ಲೇಖಕರಾದ ಭದ್ರಶೀಲರಾವತ್‌ರವರು “ರಾಮ್ ಪೂಜ್ಯಕ್ಕೆ ಪಾತ್ರನಹಿ”ಎಂದು ಹಿಂದಿಯಲ್ಲಿ ಬರೆದಿರುವ ವಿಮರ್ಶಾ ಲೇಖನದ ಸಾರಾಂಶವನ್ನು ಕನ್ನಡದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ. ಭಾರತೀಯ ಪೌರಾಣಿಕ ಪುರುಷರಲ್ಲಿ ರಾಮನು ಪೂಜ್ಯನು ಅಲ್ಲ. ಪೌರಾಣಿಕ ಪುರುಷನು ಅಲ್ಲ. ಕೆಲವು ವಿದ್ವಾಂಸರ ಪ್ರಕಾರ ಭಾರತೀಯನು ಅಲ್ಲ. ಆದರೆ ಋಗ್ವೇದದಿಂದ ಹಿಡಿದು ಆಧುನಿಕರ ಕೃತಿಗಳಲ್ಲಿ ರಾಮನನ್ನು ಹೊಗಳಿರುವುದನ್ನು ಗಮನಿಸಿದರೆ ರಾಮ ಆದರ್ಶ ಪುರುಷ ಅಲ್ಲವೆಂದು ದೃಢವಾಗಿ ಹೇಳಬಹುದು. ಮಹಾಪಂಡಿತರಾದ ರಾಹುಲ್‌ರವರಾಗಲಿ ಡಾ.ಭೀಮರಾವ್ ಅಂಬೇಡ್ಕರ್‌ರವರಾಗಲಿ ರಾಮನನ್ನು ಯಾವ ದೃಷ್ಟಿಕೋನದಿಂದ ಅಳೆದರೂ ಅಂತಹ ಪೂಜ್ಯಗುಣಗಳೇನು ಕಂಡುಬರುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಹಾಗೆಯೇ ಪ್ರಸಿದ್ಧ ತತ್ವ ಮೀಮಾಂಸಕಾರರಾದ ಚಂದ್ರಿಕಾ ಪ್ರಸಾದ್ ಜಿಜ್ಞಾಸು ಅವರು ಸಹ ರಾಮನಲ್ಲಿ ಯಾವ ಆದರ್ಶ ಗುಣಗಳಿಲ್ಲ ಎಂದು ಹೇಳಿದ್ದಾರೆ. ಉದಾಹರಣೆಗೆ ರಾಮಚಂದ್ರನು ತಾಟಕಾ ಎಂಬ ಸ್ತ್ರೀಯನ್ನು ಬಿಲ್ಲಿನಿಂದ ಗುರಿಯಿಟ್ಟು ಕೊಂದಿದ್ದು. ರಾವಣನ ವಿಧವೆ ತಂಗಿಯಾದ ಶೂರ್ಪನಖಿಯ ಕಿವಿ ಮತ್ತು ಮೂಗನ್ನು ಕತ್ತರಿಸುವಂತೆ ಮಾಡಿದ್ದು, ಪರಸ್ಪರ ಮಲ್ಲಯುದ್ಧ ಮಾಡುತ್ತಿದ್ದ ಅಣ್ಣ ತಮ್ಮಂದಿರಾದ ವಾಲಿ ಮತ್ತು ಸುಗ್ರೀವರಲ್ಲಿ ವಾಲಿಯನ್ನು ಮೋಸದಿಂದ ಕೊಂದಿದ್ದು ಸ್ವತಃ ತನ್ನ ಪತ್ನಿಯಾದ ಸೀತೆಯನ್ನು ಲಂಕೆಯಿಂದ ತಂದು ಅವಿಶ್ವಾಸ ಹೊಂದಿ ಅಗ್ನಿಪರೀಕ್ಷೆ ಒಡ್ಡಿದ್ದು. ನಂತರ ತಾನುಮಾತ್ರ ರಾಜ್ಯಭಾರ ಮಾಡುತ್ತಾ ಆ ನಿರಪರಾಧಿ ತುಂಬು ಗರ್ಭವತಿ ಸ್ತ್ರೀಯನ್ನು ಒಂಟಿಯಾಗಿ ಅಸಹಾಯಕಳನ್ನಾಗಿ ಮಾಡಿ ಕಾಡಿನಲ್ಲಿ ಬಿಟ್ಟು ಬರುವಂತೆ ಪ್ರೇರೇಪಿಸಿದ. ಈ ಅವಮಾನವನ್ನು ಸಂಕಿಸಿದ ಭೂಮಿಜೆ ಭೂತಾಯಿಯಲ್ಲಿ ಜೀವಂತವಾಗಿ ಪಾತಾಳ ಸೇರಿದಳು. ರಾಮನ ಆದರ್ಶಯುತವಾದ ನ್ಯಾಯಕ್ಕೆ ಶಂಭೂಕನ ಉದಾಹರಣೆ ನೋಡಬಹುದು. ಶೂದ್ರಶಂಭೂಕನ ತಪಸ್ಸನ್ನು ಸಹಿಸದ ರಾಮ ತನ್ನ ಕೈಯಿಂದಲೇ ಅವನ ತಲೆಯನ್ನು ಕಡಿದ. ಒಬ್ಬ ಸುಸಂಸ್ಕೃತ ವ್ಯಕ್ತಿಯು ಮಾಡಬಹುದಾದ ಕಾರ್ಯಗಳೇ ಇವು ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಸ್ವತಃ ವಾಲ್ಮೀಕಿಯ ಪ್ರಕಾರ ರಾಮ ಲಕ್ಷ್ಮಣ ಭರತ ಶತೃಜ್ಞ ಸೇರಿ ಇಲ್ಲಿಯ ಮೂಲ ನಿವಾಸಿಗಳನ್ನು ತಮ್ಮ ಬಾಹು ಬಲದಿಂದಾಗಲಿ, ಯುದ್ಧ ಕೌಶಲ್ಯದಿಂದಾಗಲಿ ಗೆಲ್ಲದೆ ದಿವ್ಯಾಸ್ತ್ರಗಳಿಂದ, ಕೂಟ ನೀತಿಯಿಂದ ಗೆದ್ದಿರುವರೆಂದು ತಿಳಿಸುತ್ತಾನೆ. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಅರವತ್ತು ಲಕ್ಷ ಶಾಂತಿಪ್ರಿಯ ಯಹೂದಿಗಳನ್ನು ನಾಜಿಗಳು ಜೀವಂತವಾಗಿ ಸುಟ್ಟರು ಇದೇ ರೀತಿ ವ್ಯವಹಾರವನ್ನು ಅಮೇರಿಕಾದವರು ಕೋರಿಯಾದವರೊಂದಿಗೆ ಮಾಡಿದರು. ಆದರೆ ಕೇವಲ ರಾಮನೊಬ್ಬನೆ ಒಂದೇ ಗಂಟೆಯಲ್ಲಿ ನಲವತ್ತು ಸಾವಿರ ರಾಕ್ಷಸರನ್ನು ಕೊಂದದ್ದು ಇಲ್ಲಿ ಗಮನಿಸಬೇಕಾದ ಸಂಗತಿ. ಅವರಿಗೂ ರಾಮನಿಗೂ ಏನು ವ್ಯವತ್ಯಾಸವಿಲ್ಲ ಎಂದು ತೋರುತ್ತದೆ.

ಲಂಕೆಯ ಯುದ್ಧದ ಸಮಯದಲ್ಲಿ ಮಹಾಭಾರತದ ಕಾಲದಲ್ಲಿದ್ದಂತೆ ಯಾವ ರೀತಿ ನೀತಿ ಸಂಹಿತೆಗಳು ಇರಲಿಲ್ಲ. ಸೂರ್ಯಾಸ್ತದ ನಂತರ ರಾತ್ರಿಯ ವೇಳೆ ಲಂಕೆಯನ್ನು ಸುಡಲಾಯಿತು. ಸ್ತ್ರೀಯರು ಮಕ್ಕಳು ಬೆಂಕಿಯ ಜ್ವಾಲೆಯಿಂದ ಹೊರಬರಲಾರದೆ ಸಾವನ್ನಪ್ಪಿದರು. ಪೂರ್ತಿ ರಾಮಾಯಣದಲ್ಲಿ ‘ಅಹಿಂಸೆ’ ಎಂಬ ಶಬ್ದದ ದರ್ಶನವೇ ನಮಗಾಗುವುದಿಲ್ಲ. ಮಹಮ್ಮದ್ ಘಜನಿ ಸೋಮನಾಥ ಮಂದಿರವನ್ನು ನಾಶಮಾಡಿದ್ದು ಕೇಳಿದರೆ ನಮಗೆ ರಕ್ತ ಕುದಿಯುತ್ತದೆ. ಆದರೆ ಹನುಮಂತ ಭವ್ಯನಗರವಾದ ಲಂಕೆಯನ್ನು ಸುಟ್ಟು, ಅಲ್ಲಿರುವ ಪ್ರಸಿದ್ಧ ಗುಡಿ ಅದರ ಜಡೆಯು ಮೇರು ಪರ್ವತದವರೆಗೆ ಹಬ್ಬಿರುವಂತ ಭವ್ಯ ಮಂದಿರವನ್ನು ಸುಟ್ಟು ಹಾಕಿರುವುದನ್ನು ಕೇಳಿ ನಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ. ಸ್ವತಃ ರಾಮನೇ ಲಂಕೆಯ ಮಂದಿರವನ್ನು ನಾಶಮಾಡಿರುವುದಾಗಿ ಸುಂದರ ಕಾಂಡದಲ್ಲಿ ತಿಳಿಸಲಾಗಿದೆ. ಲಂಕಾವಾಸಿಯರು ಯಾವುದೇ ಧರ್ಮದವರಾಲಿ ಅಥವಾ ಯಾವುದೇ ದೇವರನ್ನು ಪೂಜಿಸಲಿ ಅವರ ಮಂದಿರಗಳು ನಮ್ಮ ಮಂದಿರಗಳಷ್ಟೆ ಪವಿತ್ರವಾದುವು ಅಲ್ಲವೆ? ಲಂಕಾ ದಹನದ ಸಮಯದಲ್ಲಿ ಸಾವಿರಾರು ಪುರುಷರು ಮಕ್ಕಳು ಸ್ತ್ರೀಯರು ಸುಟ್ಟು ಭಸ್ಮವಾದರು ಇದು ನಮ್ಮ ಮನಸ್ಸಿಗೇಕೆ ತಾಕುವುದಿಲ್ಲ.

ರಾಮನು ರಾವಣನನ್ನು ಕೊಂದು ಸೀತೆಯನ್ನು ತರುವುದಷ್ಟೆ ಉದ್ದೇಶ ಹೊಂದಿರಲಿಲ್ಲ. ರಾಕ್ಷಸ ಜಾತಿಯ ಸಂಹಾರ ಅವನ ಮುಖ್ಯ ಉದ್ದೇಶವಾಗಿತ್ತು. ರಾವಣನ ಕ್ರಿಯಾಕರ್ಮ ಮಾಡುವವರು ಸಹ ರಾಕ್ಷಸ ವಂಶದಲ್ಲಿ ಉಳಿಯ ಬಾರದೆಂದು ಅವನು ಪಣತೊಟ್ಟಿದ್ದ. ಅವನು ನಿರಪರಾಧಿಗಳ ಹತ್ಯೆ ಏಕೆ ಮಾಡಿದ ಎಂಬುದು ತಿಳಿಯದಾಗಿದೆ. ಆರ್ಯ ಸಾಮ್ರಾಜ್ಯವಾದಿಗಳ ಯುದ್ಧ ನೀತಿ ಬರ್ಬರತೆಯಲ್ಲಿ ಮುಸ್ಲಿಮರಾಗಲಿ, ಸೈನ್ಯವಾಗಲಿ ಬ್ರಿಟಿಷ್ ಸಾಮ್ರಾಜ್ಯ ವಾದಿಗಳಿಗಿಂತ ಯಾವ ರೀತಿಯಿಂದಲೂ ಕಡಿಮೆದಾಗಿರಲಿಲ್ಲ.

