ವಿಷ್ಣುವನ್ನು ಪೂಜಿಸುವವರು ವೈಷ್ಣವರು. ಇವರು ವಿಷ್ಣುವಿನ ಅವತಾರಗಳಾದ ಶ್ರೀರಾಮನನ್ನೂ ಶೀ ಕೃಷ್ಣನ್ನೂ ಪೂಜಿಸುತ್ತಾರೆ.  ಶ್ರೀ ಎಂದರೆ ಲಕ್ಷ್ಮೀ ಎಂದೂ ಅರ್ಥ.  ತಾಯಿ ಲಕ್ಷ್ಮೀಯ ಪೂಜೆ ಮಾಡಿ, ಅವಳ ಕೃಪೆಯ ಮುಖಾಂತರ ವಿಷ್ಣುವನ್ನು ಒಲಿಸಿಕೊಳ್ಳಲು ಭಕ್ತರು ಪ್ರಯತ್ನಿಸುತ್ತಾರೆ. ಇವರೇ ಶ್ರೀ ವೈಷ್ಣವರು. ಇವರು ವಿಶಿಷ್ಟಾಧ್ವೈತ ತತ್ವವನ್ನು ಅನುಸರಿಸುತ್ತಾರೆ.

ಶ್ರೀ ವೈಷ್ಣವ ಮತವನ್ನು ಜನರಲ್ಲಿ ಹೆಚ್ಚಾಗಿ ಪ್ರಚಾರ ಮಾಡಿದವರು ತಮಿಳುನಾಡಿನ ವೈಷ್ಣವ ಭಕ್ತರುಗಳಾದ ಆಳ್ವಾರುಗಳು. ಇವರು  ಕ್ರಿಸ್ತಶಕ ಆರರಿಂದ ಒಂಬತ್ತನೇ ಶತಮಾನದವರೆಗೂ ಇದ್ದರು. ಇವರು ಒಟ್ಟು ಹನ್ನೆರಡು ಜನ. ಇವರಿಗೆ ಜಾತಿಭೇದವಿಲ್ಲ. ವಿಷ್ಣುವಿನ ಭಕ್ತರಾದ ಇವರಲ್ಲಿ ಹಿಂದೂ ಧರ್ಮದ ಎಲ್ಲಾ ಪಂಥಗಳವರು ಇದ್ದಾರೆ. ಇಂದು ಇವರನ್ನು ಎಲ್ಲಾ ಶ್ರೀವೈಷ್ಣವರೂ ಪೂಜಿಸುತ್ತಾರೆ.

ಆಳ್ವಾರುಗಳ ಅನಂತರ ಆಚಾರ್ಯರುಗಳ ಪರಂಪರೆ ಪ್ರಾರಂಭವಾಯಿತು. ಆಚಾರ್ಯ ಎಂದರೆ ಗುರು ಎಂಬಂರ್ಥ. ಆಚಾರ್ಯರಲ್ಲಿ ಯಾಮುನಾಚಾರ್ಯರು ಮುಖ್ಯರು. ಇವರ ಅನಂತರದ ಆಚಾರ್ಯರೇ ರಾಮಾನುಜಾಚಾರ್ಯರು.  ಅದುವರೆಗೆ ಹರಿದು ಬಂದ ಭಕ್ತಿ ಪಂಥಕ್ಕೆ ಒಂದು ಉತ್ತಮ ಚೌಕಟ್ಟನ್ನು ನೀಡಿದರು. ಸಮರ್ಪಕ ಹಾಗೂ ಸಮಗ್ರವಾದ ವಿಶಿಷ್ಟಾಧ್ವೈತ ದರ್ಶನವನ್ನು ನೀಡಿದರು. ಎಲ್ಲ ಜನರೂ ಅನುಸರಿಸುವಂತಹ ತತ್ವವನ್ನು ಇವರು ಉಪದೇಶಿಸಿದರು.

ಬಾಲ್ಯಮದುವೆ :

ಯಾಮುನಾಚಾರ್ಯರಿಗೆ, “ಆಳವಂದಾರ” ಎನ್ನುವ ಇನ್ನೊಂದು ಹೆಸರಿತ್ತು. ಇವರ ಶಿಷ್ಯರು ಶ್ರೀಶೈಲಪೂರ್ಣರು. ಶ್ರೀಶೈಲಪೂರ್ಣರಿಗೆ ಇಬ್ಬರು ತಂಗಿಯರು. ಮೊದಲನೆಯ ತಂಗಿ ಭೂದೇವಿ. ಈಕೆ ಅಸೂರಿ ಕೇಶವಾಚಾರ್ಯ (ಕೇಶವ ಪೆರುಮಾಳ್) ಎನ್ನುವವರ ಪತ್ನಿ. ಮದರಾಸಿಗೆ ಮೂವತ್ತು ಮೈಲಿ ದೂರದಲ್ಲಿರುವ ಶ್ರೀ ಪೆರಂಬೂದೂರ ಎಂಬಲ್ಲಿನ ದೇವಾಲಯವೊಂದರಲ್ಲಿ ಈ ದಂಪತಿಗಳು ಇದ್ದರು. ಇವರ ಒಬ್ಬರೇ ಮಗ ಶ್ರೀ ರಾಮಾನುಜರು ೧೦೧೭ರಲ್ಲಿ ಜನಿಸಿದರು.  ಶ್ರೀ ಶೈಲ ಪೂರ್ಣರ ಎರಡನೆಯ ತಂಗಿಯ ಹೆಸರು ಶ್ರೀದೇವಿ. ಈಕೆಯ ಇನ್ನೊಂದು ಹೆಸರು ದ್ಯುತಿಮತಿ. ಈಕೆ ಕುಸುಮವನಯನ ಭಟ್ಟರ ಪತ್ನಿ. ರಾಮಾನುಜರು ಹುಟ್ಟಿದ ಸಮಯದಲ್ಲಿಯೇ ಇವರಿಗೆ ಗೋಳವಿಂದ ಎಂಬ ಮಗು ಜನಿಸಿದ. ಈ ಇಬ್ಬರೂ ತಮ್ಮ ಕೊನೆಯ ದಿನಗಳವರೆವಿಗೂ ಪ್ರೀತಿಯಿಂದ ಇದ್ದರು.

ಮಗುವಿನ ಮುಖ ಕಾಂತಿ ಅಪಾರವಾಗಿತ್ತು. ರಾಮನ ಅನುಜ (ತಮ್ಮ )ಲಕ್ಷ್ಮಣನ ಹಾಗಿದ್ದುದರಿಂದ ಈ ಮಗುವಿಗೆ ರಾಮಾನುಜ ಎಂಬ ಹೆಸರಿಟ್ಟರು.

ಬಾಲಕ ರಾಮಾನುಜ ಬಹಳ ಬುದ್ದೀವಂತ. ಪಾಠವನ್ನು ಒಂದು ಸಲ ಓದಿದರೆ ಅಥವಾ ಕೇಳಿದರೆ ಸಾಕು, ಅದು ಚೆನ್ನಾಗಿ ನೆನಪಿನಲ್ಲಿರುತ್ತಿತ್ತು. ಇಂತಹ ಬುದ್ಧಿವಂತ  ಹುಡುಗನನ್ನು ಕಂಡು ಎಲ್ಲ ಗುರುಗಳಿಗೂ ಸಂತೋಷ. ಆತನೆಂದರೆ ತುಂಬಾ ಪ್ರೀತಿ. ಬಾಲ್ಯದಲ್ಲಿ ವೇದ, ವೇದಾಂಗಗಳ ಪಾಠವಾಯಿತು.

ಸೂಕ್ತ ಕಾಲದಲ್ಲಿ ಉಪನಯವಾಯಿತು. ರಾಮಾನುಜರಿಗೆ ಹದಿನಾರು ವರ್ಷವಾಯಿತು. ರಕ್ಷಾಂಬಾಳ್ ಎಂಬಾಕೆಯೊಂದಿಗೆ ಅವರ ಮದುವೆಯಾಯಿತು. (ಇವರ ಹೆಂಡತಿಯ ಹೆಸರು ತಂಜಮ್ಮ ಎಂದೂ ಹೇಳುತ್ತಾರೆ). ಕೆಲವು ತಿಂಗಳುಗಳಲ್ಲಿಯೇ ತಂದೆ ಆಸೂರಿ ಕೇಶವಾಚಾರ್ಯರು ಮರಣ ಹೊಂದಿದರು. ಈ ದುಃಖವನ್ನು ಸಹಿಸುವುದು ರಾಮಾನುಜರಿಗೆ ಕಷ್ಟವಾಯಿತು.  ಆದುದರಿಂದ ತಾಯಿ ಹೆಂಡತಿಯರೊಡನೆ ಕಾಂಚೀಪುರಕ್ಕೆ ಹೋಗಿ ನೆಲಸಿದರು.  ಗೋವಿಂದನೂ ಇವರೊಂದಿಗೆ ಕಾಂಚೀಪುರಕ್ಕೆ ಬಂದ.

ಅಸಾಧಾರಣ ಶಿಷ್ಯ :

ರಾಮಾನುಜರಿಗೆ ವೇದಾಂತದ ಬಗ್ಗೆ ಪೂರ್ಣ ಪಾಠವಾಗಿರಲಿಲ್ಲ. ಸರಿಯಾದ ಗುರುವಿಗಾಗಿ ಹುಡುಕಾಡುತ್ತಿದ್ದರು. ಯಾದವ ಪ್ರಕಾಶಕರು ಎಂಬುವರು ಆ ಕಾಲದ ಬಹಳ ದೊಡ್ಡ ವಿದ್ವಾಂಸರು. ರಾಮಾನುಜರು ಅವರ ಶಿಷ್ಯರಾದರು.

ಶಿಷ್ಯರೇನೋ ಆದರು. ಆದರೆ ಯಧವ ಪ್ರಕಾಶಕರ ಕೆಲವೊಂದು ಅರ್ಥಗಳೂ, ವಿವರಣೆಗಳು ರಾಮಾನುಜರಿಗೆ ಹಿಡಿಸುತ್ತಿರಲಿಲ್ಲ. ಗುರುಗಳನ್ನು ವಿರೋಧಿಸುವುದು ತಪ್ಪು. ಆದರೆ ಅವರು ಅವರು ನೀಡುತ್ತಿದ್ದ ಅರ್ಥ ಸರಿಯಲ್ಲ. ಹೀಗಾಗಿ ಉಭಯ ಸಂಕಟಕ್ಕೆ ಬಿದ್ದರು.

ಒಂದು ದಿನ ಛಾಂದೋಗ್ಯ ಉಪನಿಷತ್ತಿನ ಪಾಠವಾಗುತ್ತಿತ್ತು. ಒಂದು ವಾಕ್ಯದ ಅರ್ಥವನ್ನು ಯಾಧವ ಪ್ರಕಾಶರು ಒಂದು ರೀತಿಯಲ್ಲಿ ಹೇಳಿದರು. ಅದರೊಂದಿಗೆ ಅರ್ಥವೂ ಕೀಳು ರೀತಿಯದು. ಆಗ ರಾಮಾನುಜರು ತಮಗೆ ತೋಚಿದ ಅರ್ಥವನ್ನು ಹೇಳಿದರು. ತಮ್ಮೊಡನೆ ವಾದ ಮಾಡುವ ಮಟ್ಟಕ್ಕೆ ಶಿಷ್ಯ ಬಂದನಲ್ಲ ಎಂದು ಗುರುಗಳಿಗೆ ಅಸಮಾಧಾನ. ತಮ್ಮನ್ನು ಮೀರಿಸಬಲ್ಲನೆಂಬ ಭಯವೂ ಅವರಿಗೆ ಉಂಟಾಯಿತು. ಮತ್ತೊಂದು ದಿನ ತೈತ್ತೀರೀಯೋಪನಿಷತ್ತಿನ ಒಂದು ವಾಕ್ಯ ಚರ್ಚೆಗೆ ಬಂತು. ಗುರುಗಳ ಅರ್ಥ ಸರಿಯಾಗಿರಲಿಲ್ಲ. ರಾಮಾನುಜರು ತಮ್ಮದೇ ಆದ ಅರ್ಥ ನೀಡಿದರು. ಇಷ್ಟು ಉತ್ತಮವಾದ ಅರ್ಥವನ್ನು ತಮ್ಮ ಶಿಷ್ಯಕೊಟ್ಟನಲ್ಲವೆಂದು ಗುರುಗಳು ಸಂತೋಷಪಡಬೇಕಾಗಿತ್ತು. ಬದಲಗಿ ಕೋಪಗೊಂಡರು.

“ನನ್ನ ಅರ್ಥ ವಿವರಣೆಗಳು ನಿನಗೆ ಸರಿತೋರದಿದ್ದರೆ ನನ್ನ ಬಳಿಗೆ ಪಾಠಕ್ಕೆ ಬರಲೇಬೇಡಿ ಎಂದರು. ಯಾದವ ಪ್ರಕಾಶರು ರಾಮಾನುಜರು ಏನು ಮಾತನಾಡದೆ ನಮ್ರತೆಯಿಂದ ಹೊರ ಬಂದರು.

ಕಾಪಾಡಿದವರು ಯಾರು ?

