ಸಮೇತ್ಯ ಸಾಮ್ರಾಜ್ಯರಮಾಂ ಮನೋರಮಾಂ
ವಿನೀತಿಮಾನ್ವಿಪನೃಸಿಂಹಭೂಪತಿಃ |
ಬಹಿರ್ವ್ಯಧಾದ್ಭಂಧನಮಂದಿರಾದರೀನ್
ಧರಾಸಹಾನ್ ಕಿಂ ದರಿದ್ರತಾಭಿಧಾತ್ ||

ಇವನ ನಂತರ ಶ್ರೀಕೃಷ್ಣದೇವರಾಯ ಅಧಿಕಾರವಹಿಸಿಕೊಂಡನು. ಅವನ ಅದ್ದೂರಿ ರಾಜ್ಯಾಭಿಷೇಕವು ಶತ್ರುಗಳ ಉತ್ಸಾಹಕ್ಕೆ ತಣ್ಣೀರೆರಚಿತು. ಇವನ ಸಾಹಸಗಾಥೆಯಲ್ಲಿ ಕೊಂಡವೀಡು ಮತ್ತು ರಾಜಾ ಗಜಪತಿಯ ಸಾಮ್ರಾಜ್ಯದ ಕೋಟೆಗಳ ವಶದ ವಿವರವಿದೆ. ‘ಪುಟ್ಟುಪೆಟ್ಟನಪುರ’ದಲ್ಲಿ (ಸಿಂಹಾದ್ರಿಯ ಸಮೀಪ) ಜಯಸ್ತಂಭ ನಿರ್ಮಾಣದ ವಿವರಣೆಯಿದೆ.

ಕೃಷ್ಣದೇವರಾಯನ ಸಾಧನೆಗಳಾದ ಕೊಂಡವೀಡು ವಶ ಮತ್ತು ನಾದಿಂಡ್ಲಾ ಗೋಪ (Nadindla Gopa) ಮಂತ್ರಿಯನ್ನು ಕೋಟೆಯ ಆಡಳಿತಾಧಿಕಾರಿಯಾಗಿ ನೇಮಿಸಿದ್ದು ಗಜಪತಿರಾಯನ ವಿರುದ್ಧದ ಯುದ್ಧ, ಓರಿಸ್ಸಾ ಸೈನ್ಯದವರ ಸೋಲು ಮತ್ತು ಕೃಷ್ಣದೇವರಾಯನು ಗಜಪತಿಯ ಸಾಮ್ರಾಜ್ಯದ ಕಕ್ಷೆಯೊಳಗೆ ನುಗ್ಗುವದು ಈ ಎಂಬೆಲ್ಲ ವಿವರಗಳು ಪ್ರಸ್ತುತ ಕೃತಿಯಲ್ಲಿ ಇರುವಂತೆ ಕೊಂಡವೀಡು, ಕಾಸಾಶಾಸನ ಮತ್ತು ಅಹೋಬಲಮ್ ದಾಖಲೆಗಳಲ್ಲೂ[1] ಇವೆ. ರಾಜನಾಥನು ತಿಳಿಸಿದ ವಿವರಗಳು ಶ್ರೀಕೃಷ್ಣದೇವರಾಯನ ಅಮುಕ್ತಮಾಲ್ಯದಾ[2] ಕೃತಿಯಲ್ಲೂ ದೊರೆಯುತ್ತವೆ. ಕೃಷ್ಣದೇವರಾಯನಿಗೆ ಸಂಬಂಧಿಸಿದ ಈ ವಿವರಗಳು ಎರಡೂ ಕೃತಿಯಲ್ಲೂ ಸರಿಸಮನಾಗಿರುವದು ವಿಶೇಷ.

ರಾಜನಾಥನು ಕೊಡುವ ಅಚ್ಯುತರಾಯನಿಗೆ ಸಂಬಂಧಿಸಿದ ಮಾಹಿತಿಯಂತೆ ಕೃಷ್ಣದೇವ ರಾಯನ ಕೊನೆಗಾಲದಲ್ಲಿ ಅಚ್ಯುತರಾಯನು ರಾಜಧಾನಿಯಲ್ಲಿರಲಿಲ್ಲ. ಅದಕ್ಕೂ ಪೂರ್ವದಲ್ಲಿ ಅಚ್ಯುತರಾಯನ ಕಿರೀಟಧಾರಣೆ ವೆಂಕಟೇಶ್ವರನ ಸನ್ನಿಧಿಯಲ್ಲಿ (\ರುಪತಿಯಲ್ಲಿ) ನೆರವೇರಿತ್ತು. ವಿಜಯನಗರ(ವಿದ್ಯಾನಗರ)ದಲ್ಲಿ ಪಟ್ಟಾಭಿಷೇಕ ನೆರವೇರುವ ಮುನ್ನ ಔಪಚಾರಿಕವಾಗಿ ಇದು ಸಾಧಿತವಾಗಿತ್ತು. ಅನಂತರ ಈ ಪಟ್ಟಾಭಿಷೇಕವನ್ನು ವಿಜಯನಗರದಲ್ಲಿ ಆಚರಿಸುವ ಸಿದ್ಧತೆಗಳನ್ನೊಳಗೊಂಡ ಹತ್ತು ಹಲವು ವರ್ಣನೆಗಳ ಮೂಲಕ ಸವಿಸ್ತಾರವಾಗಿ ರಾಜನಾಥನು ವಿವರಿಸಿದ್ದಾನೆ.

ಈ ರೀತಿಯಾದ ಅಚ್ಯುತರಾಯನ ಪಟ್ಟಾಭಿಷೇಕವನ್ನು ಬೇರೆ ಬೇರೆ ಮೂಲಗಳು ಕೂಡ ದೃಢಪಡಿಸುತ್ತವೆ. ಅಚ್ಯುತರಾಯ ಬಹುಶಃ ಚಂದ್ರಗಿರಿಯಲ್ಲಿ (ತಿರುಪತಿ ಮತ್ತು ಕಾಳಹಸ್ತಿ ಸಮೀಪ) ಮುಖ್ಯಕೋಟೆಯಲ್ಲಿ ಇದ್ದನು. ೩ನೇ ಕಿರೀಟಧಾರಣೆ ಕಾಳಹಸ್ತಿಯ ದೇವಾಲಯದಲ್ಲಿ ದಾಖಲಾಗಿದೆ.

157 of 1924, Another inscription, 182 of 1924 records the gift made by Achyuta on the day of his coronation at Kalahasti – in Virodhi Kartika bahula panchami (21st Oct 1529 A.D.) and is dated (27th July 1532) ಕಾಂಚೀವರಂನಲ್ಲಿರುವ ಎರಡು ಶಾಸನದಂತೆ ೫ನೇ ತಿಥಿ ವೃಶ್ಚಿಕದ ಸೌರಮಾನದ ಎರಡನೇ ಅರ್ಥದ ವಿರೋಧಿ ಸಂವತ್ಸರವೂ ೨೦ ನವೆಂಬರ್ ೧೫೨೯ ಎಂದು ಸೂಚಿಸುತ್ತದೆ. ಕೃಷ್ಣದೇವರಾಯ ೧೫೨೯ರ ಮಧ್ಯದಲ್ಲಿ ಸತ್ತನೆಂದು ಊಹೆ ಮಾಡಿ ಮೇ ದಿಂದ ಅಕ್ಟೋಬರ್ ನೋಡಿದರೆ, ಮೂರು ವಿವಿಧ ಸ್ಥಳದ ಪಟ್ಟಾಭಿಷೇಕ ಒಂದಾದ ನಂತರ ಒಂದು ಎಂಬಂತೆ ಆಗಿರಬೇಕು. ಏಕೆಂದರೆ ತಿರುಪತಿ ಮತ್ತು ಕಾಳಹಸ್ತಿ ಸಮೀಪದಲ್ಲಿದ್ದು, ಅವು ವಿಜಯನಗರದಲ್ಲಿ ಆದ ಪಟ್ಟಾಭಿಷೇಕಕ್ಕಿಂತ ಪೂರ್ವದಲ್ಲಿ ಆಗಿರಬೇಕು. ಕೃಷ್ಣದೇವರಾಯನು ತಿರಮಲೈನಲ್ಲಿ ವೆಂಕಟೇಶ್ವರನನ್ನು ಆರಾಧಿಸಿ ಕಾಳಹಸ್ತಿಯ ಕಾಳಹಸ್ತೆಶ್ವರನನ್ನು ಅದೇ ದಿವಸ ಪೂಜಿಸಿದ್ದು ಶಾಸನದ ದಾಖಲೆಯಲ್ಲಿದೆ.[3]

