ಹಿಂದಿನ ಕಾಲದಲ್ಲಿ ಕುದುರೆ ಈಗಿನಂತೆ ಸಾಕು ಪ್ರಾಣಿಯಾಗಿರಲಿಲ್ಲ. ಮನುಷ್ಯ ಅದರ ಮೇಲೆರಿಸವಾರಿ ಮಾಡುತ್ತಿರಲಿಲ್ಲ. ಕುದುರೆಯು ಕಾಡಿನಲ್ಲಿ ಮನಬಂದಲ್ಲಿ ಓಡಾಡುತ್ತಿತ್ತು. ಮೇಯುತ್ತಿತ್ತು. ಒಮ್ಮೆ ಕುದುರೆಗೂ ಸಾರಂಗಕ್ಕೂ ಹೋರಾಟವಾಯಿತು. ಸಾರಂಗ ಬಲವಾಗಿದ್ದ ಕಾರಣ ಕುದುರೆಯನುನ ಕೋಡುಗಳಿಂದ ತಿವಿದು ನೋಯಿಸಿತು. ನೊಂದ ಕುದುರೆ ದೂರದ ಊರಿನಲ್ಲಿದ್ದ ಮನುಷ್ಯನ ಬಳಿ ಹೋಗಿ ಸಾರಂಗವನ್ನು ಸೋಳಿಸಲು ಸಹಾಯ ಮಾಡಬೇಕೆಂದು ಕೇಳೀತು. ಮನುಷ್ಯನು ಆಗಲೆಂದ. ತನ್ನನ್ನು ಸಾರಂಗದ ಹತ್ತಿರ ಕರೆದೊಯ್ಯಲು ಹೇಳೀದ. ಕುದುರೆ ಮನುಷ್ಯನನ್ನು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಅಡವಿಗೆ ಹೊರಟಿತು. ಅಡವಿಯಲ್ಲಿ ಸಾರಂಗವನ್ನು ಮನುಷ್ಯ ಸೋಲಿಸಿ ಓಡಿಸಿದ. ಕುದುರೆಗೆ ಬಹಳ ಸಂತೋಷವಾಯಿತು. ತನಗೆ ಮಾಢಿದ ಉಪಕ್ಕಾರಕ್ಕಾಗಿ ಮನುಷ್ಯನಿಗೆ ನಮಸ್ಕರಿಸಿತು. ತನ್ನ ಬೆನ್ನ ಮೇಲಿನಿಂದ ಕೆಳಗಿಳಿಯಲು ಕೇಳಿಕೊಂಡಿತು.  ಆದರೆ ಮನುಷ್ಯ ಇಳಿಯಲೇ ಇಲ್ಲ. ಕುದುರೆಯ ಮೇಲೇರಿ ಸವಾರಿ ಮಾಡುವುದು ಬಹಳ ಹಿತವೆನಿಸಿತು. ಕುದುರೆ ಮನುಷ್ಯನ ತೊತ್ತಾಗಬೇಕಾಯಿತು. ಕುದುರೆ ಸಾರಂಗವನ್ನೇನೋ ಸೋಲಿಸಿತು. ಆದರೆ ತನ್ನ ಸ್ವಾತಂತ್ಯ್ರವನ್ನೇ ಕಳೆದುಕೊಂಡಿತು.

ಕಥೆ ಸ್ವಾರಸ್ಯವಾಗಿದೆ ಅಲ್ಲವೇ?

ಈ ಕಥೆಯನ್ನು ಹೇಳೀದರು ಸ್ವಾಮಿ ರಾಮತೀರ್ಥ ಎಂಬ ಹಿರಿಯರು. ಅರ್ಥವಾಗಲು ಕಷ್ಟವಾದ ವಿಷಯಗಳನ್ನು ಸುಲಭವಾಗಿ ಹೇಳುತ್ತಿದ್ದರು.  ಈ ಕಥೆಯಿಂದ ಏನು ತಿಳಿಯುತ್ತದೆ? ಕುದುರೆ, ಸಾರಂಗ ಎರಡೂ ಕಾಡಿನ ಪ್ರಾಣಿಗಳೇ; ಅವು ಜಗಳವಾಡಿದುವು, ಮನುಷ್ಯ ಪ್ರಗಲನಾದ. ಒಂದು ದೇಶ ಜನ ತಮ್ಮ ತಮ್ಮಲ್ಲೇ ಜಗಳವಾಡಿದರೆ, ಹೊರಗಿನವರು ಬಂದು ಯಜಮಾನರಾಗುತ್ತಾರೆ. ಈ ಕಥೆಯನ್ನು ಹೇಳಿದ ರಾಮತೀರ್ಥರು ಸನ್ಯಾಸಿಗಳಾಗಿದ್ದರೂ ಭಾರತದ ಮುನ್ನಡೆಯಲ್ಲಿ ತುಂಬ ಆಸಕ್ತಿ ಇದ್ದವರು. “ಭಾರತವೆಂದರೆ ಯಾರು? ನಾನೇ. ನನ್ನ ದೇಹವೇ ನೆಲ. ನನ್ನ ಕಾಲೇ ಮಲಬಾರ ಮತ್ತು ಚೋಳಮಂಡಲ. ಪಾದಗಳೇ ಕನ್ಯಾಕುಮಾರಿ. ತಲೆಯೆ ಹಿಮಾಲಯ. ನನ್ನ ಕೂದುಗಳಲ್ಲಿ ಗಂಗೆ, ಬ್ರಹ್ಮಪುತ್ರೆಯರು ಹರಿಯುತ್ತಾರೆ.  ನನ್ನ ಎದೆಯೇ ರಾಜಸ್ಥಾನ ಗುಜರಾತ್ಯಗಳ ಮರುಭೂಮಿ. ಪೂರ್ವಕ್ಕೂ, ಪಶ್ಚಿಮಕ್ಕೂ ನನ್ನ ತೋಳುಗಳು ಚಾಚಿವೆ”- ಹೀಗೆಂದಿದ್ದಾರೆ. ರಾಮತೀರ್ಥರು. ನಮ್ಮ ದೇಶದ ಪ್ರತಿಯೊಬ್ಬನೂ ತಾನೇ ಭಾರತ ದೇಶವೆಂದು ತಿಳೀದು ಅಭಿಮಾನ ಪಡಬೇಕು, ಈದೇಶಧ ಗೌರವಕ್ಕಾಗಿ ದುಡಿಯಬೇಕು ಎಂಬುವುದೇ ರಾಮತೀರ್ಥರ ಇಚ್ಛೆಯಾಗಿತ್ತು. ಅವರ ಹಾಗೆಯೇ ದುಡಿದರು. ನಡೆದರು.

ಸ್ವಾಮಿ ರಾಮತೀರ್ಥರು ಇದ್ದದ್ದು, ದುಡಿದದ್ದು ಭಾರತ ಇನ್ನೂ ಬ್ರೀಟಿಷರ ಕೈಯಲ್ಲಿದ್ದಾಗ. ನಮ್ಮ ದೇಶದ ಬಗ್ಗೆ ಪ್ರೇಮವನ್ನೂ ಅಭಿಮಾನವನ್ನೂ ಜಾಗೃತಗೊಳಿಸಿದ ಸನ್ಯಾಸಿಗಳು ಮೂವರು- ಸ್ವಾಮಿ ದಯಾನಂದ ಸರಸ್ವತಿಯವರು, ಸ್ವಾಮಿ ವಿವೇಕಾನಂದರು, ಸ್ವಾಮಿರಾಮತೀರ್ಥರು.

ರಾಮತೀರ್ಥರದು ಎಲ್ಲರೂ ಗೌರವಿಸುವಂತಹ ಬದುಕು. ವಿದ್ಯಾರ್ಥಿಗಳಿಗಂತೂ ರಾಮತೀರ್ಥರ ಜೀವನ ಅತ್ಯುತ್ತಮ ಮಾದರಿ. ಅವರು ಚಿಕ್ಕಂದಿನಿಂದಲ್ಲಿಯೂ ಬರೀ ಕಷ್ಟದಲ್ಲಿಯೇ ಹೆಣಗಾಡುತ್ತ ಉತ್ತಮ ಮಟ್ಟದ ವಿದ್ಯೆ, ತಿಳುವಳೀಕೆ, ಯೋಗ್ಯತೆ ಮತ್ತು ದೇಶ ವಿದೇಶಗಳಲ್ಲಿ ಕೀರ್ತಿಯನ್ನು ಸಂಪಾದಿಸಿದ ಸಾಹಸಿಗಳೂ ಮೂವತ್ತು ಮೂರೇ ವರ್ಷ ಕಾಲ ಬದುಕಿದ್ದ ಅವರು ಎಷ್ಟೊಂದು ಸಾಧಿಸಿದರು ಎಂಬುವುದನ್ನು ಕಂಡಾಗ ಆಶ್ಚರ್ಯವಾಗುತ್ತದೆ.

ಹತ್ತು ವರ್ಷಕ್ಕೆ ಮದುವೆ

ರಾಮತೀರ್ಥರ ಮೊದಲ ಹೆಸರು ಗೋಸ್ವಾಮಿ (ಅಥವಾ ಗೋಸಾಯಿ) ತೀರ್ಥರಾಮ. ಹಿಂದಿಯಲ್ಲಿ ರಾಮಾಯಣವನ್ನು ಬರೆದು ತುಳಸಿದಾಸನ ವಂಶದವರು. ಅವರ ತಂದೆ ಹೀರಾನಂದ ಪಂಜಾಬಿನ ಮುರಲಿವಾಲಾ ಎಂಬ ಹಳ್ಳಿಯಲ್ಲಿದ್ದರು.  ೧೮೭೩ರ ಅಕ್ಟೋಬರ ೨೨ ರಂದು ದೀಪಾವಳಿಯ ಮರುದಿನ ತೀರ್ಥರಾಮ ಹುಟ್ಟಿದುದು.

ಹೀರಾನಂದನೇನೂ ಹಣವಂತನಾಗಿರಲಿಲ್ಲ. ಧರ್ಮ ಪ್ರಚಾರಕ್ಕೆ ಹೋದಾಗ ದಾನವಾಗಿ ಬಂದದ್ದೆಷ್ಟೋ ಅಷ್ಟೆ. ತೀರ್ಥರಾಮ ಕೆಲವು ದಿನಗಳ ಕೂಸಾಗಿದ್ದಾಗ ತಾಯಿ ತೀರಿಕೊಂಡಳು. ಆತನ ಅಣ್ಣ ಗುರುದಾಸ ಮತ್ತು ಮುದುಕಿಯಾದ ಅತ್ತೆಯವರೇ ಈ ಮಗುವನ್ನು ಜೋಪಾನವಾಗಿ ಬೆಳೆಸಿದರು. ಮಗು ಅಶಕ್ತನಾಗಿ ಬಡಕಲಾಗಿ ಕಾಣೂತ್ತಿತ್ತು.  ಆ ಅತ್ತೆ ತುಂಬಾಒಳ್ಳೆಯವಳೂ. ಪ್ರತಿ ದಿನ ದೇವಾಲಯಗಳೀಗೆ, ಭಜನ ಮಂದಿರಗಳೀಗೆ , ಎಲ್ಲಿ ಹೋದರೂ ಸಹ ಈ ಪುಟ್ಟ ರಾಮನನ್ನು ಎತ್ತಿಕೊಂಡೇ ಹೋಗುವಳೂ. ಈಮಗುವಿಗೆ ಶಂಕ, ಜಾಗಟೆ, ಗಂಟೆಗಳ ಶಬ್ದ ಎಷ್ಟು ರೂಢಿಯಾಗಿತ್ತೆಂದರೆ ನೆರೆಯಲ್ಲಿ ಎಲ್ಲಿಯಾದರೂ ಶಂಖ ಜಾಗಟೆಗಳ ಸದ್ದಾದರಾಯಿತು. ಅಲ್ಲಿ ಕರೆದೊಯ್ಯುವವನೆಗೆ ಸುಮ್ಮನಾಗಲಾರ.

ಬಾಲ್ಯದಲ್ಲಿ ತೀರ್ಥರಾಮನಿಗೆ ಕಥೆ ಕೇಳುವುದು,  ಕೇಳಿದ್ದನ್ನು ಹೇಳುವುದು ಎಂದರೆ ಬಹು ಪ್ರೀತಿ. ರಾಗವಾಗಿ  ಹೇಳುವ ವೇದ ಮಂತ್ರಗಳನ್ನು ಕಿವಿಗೊಟ್ಟು ಕೇಳುವಾಗ ಅವನಿಗೆ ಊಟವೂ ಸಹ ಬೇಕಾಗುತ್ತಿರಲಿಲ್ಲ.

ತೀರ್ಥರಾಮನಿಗೆ ಎರಡೇ ವರ್ಷವಾಗಿದ್ದಾಗ ತಂದೆ ಮದುವೆಗೆ ಹೆಣ್ಣನ್ನು ನಿಶ್ಚಯಿಸಿದರು. ಹತ್ತು ವರ್ಷದವನಾಗುವುದರೊಳಗಾಗಿ ಮದುವೆಯೂ ಆಯಿತು. ಆತ ಅತನಿಗೆ ವಿರೊಧಿಸುವುದಿರಲಿ, ಮದುವೆ ಎಂದರೇನೂ ಎಂಬುವುದನ್ನು ತಿಳೀಯುವ ವಯಸ್ಸೇ ಇದ್ದಿಲ್ಲ. ತೀರ್ಥರಾಮ ಸಾಧಾರಣ ಹುಡುಗನಾಗಿದ್ದರೆ ಕಲಿಯುವುದೇ ಸಾಧ್ಯವಾಗುತ್ತಿರಲಿಲ್ಲ.  ಆತನ ಮನೋಬಲ, ಕಲಿಯಬೇಕೆಂಬ ಹಟ, ಶ್ರಮಕ್ಕೆ ಅಂಜದೆ ತಾಳ್ಮೆ ಇವುಗಳ ಎದುರಿಗೆ ಯಾವ ಅತಂಕಗಳೂ ನಿಲ್ಲದಾದವು.

