. ಪ್ರಹಿತಃ ಪಯೋಧಿರಶನಾಪತಿನಾ
ಸಲಗೇಂದ್ರ ಸಿಂಧೂರಮಣೇಂದುರಯಮ್ |
ಅಗಮಾದ್ವಿಲಂಘ್ಯ ಮಧುರಾಂ ಮಹತೀ
ಮಥ ತಾಮ್ರಪರ್ಣ್ಯಭಿಹಿತಾಂ ಸರಿತಮ್ ||

ಸಮುದ್ರಮೇಖಲೆಯಾದ ಭೂಮಿಯ ಪತಿಯಾದ ಅಚ್ಯುತರಾಯನಿಂದ ಕಳುಹಿಸಿಲ್ಪಟ್ಟ ಸಲಗರಾಜನೆಂಬ ಸಮುದ್ರಕ್ಕೆ ಚಂದ್ರನಂತಿರುವ ಸಲಗರಾಜಪುತ್ರನು ಬೃಹತ್ ಮಧುರಾ ಪಟ್ಟಣವನ್ನು ದಾಟಿ ತಾಮ್ರಪರ್ಣಿ ಎಂದು ಕರಯಲಾಗುವ ನದಿಯ ತೀರಕ್ಕೆ ಬಂದನು.

. ಪೃಥುಮೌಕ್ತಿಕೋಪಲಚಯೈರ್ಲಹರೀ
ಭರಪಾಶಯಂತ್ರರಭಸೋಚ್ಚಲಿತೈಃ |
ಅಭಿತೋ ಮೃಗೀಶುಕಕುಲಾಕ್ರಮಣಾ
ದಭಿಪಾಲಿತಾಂತಿಕಮಹೀಕಲಮಾಮ್ ||

ಈ ಪದ್ಯದಿಂದಾರಂಭಿಸಿ ಮೇಲಿನ ಶ್ಲೋಕದಲ್ಲಿ ಹೇಳಲಾದ ನದಿ ಕುರಿತ ವಿಶೇಷಣಗಳಿವೆ. ಸುತ್ತಲೂ ಅಲೆಗಳಿಂದ ಕೂಡಿದ, ಅತ್ಯಂತ ಶ್ರೇಷ್ಠವಾದ ಮುತ್ತುಗಳೆಂಬ ಕಲ್ಲುಗಳ ಸಮೂಹಗಳಿಂದ, ಜಿಂಕೆ, ಗಿಳಿಗಳ ಗುಂಪಿನ ಕಲರವದಿಂದ, ರಕ್ಷಿಸಲ್ಪಟ್ಟು ಒತ್ತೊತ್ತಾಗಿ ಬೆಳೆದಿರುವ ಕೇದಾರ ಮರಗಳಿಂದ ಕೂಡಿರುವ

. ನಿಬಿಡೋರ್ಮಿಕಾಪವನಶೋಧನಯಾ
ನಿಯತಂ ಪಯಃಪೃಷತಸೇಚನತಃ |
ಶುಚಿಮೌಕಾಕ್ತಿಕೌಧಕುಸುಮಪ್ರಕರೈಃ
ಸ್ವಸಮಾಗಮಾರ್ಹಮುಪಚಾರಕರಿಮ್ ||

ಸತತವಾದ ತರಂಗಗಳ ಆವೃತ್ತಿಯಿಂದ, ನಿಯತವಾದ ಜಲಬಿಂದುಗಳನ್ನು ಸಿಂಪಡಿಸುವದರಿಂದ, ನಿರ್ಮಲವಾದ ಮುತ್ತುಗಳ, ಹೂವುಗಳ ಹರಡುವಿಕೆಯಿಂದ ತನ್ನ ಪ್ರವಾಹಕ್ಕನುಗುಣವಾಗಿ ಸತ್ಕಾರವನ್ನು ಮಾಡುತ್ತದೆ.

. ಅಭಿಶಂಕ್ಯ ಹಾಸ್ತಿಕರಾಂಚಲತೋ
ನಿಜಭಂಜನಂ ನಿಕಟಭೂಮಿರುಹಃ |
ಪ್ರತಿಬಿಂಬ ಸಂಪದವಲಂಬನತಃ
ಪ್ರವಿಶಂತಿ ಯತ್ರ ಭಯವಂತ ಇವ ||

ಆನೆಗಳ ಸೊಂಡಿಲಿನಿಂದ ತಾವು ಮುರಿದುಹೋಗುವುದನ್ನು ಶಂಕಿಸಿ, ತೀರದಲ್ಲಿರುವ ವೃಕ್ಷಗಳು ಪ್ರತಿಬಿಂಬಕ್ಕಾಗಿ ತಾಮ್ರಪರ್ಣಿನದಿಯನ್ನೇ ಭಯಾಧಿಕ್ಯದಿಂದ ಆಶ್ರಯಿಸುತ್ತಿದ್ದವು.