ರಾಮಾನುಜರನ್ನು ಕಂಡರೆ ಆಗದಿದ್ದ ಇತರ ಶಿಷ್ಯರು ಹೇಗಾದರೂ ಮಾಡಿ ರಾಮಾನುಜರನ್ನು ಮುಗಿಸಿಬಿಡಬೇಕೆಂದು ತೀರ್ಮಾನಿಸಿಕೊಂಡರು.  ಗುರು ಯಾದವ ಪ್ರಕಾಶರು, ಎಲ್ಲ ಶಿಷ್ಯರು, ಗೋವಿಂದ ಹಾಗೂ ರಾಮಾನುಜರು ಕಾಶೀಯಾತ್ರೆ ಹೊರಟರು. ಅವರೆಲ್ಲ ವಿಂಧ್ಯ ಪರ್ವತಗಳ ಬಳಿಗೆ ಬಂದರು. ಅಲ್ಲಿನ ಗೊಂಡಾರಣ್ಯ ದಟ್ಟವಾಗಿತ್ತು. ಅಲ್ಲಿ ರಾಮಾನುಜರನ್ನು ಮುಗಿಸಲು  ಗುರು ಶಿಷ್ಯರು ನಿರ್ಧರಿಸಿದರು.   ಇದರ ಸುಳಿವು ಹೇಗೋ ಗೋವಿಂದನಿಗೆ ಗೊತ್ತಾಯಿತು. ಇದನ್ನು ತನ್ನ ಅಣ್ಣ ರಾಮಾನುಜರಿಗೆ ತಿಳಿಸಿ, ಅಲ್ಲಿಂದ ತಪ್ಪಿಸಿಕೊಂಡು ಹೋಗುವಂತೆ ಸೂಚಿಸಿದ. ಅದರಂತೆಯೇ ರಾಮಾನುಜರು ಅಲ್ಲಿಂದ ತಪ್ಪಿಸಿಕೊಂಡರು. ಸ್ವಲ್ಪ ಸಮಯದ ನಂರ ಗುರು, ಶಿಷ್ಯರು ರಾಮಾನುಜರನ್ನು ಹುಡುಕಿದರು: ಸಿಕ್ಕಲಿಲ್ಲ. ಕಾಡಿನಲ್ಲಿ ಯಾವುದೋ ಮೃಗ ತಿಂದು ಹಾಕಿರಬೇಕೆಂದು ಭಾವಿಸಿ ಅವರು ತಮ್ಮ ಪ್ರಯಾಣ ಮುಂದುವರೆಸಿ, ಕಾಶಿಯನ್ನು ತಲುಪಿದರು.

ಇತ್ತ ಕಾಡಿನಲ್ಲಿ ರಾಮಾನುಜರು ದಾರಿ ಹುಡುಕುತ್ತಾ ಅಲೆದಾಡಿದರು. ಹಸಿವು, ಬಾಯಾರಿಕೆ, ಕಾಡು ಮೃಗಗಳ ಭಯ, ರಾಮಾನುಜರು ನಾರಾಯಣ ಧ್ಯಾನ ಮಾಡುತ್ತಾ, ಒಂದು ಮರದ ಕೆಳಗೆ ಮಲಗಿದರು.ಎಚ್ಚರಗೊಂಡಾಗ ಸಾಯಂಕಾಲವಾಗಿತ್ತು. ಹಸಿವು, ಆಯಾಸಗಳಿರಲಿಲ್ಲ. ಆದರೂ ಆ ಕಾಡಿನಿಂದ ಹೊರಬರಬೇಕು, ಅನಂತರ ಊರನ್ನು ತಲುಪಬೇಕು.ಅಷ್ಟರಲ್ಲಿ ಒಬ್ಬ ಗಂಡಸು ಹೆಂಗಸು ಆ ಕಡೆ ಬಂದರು. ಅವರು ಬೇಡ ದಂಪತಿಗಳು. ರಾಮಾನುಜರ ವಿಚಾರ ತಿಳೀದು, ನೊಂದರು. “ನಾವು ದಕ್ಷಿಣದ ಕಡೆಗೆ ಹೋಗುತ್ತಿದ್ದೇವೆ ನಮ್ಮ ಜೊತೆಗೆ ಬನ್ನಿ” ಎಂದರು.

ಅಷ್ಟರಲ್ಲಿ ಬೇಡ ದಂಪತಿಗಳು ಆ ಕಡೆ ಬಂದರು.

ಅವರು ಕಾಡನ್ನು ದಾಟುವ ಹೊತ್ತಿಗೆ ಕತ್ತಲಾಗುತ್ತ ಬಂತು.ವಿಶಾಲ ಬಯಲು ಪ್ರದೇಶದಲ್ಲಿ ಸರಿಯಾದ ಸ್ಥಳ ಹುಡುಕಿ ಅವರು ಮಲಗಿದರು.  ಮಧ್ಯರಾತ್ರಿ ಬೇಡತಿ ತನಗೆ ಬಾಯಾರಿಕೆ ಎಂದಳು. ಈ ಮಾತು ರಾಮಾನುಜರಿಗೆ ಕೇಳಿಸಿತು. ನಸುಕಿನಲ್ಲೆ ಎದ್ದು, ಸುತ್ತ ಹುಡುಕಾಡಿದರು. ದೂರದಲ್ಲಿ ಕೊಳವೊಂದು ಕಾಣಿಸಿತು.   ಅಲ್ಲಿಂದ ನೀರು ತಂದು ಬೇಡತಿಗೆ ನೀಡಿದರು. “ತುಂಬಾ ರುಚಿಯಾಗಿದೆ ನೀರು, ಮತ್ತಷ್ಟು ಬೇಕು” ಎಂದಳು. ಮತ್ತೇ ರಾಮಾನುಜರು ಕೊಳದ ಬಳೀಗೆ ಓಡಿದರು.

ಅಷ್ಟು ಹೊತ್ತಿಗೆ ಬೆಳಕಾಗಿತ್ತು. ರಾಮಾನುಜರು ಸುತ್ತೆಲ್ಲ ನೋಡಿದರು.

ಅವರಿಗೆ ಆಶ್ಚರ್ಯವಾಯಿತು.ಸುತ್ತ ತಮಗೆ ಪರಿಚಯವಾದ ಗೋಪುರಗಳು, ತೆಂಗಿನ ತೋಟಗಳು, ವನಗಳು! ತಮ್ಮ ಊರಾದ ಕಾಂಚಿಪುರಕ್ಕೆ ಬಂದಿದ್ದರು.

ಒಂದೇ ರಾತ್ರಿಯಲ್ಲಿ ಅಷ್ಟು ದೂರದ ವಿಂಧ್ಯಾರಣ್ಯದಿಂದ ಇಲ್ಲಿಗೆ ಬರಲು ಹೇಗೆ  ಸಾಧ್ಯ! ದೇವರೇ ತಮ್ಮನ್ನು ಕರೆತಂದಿರಬೇಕು ಎನ್ನಿಸಿತು. ಹಾಗಿದ್ದರೆ ತಮ್ಮೊಂದಿಗೆ ಬಂದಿದ್ದವರು ಲಕ್ಷ್ಮೀ, ನಾರಾಯಣರೇ ಇರಬೇಕು!

ಕೂಡಲೇ ರಾಮಾಜುನರು ಬೇಡ ದಂಪತಿಗಳಿದ್ದ ಸ್ಥಳಕ್ಕೆ ಓಡಿದರು. ಅವರು ಅಲ್ಲಿರಲಿಲ್ಲ.

ರಾಮಾನುಜರಿಗೆ ದೇವರಲ್ಲಿ ಕೃತಜ್ಞತೆ ಉಕ್ಕಿ ಬಂದಿತು. ಅಂದಿನಿಂದ  ಆ ಕೊಳದಿಂದಲೇ ವರದರಾಜರ ಅಭಿಷೇಕಕ್ಕೆ ಪ್ರತಿನಿತ್ಯ ನೀರನ್ನು ತೆಗೆದುಕೊಂಡು ಹೋಗುವ ಕೆಲಸವನ್ನು ರಾಮಾನುಜರು ವಹಿಸಿಕೊಂಡರು. ಇಂದಿಗೂ ಆ ಕೊಳದ ನೀರಿನಿಂದ ದೇವರ ಅಭ್ಯಂಜನ ಕಾರ್ಯ ನಡೆಯುತ್ತದೆ.

ಮತ್ತೇ ಯಾದವ ಪ್ರಕಾಶರ ಬಳಿಗೆ :

ಯಾದವ ಪ್ರಕಶರು ಮತ್ತವರ ಶಿಷ್ಯರು ಕಾಶಿಯಿಂದ ಕಂಚಿಗೆ ಹಿಂತಿರುಗಿದರು. ರಾಮಾನುಜರು ಅಲ್ಲಿರುವುದನ್ನು ತಿಳಿದು ಗಾಬರಿಯದರು. ತಮ್ಮ ಸಂಚು ಅವರಿಗೇನಾದರೂ ತಿಳಿಯತೇ ಎಂದು. ಆದರೆ ರಾಮಾನುಜರು ಏನನ್ನೂ ತೋರಿಸಿಕೊಳ್ಳಲಿಲ್ಲ.  ಒಂದೇ ರಾತ್ರಿಯಲ್ಲಿ ತಾವು ಹೇಗೆ ಬೇಡ ದಂಪತಿಗಳಿಂದ ಕಂಚಿಯನ್ನು ಸೇರಿದರು ಎಂಬುವುದನ್ನು ವಿವರಿಸಿದರು.  ಯಾದವ ಪ್ರಕಾಶರಿಗೆ ಒಳಗೊಳಗೆ ಭಯವಾಯಿತು. ಆದರೂ ತೋರಿಸಿಕೊಳ್ಳದೇ, ಮತ್ತೇ ಎಂದಿನಂತೆ ಪಾಠಕ್ಕೆ ಬರಬೇಕೆಂದು ತಿಳಿಸಿದರು. ರಾಮಾನುಜರು ತಮ್ಮ ಶಿಷ್ಯವೃತ್ತಿಯನ್ನು ಮುಂದುವರೆಸಿದರು.

ಮುಂದಿನ ದೀಪ ಇವರೇ:

ಆಗ ಯಾಮುನಾಚಾರ್ಯರು ವಿಶಿಷ್ಟಾಧ್ವೈತ  ಪರಂಪರೆಯ ಮುಖ್ಯಸ್ಥರಾಗಿದ್ದರು. ಈ ತತ್ವವನ್ನು ಒಳಗೊಂಡ ಅನೇಕ ಸಂಸ್ಕೃತ ಅವರು ಬರೆದರು. ವಿಶಿಷ್ಟಾಧ್ವೈತ ದರ್ಶನಕ್ಕಾಗಿ ಮಾಡಬೇಕಾದ ಕಾರ್ಯ ಬಹಳವಿತ್ತು. ಅಷ್ಟರಲ್ಲಿ ಅವರಿಗೆ ಮುಪ್ಪು ಆವರಿಸಿತು. ಈ ಪರಂಪರೆಯನ್ನು ಉಳಿಸಿಕೊಂಡು ಬರುವವರು ಯಾರು ಎಂದು ಅವರು ಬಹಳವಾಗಿ ಯೋಚಿಸತೊಡಗಿದರು. ಅವರು ಇದ್ದುದು ಶ್ರೀರಂಗದಲ್ಲಿ, ಶ್ರೀರಂಗನಾಥಸ್ವಾಮಿಯ ಪೂಜೆಯಲ್ಲಿ ನಿರತರಾಗಿದ್ದರು. ಆಗೀಗ ರಾಮಾನುಜರ ಬಗೆಗೂ ಅವರು ವಿಷಯಗಳನ್ನು ತಿಳಿಯುತ್ತಿದ್ದರು.  ಆಗೆಲ್ಲ ಅವರ ಬಗ್ಗೆಯೇ ಯೋಚಿಸುತ್ತಿದ್ದರು.  ಒಮ್ಮೆ ಅವರು ಕಾಂಚಿಪುರಕ್ಕೆ ಬಂದರು. ವರದರಾಜಸ್ವಾಮಿ ದೇವಾಲಯಕ್ಕೆ ಹೋಗುತ್ತಿದ್ದಾಗ, ದಾರಿಯಲ್ಲಿ ಗುಂಪಿನಲ್ಲಿದ್ದ ರಾಮಾನುಜರನ್ನು ಕಂಡರು. ಎತ್ತರವಾಗಿದ್ದು, ಸುಂದರಾಂಗವಾಗಿದ್ದ ಅವರನ್ನು  ಕಂಡು ಯಾಮುನರಿಗೆ ಸಂತೋಷವಾಯಿತು. ತಮ್ಮ ಪರಂಪರೆಯ ಮುಂದಿನ ನಾಯಕರಾಗಬಲ್ಲವರು ರಾಮಾನುಜರೇ ಎಂದು ನಿರ್ಧರಿಸಿದರು.  ವರದರಾಜಸ್ವಾಮಿಯ ಎದುರಿಗೆ ನಿಂತು ಯಾಮುನರು ಪ್ರಾರ್ಥಿಸಿದರು. “ರಾಮಾನುಜರು ನಮ್ಮ ನಂಬಿಕೆಯ ದೀಪವನ್ನು ಬೆಳಗುವಂತೆ ಮಾಡು ದೇವ” ಎಂದು. ಆ ದಿನವೇ ಬಂದೇ ಬಂದಿತು.