ವಿದ್ಯಾರ್ಥಿ ಜೀವನ

ತೀರ್ಥರಾಮ ಐದನೆಯ ವರ್ಷದಲ್ಲಿಯೇ ಶಾಲೆ ಸೇರಿದ. ನೋಡಲು ಬಡಕಲಾಗಿ ಇದ್ದರೂ ಚುರುಕು ಬುದ್ಧಿ, ಒಳ್ಳೆಯ ಜ್ಞಾನಪಕ ಶಕ್ತಿ, ಕಷ್ಟಪಟ್ಟು ಓದುವನು, ಐದನೆಯ ವರ್ಗದಲ್ಲಿ ಇರುವಾಗಲೇ “ಗುಲಿಸ್ತಾನ” ಬೋಸ್ತಾನ್ ಎಂಬ ಫಾರಸಿ  ಭಾಷೆಯ ಪಠ್ಯ ಪುಸ್ತಕಗಳನ್ನು ಮಾತ್ರವಲ್ಲದೇ ಅನೇಕ  ಉರ್ದು ಕವಿತೆಗಳನ್ನು ಬಾಯಿಪಾಠ ಮಾಡಿಬಿಟ್ಟಿದ್ದ. ಆದರೆ ತೀರ್ಥರಾಮನಿಗ ಆಟಪಾಠಗಳಲ್ಲಿ ಆಸಕ್ತಿ ಇರಲಿಲ್ಲ. ಓದುವುದು, ಬಿಡುವಾದಾಗ ಧರ್ಮಶಾಲೆಗೆ ಹೋಗಿ ಮಂತ್ರಪಠನ್ನವನು  ಕೇಳುವುದು, ಆಮೇಲೆ ತನ್ನ ಗೆಳೇಯರೆದಿರುಗೆ ಅದನ್ನೇ ಅಂದು ತೊರಿಸುವುದು- ಈವೇ ಅವನ ಕೆಲಸ.

ಪ್ರಾಥಮಿಕ ಶಾಲೆಯಲ್ಲಿ ಕಲಿತದ್ದು, ಮುಗಿಯಿತು. ಆಗಿನ್ನೂ ತೀರ್ಥರಾಮನಿಗೆ ಹತ್ತು ವರ್ಷ. ಗುರಜನ ವಾಲಾದಲ್ಲಿ ಪ್ರೌಢಶಾಲೆಗೆ ಸೇರಿದ. ಅಲ್ಲಿ ತನ್ನ ತಂದೆಯ ಸ್ನೇಹಿತ ಭಗದತ ಧನ್ನಾ ರಾಮಜಿಯ ಮನೆಯಲ್ಲಿ ವಾಸ, ತೀರ್ಥರಾಮ ಕೊನೆಯವರೆಗೂ, ಈ ಧನ್ನಾ ರಾಮಜಿಯನ್ನು ತನ್ನ ಗುರುವೆಂದು ಗೌರವಿಸಿದ. ತನ್ನ ಶಾಲೆ ಹಾಗೂ ಕಾಲೇಜಿನ ದಿನಗಳಲ್ಲಿ ತೀರ್ಥರಾಮ ಈ ಗುರುವಿಗೆ ಬರೆದ  ಸುಮಾರು ಒಂದು ಸಾವಿರ ಪತ್ರಗಳು ಪ್ರಕಟವಾಗಿವೆ.

ಹದಿನಾಲ್ಕು ವರ್ಷದ ಹುಡುಗ ವಿದ್ಯೆಗೆ ಮುಡಿಪಾದ, ತಂದೆಯ ಇಚ್ಛಯ ವಿರುದ್ಧವಾಗಿಯೇ ಲಾಹೋರಿನ ಕಾಲೇಜಿಗೆ ಬಂದು ತೀರ್ಥರಾಮ ಸೆರಿದ. ಸಿಟ್ಟಿಗೆದ್ದ ತಂದೆ ಏನೂ ಸಹಾಯ ಮಾಡಲಿಲ್ಲ. ತನಗೆ ದೊರೆತ ಸ್ವಲ್ಪ ಹಣದ ಶಿಷ್ಯವೇತನದಲ್ಲಿಯೇ ಜೀವನ ನಡೆಸಬೇಕಾಯಿತು. ಎರಡನೆಯ ವರ್ಷವಂತೂ ಬಹು ಕಠಿಣ ರೀತಿಯಿಂದ ಇಡೀ ರಾತ್ರಿಯೆಲ್ಲ ಓದುತ್ತಿದ್ದ. ಅನೇಕ ಸಲ ಕಾಯಿಲೆಯಿಂದ ಮಲಗುತ್ತಿದ್ದ. ಅವನಿಗೆ ಬೇಕಾದದ್ದು ಏಕಾಂತ. ಓದುವುದಕ್ಕೆ ಪುಸ್ತಕ, ಸಮಯ, ಅಷ್ಟಿದ್ದರಾಯಿತು. ಎಫ್.ಎ.ಪರೀಕ್ಷೆಯಲ್ಲಿ ಪ್ರ ಪ್ರಥಮವಾಗಿ ತೇರ್ಗಡೆಯಾದ. ತನ್ನ ನೆಚ್ಚಿನ ಪರ್ಷಿಯನ ಭಾಷೆ ಬಿಟ್ಟು ಸಂಸ್ಕೃತ ತೆಗೆದುಕೊಂಡಿದ್ದರೂ, ಅನೇಕ ಸಲ ಬೇನೆ ಬಿದ್ದರೂ ಶ್ರಮ ಸಾರ್ಥಕವಾಗಿತ್ತು. ಈಗ ಸರಕಾರಿ ಶಿಷ್ಯವೇತನ ಸಿಕ್ಕಿತ್ತು.

ಕಷ್ಟ ಪರಂಪರೆ

ಈಗ ತೀರ್ಥರಾಮನಿಗೆ ಆತ್ಮವಿಶ್ವಾಸ ಹೆಚ್ಚಿತು.  ದೇವರಲ್ಲಿ ಗುರುಗಳಲ್ಲಿ ಶ್ರದ್ದೇ ಬೆಳೆಯಿತು. ಬಿ.ಎ. ಅಭ್ಯಾಸ ಮುಂದುವರೆಸಿದ. ಆದರೆ ತೀರ್ಥರಾಮನ ತಂದೆಗೆ ತನ್ನ ಸಹಾಯವಿಲ್ಲದೇ ಮಗನು ಮುಂದುವರೆದನಲ್ಲ ಎಂಬ ರೋಷ. ತೀರ್ಥರಾಮನ ಹೆಂಡತಿಯನ್ನು ಕರೆ ತಂದು ಅವನ ಹತ್ತಿರ ಬಿಟ್ಟು ಹೋದ. ಮನೆಬಾಡಿಗೆ, ಹೆಂಡತಿಯ ಖರ್ಚು, ಪುಸ್ತಕ ಪೀಸು, ಎಲ್ಲ ಆ ಚಿಕ್ಕ ಶಿಷ್ಯ ವೇತನದ ಹಣದಲ್ಲಿ ಆಗಬೇಕಾಯಿತು. ಆದರೆ ತೀರ್ಥರಾಮ ಇದಾವುದಕ್ಕೂ ಹೆದರಿಲಿಲ್ಲ. ಯಾವಾಗಲೂ ಪ್ರಸನ್ನ, ಮುಖದಿಂದಲೇ ಇರುತ್ತಿದ್ದ. ಎಷ್ಟೋ ಬಾರಿ ಊಟಕ್ಕೆ ಮೂರೇ ಕಾಸು ಈ(ಎರಡು ಕಾಸು-ಈಗಿನ ಒಂದು ಪೈಸಾ) ಇರುತ್ತಿತ್ತು.  ಆದರೂ ಹೆದರಲಿಲ್ಲ. ಬೆಳಿಗ್ಗೆ  ಎರಡು ಕಾಸಿನ ರೊಟ್ಟಿ, ಮತ್ತು ಬೇಳೆ ಹುಳೀ. ಸಂಜೆ ಒಂದು ಕಾಸಿನ ರೊಟ್ಟಿ ಕೊಂಡು  ತಿನ್ನುತ್ತಿದ್ದ.  ಬೇಳೆ ಹುಳಿಯನ್ನು ಹಣ ಕೊಡದೆ ಒಯ್ಯುವುದನ್ನು ಅಂಗಡಿಯವನು ಅಕ್ಷೇಪಿಸಿದಾಗ ಬರೀ ರೊಟ್ಟಿಯನ್ನೇ ತಿಂದು ಆ ತಿಂಗಳ ಕಳೆದ.

ತಂದೆ ಕೋಪದಿಂದ ತೀರ್ಥರಾಮನ ಹೆಂಡತಿಯನ್ನು ಕರೆತಂದು ಬಿಟ್ಟು ಹೋದ.

ಜ್ಞಾನ ಸಂಪಾದನೆಯ ಹಸಿವಿನ  ಮುಂದೆ ಬೇಋಎ  ಹಸಿವೇ ಆತನಿಗೆ ಅನಿಸಲಿಲ್ಲ. ಒಂದೇ ಷರ್ಟು, ಒಂದು ಪಾಯಿಜಾಮಾ, ಚಿಕ್ಕದೊಂದು ರುಮಾಲು.ಎಲ್ಲ ಒರಟು ಬಟ್ಟೆ. ಎಲ್ಲ  ಸೇರಿದರೆ ಮೂರು ರೂಪಾಯಿ ಬೆಲೆಯದು. ಹಳ್ಳಳಿಯ ಚಪ್ಪಲಿ, ಚರಂಡಿಯಲ್ಲಿ ಬಿದ್ದುಒಂದುತೇಲಿ ಹೋದಾಗ ಇನ್ನೊಂದು ಕಾಲಿಗೆ ಯಾವುದೋ ಹೆಂಗಸಿನ ಹಳೆಯ ಚಪ್ಪಲಿ ಹಾಕಿಕೊಂಡು ಕಾಲೇಜಿಗೆ ಹೋಗಿದ್ದನಂತೆ.

ತೀರ್ಥರಾಮನದು ಸುಂದರ ರೂಪ. ಉತ್ತರ ದೇಶಧ ಮಾದರಿಯ ಚಲುವಾದ ಸೌಮ್ಯ ಮುಖ. ಕನ್ನಡಕದಲ್ಲಿ ಆಳವಾಗಿ ಕಪ್ಪಗೆ ಹೊಳೆಯುತ್ತ ಪ್ರೀತಿಯನ್ನು ಹೊರಚೆಲ್ಲುವ ಕಣ್ಣುಗಳು. ಬುದ್ಧಿವಂತಿಕೆಯನ್ನು ಪ್ರಕಟಿಸುವ ವಿಶಾಲವಾದ ಹಣೆ. ನಯವಾದ ಮೂಗು. ಧೃಢ ನಿಶ್ಚಯವನ್ನು ಶಕ್ತಿಯನ್ನೂ ತೋರಿಸುವ ಗಡ್ಡ. ಸ್ವಚ್ಛವಾದ ತಿಳಿಗುಲಾಭಿ ಮೈಬಣ್ಣ. ಆದರೆ ಬಹು ಸಂಕೋಚದ ಸ್ವಭಾವ.

ತೀರ್ಥರಾಮನಿಗೆ ಕಷ್ಟ ಪರಂಪರೆ ಕಾದಿತು. ಆ ವರ್ಷ ಬಿ.ಎ. ಪರೀಕ್ಷೆಯಲ್ಲಿ ಒಟ್ಟು ಅಂಕಗಳಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮನಾಗಿದ್ದರೂ ತೀರ್ಥರಾಮ ಇಂಗ್ಲೀಷಿನಲ್ಲಿ ಮೂರು  ಅಂಕಗಳ ಕಡಿಮೆಯಾದ ಕಾರಣ ಉತ್ತೀರ್ಣರಾಗಲಿಲ್ಲ. ಈಗ ಶಿಷ್ಯ ವೇತನವೂ ನಿಂತು ಹೋಯಿತು. ಮತ್ತೊಂದು ವರ್ಷ ಬಿ.ಎ. ಹೇಗ ಓದುವುದು ? ದಾರಿ ಕಾಣದಾಯಿತು. ಕಣ್ಣೂ ತುಂಬಿ ಬಂತು.”ತಂದೆ ತಾಯಿಯು ನೀನೇ, ಬಂಧುಮಿತ್ರನು ನೀನೆ. ನನಗೆ ನೀನೇ ವಿದ್ಯೆ, ನೀನೇ ಸರ್ವಸ್ವ” ಎಂದು ದೇವರನ್ನು ನಿನೆಯುತ್ತ ಮಲಗಿದ. ಮರುದಿನ  ಕಾಲೇಜಿಗೆ ಹೋದಾಗ  ಆಶ್ಚರ್ಯ ಕಾದಿತ್ತು. ಕಾಲೇಜಿನ ಮಿಠಾಯಿವಾಲಾ ಝಂಡುಮಲ್ ದಿನಾಲು ತನ್ನ ಮನೆಯಲ್ಲಿ ಊಟ ಮಾಡಬೇಕೆಂದು ಕರೆದ. ತೀರ್ಥರಾಮನಿಗೆ ಆತನಿಂದ ಬಹಳ ಸಹಾಯವಾಯಿತು. ಇರಲು ಮನೆ, ತೊಡಲು ಬಟ್ಟೆ  ದೊರೆತವು. ಅಪರಿಚಿತರು ಯಾರೋ ಪ್ರಿನ್ಸಿಪಾಲರು ಸ್ವತಃ ಪರೀಕ್ಷೆಯ ಪೀ ಮೂವತ್ತು ರೂಪಾಯಿ ಕೊಟ್ಟರು.