ಕೃಷ್ಣದೇವರಾಯ ೧೫೨೯ರ ಮಧ್ಯದಲ್ಲಿ ಸತ್ತನೆಂದು ಊಹೆ ಮಾಡಿ ಮೇ ದಿಂದ ಅಕ್ಟೋಬರ್ ನೋಡಿದರೆ, ಮೂರು ವಿವಿಧ ಸ್ಥಳದ ಪಟ್ಟಾಭಿಷೇಕ ಒಂದಾದ ನಂತರ ಒಂದು ಎಂಬಂತೆ ಆಗಿರಬೇಕು. ಏಕೆಂದರೆ ತಿರುಪತಿ ಮತ್ತು ಕಾಳಹಸ್ತಿ ಸಮೀಪದಲ್ಲಿದ್ದು, ಅವು ವಿಜಯನಗರದಲ್ಲಿ ಆದ ಪಟ್ಟಾಭಿಷೇಕಕ್ಕಿಂತ ಪೂರ್ವದಲ್ಲಿ ಆಗಿರಬೇಕು. ಕೃಷ್ಣದೇವರಾಯನು ತಿರಮಲೈನಲ್ಲಿ ವೆಂಕಟೇಶ್ವರನನ್ನು ಆರಾಧಿಸಿ ಕಾಳಹಸ್ತಿಯ ಕಾಳಹಸ್ತೆಶ್ವರನನ್ನು ಅದೇ ದಿವಸ ಪೂಜಿಸಿದ್ದು ಶಾಸನದ ದಾಖಲೆಯಲ್ಲಿದೆ.

ಅಚ್ಯುತರಾಯನ ಆಳ್ವಿಕೆ ಕಾಲದಲ್ಲಿ ಬರುವ ಚೆಲ್ಲಪ್ಪನ ವಿವರವನ್ನು ರಾಜನಾಥ ಹೇಳಿದ ವಿವರಗಳನ್ನು ನ್ಯೂನಿಜ್ ಮೊದಲಾದವರು ಹೇಳುತ್ತಾರೆ.[4] ಇನ್ನು ಚೆಲ್ಲಪ್ಪನ ಕುರಿತು ಹೇಳುವ ಮಾಹಿತಿಗೂ ನ್ಯೂನಿಜ್[5] ಹೇಳುವ ಮಾಹಿತಿಯಲ್ಲಿ ಮತ್ತಿನ್ನಿತರ ಆಕರಗಳಲ್ಲಿ ಬಂದಿದೆ. ರಾಜನಾಥ ಹೇಳುವಂತೆ ಇದು ವ್ಯಕ್ತಿಯೋರ್ವನ ಅಂಕಿತನಾಮವಲ್ಲ. ರೂಢಿಯಲ್ಲಿನ ಬಳಕೆ ಯಿಂದಾಗಿ ಇದು ಸ್ವೀಕೃತಗೊಂಡಿದೆ. ಕೃಷ್ಣದೇವರಾಯನ ಕಾಲದ ೧೪೩೨ ಮತ್ತು ೧೪೩೩ರ ಸಾಲಿನ ಎರಡು ದಾಖಲೆ ಇವೆ. ಅವುಗಳಲ್ಲಿ ಅವನ ತಂದೆಗೆ (ನರಸನಾಯಕ) ಸೆಲ್ಲಪ್ಪರ್ ಎಂಬ ಹೆಸರಿರುವುದು ಗೊತ್ತಾಗುತ್ತದೆ. ರಾಜಾನಾಥ ಸೂಚಿಸಿದ್ದ ಸೆಲ್ಲಪ್ಪ ಅಚ್ಯುತರಾಯನ ವಿರುದ್ಧ ಬಂಡೆದ್ದವನು. ಸಾಲ್ವನಾಯಕ ಅಚ್ಯುತರಾಯನ ಪಟ್ಟಾಭಿಷೇಕದ ನಡುವಿನ ಅವಧಿಯಲ್ಲಿ ರಾಜ್ಯವನ್ನು ಆಳಿ ಅಚ್ಯುತರಾಯನ ಪರವಾಗಿ ಅವನ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನು ಮಾಡಿದ್ದನು. ಇದರಿಂದಾಗಿ ಅಚ್ಯುತರಾಯನು ಚೆಲ್ಲಪ್ಪನನ್ನು ಉನ್ನತವಾದ ಸ್ಥಾನದಲ್ಲಿ ಕೂರಿಸಿದ್ದನು. ೧೫೨೯ರ ಸಾಲಿನ ‘ಉರತ್ತೂರು’ ಶಾಸನದಲ್ಲಿ [ತಿರುವಗತ್ತಿಸ್ವರಮುದ್ದೆಯಾರ ತಂಬಿರಾಯನ] ದೇವಸ್ಥಾನದಲ್ಲಿ ಅವನನ್ನು ‘ವೀರನರಸಿಂಹನಾಯಕ ಸಾಲುವ ದಂಡನಾಯಕರ್’ ಎಂದು ಸಂಬೋಧಿಸಿ ಗೌರವಿಸಲಾಗಿದೆ. ಕೆಳಶ್ರೇಣಿಯ ಅಧಿಕಾರಿಯು ತನ್ನ ಉನ್ನತ ಅಧಿಕಾರಿಗಳ ಉನ್ನತಿಗಾಗಿ ಮಾಡುವ ದಾನಗಳ ಸಹಜಮಾರ್ಗಕ್ಕೆ ವಿಪರೀತವಾಗಿ ಅಚ್ಯುತರಾಯನು ತನ್ನ ಅಧೀನ ಅಧಿಕಾರಿಗಾಗಿ ದಾನ ಮಾಡಿದ್ದು ಉಲ್ಲೇಖನಾರ್ಹ.

ರಾಜನಾಥನು ಉಲ್ಲೇಖಿಸದೆ ಬಿಟ್ಟ ವಿಚಾರಗಳು

ಕೃಷ್ಣದೇವರಾಯ ಪುಟ್ಟನಪುರದಲ್ಲಿ ನೆಡಸಿದ್ದ ಜಯಸ್ತಂಭವನ್ನು ಹೇಳುವ ರಾಜನಾಥ ಕವಿ ಅಚ್ಯುತನ ಜಯಸ್ತಂಭದ ವಿಷಯ ತಿಳಿಸುವುದಿಲ್ಲ. ಪಾಂಡ್ಯರಾಜನ ಬಗೆಗೆ ಹೇಳುವನಾದರೂ ಪಾಂಡ್ಯರಾಜಕುಮಾರಿಯ ಜೊತೆಗೆ ವಿವಾಹ ಮಾತ್ರ ಉಲ್ಲೇಖಿಸುವುದಿಲ್ಲ. ಆದರೆ ಈ ವಿಷಯ ಶಾಸನಗಳಲ್ಲಿ ಸ್ಪಷ್ಟವಾಗಿದೆ.

೧. ತಾಮ್ರಪರ್ಣಿಯ ದಡದಲ್ಲಿರುವ ಜಯಸ್ತಂಭ.

೨. ಅಚ್ಯುತರಾಯನ ಪಾಂಡ್ಯರಾಜಕುಮಾರಿಯ ಜತೆ ವಿವಾಹ.

ಎರಡು ಮಹತ್ವದ ವಿಚಾರಗಳು ಕಾವ್ಯದಲ್ಲಿ ದಾಖಲಾಗಿಲ್ಲ. ಆದರೆ ಅವುಗಳಿಗೆ ಸಂಬಂಧಿಸಿದ ಎರಡು ಶಿಲಾಶಾಸನಗಳಿವೆ.