ಪಾಠಕ್ಕೆ ಬರಬೇಡ “:

ಯಾದವ ಪ್ರಕಶರಿಗೆ ರಾಮಾನುಜರ ವಿಷಯದಲ್ಲಿ ಅಸಮಾಧಾನ ಬೆಳೆಯುತ್ತಲೇ ಹೋಯಿತು.

ಒಂದು ದಿನ ಯಾದವ ಪ್ರಕಾಶರು “ಸರ್ವ ಖಿಲ್ವಿದಂ ಬ್ರಹ್ಮ” ಎಂಬ ಉಪನಿಷತ್ತಿನ ವಾಕ್ಯಕ್ಕೆ  ಅರ್ಥಹೇಳುತ್ತಿದ್ದರು. ರಾಮಾನುಜರಿಗೆ ಆ ಅರ್ಥ ಹಿಡಿಸಲಿಲ್ಲ. ತಮ್ಮದೇ ಆದ ಅರ್ಥವನ್ನು ಹೇಳಿದರು.ಇದು ದಯಾದವ ಪ್ರಕಾಶರ ಕೋಪವನ್ನು ಹೆಚ್ಚಿಸಿತು. “ಇನ್ನು ಮುಂದೆ ನೀನು ಪಾಠಕ್ಕೆ ಬರಬೇಡ” ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು. ಇದರಿಂದ ರಾಮಾನುಜರು ತುಂಬಾ ನೊಂದರು. ಅಂದಿನಿಂದ ಅವರು ವರದರಾಜಸ್ವಾಮಿಯ ಸೇವೆಯಲ್ಲಿ ತಮ್ಮ ಕಾಲವನ್ನು ಕಳೆಯಲಾರಂಭಿಸಿದರು.

ನಿಮ್ಮ ಉದ್ದೇಶಗಳನ್ನು ಸಫಲ ಮಾಡುತ್ತೇನೆ :

ಯಾದವ ಪ್ರಕಾಶರಿಂದ ರಾಮಾನುಜರು ದೂರವಾದ ಸಂಗತಿ ಯಾಮುನರಿಗೆ ತಿಳಿಯಿತು. ಅವರು ಸಂತೋಷಗೊಂಡರು. ಅವರ ಅಂತ್ಯಕಾಲ ಸಮೀಪಿಸಿತ್ತು. ಕಂಚಿಗೆ ಹೋಗಿ ಅವರನ್ನು ಕರೆದುಕೊಂಡು ಬರಲು ಮಹಾಪೂರ್ಣ ಎಂಬ ತಮ್ಮ ಶಿಷ್ಯರನ್ನು ಕಳುಹಿಸಿದರು. ಆದರೆ ರಾಮಾನುಜರು ಬರುವ ಮುನ್ನವೇ ಯಾಮುನರು ಪ್ರಪಂಚವನ್ನು ಬಿಟ್ಟರು.

ಮಹಾಪೂರ್ಣರು ಹಗಲು ರಾತ್ರಿ ಪ್ರಯಾಣ ಮಾಡಿ ಕಾಂಚಿಪುರವನ್ನು ತಲುಪಿದರು. ರಾಮಾನುಜರ ಭವ್ಯ ರೂಪವನ್ನು ಕಂಡು ಅವರು ಮಾರು ಹೋದರು. ಯಾಮುನರ ದೇಹಸ್ಥಿತಿಯನ್ನು ವಿವರಿಸಿದರು”. ಎಂದು ರಾಮಾನುಜರು ಆತುರಪಟ್ಟರು. ” ಆ ಮಹಾನ್ ಆತ್ಮವನ್ನು ನಾನು ದರ್ಶಿಸಲೇಬೇಕು” ಎಂದು ರಾಮಾನುಜರು ಆತುರಪಟ್ಟರು. ಅವರಿಬ್ಬರೂ ವಿಶ್ರಾಂತಿಯೇ ಇಲ್ಲದೆ ಶ್ರೀರಂಗಕ್ಕೆ ಪ್ರಯಣ ಮಾಡಿದರು. ಕಾವೇರಿ ತೀರದ ಬಳಿಗೆ ಅವರು ಬಂದರು. ಆಗ ಅಲ್ಲಿ ಒಂದು ಗುಂಪು ಕಾಣಿಸಿತು. ಏನೆಂದು ವಿಚಾರಿಸಿದರು. ಯಾಮುನರ ಅಂತ್ಯಕ್ರಿಯೆಗಳಿಗಾಗಿ ಸೇರಿದ್ದ ಗುಂಪು ಅದು ಎಂದು ತಿಳಿದುಬಂದಿತು. ರಾಮಾನುಜರಿಗೆ ಸಿಡಿಲು ಬಡಿದಂತಾಯಿತು.  ಆದರೂ ಸಮಾಧಾನಪಟ್ಟುಕೊಂಡರು- ಅವರ ಶರೀರವನ್ನಾದರೂ ನೋಡುವ ಪುಣ್ಯ ಲಭಿಸತಲ್ಲ ಎಂದರು.

ಆಗ ಒಂದು ವಿಚಿತ್ರ ಸಂಗತಿ ನಡೆಯಿತು ಎಂದು ಹೇಳುತ್ತಾರೆ. ರಾಮಾನುಜರು ನೇರವಾಗಿ ಯಾಮುನರ ಶರೀರದ ಎದುರಿಗೆ ಹೋಗಿ ನಿಂತರು. ಕೆಲವು ಕ್ಷಣಗಳವರೆಗೆ ಅದನ್ನೇ ನೋಡಿದರು. ಆನಂತರ ಅವರ ಬಲಗೈ ಕಡೆ ನೋಡಿದರು. ಆಶ್ಚರ್ಯ! ಮೂರು ಬೆರಳುಗಳು ಮಡಿಸಿಕೊಂಡಿವೆ. ಸುತ್ತಲಿದ್ದ ಯಾಮುನರ ಶಿಷ್ಯರನ್ನು ಅದರ ಬಗ್ಗೆ ಕೇಳಿದರು. ಅವರಿಗೆ ಆಶ್ಚರ್ಯವಾಯಿತು. ಯಾಮುನರ ಅಸೆಗಳು ಏನಾದರೂ ಇದ್ದವೆ ಎಂದು ಪ್ರಶ್ನಸಿದರು. ಅವರು ಮೂರು ಕಾರ್ಯಗಳನ್ನು ಮಾಡಬೇಕೆಂದಿದ್ದರು. ಆದರೆ ಪೂರ್ಣವಾಗಿರಲಿಲ್ಲ ಎಂದು ಹೇಳಿ ಶಿಷ್ಯರು ಆ ಕಾರ್ಯಗಳನ್ನು ತಿಳಿಸಿದರು. ರಾಮಾನುಜರು, ಅವನ್ನು ತಾವು ಪೂರ್ಣ ಮಾಡುವುದಾಗಿ  ಘೋಷಿಸಿದರು.

“ಶ್ರೀ ವೈಷ್ಣವ ಧರ್ಮ ಪ್ರಸಾರ ಮಾಡಿ, ವ್ಯಾಸ ಮತ್ತು ಪರಾಶರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಮ್ಮಾಳ್ವಾರರಿಗೆ ಪ್ರೀತಿಯ ಕಾಣಿಕೆ ಸಲ್ಲಿಸುತತೇನೆ. ವ್ಯಾಸರ ಬ್ರಹ್ಮಸೂತರಗಳೀಗೆ ವಿಶಿಷ್ಟಾದ್ವೈತ ಅರ್ಥವನ್ನು ಬರೆಯುತ್ತೇನೆ”.

ಒಂದೊಂದು ಆಸೆಯನ್ನು  ಘೋಷಿಸಿದಾಗಲೂ, ಒಂದೊಂದು ಬೆರಳು ತೆರೆದುಕೊಂಡಿತು. ಮೂರು ಬೆರಳುಗಳು ಬಿಚ್ಚಿಕೊಂಡ ಮೇಲೆ ಯಾಮುನರ ಅನುಗ್ರಹ ರಾಮಾನುಜರ ಮೇಲೆ ಇದೆ ಎಂಬುವುದು ಎಲ್ಲರಿಗೂ ಸ್ಪಷ್ಠವಾಯಿತು. ಅಂತೆಯೇ ಶ್ರೀ ವೈಷ್ಣವ ಪರಂಪರೆಗೆ ರಾಮಾನುಜರೇ ಮುಂದಿನ ಆಚಾರ್ಯರು ಎಂಬುದೂ ವಿಧಿತವಾಯಿತು.

ಜ್ಞಾನನಿಧಿ ಗಂಡಅಜ್ಞಾನಿ ಹೆಂಡತಿ:

ರಾಮಾನುಜರಿಗೆ ಜಾತಿ ಪದ್ಧತಿಗಳಲ್ಲಿ ನಂಬಿಕೆ ಇರಲಿಲ್ಲ. ಆ ಮೂಢ ನಂಬಿಕೆಗಳು ಹೋಗಬೇಕೆಂಬುವದೇ ಅವರ ಇಷ್ಟ.  ಯತಿಗಳಾದ ಕಾಂಚಿಪೂರ್ಣರು ವರದ ರಾಜಸ್ವಾಮಿ ಭಕ್ತರು. ಇವರು ಮಹಿಮಾನ್ವಿತರು. ಅದು ಕಾಂಚಿಪುರದಲ್ಲಿ ಎಲ್ಲರಿಗೂ ಗೊತ್ತು. ಇವರು ಬ್ರಾಹ್ಮಣರಲ್ಲ. ಇವರನ್ನು ತಮ್ಮ ಗುರುಗಳೆಂದೇ ಭಾವಿಸಿ ರಾಮಾನುಜರು ನಮಸ್ಕರಿಸುತ್ತಿದ್ದರು. ತಮಗೆ ನಮಸ್ಕಾರ ಮಾಡಬಾರದು ಎಂದು ಕಾಂಚೀಪೂರ್ಣರು ಹೇಳುತ್ತಿದ್ದರು.  ಆದರೆ ರಾಮಾನುಜರು ಇದನ್ನು ಒಪ್ಪುತ್ತಿರಲಿಲ್ಲ. ತಾವು ಅವರ ಶಿಷ್ಯರೆಂದೇ ನಂಬಿಕೆ.

ಒಮ್ಮೆ ರಾಮಾನುಜರು ಕಾಂಚಿಪೂರ್ಣರನ್ನು ಮನೆಗೆ ಊಟಕ್ಕೆ ಆಹ್ವಾನಿಸಿ, ಊಟ ಮಾಡಿ ಮಿಕ್ಕಿದ್ದನ್ನು ಪ್ರಸಾದವನ್ನಾಗಿ ಪಡೆಯಬೇಕೆಂದು ಅವರನ್ನು ಆಹ್ವಾನಿಸಿದರು. ಕಾಂಚಿಪೂರ್ಣರು ಬರಲೊಪ್ಪಿದರು. ಅಂದು ಮನೆಯಲ್ಲಿ ವಿಶಿಷ್ಟ ಊಟ ವ್ಯವಸ್ಥೆಯಾಯಿತು. ರಾಮಾನುಜರ ಹೆಂಡತಿ ಬಹಳ ಮಡಿವಂತ ಹೆಂಗಸೆಂಬಉವುದು ಕಾಂಚಿಪೂರ್ಣರಿಗೆ ಗೊತ್ತಿತ್ತು.  ಅದರಿಂದ ರಾಮಾನುಜರು ತಮ್ಮನ್ನು ಹುಡುಕಿಕೋಂಡು ಬಂದಾಗ, ಬೇರೆ ದಾರಿಯಿಂದ ಅವರ ಮನೆಗೆ ಹೋಗಿ, ಊಟ ಮಾಡಿ, ಹೊರಟು ಬಂದರು. ರಾಮಾನುನರ ಹೆಂಡತಿ ಉಳಿದ ಅಡಿಗೆಯನ್ನು ಯಾರಿಗೋ ನೀಡಿದರು: ಸ್ನಾನ ಮಾಡಿ, ಮಡಿಯುಟ್ಟು ಬೇರೆ ಅಡಿಗೆ ಮಾಡತೊಡಗಿದರು.

ರಾಮಾನುಜರು ಮನೆಗೆ ಹಿಂತಿರುಗಿದರು. ನಡೆದುದೆಲ್ಲ ತಿಳಿಯಿತು. ಗುರುಪ್ರಸಾದ ಪಡೆಯುವುದನ್ನು ಆಕೆ ತಪ್ಪಿಸಿದಳಲ್ಲ ಎಂದು ಸಿಟ್ಟು ಗೊಂಡರು. ಆಕೆಯ ಸಂಕುಚಿತ ಭಾವನೆಯೆ ಬಗ್ಗೆ ಅವರಿಗೆ ಬೇಸರ ಬಂದಿತ್ತು. ಜಗತ್ ಕಲ್ಯಾಣಕ್ಕಾಗಿ ಜನಿಸಿದ ರಾಮಾನುಜರ ಉನ್ನತ ಭಾವನೆಗಳನ್ನು ಆಕೆ ಅರ್ಥ ಮಾಡಿಕೊಳ್ಳಲಾರದವಳಾದಳು.