. ನಭಸಃ ಪ್ರಸಾದಮವಲುಂಟಯಿತುಂ
ಲಘು ಚಾಲಿತಾಲ್ಲಹರಿಭೋಗಿಮುಖಾನ್ |
ಅವಪತಿತೈಃ ಕಿಮಭಿತೋ ವರಣೈ
ರನುಬಿಂಬನೈ ಸ್ಫುರತಿ ಯಾಂಬುಮುಚಾಮ್ ||

ತಾಮ್ರಪರ್ಣಿಯು ಆಕಾಶದ ನೈರ್ಮಲ್ಯವನ್ನು ಕದಿಯಲು, ವೇಗವಾಗಿ ಚಲಿಸುವದಕ್ಕಾಗಿ ಅಲೆಗಳನ್ನೇ ಹಾವಿನರೂಪದ ಆಯುಧವನ್ನಾಗಿಸಿ ಸುತ್ತಲೂ ಕೋಟೆಯಂತೆ ಬಿದ್ದಿರುವ ಮೇಘಗಳ ಪ್ರತಿಬಿಂಬಗಳಿಂದ ಶೋಭಿಸುತ್ತದೆ.

. ಸಲಿಲಭ್ರಮಾವಿರತಜೃಂಭಿಕಯಾ
ತವಮೃತ್ತಿಕಾಹರಣದೋಹಲತಃ |
ಅಪಿ ಫೇನಖಂಡಸಿತಗಂಡತಯಾ
ವಿವೃಣೋತಿ ಸತ್ತ್ವಮಿವ ಯಾ ವಿಧೃತಮ್ ||

ಜಲಾವರ್ತಗಳಿಂದ ಸತತವಾಗಿ ಆಕಳಿಕೆಯಿಂದ ಕೂಡಿರುವ, ತೀರದ ಮಣ್ಣನ್ನು ಅಪಹರಿಸಿ ತಿನ್ನುವ ಅಭಿಲಾಷೆಯುಳ್ಳ, ನೊರೆಗಳಿಂದ ಬಿಳಿದಾದ ಕಪೋಲಗಳನ್ನು ಹೊಂದಿರುವ ತಾಮ್ರಪರ್ಣಿ ನದಿಯು ಸೊರಗಿ ಜೀವಜಂತುಗಳಿಂದ ಸಮೃದ್ಧವಾಗಿ ಪ್ರಕಾಶಿಸುತ್ತಿತ್ತು. ಗರ್ಭಿಣಿಸ್ತ್ರೀಯ ಚಿಹ್ನೆಗಳನೊಳಗೊಂಡು ಆಲಸ್ಯವುಳ್ಳಂತೆ ತೋರುತ್ತಿತ್ತು.

. ಅವಲೋಕ್ಯಯತ್ಪಯಸಿ ವಾರಿಮುಚಾ
ಮನುಬಿಂಬಮಾಕಲಿತಪಂಕಧಿಯಃ |
ಅವಗಾಹನಾಯ ಪದಮರ್ಪಯಿತುಂ
ಚಕಿತಾ ಭವಂತಿ ಮದಪೇಚಕಿನಃ ||

ಮದೋನ್ಮತ್ತವಾದ ಆನೆಗಳು ತಾಮ್ರಪರ್ಣಿನದಿಯಲ್ಲಿ ಮೇಘಗಳ ಪ್ರತಿಬಿಂಬವನ್ನು ನೋಡಿ ಮನಸ್ಸಿನಲ್ಲಿ ಕೆಸರು ಮೂಡಿದಂತಾಯಿತು. ಈ ಕಾರಣದಿಂದಾಗಿ ಸ್ನಾನ ಮಾಡಲು ನೀರಿನಲ್ಲಿ ಪಾದವಿಡಲು ಹೆದರಿದವು.

