ರಾಹುವನ್ನು ಕೊಲ್ಲುತ್ತಾನೆ. ಅದೇ ರೀತಿ ಚಂದ್ರನು ದೇವತೆಗಳಿಗೆ ಅಮೃತಪ್ರದಾನ ಮಾಡುತ್ತಾನೆ. ಸಾವಿರ ನಕ್ಷತ್ರಗಳಿಗಿಂತಲೂ ಪ್ರಕಾಶಮಾನವಾಗಿ ಗೋಚರಿಸುತ್ತಾನೆ. ಅಲ್ಲದೇ ಕತ್ತಲನ್ನು ಕಳೆಯುತ್ತಾನೆ.

೧೩. ಆಚಾರತೋ ಧರ್ಮ ಇವಾವದಾತಾ
ದಬಾಧಿತೋ ಹರ್ಷ ಇವಾತ್ಮಬೋಧಾತ್ |
ತತೋ ಬುಧಾಖ್ಯಸ್ತನಯಸ್ತತೋಭೂ
ಚ್ಛಮಃ ಶ್ರುತಾನಾಮಿವ ಸಂಪ್ರದಾಯಾತ್ ||

ಅನಂತರ ಪರಿಶುದ್ಧ ನಡತೆಯಿಂದ ಧರ್ಮವನ್ನು, ಶ್ರೇಷ್ಠವಾದ ಆತ್ಮಜ್ಞಾನದಿಂದ ಆನಂದವನ್ನು ಹೊಂದಿರುವ, ಶಾಸ್ತ್ರ ಸಂಪ್ರದಾಯದಿಂದ ಶಾಂತನಾಗಿರುವ ಚಂದ್ರನಿಗೆ ಬುಧನೆಂಬ ಮಗನು ಹುಟ್ಟಿದನು.

೧೪. ಪುರೂರವಾಃ ಪುಣ್ಯಫಲಾದತೋsಭೂ
ದಭೂತಪೂರ್ವಾಭ್ಯುದಯಸ್ಯ ಯಸ್ಯ |
ಪ್ರಶಸ್ತಿಮುದ್ರಾಲಿಖನಾದ್ವಿಶಾಲಂ
ಪ್ರತ್ಯರ್ಥಿವಕ್ಷಃ ಫಲಕಂ ಕಿಲಾಸೀತ್ ||

ಈ ಬುಧನಿಗೆ ಪುರೂರವನು ಜನಿಸಿದನು. ಅಭೂತಪೂರ್ವವಾಗಿ ಇವನ ಹುಟ್ಟಿನಿಂದ ಅಭ್ಯುದಯವಾಯಿತು. ಇಂತಹ ಪುರೂರವನು ಪ್ರಶಸ್ತಿ ಚಿಹ್ನೆಯನ್ನು ಬರೆಯುವ ಮೂಲಕ ವಿಶಾಲವಾದ ಶತ್ರುಗಳ ಎದೆಯನ್ನು ಫಲಕವಾಗಿಸಿದನು.

೧೫. ಆಯುಸ್ತತೋsಭೂದಧಿಭೂರವನ್ಯಾಃ
ಪ್ರಭಿದ್ಯ ಶಕ್ತ್ಯಾ ಪರಭೂಭೃತಂ ಯಃ |
ಹೇತುರ್ಯಶೋಹಂಸವಿಜೃಂಭಣಾನಾ
ಮೇತಿ ಪ್ರಥಾಂ ಸ್ಕಂದ ಇವೇಂದುಮೌಲೇಃ ||

ನಂತರ ಭೂಮಿಯಲ್ಲಿ ನಾಯಕನಾದ ಆಯುಃ ಎಂಬ ರಾಜನು ಪರಮೇಶ್ವರನಿಂದ ಸುಬ್ರಮಣ್ಯನಂತೆ ಪುರೂರವಸ್‌ನಿಗೆ ಮಗನಾಗಿ ಇದ್ದನು. ಅವನು ಸಾಮರ್ಥ್ಯವೆಂಬ ಆಯುಧದಿಂದ ಶತ್ರುರಾಜರನ್ನು ಉತ್ಕೃಷ್ಠವಾದ ಕ್ರೌಂಚ ಪರ್ವತವನ್ನು ಸೀಳುವಂತೆ ಸೀಳಿ, ಯಶಸ್ಸೆಂಬ ಹಂಸಾರೂಢನಾಗಿ ವಿಲಾಸಹೊಂದಿದನು.