ಲಂಕೆಯ ಮಹಾರಾಜ ರಾವಣನು ಶೂರಾಧಿಶೂರನಾಗಿದ್ದ ಮಹಾರನಾಗಿದ್ದ. ಅವನ ರಾಜದಾನಿಯು ನಾಲ್ಕು ಕಡೆಯಿಂದಲೂ ಸಮುದ್ರದಿಂದ ಸುತ್ತುವರೆದಿತ್ತು. ಕೇವಲ ಲಕ್ಷಣನೊಂದಿಗೆ ಮಾತ್ರ ರಾಮ ಸಮುದ್ರ ದಾಟಿ ರಾವಣನನ್ನು ಕೊಲ್ಲುವುದು ರಾಜ್ಯ ಪಡೆಯುವುದು ಸುಲಭವಾಗಿರಲಿಲ್ಲ. ಅದಕ್ಕಾಗಿ ಅವನು ಸುಗ್ರೀವನೊಂದಿಗೆ ಒಪ್ಪಂದ ಮಾಡಿಕೊಂಡು ಮೋಸದಿಂದ ವಾಲಿಯನ್ನು ಕೊಂದನು. ಇಲ್ಲಿ ಸುಗ್ರೀವನಿಗೆ ಕಿಷ್ಕಿಂದೆ ವಿರುದ್ಧ ಯುದ್ಧ ಮಾಡಲು ಪಡೆದುಕೊಳ್ಳುವ ತಂತ್ರ ಹೂಡಲಾಗಿತ್ತು. ಇಲ್ಲಿ ವಾಲಿಯನ್ನು ಮೋಸದಿಂದ ಕೊಂದ ರಾಮನ ಹೇಡಿತನ ಒಂದೇ ಅಲ್ಲದೆ ತನ್ನ ಗುರಿಯನ್ನು ಮುಟ್ಟಲು ಯಾವ ಮಾರ್ಗವನ್ನು ಸಹ ಅನುಕರಿಸಲು ಅವನು ಸಿದ್ಧ ಎಂಬುದು ಕಂಡುಬರುತ್ತದೆ. ಯಾವ ದೃಷ್ಟಿಕೋನದಿಂದ ಅಳೆದರು, ರಾಮಾಯಣವನ್ನು ಮನುಷ್ಯತ್ವದ ದೃಷ್ಟಿ ಇಟ್ಟುಕೊಂಡು ಪರೀಕ್ಷಿಸಿದರು ರಾಮನು ಪೂಜ್ಯಕ್ಕೆ ಅರ್ಹನಲ್ಲ ಎಂದು ಹೇಳಬಹುದು. ಅವನಲ್ಲಿರುವ ಯಾವ ಗುಣಗಳು ಪೂಜಿಸಲು ಬಾರದವು ಎಂಬುದರ ಬಗೆಗೆ ಗುಪ್ತಾರವರು ಹೇಳುವಂತೆ ರಾಮ ಒಬ್ಬ ಪ್ರೀತಿಯ ಮಗ ಒಬ್ಬ ಪೂಜ್ಯ ಅಣ್ಣ ಇರಬಹುದು ಆದರೆ ಅವನೊಬ್ಬ ಒಳ್ಳೆಯಪತಿಯಾಗಲಿ ಗೌರವಯುತವಾದ ತಂದೆಯಾಗಲಿ ಅಥವಾ ಆದರ್ಶರಾಜ ನಾಗಲಿ ಆಗಲಾರ ಅವನು ಕೇವಲ ಒಬ್ಬ ಶಾಸಕನಂತೆ ಸಾಮ್ರಾಜ್ಯ ನಿರ್ಮಾಣವಾದಿಯಂತೆ ಚತುರ ರಾಜನೀತಿಜ್ಞನಂತೆ ಕೂಟ ನೀತಿಜ್ಞನಾಗಿದ್ದ. ಅವನಲ್ಲಿ ಚಾಣಕ್ಯ ಇಲ್ಲವೆ ಮಸಾಲೆಯ ಮಿಶ್ರಣ ಗುಣಸಂಪನ್ನನಾಗಿದ್ದ. ಅವನ ಕೂಟನೀತಿಯಿಂದಾಗಿ ಕಿಷ್ಕೆಂದೆಯನ್ನು ಗೆದ್ದ ಕಿಷ್ಕಿಂದೆಯ ಸೇನೆ ಪಡೆದುಕೊಂಡು ಸಿಂಧುವನ್ನು ಗೆದ್ದ. ಈ ದೇಶದ ಮೇಲೆ ರಾಜ್ಯಭಾರ ಮಾಡಿದ ಬ್ರಿಟಿಷರು ಇದೇ ನೀತಿಯನ್ನು ಅನುಸರಿಸಿದರು. ರಾಮನ ನೇತೃತ್ವದಲ್ಲಿ ಆರ್ಯರು ಅನುಸರಿಸಿದಂತೆ.

ಇನ್ನು ರಾಮನ ಹುಟ್ಟಿನ ಬಗ್ಗೆ ಹೇಳುವುದಾದರೆ ರಾಮನು ಸಹ ಸಾಮಾನ್ಯ ಜನರಂತೆಯೇ ಅವನು ದಶರಥ ಮತ್ತು ಕೌಶಲ್ಯಗೆ ಹುಟ್ಟಿದವ. ಆದರೆ ಪಾಯಸದ ಶಕ್ತಿಯಿಂದ ಹುಟ್ಟಿದ ಎನ್ನುವುದು ಎಂದರೇನು ಎಲ್ಲಾದರು ಹಾಲು ಬೆಲ್ಲ ಅಕ್ಕಿ ಹಾಕಿ ಮಾಡಿದ ಪಾಯಸದಿಂದ ಮಕ್ಕಳು ಹುಟ್ಟಲು ಸಾಧ್ಯವೇ. ಸ್ವತಃ ವಿಷ್ಣುವೇ ದಶರಥನ ಮಗನಾಗಿ ಹುಟ್ಟಿದ ಎಂದು ನಂಬಲಾಗಿತ್ತು. ರಾಮನು ೫೦% ವಿಷ್ಣುವೇ ಎಂದು ನಂಬಲಾಗಿತ್ತು. ಅಂಧ ವಿಶ್ವಾಸಿ ಹಿಂದು ಗಳಾದವರಲ್ಲಿ ಅವತಾರ ಪುರುಷರ ಕೈಯಿಂದ ಸತ್ತರೆ ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು ನಂಬಲಾಗಿತ್ತು. ಹಾಗಾದರೆ ರಾಮನಿಂದ ಹತರಾದ ಸಾವಿರಾರು ರಾಕ್ಷಸರು ಸ್ವರ್ಗಕ್ಕೆ ಹೋದರೆ! ಏಕೆ ಹೋಗಲಿಲ್ಲ? ಯಾಕೆಂದರೆ ಅವರು ತಮ್ಮ ಮಾತೃಭೂಮಿ ತಮ್ಮ ಜಾತಿ ಗೌರವಗಳಿಗೆ ಹೋರಾಡಿದರ ಫಲವೇನೋ! ಆದರೆ ಅವರು ಪಾಪಿಗಳಂತು ಆಗಿರಲಿಲ್ಲ. ದೇವತೆಗಳ ಅಭಿಲಾಷೆಯಂತೆ ರಾಮನು ಶೂದ್ರ ಶಂಭುಕನನ್ನು ಕೊಲ್ಲಲ್ಪಟ್ಟ ಆದರೆ ಅವನು ಸ್ವರ್ಗಕ್ಕೆ ಹೋದನೆ? ಅವನು ಸ್ವರ್ಗ ಪಡೆಯುವುದನ್ನು ತಡಯೆಬೇಕೆಂದೇ ರಾಮನು ಶಂಭುಕ ನನ್ನು ಕೊಂದ. ರಾಮ ಶಂಭುಕನನ್ನು ಕೊಂದಾಗ ದೇವತೆಗಳು ಅವನ ಮೇಲೆ ಪುಷ್ಪಗಳನ್ನು ಸುರಿದರು ಮತ್ತು ರಾಮನನ್ನು ಕುರಿತು “ನಿಮ್ಮ ಕೃಪೆಯಿಂದಲೇ ಶೂದ್ರ ಶಂಭೂಕನು ಸ್ವರ್ಗದ ಅಧಿಕಾರಿಯಾಗುವುದನ್ನು ತಪ್ಪಿಸಲಾಯಿತು” ಎಂದು ನುಡಿದರು. ಇದು ಮಹಾನ್ ಆದರ್ಶ ಗುಣವೇ ಯೋಚಿಸಿ.

ರಾಮನಿಂದ ಹತನಾದ ರಾವಣನು ಮೋಕ್ಷಪಡೆದ ಎಂದು ಹೇಳುವುದು ಎಷ್ಟು ಸಮಂಜಸ ಮಹಾ ಶಿವಭಕ್ತನಾಗಿದ್ದ ರಾವಣ ರಾಮನಿಂದ ಯುದ್ಧಮಾಡುವ ಮುಂಚೆಯ ಸ್ವರ್ಗಕ್ಕೆ ಆಕ್ರಮಣ ಮಾಡಿಕೊಂಡು ದೇವತೆಗಳಿಗೆ ಸೋಲಿಸಿ ಇಂದ್ರನನ್ನು ಒಂದು ಮಾಡಿದ್ದ. ಹಾಗಾದರೆ ರಾವಣ ಸ್ವರ್ಗ ವಶಪಡಿಸಿಕೊಂಡು ಭೂಲೋಕವೇ ತನಗೆ ಪ್ರಿಯವಾದುದು ಎಂದು ತೋರಿದರೆ ಅವನು ಭೂಲೋಕದಲ್ಲೆ ಇರುತ್ತಿದ್ದ ಅವನು ಸ್ವರ್ಗದಲ್ಲಿ ಏಕೆ ಇದ್ದ. ರಾಮನಿಂದ ಕೊಲ್ಲಲ್ಪಟ್ಟಿದ್ದರಿಂದ ಅವನು ಸ್ವರ್ಗಪಡೆದ ಎನ್ನುವುದು ತಪ್ಪು ಅಭಿಪ್ರಾಯ. ಇನ್ನು ರಾವಣ ಸೀತೆಯನ್ನು ಒತ್ತಾಯಪೂರ್ವಕವಾದ ಶೀಲಬಂಗ ಮಾಡಿದರು ಇದರಲ್ಲಿ ಸೀತೆಯ ತಪ್ಪೇನು? ಆದರೆ ಇದರಿಂದ ರಾಮನ ಸಣ್ಣತನ ಸಣ್ಣಬುದ್ದಿ ಅವನು ಸಾಮಾನ್ಯ ವ್ಯಕ್ತಿಗಿಂತ ಕಡೆ ಎಂದು ತುಲನೆ ಮಾಡಬಹುದು. ಅಹಲ್ಯೆಯ ವಿಚಾರ ಹೀಗೆಲ್ಲ ಅವಳು ತನ್ನ ಸ್ವ ಇಚ್ಛೆಯಿಂದ ಇಂದ್ರನೊಂದಿಗೆ ಸಮಾಗಮ ನಡೆಸುತ್ತಾಳೆ. ಆದರೆ ತನ್ನ ತಪ್ಪು ಅರಿತು ಪಶ್ಚಾತ್ತಾಪ ದಂಡನೆಯನ್ನು ಪಡೆದ ನಂತರ ಗೌತಮ ಋಷಿ ಅವಳನ್ನು ಪುನಃ ಸ್ವೀಕರಿಸುತ್ತಾನೆ. ಇಲ್ಲಿ ಗೌತಮ ವಿಷ್ಣುವು ಅಲ್ಲ ವಿಷ್ಣುವಿನ ಅಂಶವು ಅವನಲ್ಲಿರಲಿಲ್ಲ ಆದರೆ ೫೦% ವಿಷ್ಣು ಸ್ವರೂಪಿಯಾದ ರಾಮನ ನ್ಯಾಯ ಎಂತಹದೋ ತಿಳಿಯದು.

ಮೂರು ಯುಗಗಳಲ್ಲಿ ಸ್ತ್ರೀಕುಲದಲ್ಲೆ ಅತ್ಯಂತ ಪವಿತ್ರಳೆಂದು ಪವಿತ್ರತೆ ಎಂದು ಹೇಳುವ ಸೀತೆಯ ಮೇಲೆ ಸ್ವತಃಪತಿಯಾದ ರಾಮನೇ ಸಂಶಯತಾಳಿ ತಿರಸ್ಕಾರ ಹೊಂದಿ ಅವಳನ್ನು ವನವಾಸಕ್ಕೆ ಗರ್ಭವತಿಯನ್ನಾಗಿ ಮಾಡಿ ಕಳಿಸಿದ್ದ. ಇದು ಯಾವ ನ್ಯಾಯ ಯಾಕೆಂದರೆ ಅವಳು ತನ್ನ ಕೈಯಾರ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು. ಯಾವ ರಾಜನು ತನ್ನ ಪತ್ನಿಯೊಂದಿಗೆ ಇಷ್ಟೊಂದು ಕ್ರೌರ್ಯವಾಗಿ ವರ್ತಿಸಿರಲಾರ. ತನ್ನ ಪತ್ನಿಯನ್ನು ಬಿಡದವ ಇನ್ನು ಪ್ರಜೆಗಳಲ್ಲಿ ದಯಾಮಯನಾಗಿದ್ದ ಎಂದು ನಂಬುವುದು ಹೇಗೆ?

