ಪಾಲಿಸು ಪರದೇವತೆ ಶ್ರೀಲಲಿತೆ ಪಾಲಿಸು
ಪರದೇವತೆ ಪಾಲನಯನನು ಕುಣಿಯುತಿರೆ
ಹರಿತಾಳ ಹಾಕುತ್ತಿರೆ ಸುರ ಜಾಲ ನಿನ್ನೇನು
ಪೊಗುಳುತ್ತಲಿರಲೀ ಲೀಲೆಯೊಳು ನೀ ನನ್ನ
ಮುಗಿಯದೆ || ಪಾಲಿಸು ||

ಪಂಚ ತನ್ಮಾತ್ರೆಗಳು ಜಾಣಗಳು ವಿಶ
ರಿಂಚೀಶ ವಿಷ್ಣ್ವಾದಿಗಳ ಕೂತಿಹ ನಿನ್ನ ಮಂಚಕ್ಕೆ
ಪಾದಗಳು ನಿನ್ನೊಳಗೆ ನೀನೆ
ಪಂಚಭೂತಗಳಾಗಿಯದರೊಳು ಪಂಚಕೋಶಗಳಿಂದ
ವಿವಿಧ ಪ್ರಪಂಚ ರೂಪವ ಧರಿಸಿ ಬೆಳಗುವೆ
ಪಂಚಮೆಯ ಕಳೆದೂ || ಪಾಲಿಸು ||

ಅಷ್ಟಸಿದ್ಧಿಗಳೆಂಬವು ನಿನ್ನಯ ಪಾದಂ ಗುಷ್ಟದೊಳು
ಕಂದಿಹವು ಸೃಷ್ಟಿಗಳೆಲ್ಲಿ ದೃಷ್ಟಿಯೊಳಾಡಗಿಹುವು
ಕಾಮೇಶ್ವರನ ಸಹಿತ ಪಟ್ಟದರಿಸಯೆ ನಿನ್ನ ಕೃಪೆ
ಎಳ್ಳಷ್ಟು ಸೋಕಲು ನರನು ಬ್ರಹ್ಮನ ಪಟ್ಟವನು
ಪಿಡಿಯುವನು ನಿನ್ನೊಳು ಶ್ರೇಷ್ಟರಿನ್ನಾರುಂಟು
ಜಗದೊಳು || ಪಾಲಿಸು ||

ವಾಣಿ ಲಕ್ಷ್ಮೀಗಳೇಶ್ವರು ಚಾಮರಗಳು ಮಾಣಿದೆ
ಬೀಸುವರು ಪೊಗಳುತ ನಿನ್ನಿಂದ್ರಾಂಣಿಗಳು
ಕುಣಿಯುವರು ತ್ರಿಪುರೇಶಿ ನನ್ನೀ ಪ್ರಾಣ ಮನ
ತನುವೆಲ್ಲ ನಿನ್ನದುಕಾಣೆ ನಿನಗಿಂತನ್ಯನು
ನಂಕಾಣೆ ಸದ್ಗುರು ಶಂಕರನ ಪದದಾಣೆ
ಶಂಕರದಾಸಕಾಣೇ || ಪಾಲಿಸು ||

* * *

ದೂತರೆ ಮರೆಮಾಚುವೆ ನಿಜರೂಪವ ಪಾತರೆಗದ
ತೋರಿಸು ತಾಯೇ ಬೀತನ ನಿನ್ನಡಿಗಳ ಪಿಡಿದೆನು
ಸಂಪ್ರಿಯನಿಡು ಶಂಕರಚಾಯೇ || ಯಾತಕೆ ||

ಮಾತಿನ ದೇವತೆಗಳು ಬಹಳುಂಟವ ರೇತಕ್ಕೆ ನಿನ್ನ
ಕಲಾಶ್ರಿತರು ಮಾತೆಯ ತೊರೆನ್ನುತ ನಿನ್ನಡಿಗಳ
ದೂತರು ಬೇಡುತ ಕಾದಿಹರು || ಯಾತಕೆ ||

ಅಜಹರಿ ರುದ್ರೇಶ್ವರರಿಗೆ ಹೆಚ್ಚಿದ ನಿಜದೇವರು
ಲೋಕದೊಳಿಲ್ಲ ಭಜಿಸುವ ಮಂಚವ ಪಾದಗಳಾಗಿ
ರಜಹರಿ ರುದ್ರಾದಿಗಳೆಲ್ಲ || ಯಾತಕೆ ||