ಬಿ.ಎ.ಪರೀಕ್ಷೆಯಲ್ಲಿ ತೀರ್ಥರಾಮ ವಿಶ್ವವಿದ್ಯಾಲಯಕ್ಕೆ ಪ್ರಥಮವಾಗಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯದ. ಮಗ  ಎರಡು ಶಿಷ್ಯ ವೇತನಗಳು ದೊರೆತವು. ಚಿನ್ನದ ಪದಕ, ಗೌನು ದೊರೆತವು. ರಾಮನಿಗೆ ದೇವರಲ್ಲಿ ನಂಬಿಕೆ ಇನ್ನೂ ದೃಢವಾಯಿತು. ಆತನಿಗಾಗ ಹತ್ತೊಂಬತ್ತು ವರ್ಷ.  ಗಣಿತ ವಿಷಯದ ಎಂ.ಎ. ಓದುವುದಕ್ಕಾಗಿ ಲಾಹೋರಿನ ಸರಕಾರಿ ಕಾಲೇಜು ಸೇರಿದ.  ಆಗಲೇ ಗೌರವ ಅಧ್ಯಾಪಕರಾಗಿಯೂ ದುಡಿದ.

ದೇಹದಿಂದ ದುರ್ಬಲನಾಗಿದ್ದ ರಾಮನಿಗೀಗ ವ್ಯಾಯಾಮ, ಹೊರಗಿನ ಗಾಳಿಯಲ್ಲಿ ತಿರುಗಾಟದಿಂದಾಗುವ ಲಾಭ ತಿಳಿಯಿತು. ಹಿತ, ಮಿತವಾದ ಊಟ, ವ್ಯಾಯಾಮಗಳಿಂದ ದೇಹವನ್ನು ಗಟ್ಟಿಯಾಗಿ ಮಾಡಿಕೊಂಡ. ದಿನಕ್ಕೆ ಮೂವತ್ತು ಮೈಲು ನಡೆದರೂ ಸಹ ದಣಿಯುತ್ತಿದ್ದಿಲ್ಲ. ಮಳೆ, ಬಿಸಿಲುಗಳಿಗೆ ಅಂಜಿ ಎಂದೂ ಕೊಡೆ ಹಿಡಿಯುತ್ತಿರಲಿಲ್ಲ. ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ತೀರ್ಥರಾಮ ಎಂ.ಎ. ಪರೀಕ್ಷೆಯಲ್ಲಿ ಉತ್ತಮ ಗುಣಗಳನ್ನು ಪಡೆದು ತೇರ್ಗಡೆಯಾದ. ಇಷ್ಟು ಬುದ್ಧಿಶಕ್ತಿಯಿದ್ದವರು ಬೇರೆ ದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮುಂದುವರೆಸಬಹುದಾಗಿತ್ತು. ಇಲ್ಲವೇ ಸರಕಾರಿ ಕೆಲಸಕ್ಕೆ ಸೇರಬಹುದಾಗಿತ್ತು. ಆದರೆ ತೀರ್ಥರಾಮ ದೊಡ್ಡ ಅಧಿಕಾರಿಯಾಗಬೇಕಾಗಿರಲಿಲ್ಲ. ಮಹಾಪುರುಷ ನಾಗಬೇಕಾಗಿತ್ತು.

ಪ್ರಪಂಚದ ಸಂಬಂಧ ಬೇಡ

ಬಿ.ಎ. ಮತ್ತು ಎಫ್.ಎ.ದ ವಿದ್ಯಾರ್ಥಿಗಳಿಗಾಗಿ ಕೆಲವು ದಿನ ಖಾಸಗಿ ವರ್ಗಗಳನ್ನು ತೆರೆದ.ಲಾಹೋರಿನಲ್ಲಿ ಸನಾತನ ಧರ್ಮದ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ. ಸೀಯಾಲಕೋಟೆ ಎಂಬ ಸ್ಥಳದಲ್ಲಿಯ ಅಮೇರಿಕನ ಮಿಷನ್ ಹೈಸ್ಕೂಲಿನಲ್ಲಿ ಎಂಬತ್ತು ರೂಪಾಯಿ ತಿಂಗಳ ಸಂಬಳದ ಮೇಲೆ ಅಧ್ಯಾಪಕನಾಗಿ ಸೇರಿಕೊಂಡ. ಎಲ್ಲಿಯೂ ಮನಸ್ಸಿಗೆ ಶಾಂತಿ ದೊರೆಯದು, ಯಾವಾಗಲೂ ಆತನ ಸುತ್ತ ಬಡ ವಿದ್ಯಾರ್ಥಿಗಳ ಗುಂಪೇ ಇರುತ್ತಿತ್ತು. ಅವರಿಗಾಗಿ ತನ್ನ ಹಣವನ್ನೆಲ್ಲ ಖರ್ಚು ಮಾಡುತ್ತಿದ್ದ.  ಪಾಠ ಹೇಳೀಕೊಡುತ್ತಿದ್ದ.

ಎರಡು ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದು, ಎಷ್ಟು ಸಂಪಾದಿಸಿದ್ದರೂ ಬಂದದ್ದೇಲ್ಲ. ಬೇರೆ ಮಕ್ಕಳಿಗಾಗಿ ಖರ್ಚಾಗುತ್ತಿತ್ತು. ತನ್ನ ವಿರಾಮ, ಅನುಕೂಲಗಳ ಪರಿವೆಯೇ ತೀರ್ಥರಾಮನಿಗೆ ಇರಲಿಲ್ಲ. ಆಗಾಗ ಸನಾತನ ಧರ್ಮ ಸಭೆಗಳಲ್ಲಿ ಉಪನ್ಯಾಸ ಮಾಡುತ್ತಿದ್ದ.

ಭಗವದ್ಗೀತೆ ಎಂದರೆ ತೀರ್ಥರಾಮನಿಗೆ ಅತಿಶಯ ಪ್ರೀತಿ. ಅದನ್ನು ಓದಿದಂತಎಲ್ಲ ಶ್ರೀ ಕೃಷ್ಣನ ಆಕೃತಿ ಕಣ್ಣೆದುರಿಗೆ ಬಂದಂತಾಗುತ್ತಿತ್ತು. ಅನೇಕ ಸಲ ರಾವೀ ನದಿಯ ದಡದಲ್ಲಿ ಧ್ಯಾನದಲ್ಲಿ ಮೈಮರೆತು ಕುಳಿತು ಬಿಡುತ್ತಿದ್ದ. “ಭಕ್ತಿ” ಕೃಷ್ಣ” ಎಂಬ ವಿಷಯವಾಗಿ ಮಾತನಾಡುವಾಗಲಂತೂ ತೀರ್ಥರಾಮನ ಕಣ್ಣುಗಳು ತೇವವಾಗುತ್ತಿದ್ದವು.

ಒಮ್ಮೆ ದ್ವಾರಕಾಪೀಠದ ಶಂಕರಾಚಾರ್ಯರಾಗಿದ್ದ ಶ್ರೀ ರಾಜರಾಜೇಶ್ವರ ತೀರ್ಥರೂ ಲಾಹೋರಿಗೆ ಬಂದರು. ಅವರ ವೇದ ಉಪನಿಷತ್ತುಗಳಲ್ಲಿ ಸಮರ್ಥರಾದ  ವಿದ್ವಾಂಸರು. ಅವರ ಪ್ರವಚನಗಳನ್ನು ಕೇಳಿ ತೀರ್ಥರಾಮ ಪ್ರಭಾವಿತನಾದ. ಸ್ವಾಮಿವಿವೇಕಾನಂದರ ಭಾಷಣದಿಂದಲೂ ಸ್ಫೂರ್ತಿ ಪಡೆದ.  ಉಪನಿಷತ್ತುಗಳನ್ನೂ ಬ್ರಹ್ಮಸೂತ್ರಗಳನ್ನು ಅಧ್ಯಯನ ಮಾಡಿದ. ಏಕಾಂತದಲ್ಲಿ ಕಾಲ ಕಳೆಯಬೇಕೆನ್ನಿಸಿತ್ತು. ಬೇಸಗೆಯನ್ನು ಹರಿದ್ವಾರ ಋಷಿಕೇಶಗಳಲ್ಲಿ ಕಳೆದ. ಗಂಗಾನದಿಯ ದಡದಲ್ಲಿ ಒಂದು ಚಿಕ್ಕ ಮನೆ ಬಾಡಿಗೆ ಹಿಡಿದು ಆಳವಾದ ಧ್ಯಾನ, ಚಿಂತನಗಳಲ್ಲಿ ಕಾಲ ಕಳೆದ. ವೇದಾಂತದಲ್ಲಿ ಓದಿದದ್ದುದನ್ನು ಮಾಡಿ ನೋಡಿ. “ನಾನು ಯಾರು? ದೇಹವೇ ನಾನೇ ಪ್ರಪಂಚವೆಂದರೇನು? ಆತ್ಮವೆಂದರೇನು?  ಅದರ ಶಕ್ತಿ ಎಷ್ಟು? ಮುಂತಾದ ಪ್ರಶ್ನೆಗಳ ಬಗ್ಗೆ ಚಿಂತಿಸಿದಷ್ಟೂ ಆನಂದವಾಗತೊಡಗಿತು. ಅದೊಂದು ಬೇರೆ ರೀತಿಯ ಸುಖವೆನಿಸಿತು. ಇತರರು ಪ್ರಪಂಚದಲ್ಲಿ ಆಸೆ ಪಡುವ ಸುಖ ರಾಮನಿಗೆ ಬಹಳ ಅಲ್ಪವೆನಿಸಿತು, ಬೇಡವೆನಿಸಿತು.  ೧೮೯೭ನೇಯ ವರ್ಷ ಅಕ್ಟೋಬರ ೨೫ನೇ ದಿನ. ಅಂದು ದೀಪಾವಳಿ. ಪ್ರಪಂಚದ ಸಂಬಂಧವನ್ನೆಲ್ಲ ಕಡಿದುಕೊಂಡಿರುವುದಾಗಿ ತಂದೆಗೆ ಪತ್ರ ಬರೆದು ಬಿಟ್ಟ. ಆಗಿನ್ನೂ ತೀರ್ಥರಾಮ ಇಪ್ಪತ್ತನಾಲ್ಕು ವರ್ಷದ ತರುಣ.

ಸಾಧನ

ಆಮೇಲೆ ತೀರ್ಥರಾಮ ಯಾವಾಗಲೂ ಹಗಲು ರಾತ್ರಿಗಳೆನ್ನದೇ ಧ್ಯಾನ, ಚಿಂತನೆಗಳಲ್ಲಿ ಕಾಲ ಕಳೆಯತೊಡಗಿದ. ತನಗಾಗುವ ಆನಂದವನ್ನು ಮಿತ್ರರಿಗೂ ತಿಳಿಸಿ ಹಂಚಿಕೊಳ್ಳಲೆಂದು ಅದ್ವೈತ ಅಮೃತವರ್ಷಿಣಿ ಸಭಾ’ ಎಂಬ ಹೆಸರಿನಿಂದ ಪ್ರತಿವಾರ ಗೆಳೆಯರ ಸಭೆ ಸೇರಿಸುತ್ತಿದ್ದ. ಆದರೂ ಇನ್ನೂ ಜ್ಞಾನ ದಾಹ ಹೋಗಿರಲಿಲ್ಲ. ಉಪನಿಷತ್ತುಗಳನ್ನು , ಜೈಮಿನಿ, ಕಪಿ,  ಕಣಾದ, ಗೌತಮ, ವ್ಯಾಸ, ಶಂಕರ, ಪತಂಜಲಿ, ಮುಂತಾದ ಋಷಿಗಳ ಗ್ರಂಥಗಳನ್ನೆಲ್ಲ ಅಭ್ಯಾಸ ಮಾಡಿದ. ಬೇರೆ ಮತದವರ ವಿಚಾರಗಳನ್ನೆಲ್ಲ ಓದಿ ತಿಳಿದುಕೊಂಡ. ಜೊತೆಗೆ ಕಬೀರ, ತುಳಸಿದಾಸ, ಸೂರದಾಸ, ತುಕಾರಾಂರ ವಚನಗಳನ್ನು ಮನನ  ಮಾಡಿಕೊಂಡ.

ತೀರ್ಥರಾಮ ಸ್ವತಃ ಕವಿ, ಸಾಹಿತ್ಯವನ್ನು ಆಸಕ್ತಿಯಿಂದ ಓದುತ್ತಿದ್ದ. ಆದರೂ ಆತನು ಬುದಿಧ ವೈಜ್ಞಾನಿಕ ರೀತಿಯನ್ನು ಮೆಚ್ಚಿತ್ತು.