ಬಿಜಾಪುರ ಆದಿಲ್‌ಶಾಹಿಯೊಟ್ಟಿಗಿನ ಯುದ್ಧ ಈ ಕಾವ್ಯದ ಗುಣಾತ್ಮಕ ಅಂಶ. ಕೊನೆಯ ಮೂರು ಸರ್ಗಗಳಲ್ಲಿ ಅಚ್ಯುತನ ಶ್ರೀರಂಗಪಟ್ಟಣ ಭೇಟಿ ಮತ್ತು ಬಿಜಾಪುರ ಸುಲ್ತಾನನೊಂದಿಗಿನ ದಾಳಿಯನ್ನು ಕುರಿತು ವಿವರಗಳು ಹೆಚ್ಚಿನ ವಿಮರ್ಶೆ/ವಿಶ್ಲೇಷಣೆಗೆ ಅರ್ಹವಾಗಿವೆ. ಏಕೆಂದರೆ ಈ ವಿವರಗಳ ಬಗ್ಗೆಬೇರೆ ಯಾವ ಲೇಖಕನು ಹೇಳಿಲ್ಲ. ಈ ದಾಳಿ ನಿಜವಾಗಿ ನಡೆದದ್ದೆ? ಇದು ನಿಜವಾಗಿದ್ದರೆ ಯಾವಾಗ? ಈ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ. ಗೋವಳಕೊಂಡ ಮತ್ತು ಅಹಮದ್‌ನಗರ ಸುಲ್ತಾನರುಗಳ ಇತಿಹಾಸಕಾರರು ಈ ದಾಳಿಗಳ ಬಗ್ಗೆ ಹೇಳಬೇಕಾದದ್ದು ಏನೂ ಇರಲಿಲ್ಲ. ಏಕೆಂದರೆ ಇದು ಅವರ ರಾಜ್ಯಕ್ಕೆ ಸಂಬಂಧಪಟ್ಟ ವಿವರಗಳಲ್ಲ. ಆದರೆ ಬಿಜಾಪುರದ ಇತಿಹಾಸಕಾರನಾದ ಫೆರಿಸ್ತಾ ಈ ಕುರಿತು ಹೇಳಬಹುದಾಗಿದ್ದರೂ ಮೌನವಾಗಿದ್ದಾನೆ. ಇದರ ಅರ್ಥ ಬಿಜಾಪುರದ ಮೇಲಿನ ಅಚ್ಯುತರಾಯನ ದಾಳಿ ಕವಿ ಕಲ್ಪಿತವೇ? ಒಂದೊಮ್ಮೆ ‘ಅಚ್ಯುತರಾಯಭ್ಯುದಯಂ’ನಲ್ಲಿ ಮಾತ್ರ ಇದು ಬಂದಿದ್ದರೆ ಹಾಗೇ ತಿಳಿಯಬಹುದಿತ್ತು. ಆದರೆ ಇನ್ನುಳಿದ ಆಕರಗಳಲ್ಲೂ ಈ ವಿವರ ಸಾಧ್ಯವಿರುವ ಹಿನ್ನೆಲೆಯಲ್ಲಿ ಆ ರೀತಿಯ ನಿರ್ಣಯ ಸಾಧ್ಯವಿಲ್ಲ ಎಂಬ ವಿಷಯವನ್ನು ವೆಂಕಟರಮಣಯ್ಯನವರು ಹೀಗೆ ಹೇಳುತ್ತಾರೆ.

ಅಚ್ಯುತರಾಯನು ಬಿಜಾಪುರ ಸುಲ್ತಾನನೊಂದಿಗೆ ಯುದ್ಧ ಅದರಲ್ಲೂ ರಾಯಚೂರು ಯುದ್ಧವನ್ನು ಡಿಂಡಿಮ ವಿವರಿಸುತ್ತಾನೆ. ರಾಯಚೂರು ಕೋಟೆಯನ್ನು ವಿಜಾಪುರದ ರಾಜನು ತನ್ನ ಬಳಿ ಇಟ್ಟುಕೊಂಡು ಉಳಿದ ಸೀಮೆಯನ್ನು ಆತ ಬಿಟ್ಟುಕೊಟ್ಟು ಶಾಂತಿ ಒಪ್ಪಂದ ಮಾಡಿಕೊಳ್ಳುತ್ತಾನೆ. ಮಲುಕ ಎನ್ನುವವನು ಮಧ್ಯಸ್ಥನಾಗಿರುತ್ತಾನೆ. ಐತಿಹಾಸಿಕ ವಿವರಗಳ ಪ್ರಕಾರ ೧೫೩೦-೧೫೩೫ ಕ್ರಿ.ಶ.ರಲ್ಲಿ ವಿಜಯನಗರ ಸೈನ್ಯವು ವಿಜಾಪುರದ ಸರಹದ್ದಿನಲ್ಲಿ ನುಗ್ಗುತ್ತದೆ. ಇದಲ್ಲದೆ ಬಾರೋಸ್ ಎಂಬ ಪ್ರವಾಸಿ ಕೊಡುವ ವಿವರಗಳಿಗೆ ಡಿಂಡಿಮ ಕೊಡುವ ವಿವರಗಳು ಸರಿಯಾಗಿ ಹೊಂದುತ್ತವೆ. ಈ ವಿವರಗಳನ್ನು ವೆಂಕಟರಾಮಯ್ಯನವರು ತಮ್ಮ ‘Third dynasty of Vijayanagara’ ಎಂಬ ಪುಸ್ತಕದಲ್ಲಿ ತಿಳಿಸುತ್ತಾರೆ.[6]

೧. ಬಿಜಾಪುರ ಸುಲ್ತಾನನ ರಾಜ್ಯದಲ್ಲಿ ದ್ರೋಹ ಮತ್ತು ವಿಜಯನಗರದ ವಿವರವಿದೆ. ಸೈನ್ಯದ ನುಗ್ಗುವಿಕೆ

೨. ಯುದ್ಧದ ಬಗೆಗಿನ ವಿವರ ಲಭ್ಯವಿದೆ.

೩. ಅಸದಖಾನ್ ಬಿಜಾಪುರದ ಆದಿಲ್‌ಶಾಹಿ ಯನ್ನು ತೊರೆದು ವಿಜಯನಗರದ ಅಚ್ಯುತರಾಯನಲ್ಲಿ ಸೇರುತ್ತಾನೆ. ಅವನ ಜೊತೆ ಅಚ್ಯುತರಾಯನು ರಾಯಚೂರಿನ ಸಮೀಪ ಬೀಡು ಬಿಡುತ್ತಾನೆ. ಆದರೆ ಅಸದಖಾನ್ ಮತ್ತು ಆದಿಲ್‌ಶಾಹಿಯ ನಡುವೆ ಸಂದೇಶಗಳ ರವಾನೆ ಆಗಿರುವುದು ತಿಳಿಯುತ್ತದೆ. ಅವನನ್ನು ಬಂಧಿಸಲು ಪ್ರಯತ್ನಿಸುತ್ತಾನೆ. ಇದೇ ವಿವರಗಳು ರಾಜನಾಥನ ಅಚ್ಯುತರಾಯಾಭ್ಯುದಯಂನಲ್ಲೂ ಇವೆ.

ಬಾರೋಸ್ ಮತ್ತು ರಾಜನಾಥ ಇಬ್ಬರೂ ಆದಿಲ್‌ಶಾಹಿಯು ಶಾಂತಿ ಒಪ್ಪಂದ ಮಾಡಿಕೊಳ್ಳುವದನ್ನು ಒಪ್ಪುತ್ತಾರೆ. ಬಹುಶಃ ಬಾರೋಸ್ ಹೇಳುವ ಅಸದಖಾನ್ ಮತ್ತು ರಾಜನಾಥ ಹೇಳುವ ಮಲುಕ ಆಗಿರಬಹುದು.