ಪುತ್ರನು ನಾ ನಿನ್ನಡಿಗಳ ಪಿಡಿದು ಮಿತ್ರನು
ಸಂಶಯ ಬಿಡು ಬೇಗ ಮಿತ್ರನು ನಿನ್ನಯ
ಭಕ್ತರಿಗದರಿಂ ಗಾತ್ರನು ಕುಪಿ ಮಾಡುವುದೀಗ || ಯಾತಕೆ ||

ಶಕ್ತರು ಎಂಬುವ ದೇವರುಗಳೊಳಿಹ ಶಕ್ತಿಯ ನಿನ್ನದು
ಜಗವೆಂಬ ಭಕ್ತನು ಕೇವಲ ನಿನ್ನಡಿಗಳನ್ನು
ಶಕ್ತಿಯನಿಡುಯನ್ನೊಳು ತುಂಬಿ || ಯಾತಕೆ ||

ಪಹಜಮುಖ ಪರಮಾತ್ಮನ ರಾಣಿ
ಪರಾಂಕುಶಧರೆ ನೀ ಸದೆಯದಲ್ಲಿ ಶಂಕೆಯ
ಬಿಟ್ಟಾನಂದದಿ ವಿಹರಿಸು ಶಂಕರದಾಸನ
ಹೃದಯದಲಿ || ಯಾತಕೆ ಮರೆಮಾಚುವೆ ||

* * *

ಇಡಬೇಕಿನ್ನಲ್ಲಿ ಭಕ್ತಿಯ ನಮ್ಮಮ್ಮ ತಾಯೆ
ಕೊಡಬೇಕು ನೀನೆ ಮುಕ್ತಿಯ || ಇಡಬೇ ||

ಬೀಡಬೇಕಹಂಕಾರ ಕೊಡಬೇಕು ಮಮಕಾರ
ನುಡಿಬೇಕು ನುಡಿದಂತೆ ನಡಬೇಕು ಮುಂದಕೆ ||

ತನುಮೋಹವನು ಬಿಟ್ಟು ಮನಕೊಂದು ತಡೆಯಿಟ್ಟು
ಅನುಮಾನಿಸದೆ ನೀನೇ ಜನನೀಯೆಂದಳವಟ್ಟು || ಇಡಬೇ ||

ವಾಸನೆ ಎಲ್ಲವ ಸುಟ್ಟು ಪಾರಕಾಷ್ಟಕವು ಕೆಟ್ಟು
ಆಶೆಯಿಂ ಶಂಕರದಾಸತ್ವವಳ ವಟ್ಟು || ಇಡಬೇಕಿನ್ನಲ್ಲಿ ಭಕ್ತಿಯ ||

* * *

ಮುಳುಗಿ ಹೋದಿಯಲ್ಲೋ ಭವದಲಿ ||
ತಿಳಿಯದ ಜ್ಞಾನವ ಗುರುಮುಖದಿಂದ ಶೀಲಿ
ಹೊಲೆತನು ವಾನೆಂಬ ಮೋಹಕೆಶಿಲಿ || ಮುಳು ||

ಕುಲಛಲ ಗೋತ್ರಗಳು ಐತಸುತಲನೆಯ ಮೋಹದೊಳು
ಸಿಲುಕಿದ ಮನವನು ತೆಗೆಯದೆ ನರಕದ
ಹುಳುವಿನಪರಿ ಸಂಸಾರದ ಕೋಪದ ಓದಿತರ್ಕಶಾಸ್ತ್ರ || ಮುಳು ||

ತತ್ವದ ಹಾದಿ ತಿಳಿಯದಿರಲು
ಸಾದಿತಿ ಶಿವರಾಮೆನುತ ಗಂಭೀರದಿ
ಓದಿದ ಗಿಣಿ ಮಲ ತಿಂದಂತಹುದು
ಪಾಯಸವನು ಕೊಡಲು ತಿನ್ನದ ನಾಯಿಕುನ್ನಿಯಂತೆ || ಮುಳು ||

ರಾಯ ಶ್ರೀಗುರು ಮಹಲಿಂಗ ನಿನ್ನೆಯ
ಕಾಯದಿ ಇರುವರ ಕಾಣದೆ ವೈರ್ದದಿ || ಮುಳು ||

* * *

ಇಲ್ಲದ ಮಾತಡಿ ಬತ್ತಿನೆಂದವ ಬೇಡಾ ಅಲ್ಲೆಲ್ಲಿ
ಮುಕ್ತಿಯನೆ ಕತ್ತ ಬಿಲ್ಲಿದ ಗುರುವಿನ ಒಲಿಸಿ
ಕೊಂಡರೆ ನೀನು ಅಲ್ಲಮಪ್ರಭು ನೋಡು ಕತ್ತೆ || ಪ ||