ಒಮ್ಮೆ ಹಸಿದ ಬಡವರ ತಂಡವೊಂದು ಅವರ ಮನೆ ಬಾಗಿಲಿಗೆ ಬಂದಿತು. ಒಳಗಡೆ ಅನ್ನವೇನಾದರೂ ಇದ್ದರೆ ಹಾಕುವಂತೆ ರಾಮಾನುಜರು ತಮ್ಮ ಪತ್ನಿಗೆ ತಿಳಿಸಿದರು. ಆಕೆ ಏನೂ ಇಲ್ಲವೆಂದು ತಿಳಿಸಿದಳೂ. ಸಂಶಯಗೊಂಡ ರಾಮಾನುಜರು ಒಳಗಡೆಗೆ ಹೋಗಿ ಪರೀಕ್ಷಿಸಲು , ಅನ್ನವಿತ್ತು. ತಾವೇ ಅದನ್ನು ತಂದು ಬಡವರಿಗೆ ನೀಡಿದರು. ತಮ್ಮಬಳೀ ತಮ್ಮ ಪತ್ನಿ ಸುಳ್ಳಾಡಿದಳಲ್ಲವೆಂದು ಎರಡನೇ ಸಲ ಆಕೆಯ ಮೇಲೆ ಸಿಟ್ಟುಗೊಂಡರು.

ಯತಿರಾಜ“:

ರಾಮಾನುಜರಿಗೆ ಕೆಲವು ವಿಷಯಗಳು ಸ್ಪಷ್ಟವಾಗಿ ತಿಳಿದಿರಲಿಲ್ಲ. ತಮ್ಮ ಸಂಶಯಗಳಿಗೆ ಉತ್ತರ  ಹೇಳಬೇಕೆಂದು ಕಾಂಚೀಪೂರ್ಣರನ್ನು ಕೇಳಿದರು. ವಿದ್ಯೆ, ಜ್ಞಾನ ಭಕ್ತಿಗಳಲ್ಲಿ ತುಂಬಿದ ಕೊಡವಾಗಿದ್ದ ರಾಮಾನುಜರಿಗೆ ತಾವು ಉತ್ತರ ನೀಡಬಲ್ಲ ಶಕ್ತಿ ಇಲ್ಲ ಎನ್ನಿಸಿತು ಕಾಂಚಿಪೂರ್ಣರಿಗೆ. ಅವರು ವರದರಾಜ ಸ್ವಾಮಿಯಲ್ಲಿ ರಾಮಾನುಜರ ಸಂಶಯಗಳನ್ನು ಭಿನ್ನವಿಸಿದರು. ಆ ಪರಮಾತ್ಮನು ನೀಡಿದ ಉತ್ತರಗಳನ್ನು ರಾಮಾನುಜರಿಗೆ ತಿಳಿಸಿದರು.  ಈ ಉತ್ತರಗಳನ್ನು ಪಡೆದ ರಾಮಾನುಜರು ಮಹಾದಾನಂದಗೊಂಡರು. ಇವು ವಿಶಿಷ್ಟಾಧ್ವೈತ ತತ್ವದ ಮೂಲ ಸೂತ್ರಗಳಾದುವು.

ತಮ್ಮ ಮುಂದಿನ ಗುರುಗಳು ಮಹಾಪೂರ್ಣರು ಎಂಬುವುದನ್ನು ತಿಳಿದು ರಾಮಾನುಜರು ಅವರನ್ನು ಕಾಣಲು ಶ್ರೀರಂಗದ ಕಡೆಗೆ ಹೊರಟರು. ಇದೇ ರೀತಿಯಲ್ಲಿ, ಯಾಮುನರ ಸ್ಥಾನಕ್ಕೆ ರಾಮಾನುಜರನ್ನು ಕರೆದುತರಲು ಮಹಾಪೂರ್ಣರು ಮತ್ತವರ ಪತ್ನಿ ಕಾಂಚೀಪುರದ ಕಡೆ ಹೊರಟರು. ಮಾರ್ಗಮಧ್ಯದಲ್ಲಿ ಇವರಿಬ್ಬರ ಸಮಾಗಮವಾಯಿತು.  ರಾಮಾನುಜರು ಮಹಾಪೂರ್ಣರಿಗೆ ವಂದಿಸಿ, ತಮ್ಮನ್ನು ಶಿಷ್ಯನನ್ನಾಗಿ ಸ್ವೀಖರಿಸಬೇಕೆಂದು ಪ್ರಾರ್ಥಿಸಿದರು.  ಕೂಡಲೇ ಮಹಾಪೂರ್ಣರು ಒಪ್ಪಿದರು. ಬಳಿಯಲ್ಲಿನ ವಕುಳ ವೃಕ್ಷದ ಬಳಿಗೆ ರಾಮಾನುಜರನ್ನು ಕರೆದುಕೊಂಡು ಹೋಗಿ, ಅಲ್ಲಿ ಅವರಿಗೆ ಅಗತ್ಯವಾದ ವಿಧಿಗಳ ನಂತರ ತತ್ವ ರಹಸ್ಯವನ್ನು ಉಪದೇಶಿಸಿದರು. ಅನಂತರ ರಾಮಾನುಜರು ಅಅವರನ್ನು ಕಾಂಚಿಪುರಕ್ಕೆ ಕರೆದುಕೊಂಡು ಹೋಗಿ, ತಮ್ಮಲ್ಲೇ ಇರಿಸಿಕೊಂಡರು.

ಆರು ತಿಂಗಳ ಕಾಲ ರಾಮಾನುಜರು ಮಹಾಪೂರ್ಣರ ಸೇವೆ ಮಾಡಿದರು. ಅವರಿಂದ ಆಳ್ವಾರುಗಳು ರಚಿಸಿದ ನಾಲಾಯಿರ (ನಾಲ್ಕು ಸಾವಿರ) ಪ್ರಬಂಧಗಳ ಅಂತರಾರ್ಥವನ್ನು ಕಲಿತರು. ಅವುಗಳಲ್ಲಿನ ಶ್ರೀ ವೈಷ್ಣವ ಸಿದ್ಧಾಂತದ ರಹಸ್ಯಗಳನ್ನು ಅರಿತರು.

ರಾಮಾನುಜರು ದೇವಸ್ಥಾನದ ಗೋಪುರದಿಂದ ಜನರಿಗೆ ಮಂತ್ರೋಪದೇಶ ಮಾಡಿದರು.

ಮಹಾಪೂರ್ಣರು ಬ್ರಾಹ್ಮಣರಲ್ಲ,. ಅವರ ಹೆಂಡತಿ ಒಂದು ದಿನ ಬಾವಿಯಿಂದ ನೀರು ಸೇದುವಾಗ, ರಾಮಾನುಜರ ಹೆಂಡತಿಯ ಕೊಡದ ಮೇಲೆ ಸ್ವಲ್ಪ ನೀರು ಚಿಮ್ಮಿತು. ತಮ್ಮ ಹಾಳಾಯಿತೆಂದು, ರಕ್ಷಾಂಬಾಳ್ ಕೂಗಾಡಿ, ಜಗಳವಾಡಿದರು. ಮಹಾಪೂರ್ಣರು ಇದರಿಂದ ನೊಂದರು. ತಾವು ಇನ್ನೂ ಅಲ್ಲಿ ಇದ್ದರೆ ಗಂಡ ಹೆಂಡಿರ ಜಗಳಕ್ಕೆ ಕಾರಣವಾಗಬೇಕಾಗುತ್ತದೆ ಎಂದು ಭಾವಿಸಿ ಶ್ರೀರಂಗಕ್ಕೆ ಹಿಂತಿರುಗಿದರು. ಮನೆಗೆ ಬಂದ ಕೂಡಲೇ ರಾಮಾನುಜರಿಗೆ ವಿಚಾರ ತಿಳಿಯಿತು. ಕೋಪ ಉಕ್ಕಿ ಬಂತು. ಇಂತಹ ಪತ್ನಿಯೊಡನೆ ತಮ್ಮ ಬಾಳುವೆ ಅಸಧ್ಯವೆಂದು ತಿಳಿದರು. ಉಪಾಯದಿಂದ ಆಕೆಯನ್ನು ತವರು ಮನೆಗೆ ಕಳುಹಿಸಿ, ತಾವು ವರದರಾಜಸ್ವಾಮಿಯ ಎದುರಿಗೆ ಸಂನ್ಯಾಸವನ್ನು ಸ್ವೀಕರಿಸಿದರು.  ಕಾಷಾಯವಸ್ತ್ರ, ತ್ರಿದಂಡಗಳನ್ನು ಧರಿಸಿದ ರಾಮಾನುಜರು “ಯತಿರಾಜ” ರಾದರು. ಇಲ್ಲಿಗೆ ಲೌಕಿಕ ಜಗತ್ತಿಗೂ, ಅವರಿಗೂ ಸಂಬಂಧ ತಪ್ಪಿ ಹೋಯಿತು.

ಶ್ರೀರಂಗಕ್ಕೆ :

ರಾಮಾನುಜರು ಸಂನ್ಯಾಸಿಗಳದ ಸುದ್ಧಿ ಎಲ್ಲೆಡೆ ಹರಡಿತು. ಅನೇಕರು ಅವರನ್ನು ನೋಡಲು ಬಂದು, ಅವರ ವರ್ಚಸ್ಸಿಗೆ ಆಕರ್ಷಿತರಾಗಿ, ಅವರ ಶಿಷ್ಯರಾದರು. ಇವರಲ್ಲಿ ರಾಮಾನುಜರ ತಂಗಿಯ ಮಗ ದಾಶರಥಿ ಮತ್ತು ಕೂರೇಶ ಮುಖ್ಯರಾದವರು.  ಯಾದವ ಪ್ರಕಾಶರಿಗೆ ತಮ್ಮ ಹಿಂದಿನ ತಪ್ಪುಗಳ ಅರಿವಾಗಿತ್ತು.  ಅನೇಕ ಜನ ರಾಮಾನುಜರನ್ನು ಕಾಣಲು ಹೋಗುತ್ತಿರುವ ವಿಚಾರ ತಿಳಿಯಿತು. ಹಾಗಿದ್ದರೆ ತಾವೂ ಏಕೆ ಅವರನ್ನು ಕಾಣಬಾರದು ಎನ್ನಿಸಿತು. ಅಂತೆಯೇ ರಾಮಾನುಜರನ್ನು ಕಂಡರು. ರಾಮಾನುಜರಿಗೂ ಅವರನ್ನು ಕಂಡು ಸಂತೋಷವಾಯಿತು. ಯಾದವ ಪ್ರಕಾಶರ ಅನೇಕ ಸಂಶಯಗಳನ್ನು ಕೂರೇಶನು ಪರಿಹರಿಸಿದನು. ಅವರ ಮನಸ್ಸು ಪೂರ್ತಿಯಾಗಿ ಪರಿವರ್ತನೆಗೊಂಡು, ಶ್ರೀ ವೈಷ್ಣವ ಧರ್ಮವನ್ನು ಸ್ವೀಕರಿಸಿದರು. ಅಂದಿನಿಂದ ಅವರ ಹೆಸರು ಗೋವಿಂದ ಜೀಯರ‍್ ಎಂದಾಯಿತು.

ಎಷ್ಟೇ ಶಿಷ್ಯರಿದ್ದರೂ ರಾಮಾನುಜರಿಗೆ ಗೋವಿಂದನ ಅವಶ್ಯಕತೆ ತುಂಬಾ ಇತ್ತು. ಅವನನ್ನು ಕಾಳಹಸ್ತಿಯಿಂದ ಕರೆಸಿಕೊಂಡರು.

ಶ್ರೀರಂಗದಲ್ಲಿದ್ದ ಯಾಮುನಾಚಾರ್ಯರ ಶಿಷ್ಯರಿಗೆ ರಾಮಾನುಜರದೇ ಧ್ಯಾನ. ಅವರನ್ನು ಶ್ರೀರಂಗಕ್ಕೆ ಕರೆದು ತರಲು ಯಾಮುನರ ಶಿಷ್ಯರಾದ ವರರಂಗರನ್ನುಜ ಕಳುಹಿಸಿದರು. ವರರಂಗರು ಕಾಂಚಿಪೂರದ ವರದರಾಜ ಸ್ವಾಮಿಯನ್ನು ಒಲಿಸಿ, ರಾಮಾನುಜರನ್ನು ಶ್ರೀರಂಗಕ್ಕೆ ಕರೆದು ತಂದರು.