ಸಿಸ್ಟರ್ ನಿವೇದಿತಾರವರು ಸೀತೆಯು ವನವಾಸ ಮಾಡಿದ ಸಮರ್ಥನೆ ಮಾಡುವಳು ಅದು ಹೇಗೆಂದರೆ ಪ್ರಜೆಗಳ ಸುನಡತೆಗಾಗಿ ರಾಮ ಒಂದು ರಾಜನಾಗಿ ರಾಜ್ಯಭಾರ ಮಾಡುವ ಸಲುವಾಗಿ ಸೀತೆಯನ್ನು ತ್ಯಾಗ ಮಾಡಿದ ಮಹಾಪುರುಷ ಎಂದು. ಹಾಗಾದರೆ ಕೇವಲ ಸೀತೆಯನ್ನು ಏಕೆ? ತಾನು ಸಹ ರಾಜ್ಯಭಾರ ತ್ಯಾಗಮಾಡಿ ಕಾಡಿಗೇಕೆ ತೆರಳಲಿಲ್ಲ. ಎಂಟನೆಯ ಎಡ್ವರ್ಡನು ತನ್ನ ಪತ್ನಿಯನ್ನು ರಾಣಿಯಾಗಿ ಸ್ವೀಕರಿಸಲು ಒಪ್ಪಲಿಲ್ಲ. ಹಾಗೆಯೇ ತನ್ನ ಆಡಳಿತವನ್ನು ತ್ಯಾಗ ಮಾಡಿದ. ಏಕೆಂದರೆ ಇವನು ಸಾಮಾನ್ಯ ಮನುಷ್ಯ. ರಾಮನಂತೆ ಅವತಾರ ಪುರುಷನಾಗಿರಲಿಲ್ಲ. ಡಾ.ಅಂಬೇಡ್ಕರ್‌ರವರು ರಾಮನು ಕೇವಲ ಆಜ್ಞಾಪಾಲಕ ಪುತ್ರನಾಗಿರುವನೇ ಹೊರತು ಈ ಕಥೆಯಲ್ಲಿ ಅಂಥ ಯಾವ ಪೂಜ್ಯಗುಣಗಳು ಕಂಡುಬರುವು ದಿಲ್ಲ ಆದ್ದರಿಂದ ರಾಮನನ್ನು ದೇವರ ಸ್ಥಾನಕ್ಕೆ ಏರಿಸುವ ಅಂಶಗಳೇ ಕಂಡುಬರುವುದಿಲ್ಲ ಎಂದು ಹೇಳುತ್ತಾರೆ. ರಾಮನನ್ನು ಕೇಂದ್ರವಾಗಿಟ್ಟುಕೊಂಡು ಅಧ್ಯಯನ ಮಾಡಿದಾಗ ನಮ್ಮ ಮುಂದಿರುವ ಅಂಧಕಾರವು ಸರಿದು ಸತ್ಯದ ದರ್ಶನವಾಗುತ್ತಿದೆ. ಅಂಬೇಡ್ಕರ್‌ರ ವಾಣಿ ಸತ್ಯ ಎನಿಸುತ್ತದೆ. ದಶರಥನು ನಡೆಸಿದ ಪುತ್ರಕಾಮೇಷ್ಠಿಯಾಗದ ವರ್ಣನೆಯು ಮನೋಹರವಾಗಿದೆ. ಸಂಸ್ಕೃತ ಸಾಹಿತ್ಯದ ಪ್ರಸಿದ್ಧ ಆಚಾರ್ಯರಾದ ರಜಿನೀಕಾಂತ್ ಶಾಸ್ತ್ರಿಗಳು ವೈದಿಕ ಕಾಲದಲ್ಲಿ ಸಂತಾನ ಪಡೆಯುವ ಸಲುವಾಗಿ ರಾಜರು ಮೊದಲು ಅಶ್ವಮೇಧ ಯಾಗ ಮಾಡಿದ ನಂತರ ಪುತ್ರಕಾಮೇಷ್ಠಿಯಾಗ ಮಾಡುವುದು ಸಾಮಾನ್ಯವಾಗಿತ್ತು. ಸಂತಾನ ಅಪೇಕ್ಷೆಯ ಫಲವಾಗಿ ದಶರಥನು ಈ ಯಜ್ಞವನ್ನು ಮಾಡಿದನು.

ಯಜ್ಞದ ವರ್ಣನೆಯು ವಾಲ್ಮೀಕಿ ರಾಮಾಯಣದಲ್ಲಿ ಸುಂದರವಾಗಿದ್ದು ಭಯಾನಕತೆಯಿಂದ ಕೂಡಿದೆ. ಈ ಯಜ್ಞದ ವರ್ಣನೆ ನೋಡಿ ನಾವು ನಿಷ್ಪಕ್ಷಪಾತದಿಂದ ನ್ಯಾಯ ತೀರ್ಮಾನ ಮಾಡಬೇಕಾಗಿದೆ. ಇದು ವಾಲ್ಮೀಕಿ ರಾಮಾಯಣದ ಹಿಂದಿ ಶ್ಲೋಕಗಳ ಅನುವಾದ. ಒಂದು ವರ್ಷದ ನಂತರ ಯಜ್ಞದ ಕುದುರೆಯು ಮರಳಿ ಬಂದಿತು. ಆಗ ಸರಯೂ ನದಿಯ ಉತ್ತರ ತೀರದಲ್ಲಿ ಯಜ್ಞವು ಪ್ರಾರಂಭವಾಯಿತು. ದೊಡ್ಡ ದೊಡ್ಡ ಋಷಿಗಳ ಬ್ರಾಹ್ಮಣರ ಮುಖ್ಯಸ್ಥರ ನೇತೃತ್ವದಲ್ಲಿ ಯಜ್ಞಕ್ಕೆ ಸಂಬಂಧಿಸಿದ ಕಾರ್ಯಗಳು ಮುಂದುವರೆಯುತ್ತಿದ್ದವು. ಶಾಸ್ತ್ರದ ಪ್ರಕಾರ ಪಶು ಪಕ್ಷಿಗಳನ್ನು ತರಲಾಯಿತು. ಋಷಿಗಳು ಯಜ್ಞದಲ್ಲಿ ಕೊಲ್ಲುವುದಕ್ಕೆ ಕುದುರೆ ಮತ್ತು ಜಲಚರ ಪ್ರಾಣಿಗಳನ್ನು ಕಟ್ಟಲಾಯಿತು. ಆ ಯಜ್ಞದಲ್ಲಿ ಮುನ್ನೂರು ಪಶುಗಳನ್ನು ಕಟ್ಟಲಾಯಿತು. ಅದರಲ್ಲಿ ದಶರಥನ ಶ್ರೇಷ್ಠವಾದ ಕುದುರೆಯನ್ನು ಸೇರಿಸಲಾಗಿತ್ತು.

ಕೌಶಲ್ಯೆಯು ಪ್ರಸನ್ನಳಾಗಿ ಸಂತೋಷದಿಂದ ಆ ಕುದುರೆಯನ್ನು ನಾಲ್ಕು ಸಾರಿ ಪ್ರದಕ್ಷಿಣೆ ಹಾಕಿ ಖಡ್ಗದಿಂದ ಮೂರು ಬಾರಿ ಹೊಡೆದುರುಳಿಸಿದಳು. ತದನಂತರ ಕೌಶಲ್ಯದೇವಿಯು ಶಾಂತಚಿತ್ತಳಾಗಿ ವಧೆ ಮಾಡಿದ ಕುದುರೆಯ ಪಕ್ಕಕ್ಕೆ ಧರ್ಮದ ಪಾಲನೆಗಾಗಿ ಒಂದು ರಾತ್ರಿ ವಾಸಮಾಡಿದಳು. ನಂತರ ಋಷಿಗಳು ಮಹಿಮೆ ಪರಿವ್ರತಿ ಮತ್ತು ವಾವತಾ ಎಂಬ ಮೂರು ಶ್ರೇಣಿಗಳ ರಾಣಿಯರಿಗೆ ಕುದುರೆಯ ಸ್ಪಷದ ಮೂಲಕ ಕೂಡಿಸಿದರು (ಮಹಿಷಿಯು ರಾಜನೊಂದಿಗೆ ರಾಜ್ಯಾಭಿಷೇಕ ಮಾಡಿಕೊಂಡ ರಾಣಿಯ ಹೆಸರು. ರಾಜನ ಶೂದ್ರ ಸ್ತ್ರೀ ಪರಿವ್ರತಿ ಮತ್ತು ವೈಶ್ಯ ಸ್ತ್ರೀ ವಾವತಾ ಎಂದು ಅಭಿಪ್ರಾಯ) ಒಬ್ಬ ಕುಶಲಮತಿ ಋತ್ವಿಕನು ಆ ಕುದುರೆಯ ಸತುವನ್ನು ತೆಗೆದು ಶಸ್ತ್ರಾಸ್ತ್ರ ಸಾರವಾಗಿ ಕುದಿಸಿದನು (ಅಡುಗೆ ಮಾಡಿದ) ದಶರಥನು ಹವನಕ್ಕೆ ಅರ್ಪಿಸಿದ ಸತುವಿನ ಗಂಧವನ್ನು ಉಚಿತ ಸಮಯದಲ್ಲಿ ನಿಯಮಕ್ಕನುಸಾರವಾಗಿ ಮೂಸಿ ನೋಡಿದ ಅದರಿಂದ ಅವನ ಪಾಪ ಕರ್ಮಗಳೆಲ್ಲ ದೂರವಾದವು. ೧೬ ಋತ್ವಿಕ ಬ್ರಾಹ್ಮಣರು ಸೇರಿಕೊಂಡು ಈ ಕುದುರೆಯ ಎಷ್ಟು ಅಂಗಗಳಿದ್ದವೋ ಅವನ್ನೆಲ್ಲಾ ಅಗ್ನಿಗೆ ಅರ್ಪಿಸಿದರು. ಇದು ಪರಮ ಧರ್ಮಾತ್ಮ ಪರಮ ಪವಿತ್ರ ಕೀರ್ತಿ ಹೊಂದಿರುವ ಮಹಾರಾಜ ದಶರಥನ ಪುತ್ರಕಾಮೇಷಿ ಅಶ್ವಮೇಧ ಯಾಗದ ರೋಮಾಂಚಕಾರಿ ವರ್ಣನೆಯಾಗಿದೆ. ಇದರ ಮುಂದೆ ಯಾವ ದೊಡ್ಡ ದೊಡ್ಡ ಕ್ರೂರ ಹಿಂಸೆಯ ಭಯಾನಕತೆಯು ಸಹ ತುಚ್ಛವಾಗಿ ಕಾಣುತ್ತದೆ. ಇಲ್ಲಿ ಕಾಳಿಯಂತೆ ಕೌಸಲ್ಯೆಯು ಅಶ್ವಮೇಧಯಾಗದ ಕುದುರೆಯನ್ನು ಕೊಂದಿದ್ದು ಸಾವಿರಾರು ಪಶುಪಕ್ಷಿ ಸಂಕುಲವನ್ನು ಅಗ್ನಿಗೆ ಸಮರ್ಪಿಸಿದ್ದು, ದಾನ ಧರ್ಮ ಪಡೆದ ಬ್ರಾಹ್ಮಣರು ಪ್ರಾಣಿಗಳ ನೋವು ತುಂಬಿದ ಗಗನ ಮಂಡಲ ಇವೆಲ್ಲದರ ಕಲ್ಪನೆಯು ಭಯಾನಕತೆಯನ್ನು ತರಿಸುವಂತಿದೆ.

ಭಕ್ತಿ ಕವಿ ತುಳಸಿದಾಸರು ಕಲಿಯುಗದಲ್ಲಿ ಭಕ್ತರಿಗೆ ಕರ್ಮದ ಅವಶ್ಯಕತೆಯಲ್ಲಿ ಧರ್ಮವಾಗಲಿ ವಿವೇಕ ಯಾವುದು ಇರದಿದ್ದದು ರಾಮ ನಾಮ ಒಂದೇ ಪಠಿಸಿದರೆ ಸಾಕು ಎನ್ನುವರು. ಕೆಲವರು ರಾಮಾಯಣದ ಪುಸ್ತಕಗಳನ್ನು ಮುದ್ರಿಸಿ ರಾಮನ ಭಕ್ತಿ ಸಾರುವ ಕೆಲಸ ಮಾಡಿ ನಿಜವನ್ನು ಮರೆಮಾಚುವ ಕಾರ್ಯ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಇದು ಎಷ್ಟು ಔಚಿತ್ಯಪೂರ್ಣ. ಜಾಗೃತರಾಗಿ ಚಿಂತಿಸಬೇಕಾದ ವಿಷಯ. ಸನಾತನರು ಮುಂತಾದ ಪಶುಪಕ್ಷಿಗಳನ್ನು ಕೊಂದರು. ಅವು ಋಷಿಗಳ ಮಂತ್ರದಿಂದ ಮತ್ತೆ ಜೀವಂತವಾಗಿ ಸ್ವರ್ಗ ಪಡೆದವು ಎಂದು ಮುಗ್ದ ಜನಗಳಿಗೆ ತಿಳಿಹೇಳುವ ಕೆಲಸ ನಡೆಸುತ್ತಾರೆ. ಹಾಗಾದರೆ ಆ ಪ್ರಾಣಿ ಪಕ್ಷಿಗಳ ಅಂಗಗಳನ್ನು ಪ್ರತ್ಯೇಕಿಸಿ ಅಗ್ನಿಗೆ ಸಮರ್ಪಿಸುವ ಕಾರ್ಯ ನಡೆದರೆ ಶರೀರವಿಲ್ಲದೆ ಹೇಗೆ ಅವು ಸ್ವರ್ಗ ಸೇರಿದವು. ಇದು ಸನಾತರು ಉತ್ತರಿಸಬೇಕಾದ ಪ್ರಶ್ನೆ. ಆರ್ಯ ಸಮಾಜದ ಸಂಪ್ರದಾಯಗಳು ಇನ್ನು ವಿಚಿತ್ರವಾಗಿವೆ. ಸ್ವಾಮಿ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶನದ ಪರಿಧಿಯಲ್ಲೆ ನಿರಕ್ಷ ಕುಕ್ಷಿಗಳು ಮುಗ್ಧರು ನಂಬಿಕೆಯನ್ನು ಉಳಿಸಿಕೊಂಡು ಅದರಲ್ಲೆ ಪರಿಭ್ರಮಿಸುತ್ತಾರೆ. ವೈದಿಕ ಯಜ್ಞಕ್ಕೆ ಅವರು ನೀಡುವ ಸಮರ್ಥನೆ ಎಂದರೆ ಪಶುಪಕ್ಷಿಗಳು ಎಂದು ಹೆಸರಿಸುವುದೆಲ್ಲಾ ಅಶ್ವಗಂಧ ಮುಂತಾದ ಔಷಧಿಗಳ ಹೆಸರುಗಳೇ ಆಗಿವೆ. ಅವನ್ನು ಅಗ್ನಿಕುಂಡದಲ್ಲಿ ಆಹುತಿ ಮಾಡಲಾಗುತ್ತಿತ್ತು.