ನಯನವ ತಡೆಯದೆ ಮಾಯೆಯ ಕಡಿಯದೆ ನೀ
ಹ್ಯಾಗೆ ಉಳಿದಿಯೋ ಕತ್ತೆ ಕಾಯ ರಹಿತನಾಗಿ ಐದನೆ
ಮನಿಗೇರಿ ಆಯತವರಿಯಲೋಕಕ್ಕೆ || ಇಲ್ಲದ ||

ಅನುವಿನಿಂದಲೇ ನೀನು ಉನ್ಮದಿ ಸ್ಥಲಕೊ
ಚಿನುಮಯತ ಅರಿಯೊಲೇ ಕತ್ತೆ ಕೇಳೂ ಕತ್ತೆ
ಹೇಸರಕತ್ತೆ ಗಂದವತಿಯ ಮೋಕೆ ಬಂದುದ ಕೊಚಬಾಳ
ಸಂದೇಹವ್ಯಾಕೆ ಲೋಕ ಕತ್ತೆ ತಂದೇ
ತ್ರಿವಿಕ್ರಮನ ಚಂದುಳ್ಳಿ ಪಾದವ ಹೊಂದಿ
ಕೊಂಡಿರು ಹೋಗು ಕತ್ತೆ || ಇಲ್ಲದ ||

* * *

ಕಾಸಿ ಬರುತಾನೆ ನೋಡು ತಂಗೀ
ಸಂನ್ಯಾಸಿ ಬರುತಾನೆ ನೋಡು
ಈ ಶತರವತಾರ ತಾಳಿ ಜಗದೊಳು || ಕಾಶಿ ||

ಪಿಸು ಮೈಲಿಗೆ ಬಿಟ್ಟು ಮದರಿಯ ಸೋಸಿಬಿರಿದಿಟ್ಟು
ಕೈಯ್ಯ ಬಿಸಿಬಿಸಿ ಬಿಡಾರದೊಳು ಆರು ಕುಣಗಳ
ಲ್ಲವು ತೊರೆದು ಪಾರಶಕ್ತಿಯೊಡನೆ ಬೆರೆತು || ಕಾಶಿ ||

ಧೀರನಾಗಿ ದಾರಿಯ ಕೊಡಿ
ಅಷ್ಟ ಮದಗಳೆಲ್ಲ ಕಡಿದು
ಅಷ್ಟಹುಡುಗರ ಸಂಗ ಹಿಡಿದು ಶ್ರೇಷ್ಟಜೀವನ್ಮುಕ್ತಿ
ಲೀಲೆ ಸ್ಪಷ್ಟವಾಗಿ ತೋರಿಸುತ್ತದೆ || ಕಾಶಿ ||

ಹೆಚ್ಚು ಕಡಿಮೆ ಕಡಿಯ ಬ್ರಹ್ಮಹುಚ್ಚನಾಗಿ ಆಡಿಕೊತ
ಸ್ಪರ್ಧೆದೈತ ಆಡಗಿ ಬೈಲೊಳು ಬಿಚ್ಚಿ ಉಣತಿ
ನಂತಾ || ಕಾಶಿ ||

ಅಂಗಲಿಂಗ ವೇಕನಾಗಿ ಮಂಗಳ ತಾಳಿಕೋಟೆ
ನೋಡಿ ತುಂಗ ಸಿದ್ಧಲಿಂಗನ ಕೂಡಿ ಶ್ರೀರಂಗಾರವಾಗಿ
ಬದಿಯೊಳು || ಕಾಶಿ ||

* * *

ಕೋಲುಕೋಲೆನ್ನ ಕೋಲೆ ಬ್ರಹ್ಮಾನಂದ ಕೋಲು
ಕೋಲೆನ್ನ ಕೋಲೆ ಕೋಲಾನಾಡೋಣ ಬನ್ನಿ
ಜಾಣಗುರುವಿನ ಮೇಲೆ ಪೂರ್ಣ ಪ್ರಕಾಶ
ಕೋಲೆ ತಿರುಗಿ ಬರುವದು ಕಂಡು ಸದ್ಗುರು
ರಾಯ ಭರದಿಯನ್ನಲಿ ಬಂದನು ಜದಿಕರವನ್ನಿಟ್ಟು
ಮರಳಿ ಬಾರಹಾದಿ ವಿವರಿಸಿ ತೋರಿಹಿದನು || ಕೋಲು ||