. ಅಲಿನಾಂ ನಿಸುಮ್ಯ ಕಲಗಾನಸಂಧಾ
ಮರವಿಂದಸಂತತಿಷು ಕಂದಲಿತಾಮ್ |
ಪ್ರಮದೇನ ಯಾ ವಿವೃಣುತೇ ಪುಲಕಾ
ನ್ಪ್ರಥಮಾನಶೈವಲಪಲಾಶಮಿಷಾತ್ ||

ತಾಮ್ರಪರ್ಣಿಯು ಪದ್ಮಖಂಡಗಳಲ್ಲಿ ಹೆಚ್ಚಾಗಿರುವ ಭೃಂಗಗಳ ಮಧುರ ಗಾನವನ್ನು ಕೇಳಿ ಸಂತೋಷಗೊಂಡು ನೆಪದಿಂದಲೋ ಎಂಬಂತೆ ಪಾಚಿ ರೂಪದಿಂದ ರೋಮಾಂಚನವನ್ನು ಪ್ರಕಟಿಸುತ್ತಿತ್ತು.

. ಅಧಿವಾರಿಜಾತಮುಖಮರ್ಪಯಿತುಂ
ಮಧುಪೈಣನಾಭಿತಿಲಕಂ ಮಹಿತಮ್ |
ಪ್ರತಿಬಿಂಬಿತದ್ಯುಮಣಿಬಿಂಬಮಿಷಾ
ದ್ವಹತೀವ ಯಾ ಮುಕುರಮೂರ್ಮಿಕರೇ ||

ಕಮಲಗಳೆಂಬ ಮುಖಕಮಲದಲ್ಲಿ ಶ್ರೇಷ್ಠವಾದ ಭ್ರಮರಗಳಿಂದ ಉಂಟಾದ ಕಸ್ತೂರಿತಿಲಕವನ್ನು ಅರ್ಪಿಸಲು ತನ್ನಲ್ಲಿ ಪ್ರತಿಫಲಿತಗೊಂಡ ಸೂರ್ಯಮಂಡಲವನ್ನೆ ನೆಪವಾಗಿಸಿ ತಾಮ್ರಪರ್ಣಿ ನದಿಯು ತರಂಗಗಳೆಂಬ ಹಸ್ತಗಳಿಂದ ಕನ್ನಡಿಯನ್ನು ಹಿಡಿದುಕೊಂಡಿದೆಯೋ ಎಂಬಂತಿದೆ.

೧೦. ಪತದುತ್ಪತಜ್ಜಲಪತದ್ಘುಟಿಕಾ
ವಿಹೃತಿ ವ್ಯಪಾಹೃತನಿಮೇಷತಯಾ |
ಅಭಿವೃದ್ಧಮಶ್ರು ಕಿಲ ಯಾ ಭಜತೇ
ಮಕರಂದಬಿಂದುಮರವಿಂದದೃಶಿ ||

ಇಳಿಯುತ್ತಿರುವ, ಮೇಲಕ್ಕೇರುವ, ಹಾರಾಡುತ್ತಿರುವ ಜಲಪಕ್ಷಿಗಳು ಗೋಲಾಕಾರದಲ್ಲಿ ವಿಹರಿಸುತ್ತಿದ್ದವು. ಅವುಗಳಿಂದ ರಕ್ಷಿಸಿಕೊಳ್ಳಲು ಕಮಲಗಳು ಮುಚ್ಚುವ, ತೆರೆಯುವ ಕಣ್ಣುಗಳಿಂದ ಹೆಚ್ಚಾಗಿ ಕಣ್ಣೀರು ಬಂದು ಮಕರಂದ ಉಂಟಾಗುತ್ತದೆ.

೧೧. ಶರಧಾರಯೈವ ಬಕಚಾಮರವ
ತ್ಕುಟಿಲೋರ್ಮಿಚಾಪಕುಹರೋದ್ಗತಯಾ |
ಪ್ರತಿಕೂಲಭೇದನಕರೀ ಪ್ರಥತೇ
ಸ್ಫುಟವಾಹಿನೀವಿಲಸಿತಾ ಭುವಿ ಯಾ ||

ಬಲಾಕಗಳೇ ಚಾಮರವಾಗಿ ಉಳ್ಳ, ಚಕ್ರಾಕಾರವಾಗಿರುವ ಅಲೆಗಳೆಂಬ ಧನುಸ್ಸಿನ ಮಧ್ಯದಿಂದ ಹೊರಟ ಬಾಣಗಳ ಸುರಿಮಳೆಯಿಂದ ಜಲಪ್ರವಾಹರೂಪದಿಂದ ಪ್ರತಿಕೂಲವಾದ ಶತ್ರುಸೈನ್ಯವನ್ನು ಭೇದಿಸಿ ಹೊರಟಿರುವ ವಾಹಿನಿ | ಸೈನ್ಯದ ವಿಲಾಸದಂತೆ ಈ ನದಿಯು ಪ್ರವಹಿಸಿ ಭೂಲೋಕದಲ್ಲಿ ಪ್ರಸಿದ್ಧವಾಗಿದೆ.