“ಬರೆದವರು ದೊಡ್ಡವರೆಂಬ ಕಾರಣ ಬರೆದದ್ದೆಲ್ಲ ಒಳ್ಳೆಯದೆಂದು ನಂಬಬೇಕಾಗಿಲ್ಲ. ಹಾಗೆಯೇ ಬರೆದದ್ದರಲ್ಲಿ ಹೇಳಿದ್ದುದರಲ್ಲಿ ಸತ್ಯವಿದೆಯೆಂಬ ಮಾತ್ರಕ್ಕೆ ಅದನ್ನು ಹೇಳಿದವರು ಸತ್ಯವಂತರೇ ಇರುವರೆಂತಲ್ಲ. ಒಳ್ಳೆಯದು ಎಲ್ಲಿದ್ದರೂ ಸ್ವೀಕರಿಸೋಣ ಎಂಬುವುದು ತಿರ್ಥರಾಮನ ವಿಚಾರ ಪದ್ಧತಿ.

ತಪ್ಪಸ್ಸು ಸಿದ್ಧಿ

ಸಮಯ ಸಿಕ್ಕಾಗಲೆಲ್ಲ ತೀರ್ಥ ರಾಮ ಹಿಮಾಲಯದ ಪರ್ವರಗಳಲ್ಲಿ ಕಾಲ ಕಳೆಯಲು ಓಡುತ್ತಿದ್ದ. ಏಕಾಕಿ, ಕೇವಲ ಕೆಲವು ಉಪನಿಷತ್ತುಗಳೇ ಆತನ ಸಂಗಾಗಿ. ಗಂಗೆಯ ತಟದಲ್ಲಿ , ವಿಶಾಲವಾದ ಬಂಡಗಳ ಮೇಲೆ, ಹಗಲುರಾತ್ರಿ, ಮಳೆ, ಚಳೀ ಗಾಳಿಗಳೆನ್ನದೇ, ಆತನ ತಪಸ್ಸು ಸಾಗಿತ್ತು. ಗಂಗೋತ್ರಿ, ಜಮುನೋತ್ರಿಗಳನ್ನು ಯಾರು ದಾಟದಂತ ಸ್ಥಳದಲ್ಲಿ ದಾಟಿದ. ಹಿಮಮಯವಾದ ಗುಹೆಗಳಲ್ಲಿ ವಾಸಿಸಿದ. ಅದೊಂದು ದಿನ. ೧೮೯೮ರಲ್ಲಿ ಋಷಿಕೇಶದ ಹತ್ತಿರ ಬ್ರಹ್ಮಪುರಿಯಲ್ಲಿ ತೀರ್ಥರಾಮನಿಗೆ  “ಆತ್ಮ ಸಾಕ್ಷಾತ್ಕಾರ” ವಾಯಿತು. ಆತನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಆತನಿಗ ಎಲ್ಲವು ತಿಳೀದಿತ್ತು. ಎಲ್ಲ ಬೆಳಕೇ ಬೆಳಕು. ಆತನೇ ಒಂದು ಪ್ರಕಾಶದ ಗೋಲದಂತಾಗಿದ್ದ. ವಿಶ್ವವೆಲ್ಲ ತನ್ನ ದೇಹ, ತಾನೇ ವಿಶ್ವವೆಂಬಷ್ಟು ಆತನ ನೋಟ ಬೆಳೆದಿತ್ತು. ಸ್ಪಷ್ಟವಾಗಿತ್ತು.

ಈಗ ಆತನ ಮಾತಿನಲ್ಲಿ ಒಂದು  ಹೊಸ ಬೆಳಕು ಕಾಣಿಸುತ್ತಿತ್ತು. ಸಭೆ ಸಮಾರಂಭಗಳಲ್ಲಿ ತೀರ್ಥರಾಮನ ಭಾಷಣವೆಂದರೆ ಸಾವಿರಗಟ್ಟಲೆ ಜನ ಸೇರುತ್ತಿದ್ದರು.  ಆದರೆ ತೀರ್ಥರಾಮನ  ಸ್ವಭಾವವೇ ವಿಶಿಷ್ಟವಾಗಿತ್ತು. ತಿಂಗಳುಗಟ್ಟಲೆ ಮೌನವಾಗಿರುತ್ತಿದ್ದ ರಾಮ ಒಮ್ಮೆಲೆ ಜ್ವಲಾಮುಖಿಯಂತೆ ಅಬ್ಬರಿಸಿ ಮಾತನಾಡುತ್ತಿದ್ದ. ಅದೆಲ್ಲಿಯದೋ ಶಕ್ತಿ. ಆಗಿನ ಮಾತುಗಳಲ್ಲಿ ಒಂದು ಹೊಸ ಚೇತನ, ಬೆಳಕು ಚಿಮ್ಮುತ್ತಿತ್ತು.  ಎಲ್ಲ ಮತದವರ ಮನಸ್ಸನ್ನೂ ಅದು ಅರಳಿಸುತ್ತಿತ್ತು.

ಸಂಚಾರಗಳು

ಕರಾಚಿ, ಸಕ್ಕರಗಳೀಗೆ ಹೋದ. ಕಾಶ್ಮೀರದಲ್ಲಿ ಸಂಚರಿಸಿದ. ಅಮರನಾಥ ಸಂದರ್ಶಿಸಿದ. ಎಲ್ಲೆಲ್ಲೂ ಗೌರವ, ಈ ಮಧ್ಯೆ ಮತ್ತೇ ಅನಾರೋಗ್ಯವಾಯಿತು.  ಬಳಲಿದ. ಸಾಮಾನ್ಯ ಪೆಟ್ಟಿಗೆಯಲ್ಲಿ ಬಹಳ ಭಾರದ ವಸ್ತುವನ್ನು ತುಂಬಿದಂತಾಗಿತ್ತು. ತೀರ್ಥರಾಮನ ದೇಹ ಆತನ ಆತ್ಮಶಕ್ತಿಯನ್ನು ತಾಳಿಕೊಳ್ಳಲಾರದೆ ಅನೇಕ ಲ ಸೋಲುತ್ತಿತ್ತು.  ಸ್ಪೂರ್ತಿಯಲ್ಲಿ ಹೊರ ಬಂದ ತನ್ನ ವಿಚಾರಗಳು ಬರಹದಲ್ಲಿ ಉಳೀಯಬೇಕೆಂದು ತೀರ್ಥ ರಾಮನಿಗೆ ಅನಿಸಿತು. “ಅಲೀಫ್:” ಎಂಬ ಹೆಸರಿನ ಉರ್ದು ಪತ್ರಿಕೆಯನ್ನು ಪ್ರಾರಂಭಿಸಿದ. ನವೀನ ವಿಚಾರದ ಲೇಖನಗಳನ್ನು ಬರೆಯಬೇಕೆಂದರೆ ತೀರ್ಥರಾಮನಿಗೆ ಬಹಳ ಹುಮ್ಮಸ್ಸು. ಅದಕ್ಕಗಿ ಎರಡು ಗಂಟೆಗಳ ಮಟ್ಟಿಗೆ ಇದ್ದ ಕಾಲೇಜಿನ ಕೆಲಸವನ್ನೂ ತ್ಯಜಿಸಿಬಿಟ್ಟ.

ರಾಮತೀರ್ಥರು ಹಿಮಾಲಯದ ಗುಹೆಯಲ್ಲಿ ನಿಂತು ತಪಸ್ಸು ಮಾಡಿದರು.

ವಾನಪ್ರಸ್ಥಗಂಗೆಯಲ್ಲಿ ಕೂಸು

ಜನಜಂಗುಳಿ, ಗಲಾಟೆ ಇರುವ ಲಾಹೋರ‍್ ತೀರ್ಥ ರಾಮನಿಗೆ ಹಿಡಿಸದಾಯಿತು. ಹೆಂಡತಿ ಮಕ್ಕಳು ಮತ್ತು ಕೆಲವು ಮಿತ್ರರೊಂದಿಗೆ ಹರಿದ್ವಾರಕ್ಕೆ ಹೊರಟು ಬಂದ. ನಾವೆಯಲ್ಲಿ ನದಿ ದಾಟುವಾಗ ಒಂದು ಘಟನೆ ನಡೆಯಿತ್ತೆಂದು ಆತನ ಹಿರಿಯ ಮಗನಾದ ಮದನ ಮೋಹನ ಗೋಸ್ವಾಮಿ ಬರೆದಿದ್ದಾನೆ.  ಒಡವೆ, ಸಾಮಾನುಗಳನ್ನೆಲ್ಲ ದಾನ ಮಾಡಿದ ಮೇಲೆಯೇ ಹೆಂಡತಿಯನ್ನು ಜೊತೆಗೆ ಕರೆದೊಯ್ಯಲು ತೀರ್ಥರಾಮ ಒಪ್ಪಿದ. ಮೂರು ವರ್ಷದ ಚಿಕ್ಕ ಮಗುವಿಗೆ ವಿಷಮಜ್ವರ ಬರುತ್ತಿತ್ತು.  ನದಿಯ ನಡುವೆ ನಾವೆ ಬಂದಾಗ ” ಈ ಕೂಡನ್ನು ಗಂಗೆಗೆ ಅರ್ಪಿಸಿ ಬಿಡಲೆ? ” ಎಂಧು ಪತಿನಯ್ನು ಕೇಳಿದ. ಆಕೆಯೂ ಸಾಧ್ವಿ” ಆಗಬಹುದು ಎಂದಳು. ತೀರ್ಥರಾಮರು ಆ ಕೂಸನ್ನು ಹಿಡಿದು ಬಾಗಿ ಗಂಗೆಯ ಪ್ರವಾಹದಲ್ಲಿ ಅದ್ದಿ ಮೇಲಕ್ಕೆ ಎತ್ತಿಕೊಂಡ. ನಾವೆಯಲ್ಲಿ ಇದ್ದವರ ಹೃದಯದ ಬಡಿತವೇ ಕ್ಷಣ ಹೊತ್ತು ನಿಂತಿರಬೇಕು.  ಆದರೆ ಆ ಮಗುವಿನ ವಿಷಮಜ್ವರ ವಾಸಿಯಾಯಿತು. ದೇವಪ್ರಯಗ ದಾಟಿ ತೆಹರಿ ತಲುಪಿದರು- ಎಂದು ಮದನ ಮೋಹನ ಗೋಸ್ವಾಮಿ ಹೇಳಿದ್ದಾರೆ. ತೀರ್ಥರಾಮನೂ ಅವನ ಜೊತೆಯವರೂ ಉಟ್ಟ ಬಟ್ಟೆ, ಇದ್ದ ಪುಸ್ತಕಗಳು ಇವನ್ನು ಬಿಟ್ಟು ಎಲ್ಲವನ್ನೂ ನದಿಗೆಸೆದರು. “ಮುಂದಿನ ಹೊಣೆ ದೇವರಿಗೆ ಸಂಬಂಧಿಸಿದುದು”-  ಇದು ತೀರ್ಥರಾಮನ ಸೂಚನೆ. ಮರುದಿನವೇ ಸ್ವಾಮಿ ರಾಮನಾಥ ಎಂಬಾತ ತೀರ್ಥರಾಮನನ್ನು ನೋಡಿದ.ಆತನಿಗೇನೂ ಹೊಳೆಯಿತೋ ಏನೋ. ಈ ಪರಿವಾರಕ್ಕೆಲ್ಲ ತಿಂಗಳಿಗೆ ಹತ್ತು ರೂಪಾಯಿಯ ಕಾಳನ್ನು ಒದಗಿಸಲು ತನ್ನವರಿಗೆ ಹೆಳಿ  ಹೋದ.

“ಬಯಕೆಯನ್ನು ಗೆದ್ದರೆ- ಬಯಕೆಯನ್ನೇ ತೊರೆದರೆ -ಬಯಸಿದ ವಸ್ತು ತಾನೇ ನಮ್ಮನ್ನು ಬೆನ್ನಟ್ಟಿ ಬರುತ್ತದೆ.  ನಾವು ಅದನ್ನು ಹುಡುಕಿಕೊಂಡು ಹೋಗಿ ಶ್ರಮ ಪಡಬೇಕಾಗಿಲ್ಲ” ಎಂದು ತೀರ್ಥರಾಮ ಅನೇಕ ಸಲ ಹೇಳುತ್ತಿದ್ದ. ಆ ಮಾತಿಗೆ ಆತನ ಜಿವನದಲ್ಲಿಯೇ ಅನೇಕ ನಿದರ್ಶನಗಳಾದವು.

ಒಂದು ರಾತ್ರಿ ಇದಕ್ಕಿದ್ದಂತೆಯೇ ತೀರ್ಥರಾಮ ಎಲ್ಲರನ್ನೂ ಬಿಟ್ಟು ಉತ್ತರ ಕಾಶಿಯ ಕಡೆಗೆ ಹೊರಟುಬಿಟ್ಟ. ಕತ್ತಲು, ಮಳೆ, ಹಿಮಪಾತ, ದಾರಿ ಕಾಣದು. ಆದರೆ ತೀರ್ಥರಾಮ ಎಚ್ಚರವಿಲ್ಲದೆ ನಡೆದದ್ದು, ಕಲ್ಲು, ಗುಂಡು, ಜಾರಿಕೆ, ಸೆಳವಿನ ಝರಿಗಳು- ಅದು ಹೇಗೋ ತೀರ್ಥರಾಮ ದಾಟಿದ್ದ. ಓಂಕಾರದ ಘೋಷ ಆತನ ಬಾಯಿಯಿಂದ ಹೊರಟು ಜೋರಾಗಿ  ಕೇಳಿಸುತ್ತಿತ್ತು. ಆತನ ಪತಿನ ಇದಾದ ಮೇಲೆ ಬಹಳ ಗಾಬರಿಯಾದಳೂ. ತೀರ್ಥರಾಮ ತಿರುಗಿ ಬಂದರೂ ಆಕೆಗೆ ಮನಸ್ಸಿನ ಧರ್ಯ ಕುಗ್ಗಿತು. ಮರಳಿ ಮನೆಗೆ ಹೋಗಬಯಸಿದಳು. ಚಿಕ್ಕ ಮಗ ಬ್ರಹ್ಮಾನಂದನೊಂದಿಗೆ ಅವಳನ್ನು ತೀರ್ಥರಾಮ ಕಳಿಸಿಬಿಟ್ಟ.