ಸತ್ಯಾದ್ವವಯಾನಂದ ಚೈತನ್ಯ ಸ್ವರೂಪ ನೀನೆಲೊ
ಕಂದ ಅತ್ತಿತ್ತವೆಂಬುದ ಭ್ರಾಂತಿ ಬಿಡಿಸಿ
ಶಿವತತ್ವನೆ ನಿಸಿಂದ ||

ಮೂರು ಪಾದವ ಶೋದಿಸಿ ಅರ್ಧವ ಹೇಳಿ ಮೂರು
ವಂದನೆ ಮಾಡಿದೆ ದೀರ ವೇದಾಂತ ಸಾರಸೀನರಿ
ಎಂದು ತಿರುಗಿ ಭೋಧಿಸಿದ || ಕೋಲು ||

ನಾನು ನಿನೆಂಬ ದೋಗಿ ತಾನೆತಾನಾದ ಸಮಾದಿ
ಯನು ಮಾನಷಮಾನ ಸೋಂಕದ ಸೂದಲ್ಲಿ
ಧನ್ಯಾ ನೀ ಚರಿಸೆಂದನು || ಕೋಲು ||

ಜ್ಞಾನಮೂರ ತಿಗುರು ತ್ರಿವಿಕ್ರಮಾನದ ಮಹಿಮ
ತಂತಿ ಜಾನಿಸಿ ಪೇಳಲು ಮನಕೆ ಬಾರದ
ಮಾತಿನ್ನೇನಂತ ಸುಮ್ಮನಾದೆ || ಕೋಲು ||

* * *

ಗುರುದೇವ ನಿಮ್ಮಯ ಚರಣಾಸ್ಮರಣೆಯ
ಮಾತೃವೇ ನಾವು ಪರಿಹರಿಸೋ ಜನನ ಮರ
ಣ ದಯ ಮಾಡೋ ಅಂತಃಕರಣಾ || ಗುರು ||

ನವಖಂಡ ಬ್ರಹ್ಮಾಂಡವನು ಹಿಂಡಾಂಡದೋಳ್
ಆಡಗಿಹನು ಅಖಂಡ ಮೂರತಿ ನೀವು ನಿಮ್ಮ ಸೇವೆ
ಯೊಳಿರುವೆವು ನಾವು || ಗುರು ||

ಅರಿತು ಮರೆತು ಬೆರೆತೋವೊ ಬೆರೆತೂ ಬೇರಿಲ್ಲವು
ನೀವು ತ್ವರಿತಾದಿ ಬೇಡುವೆ ನಾವು ಪರಮಾ
ಮೃತ ನೀಡುವೆ ನೀವು || ಗುರು ||

ಪರಮದೇಶಗಡಿ ಮಠಧೀಶ ನಿಮ್ಮ ದ್ಯಾನದೊಳಿರುವೆವು
ದಾಸ ನಿಜನಂಬಿ ಆದೆವು ಕೂಸ ವಶ ಮೋಕ್ಷ
ವಕೊಡು ಪರಮೇಶ || ಗುರು ||

* * *

ದೇವಾ ನೀನಲ್ಲವೇನೋ ಸದ್ಗುರು ಮಹಾದೇವ
ನೀನಲ್ಲವೇನೋ ಆದಿಯ ಸಿದ್ಧರು ಹೋದ ಹಾದಿಯ
ತೋರಿ ಭೇದವ ಬಿಡಿಸದ ಸಾಧು ಮೂರುತಿ
ಗುರು || ದೇವಾ ||

ನರಜನ್ಮದೊಳಗೆ ಬಂದು ಪ್ರಪಂಚದ ಕಡಲ ಮಧ್ಯ
ದೊಳು ನಿಂದು ಅರತುಮರೆತು ವಮ್ಮೆ ಗುರುವೆಂದು
ನೆನೆದರೆ ಗುರುತಿಟ್ಟು ಅವರಿಗೆ ಪರತರ ತೋರಿದ || ದೇವಾ ||

ಆಶಾಪಾಶದ ಬಿಡಿಸಿ ಮಾಡಿದ ಬಹುದೋಷ
ಕರ್ಮಕೆಡಿಸಿ ನ್ಯಾಸ ಧ್ಯಾನದಿ ಜಪ ಮಾಡಿಂದೆ
ಭೋಧಿಸಿ ಪ್ರಕಾಶವ ತೋರಿಯಶ ಮಹೇಶನು || ದೇವಾ ||