ಹಾಗಾದರೆ ಅವನ್ನು ತೊಗಟೆ ಸಿಪ್ಪೆ ಗೊಟರೆ ಇರಬೇಕಿತ್ತೆ ಹೊರತು ಚರ್ಮ ಮಾಂಸ ರಕ್ತ ಇತ್ಯಾದಿ ಶಬ್ದಗಳನ್ನು ಉಪಯೋಗಿಸುವ ಅರ್ಥವೇನು? ಹಾಗೂ ಔಷಧಿಗಳಲ್ಲಿ ಒಂದು ಔಷಧಿಯ ಬೇರಲ್ಲಿ ೩೬ ಭಾಗಗಳು ಎಂದರೆ ಯಾವುದು ಎಂದು ಯೋಚಿಸಬೇಕಾದ ವಿಷಯ. ಇಲ್ಲಿ ಪಶುಗಳನ್ನೆ ಬಲಿಕೊಡಲಾಯಿತು ಎಂದು ಬೇರೆ ಹೇಳಬೇಕಾಗಿಲ್ಲ. ಇಂಥ ಭೀಭತ್ಸ್ಯ ಯಜ್ಞ ಸಂಪನ್ನೆಯಾದ ಕೌಸಲ್ಯಾದೇವಿಯ ಉದರದಲ್ಲಿ ಹುಟ್ಟಿದ ರಾಮನು ಪೂಜ್ಯಕ್ಕೆ ಪಾತ್ರನೇ? ಎಂದಿಗೂ ಇಲ್ಲಾ. ರಾಮ ಕಥೆಯಲ್ಲಿ ಜಯಂತನದು ಒಂದು ಪಾತ್ರವಿದೆ. ಜಯಂತ ಒಂದು ಕಾಗೆ ಅದು ಸೀತೆಯನ್ನು ಕೊಕ್ಕಿನಿಂದ ಕುಕ್ಕಿತು. ರಾಮನು ಆ ಕಾಗೆಯ ಮೇಲೆ ಶೌರತ್ವ ತೋರಿಸಿದ ಎಂದು ತುಳಸಿದಾಸನ ಒಂದು ವಚನದಲ್ಲಿ ಕಾಣಬಹುದು.

ಪ್ರೀತಿ ಮತ್ತು ವಿರೋಧ ಸರಿಸಮಾನರಲ್ಲಿ ಮಾಡಬೇಕು. ಹುಲಿಯು ಕಪ್ಪೆಯನ್ನು ಕೊಂದರೆ ಅದು ಶೌರ್ಯವಾದೀತೆ? ಹಾಗೆಯೆ ರಾಮನು ಕಾಗೆಯ ಬೆನ್ನು ಹತ್ತಿದ. ಸೊಳ್ಳೆಯ ಮೇಲೆ ಗುಂಡು ಹಾರಿಸುವ ಸಾಹಸಮಾಡುವವನಂತೆ, ಕೊನೆಗೆ ರಾಮ ಕಾಗೆಯನ್ನು ಕ್ಷಮಿಸಿದ. ಆದರೆ ಒಂದು ಕಣ್ಣನ್ನು ಹೊಡೆದು ಹಾಕಿದ. ಇದು ಆದರ್ಶ ಪುರುಷನ ನ್ಯಾಯವೇ. ಸೇಡು ರೀತಿಸಿಕೊಳ್ಳುವ ಇಚ್ಚೆಯಿದ್ದರೆ ಕಾಗೆಯ ಕೊಕ್ಕನ್ನೆ ಮುರಿಯಬೇಕಾಗಿತ್ತು. ಆದರೆ ಪ್ರಾಣ ಭಿಕ್ಷೆ ನೀಡುವ ಕಪಟನಾಟಕ ಮಾಡುವ ಅವಶ್ಯಕತೆ ಇರಲಿಲ್ಲ. ಕಾಗೆಯನ್ನು ಕ್ಷಮಿಸಿ ವಿಶಾಲ ಹೃದಯಿ ಎಂದು ತೋರಿಸಬೇಕಾಗಿತ್ತು. ಆದರೆ ಕಣ್ಣನ್ನು ಕೀಳುವುದಕ್ಕಿಂತ ಕೊಕ್ಕನ್ನು ಮುರಿದು ಧರ್ಮಶಾಸ್ತ್ರೀಯ ನ್ಯಾಯವನ್ನು ಪ್ರದರ್ಶಿಸಿದರು ಪರವಾಗಿದ್ದಿಲ್ಲ. ಇಂಥ ಧರ್ಮದ ಕತ್ತನ್ನೆ ಕೊಯ್ಯುವ ಅಥವಾ ಸೊಳ್ಳೆಯ ಮೇಲೆ ಗುಂಡುಹಾರಿಸುವಂತೆ ತೋರುವ ರಾಮನು ಪೂಜ್ಯಕ್ಕೆ ಆರ್ಹನೆ.

ರಾಮ ಕಥೆಯಲ್ಲಿ ಶೂರ್ಪನಖಿಯು ಒಂದು ವಿಶಿಷ್ಟ ಪಾತ್ರದಿಂದ ಕಂಗೊಳಿಸುತ್ತಾಳೆ. ರಾವಣನ ತಂಗಿಯಾದ ಇವಳು ಪಂಚವಟಿ ಕ್ಷೇತ್ರದ ಅಧಿಕಾರಿಯಾಗಿದ್ದಳು. ಆ ವಿಧವೆಯು ಕಾಡಿನ ಪಂಚವಟಿಯಲ್ಲಿ ಒಬ್ಬ ಸ್ತ್ರೀ ಇಬ್ಬರು ಪುರುಷರನ್ನು ಕಂಡು ಇವರಿಬ್ಬರಲ್ಲಿ ಒಬ್ಬನಾದರು ಅವಿವಾಹಿತನಾಗಿರಬಹುದು, ಅವನೊಂದಿಗೆ ವಿವಾಹದ ಪ್ರಸ್ತಾಪ ಮಾಡಲು ಇಚ್ಚಿಸಿ ರಾಮ ಲಕ್ಷ್ಮಣರ ಹತ್ತಿರ ಒಂದು ನಿಜ ಸಂಗತಿಯನ್ನು ತಿಳಿಯಲು ಪ್ರಶ್ನೆ ಕೇಳುತ್ತಾಳೆ. ಅದಕ್ಕೆ ರಾಮನು ಸೀತೆಯು ನನ್ನ ಹೆಂಡತಿ ಲಕ್ಷ್ಮಣ ಇನ್ನು ಅವಿವಾಹಿತೆ ಎಂದು ಹೇಳುತ್ತಾನೆ. ಇಲ್ಲಿಯೇ ರಾಮನ ಸಾಕ್ಷಾತ್ ಸ್ವರೂಪ ಕಾಣಬಹುದು. ರಾಮ ಸುಳ್ಳು ಹೇಳುವ ಅವಶ್ಯಕತೆ ಏನಿತ್ತು. ರಾಮನಿಗೇನು ಲಕ್ಷ್ಮಣನ ಮದುವೆಯಾಗಿರುವುದು ಗೊತ್ತಿರಲಿಲ್ಲವೆ. ಹಾಗಾದರೆ ಈ ನಾರಿಯ ಜೊತೆ ಈ ಕ್ಷತ್ರಿಯ ರರ ವ್ಯವಹಾರವಾದರು ಏನು. ಮುಂದೆ ಸೀತಾಪ ಹರಣಕ್ಕೆ ಕಾರಣ ಇವಳ ಮೂಗು ಕಿವಿಯನ್ನು ಕತ್ತರಿಸಿದ್ದೆ ಆಗಿತ್ತು. ಈ ಅಣ್ಣ ತಮ್ಮಂದಿರಿಂದ ಸ್ಪಷ್ಟ ಉತ್ತರ ಪಡೆಯದ ಶೂರ್ಪನಖಿ ತನ್ನ ಕ್ರೌರ ಭಯಾನಕ ರೂಪವನ್ನು ಪ್ರಕಟಿಸಿದಳು. ಇದರಿಂದ ಸೀತೆಯು ಭಯಭೀತಳಾದಳು. ಆಗ ರಾಮನು ಲಕ್ಷಣನನ್ನು ಕುರಿತು ಶೂರ್ಪನಖಿಯ ಕಿವಿ, ಮೂಗು ಕೊಯ್ಯುವಂತೆ ಆಜ್ಞೆ ಮಾಡಿದ. ಒಂದು ಸ್ತ್ರೀಯ ಅಂಗ ಛೇದ ಮಾಡಿದ ಇವರಿಗೆ ಯಾವ ಶಿಕ್ಷೆ ನೀಡಬೇಕು ಎಂಬುದು ಓದುಗರೇ ನಿಶ್ಚಯಿಸಬೇಕು. ಸ್ತ್ರೀ ಅಪಹರಣವು ಪಾಪವಾದರೆ ಸ್ತ್ರೀಯ ಅಂಗಛೇದ ಮಾಡುವುದು ಪಾಪ ಅಲ್ಲವೆ? ರಾವಣನನ್ನು ನಿಂದಿಸುವುದು ರಾಮನನ್ನು ನೈತಿಕ ವ್ಯಕ್ತಿ ಎಂದು ಹೇಳುವುದು ಎಷ್ಟು ಸರಿಯಾದುದು? ಇದಕ್ಕಿಂತ ಮುಂಚೆಯೆ ಹಲವಾರು ಸಾರಿ ಸ್ತ್ರೀಯರ ಅಪಮಾನವಾಗಿರುವುದು ಕಂಡು ಬರುತ್ತದೆ.

ಸುಳ್ಳು ಹೇಳುವವ ಸ್ತ್ರೀಯ ಕಿವಿ, ಮೂಗು ಕತ್ತರಿಸುವಂತೆ ಪ್ರೇರೇಪಿಸುವವ ಭಗವಂತನಾಗಬಲ್ಲನೇ? ಮಹಾ ಮಾನವತಾವಾದಿಯೇ ಪುರುಷೋತ್ತಮ ಎನ್ನಬೇಕೆ? ಇಂಥವನನ್ನು ಅಪರಾಧಿ ಎನ್ನುವುದೇ ಸೂಕ್ತ ಇವನು ಪೂಜ್ಯಕ್ಕೆ ಅರ್ಹನಲ್ಲ. ಭಾರತದ ಕಾನೂನು ಸಂಹಿತೆಯಂತೆ ರಾಮನ ಮೇಲೆ ಮೊಕದ್ದಮೆ ಹೂಡಿದರೆ ಇಂಥ ಅಪರಾಧಗಳನ್ನು ಮಾಡಿದವನಿಗೆ ಜೈಲು ವಾಸ ಇಲ್ಲವೆ ಗಲ್ಲುಶಿಕ್ಷೆಯು ಆಗುತ್ತಿತ್ತು. ಎಂದಿಗೂ ಇವನು ಆದರ್ಶ ವ್ಯಕ್ತಿಯಂತು ಆಗಲಾರ. ಈಗ ವಾಲಿಯೊಡನೆ ಮಾಡಿದ ಯುದ್ಧದ ವರ್ಣನೆಯು ವಾಲ್ಮೀಕಿ ರಾಮಾಯಣವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ವಾಲಿಯು ನಿರಪರಾಧಿ ಯಾಗಿ ರಾಮಚಂದ್ರನು ದೋಷಿಯಾಗಿಯೂ ಕಾಣಿಸುತ್ತಾರೆ. ರಾಮನು ಮೋಸದಿಂದ ಒಂದು ಮರದ ಹಿಂದೆ ಅವಿತುಕೊಂಡು ವಾಲಿಯ ಮೇಲೆ ಬಾಣ ಬಿಟ್ಟಾಗ ಮರಣ ಶಯ್ಯಯಲ್ಲಿದ್ದ ವಾಲಿಯು ರಾಮನನ್ನು ಕುರಿತು ನಾನು ನಿನ್ನ ರಾಜ್ಯದಲ್ಲಾಗಲಿ ನಿನಗಾಗಲಿ ಯಾವ ಕಿರುಕುಳ ಉಪದ್ರವ ಮಾಡಲಿಲ್ಲ. ಹಾಗಾಗಿಯೂ ನೀನು ನ್ನನ್ನೇಕೆ ಕೊಂದೆ? ರಾಮಚಂದ್ರ ಯುದ್ಧಭೂಮಿಯಲ್ಲಿ ನನ್ನ ಜೊತೆ ನೀನು ಮುಂದೆ ನಿಂತು ಯುದ್ಧ ಮಾಡಿದ್ದೆ ಆದರೆ ನಿನ್ನನ್ನು ಕೊಂದು ಸೂರ್ಯ ಪುತ್ರ ಯಮನ ದರ್ಶನ ಮಾಡಿಸುತ್ತಿದ್ದೆ. ಮಲಗಿ ನಿದ್ರಿಸುತ್ತಿರುವ ಪ್ರಾಣಿಯನ್ನು ಹೆಬ್ಬಾವು ನುಂಗಿದಂತೆ ನೀನು ಮರದ ಹಿಂದೆ ಅವಿತುಕೊಂಡು ನನ್ನನ್ನು ಕೊಂದಿದ್ದೀಯಾ ಹಾಗಾಗಿ ನೀನು ಪಾಪದಲ್ಲಿ ಪಾಲುದಾರನಾದಂತೆ. ಯಾವ ಉದ್ದೇಶವನ್ನು ಸಾಧಿಸಲಿಕ್ಕೆ ನೀನು ಸುಗ್ರೀವನೊಂದಿಗೆ ಸೇರಿಕೊಂಡೆ ಆ ಉದ್ದೇಶ ಸಾಧಿಸಲು ನೀನು ನನ್ನ ಒಂದು ಮಾತು ಹೇಳಿದರು ಸಾಕು ಮಿಥಿಲೆಕುಮಾರಿ ಸೀತೆಯನ್ನು ಒಂದೇ ದಿನದಲ್ಲಿ ಹುಡುಕಿ ತಂದು ಕೊಡುತ್ತಿದ್ದೆ.