೧೨. ಕುಟಿಲಭ್ರಮಾಲಿಲಗುಡ ಭ್ರಮಣಾ
ಚ್ಛಫರೀಕೃಪಾಣಶತಚಾಲನತಃ |
ಅವಗರ್ಜನಾನ್ನರಪತೇಃ ಸುಭಟಾ
ನನುಯಾತಿ ಪತ್ರಿಭರಣಾದಪಿ ಯಾ ||

ಮಂಡಲಾಕಾರವಾಗಿ ಸುತ್ತುವ ಸುಳಿಗಳ | ಭ್ರಮರಗಳ ಪಂಕ್ತಿಯಲ್ಲಿಯೇ ಕೋಲಿನಿಂದ ತಿರುಗಿಸುವ ಮತ್ಸ್ಯ ವಿಶೇಷದಿಂದ ಹುಳುಗಳು | ಖಡ್ಗಗಳು ನೂರಾರು ಯೋಜನ ಚಲಿಸುವುದರಿಂದ ನೀರಿನ ಧ್ವನಿಯಿಂದಲೇ | ಸಿಂಹನಾದದಿಂದ, ಪಕ್ಷಿಗಳ | ಬಾಣಗಳನ್ನು ಪೋಷಿಸಿದರೂ | ಧರಿಸಿದರೂ ಕೂಡ ರಾಜನನ್ನು ಸೈನಿಕರು ಅನುಸರಿಸುವಂತೆ ಸುಳಿಗಳು ನದಿಪ್ರವಾಹವನ್ನು ಅನುಸರಿಸುತ್ತವೆ.

೧೩. ಅದಸೀಯರೋಧಸಿ ನಿವೇಶಮಸಾ
ವವಕಲ್ಪ್ಯ ದರ್ಪಭರಿತಸ್ಯ ರಿಪೋಃ |
ವ್ಯಸೃಜದ್ವಿಮಾಧಿಕರಣಾಭಿಮನಾಃ
ಪೃತನಾಪತಿಂ ಪುರತೋ ನೃಪತಿಃ ||

ಸಲಗರಾಜಕುಮಾರನು ಅದೇ ತಾಮ್ರಪರ್ಣಿ ದಡದಲ್ಲಿ ಸೇನೆಯು ತಂಗಲು ವ್ಯವಸ್ಥೆ ಮಾಡಿ ಗರ್ವದಿಂದ ಕೂಡಿದ ಶತ್ರುವಿನ ನಾಶಕ್ಕೆ ಉತ್ಕಂಠಿತನಾಗಿ ಮುಂದೆ ಸೇನಾಪತಿಯನ್ನು ಕಳುಹಿಸಿದನು.

೧೪. ಅಥ ನಿರ್ಯಯೌ ಮತೀವಿಪರ್ಯಯತೋ
ಗಿರಿದುರ್ಗಮೇಯಜಯತೂರ್ಯರವಃ |
ಸಂಗರಾಯ ಚತುರಂಗಬಲೈ
ಸ್ತಿರಯಂದಿಶಸ್ತಿರುವಟಿಕ್ಷಿತಿಪಃ ||

ಅನಂತರ ತಿರುವಟಿರಾಜನು (ಅನಂತಶಯನರಾಜನಿಗೆ ‘\ರುವಟಿ’ ಎಂಬ ಬಿರುದು ಇತ್ತು) ಪರ್ವತಗಳಲ್ಲಿ, ಗುಹೆಗಳಲ್ಲಿ ಪ್ರತಿಬಂಧಿಸಲಾಗದ ಜಯಭೇರಿ ಶಬ್ದದೊಂದಿಗೆ, ಚತುರಂಗಬಲ ಸೈನ್ಯದೊಡನೆ ಯುದ್ಧಕ್ಕಾಗಿ ಹೊರಟನು.