೧೬. ನಾಥಃ ಪೃಥಿವ್ಯಾ ನಹುಷಾಭಿಧೋsಸ್ಮಾ
ಜ್ಜಜ್ಞೇ ಯದಾಜ್ಞಾಜನಿತಾವತಂಸಾಃ |
ಬೃಂದಾರಕಾ ನೋ ಬಹುಮನ್ವತೇ ಸ್ಮ
ಮಂದಾರಮಾಲಾಂ ಮಧುಪಾತ್ಗಂಧಾಮ್ ||

ಈ ಅಯುಷ್ಯನಿಂದ ನಹುಷನೆಂಬುವನು ಜನಿಸಿದನು. ಭೃಂಗಗಳಿಂದ ಹೀರಲ್ಪಟ್ಟ ಗಂಧವಿಲ್ಲದ ಮಂದಾರಮಾಲೆಯನ್ನು ಕೈಬಿಡುವಂತೆ ನಹುಷನಿಂದ ಸಂಪಾದಿತವಾದ ಶೇಖರ ಪುಷ್ಪಗಳನ್ನು ದೇವತೆಗಳು ಮುಟ್ಟುವುದಿಲ್ಲ. (ನಹುಷನು ಇಂದ್ರಪದವಿ ಪಡೆದನೆಂಬುದು ಪುರಾಣ)

೧೭. ಅಸ್ಮಾದಭೂದ್ವಿಸ್ಮಯಭೂರ್ಯಯಾತಿ
ರ್ಭಯಾತಿರೇಕಸ್ತಿಮಿತಾಭಿಯಾತಿಃ
ಕುಲಾಧಿನಾಥಸ್ಯ ಕಲಾ ಇವಾನ್ಯಾ
ವಿಧೋರ್ವ್ಯಧಾದ್ಯೋ ವಿಶದೈರ್ಯಶೋಭಿಃ

ಈ ನಹುಷನಿಂದ ಭೂಮಿಯಲ್ಲಿ ಶತ್ರುಗಳು ಭಯಾಧಿಕ್ಯದಿಂದ ಆಶ್ಚರ್ಯಕರ ರೀತಿಯಲ್ಲಿ ಸ್ತಬ್ಧಗೊಂಡರು. ಇಂತಹ ರಾಜನಿಗೆ ಯಯಾತಿ ಎಂಬ ಮಗನಿದ್ದನು. ಇವನು ತನ್ನ ಧವಲಕೀರ್ತಿಯಿಂದಾಗಿ ಕುಲದೊಡೆಯನಾದ ಚಂದ್ರನ ಪ್ರತಿರೂಪವನ್ನು ಉತ್ಪಾದಿಸುವಂತಿದ್ದನು. ಇಲ್ಲವೇ ಪ್ರತಿರೂಪನಾಗಿದ್ದನು.

೧೮. ಅಜಾಯತಾವ್ಯಾಜಸುಹೃತ್ಪ್ರಜಾನಾಂ
ಧೂರ್ವಹಸ್ತುರ್ವಸುರುರ್ವರಾಯಾಃ |
ಅಸ್ಯ ಪ್ರತಾಪಾಂಶಮತಾ ವಿಚಿತ್ರ
ಮಮಿತ್ರಕಾಂತಾ ಜ್ವಲಿತಾ ಯದಂತಃ ||

ಜನರ ಅವ್ಯಾಜ್ಯ ಸ್ನೇಹವನ್ನು ಭೂಮಿಯ ಎಲ್ಲ ಕಡೆಯಿಂದಲೂ ಹೊಂದಿರುವ, ಧುರಂಧರನಾದ, ಪ್ರಸಿದ್ಧನಾದ ತುರ್ವಸು ಎಂಬುವನು ಹುಟ್ಟಿದನು. ಈ ತುರ್ವಸುವಿನ ಪ್ರತಾಪವು ಸೂರ್ಯನಷ್ಟೇ ಪ್ರಖರವಾಗಿತ್ತು. ಶತ್ರುಗಳ ಸ್ತ್ರೀಯರಿಗೆ ಇನ್ನೊಂದರ್ಥದಲ್ಲಿ ಚಂದ್ರಕಾಂತ ಮಣಿಯಂತಾಗಿತ್ತು. ಅಂತರಂಗದಲ್ಲಿ ಉರಿಯುತ್ತಿತ್ತು. ಸೂರ್ಯನು ಪ್ರಕಾಶಮಾನನಾಗಿರುವಾಗ ಸೂರ್ಯನ ಕಾಂತಿಯು ಜ್ವಲಿಸುತ್ತಿರುವಂತೆ ಎಂಬರ್ಥ. [ಅಮಿತ್ರಕಾಂತಾ ಶತ್ರುಗಳ ಹೆಂತಿಯರಿಗೆ ಚಂದ್ರಕಾಂತಾ ಮಣಿಯು ಜ್ವಲಿಸುತ್ತಿರುವದು ವಿಸ್ಮಯಕಾರೀ ಎಂಬುದು ಭಾವ]

೧೯. ಸಂಚಾರಿಣಃ ಶೌರ್ಯರಸಾ ಇವಾಗ್ರೇ
ನೇತ್ರಾಧ್ವನಿನಾ ಇವ ನೀತಿ ಸಾರಾಃ |
ಸಜೀವಬಂಧಾ ಇವ ಸದ್ಗುಣೌಘಾಃ
ಸೌಜನ್ಯಮುದ್ರಾ ಇವ ಸಪ್ರತೀಕಾ ||