ನಿನ್ನ ಪತ್ನಿಯನ್ನು ಅಪಹರಿಸಿದ ದುರಾತ್ಮ ರಾಕ್ಷಸನನ್ನು ಯುದ್ಧಮಾಡದೆ ಕೊರಳಲ್ಲಿ ಹಗ್ಗಕಟ್ಟಿ ನಿನ್ನ ಹತ್ತಿರ ತರುತ್ತಿದ್ದೆ ಮತ್ತು ಅವನನ್ನು ನಿನ್ನ ವಶ ಮಾಡುತ್ತಿದ್ದೆ. ಆದರೆ ಈಗ ಅಧರ್ಮದಿಂದ ರಣಭೂಮಿಯಲ್ಲಿ ನೀನು ನನ್ನ ಕೊಂದೆ ಇದು ಉಚಿತವಲ್ಲ. ವಾಲಿಯು ಮರಣದ ನಂತರ ಅವನ ಹೆಂಡತಿಯನ್ನು ಸುಗ್ರೀವನಿಗೆ ಒಪ್ಪಿಸುವ ವಾಲಿಯ ಮಗನಿಗೆ ಬರಬೇಕಾದ ರಾಜ್ಯ ಸುಗ್ರೀವನಿಗೆ ಒಪ್ಪಿಸುವ ರಾಮನ ಉತ್ತರ ಕೇಳಿ, ರ ಸುಗ್ರೀವನು ಜೀವಂತವಿರುವಾಗಲೇ ಅವನ ಪತ್ನಿಯನ್ನು ಅದು ನಿನ್ನ ಸೊಸೆಯಂತಿರುವ ಹೆಣ್ಣನ್ನು ಕಾಮವಶನಾಗಿ ಉಪಭೋಗ ಮಾಡಿದ್ದೀಯ ನೀನು ಪಾಪಾಚಾರಿ ಮಹಾಪಾಪಿ ಯಾಗಿದ್ದೀಯೆ ವಾನರ ಶ್ರೇಷ್ಠನೇ ರಾಜರು ದುರ್ಲಭಧರ್ಮ ಜೀವನ ಮತ್ತು ಲೌಕಿಕ ಅಭ್ಯುದಯ ಮಾಡುವವರು ಇದರಲ್ಲಿ ಸಂಶಯವೇ ಇಲ್ಲ. ಮನುಷ್ಯರು ಅವರನ್ನು ಹಿಂಸಿಸಿಬಾರದು ನಿಂದಿಸಬಾರದು. ಅವರಿಂದ ಯಾವ ಪ್ರತೀಕ್ಷೆಯನ್ನು ಮಾಡದೆ ಅವರಿಗೆ ಅಪ್ರಿಯ ವಚನಗಳನ್ನು ನುಡಿಯಬಾರದು. ಏಕೆಂದರೆ ವಾಸ್ತವದಲ್ಲಿ ರಾಜಾ ದೇವರ ಸಮಾನ ಮನುಷ್ಯ ರೂಪದಲ್ಲಿ ಪೃಥ್ವಿಯನ್ನು ಪಾಲಿಸುವವ ಆಗಿದ್ದಾನೆ. ರಾಮನ ತರ್ಕ ವಾಲಿಯ ಮೇಲೆ ಏನು ಪ್ರಭಾವ ಮಾಡಿರಬಹುದು. ಅದಕ್ಕೆ ಅವನು ಸಾಯುವಾಗ ಯಾವ ಪ್ರತ್ಯುತ್ತರ ಕೊಡದೆ ರಾಮನ ವಿಚಾರ ಹೀನಮಾತುಗಳಿಗೆ ಉತ್ತರ ನೀಡಿ ಏನು ಪ್ರಯೋಜನ ಇಲ್ಲವೆಂದು ಸುಮ್ಮನಾಗಿ ಬಿಟ್ಟನು. ಗುಪ್ತಾರವರು ಹೇಳುವಂತೆ ರಾಮಾಯಣದ ಕೊನೆಯ ಹಂತದಲ್ಲಿ ವಾಲಿಯು ಸುಗ್ರಿವನ ಹೆಂಡತಿಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡಿರಲಿಲ್ಲ. ಇಲ್ಲವೆ ಇಂದ್ರ ವಾಯು ದೇವರಂತೆ ಯೋನಿ ಅಪರಾಧಿಯಾದ್ದ ವಾಲಿಯ ತಪ್ಪಿಗೆ ರಾಮ ಶಿಕ್ಷೆ ನೀಡಿದ ಆದರೆ ವಿಭೀಷಣನು ರಾವಣನ ಹೆಂಡತಿಯೊಂದಿಗಿದ್ದ. ಸುಗ್ರೀವನಾಗಲಿ ವಿಭೀಷಣನಾಗಲಿ ಯಾವ ಶಿಕ್ಷೆಯನ್ನು ನೀಡಲಿಲ್ಲ. ರಾಮನು ಸತ್‌ಚಾರಿತ್ರ್ಯವಂತನೇ ಆಗಿದ್ದರೆ ಅವನು ವಾಲಿಯನ್ನು ಕೊಂದರು ಅವನ ಮಗ ಅಂಗಧನಿಗಾದರೂ ರಾಜ್ಯಭಿಷೇಕ ಮಾಡಬೇಕಾಗಿತ್ತು. ಆದರೆ ಸುಗ್ರೀವನೊಂದಿಗೆ ಮಾಡಿಕೊಂಡ ಒಪ್ಪಂದ ಸಿಂಹಾಸನವೇ ಅವನಿಗೆ ಮುಖ್ಯವಾಗಿತ್ತು. ಇಂಥ ವ್ಯಕ್ತಿಯು ಸಮ್ಮಾನಕ್ಕೆ ಪಾತ್ರನೇ ಪೂಜ್ಯಕ್ಕಂತೂ ಅರ್ಹನೇ ಅಲ್ಲ.

ಸೀತೆಯ ಅಪಹರಣದ ನಂತರವಂತು ರಾಮ ಒಬ್ಬ ಅಸಂತುಲಿತ ವ್ಯಕ್ತಿಯಂತೆ ಕಂಗೊಳಿಸುತ್ತಾನೆ. ಅವನಲ್ಲಿ ಕಾಮ, ಕ್ರೋಧ, ಲೋಭ, ದ್ವೇಷ, ಮೋಹವಂತು ಮೊದಲಿನಿಂದಲೂ ಇತ್ತು. ರಾಮನು ರಾವಣನನ್ನು ಕೊಂದಾಗ ರಾವಣನ ಮರಣದ ನಂತರ ಒಬ್ಬ ಪತಿಯಾಗಿ ರಾಮ ಸೀತೆಯ ದುಃಖವನ್ನು ನಿವಾರಿಸಿಬೇಕಾಗಿತ್ತು, ಆದರೆ ಒಂದು ಸ್ತ್ರೀಯ ಸಂವೇದನೆ ಶೀಲನೆಯನ್ನು ಅರಿಯದೆ ಅವಳ ಚರಿತ್ರೆಯ ಮೇಲೆ ಸಂಶಯಪಟ್ಟಂತೆ ಮಹಾನುಭಾವ ಆದರ್ಶಪುರುಷನೇ.