ಸನ್ಯಾಸ–  ಹಿಮಾಚಲವಾಸ

ಆರು ತಿಂಗಳವರೆಗೆ ಸತತವಾಗಿ ಹಿಮಾಲಯದಲ್ಲಿ ಕಠಿಣವಾದ ಸಾಧನೆ ನಡೆಯಿತು. ೧೯೦೧ರಲ್ಲಿ ತೀರ್ಥರಾಮನಿಗೆ ಸನ್ಯಾಸ ಸ್ವೀಕರಿಸಬೇಕೆನಿಸಿತು. ಒಂದು ದಿನ ಗಂಗೆಯಲ್ಲಿ ಸ್ನಾನ ಮಾಡುವಾಗ ತೀರ್ಥರಾಮ ಜನಿವಾರವನ್ನು ಪ್ರವಾಹದಲ್ಲಿ ಕಳಚಿ, ಸನ್ನಾಸಿನಿಯಾದ. ಗೋಸ್ವಾಮಿ ತೀರ್ಥರಾಮ ಎಂ.ಎ.,ಸ್ವಾಮಿರಾಮತೀರ್ಥರಾದರು.

ಸಂಗಾತಿ ಸ್ವಾಮಿ ನಾರಾಯಣನೊಂದಿಗೆ ಮತ್ತೇ ಹಿಮಶಿಖರಗಳನ್ನೆಲ್ಲ ಬಳಸಿದರು. ಕೇದಾರ,ಬದರಿನಾಥ, ತ್ರಗುಣೇನಾರಾಯಣ, ವ್ಯಾಸಾಶ್ರಮ, ವಶಿಷ್ಟ ಗುಹೆಗಳಲ್ಲಿ ನಿಂತು ತಪಸ್ಸನ್ನು ಮಾಡಿದರು. ಸುಮೇರು ಪರ್ವತವನ್ನು ಏರಿದರು. ಮತ್ತೇ ಬಯಲು ಪ್ರದೇಶಕ್ಕೆ ಇಳಿದು ಮಥುರಾ ತಲುಪಿದರು. ತೆಹೆರಿ ಮಹರಾಜನು ಇವರ ಪ್ರತಿಭೆಯನ್ನು ಮನಗಂಡು ಜಪಾನಿಗೆ ಹೋಗಿ ಸರ್ವಧರ್ಮ ಸಮ್ಮೆಳನದಲ್ಲಿ ಭಾಗವಹಿಸಲು ಸ್ವಾಮಿರಾಮತೀರ್ಥ ರನ್ನು ಕೇಳಿಕೊಂಡನು. ಪ್ರಯಾಣದ ವ್ಯವಸ್ಥೆಯನ್ನೂ ಮಾಡಿದ.

ವಿದೇಶ ಸಂಚಾರ

ಸ್ವಾಮಿ ರಾಮತೀರ್ಥರು ತಮ್ಮಸಂಗಾತಿ ಸ್ವಾಮಿ ನಾರಾಯಣನೊಂದಿಗೆ ಜಪಾನಿನ ಯಾಕೋಹಮಾ ನಗರ ತಲುಪಿದರು. ಅಲ್ಲಿ ಹೊದ ನಂತರ ಸರ್ವ ಧರ್ಮ ಸಮ್ಮೇಳನವೇ ಇಲ್ಲವೆಂದು ಗೊತ್ತಾಯಿತು. ಟೋಕಿಯೋಗೆ ತೆರಳಿದರು. ಹೋದಲೆಲ್ಲ ಪ್ರವಚನಗಳಾಗುತ್ತಿದ್ದವು. ವಿದ್ಯಾರ್ಥಿಗಳ ಸಭೆಗಳಲ್ಲಿ ಮಾತನಾಡಿದರು. ಅಲ್ಲಿಯ ವಿದ್ಯಾರ್ಥಿಗಳೂ ವಿದ್ವಾಂಸರೂ ತಲೆದೂಗಿದರು. ಶ್ರೀ ಪೂರಾಣ ಎಂಬುವನಂತೂ ಸನ್ಯಾಸಿಯೇ ಆಗಿಬಿಟ್ಟ.

“ಗರ್ಜಿಸುವ ಮುಂಬೆಳಗು ” ಎಂಬ ಪತ್ರಿಕೆಯನ್ನೇ ಪ್ರಸಾರಕ್ಕಾಗಿ ಹೊರಡಿಸಿದ.

ಜಪಾನಿನಿಂದ ರಾಮತೀರ್ಥರು ಅಮೇರಿಕಾಕ್ಕೆ ಹೋದರು. ಅವರ ಅದೇಶದಂತೆ ಸ್ವಾಮಿ ನಾರಾಯಣ ಬರ್ಮಾ ಸಿಂಹಳ (ಈಗಿನ ಶ್ರೀಲಂಕಾ),  ಆಫ್ರೀಕಾ, ಯೂರೂಪಗಳಿಗೆ ಭಾರತೀಯ ತತ್ವಗಳ ಪ್ರಸಾರಕ್ಕಾಗಿ ಹೊರಟರು.

ಅಮೇರಿಕದಲ್ಲಿ ರಾಮತೀರ್ಥರು ಎರಡು ವರ್ಷ ಸಂಚರಿಸಿದರು. ಅನೇಕ ನಗರಗಳಲ್ಲಿ ಇವರ ಸ್ಫೂರ್ತಿಯಿಂದ ಕೂಡಿದ ವಾಣಿ ಗರ್ಜಿಸಿತು. ಸ್ವಾಮಿ ವಿವೇಕಾನಂದರನ್ನು ನೋಡಿದ   ಮತ್ತು ಕೆಳಿದ ಅಮೇರಿಕನ್ನರಿಗೆ ಮತ್ತೇ ಅಷ್ಟೇ ಪ್ರಭಾವಿ ವ್ಯಕ್ತಿಯ ದರ್ಶನವಾಗಿತ್ತು. ಜೀವಂತ ಕ್ರಿಸ್ತನೇ ಬಂದಿರುವನೆಂದು ಅಮೇರಿಕದ ಪತ್ರಿಕೆಗಳಲ್ಲಿ ಹೊಗಳಿದರು. ಹರಮೆಟಿಕ್ ಬ್ರದರ ಹುಡ್ ಎಂಬ ಸಂಸ್ಥೆಯನ್ನು  ಅಮೇರಿಕನ್ನರು ಸ್ವಾಮಿಗಳಿಗಾಗಿ ಸ್ಥಾಪಿಸಿದರು. ಸ್ವಾಮಿಗಳ ಭಾಷಣಗಳನ್ನೆಲ್ಲ ಸಂಗ್ರಹಿಸಿ ಟೈಪು ಮಾಡಿಸಿಕೊಟ್ಟರು. ಅವೇ ಮುಂದೆ “ದೇವಸಾಕ್ಷಾತ್ಕಾರದ ಗೊಂಡಾರಣ್ಯದಲ್ಲಿ” ಎಂಬ ಹೆಸರಿನಿಂದ ಅನೇಕ ಸಂಪುಟಗಳಲ್ಲಿ ಪ್ರಕಟವಾಗಿವೆ.

ಅನೇಕ ಜನ ದೇವರೇ ಇಲ್ಲವೆನ್ನುವವರು ಸ್ವಾಮಿಗಳನ್ನು ನೋಡಿದ ಕೂಡಲೇ ಆಸ್ತಿಕರಾಗಿ ದೈವಿ ಶಕ್ತಿ, ಗುಣಗಳಿರುವ ಅನುಭವ ಪಡೆದಿದಾಗಿ ಹೇಳಿದರು. ಅನೇಕ ಮಂದಿ ಸಂನ್ಯಾಸ ಸ್ವೀಕರಿಸಿದರು. ಸ್ವಾಮಿ ರಾಮತೀರ್ಥರು ಯಾವಾಗಲೂ ನಗುವಿನ ಬುಗ್ಗೆಯಾಗಿರುತ್ತಿದ್ದರು. ಹತ್ತಿರ ಬಂದವರ ಮನಸ್ಸು ಅರಳಿ ಆನಂದವಾಗುವಂತೆ  ಇರುತ್ತಿದ್ದರು. ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಮತ್ತು ಭಾರತೀಯ ವೇದಾಂತದ ಬಗ್ಗೆ ಅಮೇರಿಕನ್ನರಲ್ಲಿ ಆಸಕ್ತಿಯನ್ನು ಕೆರಳಿಸುವುದು ಅವರ ಒಂದು ಉದ್ದೇಶವಾಗಿತ್ತು. ಅಲ್ಲದೇ, ಅಮೇರಿಕದ ಜನ ಸಾಹಸೀ ವೃತ್ತಿಯವರು, ಅವರಿಗೆ ಸ್ವಾತಂತ್ಯ್ರದ ಹಸಿವು: ಇವನ್ನುಕಂಡುಕೊಂಡು ಭಾರತೀಯರೂ ತಮ್ಮ ಜಾತಿ, ಮತಗಳ ಸಣ್ಣತನವನ್ನು ಬಿಟ್ಟು, ಧೀರರಾಗಲೆಂಬ ಬಯಕೆ. ಎಲ್ಲಕ್ಕೂ ಹೆಚ್ಚಾಗಿ ಮಾವನರೆಲ್ಲ ಎಲ್ಲಿದ್ದರೂ ಒಂದೇ- ವಿಶ್ವ ಒಂದೇ ಎಲ್ಲರ ಆತ್ಮವೂ ಒಂದೇ ಎಂಬ ಮಹಾ ಸಿದ್ಧಾಂತವನ್ನು ಹರಡುವ ಸಾಹಸ. ಇವೇ ಸ್ವಾಮಿಗಳು ಪ್ರಪಂಚ ಸುತ್ತುವುದಕ್ಕೆ ಕಾರಣವಾದವು.

ಸ್ವಾಮಿ ರಾಮತೀರ್ಥರು ಅಮೇರಿಕದಿಂದ ಮರಳುವಾಗ ಈಜಿಫ್ಟಿಗೆ ಬಂದರು. ಅಲ್ಲಿ ಮಹಾಮಸೀದಿಯಲ್ಲಿ ಫಾರಸಿ ಭಾಷೆಯಲ್ಲಿ ಉಪನ್ಯಾಶ ಮಾಡಿ ಮುಸ್ಲಿಮರ ಮನಸ್ಸನ್ನು ಗೆದ್ದುಕೊಂಡರು. ಹೀಗೆ ಎರಡೂವರೆ ವರ್ಷ ಸಂಚಾರದ ನಂತರ ಭಾರತಕ್ಕೆ ಮರಳಿದರು. ಆರ್ಯಸಮಾಜ, ಬ್ರಹ್ಮ ಸಮಾಜ, ಚಿರ್ಖ, ಕ್ರೈಸ್ತ ಮುಸ್ಲಿಂ ಎಲ್ಲ ಸಂಸ್ಥೆಗಳವರೂ ಸ್ವಾಮಿಜಿಯವರನ್ನು ಸ್ವಾಗತಿಸಿದರು. ಗೌರವಿಸಿದರು.

ರಾಷ್ಟ್ರಪ್ರೇಮಭವಿಷ್ಯತ್ತಿನ ದರ್ಶನ

ಸ್ವಾಮಿ ರಾಮತೀರ್ಥರ ರಾಷ್ಟ್ರಪ್ರೇಮ ಅವರ ವಿಶ್ವಪ್ರೇಮದಷ್ಟೆ ಬಲವಾಗಿತ್ತು. ಇನ್ನೂ ದಾಸ್ಯದಲ್ಲಿದ್ದ ಭಾರತದಲ್ಲಿ ಸ್ವಾಮಿ ವಿವೇಕಾನಂದರು “ಭಾರತೀಯರೇ! ನೀವು ಅಮೃತಪುತ್ರರು. ಸಿಂಹಗಳೂ ವೀರರಾಗಿರಿ, ಏಳಿರಿ!” ಎಂದು ಎಚ್ಚರಿಸಿದ್ದರು.  ರಾಮತೀರ್ಥರು ಅದೇ ತತ್ವವನ್ನೇ ಭಾಷಣಗಳ ಮೂಲಕ ಕಥೆಗಳ ಮೂಲಕ ಹೇಳಿದರು.

ಭಾರತ ಸ್ವಾತಂತ್ರವಾಗಲೇಬೇಕು. ಸ್ವತಂತ್ರವಾಗೇ ಆಗುತ್ತದೆ. ತ್ಯಾಗದಿಂದ  ಸ್ವಾತಂತ್ಯ್ರ ಬರುತ್ತದೆ. ಇದೇ ರಾಮನೇ ಬಿಡುಗಡೆಗೊಳಿಸುತ್ತಾನೋ ಇನ್ನೂ ಅನೇಕ ರಾಮರ ಆತ್ಮಗಳ ಮೂಲಕವೋ, ದೌರ್ಬಲ್ಯ, ಅಜ್ಞಾನಗಳ ನಾಶವಾಗಿ ಕೇವಲ ಹತ್ತು ವರ್ಷಗಳಲ್ಲಿ ಹೊಸ ಸ್ಪೂರ್ತಿಯುಕ್ತ ಜೀವನ ಪ್ರವಾಹ ಹರಿಯುತ್ತದೆಯೆಂದು ಮಾತ್ರ ಹೇಳಬಲ್ಲೆ:.