ಮುಕ್ತಾತುಲಾಪುರುಷದಾನ

ಅಚ್ಯುತರಾಯನು ‘ಮುಕ್ತಾತುಲಾಪುರುಷದಾನ’ವನ್ನು ಕಾಂಚೀವರಮ್‌ನಲ್ಲಿ ನೆರವೇರಿಸಿದನು ಎಂಬುದನ್ನು ರಾಜನಾಥ ಕವಿ ಹೇಳಿದ್ದಾನೆ. ತಿರುವದಿಗೆ ಹೋಗುವ ದಾರಿಯಲ್ಲಿ ದಕ್ಷಿಣಕ್ಕೆ ಶ್ರೀರಂಗiಗೆ ಹೊರಟಾಗ ಅಚ್ಯುತರಾಯನಿಂದ ಕಾಂಚೀವರಮ್ ಕ್ಷೇತ್ರದಲ್ಲಿ ಈ ಕಾರ್ಯ ನಡೆದಿದೆ ಎಂದು ಕವಿ ವರ್ಣಿಸಿದ್ದಾನೆ. ಈ ಘಟನೆಯ ಬಗ್ಗೆ ಕಾಳಹಸ್ತಿ, ಕಾಂಚೀವರಂ[7] ಮತ್ತು ಲೇಪಾಕ್ಷಿಯಲ್ಲಿ ಶಾಸನಗಳು ದೊರೆಯುತ್ತವೆ. ಕಾಳಹಸ್ತಿ ಶಾಸನಗಳ ಪ್ರಕಾರ ಅಚ್ಯುತರಾಯ, ವರದಾಂಬಿಕಾ ಮತ್ತು ಮಗ ವೆಂಕಟಾದ್ರಿ ಇವರ ಮುಕ್ತಾತುಲಾಭಾರ ಕಾರ್ಯಕ್ರಮವನ್ನು ಶ್ರೀಹರಿಯ ಸಾನಿಧ್ಯದಲ್ಲಿ ಕಂಚಿಯಲ್ಲಿ ನೆರವೇರಿಸಲಾಯಿತು. ಈ ದಾಖಲೆ ಶಕ ೧೪೫೫ ಶ್ರಾವಣಶುದ್ಧ ದ್ವಾದಶಿ ರವಿವಾರ ಅಂದರೆ ೧೪, ಜುಲೈ, ೧೫೩೨ ಎಂದು ಹೇಳಬಹುದಾಗಿದೆ. ಈ ಶಾಸನ ಕಾಳಹಸ್ತೇಶ್ವರದ[8] ಪಶ್ಚಿಮದಿಕ್ಕಿನ ೩ನೇ ಪ್ರಾಕಾರದ ಗೋಡೆಯ ಮೇಲೆ ಕೆತ್ತಲಾಗಿದೆ.

. ಶುಭಮಸ್ತು [11*]ಶಾಕೇ ಭೂತಶರಾಂಬುಧೀಂದು ಗಣಿತೇ ವರ್ಷೇ ಪುನರ್ನಂದನೇ ಮಾಸೇ ಶ್ರಾವಣನಾಮಕೇ ವಿಮಲೇ ಪಕ್ಷೇ [ವೇ] ರ್ವಾಸರೇ | ದ್ವಾದಶ್ಯಾಂ ಹರಿಸನ್ನಿಧೌವ್ಯರಚಯನ್ಮುಕ್ತಾ ತುಲಾಪೂರುಷಂ (1) ದಾನಂ ಶ್ರೀ ನರಸ್ಯಾಚ್ಯುತಕ್ಷಿತಿಪತಿಃ ಕಾಂಚೀಪುರಾಭ್ಯಂತರೇ||

. ಮುಕ್ತಾತುಲಾಪುರಂಷದಾವಿಧೌ ….
ಅಚ್ಯುತರಾಯಾಭ್ಯುದಯಂನಲ್ಲಿ ಶ್ಲೋಕ ಹೀಗಿದೆ.
ಪರಿಚರ್ಯಯಾ ಪ್ರಣವಶೀರ್ಷಮಣೀಂ ಪರಿತೋಷ್ಯ ಶಾಙ್ಗಾಣಮಮುಷ್ಯಪುರಃ |
ಅಧಿರೂಢ ಮೌಕ್ತಿಕ ತುಲಾಪುರುಷೋಪ್ಯತುಲೋಜನಿಷ್ಠ ಸದಭೀಷ್ಟಕರಃ || (v.49)

ಅರ್ಥ: ಚೂಡಾಮಣಿ ವರದರಾಜನನ್ನು ಸೇವೆಯಿಂದ ಸಂತೋಷಪಡಿಸಿ ಅವನ ಮುಂದೆ ಮುತ್ತಿನ ತುಲಾಭಾರ ಮಾಡಿಸಿಕೊಂಡು ಸಜ್ಜನರ ಮನೋರಥವನ್ನು ಪೂರ್ಣಗೊಳಿಸಿ ಎಲ್ಲರಿಗೂ ಯಥೇಚ್ಛ ದಾನಮಾಡಿ ಅತುಲನಾದನು.

ಇನ್ನು ‘South Indian Inscriptions’ IXth Volume part ii p. 568 ನಲ್ಲಿ ಕಂಡುಬರುವ ವಿವರಗಳು ಮೇಲಿನ ಅಂಶಕ್ಕೆ ಪುಷ್ಟಿಯನ್ನೊದಗಿಸುತ್ತವೆ.

. ಮುಕ್ತಾತುಲಾಪುರುಷಂ ದಾನಂ ಶ್ರೀಸರಸಾಚ್ಯುತಕ್ಷಿತಿಪತಿಃ ಕಾಂಚಿಪುರಾಭ್ಯಂತರೇ |
ಮುಕ್ತಾತುಲಾಪುರುಷದಾನ ವಿಧೌ ವಕೀರ್ಣಾನ್ ಮುಕ್ತಾಮಣೀನ್ ಸಮಧಿಕಂ ವರದಾಂಬಿಕಾಯಃ |
ದಾನಾಂಬುಪೂರಪರಿತಾನ್ ರಯತಸ್ಸಮೇತ್ಯ ರತ್ನಾಕರತ್ವ ಭಜಲ್ಲವಣಾಕರೋsಪಿ | ಕಾಂಚ್ಯಾಂ
ಶ್ರೀ ಚಿನ್ನ ವೆಂಕಟಾದ್ರಿಮಣಿನಾ ದಾನೇ ತುಲಾಭಾರಕೇ ಸಂಪ್ರತ್ಯಾರಚಿತೇ ದ್ವಿಜಾಸ್ಸಮಭವನ್ನ
ರ್ಥಿತ್ವಭಾರಾಕುಲಾಃ | ದಾತ್ರೀಯಂ ಕಲಿಕಲ್ಮಷಾದಧಿಗತಾಃ …. ಕ್ಷೋಣೀಪಾಲ ಕುಮಾರಾಕಾಃ
ತದಿತರೇ ಭಾರಾಯ ಜಾತಾಭುವಃ ||

. ಶಾಕೇ ಭೂತಶರಾಂಬುಧೀಂದುಗಣಿತೇ ವರ್ಷೇ ಪುನರ್ನಂದನೇ ಮಾಸೇ
ಶ್ರಾವಣಾ ನಾಮಕೇ ವಿಮಲೇ ಪಕ್ಷೇ ರವೇರ್ವಾಸರೇ | ದ್ವಾದಶ್ಯಾಂ ಹರಿಸನ್ನಿಧೌ

ವ್ಯರಚದ್ ಮುಕ್ತಾತುಲಾಪುರುಷಂ …..” ಇದು ಕಾಂಚೀವರಮ್‌ನ ಅರುಲಾಲ ಪೆರುಮಾಳ ದೇವಸ್ಥಾನದ ಎರಡನೇ ಪ್ರಾಕಾರದ ದಕ್ಷಿಣ ಗೋಡನೆಯ ಮೇಲೆ ಇರುವಶಾಸನ. ಇದರ ಪ್ರಕಾರ ಶಕ ೧೪೫೫ ನಂದನ, ಶ್ರಾವಣ ಬಹುಳ ದ್ವಾದಶಿ ಭಾನುವಾರ ಅಂದರೆ ೨೮ ನೇ ಜುಲೈ ೧೫೩೨.