ಭಕ್ತಿಭಾವನೆ ಗೂಡಿದೆ ನಂಬಿದರೆ ಮುಕ್ತಿದಯ
ಪಾಲಿಸುವ ಕರ್ತು ಸದ್ಗುರು ಭವತಾರಕ ದರೆ
ಯೊಳು ಪ್ರತ್ಯಕ್ಷವಾದಂತ ಪರಬ್ರಹ್ಮ ಮುರತಿ || ದೇವಾ ||

* * *

ಗುರುದೇವ ನಿಮ್ಮಯ ಚರಣಾ ಸ್ಮರಣೇಯ ಮಾಡುವೆ
ನಾವು ಪರಿಹರಿಸೋ ಜನನ ಮರಣಾ |
ದಯಮಾಡೋ ಅಂತಃಕರಣಾ || ಗುರು ||

ನವಖಂಡ ಬ್ರಹ್ಮಾಂಡವನು ಪಿಂಡಾಂಡದೋಳ್
ಅಡಗಿಹನು ಅಖಂಡ ಮೂರತಿ ನೀವು | ನಿಮ್ಮ ಸೇವೆ
ಯೋಳಿರುವೆವು ನಾವು || ಗುರು ||

ಅರಿತು ಮರೆತು ಬೆರೆತೇವೊ ಬೆರೆತೊ ಬೇರಿಲ್ಲ ನೀವು
ತ್ವರಿತಾದಿ ಬೇಡುವು ನಾವು ಪರಮಾಮೃತ ನೀಡುವೆ
ನೀವು || ಗುರು ||

ಪರದೇಶಿಗಡಿ ಮಠಧೀಶ ನಿಮ್ಮ ಧ್ಯಾನದೊಳಿರುವೆವು
ದಾಸ | ನಿಜನಂಬಿ ಆದೆವು ಕೂಪ | ವರ ಮೋಕ್ಷವ
ಕೊಡು ಪರಮೇಶ || ಗುರು ||

* * *

ಕೂಡಿದೆ ಗುರುಪಾದವಾ ನೀಗಾಡಿದೆನೀಚಮ
ಮಾಡಿದೆ ಮನಸಿಗೆ ಪರಮನೊಳೈಕೈವ
ನೋಡಿದೆ ನಿಜಸುಖವ || ಪ ||

ಚಿತ್ತವ ನೊಳೆಸೆಳೆದು ಸುಖಮಯ ಚಿತ್ತ
ಭಯೊಳು ಸುಳಿದು ಚಿತ್ತಿನ ಪರಿ ಪೂರ್ವತ್ವವತಳೆದು
ಸರೋತ್ತಮ ಗುಳಿದು || ಕೂಡಿದೆ ||

ಹೊರವೃತ್ತಿಯ ಬಿಟ್ಟು ಹೃದಯಾಂತರ ದೊಳಗಡ
ನಿಟ್ಟು ಪರಮನ ಪ್ರಭೆಯೊಳ ಬೆಳಗುವ ದೃಶ್ಯವ
ಪರವೆಂಬುದ ಸುಟ್ಟು || ಕೂಡಿದೆ ||

ನಾನೇ ಜಗವಾಗೀ ಜಗದೊಳು ನಾನೇ ನಿಜವಾಗಿ
ನಾನೇ ನನ್ನನ್ನು ನೋಡುತ ಕೂಡುತ ನೀನೆಂದುದ
ನೀಗಿ || ಕೂಡಿದೆ ||

ಬೆಳಕಿಗೆ ಬೆಳಕಾಗಿ ಮನಸಿನ ಕಳವಳಗಳು ಪೋಗಿ
ಒಳ ಹೊಸಗೆಂಬುವ ಭಾವಗಳಿಲ್ಲದೆ ಥಳಥಳಿಸುವ
ನಾಗಿ ಮರಣವು ನಡುಗೆಲ್ಲ ಮುಂದಕುಪಕರಣವು
ಬೇಕಿಲ್ಲ ಕರಣವು ಗುರುಶಂಕರನೊಳಡಗಲು
ಎರಡೆಂಬುವದಿಲ್ಲ || ಕೂಡಿದೆ ||

* * *

ಭ್ರಾಂತನಾಗಬೇಡ ನಿಜದೊಳು ಶಾಂತನಾಗೊ
ಮೂಢ ಸತತ ಬಹುದಿದ ಚಿಂತೆಯ
ಪುಟ್ಟಿಸಿ ಇಂತಿರುದೀ ಮಂತ್ರವ ಮೋಹಿಸಿ
ಭ್ರಾಂತನಾಗಬೇಡ || ಪ ||
ಸ್ನಾನ ಹರಿಯಲಿಲ್ಲ ಮಡಿಯ ವಿಧಾನ ದೊರೆಯಲಿಲ್ಲ
ಮಾನವನೆಂಬಬಿದಾನವು ಬಂದರು ಧ್ಯಾನ
ಹರಿಯೆ ನಿಧಾನವ ಕಾಣದೆ ಭ್ರಾಂತನಾಗಬೇಡ || ಭ್ರಾಂತ ||