೧೫. ಉಭಯೋರ್ವ್ಯರಾಜದುರುಸೈನಿಕಯೋಃ
ಕ್ಷಣಮಂತರಾಲವಸುಧಾ ವಿತತಾ |
ವಿಹಿತೋsವಕಾಶ ಇವ ವೀರರಮಾ
ವಿಬುಧೀಸ್ವಯಂವರ ವಿಹಾರಕೃತೇ ||

ಎರಡೂ ಸೈನ್ಯಗಳ ಸೈನಿಕರುಗಳು ವಿಶಾಲವಾದ ಭೂಮಿಯಲ್ಲೆಲ್ಲಾ ವ್ಯಾಪಿಸಿದರು. ವೀರಲಕ್ಷ್ಮಿ ದೇವತೆಯ ಸ್ವಯಂವರಕ್ಕಾಗಿಯೇ ವ್ಯವಸ್ಥೆಮಾಡಿದ ಪ್ರದೇಶದಂತೆ ಆ ಕ್ಷಣ ಶೋಭಿಸಿತು.

೧೬. ಪೃಥಗಾಸಿಕಾನಾಂ ಪೃತನಯೋಃ ಶ್ರೀತಯೋ
ರವಕಾಶಭೂರಜನಿ ಯಾ ಮಹತೀ |
ಯುತಯೋರ್ಮಿಥೋ ಯುಗಪದಾಕ್ರಮಿತುಂ
ಚಕಿತೇವ ಸಾ ಚರಮಭಾಗಮಗಾತ್ ||

ಎರಡು ಸೈನ್ಯಗಳು ಬೇರೆಬೇರೆಯಾಗಿ ನಿಲ್ಲದೇ ತಮಗೆ ತೋರಿದಂತೆ ವಿಶಾಲವಾದ ಭಾಗದಲ್ಲಿ ನಿಂತಿರುವದರಿಂದ ಭೂಮಿಯ ಕೇಂದ್ರದಂತಾಯಿತು. ಆಗ ಭೂಮಿಯನ್ನು ಏಕಕಾಲಕ್ಕೆ ಪರಸ್ಪರರು ಆಕ್ರಮಿಸಲು ತೊಡಗಿದ್ದಾಗ ಭೀತಿಂದ ಇತರ ಭಾಗಗಳಿಗೆ ಹೋದರು.

೧೭. ಅವಿಕುಂಠವೇಗಹಯಮಂಡಲಿಕಾ
ಖುರಷಂಡತಾಂಡವಿತಮುಂಡಶತಮ್ |
ಭುಜದಂಡಕುಂಡಲಿತಚಂಡಧನು
ಶ್ಚ್ಯುತಕಾಂಡಹಿಂಡಿತವಿಶುಂಡಗಜಮ್ ||

ಸರಿಸಾಟಿಯಿಲ್ಲದ ವೇಗದಿಂದ, ಗೊರಸುಗಳಿಂದ ನರ್ತನ ಮಾಡುತ್ತ ದೂರದಲ್ಲಿ ಬಿದ್ದಿರುವ ಕುದುರೆಗಳ ನೂರಾರು ತಲೆಗಳು ಬಾಹುಬಲದಿಂದ ಚಕ್ರಾಕಾರವಾಗಿ ಧನಸ್ಸನ್ನು ತಿರುಗಿಸುತ್ತಿರುವಾಗ ಭಯಂಕರವಾದ ಬಾಣಗಳಿಂದ ತುಂಡರಿಸಲ್ಪಟ್ಟು ದೂರದಲ್ಲಿ

೧೮. ಮದಧನ್ಯಸಾಮಭವಸೈನ್ಯಕರೋ
ಪರಿನುನ್ನದಂತವಿಧೃತಾನ್ಯಭಟಮ್ |
ಶರಪಾತವಿತಗುಣಯೋಧಧನು
ಸ್ತ್ವರಿತಾಧಿರೋಪಿತಸಿರಾತತಿಕಮ್ ||

ಸೇನಾಸಮೂಹದ ಮದೋನ್ಮತ್ತ ಗಜಗಳಿಂದ ದಂತಗಳ ಮೇಲೆ ಇಡಲ್ಪಟ್ಟ ಶತ್ರುಯೋಧರುಗಳ ವೇಗವಾಗಿ ಬಾಣಗಳ ಸುರಿಯುವಿಕೆಯಿಂದ ಧನುಸ್ಸನ್ನು ಹೆದೆಯೇರಿಸಲು ಸಾಧ್ಯರಾಗದೇ ಕೆಳಗುರುಳಿದ ತಲೆಗಳು