ರಾಮನು ಸೀತೆಯನ್ನು ಲಂಕೆಯಿಂದ ಬಿಡಿಸಿಕೊಂಡು ಬಂದಾಗ ಅವಳನ್ನು ಕುರಿತು ಮನುಷ್ಯ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ. ಅದರಂತೆ ನಾನು ನನ್ನ ಮಾನ ರಕ್ಷಣೆಯ ಅಭಿಲಾಷೆಯಿಂದ ರಾವಣನನ್ನು ಕೊಂದೆನೆ ಹೊರತು ನಿನ್ನ ಸಲುವಾಗಿ ಮಾಡಿದ್ದಲ್ಲ. ಸದಾಚಾರಕ್ಕಾಗಿ ಅಪವಾದ ನಿವಾರಣಾರ್ಥವಾಗಿ ನಮ್ಮ ವಂಶದ ಮೇಲಿರುವ ಕಳಂಕ ತೊಳೆಯಲಿಕ್ಕಾಗಿ ಇದನ್ನು ನಾನು ಮಾಡಿದೆ. ನಿನ್ನ ಮೇಲೆ ನನಗೆ ಸಂದೇಹ ಇದೆ. ಅದಕ್ಕಾಗಿ ನಾನು ನಿನ್ನನ್ನು ತಿರಸ್ಕರಿಸುತ್ತೇನೆ. ನಿನಗೆ ಎಲ್ಲಿ ಬೇಕೋ ನೀನು ಅಲ್ಲಿಗೆ ಹೋಗಬಹುದು ಹತ್ತು ದಿಕ್ಕುಗಳು ನಿನಗಾಗಿ ತೆರೆಯಲ್ಪಟ್ಟಿವೆ. ಈಗ ನನಗೆ ನಿನ್ನ ಅವಶ್ಯಕತೆಯಿಲ್ಲ. ಯಾವ ಕುಲೀನ ಪುರುಷನು ತನ್ನ ಹೆಂಡಿತಯು ಬೇರೆಯವನ ಹತ್ತಿರವಿದ್ದು ಬಂದಾಗ ಸ್ವೀಕರಿಸುತ್ತಾನೆ. ಈ ಮಾತನ್ನು ಯೋಚಿಸುವುದೂ ಇಲ್ಲ. ರಾವಣನು ನಿನ್ನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಹೊತ್ತುಕೊಂಡು ಹೋದ ಅವನ ಕೆಟ್ಟ ದೃಷ್ಟಿಯು ನಿನ್ನ ಮೇಲೆ ಬಿದ್ದಿದೆ ನನ್ನ ಮಹಾನ್ ವಂಶದಲ್ಲಿ ನಿನ್ನಂಥ ಸ್ತ್ರೀಗೆ ಜಾಗವಿಲ್ಲ. ನನ್ನ ಉದ್ದೇಶವಂತು ಸಫಲವಾಯಿತು ನನ್ನ ಕುಲದ ಮೇಲಿನ ಕಳಂಕವೂ ಕಳೆಯಿತು ನಿನ್ನ ಮೇಲಂತು ನನಗೆ ಈಗ ಕರುಣೆಯೂ ಇಲ್ಲ, ಬೇಕಾದಲ್ಲಿಗೆ ಹೋಗಬಹುದು. ಇಲ್ಲವಾದರೆ ನಿನಗಿಷ್ಟವಿದ್ದರೆ ಒಂದು ಮಾತು ಹೇಳುತ್ತೇನೆ ನೀನು ಭರತ ಇಲ್ಲವೆ ಲಕ್ಷ್ಮಣರ ಜೊತೆ ಸುಖವಾಗಿರಬಹುದು. ಇಲ್ಲವೆ ಶತ್ರುಘ್ನ ಅಥವಾ ವಾನರ ರಾಜ ಸುಗ್ರೀವ ಇಲ್ಲ ರಾಕ್ಷಸ ರಾಜ ವಿಭೀಷಣನೊಂದಿಗೂ ಇರಲೂ ಇಚ್ಛಿಸಬಹುದು. ನಿನಗೆ ಎಲ್ಲಿ ಸುಖ ಸಿಗುತ್ತೊ ಅಲ್ಲಿ ಗಮನ ಹರಿಸು. ನಿನ್ನಂಥ ಚೆಲುವೆಯನ್ನು ರಾವಣ ತನ್ನ ಅರಮನೆಯಲ್ಲಿ ಕಂಡು ಚಂಚಲಿತನಾಗದೆ ಇರುವನೆ ಈಗ ನಿನ್ನಿಂದ ದೂರವಿದ್ದು ಅವನು ವಿರಹಿಯಾಗಿರಬಹುದು. ಪತಿಯ ವಿರೋಧ ಮಾತುಗಳನ್ನು ಕೇಳಿದ ಸೀತೆಯು ಸಹ ತಾಳ್ಮೆಗೆಟ್ಟು ರಾಮನ ಯೋಗ್ಯತೆಯನ್ನು ಅಳೆಯುವಂತೆ ಉತ್ತರಿಸಿದಳು. ರಾಮನ ಮಾತುಗಳನ್ನು ಕೇಳಿ ಮನದಲ್ಲೇ ವ್ಯಥೆಪಟ್ಟು ಸೀತೆಯು ರಾಮನನ್ನು ಕುರಿತು ನೀವು ಎಂದಿಗೂ ಇಂಥ ಮಾತುಗಳನ್ನಾಡುವವರು ಇಂದು ಒಬ್ಬ ಶೂದ್ರನು ಸಹ ತನ್ನ ಹೆಂಡತಿಯನ್ನು ಹೀಗೆ ಹೀಯಾಳಿಸಿರಲಾರ. ಆದರೆ ನೀವು ಒಬ್ಬ ರ ರಾಜನಾಗಿ ನನ್ನನ್ನು ಜರಿಯುವುದು ಸರಿಯಲ್ಲ. ನೀವು ನನ್ನನ್ನು ತಪ್ಪಾಗಿ ತಿಳಿದುಕೊಂಡಿರುವಿರಿ ನಾನು ಸತ್ಯದ ಮೇಲೆ ಆಣೆಯಿಟ್ಟು ಹೇಳುತ್ತಾನೆ ಪವಿತ್ರಳೆಂದು ನನ್ನನ್ನು ನಂಬು ನಾನು ಸಂದೇಹ ಪಡಲಿಕ್ಕೂ ಯೋಗ್ಯವಲ್ಲ. ನೀವು ಕೆಳಜಾತಿಯ ಸ್ತ್ರೀಯರನ್ನು ನೋಡಿ ಸಮಸ್ತ ಹೆಣ್ಣು ಕುಲದ ಮೇಲೆ ಸಂಶಯ ಪಡುವುದು ಉಚಿತವಲ್ಲ ನಿಮ್ಮ ಸಂದೇಹವನ್ನು ಮನಸ್ಸಿನಿಂದ ತೆಗೆದು ಹಾಕಿರಿ. ರಾವಣನಿಂದ ನಾನು ಸ್ಪರ್ಶಿಸಲ್ಪಟ್ಟರೂ ಇದರಲ್ಲಿ ನನ್ನ ತಪ್ಪೇನೂ ಇಲ್ಲ. ನಾನು ಸ್ವ ಇಚ್ಛೆಯಿಂದ ಹಾಗೇನು ಮಾಡಲಿಲ್ಲ. ಇದಕ್ಕೆ ನನ್ನ ದೌರ್ಭಾಗ್ಯವೇ ಕಾರಣ. ನಾನಲ್ಲಿರುವಾಗ ನನ್ನ ಮನಸ್ಸಲ್ಲಿ ನೀನೇ ತುಂಬಿದ್ದೆ ಬೇರೆ ಯಾರು ನನ್ನಲ್ಲಿ ಸ್ಥಳಪಡೆಯಲು ಅವಕಾಶವೇ ಇರಲಿಲ್ಲ. ಆದರೆ ನನ್ನ ಶರೀರ ಬೇರೆಯವರ ಅಧೀನವಾಗಿದ್ದರೆ ನಾನೇನು ಮಾಡಲಿ ನಾನು ನಿಸ್ಸಹಾಯಕಳಾಗಿದ್ದೆ ಬೇರೆಯವರ ಮಾನ ರಕ್ಷಿಸುವ ರಾಜ ನೀನು ನಾವಿಬ್ಬರೂ ಪರಸ್ಪರ ಒಲವಿನಿಂದ ಜೊತೆ ಜೊತೆಯಾಗಿ ಇದ್ದೆವು. ಹಾಗಿದ್ದಾಗಲೂ ನೀನು ನನ್ನನ್ನು ಸರಿಯಾಗಿ ತಿಳಿದುಕೊಂಡಿಲ್ಲ ಅರ್ಥಮಾಡಿಕೊಳ್ಳದಿದ್ದರೆ ನಾನು ಇದ್ದು ಸತ್ತಂತೆಯೇ ನೀನು ಕೆಳಜಾತಿಯ ಸ್ತ್ರೀ ಸ್ವಭಾವದವರಂತೆ ನನ್ನನ್ನು ಕಂಡು ನಿನ್ನ ರೋಷವನ್ನು ಸಾಧಿಸಿದ್ದೀಯ ನನ್ನ ತನು ಮನದಿಂದ ನಿನ್ನನ್ನು ಪೂಜಿಸುವೆ ಬೇರೆಯವರನ್ನು ಕಣ್ಣೆತ್ತಿ ನೋಡಿದರೂ ಸಹ ಅಗ್ನಿದೇವ ನನ್ನನ್ನು ನುಂಗಲಿ ಸುಟ್ಟು ಹಾಕಲಿ ಎಂದು ಅಂಗಲಾಚಿದಳು. ಸೀತೆಯು ಇಂದಿನ ಸ್ಥಿತಿಯಲ್ಲಿದ್ದರೆ ರಾಮನನ್ನು ಸಹ ಅಗ್ನಿಪರೀಕ್ಷೆ ನೀಡುವಂತೆ ಕೇಳುತ್ತಿದ್ದಳೇನೋ, ಇಷ್ಟಾದರು ರಾಮ ಅವಳ ಬಗ್ಗೆ ಏನು ಯೋಚನೆ ಮಾಡದೆ ಅವಳ ಮಕ್ಕಳನ್ನು ಕಿತ್ತುಕೊಂಡು ಮತ್ತೆ ಅಗ್ನಿಪರೀಕ್ಷೆ ನೀಡುವಂತೆ ಒತ್ತಾಯಿಸಿದ. ನಮಗೆ ತಿಳಿದಿರುವ ಪ್ರಕಾರ ಸೀತೆಯು ಭೂಮಿ ತಾಯಿಯಲ್ಲಿ ಐಕ್ಯಳಾದಳು. ಆದರೆ ನಿಜವಾಗಿಯು ಅವಳು ಅಪಮಾನವನ್ನು ಸಹಿಸದೆ ಆತ್ಮಹತ್ಯೆ ಮಾಡಿಕೊಂಡಳು. ಅಗ್ನಿ ಪರೀಕ್ಷೆಗಿಂತ ಮುಂಚೆ ಸೀತೆಯು ರಾಮನನ್ನು ನಿಮ್ನ ವರ್ಗದ ಪುರುಷ ಸಾಧಾರಣ ಪುರುಷ ಕೆಳವರ್ಗದವ ಮುಂತಾಗಿ ಹಳಿದಳು. ಸೀತೆಯ ಮೇಲೆ ಕಳಂಕ ಹೊರಿಸಿದ ಪ್ರಜೆಗಳನ್ನು ಸಂತೋಷ ಪಡಿಸಲಿಕ್ಕಾಗಿ ರಾಮನು ಪವಿತ್ರ ಒಂಟಿ ಸೀತೆಯನ್ನು ಕಾಡಿಗೆ ಅಟ್ಟಿದ ಇಂಥ ವ್ಯಕ್ತಿ ಪೂಜೆಗೆ ಅರ್ಹನಲ್ಲ.

ಇನ್ನು ರಾಮಾಯಣದಲ್ಲಿ ವರ್ಣಿತವಾಗಿರುವ ೧೪ವರ್ಷದ ವನವಾಸದ ಸಮಯವನ್ನು ಸ್ವಲ್ಪ ವಿಚಾರಿಸಿ ನೋಡಿದಾಗ ನಮಗೆ ಇನ್ನೂ ಚೆನ್ನಾಗಿ ರಾಮನ ಪರಿಚಯವಾಗುತ್ತೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ರಾಮನ ಪರಿಚಯವಾಗುತ್ತೆ. ವಾಲ್ಮೀಕಿ ರಾಮಾಣದ ಉತ್ತರಕಾಂಡದಲ್ಲಿ ರಾಮನ ದಿನಚರಿಯನ್ನು ಚೆನ್ನಾಗಿ ವಿವರಿಸಲಾಗಿದೆ. ಅದು ೨ ರೀತಿಯಲ್ಲಿ ವಿಭಾಗಿಸಲಾಗಿದೆ. ಒಂದು ರಾಮನು ಬೆಳಿಗ್ಗೆಯಿಂದ ಮಧ್ಯಾಹ್ನ ೧೨ಗಂಟೆಯವರೆಗೂ ಪೂಜೆ ಧರ್ಮ ವಿಧಿವಿಧಾನಗಳನ್ನು ಅನುಸರಿಸಿದರೆ ೧೨ಗಂಟೆಯ ನಂತರ ಅವನು ಇಂದ್ರನ ಸ್ವರ್ಗದಂತಿರುವ ರಾಜಭವನದಂತಿರುವ ಲತಾ ಮಂಟಪಗಳಿರುವ ಉದ್ಯಾನವನದಿಂದ ಕಂಗೊಳಿಸುವ ಭವನದಲ್ಲಿ ಮಧುಪಾನ ಸೇವಿಸುತ್ತಾ ಸೀತೆಯನ್ನು ತನ್ನ ಕೈಯಿಂದ ಕುಡಿಸುತ್ತ ಸುಂದರ ಸ್ತ್ರೀಯರ ನೃತ್ಯವನ್ನು ನೋಡುತ್ತಾ ಪುಷ್ಪರಾಶಿ ತುಂಬಿದ ಆಸನದಲ್ಲಿ ಕುಳಿತು ಸುಖ ಪಡುತ್ತಿದ್ದ. ರಾಮನ ಸೇವಕರು (ಭಕ್ತರು) ಅವನಿಗೆ ತಿನ್ನಲು ಮಾಂಸಾದಿ ಮುಂತಾದ ಭವ್ಯ ಭಕ್ಷ ಭೋಜನಗಳನ್ನು ವಿವಿಧ ತರದ ಹಣ್ಣು ಹಂಪಲನ್ನು ತಂದರು. ಆಗ ಸಾಗರಕನ್ಯೆಯರು ಅಪ್ಸರೆಯರು ಗೀತೆಗಳನ್ನು ಹಾಡುತ್ತಾ ನೃತ್ಯಮಾಡುತ್ತಾ ಕಿನ್ನರಿಗಳೊಂದಿಗೆ ನೃತ್ಯ ಮಾಡತೊಡಗಿದರು. ನೃತ್ಯಗಾಯನದಲ್ಲಿ ಪಳಗಿದ್ದ ಚತುರ ಕುಶಲಮತಿ ರೂಪವತಿ ಸ್ತ್ರೀಯರು ಸಹ ಮಧುಪಾನ ಮಾಡುತ್ತ ರಾಮಚಂದ್ರನಲ್ಲಿ ನೃತ್ಯಕಲಾ ಪ್ರದರ್ಶನ ಮಾಡಿದರು. ಬೇರೆಯವರ ಮನಸ್ಸನ್ನು ರಮಿಸುವ ರಮಾರಮಣ ಶ್ರೇಷ್ಠ ಧರ್ಮಾತ್ಮ ಯಾವಾಗಲು (ಉನ್ನತ) ಶ್ರೇಷ್ಠಿ ವಸ್ತುಭೂವಿತನಾಗಿ ಆ ಮನೋರಮಣಿಯರ ಜೊತೆಯಲ್ಲಿ ಉಪಹಾರ ಕೊಡುತ್ತ ಸಂತುಷ್ಟನಾಗಿ ಕಾಲ ಕಳೆಯುತ್ತಿದ್ದ. ಓದುಗರೇ ಇದು ನಮ್ಮ ರಾಮನ ದಿನಚರಿ. ತನ್ನ ಅರ್ಧ ಸಮಯವನ್ನು ರಮಣೀಯರೊಂದಿಗೆ ಕಾಲ ಕಳೆಯುತ್ತಿದ್ದ ರಾಜ ಅದು ಹೇಗೆ ರಾಜ್ಯಭಾರ ನಡೆಸಿದನೋ ತಿಳಿಯದು. ಸದಾ ಸ್ತ್ರೀಯರೊಂದಿಗಿದ್ದು ಕಾಲ ಕಳೆಯುತ್ತಿದ್ದ ರಾಮನು ಪೂಜೆಗೆ ಅರ್ಹನಲ್ಲ.