ಸಚ್ಚರಣಶೀಲವೇ ಶೌರ್ಯರಸದಂತೆ, ನೀತಿ ಸಾರವೇ ಕಣ್ಣಿನ ನೋಟವಾಗಿ/ಸದ್ಗುಣ ಸಮೂಹವೇ ಸಶರೀರವಾಗಿ, ಸೌಜನ್ಯಸ್ವರೂಪವೇ ಮೂರ್ತಿಮಂತಾದ

೨೦. ನಾಭಾಗವೀಪ್ಸಾ ನಹುಷಾನುವಾದಾ
ನಿಮೇರ್ವಿಭಾಷಾ ನೃಗಮೂರ್ತಿಭೇದಾಃ |
ದ್ವಿರುಕ್ತಯೋ ದಾಶರಥೇರ್ದಿಲಿಪ
ಸ್ಯಾವೃತ್ತಯೋ ಧರ್ಮಭುವೋ ವಿಕಲ್ಪಾಃ ||

ನಹುಷನ ಇಚ್ಛಾರೂಪದ ತದ್ವತ್ ಪ್ರತಿರೂಪನಾದ, ಅಣಿತಿಯಿಲ್ಲದ ಭಾಷೆಯಿಂದ ದೊರೆಯೇ ಮೂರ್ತಿಭವಿಸಿದಂತಿರುವ, ರಾಮನ ಪ್ರತಿರೂಪ ಹಾಗೂ ದಿಲೀಪನ ಆವೃತ್ತಿಯಾಗಿರುವ, ಧರ್ಮಸ್ವರೂಪನಾದ

೨೧. ಮದಾವಲಾ ಮಾಂಸಲದಾನಕೇಲ್ಯಾಂ
ಮಹೀಭೃತಾಂ ಪಕ್ಷಹೃತೌ ಮಹೇಂದ್ರಾಃ |
ಸಸತ್ತ್ವತಾಯಾಂ ಸರಿತಾಮಧೀಶಾಃ
ಷಡಾನನಾಃ ಕಿಂ ಸಶಕ್ತಿತಾಂಯಾಮ್ ||

ಅತ್ಯಧಿಕ ದಾನವೇ ಲೀಲೆಯಾಗಿ ಉಳ್ಳ, ರಾಜರುಗಳನ್ನು ಸದೆಬಡಿದ, ಸತ್ವಯುತನಾದ ನದಿಗಳ ಒಡೆಯನಾದ ಸಮುದ್ರದಂತೆ, ಸಶಕ್ತ ಸೇನಾನಾಯಕನಾದ ಸುಬ್ರಣ್ಯನಂತೆ

೨೨. ಅಪತ್ರಪಾಮಂಹತಿವೈಭವೇನ
ಸುರದ್ರುಮಾಣಾವಂಪಿ ಸೂಚಯಂತಃ |
ತದನ್ವಯೇ ಪುಣ್ಯಫಲಾದವನ್ಯಾಂ
ಧನ್ಯಾಂ ಭಭೂವುರ್ಧರಣೀಭೂಚೋನ್ಯೇ ||

ತನ್ನ ಅತ್ಯಂತ ದಾನವೈಭೋಗದಿಂದ ಕಲ್ಪವೃಕ್ಷವನ್ನು ನಾಚಿಸುವ, ತನ್ಮೂಲಕ ದೊರಕಿದ ಪುಣ್ಯಫಲದಿಂ ರಾರಾಜಿಸುವ ಇಂತಹ ತುರ್ವಸುವಿನ ವಂಶದಲ್ಲಿ ಧನ್ಯರಾದ ರಾಜರುಗಳಲ್ಲಿ ಜನಿಸಿದರು.

೨೩. ನಾಲೀಕಿನೀನಾಯಕವದ್ಗ್ರಹೇಷು
ನೀಹಾರಭೂಮೀಧರವನ್ನಗೇಷು |
ವಲಾಸುಹೃದ್ವಾರಣವದ್ಗಜೇಷು
ತೇಷಂ ಪ್ರತೀತೋಜನಿ ತಿಮ್ಮಭೂಪಃ ||

ಚಂದ್ರಾದಿ ಗ್ರಹಗಳಲ್ಲಿ ಕಮಲಗಳ ನಾಯಕನಾದ ಸೂರ್ಯನಂತೆ, ಪರ್ವತಗಳಲ್ಲಿ ಹಿಮಾಲಯ ಪರ್ವತದಂತೆ, ಆನೆಗಳಲ್ಲಿ ವಲನೆಂಬ ರಾಕ್ಷಸನ ವೈರಿಯಾದ ಇಂದ್ರನ ಆನೆಯಾದ ಐರಾವತದಂತೆ ಶ್ರೇಷ್ಠವಾದ ತುರ್ವಸು ಕುಲದಲ್ಲಿ ತಿಮ್ಮನೆಂಬ ರಾಜನು ಖ್ಯಾತನಾಗಿದ್ದನು.