೧೯. ಪಿಶಿತಸ್ಪೃಹೋತ್ತರಲಗೃಧ್ರಗರು
ತ್ಪವನ ಪ್ರಬುದ್ಧಶರಮುಗ್ಧಭಟಮ್ |
ಇತರೇತರಾಸಿಹತ ವೀರಕೃತ
ದ್ಯುಚರೀಕರಗ್ರಹ ಪುನಃ ಕಲಹಮ್ ||

ಮಾಂಸದ ಆಸೆಯಿಂದ ಮೇಲೆ ಹಾರಾಡುತ್ತಿರುವ ಪಕ್ಷಿಗಳ ರೆಕ್ಕೆಗಳ ಗಾಳಿಯಿಂದ ಬಾಣಗಳು ತಗುಲಿ ಮೂರ್ಛೆಗೊಂಡ ಯೋಧರು ಎಚ್ಚರಗೊಂಡರು. ಖಡ್ಗಗಳಿಂದ ಹತರಾದ ವೀರಯೋಧರಲ್ಲಿ ಪರಸ್ಪರವಾಗಿ ಅಪ್ಸರೆಯೊಡನೆ ವಿವಾಹ ವಿಷಯದಲ್ಲಿ ಕಲಹ ಆರಂಭವಾಯಿತು.

೨೦. ಅವಿಚಾರಿತಸ್ವಪರಯೋಧಮನಾ
ದೃತಜೀವಮಸ್ಥಿರ ಜಯಾಪಜಯಮ್ |
ಅಜನಿಷ್ಟಜನ್ಯಮನಯೋರ್ವಲಯೋ
ರಪಿ ನಾರದೇನ ಯದದೃಷ್ಟಚರಮ್ ||

ಆ ಪಕ್ಷದವರು ಮತ್ತು ಈ ಪಕ್ಷದವರು ಎಂದು ಆಲೋಚಿಸದಷ್ಟು ಅಸಂಖ್ಯಾತ ಪ್ರಮಾಣದ ಅಸ್ಥಿರವಾದ ಸೋಲಗೆಲುವುಗಳಿಂದ ಕೂಡಿದ ಯುದ್ಧವು ಆ ಎರಡೂ ಸೈನ್ಯಗಳ ಮಧ್ಯೆ ಉಂಟಾಯಿತು. ನಾರದನಿಂದಲೂ ಇಂಥ ಘನಘೋರ ಯುದ್ಧವನ್ನು ಪೂರ್ವದಲ್ಲಿ ನೋಡಿರಲು ಸಾಧ್ಯವಿಲ್ಲ.

೨೧. ಅಪರಃ ಸರೋಷಮಹಿತೇನ ಹತಃ
ಪತಿತೋಪಿ ಕುಂಭಫಲಕಾತ್ಕರಿಣಃ |
ಅವಿಲಂಬಮಬರಚರಾಂಬುಜದೃ
ಕ್ಕುಚಕುಂಭಿಕುಂಭಮವಲಂಬಿತವಾನ್ ||

ಕೋಪದಿಂದ ಕೂಡಿ ಶತ್ರುಗಳಿಂದ ಹತರಾದ ಇನ್ನೊಂದು ಪಕ್ಷದ ಶತ್ರು ಸೈನಿಕರು ಆನೆಯ ತಲೆಯ ಮೇಲಿಂದ ಬಿದ್ದರೂ ಫಲಕದಂತಿರುವ ತಲೆಯನ್ನೇ ಗಟ್ಟಿಯಾಗಿ ಆಶ್ರಯಿಸಿದ್ದರು.