ಶ್ರೀರಂಗದಲ್ಲಿ ಪ್ರತಿ ದಿನ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದ ರಾಮಾನುಜರಿಗೆ ತಾವು ಕಲಿಯಬೇಕಾದ್ದು ಇನ್ನೂ ಬಹಳವಿದೆ ಎನ್ನಿಸಿತು ಅದರಂತೆಯೇ ಮಹಾಪೂರ್ಣರ ಬಳಿ ಶಿಷ್ಯಾರ್ಜನೆ ಮಾಡಿದರು. ಅವರಿಂದ ಕಲಿಯಬೇಕಾದುದ್ದನ್ನೆಲ್ಲ ಕಲಿತರು. ಆದರೆ ಮಹಾಪೂರ್ಣರು ಹೇಳಿದರು “ಗೋಷ್ಠೀ ಪೂರ್ಣ ಎಂಬ  ಬಹು ದೊಡ್ಡ ವಿಧ್ವಾಂಸರು ಗೋಷ್ಠಿಪುರದಲ್ಲಿದ್ದಾರೆ : ಅವರೇ ಶ್ರೀ ವೈಷ್ಣವ ಮಂತ್ರದ ಅರ್ಥವನ್ನು ಹೇಳಕೊಡಬಲ್ಲ ಸಮರ್ಥರು “.

ನನಗೆ ನರಕ ಪ್ರಾಪ್ತಿಯಾದರೇನು… ?”

ಗೋಷ್ಠೀಪೂರ್ಣರು ರಾಮಾನುಜರಿಗೆ ಬೇಗ ಅನುಗ್ರಹ ನೀಡಲಿಲ್ಲ. ರಾಮಾನುಜರ ಯೋಗ್ಯತೆ, ಶ್ರದ್ದೇಗಳನ್ನು ಪರೀಕ್ಷಿಸಬೇಕೆಂದುಕೊಂಡರು. ಒಮ್ಮೆ ಬಂದಾಗ ಮತ್ತೊಮ್ಮೆ ಬರುವಂತೆ ತಿಳಿಸಿದರು. ಹೀಗೆ ಹದಿನೆಂಟು ಸಲ ಸುತ್ತಾಡಿಸಿದರು. ಕಡೆಗೆ ಅವರಿಗೆ ತಮ್ಮಿಂದ  ಉಪದೇಶ ಪಡೆಯುವುದಕ್ಕೆ ರಾಮಾನುಜರು ಯೋಗ್ಯರು ಎಂದು ಕಂಡುಬಂದಿತು. ದಂಡ ಕಮಂಡಲಗಳೊಡನೆ  ತಮ್ಮ ಬಳಿ ಬರುವಂತೆ ತಿಳಿಸಿದರು. ಅದರಂತೆಯೇ ರಾಮಾನುಜರು ದಾಶರಥಿ ಮತ್ತು ಕೋರೇಶರೊಂದಿಗೆ ಬಂದರು.  “ಒಬ್ಬನನ್ನೇ ಬರ ಹೆಳೀದರೆ ಇವರೊಡನೇಕೆ ಬಂದೆ?” ಎಂದು ಗೋಷ್ಠೀ ಪೂರ್ಣರು ಕೇಳಿದರು. “ನನ್ನ ಜೀವನದಲ್ಲಿ ದಾಶರಥಿಯೆ ದಂಡ, ಕೂರೇಶನೇ ಕಮಂಡಲ. ಅವರಿಲ್ಲದೆ ನಾನಿಲ್ಲ, ನಾನಿಲ್ಲದೆ ಅವರಿಲ್ಲ” ಎಂದರು,. ರಾಮಾನುಜರಿಗೆ ತಮ್ಮ ಶಿಷ್ಯರ ಮೇಲೆ ಇರುವ ಪ್ರೀತಿಯನ್ನು ಕಂಡು ಗೋಷ್ಠಿಪೂರ್ಣರು ಸಂತೋಷಗೊಂಡು “ಅಷ್ಟಾಕ್ಷರೀ ತಿರುಮಂತ್ರ” ವನ್ನೂ ಅದರ ಆಳವಾದ ಅರ್ಥವನ್ನು  ಉಪದೇಶಿಸಿದರು.  ಈ ಮಂತ್ರವನ್ನು ಜಪಿಸುವವರಿಗೆ ಪರಮಪದ ಸಿಗುವುದೆಂದು ತಿಳಿಸಿ, ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.

ಆದರೆ ರಾಮಾನುಜರ ಮನಸ್ಸು ಬೇರೆ ಕಡೆ ಹರಿಯಿತು. ಇಂತಹ ದಿವ್ಯ ಜ್ಞಾನ ಕೆಲವರಿಗೆ ಮಾತ್ರ ಏಕೆ ? ಎಲ್ಲರೂ ತಿಳಿದು ಧನ್ಯರಾಗಲಿ ಎನ್ನಿಸಿತು.

ಮಾರನೇ ದಿನ ಆ  ಊರಿನ ದೊಡ್ಡ ದೇವಸ್ಥಾನದ ಗೋಪುರವನ್ನೇರಿ ನಗರದ ಜನಗಳನ್ನೆಲ್ಲ ಕರೆದರು. ತಾವು ರಹಸ್ಯವಾಗಿ ಪಡೆದಿದ ಉಪದೇಶಗಳನ್ನು ಅವರೆಲ್ಲರಿಗೂ ನೀಡಿದರು. ಜನರು ಮಂತ್ರವನ್ನು ಉಚ್ಚರಿಸಿದರು.  ಅದರ ಅರ್ಥ ತಿಳಿದು ಆನಂದಗೊಂಡರು.

ಈ ವಿಚಾರ ಗೋಷ್ಠಿಪೂರ್ಣರಿಗೆ ತಿಳಿಯಿತು. ಅವರು ಕೋಪಗೊಂಡರು. ರಾಮಾನುಜರು ಅವರ ಬಳಿಗೆ ಬಂದಾಗ, “ಈ ಅಪರಾಧದ ಫಲವೇನು ಗೊತ್ತೇ?” ಎಂದು ಪ್ರಶ್ನಿಸಿದರು.  ಅದಕ್ಕೆ ರಾಮಾನುಜರು ಶಾಂತಚಿತ್ತರಾಗಿ ಹೇಳಿದರು: “ಗೊತ್ತು, ಗುರುವಿನ ಮಾತು ಮೀರಿದುದಕ್ಕೆ ನನಗೆ ನರಕ ಪ್ರಾಪ್ತಿಯಾಗುತ್ತದೆ. ಆಗಲಿ. ಆದರೆ ಇಷ್ಟೊಂದು ಜನಕ್ಕೆ ಮೋಕ್ಷ ಪ್ರಾಪ್ತಿಯಾಗಿ, ಕಲ್ಯಾಣವಾಗುವಾಗ ನನಗೆ ನರಕ ಪ್ರಾಪ್ತಿಯಾದರೂ ಚಿಂತೆ ಇಲ್ಲ.”

ಈ ಮಾತುಗಳು ಗೋಷ್ಠೀಪೂರ್ಣರ ಕತ್ತಲ ಹೃದಯದಲ್ಲಿ ಬೆಳಕು ಮೂಡಿಸಿದವು. ಜಗತ್ ಕಲ್ಯಾಣಕ್ಕಾಗಿ ಹುಟ್ಟಿರುವ ಈ ವ್ಯಕ್ತಿ ಅಸಮಾನರು, ಪವಾಡಪುರುಷರು ಎಂದುಕೊಂಡು, ಕೂಡಲೇ ಅವರನ್ನು ತಬ್ಬಿಕೊಂಡರು. ಅವರನ್ನು ಆಶೀರ್ವದಿಸಿ “ಎಂಬೆರುಮಾನಾರ‍್ (ನನ್ನ ಸ್ವಾಮಿ) ಎಂದು ಅವರನ್ನು ಕರೆದರು.

ಪರಿಪೂರ್ಣರು :

ಯಾಮುನರ ಸಾಧನೆಯ ಎಲ್ಲಾ ಮುಖಗಳೂ ಅವರ ಐವರು ಶಿಷ್ಯರಾದ ಕಾಂಚೀಪೂರ್ಣ, ಮಹಾಪೂರ್ಣ, ಗೋಷ್ಠಿಪೂರ್ಣ, ಮಾಲಾಧರ ಹಾಗೂ ವರರಂಗರಲ್ಲಿ ಹಂಚಿಹೋಗಿತ್ತು. ರಾಮಾನುಜರು ಮೊದಲು  ಮೂವರಿಂದ ಉಪದೇಶವನ್ನು  ಪಡೆದಿದ್ದರು.  ಇನ್ನಿಬ್ಬರು ಉಳಿದಿದ್ದರು. ನಮ್ಮಾಳ್ವಾರರ ಪ್ರಬಂಧಗಳನ್ನು ಅಭ್ಯಾಸ ಮಾಡಲು ಮಾಲಾಧರರ ಕಡೆಗೆ ನಡೆದರು.

ಮಾಲಾಧರನ ಇನ್ನೊಂದು ಹೆಸರು ತಿರುಮಲೈ ಅಂಡಾನ್. ಇವರಲ್ಲಿ ರಾಮಾನುಜರ ಶಿಷ್ಯತ್ವ ಪ್ರಾರರಂಭವಾಯಿತು. ನಮ್ಮಾಳ್ವಾರರ “ತಿರುವಾಯ್ ಮೋಳಿ”ಗೆ ತಮ್ಮ ಗುರು ಯಾಮುನರಿಂದ ಕೇಳಿದ ವಾಕ್ಯಾರ್ಥಗಳನ್ನು ವಿವರಿಸತೊಡಗಿದರು. ಆದರೆ ರಾಮಾನಉಜರು ಅವುಗಳ ಇನ್ನೂ ಹೆಚ್ಚಿನದಾದ ಅರ್ಥವನ್ನು ನೀಡತೊಡಗಿದರು. ಇದರಿಂದ ಈ ವಿಚಾರ ತಿಳಿಯಿತು. ಅವರು ಬಂದು ಮಾಲಾಧಾರರನ್ನು ಸಮಾಧಾನಗೊಳಿಸಿದರು. “ರಾಮಾನುಜರು ಅತ್ಯಂತ ಪ್ರತಿಭಾಶಾಲಿಗಳು, ಯಾಮುನರ ಅನುಗ್ರಹ ಇರುವವರು, ಆದುದರಿಂದ ಪಾಠ ಮುಂದುವರೆಸಿರಿ:” ಎಂದು ತಿಳಿಸಿದರು. ಅಂತಎಯೇ ಮತ್ತೇ ಪಾಠ ಪ್ರಾರಂಭವಾಯಿತು. ಅವರಿಂದ ಉಪದೇಶ ಮುಗಿದ ಮೇಲೆ, ವರರಂಗರಿಂದ ನಾಲಾಯಿರ ಪ್ರಬಂಧಗಳ ಭಾವಸಂಪತ್ತನ್ನು ಪಡೆದರು.

ಈ ರೀತಿ ಐವರು ಶಿಷ್ಯರಲ್ಲಿ ಹಂಚಿಹೋಗಿದ್ದ ಯಾಮುನರ ಜ್ಞಾನಧಾರೆ ರಾಮಾನುಜರಲ್ಲಿ ಒಂದುಗೂಡಿತು. ಇದರಿಂದ ರಾಮಾನುಜರು ಸಮಗ್ರರೂ, ಪರಿಪೂರ್ಣರು ಆದರು. ಅವರ ಶಿಷ್ಯವೃತ್ತಿ ಕೊನೆಗೊಂಡಿತು. ಶ್ರೀ ವೈಷ್ಣವ ಧರ್ಮದ ಸಾರವನ್ನು ತಮ್ಮ ಸಮಕಾಲೀನರಿಗೆ ಹಂಚುವ ಮಟ್ಟವನ್ನು ಅವರು ಈಗ ಮುಟ್ಟಿದ್ದರು.  ಅಂತೆಯೇ “ಗದ್ಯತ್ರಯ “,”ನಿತ್ಯ ಗ್ರಂಥ” ಮತ್ತು “ಗೀತಾಭಾಷ್ಯ” ಎನ್ನುವ ಮೂರು ಗ್ರಂಥಗಳನ್ನು ರಚಿಸಿದರು.  ಭಗವಂತನ ಅನುಗ್ರಹವನ್ನು ಪಡೆಯಲು ಸಾಧನೆಯಲ್ಲಿ ತೊಡಗಿದರು. ಅದರ ಅನುಭವವನ್ನು ಎಲ್ಲರಿಗೂ ಹಂಚುತ್ತಿದ್ದರು.