ಈ ತುಲಾಪುರುಷದಾನದ ಜೊತೆಗೆ ೧೭ ಹಳ್ಳಿಗಳ ದಾನವನ್ನು ವರದರಾಜಸ್ವಾಮಿಗೆ ಕೊಟ್ಟದ್ದು ದಾಖಲೆಯಾಗಿದೆ. ಕಾಂಚೀಪುರಮ್‌ನಲ್ಲಿ ತುಲಾಪುರುಷದಾನದ ಉಲ್ಲೇಖವಿದೆ. ಲೇಪಾಕ್ಷಿ(ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ)ಯ ವೀರಭದ್ರದೇವಾಲಯದ ಎರಡನೇ ಪ್ರಾಕಾರದ ಉತ್ತರದ ಗೋಡೆಯ ಮೇಲಿನ ದಾಖಲೆಯು ವೀರೇಶ್ವರದೇವನ ತಾಮ್ರಪಟದ ಪ್ರತಿಯಾಗಿದೆ. ಅದರಲ್ಲಿ ವಂಶಾವಳಿ ಮತ್ತು ಪ್ರಶಸ್ತಿಗಳಿವೆ. ಉನಮಂಜರಿ ತಾಮ್ರಪಟದಲ್ಲಿ ಅಚ್ಯುತನಿಗೆ ಇದ್ದ ಪ್ರಶಸ್ತಿಗಳ ಜೊತೆಗೆ ಅವನ್ನು ಕಾಂಚಿಯಲ್ಲಿ ಶಕೆ ೧೪೫೫ ನಂದನ ಸಂವತ್ಸರದ ತಿಥಿಯಲ್ಲಿ ಮುತ್ತಿನಿಂದ ತುಲಾಭಾರ ಮಾಡಿಸಿಕೊಂಡ ದಾಖಲೆಯಿದೆ. ಕಾಂಚನಾಮೇರು ಎಂಬ ದಾನವನ್ನು ಶಕ ೧೪೫೬ರಲ್ಲಿ ವಿಜಯ ಸಂವತ್ಸರದಲ್ಲಿ ಮಾಡಿದನು ಎಂಬ ಮಾಹಿತಿಯಿದೆ.[9]

ವಿಜಯನಗರ / ವಿದ್ಯಾಪುರ (ನಗರ)

ಅಚ್ಯುತರಾಯನ ರಾಜಧಾನಿ ‘ವಿಜಯನಗರ’ವೆಂದು ಸಾಮಾನ್ಯವಾಗಿ ಕರೆಯಲ್ಪಡುತ್ತದೆ. ಆದರೂ ರಾಜನಾಥ ಕವಿ ಅದನ್ನು ‘ವಿದ್ಯಾಪುರ’ ಎಂದು ಕರೆದಿದ್ದಾನೆ. ಕೇವಲ ಒಂದೇ ಒಂದು ಸಲ ಅಂದರೆ ೧೧ನೇ ಸರ್ಗದ ಕಡೆಯಲ್ಲಿ ಅಚ್ಯುತನು ಬಿಜಾಪುರ ಸುಲ್ತಾನನ್ನು ಗೆದ್ದು ರಾಜಧಾನಿಗೆ ಮರಳುವ ಸಂದರ್ಭದಲ್ಲಿ ಅದನ್ನು ವಿಜಯನಗರವೆಂದು ಕರೆದಿದ್ದಾನೆ. ಅಚ್ಯುತರಾಯನ ರಾಜ್ಯಾಭಿಷೇಕದ ಸಂದರ್ಭದಲ್ಲಿ ನಗರವನ್ನು ವರ್ಣಿಸುವಾಗ ಸಿಗುವ ಹೆಸರು ವಿದ್ಯಾನಗರ.

ವಿದ್ಯಾಪುರೀ ವಿಸ್ಮಯಭೂರಮುಷ್ಯ ವಿಶಿಷ್ಯ ರಾಜ್ಞೋsಜನಿ ರಾಜಧಾನಿ |(I.39)
ಪ್ರತ್ಯಾಯಾಸೀದ್ವಿಜಯನಗರಂ ಪಂಚಷೈರೇವ ವಾರೈಃ || (xi.57)

ರಾಜನಾಥ ಕವಿಯೊಬ್ಬನೇ ರಾಜಧಾನಿಯನ್ನು ವಿದ್ಯಾನಗರವೆಂದು ಕರೆದಿಲ್ಲ. ತಿರುಮಲಾಂಬಾ ಅವರ ವರದಾಂಬಿಕಾ ಪರಿಣಯಮ್ ಮತ್ತು ನಂದಿತಿಮ್ಮಣ್ಣನ ಪಾರಿಜಾತಾ ಪಹರಣಮುನಲ್ಲಿ ನರಸನಾಯಕನು ಕುಂತಳರಾಜನ ತೊಂದರೆಯ ದಿನಗಳಲ್ಲಿ ವಿದ್ಯಾನಗರ ವಿಜಯನಗರವನ್ನು ವಶಪಡಿಸಿಕೊಂಡ ಹಿರಿಮೆಗೆ ಪಾತ್ರವಾಗಿದ್ದಾನೆ. “The annals of Hande Ananthpuram” ಕೃತಿಯಲ್ಲಿ ಕೂಡ ವಿಜಯನಗರವನ್ನು ವಿದ್ಯಾಗನರವೆಂದು ಕರೆಯಲಾಗಿದೆ.

ವಸ್ತು ವಿಷಯ

೧ನೇ ಸರ್ಗ: ಮೊದಲ ಸರ್ಗದಲ್ಲಿ ನರಸನಾಯಕನ ವಿಜಯದ ವಿವರಣೆ ಇದೆ. ನಂತರ ನರಸನಾಯಕನ ಹೆಂಡತಿಯಾದ ಓಬಮಾಂಬೆಯು ಕಥಾನಾಯಕ ಅಚ್ಯುತರಾಯನಿಗೆ ಜನ್ಮವಿತ್ತ ವಿಷಯವಿದೆ.

೨ನೇ ಸರ್ಗ: ರಾಜಕುಮಾರನ ತಾರುಣ್ಯ ಮತ್ತು ವಿದ್ಯಾಭ್ಯಾಸದ ವರ್ಣನೆ.

