ಇದು ಎಲ್ಲೋ ಹರಿವ ತೊರೆಯ ಮರ‍್ಮರವಲ್ಲ
ಅಥವಾ ಜುಳು ಜುಳು ಧ್ವನಿಯಲ್ಲ.
ಬಿದಿರ ಕೊಳಲಿನ ಮೇಲೆ
ಯಾರೊ ನುಡಿಸುವ ಹಾಡು!

ತೇಲಿ ಬರುತ್ತಲಿದೆ ಇದು, ಕರಬೂಜ
ಬೆಳೆವ ಹೊಲದ ಕಡೆಯಿಂದ
ಆ ಹೊಲದ ಕಾವಲಿನವನ
ಗುಡಿಸಲಿಂದ.

ಯಾಕೆ ಇನ್ನೂ ನಿದ್ದೆ ಮಾಡುತ್ತಿಲ್ಲ
ಆ ಹುಡುಗ?
ಯಾರಿಗಾಗಿ ಹೀಗೆ ನುಡಿಸುತ್ತಿದ್ದಾನೆ
ಈ ಬಿದಿರ ಕೊಳಲ?

ಚಿಂತಿಸಬೇಡ,
ಬಹುಶಃ ಅವನಿಗೂ
ಇದ್ದಾರೆ ‘ಕೇಳುವವರು’.

ಯಾರು ಗೊತ್ತೇ? ಆ ಅವಳೆ
ಯೂಯಿಂಗ್. ಬಾಗಿಲಲ್ಲೇ ಕೂತು
ನಕ್ಷತ್ರಗಳನ್ನು ಎಣಿಸುತ್ತಾಳೆ.

– ಜಾಂಗ್ ಜಿಮಿನ್(ಚೀನಾ)