ವಿರೋಧ :

ರಾಮಾನುಜರು ಶ್ರೀರಂಗಕ್ಕೆ ಬಂದ ಮೇಲೆ, ಅಲ್ಲಿನ ರಂಗನಾಥ ದೇವಾಲಯದ ಪೂಜಾರಿಗಳ ಪ್ರಭಾವ ಕಡಿಮೆಯಾಯಿತು. ಆದುದರಿಂದ ಅವರು ರಾಮಾನುಜರನ್ನು ಮುಗಿಸಿಬಿಡಲು ಸಂಚು ಹೂಡಿದರು.  ಸಂನ್ಯಾಸಿಗಳಾದ ರಾಮಾನುಜರು ಪ್ರತಿ ದಿನ ಭಿಕ್ಷೆಗೆ ಹೋಗುತ್ತಿದ್ದರು.  ಒಂದು ದಿನ ಒಂದು ಮನೆಯ ಎದುರಿಗೆ ಭಿಕ್ಷೆಗೆ  ನಿಂತರು. ಆ ಮನೆಯ ಯಜಮಾನಿ ಅನ್ನವನ್ನು ತೆಗೆದುಕೊಂಡು ಬಂದಳು. ರಾಮಾನುಜರ ದೈವಿಕ ಮಂದಹಾಸ, ಪ್ರಭಾವಯುತ ಕಣ್ಣೂಗಳನ್ನು ನೋಡಿದಳು. ಆಕೆಯ ಕೈಕಾಲುಗಳೂ ನಡುಗಿ,  ಕುಸಿದಳು. ರಾಮಾನುಜರು ಕಾರಣವೇನೆಂದು ನಯವಾಗಿ ಕೇಳಿದರು. ಮಹಾನ್ ವ್ಯಕ್ತಿಯ ಎದುರಿಗೆ ಸುಳ್ಳು ಹೇಳಲಾರದವಳಾದಳು. ಅವರನ್ನು ಕೊಲ್ಲಲು ವಿಷ ಬೆರೆತ ಅನ್ನವನ್ನು ನೀಡುವಂತೆ ನನ್ನ ಗಂಡ, ಇನ್ನಿತರರು ಬಲವಂತಪಡಿಸಿದರೆಂದು ತಿಳಿಸಿದಳೂ. ರಾಮಾನುಜರು ಆ ಅನ್ನವನ್ನು  ಪಡೆದು ನದಿಯಲ್ಲಿ ಚೆಲ್ಲಿದರು. ಈ ವಿಷಯ ಅವರ ಶಿಷ್ಯರಿಗೆ ತಿಳಿಯಿತು. ಅಂದಿನಿಂದ ಅವರೇ ತಮ್ಮ ಗುರುಗಳಿಗೆ ಅಡಿಗೆ ಮಾಡತೊಡಗಿದರು.

ಯಜ್ಞಮೂರ್ತಿ ಎಂಬೊಬ್ಬ ದೊಡ್ಡ ಪಂಡೀತ. ವೇದಾಂತದ ಮೇಲೆ ವಾದ ಮಾಡಿ ಅನೇಕರನ್ನು ಗೆದ್ದಿದ್ದ. ದುರಹಂಕಾರಿಯೂ ಆಗಿದ್ದ. ರಾಮಾನುಜರ ವಿಚಾರ ಇವನ ಕಿವಿಗೆ ಬಿತ್ತು. ಗ್ರಂಥರಾಶಿ ತುಂಬಿದ ಗಾಡಿಗಳೂ, ಶಿಷ್ಯರುಗಳ ತಂಡಗಳ ಸಮೇತ ಶ್ರೀರಂಗಕ್ಕೆ ಬಂದ. ರಾಮಾನುಜರನ್ನು ವಾದಕ್ಕೆ ಎಳೆದ. ಹದಿನೆಂಟು ದಿನಗಳವರೆಗೂ ವಾದ ನಡೆಯಿತು. ಇಬ್ಬರೂ ಸಮಸಮನಾಗಿದ್ದರು.   ಹತ್ತೊಂಬತ್ತನೆಯ ದಿನ ಯಾಮುನರ ಗ್ರಂಥ ಆಧರಿಸಿ, ರಾಮಾನುಜರು ವಾದ ಮಾಡಿದರು.  ಗೆಲ್ಲುವೆನೆಂದುಕೊಂಡಿದ್ದ ಯಜ್ಞಮೂರ್ತಿ ಕೊನೆಯ ದಿನ ಸೋತ.  ರಾಮಾನುಜರ ಪ್ರೀಯ ಶಿಷ್ಯನಾದ. ಆತನಿಗೆ ದೇವರಾಜ ಮುನಿ ಎಂದು ಹೆಸರಾಯಿತು.

ಇಬ್ಬರು ಶಿಷ್ಯರು:

ಈ ರೀತಿ ರಾಮಾನುಜರ ಶಿಷ್ಯ ಪರಂಪರೆ ಬೆಳೆಯಿತು. ದೇಶದ ಮೂಲೆ ಮೂಲೆಗಳಲ್ಲಿಯೂ ಅವರ ಪ್ರಭಾವ ಪಸರಿಸಿತು.

ರಾಮಾನುಜರಿಗೆ ಪುಣ್ಯ ತೀರ್ಥಗಳ ದರ್ಶನ  ಮಾಡಬೇಕೆನ್ನಿಸಿತು. ಅದರಂತೆ ತಮ್ಮ ಶಿಷ್ಯರೊಡಗೂಡಿ ಅಳ್ವಾರುಗಳೂ  ನೆಲೆಸಿದ್ದ ಸ್ಥಳಗಳನ್ನು ನೋಡಿ, ಅಷ್ಟ ಸಹಸ್ರ ಗ್ರಾಮ ಎಂಬಲ್ಲಿಗೆ ಬಂದರು. ಅಲ್ಲಿ ಅವರಿಗೆ ಯಜ್ಞೇಶ ಮತ್ತು ವರದಾರ್ಯ ಎಂಬ ಇಬ್ಬರು ಶಿಷ್ಯರಿದ್ದರು. ಯಜ್ಞೇಶ ಸಾಹುಕಾರ, ವರದಾರ್ಯ ಬಡವ, ರಾಮಾನುಜರು ಶಿಷ್ಯರೊಂದಿಗೆ ವರದಾರ್ಯನ ಮನೆಗೆ ಹೋದರು. ಅವನು ಭಿಕ್ಷೆಗಾಗಿ ಹೊರಗೆ ಹೋಗಿದ್ದ. ಅವನ ಹೆಂಡತಿ ಲಕ್ಷ್ಮೀ ಅವರನ್ನೆಲ್ಲ ಬರಮಾಡಿಕೊಂಡಳೂ. ಆದರೆ ಮನೆಯಲ್ಲಿ ಏನೂ ಇಲ್ಲ! ಗಂಡ ಹೆಂಡತಿ ಕಷ್ಟಪಟ್ಟು ಗುರುಗಳನ್ನೂ ಶಿಷ್ಯರನ್ನೂ ತಮ್ಮಿಂದಾದಷ್ಟು ಉಪಚರಿಸಿದರು.  ರಾಮಾನುಜರಿಗೆ ಅವರ ಭಕ್ತಿಯಿಂದ ತುಂಬ ಸಂತೋಷವಾಯಿತು. ಯಜ್ಞೇಶ ಸಾಹುಕಾರ, ಆದರೆ ಅವನಿಗೆ ಸ್ವಲ್ಪ ಗರ್ವ. ಗುರುಗಳೂ ತನ್ನ ಮನೆಗೆ ಬಂದೇ ಬರತ್ತಾರೆಂದು ಎಂದು ದಿನವೆಲ್ಲ ಕಾದ. ಆವರು ಬರಲಿಲ್ಲ. ಅವನಿಗೆ ತನ್ನ ತಪ್ಪು ತಿಳೀಯಿತು. ಅವರ ಬಳಿಗೆ ಓಡಿ ಅವರ ಕಾಲನ್ನು ಹಿಡಿದು ಕ್ಷಮೆ ಬೇಡಿದ. ರಾಮಾನುಜರು ಎಲ್ಲ ಮನುಷ್ಯರನ್ನೂ ಒಂದೇ ಸಮನೆ  ಪ್ರೀತಿಯಿಂದ ಕಾಣಬೇಕೆಂದು  ಉಪದೇಶ ಮಾಡಿದರು.

ಅನಂತರ ರಾಮಾನುಜರು ತಿರುಪತಿ ಬೆಟ್ಟಗಳಲ್ಲಿನ ಶ್ರೀನಿವಾಸರನ್ನು ಸೇವಿಸಿದರು. ಕೆಳ ತಿರುಪತಿಯಲ್ಲಿ ಶ್ರೀಶೈಲ ಪೂರ್ಣರ ಬಳಿ ಒಂದು ವರ್ಷ ರಾಮಾಯಣವನ್ನು ಅಧ್ಯಯನ ಮಾಡಿದರು.

ಶ್ರೀ ಬಾಷ್ಯಕಾರರು :

ರಾಮಾನುಜರು ತಾವು ಯಾಮುನಾಚಾರ್ಯರಿಗೆ ನೀಡಿದ್ದ ಮಾತನ್ನು ನೆನಸಿಕೊಂಡರು. ವ್ಯಾಸರ ಬ್ರಹ್ಮಸೂತ್ರಗಳಿಗೆ ವಿಶಿಷ್ಟಾಧ್ವೈತ ಅರ್ಥ ಬರೆಯಬೇಕು. ಇದಕ್ಕೆ ವ್ಯಾಸರ ಶಿಷ್ಯರಾದ ಬೋಧಾಯನರು ಬರೆದ ವ್ಯಾಖ್ಯಾನ ಬೇಕಾಗಿತ್ತು. ಈ ಗ್ರಂಥ ಕಾಶ್ಮೀರದಲ್ಲಿತ್ತು. ಅದನ್ನು ತರಲು ರಾಮಾನುಜರು ಮತ್ತವರ ಶಿಷ್ಯ ಕೋರೇಶ ಹೊರಟರು. ದಕ್ಷಿಣದ ಈ ಕೊನೆಯಿಂದ ಉತ್ತರದ ಆ ಕೊನೆಗೆ ನಡೆದೇ ಹೊರಟರು. ತಿಂಗಳುಗಳಾದ ಮೇಲೆ ಕಾಶ್ಮೀರ ಸೇರಿದರು. ಅಲ್ಲಿನ ರಾಜ ಮತ್ತು ಪಂಡಿತರು ರಾಮಾನುಜರ ಪ್ರತಿಭೆಗೆ ಬೆರಗಾದರು. ರಾಮಾನುಜರು ಬೋಧಾಯನ ಗ್ರಂಥ ನೀಡುವಂತೆ ಕೇಳಿಕೊಂಡರು. ಆದರೆ ಅಲ್ಲಿನ ಪಂಡಿತ ಮಂಡಲಿ ಒಪ್ಪಲಿಲ್ಲ.  ಆ ಗ್ರಂಥದ ಪ್ರತಿ ಮಾಡಿಕೊಳ್ಳಲೂ ಒಪ್ಪಲಿಲ್ಲ. “ಹೋಗಲಿ, ಒಂದು ಸಲ ಓದುವುದಕ್ಕಾಗಿಯಾಧರೂ ಕೊಡಿ” ಎಂದರು. ರಾಮಾನುಜರು. ಅಂತಹ ಕಠಿಣ ಗ್ರಂಥವನ್ನು ಒಂದು ಸಲ ಓದುವುದೂ ಒಂದೆ, ಓದದೇ ಇರುವುದೂ ಒಂದೆ ಎಂದುಕೊಂಡು ಪಂಡಿತರು ಒಪ್ಪಿದರು. ಕೂರೇಶ ದಿನವೂ ಅಷ್ಟಷ್ಟು ಓದಿದ. ರಾಮಾನುಜರು ಅಲಿಸಿದರು. ಪೂರ್ತಿ ಓದಿದ್ದಾಯಿತು. ದುಃಖದಿಂದ ರಾಮಾನುಜರು ಅದನ್ನು ಹಿಂತಿರುಗಿಸಿದರು. ಗುರುಗಳ ದುಃಖ ಕೂರೇಶನಿಗ ಅರ್ಥವಾಯಿತು. ಆತನಿಗೆ ಪ್ರಚಂಡ ಜ್ಞಾಪಕ ಶಕ್ತಿ. ಆ ಗ್ರಂಥವನ್ನು ನೆನಪಿನಿಂದ ಪೂರ್ತಿ ಬರೆದ. ಗುರುಗಳಿಗೆ ತುಂಬಾ ಸಂತೋಷವಾಯಿತು. ಇಬ್ಬರೂ ಶ್ರೀರಂಗಕ್ಕೆ ಮರಳಿದರು. ಶ್ರೀ ಭಾಷ್ಯದ ರಚನೆ ಪ್ರಾರಂಭವಾಯಿತು.  ಗುರುಗಳು ಹೇಳುವರು, ಕೂರೇಶ ಬರೆದುಕೊಳ್ಳುವನು. ಅನುಮಾನ ಬಂದ ಕಡೆಗೆ ಆತ ಬರೆಯುವುದನ್ನು ನಿಲ್ಲಿಸುವನು, ಹೀಗೆಯೇ ಬರವಣಿಗೆ ಸಾಗಿತು.

ಒಮ್ಮೆ ಒಂದು ತತ್ವ ವಿಚಾರದಲ್ಲಿ ಕೂರೇಶನಿಗೆ ಅನುಮಾನ ಬಂತು. ಬರೆಯುವುದನ್ನು ನಿಲ್ಲಿಸಿದ. ಸ್ವಲ್ಪ ಹೊತ್ತಾದ ಮೇಲೆ ಗುರುಗಳು ನೋಡಿದರು- ಕೂರೇಶ ಏನನ್ನೂ ಬರೆದುಕೊಳ್ಳುತ್ತಿಲ್ಲ. ಅವರಿಗೆ ಬಹಳ ಸಿಟ್ಟು ಬಂದು, ಎದ್ದು ಹೊರಟು ಹೋದರು. ಅನಂತರ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಕೂರೇಶನ ಸಂಶಯ ನಿವಾರಣೆಯಾಗದಿದ್ದರೆ ತಮ್ಮ ತತ್ವ ಪ್ರತಿಪಾದನೆಯೇ ಬೇರೆ ದಾರಿ ಹಿಡಿಯುತ್ತಿತ್ತು. ಆತನನ್ನು ಪ್ರೀತಿಯಿಂದ ಆಲಿಂಗಿಸಿಕೊಂಡರು.