೩ನೇ ಸರ್ಗ: ರಾಜಾ ನರಸನಾಯಕನಿಗೆ ಓಬಮಾಂಬೆಯಲ್ಲಿ ಅಚ್ಯುತನು ಜನಿಸಿದನು. ಇವರಲ್ಲದೆ ಪ್ಪಾಂಬಿಕೆ ನಾಗಮಾಂಬಿಕೆಯರಲ್ಲಿ ವೀರನೃಸಿಂಹ, ಕೃಷ್ಣದೇವರಾಯ ಎಂಬ ಇಬ್ಬರೂ ಮಕ್ಕಳು ಇದ್ದರು. ವೀರನೃಸಿಂಹನು ಸಮರ್ಥವಾಗಿ ರಾಜ್ಯವಾಳಿದ ನಂತರ ಕೃಷ್ಣದೇವರಾಯನು ಪಟ್ಟಕ್ಕೆ ಬಂದನು. ಅವನು ಬಹಳಷ್ಟು ಕೋಟೆಗಳನ್ನು ಗೆದ್ದನು. ಅದರಲ್ಲಿ ಓರಿಸ್ಸಾದ ಗಜಪತಿಯ ವಶದಲ್ಲಿರುವ ಕೊಂಡವೀಡು ಒಂದು. ಅದರ ಕುರುಹಾಗಿ ಪುಟ್ಟುಪೇಟ್ಟನ ಪುರದಲ್ಲಿ ಜಯಸ್ತಂಭ ನೆಡಿಸಿದನು. ಆ ಪ್ರದೇಶವು ವಿಶಾಖಪಟ್ಟಣ ಜಿಲ್ಲೆಯ ಸಿಂಹಾದ್ರಿಯ ಸಮೀಪದಲ್ಲಿರುವ ಪೊಟ್ಟುನೂರಪುರ ಇರಬಹುದೆಂದು ತೋರುತ್ತದೆ. ಆಮುಕ್ತಮಾಲ್ಯದ, ಮನುಚರಿತ, ಮತ್ತು ಉಳಿದ ಸಮಕಾಲೀನ ಕೃತಿಗಳಲ್ಲಿ ಈ ವಿವರ ಬರುತ್ತದೆ. ಅಚ್ಯುತನ ರಾಜ್ಯಾಭಿಷೇಕವು ಮೊದಲಿಗೆ ತಿರುಪತಿಯಲ್ಲಿ ಆಯಿತು. ಅಲ್ಲಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಅವನ ಕೈಯಲ್ಲಿರುವ ಶಂಖದ ನೀರಿನಿಂದ ಅಚ್ಯುತರಾಯನಿಗೆ ಪವಿತ್ರಸ್ನಾನವಾಯಿತು. ಇದರ ನಂತರ ಅಚ್ಯುತರಾಯನು ವಿದ್ಯಾನಗರಕ್ಕೆ ಹೋಗಿ ಕಿರೀಟಧಾರಣೆ ಮಾಡಿಸಿಕೊಂಡನು. ಜೊತೆಗೆ ವರದಾಂಬಿಕೆ ಮಹಾರಾಣಿಯಾಗಿ ವೆಂಕಟಾದ್ರಿ ಯುವರಾಜನಾಗಿ ನೇಮಕಗೊಂಡರು. ಈ ಕಿರೀಟಧಾರಣೆ ಸಮಯದಲ್ಲಿ ಅಚ್ಯುತನು ಸುವರ್ಣಮೇರು ಎಂಬ ದಾನವನ್ನು ಮಾಡಿದನು.

೪ನೇ ಸರ್ಗ: ರಾಜ್ಯಾಭಿಷೇಕದ ನಂತರ ಒಂದು ದಿನ ಅಚ್ಯುತನ ಮಂತ್ರಿಯು ವೆಂಕಟವಿಲಾಸ ಎಂಬ ಅರಮನೆಯಲ್ಲಿ ಅಚ್ಯುತರಾಯನೊಂದಿಗೆ ರಾಜಕಾರ್ಯವನ್ನು ಕುರಿತು ಹೇಳುತ್ತಾನೆ. ಚೆಲ್ಲಪ್ಪ ಎಂಬ ಅಧೀನ ಆಡಳಿತಗಾರನು ಬಂಡಾಯವೆದ್ದು ಸೋಲಿಸಲ್ಪಟ್ಟಿದ್ದಾನೆ ಮತ್ತು ರಾಜ್ಯದಿಂದ ತಪ್ಪಿಸಿಕೊಂಡು ಹೋಗಿ ಚೇರನಾಡಿನ ತ್ರಾವಣಕೋರ ರಾಜನಲ್ಲಿ ಶರಣಾಗತನಾಗಿದ್ದಾನೆ. ಆ ಚೇರರಾಜ ಮತ್ತು ಚೆಲ್ಲಪ್ಪ ಇಬ್ಬರೂ ಕೂಡಿ ಪಾಂಡ್ಯರಾಜನ ಮೇಲೆ ಯುದ್ಧಮಾಡಿ ಪಾಂಡ್ಯರಾಜನನ್ನು ಓಡಿಸಿದ್ದಾರೆ. ದೇಶಭ್ರಷ್ಟನಾದ ಪಾಂಡ್ಯರಾಜನನ್ನು ರಕ್ಷಿಸಲು ಅಚ್ಯುತನ ಮಂತ್ರಿಯು ಸಲಹೆ ಮಾಡುತ್ತಾನೆ. ಹಾಗೂ ಚೆಲ್ಲಪ್ಪ, ಚೇರ ರಾಜರುಗಳನ್ನು ಶಿಕ್ಷಿಸಲು ಸಲಹೆ ಕೊಡುತ್ತಾನೆ. ಹೀಗೆ ವಿಷಯ ತಿಳಿದುಕೊಂಡು ರಾಜನು ಯುದ್ಧಸನ್ನದ್ಧನಾಗಿ ಹೊರಡುತ್ತಾನೆ.

೫ನೇ ಸರ್ಗ: ಯುದ್ಧಕ್ಕಾಗಿ ಹೊರಟ ಅಚ್ಯುತರಾಯನು ಚಂದ್ರಗಿರಿಗೆ ಕೆಲವು ತಲುಪುತ್ತಾನೆ. ಅಲ್ಲಿ ಸೈನ್ಯವನ್ನು ಬೀಡುಬಿಟ್ಟು ತಾನು ವೆಂಕಟೇಶ್ವರನ ದರ್ಶನಕ್ಕಾಗಿ ಹೋಗುತ್ತಾನೆ. ಅಲ್ಲಿ ದೇವರಿಗೆ ಕರ್ಣಕುಂಡಲ ಇತ್ಯಾದಿ ವಸ್ತ್ರಾಭರಣಗಳನ್ನು ಅರ್ಪಿಸುವನು. ರತ್ನಖಚಿತ ಕಿರೀಟವನ್ನು ಸಮರ್ಪಿಸುವನು. ತದನಂತರ ಕಾಳಹಸ್ತಿಗೆ ತೆರಳಿ ದೇವನನ್ನು ಪೂಜಿಸಿ ದಾನಧರ್ಮಾದಿಗಳನ್ನು ಕೊಟ್ಟು ಅಲ್ಲಿಂದ ಕಂಚಿಗೆ ತೆರಳಿದನು. ಅಲ್ಲಿ ಮುತ್ತಿನ ತುಲಾಭಾರವನ್ನು ಮಾಡಿಸಿಕೊಂಡು ಜನರಿಗೆ ಹಂಚಿದನು. ಕಂಚಿಯಲ್ಲಿ ಕೆಲವು ಕಿರಾತ (ಅರಣ್ಯದಲ್ಲಿನ) ರಾಜರು ಅವನಿಗಾಗಿ ಕಾದು ಕಾಣಿಕೆಗಳನ್ನು ಕೊಟ್ಟರು. ಅವರ ಜೊತೆಗೂಡಿ ದಕ್ಷಿಣದ ಕಡೆಗೆ ಹೋಗಿ ತಿರುವಣ್ಣಾಮಲೈ ತಲುಪಿದನು. ಅಲ್ಲಿ ದೇವರನ್ನು ಆರಾಧಿಸಿದ ಮೇಲೆ ಚೋಳರ ರಾಜ್ಯದಲ್ಲಿ ಪ್ರವೇಶಿಸಿ, ಕೆಲವು ದಿನಾನಂತರ ಶ್ರೀರಂಗಂ ತಲುಪಿದನು. ಅನಂತರ ಅಧಿಕಾರಿಗಳಲ್ಲಿ ಒಬ್ಬನಾದ ಸಲಗರಾಜನ ಮಗನು ಚೆಲ್ಲಪ್ಪನಂತಹ ಸಣ್ಣ ಪಾಳೆಯಗಾರನ ವಿರುದ್ಧ ಸ್ವತಃ ತಾನೇ ಯುದ್ಧಮಾಡುವ ಕುರಿತು ಅಚ್ಯುತರಾಯನಿಗೆ ಸೂಚಿಸುತ್ತಾನೆ.