“ವೈಯುಕ್ತಿಕ ಧರ್ಮ ರಾಷ್ಟ್ರಧರ್ಮಕ್ಕಿಂತ ಹೆಚ್ಚೆಂದು ಎಂದೂ ಭಾವಿಸಬಾರದು. ನಮ್ಮ ಜಾತಿ, ಮತ ಯಾವುವೂ ರಾಷ್ಟ್ರಕ್ಕಿಂತ ಹೆಚ್ಚಲ್ಲ, ಒಬ್ಬ ಜಪಾನೀ ಯುವಕ ತನ್ನ ತಾಯಿಯನ್ನು ಜೋಪಾನ ಮಾಡುವುದು ಮಗನ ಧರ್ಮವೆಂದು ಬಗೆದು ಸೈನದಲ್ಲಿ ಸೇರಲು ನಿರಾಕರಿಸಿದನಂತೆ.  ಇದನ್ನು ಕೇಳೀದ ಆ ತಾಯಿ ಆತ್ಮಹತ್ಯೆಮಾಡಿಕೊಂಡಳಂತೆ. ಹೀಗೇ ವ್ಯಕ್ತಿ ಧರ್ಮಕ್ಕಿಂತ ರಾಷ್ಟ್ರಧರ್ಮ, ಮಾತೃಪ್ರೇಮಕ್ಕಿಂತ ದೇಶಪ್ರೇಮ ದೊಡ್ಡದೆಂದು ಆ ತಾಯಿ ತೋರಿಸಿಕೊಟ್ಟಳು:” – ಇದು ಅವರು ಹೇಳಿದ ಒಂದು ಕಥೆ.

“ನಾವೆಲ್ಲ ಈ ದೇಶದ ಇತಿಹಾಶದ ಒಂದು ಸೂಕ್ಷ್ಮ ಸ್ಥಿತಿಯಲ್ಲಿ ಹುಟ್ಟಿದ್ದೇವೆ. ಆದರೆ ಅದಕ್ಕಾಗಿ  ನಾವು ದೇವರಿಗೆ ಕೃತಜ್ಞರಾಗಿರಬೇಕು. ಏಕೆಂದರೆ ನಮಗೆ ದೇಶಸೇವೆ ಮಾಡುವ ಯೋಗ ದೊರೆತಿದೆ. ಭಾರತ ಈಗ ಮಲಗಿದೆ.  ಬಹಳ ದೀರ್ಘ ಕಾಲದಿಂದ ನಿದ್ರೆಯಲ್ಲಿ ಮಲಗಿದೆ. ಆದರೆ ಚೆನ್ನಾಗಿ ಮಲಗಿದವನೇ ಚೆನ್ನಾಗಿ ಏಳಲೂ ಇಲ್ಲ. ಭಾರತದಲ್ಲಿ ಪ್ರಕಾಶಮಾನವಾದ ಹಗಲಿದ್ದಾಗ ಅಮೇರಿಕದಲ್ಲಿ ಕತ್ತಲತಿತು. ಅದು ಎಲ್ಲಿದೆ ಎಂಬುವುದೇ ತಿಳಿದಿದ್ದಿಲ್ಲ. ಈಗ ಅಲ್ಲಿ ಬೆಳಗು. ಎಲ್ಲ ಅಭಿವೃದ್ಧಿಯನ್ನು ನೋಡುತ್ತಿದ್ದೇವೆ. ಆದರೆ ಆಗಲೇ ಸೂರ್ಯ ಪೂರ್ವಾಭಿಮುಖವಾಗಿದ್ದಾನೆ. ಜಪಾನು ಎದ್ದಿದೆ. ಬಹು ಬೇಗನೇ ಭಾರತದಲ್ಲಿ ಬೆಳಗಾಗಲಿದೆ. ಭಾರತ ಎಚ್ಚರವಾಗಲಿದೆ. ಈ ಋತುಚಕ್ರ ಸೃಷ್ಟಿಯ ನಿಯಮ. ಇದನ್ನು ಬರೆದಿಟ್ಟುಕೊಳ್ಳಿರಿ. ಇಪ್ಪತ್ತನೆಯ ಶತಮಾನದ ಮೊದಲ ಅರ್ಧಭಾಗದಲ್ಲಿಯೇ ಭಾರತ  ಮೈಕೊಡವಿ ಏಳುತ್ತದೆ. ಹಿಂದಿನ ಕಾಲಕ್ಕಿಂತ ಹೆಚ್ಚಿನ ಸಿದ್ದಿಯನ್ನೂ ವೈಭವವನ್ನೂ ಪಡೆಯಲಿದೆ”.

ಇದು ೭೫ ವರ್ಷಗಳ ಹಿಂದೆಯೇ ರಾಮತೀರ್ಥರು  ಕಂಡ ದರ್ಶನ.

:”ಓ ! ರಾಜಮಹಾರಾಜರೇ! ಪುರೋಹಿತ ಮಠಾಧಿಪತಿಗಳೇ ! ಆಳುವವರೇ! ಕೆಲವೇ ವರ್ಷಗಳಲ್ಲಿ ಬರಲಿರುವ ಬದಲಾವಣೆಯನ್ನು ಯೋಚಿಸಬಲ್ಲಿರಾ? ಇದು ನಿಮಗೆ ವಿಚಿತ್ರವೆನಿಸೀತು. ಆದರೆ ನನ್ನ ದೃಷ್ಟಿಗೆ ಕಾಣುತ್ತಲ್ಲಿದೆ.  ಮಾನವ ನಿರ್ಮಿತ ಮಣ್ಣಿನ ವಿಭಾಗಗಳೆಲ್ಲ ಅಳಿಸಿ ಹೋಗಿ ಭಾರತ, ಚೀನ, ಇಂಗ್ಲೇಂಡು, ಅಮೇರಿಗಳಲ್ಲಿಯ ವ್ಯತ್ಯಸಗಳು ಕರಗಿ ಹೋಗ ಹೊಸ ಸಮಾಜ ಬಲಿರುವುದು ಕಾಣುತ್ತದೆ. ಅತಿಶ್ರೇಷ್ಠ ಸಂನ್ಯಾಸಿಗಳು- ಅರಸು, ಇಂದು ತೀರ ಕೆಳಮಟ್ಟದವರು ಎನಿಸಿಕೊಂಡವರೊಂದಿಗೆ ಸ್ನೇಹದಿಂದ ತಿರುಗಾಡುತ್ತಾರೆ. ಸಂನ್ಯಾಸಿಯ ಸೋಮಾರಿತನ ಹೋಗಿ ಭಿಕ್ಷೆಯ ಪಾತ್ರ ಕಾಯಕದ ಸಲಿಕೆಯಾಗುತ್ತದೆ. ಕೃತ್ರಿಮ ವ್ಯತ್ಯಾಸಗಳು ಹೋಗಲಿವೆ. ಪ್ರಪಂಚವೇ ನನ್ನ ಮನೆ. ಅಲ್ಲಿ ವಾಇಸುವ ಜನರೇ ನನ್ನ ಬಂಧು- ಭಗಿನಿಯರು. ಅವರನ್ನು ಪ್ರೀತಿಸುವುದೇ ನನ್ನ ಧರ್ಮ…. ” ಇದು ರಾಮತೀರ್ಥರು ಕಂಡು ವಿಶ್ವದ ಭವಿಷ್ಯ. ಅವರು ತೋರಿಸಿದ ವಿಶ್ವಭಾಂಧವ್ಯ.

ವಿಚಾರಗಳುಕಥೆಗಳು

“ಸುಧಾರಕರು ಬೇಕಾಗಿದ್ದಾರೆ- ಇತರರನ್ನು ಸುಧಾರಿಸುವುದಕ್ಕಲ್ಲ. ತಮ್ಮನ್ನು ತಾವು ಸುಧಾರಿಸಿಕೊಳ್ಳಲಿಕ್ಕೆ: ಎಂದು ರಾಮತೀರ್ಥರು  ಘೋಷಿಸಿದರು.  ಅವರ ಪ್ರಧಾನವಾದ ಸಂದೇಶವಾದರೂ ಏನು ಎಂದುಕೊಳ್ಳುವವರಿಗೆ ಅವರೊಂದು ಕಥೆ ಹೇಳುತ್ತಿದ್ದರು.

“ಒಬ್ಬ ರಾಜ ಅರಮನೆಯ ಮೊಗಸಾಲೆಯಲ್ಲಿ ಎರಡು ಎದುರುಬದುರಾಗಿದ್ದ ಗೋಡೆಗಳ ಮೇಲೆ ಉತ್ತಮ ಚಿತ್ರಗಳನ್ನು ಬರೆಯಲು ಇಬ್ಬರು ಉತ್ತಮ ಚಿತ್ರಗಾರರನ್ನು ನೇಮಿಸಿದನಂತೆ. ಅವರಲ್ಲೊಬ್ಬ ತಾನು ಬರೆದ ಚಿತ್ರ ಇನ್ನೊಬ್ಬ ಕಲಾವಿದ ನೋಡಕೂಡದೆಂದು ಪರದೆ ಕಟ್ಟಿಕೊಂಡು ಅತ್ಯುತ್ತಮ ವರ್ಣ ಚಿತ್ರ ಬರೆದು ಮುಗಿಸಿದ.  ಆ ರಾಜ ಚಿತ್ರವನ್ನು ನೋಡಿ ಬಹು ಸೊಗಸಾಗಿದೆ ಎಂದು ಹೊಗಳಿದ. ಆಮೇಲೆ ಅದರ ಎದುರಿನ ಗೋಡೆಗೆ ತಿರುಗಿದಾಗ ರಾಜನೂ ಇತರರೂ ಆಶ್ಚರ್ಯದಿಂದ ತಬ್ಬಿಬ್ಬಾದರು. ಜೊದಲಿನ ಚಿತ್ರಕ್ಕಿಂತಲೂ ನುಣುಪಾದ ಹೊಳಪಿನಿಂದ ಈ ಚಿತ್ರ ಶೋಭಿಸುತ್ತಿತು. ಈ ಎರಡನೆಯ ಚಿತ್ರಕಾರ ಏನೂ ಮಾಡಿರಲಿಲ್ಲ.ಕೇವಲ ಗೋಡೆಯನ್ನು ನುಣುಪಾಗುವಂತೆ ಮತ್ತೇ ಮತ್ತೇ ತಿಕ್ಕಿ ಕನ್ನಡಿಯ ಹಾಗೆ ಪ್ರತಿಫಲಿಸುವಂತೆ ಮಾಡಿದನ್ನಷ್ಟೆ. ಮೊದಲಿನ ಗೋಡೆಯ ಚಿತ್ರವೇ ಈ ಕನ್ನಡಿಯಂಥ ಗೋಡೆಯ ಮೇಲೆ ಪ್ರತಿಫಲಿಸಿ, ಹೆಚ್ಚು ಆಕರ್ಷಕವಾಗಿ ಕಾಣುತ್ತಿತು. “ಹಾಗೆ ಒಳ್ಳೆಯ ಹೃದಯ ವುಳ್ಳೌರ ಮನಸನ್ನು ಸ್ವಚ್ಛಮಾಢಿ ಮಹಾತ್ಮರು ಈಗಾಗಲೇ ಅನುಭವಿಸಿ ಹೇಳಿದ ತತ್ವಗಳು ಅಲ್ಲಿ ಮೂಡುವಂತೆ ಮಾಡುವುದು ಮಾತ್ರ ತಮ್ಮ ಕೆಲಸವೆಂದು ರಾಮತೀರ್ಥರು  ಹೇಳುತ್ತಿದ್ದರು.

ರಾಮತೀರ್ಥರು ಇನ್ನೂ ಅನೇಕ ಸುಂದರವಾದ ಕಥೆಗಳನ್ನು ಹೇಳುತ್ತಿದ್ದರು.