ಹರಿಕೆ ಮೂಡಲಿಲ್ಲ ಕಣ್ಣಿಗೆ ಹರಿಯ ಕಾಣಲಿಲ್ಲ
ಹರಿಹರ ನಾಮದ ಶರೀರದೊಳಗಿಹ ಸ್ಥಿರ ಚಿನ್ಮೂರ್ತಿ
ನರಿಯದೆ ಬಳಲುತ || ಭ್ರಾಂತ ||

ಭಜನೆ ತೀರಲಿಲ್ಲ ಜನ್ಮದ ರುಜುಗೆ ಪಾರವಿಲ್ಲ
ಅಜಹರಿದರ ಭಜನೆಗಳೆಂಬುದು ಸುಜನರು ಪೇಳುವ
ನಿಜಕೆಂದರಿಯದೆ || ಭ್ರಾಂತ ||

ಖಡಂವಳಿಯಲಿಲ್ಲ ತನ್ನೊಳಖಂಡ ಮೊಳೆಖಂಡ
ಮೊಳೆಯಲಿಲ್ಲ ಚೆಂಡಿಸಿ ಸೇವಾಶಿನಂದ ನರಿಯದೆ
ಭಂಡನಾಗಿ ಮುಸಾಂಡವ ತೋರುತ || ಭ್ರಾಂತ ||

ಒಳಗೆ ತೊಳೆಯಲಿಲ್ಲ ಮನಸಿನ ಕಳವಳ ಕೆಡಲಿಲ್ಲ
ಮೊಳೆಯುವ ಕುಲ ಛಲ ಮನವನು ಕಳೆಯುವ
ಕುಲಗುರು ಶಂಕರನಡಿಗೈ ಪಿಡಿಯದೆ || ಭ್ರಾಂತ ||

* * *

ಏನಿರ್ದೊಡೇನು ನಿಜಭೋದೆಯೊಂದಿಲ್ಲದಿರೆ
ಕಾನನದ ಬೆಳದಿಂಗಳಂತೆ ನಿಷ್ಟಲವು || ಪ ||

ಕಾಯದೊಳು ಮನ್ಮಥನ ಪಳಿವ
ಸುಂದರರೂಪು ಬಾಯೊಳೆಲ್ಲರ ಮರುಳುಗೊಳಿಸ
ಜಾಣ್ಮುಡಿಯ ಆರುವಾರ್ಗಿಯ ತನ್ನಿರವನರಿಯದಿರೆ
ನಾಯ ಮೊಲೆಹೊಳಗಿರ್ದು ಹಾಲಿನಂತಹುದು || ಏನಿ ||

ಚಂಡ ಪ್ರತಾಪದಿಂದರಿಗಳನು ಜಯಿಸಿ ಭೂಮಂಡಲ
ವನೆಲ್ಲ ವೋರ್ವನೇ ಆಶುತಿರ್ದು ಪಂಡದೊಳಗಿರ್ಪ
ಜೀರ್ವಾತ್ಮರನು ಅರಿಯದೆರೆ ರೆಂಡೆಗೊದಗಿರ್ದ
ಯೌವನದಂತಿರಹುದು || ಏನಿ ||

ಅಣಿಮಾದಿ ಸಕಲ ಸಿದ್ಧಿಗಳೊಡನೆ ತನ್ನ ಮನ
ದಣಿವಂತೆ ನಾಕಲೋಕದೊಳು ಪರಿಣಮಿಸಿ
ಅಣಿಯರದೆ ಗುರುಸಿದ್ಧನೊಡ ನೈಕ್ಯ ವಡೆಯದಿರೆ
ಹೆಣಕೆ ಮಾಡಿದ ಶೃಯಾರದಂತರುದು || ಏನಿ ||