೬ನೇ ಸರ್ಗ: ಚಕ್ರವರ್ತಿಯ ಅನುಜ್ಞೆ ಪಡೆದ ಆ ದಂಡನಾಯಕನು ದಕ್ಷಿಣದ ಕಡೆಗೆ ತೆರಳಿ ಮದುರೈ ನಗರವನ್ನು ದಾಟಿ ತಾಮ್ರಪರ್ಣಿ ನದಿ ದಡದಲ್ಲಿ ಬಿಡಾರ ಹೂಡಿದನು. ಅಲ್ಲಿಂದ ಆತ ತನ್ನ ಅಂದಿನ ಅಧಿಕಾರಿಯೊಬ್ಬನನ್ನು ಚೇರ ರಾಜನ ವಿರುದ್ಧ ಯುದ್ಧ ಮಾಡಲು ತಿರುವದಿಗೆ ಕಳುಹಿಸಿದನು. ತಿರುವದಿ ರಾಜನು ಸೈನ್ಯ ಸಮೇತನಾಗಿ ಬಂದನು. ಎರಡೂ ಸೈನ್ಯಗಳ ನಡುವೆ ಘೋರಯುದ್ಧ ನಡೆಯಿತು. ಸೋತ ತಿರುವದಿ ರಾಜನು ಶರಣಾದನು. ಅಪರಾಧಿ ಚೋಳರಾಜನನ್ನು ಸೈನ್ಯಾಧಿಕಾರಿಗೆ ಒಪ್ಪಿಸುವ ಜೊತೆಗೆ ಆನೆಕುದುರೆಗಳನ್ನು ಕಾಣಿಕೆ ಯಾಗಿ ಕೊಟ್ಟನು. ದಂಡನಾಯಕನು ಸಾಮ್ರಾಟನ ಪರವಾಗಿ ಕಾಣಿಕೆಗಳನ್ನು ಒಪ್ಪಿ, ಪಾಂಡ್ಯ ರಾಜನನ್ನು ಪುನಃ ಪ್ರತಿಷ್ಠಾನಗೊಳಿಸಿ, ತಾನು ತ್ರಿವೇಂದ್ರಮ್ ಮತ್ತು ಅನಂತಶಯನಂಗಳಿಗೆ ಸ್ಥಳದೈವವನ್ನು ಪೂಜಿಸಲು ಹೊರಟನು.

೭ನೆ ಸರ್ಗ: ಅನಂತಶಯನಂ ನಿಂದ ಸೈನ್ಯಾಧಿಕಾರಿಯು ಸೇತುವಿಗೆ ಹೋಗಿ ಅಲ್ಲಿ ಸಮುದ್ರಸ್ನಾನ ಮಾಡಿದನು. ಅಲ್ಲಿಂದ ಶ್ರೀರಂಗಂಗೆ ಕೆಲವೇ ದಿನಗಳಲ್ಲಿ ತೆರಳಿ ಕವಿ ಮತ್ತು ವಿದ್ವಾಂಸರ ಸಹವಾಸದಲ್ಲಿ ಸಮಯ ಕಳೆಯುತ್ತಿರುವ ಸಾಮ್ರಾಟನನ್ನು ಕೂಡಿಕೊಂಡನು. ಚೇರ ರಾಜನನ್ನು ಮತ್ತು ಇತರ ಕೈದಿಗಳನ್ನು ಅಚ್ಯುತರಾಯನಿಗೆ ಒಪ್ಪಿಸಿ ತನ್ನ ಜೈತ್ರಯಾತ್ರೆಯ ವಿವರಗಳನ್ನು ನೀಡಿದನು. ಪಾಂಡ್ಯದೊರೆಯ ರಾಜ್ಯವನ್ನು ಅತಿಕ್ರಮಿಸಿದ ಚೇರರಾಜನನ್ನು ಶಿಕ್ಷಿಸುವಂತೆ ಅಚ್ಯುತನು ಆಜ್ಞೆಯಿತ್ತು, ಪಾಂಡ್ಯರಾಜನಿಗೆ ಅವನ ಪೂರ್ವಜರಿಂದ ಬಂದ ರಾಜ್ಯವನ್ನು ಮರಳಿ ಕೊಡಿಸಿದನು.

೮ನೇ ಸರ್ಗ: ಅಚ್ಯುತರಾಯನ ಬಿಡಾರದ ಜೀವನ ಶೈಲಿ ಮತ್ತು ವಿಲಾಸ ವರ್ಣನೆ.

೯ನೇ ಸರ್ಗ: ರಾಜವೈಭೋಗದ ವರ್ಣನಾ ವಿಲಾಸ.

೧೦ನೇ ಸರ್ಗ: ಅಚ್ಯುತನು ಕಾವೇರಿ ತೀರದಗುಂಟ ಹೊರಟು ಶ್ರೀರಂಗಪಟ್ಟಣ ತಲುಪಿ ಅಲ್ಲಿ ಹೇರಳ ಧನಕನಕಗಳನ್ನು ಪಡೆದು ಅಲ್ಲಿಂದ ಉತ್ತರಕ್ಕೆ ತೆರಳಿ ತನ್ನ ರಾಜ್ಯದ ಗಡಿ ದಾಟಿ ಬಿಜಾಪುರದ ಸುಲ್ತಾನನ ಗಡಿ ಪ್ರವೇಶಿಸಿದನು.

೧೧ನೇ ಸರ್ಗ: ಅಚ್ಯುತನು ಹಯಪತಿಯ ರಾಜ್ಯವನ್ನು ಪ್ರವೇಶಿಸಿ, ಸುಲ್ತಾನನ ಸೈನ್ಯದಿಂದ ರಕ್ಷಿತವಾದ ರಾಯಚೂರು ಕೋಟೆಯನ್ನು ಮುತ್ತಿದನು. ಈ ಮುತ್ತಿಗೆಯ ದೀರ್ಘ ವಿವರಣೆಯಿದೆ. ಸುಲ್ತಾನನು ರಾಯಚೂರು ಕೋಟೆಗೆ ಹೆಚ್ಚುವರಿಯಾಗಿ ಸೈನ್ಯ ಕಳುಹಿಸಿದನು. ಎರಡೂ ಸೈನ್ಯಗಳ ಮಧ್ಯೆ ನಡೆದ ಘೋರಯುದ್ಧವನ್ನು ವರ್ಣಿಸಲಾಗಿದೆ. ಅಲ್ಲಿಯ ಯವನ ರಾಜನಿಗೆ ಸೋಲಾಯಿತು. ಅಚ್ಯುತರಾಯನು ವಿರೋಧಿ ಸೈನ್ಯದ ಆನೆ ಮತ್ತು ಕುದುರೆಗಳನ್ನು ವಶಪಡಿಸಿಕೊಂಡ ನಂತರ, ಸುಲ್ತಾನನು ತನ್ನ ಸೈನ್ಯ ಬೀಡುಬಿಟ್ಟ ಕೃಷ್ಣಾನದಿಯ ದಂಡೆಗೆ ಹೋದನು. ಕೃಷ್ಣಾನದಿಯ ತೀರದಲ್ಲಿ ಸುಲ್ತಾನನ ಸೈನ್ಯ ಮತ್ತು ರಾಜನ ಸೈನ್ಯಗಳೆರಡೂ ಜಮಾಯಿಸಿದ್ದವು. ಆಗ ಸುಲ್ತಾನನು ತನ್ನ ಸೈನ್ಯವನ್ನು ಅಲ್ಲಿಯೇ ಬಿಟ್ಟು ಕುದುರೆಯನ್ನು ಏರಿ ನದಿಯನ್ನು ದಾಟಿ ಅಚ್ಯುತನಲ್ಲಿ ತನ್ನ ಶರಣಾಗತಿಯನ್ನು ಬಯಸಿದನು. ಅಚ್ಯುತನು ಅವನ ಶರಣಾಗತಿ ಒಪ್ಪಿ ಬಹಳ ಕಾಲದ ನಂತರ ವಿಜಯನಗರಕ್ಕೆ ಮರಳಿದನು.

೧೨ನೇ ಸರ್ಗ: ಅಚ್ಯುತನ ವೈಭವಪೂರ್ಣ ಮತ್ತು ಉತ್ಸಾಹದ ಆಗಮನ ಹಾಗೂ ಪ್ರಜೆಗಳ ಹರ್ಷ, ವೈಭವದ ಸ್ವಾಗತದ ವಿವರವಿದೆ. ಈ ಸರ್ಗ ಅಪೂರ್ಣಗೊಂಡಿದೆ ಎಂಬುದು ಕೆಲವು ವಿದ್ವಾಂಸರ ವಾದವಾಗಿದೆ.