“ಒಬ್ಬ ರಾಜನ ಕೊರಳಿನಲ್ಲಿ ಉದ್ಧವಾದ ಮತ್ತು ಅಂದವಾದ ರತ್ನ ಪದಕದ ಹಾರ ಇತ್ತು. ಆದರಿಂದ ಅತನ ವರ್ಚಸ್ಸು, ಹೆಚ್ಚಿತು.  ಆತನಿಗೂ ಆ ಸರವೆಂದರೆ ಬಲು ಮೆಚ್ಚಿಕೆ. ಅದು ಎದೆಯ ಮೇಲೆ ನೇತಾಡುತ್ತಿದ್ದಾಗಲೆಲ್ಲ ರಾಜ ಬಹಳ ಪ್ರಸನ್ನನಾಗಿರುತ್ತಿದ್ದ. ಒಮ್ಮೆ ಆ ಸರ ಆತನ ಕರಳ ಹಿಂದುಗಡೆ ಬೆನ್ನಿನ ಕಡೆಗೆ ಸರಿಯಿತು. ರಾಜನಿಗೆ ಅದು ಗೊತ್ತಾಗಲೇ ಇಲ್ಲ. ಎದೆಯ ಮೇಲೆ ರತ್ನದ ಪದಕ ಕಾಣದ ಕಾರಣ ಹುಡುಕಲು ಆಜ್ಞೆ ಮಾಢಿಕದ. ಸೇವಕರೆಲ್ಲ ಹುಡುಕಿಬೇಸತ್ತರೂ ಹಾರವೇನೂ ಸಿಗಲಿಲ್ಲ. ರಾಜನಿಗೆ ಬಹಳ ವ್ಯಥ್ಯೆಯಾಯಿತು. ಯಾವನೋ ಒಬ್ಬಾತ ರಾಜನ ಬಳಿಗೆ ಬಂದ. ರಾಜನ ಕೊರಳಿಗೆ ಕೈಹಾಕಿ ಹಾರ ಹಿಡಿದೆಳೆದು ತೋರಸಿದ. ರಾಜನಿಗ ಆಶ್ಚರ್ಯವೇ ಆಶ್ಚರ್ಯ. ಅದೇ ರೀತಿಯಾಗಿ ಆತ್ಮತೇಜಸ್ಸೆಂದರೆ ಹೊರಗಿನದಲ್ಲ. ಅದು ನಿಮ್ಮೆಲ್ಲರಲ್ಲಿಯೇ ಇರತಕ್ಕದ್ದೇ ನೀವೇ ಆ ತೇಜಸ್ಸು= ನೀವೇನು ಸಾಮಾನ್ಯರಲ್ಲ. ತನ್ನ ತೇಜಸ್ಸನ್ನು ಶಕ್ತಿಯನ್ನು ಮನುಷ್ಯ ತಿಳಿದುಕೊಳ್ಳಬೇಕು. ಇದಕ್ಕೆ ವೇದಾಂತಗಳಲ್ಲಿ ಸಾಕ್ಷಾತ್ಕಾರ ಎನ್ನುತ್ತಾರೆ. ಇದನ್ನೇ ಭಾರತೀಯರು ತಿಳಿಯಬೇಕಾದುದು”.

ಸುಖ, ದುಃಖ, ಸ್ವಾತಂತ್ಯ್ರ, ಗುಲಾಮಗಿರಿ, ಸ್ವರ್ಗ ನರಕ ಇವೆಲ್ಲ ಹೊರಗೆಲ್ಲೂ ಇಲ್ಲ. ಎಲ್ಲ ನಮಲ್ಲಿಯೇ ಇವೆ. ಎಲ್ಲವೂ ನಮ್ಮ ಸಾಧನೆಯನ್ನು ಅವಲಂಬಿಸಿವೆ. ಈ ವಿಷಯವನ್ನು ರಾಮತೀರ್ಥರು ಇನ್ನೊಂದು ಕಥೆಯಿಂದ ವಿವರಿಸುತ್ತಾರೆ.

“ಒಂದು ಚಿಕ್ಕ ಮಗು ಆಡುತ್ತಿರುವಾಗ ತನ್ನ ನೆರಳು ನೋಡಿತು.  ಅದಕ್ಕೆ ಆಶ್ಚರ್ಯವೆನಿಸಿ, ಆ ನೆರಳಿನ ತಲೆಯ ಹಿಡಿಯಬೇಕೆಂದು ಮುಂದೆ ಮುಂದೆ ಸರಿಯತೊಡಗಿತು. ನೆರಳು ಮುಂದೆ ಮುಂದೆ ಸಾಗತೊಡಗಿತು. ಕೊನೆಗೆ ಆ ಮಗುವಿನ ತಾಯಿ ಅದಕ್ಕೆ “ನಿನ್ನ ತಲೆ ಹಿಡಿದುಕೋ” ಎಂದು  ಹೇಳಿದಳು. ಅದು ಹಾಗೆ ಮಾಡುತ್ತಲೇ ನೆರಳಿನಲ್ಲಿ ಕಂಡ ತಲೆ ತನ್ನಿಂದ ತಾನೇ ಮಗುವಿನ ಕೈಗೆ ಸಿಕ್ಕಿತು- ಇದೇ ತತ್ವ ತಲೆ ಹಿಡಿದರೆ ನೆರಳು ಕೈಯಲ್ಲಿ ಬರುವುದು. ಇದರಂತೆಯೇ ನಮ್ಮ ಕುಲದೇವತೆ, ರಾಷ್ಟ್ರದೇವತೆ, ಸ್ಥಾನದೇವತೆ,  ಸ್ವರ್ಗ ನರಕ ಎಲ್ಲವೂ ನಮ್ಮೊಳಗೆಯೇ ಇವೆ. ಸತ್ಯ ಬೇಕಿದ್ದರೆ ನೆರಳಿನ  ಹಂಬಲ ಬಿಟ್ಟು ನಿಮ್ಮೊಳಗೆ ಮುಳುಗಿರಿ. ನೀವೇ ಯೋಚಿಸಿ ನೋಡಿರಿ. ಎಲ್ಲ ತಿಳಿಯುತ್ತದೆ” ಎನ್ನುತ್ತಾರೆ ರಾಮತೀರ್ಥರು.

ಇನ್ನೊಂದು ಕಥೆ ಒಳ್ಳೆಯ ತತ್ವವನ್ನು ಸುಲಭವಾಗಿ ಮನಸ್ಸಿಗೆ ತಂದುಕೊಡುವಂತಹುದು. ಮನೆಯಲ್ಲಿ ಒಬ್ಬಳ ಸೂಚಿ ಕಳೆಯಿತಂತೆ, ಕತ್ತಲಾಗಿತ್ತು. ಮನೆಯಲ್ಲಿ ದೀಪವಿರಲಿಲ್ಲ. ಆದರೆ ಬೀದಿಯಲ್ಲಿ ದೀಪವಿತ್ತು. ಆಕೆ ಅಲ್ಲಿ ಬಂದು ಸೂಜಿಯನ್ನು ಹುಡುಕತೊಡಗಿದಳು. ಸೂಜಿಯನ್ನು ಹುಡುಕಬೇಕಾಗಿದೆ ನಿಜ. ಆದರೆ ಅದು ಕಳೆದುದೆಲ್ಲಿ, ದೀಪ ಇರುವುದೆಲ್ಲಿ, ಆಕೆ ಹುಡುಕುವುದೆಲ್ಲಿ? ಜನರೆಲ್ಲ ಹೀಗೆಯೇ ವರ್ತಿಸುತ್ತಾರೆ. ನಿಜವಾದ ಸುಖ ತಮ್ಮಲ್ಲಿಯೇ ಇದ್ದರೂ ಅದಕ್ಕಗಿ ಎಲ್ಲೆಲ್ಲಿಯೋ ಪ್ರಯತ್ನ ಮಾಡುತ್ತಾರೆ.

ದೇವರು ಎಲ್ಲಿದ್ದಾನೆ, ಏನು ಕೆಲಸ ಮಾಡುತ್ತಾನೆ, ಯಾವ ಕಡೆಗೆ ಅವನ ಮುಖವಿದೆ ಎಂದು ಒಬ್ಬ ಬಾದಷಹ ತನ್ನ ಆಸ್ಥಾನದ  ಕಾಳಜಿಗೆ ಪ್ರಶ್ನೆ ಮಾಢಿದನಂತೆ. ಕಾಜಿ ಈಗ ಪ್ರಶ್ನೆಗಳಿಗೆ ಉತ್ತರ ಹುಡುಕಲು ಎಂಟು ದಿವಸ ಸಮಯ ಕೇಳಿದ. ಮನೆಗೆ ಬಂದು ಎಲ್ಲ ಗ್ರಂಥಗಳನ್ನು ತೆರೆದು  ನೋಡಿದ. ಎಲ್ಲಿಯೂ ಉತ್ತರ ಸಿಕ್ಕಲಿಲ್ಲ. ಚಿಂತೆ ಹೆಚ್ಚಾಯಿತು.  ಕಾಜಿಗೆ ಪದವಿ ಹೋಗಿಬಿಡುವುದಲ್ಲವೆಂಬ ಯೋಚನೆ ಹೆಚ್ಚಿತು. ಆ ಕಾಜಿಯ ನೌಕರ ಬಹು ಚತುರನಾಗಿದ್ದ. ಬಾದಷಹನ ಪ್ರಶ್ನೆಗಳೀಗೆ ತಾನು ಉತ್ತರ ಕೊಡುವೆನೆಂದ. ಬೇರೆ ದಾರಿಯಿಲ್ಲದೆ ಕಾಜಿ ಒಪ್ಪಿದ. ನೌಕರ ಬಾದಷಹನ ಸಭೆಗೆ ಹೋದ.

“ದೊರೆಗಳೇ , ತಮಗೇನು ಬೇಕು? ವಿಚಾರಿಸಿರಿ” ಎಂದ.

“ನಿನ್ನ ಒಡೆಯನಿಗೆ ಕೇಳಿದ ಪ್ರಶ್ನೆಗಳೀಗೆ ಉತ್ತರ ಕೊಡುತ್ತೀಯೆ? ” ಎಂಬ ಬಾದಷಹ.

ಆಳು ಹೇಳಿದ,  :”ಓಹೋ! ಕೊಡುವೆ , ಆದರೆ ಪ್ರಶ್ನೆ ಕೇಳುವವನು ಶಿಷ್ಯ, ಉತ್ತರ ಹೇಳುವವನುಜ ಗುರು. ನಮ್ಮ ಇಸ್ಲಾಂ ಧರ್ಮದಂತೆ ಗುರುವಿಗೆ ಉನ್ನತ ಆಸನ ಕೊಟ್ಟು ಶಿಷ್ಯನೇ ಕೆಳಗೆ ಕುಳೀತುಕೊಳ್ಳತಕ್ಕದ್ದು.

ಬಾದಷಹ, “ಆಗಲಿ, ಆದರೆ ನಿನ್ನ ಉತ್ತರಗಳು ಸರಿಯಾಗಿರದಿದ್ದರೆ ಮರಣದಂಡಗೆ ಆಗುವುದೆಂಬುವುದು ನೆನಪಿರಲಿ” ಎಂದ.

“ಆ ನಿರ್ಣಯ ಗೊತ್ತಿದೆ” ಎಂದ ಆಳು.

ಬಾಧಷಹನ ಮೊದಲನೇ ಪ್ರಶ್ನೆ-

“ದೇವನು ಎಲ್ಲಿರುತ್ತಾನೆ?”

ಆ ಆಳು ಒಂದು ಹಸುವನ್ನು ತರಿಸಲು ಹೇಳಿದ. ಆಕಳೂ ಬಂತು.

“ಆಕಳಿನಲ್ಲಿ ಹಾಲು ಇರುವುದೇ?” ಎಂದು ಕೇಳಿದ ನೌಕರ.

“ಓಹೋ  !ನಿಶ್ಚಯವಾಗಿ” ಎಂದ ಬಾದಷಹ.

“ಹಾಲು ಎಲ್ಲಿದೆ?” ನೌಕರ ಕೇಳಿದ.

“ಕೆಚ್ಚಲಲ್ಲಿ ಬಾದಷನ ಎಂದ..

ಗುರು ಹೇಳಿದ. “ತಪ್ಪು, ಆಕಳ ಮೈಯೆಲ್ಲಾ ಹಾಲು ಇರುತ್ತದೆ”. ಆಮೇಲೆ ಸ್ವಲ್ಪ ಹಾಲು ಕರೆಯಲಾಯಿತು. ಆ ಹಾಲು ತೋರಿಸಿ, ” ಈ ಹಾಲಿನಲ್ಲಿ ಬೆಣ್ಣೆಇದೆಯೆ?” ಎಂದ ಗುರು.

“ಇದೆ” ಎಂದ ರಾಜ.

“ಹಾಗಾದರೆ ಎಲ್ಲಿದೆ? ನನಗೆ ತೋರಿಸು” ಎಂದ ಗುರು. ಬಾದಷನಿಗೆ ತೋರಿಸಲು ಸಾಧ್ಯವೇ ಆಗಲಿಲ್ಲ.

ಆಗ ಗುರುವಾದ ಆ ನೌಕರ ಹೇಳಿದ.

“ಬಾದಷನ ,ನಿನಗೆ ಬೆಣ್ಣೆ ಎಲ್ಲಿದೆ ಎಂಬುವುದನ್ನು ಹೆಳಲಿಕ್ಕೆ ಬರುವುದಿಲ್ಲ. ಆದರೂ ಇದೆಯೆಂದು ಒಪ್ಪಿಕೊಳ್ಳೂವಿ.ಹಾಲಿನಲ್ಲಿ ಎಲ್ಲೆಲ್ಲೂ ಬೆಣ್ಣೆ ಇದೆ. ಅದರಂತೆಯೇ ದೇವರು ವಿಶ್ವದ ತುಂಬೆಲ್ಲ ತುಂಬಿ ಕೊಂಡಿದ್ದಾನೆ. ಹಾಲಿನಲ್ಲಿ ಬೆಣ್ಣೆ, ಆಕಳಲ್ಲಿ ಹಾಲು ಹೇಗೋ ಹಾಗೆ. ಹಾಲು ಬೇಕಾದರೆ ಹಿಂಡಿಕೊಳ್ಳಬೇಕು. ಬೆಣ್ಣೆ ಬೇಕಾದರೆ ಮೊಸರು ಮಾಡಿ  ಕಡೆಯಬೇಕು. ಅದರಂತೆಯೇ ದೇವರು ಬೇಕಾದರೆ ನಿನ್ನ ಅಂತಃಕರಣವನ್ನು ಕಡೆಯಬೇಕು ” ಎಂದ ಗುರು. ಬಾದಷಹನಿಗೆ ಸಮಾಧಾನ ಆಯಿತು. ಬಳಿಕ ಎರಡನೆಯ ಪ್ರಶ್ನೆಯನ್ನು ಕೇಳಿದ.