ಇನ್ನು ರಾಮರಾಜ್ಯದ ಕಲ್ಪನೆ ಹೇಗಿರಬೇಡ ರಾಮರಾಜ್ಯವೆಂದರೆ ಬ್ರಾಹ್ಮಣರ ರಾಜ್ಯವೆಂದೇ ಅರ್ಥ ರಾಮನ ರಾಜ್ಯದಲ್ಲಿ ಶೂದ್ರರು ಇದ್ದರು. ಆದರೆ ನ್ಯಾಯದ ಸಮಯದಲ್ಲಿ ವ್ಯಕ್ತಿಯ ಜಾತಿಯನ್ನು ಮುಖ್ಯವಾಗಿಟ್ಟುಕೊಂಡು ನ್ಯಾಯ ತೀರ್ಮಾನವಾಗು ತ್ತಿತ್ತು. ಬ್ರಾಹ್ಮಣರು ಮಾತ್ರ ಎಲ್ಲಾ ಶಿಕ್ಷೆಗಳಿಂದ ರಿಯಾಯಿತಿ (ಮುಕ್ತಿ) ಹೊಂದಿದ್ದರು. ರಾಮಾಯಣದಲ್ಲಿ ಶಂಭುಕನ ವಧೆಯು ಒಂದು ಮಹಾಅಪರಾಧ ಇದರಿಂದ ರಾಮನಿಗೆ ಕಳಂಕ ತಂದ ಘಟನೆ ಇದು. ರಾಮರಾಜ್ಯದಲ್ಲಿ ರಾಮ ಬ್ರಾಹ್ಮಣರ ಗುಲಾಮನಂತಿದ್ದ ಅವರು ಹೇಳಿದ ಹಾಗೆ ಕೇಳುವ ಸೇವಕನಂತೆ ಕಂಗೊಳಿಸುತ್ತಾನೆ. ಸದಾ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟು ಮಧುಪಾನ ಮಾಡುತ್ತಾ ಕಾಲ ಕಳೆಯುವ ವ್ಯಕ್ತಿಯ ವಿವೇಕವು ಬ್ರಾಹ್ಮಣರಲ್ಲಿ ಒತ್ತೆ (ಗಿರವಿ) ಇಟ್ಟಂತೆ ಕಾಣುತ್ತದೆ. ಬ್ರಾಹ್ಮಣರ ಪರವಾಗಿ ರಾಮನು ಶೂದ್ರ ಶಂಭೂಕನ ವಧೆಯನ್ನು ಮಾಡುತ್ತಾನೆ. ರಾಮ ಮೂರು ಸಂದರ್ಭದಲ್ಲಿ ಸುಳ್ಳು ಹೇಳುತ್ತಾನೆ. ಒಂದು ಶೂರ್ಪನಖಿಯ ಅಂಗಛೇದ ಮಾಡುವ ಸಂದರ್ಭ ಎರಡನೆಯದು ತನ್ನ ಪತ್ನಿಯನ್ನು ಪುನಃ ಸ್ವೀಕರಿಸುವ ಸಂದರ್ಭ. ಮೂರನೆಯದಾಗಿ ಶಂಭೂಕನನ್ನು ಕೊಲ್ಲುವ ಸಂದರ್ಭ. ತಪಸ್ಸನ್ನು ಮಾಡುತ್ತಿರುವ ಶಂಭೂಕನ ಹತ್ತಿರ ಬಂದು ರಾಮನು ಮಹಾತಪಸ್ಸಾಚರಿಸುತ್ತಿರುವ ತಪಸ್ವಿಯೆ ನೀನು ಯಾವ ಕುಲದವನು ನಾನು ದಶರಥನ ಮಗ ರಾಮ ನಿನ್ನಲ್ಲಿ ಕುತೂಹಲಕ್ಕಾಗಿ ಈ ಪ್ರಶ್ನೆಯನ್ನು ಕೇಳಿದೆ. ಯಾವ ಗುರಿಸಾಧನೆಗಾಗಿ ನೀನು ಈ ಕಠೋರ ತಪಸ್ಸನ್ನು ಆಚರಿಸುತ್ತಿರುವೆ. ನಿನಗೆ ಸ್ವರ್ಗದ ಅಭಿಲಾಷೆಯೇ ಅಥವಾ ಅದು ಯಾವ ವಸ್ತುವನ್ನು ಪಡೆಯಲು ನೀನು ಈ ತಪಸ್ಸು ಮಾಡುತ್ತಿರುವೆ. ನೀನು ಏನನ್ನು ಪಡೆಯಲು ಯಾರೂ ಆಚರಿಸಲು ಕಷ್ಟವಾಗಿರುವ ಈ ತಪ್ಪಸ್ಸಾಚರಿಸುತ್ತಿರುವೆ? ನೀನು ಬ್ರಾಹ್ಮಣನೇ ಶೂರ ಕ್ಷತ್ರಿಯನೆ ವೈಶ್ಯನೇ ಅಥವಾ ಶೂದ್ರನೇ ಸರಿಯಾಗಿ ಮುಚ್ಚುಮರೆಯಿಲ್ಲದೆ ಉತ್ತರ ನೀಡು ನಿನಗೆ ಶುಭವಾಗಲಿ ಎಂದು ಹೇಳುತ್ತಾನೆ. ಸ್ವತಃ ರಾಮನೆ ಶಂಭುಕನನ್ನು ಉತ್ತಮ ವ್ರತ ಪಾಲಿಸುವವ ಮಹಾತಪಸ್ವಿ ಸದೃಢಪರಾಕ್ರಮಿ ಪುರುಷ ಎಂದು ಹೊಗಳಿದರು ತಾನು ಅವನನ್ನು ಕೊಲ್ಲಲು ಬಂದಿರುವುದಾಗಿ ಹೇಳದೇ ಮೋಸದಿಂದ ಕೊಂದ ಮಹಾಪುರುಷ.

ಶಂಭೂಕ ರಾಮನನ್ನು ಕುರಿತು ನಾನು ಶೂದ್ರಯೋನಿಯಲ್ಲಿ ಜನಿಸಿದವನು ನಾನು ಸ್ವರ್ಗಪಡೆಯುವ ಅಭಿಲಾಷೆ ಹೊಂದಿರುವೆ ಅದಕ್ಕಾಗಿ ಈ ಘೋರ ತಪಸ್ಸನ್ನು ಆಚರಿಸುತ್ತಿರುವೆನು. ದೇವಲೋಕದ ಮೇಲೆ ವಿಜಯಸಾಧಿಸುವುದು ನನ್ನ ಗುರಿ. ನೀವು ನನ್ನನ್ನು ಶೂದ್ರ ಎಂದು ತಿಳಿಯಿರಿ ನನ್ನ ಹೆಸರು ಶಂಭೂಕ ಅವನು ಈ ಮಾತು ಹೇಳುತ್ತಿರು ವಾಗಲೇ ರಾಮ ತನ್ನ ಝಳಪಳಿಸುವ ಕತ್ತಿಯಿಂದ ಶಂಭೂಕನ ತಲೆಯನ್ನು ಕಡಿದೇಬಿಟ್ಟ. ಆಗ ದೇವಲೋಕದ ದೇವತೆಗಳೆಲ್ಲಾ ರಾಮನಿಗೆ ಪುಷ್ಪ ಮಳೆಯನ್ನು ಸುರಿಸಿ ಒಬ್ಬ ಶೂದ್ರಕನು ಸ್ವರ್ಗ ಪಡೆಯುವುದನ್ನು ತಡೆದ ನೀನು ಮಹಾಧರ್ಮಿಷ್ಠ ಎಂದು ಹೊಗಳಿದರು.

ಹೀಗೆ ರಾಮ ಸುಳ್ಳು ಹೇಳಿ ಶಂಭೂಕನನ್ನು ಕೊಂದ. ಕೇವಲ ಕುತೂಹಲಕ್ಕಾಗಿ ಕೇಳುವಂತೆ ಅವನಿಂದ ಅವನ ಜಾತಿಯನ್ನು ತಿಳಿದು ತಕ್ಷಣ ಅವನನ್ನು ಸಂಹರಿಸಿದ. ಶಂಭೂಕನೇ ತಮಾಷೆಗಾಗಿ ಶೂದ್ರಕುಲದವ ಎಂದು ಹೇಳಿದ ಬ್ರಾಹ್ಮಣನಾಗಿರುತ್ತಿದ್ದರೆ ಬ್ರಾಹ್ಮಣರು ರಾಮನನ್ನೆ ಕೊಂದು ಬಿಡುತ್ತಿದ್ದರು. ನಾರದನ ಮಾತನ್ನು ಕೇಳಿ ಶಂಭೂಕನನ್ನು ರಾಮ ಕೊಲ್ಲುವಾಗ ತನ್ನ ಗುರು ವಶಿಷ್ಟನು ವೈಶ್ಯಪುತ್ರ ಅವನ ಸಾಧನೆಯಿಂದ ಮಹಾಋಷಿಯಾಗಿರುವನೆಂದು ಮರೆತಿದ್ದ. ವಶಿಷ್ಟ ಪರಾಶರ ಭಾರದ್ವಜ ವಾಲ್ಮೀಕಿ ಇವರು ಕೆಳವರ್ಗದವರಾದರು ತಮ್ಮ ತಪಸ್ಸಿನ ಬಲದಿಂದ ಮಹಾಋಷಿಗಳಾದರು. ಶಂಭೂಕನು ಅದೇ ಹಾದಿಯಲ್ಲಿ ಹೋಗುತ್ತಿದ್ದನೋ ಏನೋ ಆದರೆ ರಾಮ ಅವನನ್ನು ಸಂಹರಿಸಿದ.