* * *

ಅಡಿಗಡಿಗೆ ಪರಮ ಗುರುವರನ ನುಡಿಗಳ
ಕೊಂಡಾಚು ಎಡೆಬಿಡದೆ ನಿನ್ನೊಳಿಹಸ್ವಯಂ
ಜ್ಯೋತಿಯನೆ ನೋಡು || ಪ ||
ಜಡದೇಹಿಗಳರಿಯರು ಬ್ರಹ್ಮದಿಲಾಸವಿದೆಲ್ಲಾ
ಕಡುಮಾಯಾ ಮೋಹಿತಹಾತ್ಮನ ಮರೆತಿಹರಲ್ಲಾ ಬಿಡು
ಬಾಹ್ಯಾದಿ ಡಂಬವ ಬಲ್ಲ ಶರಣಕೊಡನಾಡು || ಅಡಿ ||

ಶುಚಿಯಾದ ಕರನ್ಯಾಸವ ಮಾಡು ಮೊದಲಿಂದಾ
ನಾಚಿಕೆಯ ಬಿಟ್ಟು ಆಸನವ ಬಲಿದು ಕ್ರಮದಿಂದ
ರೇಚಕವು ಪೂರಕವು ಕುಂಭಸಾಧನೆಯ ಆಚರಣೆಯಿ
ಂದ ಮಹಾಮಂತ್ರವ ಮನನವಮಾಡು || ಅಡಿ ||

ಆರು ಚಕ್ರದೊಳಾಡುವ ಹಂಸ ಸೂತ್ರವ ಪಿಡಿದು
ತಾರಕಾಗ್ರವನೇರಿ ದೇವಾಮೃತವನೇ ಸವಿದು ಸೂರ್ಯ
ಚಂದ್ರದುರಷ್ಟ ಕಾಣತಿರಲು ಮನವಲಿದು ಧೀರನಾಗಿ
ಹಪಂದ ಭೋಗವನು ಸೂರೆ ಮಾಡು || ಅಡಿ ||

ಈಡಪಿಂಗಳ ಮಧ್ಯದಿಗುರು ನಾಡಿಯ ತುದಿಗೇರಿ
ನೋಡು ಪ್ರತ್ಯಾಗಾತ್ಮನಾ ಪ್ರಕಾಶವ ಬೆಳಕನೆ ಸೇರಿ
ಗೂಡಾರ್ಧದಿಂದ ಕೇಳುಘಂಟನಾದ ಬೇರಿ ಮೂರಟೇನು
ಬಲ್ಲರಿದ ಬಲ್ಲಯೋಗಿಯಾಡ ಗೂಡು || ಅಡಿ ||

ಘಟನೆಘಣಿಲೆನುತಲಿದೆ ಘಂಟೆ ವೀಣಯನಾದ
ಝಣಝಣಿನದೆ ದೇವದುಂಬಿಯ ವಿನೋದ
ಗುಣಮಣಿಗಣಿಸುತಲಿದೆ ಸುಮಾಗದುವೆಂಬಿವೇದ
ದಣಿದೋಗದೆ ಶ್ರೀಗುರುಶಾಂತನ ಭಜನೆ
ಯ ಮಾಡು || ಆಡಿ ||

* * *

ಅನುದಿನದಲಿ ಬಂದು ತನುವ ಸ್ನೇಹವ ಮಾಡಿ
ಎನ್ನ ಬಿಟ್ಟೋಗುತ್ತೀಯಾ ಜೀವವೇ ಘನಕೋಪದಿಂದ
ಬಂದು ಯಮನೋರು ಎಳೆಯುವಾಗ ನಿನ್ನ ಕೂಡ
ಯಾವ ತರ ಮಾತೋ ಕಾಯವೇ

ಬೆಲ್ಲದ ಹೇರಿನಂತೆ ಬಂಧು ಬಳಗ ನಿಲ್ಲೋ
ಮಾತೇಳುತೀನೋ ಜೀವವೇ ನಿಲ್ಲಗೂಡದೆ ಬಂದು
ಯಮನಾರು ಎಳೆವಾಗ ಬೆಲ್ಲ ಬೆವಯಾತಲ್ಲೋ ಕಾಯವೇ

ಸಕ್ಕರೆ ಹೇರಿನಂತೆ ಸವಿದುಂಡ ಪಾಯಸ ಬಿಟ್ಟಗಲಿ
ಹೋಗುತ್ತೀಯೋ ಜೀವವೇ ದಕ್ಕಗೊಡದೆ ಬಂದು
ಯಮನಾರು ಎಳೆವಾಗ ಸಕ್ಕರೆ ವಿಷವಾಯಿತೋ ಕಾಯವೇ