೨೨. ರಿಪುಣಾ ನಿಕೃತ್ತಭುಜ ಎವ ಪರೋ
ನ್ಯಪತತ್ಸ್ವಪಾತಿತಪರಾಕ್ರಮತಃ |
ಅಜಹದ್ಧನುಃ ಕ್ಷಣಮಧೋ ಭ್ರಮಣೈಃ
ಸಭುಜೋರರಕ್ಷಯುಧಿ ತಂ ಶಯಿತಮ್ ||

ಶತ್ರುಗಳಿಂದ ಬಾಹುಗಳು ಕತ್ತರಿಸಲ್ಪಟ್ಟು ಬಿದ್ದಿದ್ದರೂ ಕೂಡ, ಕತ್ತರಿಸಲ್ಪಟ್ಟ ಭುಜದಿಂದ ಧನಸ್ಸು ಬಿಟ್ಟರೂ, ಕಂಪಿಸುತ್ತಿರುವ ಭುಜವು ಬಿದ್ದಿರುವ ಭಟರನ್ನು ಆ ಕ್ಷಣದಲ್ಲಿ ರಕ್ಷಿಸುತ್ತಿರುವಂತೆ ತೋರಿತು. ಆದರೆ ಕತ್ತರಿಸಿದ ಭುಜವು ಪುಟಿಯುತ್ತಿತ್ತು.

೨೩. ಮಹತೋ ಮದೇಭಶಿರಸೋ ದಲಿತಾ
ನ್ಮಣಿಭಿಶ್ಚುತೈಃ ಸಿಕತಿಲೇ ಫಲಕೇ |
ಪರದಾರಣಾತ್ಪ್ರಹರಣಂ ಮಸೃಣಂ
ಸಮರಾಯ ಕೋಪಿ ಸಮಶಾತಯತ ||

ಒಬ್ಬ ವೀರನು ಶತ್ರುಸಂಹಾರಕ್ಕಾಗಿ ನುಣುಪಾದ ಆಯುಧವನ್ನು ಬಳಸಿದ್ದರೂ ಆ ಹೊಡೆತದಿಂದ ದೊಡ್ಡದಾದ ಮದಗಜದ ಕುಂಭಸ್ಥಲದಿಂದ ಬೀಳುತ್ತಿರುವ ರಸವು ಮೌಕ್ತಿಕದಂತೆ ಮದಜಲ ಸ್ರವಿಸುವ ಆ ಪ್ರದೇಶವು ಮರಳಿನಿಂದ ಕೂಡಿದ ಚರ್ಮವನ್ನು ಹೊಂದಿತ್ತು.

೨೪. ಕರಕುಂತಕೋಡಿದಲಿತಾತ್ಕರಿಣಃ
ಕ್ಷತಜೇನ ಕುಂಭಫಲಕಾತ್ಕ್ಷರತಾ |
ಅಪರೋ ವ್ಯರಾಜದಭಿತಃ ಸ್ನಪಿತೋ
ವಿಹಿತಾಭಿಷೇಕ ಇವ ವೀರಪದೇ ||

ಮತ್ತೊಬ್ಬ ವೀರನು ಕೈಯಲ್ಲಿರುವ ಆನೆ ಮುಂಭಾಗದಲ್ಲಿ ಇರಿತಕ್ಕೊಳಗಾಗಿ ಕುಂಭಸ್ಥಲದ ಪ್ರಹಾರದಿಂದ ರಕ್ತದಿಂದ ಅವಯವಗಳೆಲ್ಲ ತೋಯ್ದಂತೆ ಕಂಡರೂ ಸ್ನಾನಮಾಡಿದಂತಿದ್ದರೂ ವೀರಸ್ಥಾನದಲ್ಲಿ ಪಟ್ಟಾಭಿಷೇಕಗೊಂಡು ವಿರಾಜಿಸುತ್ತಿದ್ದನು.

೨೫. ಸಮತಾಸಹಂ ಶಶಿಕುಲೇಶಬಲಂ
ಯುಧಿ ಕೇರಲಸ್ಯ ಯುಗಪತ್ಪೃತನಾಮ್ |
ಗ್ರಸಿತುಂ ಸಮೈಹತ ಮದಗ್ರಹಿಲಾಂ
ಪ್ರಲಯಾಂಬುರಾಶಿಪರಿಭಾವಿರವಮ್ ||

ಅನುಪಮವಾದ ಪ್ರಳಯಕಾಲದಸಮುದ್ರದ ಗರ್ಜನೆಯಂತಿರುವ ಚಂದ್ರವಂಶಜನಾದ ಅಚ್ಯುತರಾಯನ ಸೈನ್ಯವು ಯುದ್ಧದಲ್ಲಿ ದರ್ಪದಿಂದ ಕೂಡಿದ ಚೇರರಾಜನ ಸೈನ್ಯವನ್ನು ಒಮ್ಮೆಲೇ ನಾಶಪಡಿಸಲು ಪ್ರಯತ್ನಿಸಿತು.