“ಶ್ರೀ ಭಾಷ್ಯ” ಗ್ರಂಥ ಮುಕ್ತಾಯವಾಯಿತು. ಇದರ ರಚನೆಯಿಂದ ರಾಮಾನುಜರಿಗೆ “ಶ್ರೀ ಭಾಷ್ಯಕಾರರು” ಎಂಬ ಹೆಸರು ಬಂದಿತು.

ವಿಶಿಷ್ಟಾಧ್ವೈತ ತತ್ವದ ಪ್ರಚಾರವಾಗಬೇಕು. ಅಂತೆಯೇ ತೀರ್ಥಯಾತ್ರೆಯೂ ಆಗಬೇಕು. ಇದು ಶಿಷ್ಯರ ಅಭಿಪ್ರಾಯ. ರಾಮಾನುಜರು ಒಪ್ಪಿದರು. ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಯಾತ್ರೆ ಹೊರಟರು. ಚೋಳಮಂಡಲ, ಪಾಂಡ್ಯ ಮಂಡಲಗಳನ್ನು ಸುತ್ತಿ ಉತ್ತರ ಭಾರತದ ಕಡೆ ನಡೆದರು.  ದ್ವಾರಕಾ ಬೃಂದಾವನ, ಮಥುರಾ, ಬದರಿಕಾಶ್ರಮ ಇತ್ಯಾದಿ ಕ್ಷೇತ್ರಗಳನ್ನು ಸಂದರ್ಶಿಸಿ, ಕಾಶ್ಮೀರವನ್ನು ತಲುಪಿದರು. ಅಲ್ಲಿ ಶಾರದಾದೇವಿಯೇ ರಾಮಾನುಜರಿಗೆ ಪ್ರತ್ಯೇಕ್ಷಳಾಗಿ, ಹಯಗ್ರೀವರನ ವಿಗ್ರಹವನ್ನು ದಯಪಾಲಿಸಿ, ಸರ್ವ ವಿದ್ಯೆಗಳನ್ನೂ ಅನುಗ್ರಹಿಸಿದಳು ಎಂದು ಹೆಳುತ್ತಾರೆ. ಅನಂತರ ಕಾಶಿಯನ್ನು ಸಂದರ್ಶಿಸಿ, ಪುರಿ  ನಗರವನ್ನು ತಲುಪಿದರು.  ಅಲ್ಲಿ ಎಂಬಾರ‍್ ಮಠವನ್ನು ಸ್ಥಾಪಿಸಿದರು. ಅಲ್ಲಿನ ಜಗನ್ನಾಥ ದೇವಾಲಯದಲ್ಲಿನ ಪೂಜಾಕ್ರಮವನ್ನು ಸರಿಪಡಿಸಿದರು. ಭಾರತವನ್ನೆಲ್ಲ ಸುತ್ತಿ, ಧರ್ಮ ಪ್ರಚಾರ ಮಾಡಿ ಶ್ರೀರಂಗಕ್ಕೆ ಬಂದರು.

ಕರ್ನಾಟಕಕ್ಕೆ :

ಕರಿಕಾಲ ಎಂಬಾತ ಚೋಳ ದೇಶದ ಆಗಿನ ದೊರೆ. (ಈ ದೊರೆಯ ಹೆಸರಿನ ವಿಷಯ ಬೇರೆ ಬೇರೆ ಅಭಿಪ್ರಾಯಗಳಿವೆ). ಇವನು ಶೈವ, ವಿಶಾಲ ಹೃದಯಿ ಅಲ್ಲ, ತನ್ನ ಧರ್ಮ ದೊಡ್ಡದು, ಇತರರು ಕೀಳು ಎನ್ನುವ ಮನೋಭಾವದವನು. “ಶಿವನಿಗಿಂತ ದೊಡ್ಡ ದೇವರಿಲ್ಲ” ಎಂದು ಪ್ರಕಟಣೆ ಹೊರಡಿಸಿ, ಎಲ್ಲರೂ ಅದಕ್ಕೆ ಸಹಿಹಾಕಬೇಕೆಂದು ಆಜ್ಞೆ ಮಾಡಿದ. ಇದಕ್ಕೆ ರಾಮಾನುಜರು ಸಹಿ  ಮಾಡಿದರೆ ಉತ್ತಮ ಎಂದು ಯಾರೋ ಚುಚ್ಚಿ ಕೊಟ್ಟರು.  ಶ್ರೀರಂಗಕ್ಕೆ ದೊರೆ ಹೇಳಿ  ಕಳುಹಿಸಿದ. ರಾಜಭಟ್ಟರು ಬಂದಾಗ ರಾಮಾಜುನರು ಸ್ನಾನಕ್ಕೆ ಹೋಗಿದ್ದರು. ಮುಂದೆ ಬರುವ ಅಪಾಯವನ್ನು ಊಹಿಸಿದ. ಕೂರೇಶ ಗುರುಗಳ ಕಾವಿ ಬಟ್ಟೆ ತೊಟ್ಟು, ತ್ರಿದಂಡ ಹಿಡಿದು ತಾನೇ ರಾಮಾನುಜ ಎಂದ. ಮಹಾಪೂರ್ಣರು ಅವನ್ನು ಅನುಸರಿಸಿದರು. ಸ್ನಾನ ಮಾಡಿ ಹಿಂತಿರುಗಿದ ರಾಮಾನುಜರಿಗೆ ದಾಶರಥಿ ವಿಷಯ ತಿಳಿಸಿದ. ತಪ್ಪಿಸಿಕೊಂಡು ಹೋಗಿದ್ದಲ್ಲಿ ಪ್ರಾಣಾಪಾಯವೆಂದು ಭಿನ್ನವಿಸಿದ. ಆ ದೇಶ ಬಿಡುವದೆಂದು ರಾಮಾನುಜರು ತೀರ್ಮಾನಿಸಿದರು.  ಕಾವೇರಿ ನದಿಯನ್ನು  ಅನುಸರಿಸಿ ಕರ್ನಾಟಕವನ್ನು ಪ್ರವೇಶಿಸಿದರು.

ಚೋಳಳರಾಜರು ಎದುರಿಗೆ ನಿಂತ ಕೂರೇಶ ಅವನ ಕೋಪಕ್ಕೆ ಗುರಿಯಾಗಬೇಕಾಯಿತು. ರಾಜನ ಅಪ್ಪಣೆಯಂತೆ ರಾಜದೂತರು ಕೂರೇಶ ಮತ್ತು ಮಹಾಪೂರ್ಣರನ್ನು ಕಾಡಿಗೆ ಕರೆದುಕೊಂಡು  ಹೋಗಿ ಕಣ್ಣುಗಳನ್ನು ಕಿತ್ತು ಹಾಕಿದರು. ಈ ಯಾತನೆಯನ್ನು ತಡೆಯದೇ ಮಹಾಪೂರ್ಣರು ಮರಣ ಹೊಂದಿದರು. ಕುರುಡಾದ ಕೂರೇಶ ಒಂದು ಸಣ್ಣ ಹಳ್ಳಿಯಲ್ಲಿದ್ದ.

ಕರ್ನಾಟಕವನ್ನು ಪ್ರವೇಶಿಸಿದ ರಾಮಾನುಜರು ಸಾಲಿ ಗ್ರಾಮವನ್ನು ತಲುಪಿದರು. ಅಲ್ಲಿನ ಪ್ರಶಾಂತ ವಾತಾವರಣ ಅವರಿಗೆ ಹಿಡಿಸಿತು.  ಅಲ್ಲಿನ ಹರಸಿಂಹ ದೇವಾಲಯದಲ್ಲಿ ವಡುಹನಂಬಿ ಎಂಬಾತ ಅರ್ಚಕ. ಆತ ರಾಮಾನುಜರ ಶಿಷ್ಯನಾದ. ಸುತ್ತಮುತ್ತಲ ಜನಕ್ಕೆ ಈ ಗುರುಗಳು ರಾಮಾನುಜರು ಎಂಬುವುದು ತಿಳಿದ ಕೂಡಲೇ ಅವರನ್ನು ಕಾಣಲು ತಂಡ ತಂಡವಾಗಿ ಬರತೊಡಗಿದರು. ಅಲ್ಲಿ ಅವರ ನೆನಪಿನ “ಶ್ರೀಪಾದತೀರ್ಥ” ಎನ್ನುವ ಕೊಳವಿದೆ. ಈ ತೀರ್ಥ ಶ್ರೀ ವೈಷ್ಣವರಿಗೆ ಬಹಳ ಪವಿತ್ರವಾದುದು. ಇಂದಿಗೂ ವಡುಹನಂಬಿಗಳ ವಂಶದವರು ಇದನ್ನು ನೋಡಿಕೊಳ್ಳುತ್ತಿದ್ದಾರೆ.

ರಾಮಾನುಜರು ಮೇಲು ಕೋಟೆಯ ದೇವಸ್ಥಾನದಲ್ಲಿ ತಿರುನಾರಾಯಣ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

 ಬಿಟ್ಟಿದೇವ :

ರಾಮಾನುಜರು ಇಲ್ಲಿಂದ ಪೂರ್ವ ದಿಕ್ಕಿಗೆ ಹೊರಟು ತೊಂಡನೂರಿಗೆ ಬಂದರು. ಆಗ ಈ ನಗರ ಹೊಯ್ಸಳರ  ಎರಡನೆ ರಾಜದಾನಿಯಾಗಿತ್ತು. ಆಗ  ಹೊಯ್ಸಳ ರಾಜ್ಯದ ದೊರೆ ಬಿಟ್ಟಿದೇವ (ವಿಠ್ಠಲದೇವರಾಯ). ಈತನ ಮಗಳಿಗೆ ಬುದ್ಧಿ ಕೆಟ್ಟು ಹೋಗಿತ್ತು. ಚೋಳ ದೇಶದ ರಾಜಕುಮಾರಿಯನ್ನು ರಾಮಾನುಜರು ಗುಣಪಡಿಸಿದ್ದು, ಎಲ್ಲರಿಗೂ ತಿಳಿದಿತ್ತು. ಅರಮನೆಯಿಂದ ಕರೆ ಬಂದಿತು. ಮೊದಲು ರಾಮಾನುಜರು ಹೋಗಲಿಲ್ಲ. ಆದರೆ ಅಲ್ಲಿನ ತೊಂಡನೂರು ನಂಬಿ ಎನ್ನುವ ಶಿಷ್ಯ ಬಿಟ್ಟಿದೇವ ಚೋಳರಾಜನಂತಹವನಲ್ಲ. ಸಹಾಯ ಮಾಡಲೇಬೇಕೆಂದು  ಬಿನ್ನವಿಸಿದ. ಅಂತೆಯೇ ರಾಮಾನುಜರು ರಾಜಕುಮಾರಿಯ ರೋಗವನ್ನು ಗುಣಪಡಿಸಿದರು. ರಾಜನಿಗೆ ಸಂತೋಷವಾಯಿತು. ಆತ ಶ್ರೀ ವೈಷ್ಣವ ತತ್ವದಿಂದ ಆಕರ್ಷಿತನಾದ. ರಾಮಾನುಜರು ಆತನಿಗೆ ಶ್ರೀವೈಷ್ಣವ ಧೀಕ್ಷೆಕೊಟ್ಟರು.  ಅಂದಿನಿಂದ ಆತನಿಗೆ ವಿಷ್ಣುವರ್ಧನ ಎಂದು ಹೆಸರಾಯಿತು. ಇದರ ನೆನಪಿಗಾಗಿ ಆತ ಪಂಚನಾರಾಯಣ, ತೊಂಡನೂರಿನ ನಂಬಿನಾರಾಯಣ, ತಲಕಾಡಿನ ಕೀರ್ತಿನಾರಾಯಣ, ಗದುಗಿನ ವೀರನಾರಾಯಣ ಮತ್ತು ಮೇಲು ಕೋಟೆಯ ಚೆಲುವನಾರಾಯಣ ದೇವಾಲಯಗಳನ್ನು ನಿರ್ಮಿಸಿದ. ಇವು ಕರ್ನಾಟಕದ ಸಂಸ್ಕೃತಿ ಹಾಗೂ ಶಿಲ್ಪ ಕಲೆಯ ಪ್ರತೀಕಗಳಾಗಿವೆ. ರಾಮಾನುಜರು ತೊಂಡನೂರಿನಲ್ಲಿ ಇತರ ದೇವಾಲಯಗಳನ್ನು ನಿರ್ಮಿಸಿದ್ದೇ ಅಲ್ಲದೇ ತಿರುಮಲಸಾಗರ ಎಂಬ ಕೆರೆಯನ್ನು ಕಟ್ಟಿಸಿದರು. ಅನಂರ ಇದಕ್ಕೆ “ಮೋತೀ ತಾಲಾಬ್” (ಮುತ್ತಿನ ಸರೋವರ) ಎಂದು ಹೆಸರು ಬಂದಿತು.