“ದೇವರ ಮುಖ ಯಾವ ದಿಕ್ಕಿಗೆ ಇದೆ?”

ಗುರುವು ಒಂದು ಮೇಣದ ಬತ್ತಿಯನ್ನು ತರಿಸಿ ಹೊತ್ತಿಸಿ  ತೋರಿಸಿದ. ಈ ದೀಪದ ಮುಖವು ಯಾವ ದಿಕ್ಕಿಗೂ ಇರದೇ ಎಲ್ಲ ದಿಕ್ಕುಗಳಲ್ಲಿ ಹೇಗೆ ಬೆಳಗಿಸುತ್ತದೆಯೋ ಹಾಗೆಯೆ ದೇವರು ಎಲ್ಲ ಕಡೆಗೆ ಬೆಳಕನ್ನು ಹರಿಸುತ್ತಾನೆ” ಎಂದ.

ಮೂರನೆಯ ಪ್ರಶ್ನೆ. “ದೇವರು ಏನು ಮಾಡುತ್ತಾನೆ? ” ಎಂದು ಬಾದಷನ ಕೇಳಿದ. ಗುರುವಾದ ಆ ನೌಕರ ಕಾಜಿಯನ್ನು ಕರೆತರಲು ಹೇಳದ.ಕಾಜಿ ಬಂಧು ತನ್ನ ಆಳು ಉನ್ನತವಾದ ಆಸನದಲ್ಲಿ  ಮತ್ತು ಬಾದಷಹ ಕೆಳಗೆ ಕುಳಿತ್ತದ್ದನ್ನು ನೋಡಿ ಚಕಿತನಾದ. ಕಾಜಿಯನ್ನೂ ಕೆಳಗೆ ಆಳಿನ ಸ್ಥಳದಲ್ಲಿ ,ಕೂಡಲು ಹೇಳೀದರು. ಆನೌಕರ ಸಿಂಹಾಸನದ ಮೇಲೆ ಕುಳಿತು ಹೇಳಿದನು:

“ನೋಡು , ಇದೇ ಪ್ರಕಾರ ದೇವರು ಸಹ ಎಲ್ಲ ಏರಿಳಿತಗಳನ್ನೂ ಹೆಚ್ಚು ಕಡಿಮೆಗಳನ್ನು ಮಾಡುತ್ತಿರುತ್ತಾನೆ. ಆತನ ಮಹಿಮೆಯಿಂದ ಆಳು ಅರಸನಾಗುತ್ತಾನೆ. ಕಾಜಿ ನೌಕರನಾಗುತ್ತಾನೆ. ಒಂದು ಮನೆತನವು ಒಮ್ಮೆ ಮೇಲೇಳುತ್ತದೆ. ಮತ್ತೊಂದು ಕೆಳಗಿಳೀಯುತ್ತದೆ. ಕಾಲ ಮುಗಿಯಿತೆಂದರೆ ಆತನ ಸ್ಥಳಕ್ಕೆ ಇನ್ನೊಬ್ಬರು ಬರುತ್ತಾನೆ. ಇದೇ ದೇವರು ಜಗತ್ತಿನಲ್ಲಿ ಮಾಡುವ ಎರಿಳಿತದ ಕೆಲಸ” ಎಂದನು.

ಸ್ವಾಮಿ ರಾಮತೀರ್ಥರ ಕಥೆಗಳೆಲ್ಲಹಿಗೆ ವೇದಾಂತಕ್ಕೂ ವ್ಯವಹಾರಕ್ಕೂ ಸರಿಹೋಗುವಂತೆ ಇರುತ್ತಿದ್ದವು.  ಅದಕ್ಕಾಗಿಯೇ ಅವರು ತಮ್ಮ ಉಪದೇಶಗಳಿಗೆ :ವ್ಯವಹಾರಿಕ ವೇದಾಂತ” ಎನ್ನುತ್ತಿದ್ದರು. ಸಂನ್ಯಾಸಿಗಳೆಂದರೆ ನಮ್ಮ ನಿತ್ಯ ಜೀವನದಿಂದ ದೂರ ಇರುತ್ತಾರೆ. ಅವರಿಗೂ ಅದಕ್ಕೂ ಸಂಬಂಧವಿಲ್ಲ. ವೇದಾಂತಕ್ಕೂ ಈ ಜಗತ್ತಿಗೂ ಸಂಬಂಧವಿಲ್ಲ. ಎಂದು ನಾವು  ಎಂದುಕೊಳ್ಳುತ್ತೇವೆ, ಅಲ್ಲವೆ! ಆದರೆ ರಾಮತೀರ್ಥರು ಅನುಭವಕ್ಕೆ ಸಾರ್ಧಯವಿರಲಾರದ ತತ್ವವನ್ನು ನಂಬಬೇಡಿರೆಂದು ಹೇಳುತ್ತಿದ್ದರು. ಭಾರತೀಯ ವೇದಾಂತದ ತತ್ವಗಳ ಗುಟ್ಟನ್ನೆಲ್ಲ ಅವರು ತಿಳಿದು ಅನುಭವಿಸಿದುದರಿಂದಲೇ ಅವರ ಮಾತಿನಲ್ಲಿ ಅಂಥ ಶಕ್ತಿ, ತೇಜಸ್ಸು ಕಾಣುತ್ತಿದ್ದರು.

ಹಾವು  ಹುಲಿಗಳ ಸಂಗ

ದೀರ್ಘ ಸಂಚಾರದ ಕ್ರಮದಿಂದ ಸ್ವಾಮಿ ರಾಮತೀರ್ಥರಿಗೆ ಅನಾರೋಗ್ಯವಾಯಿತು. ಸ್ವಲ್ಪ ಆರೋಗ್ಯವಾಯಿತು.ಸ್ವಲ್ಪ ಆರೋಗ್ಯ ಸುಧಾರಿಸಿದ ಕೂಡಲೇ ಮತ್ತೇ ಹಿಮಾಲಯಕ್ಕೆ ತೆರಳಿದರು.  ೧೩ ಸಾವಿರ ಅಡಿ ಎತ್ತರದಲ್ಲಿ ಗಹನವಾದ ಅರಣ್ಯದ ವಶಿಷ್ಠ ಗುಹೆಯಲ್ಲಿ ಇರತೊಡಗಿದರು.  ಕೇವಲ ಹಾಲೇ  ಆಹಾರ. ಪಕ್ಕದ ಗುಹೆಯಲ್ಲಿ ದೊಡ್ಡ ಅಜಗರ ಸರ್ಪ ಮನೆ ಮಾಡಿಕೊಂಡಿತ್ತು. ಮುಂದಿನ ಗುಹೆಯಲ್ಲಿ ದೊಡ್ಡ ಹುಲಿಯೊಂದು ಹೊರಬಂದು ಧ್ಯಾನಸ್ಥ ರಾಮತೀರ್ಥರನ್ನು ಸೌಮ್ಯವಾಗಿ ನೋಡಿ ಮೆತ್ತಗೆ  ಹೊರಟು ಹೋಗುತ್ತಿತ್ತು. ಮಳೆಗಾಲದಲ್ಲಿ ವಶಿಷ್ಟ ಗುಹೆ ಭಧ್ರವಾಗಿರಲಿಲ್ಲ. ಇನ್ನು ಸ್ವಲ್ಪ ಕೆಳಗೆ ಇಳಿದುಬಂದರು. ತೆಹರಿಯ ಹತ್ತಿರ ಮೂರು ಕಡೆಯಿಂದ ಗಂಗಾನದಿ ಬಳಸಿದ್ದರ ಅರಣ್ಯದಲ್ಲಿ ಒಂದು ಸ್ಥಳವನ್ನು ಆರಿಸಿಕೊಂಡರು. ತೆಹರಿಯ  ಮಹರಾಜ ಅಡವಿಯ ಜನರಿಂದ ಒಂದು ಚಿಕ್ಕ ಗುಡಿಸಲನ್ನು ಕಟ್ಟಿಸಿಕೊಟ್ಟ. ಅಲ್ಲಿಂದ ಕೆಲವು ಮೈಲಿ ದೂರ ಬಮ್ರೋಗಿ ಗವಿಯಲ್ಲಿ ಸ್ವಾಮಿ ನಾರಾಯಣ ಇದ್ದುಕೊಂಡು ವಾರಕ್ಕೊಮ್ಮೆ ಸ್ವಾಮಿರಾಮತೀರ್ಥರನ್ನು ನೋಡಲು ಬರಬೇಕೆಂದು ತೀರ್ಮಾನಿಸಿದರು.

ಅಜಗರ ಸರ್ಪ,ಹುಲಿ ರಾಮತೀರ್ಥರ ನೆರೆಹೊರೆಯವರು !

ವಿರಾಮದ ಸೂಚನೆಸಂದೇಶ

ಸ್ವಾಮಿ ನಾರಾಯಣರಿಗೆ ಸ್ವಾಮಿ ರಾಮತೀರ್ಥರು ಹೇಳಿದರು, “ರಾಮನ ಲೇಖನಿ ಬರೆಯುವುದನ್ನು ಬೇಗನೇ ನಿಲ್ಲಿಸಬಹುದು. ಆತನ ನಾಲಿಗೆ ಮಾತನಾಡುವುದನ್ನು ನಿಲ್ಲಿಸೀತು. ಆದ ಕಾರಣ ನೀನನೇ ರಾಮನದಲ್ಲಿ ರಾಮನಾಗಿ ವೇದಾಂತ ಸಂದೇಶವನ್ನು ಸಾರಲು ಸಿದ್ಧನಾಗು”.

ಈ ಕುಟೀರದಲ್ಲಿ ಸ್ವಾಮಿ ರಾಮತೀರ್ಥರು ಐದು ದಿನ ಮಾತ್ರ ಇದ್ದರು. ಐದನೆಯ ದಿನ ಸ್ನಾನಕ್ಕೆಮದು ಗಂಗಾನದಿಯಲ್ಲಿ ಇಳಿದು ರೂಢಿಯಂತೆ ಪ್ರವಾಹಕ್ಕೆ  ಎದುರಾಗಿ ಈಸುವಾಗಲ ಸೆಳವಿಗೆ ಸಿಕ್ಕರು. ಸುಳಿಯಲ್ಲಿ ಮುಳುಗಿದರು.  ಎದ್ದರು, ಮತ್ತೇ ಹೇಗೋ ಎಲ್ಲ ಶಕ್ತಿ ಹಾಕಿ ಸುಳಿಯಿಂದ ಪಾರಾದರು. ಆದರೆ ಸೋತ ದೇಹಕ್ಕೆ ಪ್ರವಾಹದ ಸೆಳವನ್ನು ಪೂರ್ತಿ ದಾಟಲಾಗಲಿಲ್ಲ. ಎತ್ತರದ ಧ್ವನಿಯಲ್ಲಿ ಓಂ ಓಂ  ಓಂ ಎನ್ನುತ್ತಿರುವಂತೆಯೇ ಪ್ರವಾಹದಲ್ಲಿ ದೇಹ ಕಾಣದಾಯಿತು.

ರಾಮತೀರ್ಥರು ಜೀವಿಸಿದ್ದುದು ಮೂವತ್ತಮೂರು ವರ್ಷ ಮಾತ್ರ. ಆ ದಿನ ಸ್ವಾಮಿ ರಾಮತೀರ್ಥರು ಗುಡಿಸಲಲ್ಲಿ ಬರೆದಿಟ್ಟಿದ್ದ ಕೊನೆಯ ಮಾತುಗಳಲ್ಲಿ ಅವರ ಜೀವನದ ಸಂದೇಶವೇ ಅಡಕವಾಗಿದೆ.:

“ಓ! ಮರಣವೇ, ನಿನಗೆ ಬೇಕಾಗಿದ್ದರೆ ಈ ದೇಹವನ್ನು ಒಯ್ಯಬಹುದು. ನನಗೆ ಅದರ ಪರಿವೆಯಿಲ್ಲ. ಅನೇಕದೇಹಗಳು ಸಿಗುತ್ತವೆ. ನಾನು ದೈವಿಶಕ್ತಿಯಾಗಿ, ಮಿಂಚಾಗಿ, ಸೂರ್ಯನಲ್ಲಿ, ಚಂದ್ರನಲ್ಲಿ, ಪರ್ವತಗಳ ಝರಿಗಳಲ್ಲಿ ಬೆರೆಯಬಲ್ಲೆ, ಸಂಭ್ರಮದಿಂದ ಸುಳಿದಾಡುವ ಗಾಳಿ ನಾನು…  ಆ ಪರ್ವತದಾಚೆಯಿಂದ ಬಂದೆ ನಾನು.ಮೃತರನ್ನು ಎಬ್ಬಿಸಿದೆ. ನಿದ್ರಿತರನ್ನು ಎಚ್ಚರಿಸಿದೆ. ಹಲವು ಚೆಲುವು ಮುಖಗಳನ್ನು ಬಯಲಿಗೆಳೆದೆ. ಕೆಲವು ದುಃಖ ತುಂಬಿದ ಕಣ್ಣುಗಳನ್ನೊರೆಸಿದೆ….. ಇದನ್ನು ಮುಟ್ಟಿ ಅದನ್ನು ತಟ್ಟಿ … ಇದೊ ಹೊರಟೆ- ಹೊರಟೆ, ಯಾರು ಕಾಣದೆಡೆಗೆ ನಾನು ಬಂದಂತೆಯೇ ಹೊರಟೆ”.