[1] ಕಾಸಾಶಾಸನ ಮತ್ತು ಅಹೋಬಲಮ್ ದಾಖಲೆ [242 of 1892 Ep.Ind, Vl, p.230] ಮತ್ತು [Ep Ind, Vl, p.131; 255 of 1892] ಮಂಗಳಗಿರಿ ಸ್ತಂಭಶಾಸನ [Ep.Ind, Vl, p.108; 257 of 1892] ಗಳಲ್ಲೂ ಇದೇ ವಿವರ ಲಭ್ಯವಿವೆ.

* “After Vira Narasimha, Krishna Raya ascended the throne and was a terror to his enemies. He captured many fortress like Kondavidu from his enemy the Gajapati of Orissa and planted a pillar of victory at patupettanurpura. This last name seems to have been miswritten for Pottunura pura near Simhadri in theVizagapatam dist where according to the Amukta Malyada, manucharitra and other contemporary works. he said to have planted his pillar of victory” (158 Sources of Vijayanagara History)

[2] ಅಮುಕ್ತಮಾಲ್ಯದಾ ಕೃತಿಯಲ್ಲೂ ಅಚ್ಯುತರಾಯಾಭ್ಯುದಯಂ ಕಾವ್ಯದ ಅನೇಕ ಅಂಶಗಳು ಸರಿಸಮವೆನಿಸುತ್ತವೆ. “Krishna Raya then gives a genealogy of his family from the moon of his own achievements which he gives us in the words of his court poets, he has a long account. The fire of his valour which was kindled by his sword coming in cotact with the rocks of Udayagiri advanced to Kondavidu and after defeating Kasavaputra, crossed the Jammiloya and reduced successively the district of vegi (vengi), Kona (the Godavari delta) and Kottamu cuttack so that the Gajapati fled from there. In another verse the uriya-speaking patras of the Gajapati’s army are said to have gone from Kondavidu to heaven in large numbers having been defeated by Krishna Raya. Later on Krishna Raya is represented as having planted a tall pillar with inscriptions on it potnuru to commemorate his victory over the Gajapati”(p.133 Sources of Vijanagara History)

[3] “Achyuta whom Krsnadeva nominated as his successor Seems to have to vijayanagara to asceund the throne form his prison at chandragiri, ‘Where he was however, astudy of the inscriptions Seems to indicate that Achyuta was enjoying freedom for three or four years before the death of his brother. Thus as inscription from Kammrapudi in the Nellore dist dated saka 1448 parthiva ( A.D. 1526) States that he was ruling the kingdom of the world, seated on his diamond throue at vijayanagara. Another from Hospete in the sidloghatta taluka of the Mysore state dated saka 1450 Sarvadhari (1528) mentions him with imperial titles and states that he was ruling from vijayanagara. It appears form these records that Achyuta Was ruling as the coronation was Celebrated in A.D. 1530” (P.3 Third dynasty of Vijayanagara)

[4] “Before the death of crisnarao from his disease….being sick and already despairing of his life, he made a will, saying that of his three brothers whom he had sent to be confined in the fortress of chamdegary, with his nephew, son of king Busbalrao, they should make king, his brother Acheta rao. After his (Crisnarao’s) death, salvany became minister of the kingdom. and governed it till the arrival of king Achetarao from the fortress of Chandegary, where he was detained.”

[5] ನ್ಯೂನಿಜ್ ಪ್ರಕಾರ “Besides, Salvany, Saluva Nayaka of Saluva Narashingaraya Dannayaka the most powerful nobleman in the empire, had declared himself to be a partisan of Achyuta. He was the governor of the cola country and was ‘the lord of charamaodel, Negapatao, Tamgor, Bomgarin, Dapatao, Trueguel and cauullin. His territories were very large and they bordered upon ceylon. He maintained an army consisting of thirty thousand foot, and three thousand horse and thirty elephants. He Seems to have seized tehthrone on behalf of Achyuta and held it until the arrival of the latter from Chandragiri. “salvany became the minister of the kingdom. “says Nuniz and governed it till the coming of Achetarao form the fortress of Chandegary Where he was detained” (P.13, Third dynosty of Vijayanagara)

[6] “According to an Epigraph*(No.47 of 1900 dated A.D. 1534) 1534-35, Achyuta lay encamped in that year on the banks of the Krisna, Radhamadhava, a contemporary of Dindima the author of the Achyutarayabhyudayam, refers also to Achyuta’s victory over the Adilshah. The Portugese writers allude also to the main events of this invasion”. (P. xxii – xxiii Third dynesty of Vijayanagara)

* (No. 47 of 1900) dated A.D. 1534 according to which Achyuta Raya made a grant for the merit of his mother)

[7] No. 559 (A.R.No.580 of 1912)

on the north wall of the second prakara of the virabhadra temple at lepakshi, hindupur taluk, Anathapur Dist

This is damaged at the end. The Kanarese statement at the beginning says that this is a copy of the copper plate inscription registering the grant of certain villages for the service of the god Viresvara. i,e. Virabhadradeva of Lepakshi. The rest of the record is in sanskrit verse giving the genealogy of the Tuluva line of kings and mentioning their various conquests and gifts. The numerous gifts made by king Achyutaraya to whose reign the record belongs the record belongs are also mentioned. The verse that was recited by Oduva Tirumalamma about the gift of Suvarnameru in Saka 1455, Vijaya, is also found here.

[8] No. 549 (A.R.No. 178 of 1924)

on the west wall of the third prakarna of the kalahasttsvara temple at kalahasti, chandragiri taluk, chittoor dist.

This is dated Saka 1455, Nandana, Sravana, Su.12, Ravivasara Corresponding to A.D. 1532 July 14, Sunday in the reign of Achyutadeva-Maharaya. It records that the king, his queen, varadambika, and his son, Chika-Venkatadri, severally performed the mukta tulabhara ceremony in the presence of god Hari at Kanchi. The record is written in Sanskrit verse.

[9] No. 557 (A.R. No.9 of 1904)

on the north base of the central shrine of the vitthalesvara temple at hampi, hospet taluk, bellary dist

This dated saka 1455, Vijaya, Marhasira, Su.II Guruvara Corresponding to A.D. 1533 December II, Thursday, in the reign of Achyutadevaraya – Makaraya. It records the Sanskrit verse Sung by Tirumalamma, about the gift of Suvarna meru. Made by the king in the presence of god Vittalesvara.

ಶುಭಮಸ್ತು | ಶ್ರೀ ಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಅಚ್ಯುತದೇವರಾಯ ಮಹಾರಾಯರು ವಿಜಯಸಂವತ್ಸರದ ಮಾರ್ಗಶೀರ್ಷ ಶಂ. ೧೧ ಗುರುವಾರ ದಲಿ ತುಂಗಭದ್ರಾತೀರದಲಿ ಶ್ರೀವಿಠಲೇಶ್ವರನ ಸಂನ್ನಿಧಿಯಲ್ಲಿ ಮಾಡಿದ ಸುವರ್ಣಮೇರುದಾನಕ್ಕೆ ವೋದುವ ತಿರುಮಲಂಮನವರು ಹೇಳಿದ ಶ್ಲೋಕವಿದು.

South Indian inscriptions IX Vol. Part ii ರ ಪು. ೫೭೭ರಲ್ಲಿ

ಬಾಣ ಪ್ರಾಣ ಪಯೋಧಿಶೀತಕರಸಂಖ್ಯಾತೇ ೧೫.      (Saka 1455) ಶಕೇ ವತ್ಸರೇ ವಿಖ್ಯಾತೇ ವಿಚಿಯೇ ಚ ಮಾಸಿ ಸಹನೆ ಸ್ವಚ್ಛೇ ಚ ಪಕ್ಷೇ ಗುರೋಃ ೧೫. | ವಾರೇ ವಿಷ್ಣು ದಿನೇ ಶುಭೇ ಪರಿಸರೇ ಶ್ರೀ ವಿಠ್ಠಲಾಧಿಶಿತುಃ ಧೀರ ಕಾಂಚನ ಮೇರುದಾನವಕರೋ ದ್ವಿರೋsಚ್ಯುತಃ ಕ್ಷ್ಮಾಪತಿಃ||