ರಾಮಾನುಜರು ತೊಂಡನೂರಿನಿಂದ ಮೇಲುಕೋಟೆಗೆ ಬಂದರು. ಇದನ್ನು ತಿರುನಾರಾಯಣಪುರ” ಅಥವಾ “ಯಾದವಗಿರಿ” ಎಂದೂ ಕರೆಯಲಾಗುತ್ತಿತ್ತು.  ಇದು ಕಾಡುಗಳಿಂದ ತುಂಬಿದ ಬೆಟ್ಟ ಪ್ರದೇಶವಾಗಿತ್ತು. ತಿರುನಾರಾಯಣನ ಮೂಳ ವಿಗ್ರಹ ಒಂದು ಹುತ್ತದಲ್ಲಿ ಹುದುಗಿತ್ತು.  ರಾಮಾನುಜರು ಅದನ್ನು ಹೊರೆತೆಗೆದು, ಒಂದು ದೇವಾಲಯವನ್ನು ಕಟ್ಟಿಸಿ, ಅಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

ಈ ದೇವಾಲಯದ ಉತ್ಸವ ಮೂರ್ತಿಯ ಕುರಿತು ಒಂದು ಸುಂದರ ಕಥೆ ಇದೆ.

ದೇವಾಲಯದಲ್ಲಿ ಉತ್ಸವ ಮೂರ್ತಿ ಇರಲಿಲ್ಲ. ಉತ್ತರ ಭಾರತದಲ್ಲಿನ ಯಾರೋ ಒಬ್ಬ ಮುಸಲ್ಮಾನ ದೊರೆಯ ಬಳಿ ಇದೆಯೆಂದು ತಿಳಿದುಬಂದಿತು. ರಾಮಾನುಜರು ಅಲ್ಲಿಗೇ ಹೊರಟರು. ಸುಲ್ತಾನನ್ನು ಭೇಟಿಯಾದರು. ಸುಲ್ತಾನ ಅವನ ವರ್ಚಸ್ಸಿಗೆ ಮಾರು ಹೋದ. ರಾಮಾನುಜರು ತಾವು ಬಂದ ವಿಚಾರವನ್ನು ತಿಳಿಸಿದರು. ಅಂತಹ  ವಿಗ್ರಹ ವಿದ್ದರೆ ತೆಗೆದುಕೊಂಡು ಹೋಗಿ ಎಂದ. ಆ ವಿಗ್ರಹ  ಸುಲ್ತಾನನ ಮಗಳ ಬಳಿ ಇತ್ತು.  ಅಲ್ಲಿ ಹೋಗಿ “ಬಾ ದೊರೆ ಶೆಲ್ವ ಪಿಳ್ಳೆ ” ಎಂದ ಕೂಡಲೇ ಆ ವಿಗ್ರಹ ಕುಣಿಯುತ್ತಾ ರಾಮಾನುಜರ ಬಳಿ ಬಂತಂತೆ ! ಅದನ್ನು  ಮೇಲುಕೋಟೆಗೆ ತಂದರು. ಆದರೆ ಆ ವಿಗ್ರಹದಲ್ಲೇ ಜೀವವನ್ನು ಇರಿಸಿಕೊಂಡಿದ್ದ ಸುಲ್ತಾನನ ಮಗಳೂ, ಅದನ್ನೇ ಹಿಂಬಾಲಿಸಿ ಮೇಲುಕೋಟೆಗೆ ಬಂದಳು. ವಿಗ್ರಹವನ್ನು ಮರಳೀ ಪಡೆಯಲು ಸಾಧ್ಯವಿಲ್ಲವೆಂಬುವುದು ತಿಳಿದಾಗ, ಅದರ ಪಾದಗಳ ಬಳಿ ಪ್ರಾಣಾರ್ಪಣೆ ಮಾಡಿದಳು ಎಂದು ಹೇಳುತ್ತಾರೆ.

ದೇವಾಲಯವನ್ನು ಕಟ್ಟುವಾಗಲೂ ಇತರೆ ಕೆಲಸಗಳಲ್ಲಿಯೂ ಹರಿಜನರು ರಾಮಾನುಜರಿಗೆ ನೆರವಾದರು. ರಾಮಾನುಜರು ಅವರನ್ನು :ತಿರುಕುಲತ್ತಾರ್:” (ಶ್ರೇಷ್ಠ ಕುಲದವರು) ಎಂದು ಕರೆದರು. ವರ್ಷದಲ್ಲಿ ಮೂರು ದಿನ ದೇವಾಲಯದ ಒಳಗೆ ಪ್ರವೇಶಿಸಿ ಇವರು ದೇವರ ದರ್ಶನ ಪಡೆಯಲು ರಾಮಾನುಜರು ಅಧಿಕಾರ  ನೀಡಿದರು.

ಕಡೆಯ ದಿನಗಳು :

ರಾಮಾನುಜರು ಕರ್ನಾಟಕದಲ್ಲಿ ಇಪ್ಪತ್ತು ವರ್ಷಗಳ ಕಾಲವಿದ್ದರು. ಮೇಲುಕೋಟೆಯಲ್ಲಿ ಯತಿರಾಜ ಮಠವನ್ನು ಸ್ಥಾಪಿಸಿದರು.  ಇನ್ನೂ ಅನೇಕ ದೇವಾಲಯಗಳ,ಮಠಗಳ ನಿರ್ಮಾಣಕ್ಕೆ ಕಾರಣರಾದರು. ಇಲ್ಲಿ ಶ್ರೀ ವೈಷ್ಣವ ಮತ ಪ್ರಚಾರ ಪೂರ್ತಿಯಾಗಿತ್ತು. ಈಗ ಅವರ ಮನಸ್ಸು ಹಿಂದಿನ ಕಾರ್ಯಕ್ಷೇತ್ರ ಶ್ರೀಗಂದ ಕಡೆಗೆ ತಿರುಗಿತು. ಅಲ್ಲಿ ಕೂರೇಶ, ಧನುರ್ವಾಸ ಇತ್ಯಾದಿ ಶಿಷ್ಯ ವರ್ಗದವರೆಲ್ಲ ನೆನಪಿಗೆ ಬಂದರು. ಅಲ್ಲಿ ಮಾಡಬೇಕಾದ ಕೆಲಸ ಬಹಳವಿತ್ತು. ಹಿಂದಿನ ಚೋಳರಾಜ ಸತ್ತಿದ್ದ. ಅನಂತರ ದೊರೆ ಪರಮತ ಸಹಿಷ್ಣುವಾಗಿದ್ದ. ಪರಿಸ್ಥಿತಿ ಉತ್ತಮಗೊಂಡಿತ್ತು.  ಇಲ್ಲಿ ಎಲ್ಲರನ್ನೂ ಬಿಳ್ಕೊಂಡು ಶ್ರೀರಂಗಕ್ಕೆ ಹಿಂತಿರುಗಿದರು.

ಶ್ರೀರಂಗಕ್ಕೆ ರಾಮುನಜರು ಬಂದ ಕೂಡಲೇ ಎಲ್ಲರಿಗೂ ನವಚೇತನ, ಕುರುಡ ಕೂರೇಶನನ್ನು ಕಂಡು ರಾಮಾನುಜರು ತುಂಬಾ ನೊಂದರು. ನೂರು ವರ್ಷ ಆ ಮುದಿ ಜೀವ ಅನಂತರ ಬಹಳ ದಿನ ಬದುಕಲಿಲ್ಲ. ಇಹಲೋಕದಿಂದ ವಿಮುಕ್ತಿ ಪಡೆಯಿತು.

ರಾಮಾನುಜರು ಹಾಳು ಸುರಿಯುತ್ತಿದ್ದ ಅನೇಕ ದೇವಾಲಯಗಳನ್ನು ಜೀರ್ಣೊದ್ಧಾರ ಮಾಡಿದರು. ಅನೇಕ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿದರು. ನೂರಿಪ್ಪತ್ತಕ್ಕೂ ಹೆಚ್ಚು ವರ್ಷಗಳನ್ನು ಈ ಜಗತ್ತಿನಲ್ಲಿ ಅವರು ಕಂಡಿದ್ದರು.  ದೇಹ ಹಣ್ಣಾಗಿತ್ತು. ಮನಸ್ಸು ಹೆಚ್ಚು ಹೆಚ್ಚಾಗಿ ಪರಮಾತ್ಮನತ್ತ ಒಲಿಯುತ್ತಿತ್ತು. ಅವರು ಮಾಡಬೇಕೆಂದು ಕೊಂಡಿದ್ದ ಎಲ್ಲಾ ಕಾರ್ಯಗಳೂ ಮುಗಿದಿದ್ದುವು. ಯಾಮುನರಿಗೆ ಕೊಟ್ಟ ಮಾತುಗಳು ನೆರವೇರಿದಿದ್ದುವು. ಇನ್ನೂ ಈ ಲೋಕವನ್ನು ಬಿಟ್ಟು ಹೋಗಬೇಕು ಎಂದು ತೀರ್ಮಾನಿಸಿದರು. ಅವರನ್ನು ಹೋಲುವ ವಿಗ್ರಹವೊಂದು ಸಿದ್ಧವಾಯಿತು. ರಾಮಾನುಜರು ಅದರ ಬ್ರಹ್ಮ ರಂಧ್ರದಲ್ಲಿ ಊದಿ, ತಮ್ಮ ಶಕ್ತಿಯನ್ನು ನೀಡಿ, ಅದರಲ್ಲಿ ಜೀವ ಕಳೆ ತುಂಬಿದರು. ಅದನ್ನು ಶ್ರೀ ಪೆರಂಬುದೂರಿನಲ್ಲಿ ಸ್ಥಾಪಿಸಲಾಯಿತು.

ರಾಮಾನುಜರು ಅಂತಿಮ ಸಂದೇಶವನ್ನು ತಮ್ಮ ಶಿಷ್ಯ ವರ್ಗಕ್ಕೆ ನೀಡಿದರು. “ಅಹಂಕಾರ ಬಿಡಿ. ಭಗವಂತನ ಭಕ್ತರನ್ನು ಗೌರವಿಸಿ, ಭಗವಂತನ ಮಕ್ಕಳ ಸೇವೆ ಮಾಡಿ. ಎಲ್ಲರಲ್ಲೂ ದೋಷವಿದೆ. ಇತರರನ್ನು ಹೀಗಳೆಯಬೇಡಿ, ಶುದ್ಧ ಮನಸ್ಸು, ಶುದ್ಧ ಆಚರಣೆ ಮುಖ್ಯ” ಎಂದು ಉಪದೇಶಿಸಿದರು.  ಅವರ ಜೀವಂತ ಪಂಥವನ್ನು ಅವರ ಎಪ್ಪತ್ತನಾಲ್ಕು ಮಂದಿ ಶಿಷ್ಯರು ಭಾರತದಾದ್ಯಂತ ಹರಡಿ, ಮಠಗಳನ್ನು ಸ್ಥಾಪಿಸಿದರು. ಅಂತ್ಯ ಸಮೀಪಿಸಿತು. ಗೋವಿಂದನ ತೊಡೆಯ ಮೇಲೆ ತಲೆಯನ್ನೂ, ಆಂಧ್ರಪೂರ್ಣನ ತೊಡೆಯ ಮೇಲೆ ಕಾಲನ್ನೂ ಇಟ್ಟು ರಾಮಾನುಜರು ಮಲಗಿದರು. ಹಾಗೆಯೇ ಚಿರಶಾಂತಿ ಪಡೆದು, ಪರಮಪದ ತಲುಪಿದರು.  ಅಂದು ಶಾಲಿವಾಹನ ಶಖ ೧೦೫೯ನೆಯ ಸಂವತ್ಸರ (೧೧೩೭ನೇ ಇಸವಿ), ಮಾಘ ಮಾಸ, ದಶಮಿ.

ರಾಮಾನುಜರು ದೇವರ ದಯೆಯನ್ನು ಒತ್ತಿ ಹೇಳಿದರು. ದೇವರಿಗೆ ಅನಂತರ ಕಲ್ಯಾಣ ಗುಣಗಳಿವೆ- ಮುಖ್ಯವಾದುವು ಸತ್ಯ, ಶೌಶಿಲ್ಯ ಮತ್ತು ಸೌಂಧರ್ಯ, ನಾವು ಭಕ್ತಿಯಿಂದ ಪೂಜಿಸಿದರೆ ದೇವರು ಒಲಿಯುತ್ತಾನೆ. ನಾವು ಸುಖವೇ ಮುಖ್ಯವೆಂದು ಭಾವಿಸಬಾರದು. ಭಗವಂತನ ಭಕ್ತರೆಲ್ಲ ಹಿರಿಯರು ಎಂದು ಉಪದೇಶಿಸಿದರು. ಜಾತಿ ಮತ ಭೇದವಿಲ್ಲದೇ ಎಲ್ಲರನ್ನೂ ಪ್ರೀತಿಯಿಂದ ಕಂಡರು. ವಿನಯ ಸರ್ವ ಸಮಾನತೆಗಳನ್ಹು ತಮ್ಮ ಶಿಷ್ಯರಿಗೆ ಬೋಧಿಸಿದru.