ಅಂದಣದ ಐಶ್ವರ್ಯ ದಂಡಿಗೆ ಪಲ್ಲಕ್ಕಿ ಮಂದರ
ಮನೆಯೇಕೋ ಜೀವವೇ ಮಂದಗ ಮನೆಯವರು
ಮಡದಿ ಮಕ್ಕಳಿನಾರೋ ಬಂದೇಕೋ ಹೋಗುತ್ತೀಯೋ
ಕಾಯವೇ

ಸೋರುವಿ ಮನೆಯೊಳು ಮೌನ
ಮಾಸಾದಿಗಳ್ ಬೇಣಯಿತು ನಿನ
ಮನಸ್ಸು ಜೀವವೇ ತೋರಗೊಡದೆ
ಬಂದು ಯಮನಾರು ಎಳೆವಾಗ ಯಾರಿಗೆ
ಯಾರಿಲ್ಲ ಕಾಯವೇ

ನೀರ ಮೇಲಣ ಗುಳ್ಳೆ ತೋರಿ ಹೊಡೆದಂತೆ
ನಿಲ್ಲೋ ಮಾತೇಳು ಜೀವವೇ ಈ ರೀತಿ ಸಭೆಗೆ
ಬಂದ ಯಮನಾರು ಎಳೆವಾಗ ಯಾರಿಗೆ
ಹೇಳುವುದೇ ಕಾಯವೆ

ಮಾಳಿಗೆ ಮನೆಬಿಟ್ಟು ಜೋಳುಗೆ ಹಣಬಿಟ್ಟು
ಹೇಳದೆ ಹೋಗುತ್ತಿಯೋ ಜೀವವೇ ಹೇಳಲು
ತಾರೆದ್ದು ಯಮನಾರು ಎಳೆವಾಗ ಮಾಳಿಗೆ
ಮನೆಯಾಕೋ ಕಾಯವೇ

ಹುಟ್ಟಿದ್ದು ಹೊಲೆಯೂರು ಬೆಳೆದುದ್ದು ಮಲೆಯೂ
ರು ಇಟ್ಟುದ್ದು ಈ ಊರು ಜೀವವೇ
ಸೃಷ್ಟಿಗೊಡೆಯ ನಮ್ಮ ಪುರಂದರ ವಿಠಲನ
ಪಾದವ ಗಟ್ಟಿಯಾಗಿ ಪೂಜಿಸೋ ಕಾಯವೇ

* * *

ರೂಪುನಾಮ ವಿಲ್ಲದ ಸ್ವಾಮಿಯ
ಪೂಜೆಮಾಡಮ್ಮ ನಿನ್ನ ಪಾಪ ಶೇಷ
ನೆಲ್ಲಾ ಕಳೆದು ಉಳಿವನವ ನಮ್ಮ ತಂಗಿ
ಉಳಿವ ಗುರುವಮ್ಮ || ರೂಪು ||

ಹುಟ್ಟು ಬಂಜೆಯ ಹೊಟ್ಟೆಯಲುಟ್ಟಿದ
ಮಗನೆಸರೇಳಮ್ಮ ಅವನುಟ್ಟಿ ಮೂರ
ಪುರವ ಸುಟ್ಟ ಯಾವುದೇಳಮ್ಮ ತಂಗೀ || ರೂಪು ||

ಸುಟ್ಟ ಬೀಜವ ಹೊರಗೆ ಹಾಕಿ ನೆಟ್ಟು
ನೋಡಮ್ಮ ಆದು ಹುಟ್ಟಿ ದೊಡ್ಡ ಮರವು ಆಯಿತು
ಯಾವುದೇಳಮ್ಮ ತಂಗಿ ಯಾವುದೇಳಮ್ಮ || ರೂಪು ||

ರೆಕ್ಕೆ ಇಲ್ಲದ ಪಕ್ಷಿ ಹಾರಿತು ಗಗನಕೆ ನೋಡಮ್ಮ
ಅದು ಕೊಕ್ಕುಹುದರಿ ನೋಡಿದರಲ್ಲಿ ಫಲವು
ಬಾಗಿತಮ್ಮ ತಂಗಿ ಫಲವು ಬಾಗಿತಮ್ಮ || ರೂಪು ||

ಹಮ್ಮು ಹೆಮ್ಮೆಗೆ ಬ್ರಹ್ಮನೆಂದು ತಿಳಿಯಬೇಡಮ್ಮ
ಅದು ಬ್ರಹ್ಮಾಕುಲಕೆ ನೆಲೆಯು ಬಿರೇಳಿ ದೂರದಂತಿದೆ
ಸಾಧಿಸಿಬೇಕಮ್ಮ ತಂಗಿ ಸಾಧಿಸಬೇಕಮ್ಮ || ರೂಪು ||