ಕೆಲವರು ರಾಮ ಶಂಭೂಕನನ್ನು ಕೊಂದಿದ್ದರಿಂದ ಸ್ವರ್ಗಪಡೆದ ಎಂದು ವಾದಿಸುವರು. ಆದರೆ ಶಂಭೂಕ ಸ್ವರ್ಗ ಪಡೆಯಿಲಿ ಇಲ್ಲವೆ ನರಕ ಪಡೆಯಿಲಿ ರಾಮ ಶಂಭೂಕನನ್ನು ಕೊಲ್ಲುವ ಉದ್ದೇಶವೇನಿತ್ತು ಎಂದು ತಿಳಿಯಲು ಉತ್ತರ ಸಿಗುವುದು ಕಷ್ಟ. ಹೀಗೆ ಶೂದ್ರರ ಪ್ರತಿನಿಧಿಯಾದ ಶಂಭೂಕನನ್ನು ಕೊಂದ ರಾಮನು ಎಂದಿಗೂ ಪೂಜೆಗೆ ಅರ್ಹನಲ್ಲ. ಇನ್ನು ರಾಮನ ರಾಜ್ಯ ಹೇಗಿರಬೇಡ. ಸ್ವತಃ ರಾಮನೇ ಧರ್ಮಪರಿಪಾಲಿಸುವ ತಪಸ್ಸಾಚರಿಸುತ್ತಿದ್ದ ಶಂಭೂಕನನ್ನು ಕೊಂದ. ಯಾರೋ ಹೇಳಿದ ಮಾತಿಗೆ ಗರ್ಭಿಣಿ ಸೀತೆಯನ್ನು ಕಾಡಿಗೆ ಅಟ್ಟಿದ್ದ ಅವನ ರಾಜ್ಯದ ವರ್ಣನೆಯಲ್ಲಿ ದಾಸ ದಾಸಿಯರ ಸಂಖ್ಯೆಯೇನು ಕಡಿಮೆಯಾಗಿರಲಿಲ್ಲ. ಈ ದಾಸರನ್ನು ದಾಸಿಯರನ್ನು ಮಾರುವ ಒಂದು ಸಂತೆಯ ವರ್ಣನೆಯು ರೋಮಾಂಚನಕಾರಿಯಾಗಿದೆ. ಒಂದು ಸಾಧಾರಣ ಸಂತೆ ಅಲ್ಲಿ ಕೇವಲ ಸೇವಕ ಸೇವಕಿಯರನ್ನು ಮಾರುವ ಕೊಳ್ಳುವವರ ಗಲಾಟೆ. ಅಸಖ್ಯಾಂತ ಗಿಡ ಮರಗಳಿಂದ ಕೂಡಿದ ಉದ್ಯಾನವನ ತಿನ್ನುವ ಕುಡಿಯುವ ಅಂಗಡಿಗಳು ಸಾಲಾಗಿ ಇವೆ. ಉಚ್ಛವರ್ಗಗವರಿಗಾಗಿ ಗೋಮಾಂಸ ಮಧ್ಯಪಾನವನ್ನು ತಯಾರಿಸಿ ಮಾರಲಾಗುತ್ತಿತ್ತು. ಋಷಿಗಳು ವೈಷ್ಯ, ಕ್ಷತ್ರಿಯ ಶೂದ್ರರು ಹೊಸ ದಾಸ ದಾಸಿಯನ್ನು ಕೊಳ್ಳಲು ನೆರೆದಿದ್ದರು ಕೆಲವರು ದಾಸದಾಸಿಯರನ್ನು ಮಾರಿ ಹಣ ಸಂಪಾದಿಸುವುದರಲ್ಲಿ ತಲ್ಲೀನರಾಗಿದ್ದರು. ಕೆಲವರು ಹಳೆ ದಾಸಿಯರನ್ನು ಮಾರಿ ಹೊಸದಾಸಿರಯನ್ನು ಕೊಳ್ಳುವ ಯೋಚನೆಯಲ್ಲಿದ್ದರು. ಕೆಲ ವ್ಯಾಪಾರಿಗಳು ತಮ್ಮ ದಾಸಿಯರನ್ನು ಮಾರಿ ಬೇಗನೆ ಮನೆಸೇರುವ ಯೋಚನೆಯಲ್ಲಿದ್ದರು. ಅಂಥವರಿಂದ ದಾಸಿಯರನ್ನು ಕಡಿಮೆಬೆಲೆಯಲ್ಲಿ ಕೊಂಡು ಹೆಚ್ಚು ಬೆಲೆಗೆ ಮಾರುವವರು ಇದ್ದರು. ದಾಸ ದಾಸಿಯರ ಯಜಮಾನರು ಕೆಲವು ತಿಂಗಳುಗಳಿಂದ ತಮ್ಮ ಸೇವಕರಿಗೆ ಚೆನ್ನಾಗಿ ಆಹಾರ ನೀಡಿ ದಷ್ಟವಾಗಿರುವಂತೆ ಮಾಡಿ ಚೆನ್ನಾಗಿ ಲಾಭ ಪಡೆಯುವ ಉದ್ದೇಶ ಹೊಂದಿದ್ದರು. ಸೇವಕಿಯರನ್ನು ಸಹ ಸುಂದರವಾದ ಆಭರಣ ಬಟ್ಟೆ ತೊಡಿಸಿ ಅವರ ಬಿಳಿ ಕೂದಲನ್ನು ಕಪ್ಪಾಗಿ ಮಾಡಿ, ಲಾಭ ಪಡೆಯುತ್ತಿದ್ದರು. ಕೆಲವು ಯಜಮಾನರು ಒಂದೆರಡು ದಾಸ ದಾಸಿಯುರನ್ನು ಮಾರುತ್ತಿದ್ದರು ಕೆಲವರು ನೂರಿನ್ನೂರು ದಾಸಿಯರನ್ನು ಮಾರುತ್ತಿದ್ದ ಕಡೆ ಗುಂಪು ಗುಂಪು ಜನರು ನೆರೆದಿದ್ದರು. ಕೊಳ್ಳುವವರು ಹಿಂದಿನ ವರ್ಷ ೧೦ ರೂಪಾಯಿಯಲ್ಲೆ ೧೮ವರ್ಷದ ಸುಂದರ ಕನ್ಯೆ ಬರುತ್ತಿದ್ದಳು. ಇಂದು ಬೆಲೆಯು ಹೆಚ್ಚಾಗಿದೆ ಎಂದು ಮಾತಾಡಿಕೊಳ್ಳುತ್ತಿದ್ದರು. ೩೦, ೪೦ ರೂಪಾಯಿ ಕೊಟ್ಟರು ಒಳ್ಳೆಯ ಸೇವಕಿಯರು ಸಿಗುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಒಬ್ಬ ಗಿರಾಕಿ ಒಂದು ನಲವತ್ತು ವರ್ಷದ ಮುದುಕಿಯನ್ನು ಕಂಡು ತಾನು ಕಡಿಮೆ ಹಣ ಇರುವುದರಿಂದ ಇವಳನ್ನು ಕೊಳ್ಳಬಹುದೆಂದು ಯೋಚಿಸಿ ಅವಳ ಯಜಮಾನನಿಗೆ ಕಡಿಮೆ ಬೆಲೆಯಲ್ಲಿ ಕೇಳಿದರೆ ಅವನು ಇವಳು ಇನ್ನೂ ಇಪ್ಪತ್ತು ವರ್ಷದ ಹುಡುಗಿ ಇವಳಿಗೆ ಮಕ್ಕಳು ಹುಟ್ಟಿದರೆ ಮತ್ತೆ ಸೇವಕರು ದೊರಕುತ್ತವೆ. ಇವಳು ಗಟ್ಟಿ ಆಳು ಆದ್ದರಿಂದ ಐವತ್ತು ರೂಪಾಯಿ ಎಂದ ಅದಕ್ಕೆ ಗಿರಾಕಿಯು ತುಂಬಾ ಹೆಚ್ಚಾಗಿದೆ ಎಂದು ಕಡಿಮೆ ಬೆಲೆಯಲ್ಲಿ ಕೊಡಲು ಒತ್ತಾಯಿಸಿದ ಆಗ ವ್ಯಾಪಾರಿಯು ರಾಮನು ಯಜ್ಞ ಮಾಡುತ್ತಿರುವ ಕಾರಣದಿಂದ ಸೇವಕಿಯರ ಬೆಲೆಯು ಹೆಚ್ಚಾಗಿದೆ. ಅಯೋಧ್ಯೆಯ ಮಹಾರಾಜ ಶ್ರೀರಾಮಚಂದ್ರನು ಯಜ್ಞ ನಡೆಸುತ್ತಿದ್ದಾನೆ ಋಷಿಗಳಿಗೆ ದಕ್ಷಿಣೆಯ ರೂಪದಲ್ಲಿ ಒಂದೊಂದು ಸುಂದರವಾದ ತರುಣಿ ದಾಸಿಯರನ್ನು ಕೊಡಲು ಇಚ್ಚಿಸಿದ್ದಾರೆ. ಅದಕ್ಕೆ ಈ ವರ್ಷ ದಾಸಿಯರ ಬೆಲೆಯೂ ಏರಿದೆ. ನನ್ನ ಈ ದಾಸಿಯು ಹಾಡು ಮತ್ತು ನೃತ್ಯವನ್ನು ಬಲ್ಲಳು ಅದಕ್ಕೆ ೩೦ರೂಪಾಯಿಯಾದರು ಕೊಡಬೇಕೆಂದು ಹೇಳಿದನು. ನೃತ್ಯ ಸಂಗೀತ ಕೇಳಿದ ಗಿರಾಕಿ ಕೊನೆಗೆ ೧೫ ರೂಪಾಯಿಯಲ್ಲಿ ದಾಸಿಯನ್ನು ಕೊಂಡ. ಹಲವಾರು ದಾಸಿಯರು ತಮ್ಮ ಮಕ್ಕಳನ್ನು ಕಳೆದುಕೊಂಡರು ತಮ್ಮ ಪ್ರಿಯಕರರಿಂದ ದೂರವಾದರು. ಮಕ್ಕಳಿಂದ ಗಂಡರಿಂದ ದೂರವಾದ ದಾಸಿಯರಿಗೆ ತಮ್ಮ ಯಜಮಾನರಲ್ಲಿ ಮನಸ್ಸು ಇರದೆ ಕೆಲಸ ಮಾಡಲು ಕಷ್ಟವಾಗುತ್ತಿತ್ತು. ಆಗ ಅವರನ್ನು ಯಜಮಾನರು ಬಾರುಕೋಲಿನಿಂದ ಹೊಡೆದು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಸೇವಕರಿಗೆ ಪ್ರಾಣ ತೆಗೆಯುವಂತೆ ಶಿಕ್ಷೆಗಳನ್ನು ಕೊಡುತ್ತಿದ್ದರು. ಕೆಲವರು ಪ್ರಾಣ ತೆಗೆದರು ಯಾರು ಅವರನ್ನು ಏನೂ ಮಾಡುವಂತಿರಲಿಲ್ಲ.

ತಮ್ಮ ಪಶುಗಳಂತೆಯೇ ಸೇವಕರನ್ನು ನೋಡಿಕೊಳ್ಳಲಾಗುತ್ತಿತ್ತು. ಇದು ನಮ್ಮ ರಾಮರಾಜ್ಯದಲ್ಲಿ ಮನುಷ್ಯರು ಮಾಡುತ್ತಿದ್ದ ವ್ಯವಹಾರದ ಒಂದು ಪರಿಚಯ. ಮಹಾಋಷಿಗಳು ಯಜ್ಞದ ಸಮಯದಲ್ಲಿ ಧರ್ಮ ನೀತಿ ಹಲವಾರು ಎಂದು ವ್ಯಾಖ್ಯಾನ ಮಾಡುತ್ತಿದ್ದರು, ಆದರೆ ಅವರು ಮಾತ್ರ ಸುಖಪುರುಷರಾಗಿ ಕಾಲಕಳೆಯುತ್ತಿದ್ದರು. ಆ ಋಷಿಗಳಿಗಿಂತ ಇಂದಿನ ಸಾಮಾನ್ಯ ಮನುಷ್ಯನ ಮನುಷ್ಯತ್ವದ ಗುಣವೇ ಎಷ್ಟೋ ಮೇಲು. ಹೀಗೆ ಮನುಷ್ಯರನ್ನೆ ಪಶುಗಳಂತೆ ಮಾರುತ್ತಿದ್ದ ರಾಮನ ರಾಜ್ಯದಲ್ಲಿ ಒಬ್ಬ ಮನುಷ್ಯನ ಬೆಲೆ ೧೫ ರುಪಾಯಿ ಇಂಥ ರಾಜ್ಯದ ಉದಾಹರಣೆ ಕೊಡುವ ನಾವು ರಾಮನ ಯಾವ ಗುಣಗಳು ಪೂಜೆಗೆ ಅರ್ಹವಲ್ಲ ಎಂದೇ ಹೇಳಬೇಕಾಗುತ್ತದೆ. ಕೊನೆಗೆ ರಾಮನ ಅಂತ್ಯವು ಸಹ ಅನುಕರಣೀಯವಲ್ಲ. ತನ್ನ ತಮ್ಮ ಲಕ್ಷ್ಮಣನನ್ನು ಸಾಯುವಂತೆ ರಾಮ ಪ್ರೇರೇಪಿಸಿದ. ಅದಕ್ಕೆ ಲಕ್ಷ್ಮಣನು ಸರಿಯೂ ನದಿಯಲ್ಲಿ ಮುಳುಗಿ ಸತ್ತನು. ನಂತರ ರಾಮನೂ ಸರಯೂ ನದಿಯಲ್ಲಿ ಮುಳುಗಿ ಹೋದನು. ಆತ್ಮಹತ್ಯೆ ಮಾಡಿಕೊಳ್ಳುವುದು ಅನುಕರಣೀಯವಾದುದೇ. ಹೀಗೆ ದೇವರು ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯೇ?

ಕರ್ಮದ ಫಲವು ಯಾರನ್ನು ಬಿಡುವುದಿಲ್ಲ ದೇವಾನುದೇವತೆಗಳೂ ಇದರಿಂದ ತಪ್ಪಿಸಿಕೊಳ್ಳಲಾರರು ಶ್ರೀಕೃಷ್ಣನೇ ಬಂದಿಖಾನೆಯಲ್ಲಿ ಜನ್ಮತಾಳಿ ಬೇರೆಯವರ ಮನೆಯಲ್ಲಿ ಪೋಷಿಸಲ್ಪಟ್ಟ. ಅಂತ್ಯದಲ್ಲಿ ಬಹೇಲಿಯನಿಂದ ಅವನ ಜೀವನ ಲೀಲೆಗಳೆಲ್ಲ ಕೊನೆಗೊಂಡವು. ಕರ್ಮದಿಂದ ಯಾರು ಬಿಡಿಸಿಕೊಳ್ಳುವಂತಿಲ್ಲ. ಇದರರ್ಥ ಪಾಪಿಗಳಿಗೆ ದಂಡನೆ ಇದ್ದೆ ಇರುತ್ತೆ ರಾಮನಿಗೂ ವನವಾಸ ಸೀತಾಪಹರಣದ ದುಃಖ ಸಿಕ್ಕಿತ್ತು. ಭೃಗುವಿನ ಶಾಪದಿಂದ ಅವರು ಕಷ್ಟಪಡಬೇಕಾಯಿತು. ಬ್ರಹ್ಮಹತ್ಯಾ ದೋಷದಿಂದ ಇಂದ್ರನೂ ಸಹ ದುಃಖಿಸಬೇಕಾಗಿತ್ತು. ಇದರರ್ಥ ರಾಮ ಮತ್ತು ಕೃಷ್ಣರು ತಮ್ಮ ಕರ್ಮದ ಫಲವಾಗಿ ಅನೇಕ ಕಷ್ಟವನ್ನು ಅನುಭವಿಸಿದರು. ಅವರೇ ಕರ್ಮದಲ್ಲಿ ಸಿಕ್ಕು ತೊಳಲಾಡಿರುವಾಗ ಬೇರೆಯವರನ್ನು ಬಂಧನದಿಂದ ಮುಕ್ತಮಾಡಿ ಪಾಪಗಳನ್ನು ತೊಳೆದು ಮೋಕ್ಷಕೊಡಿಸುತ್ತಾರೆ ಎಂಬುದು ಎಷ್ಟು ಸತ್ಯ. ಅಂದರೆ ರಾಮನು ಒಬ್ಬ ರಾಜನಾಗಿದ್ದ ಅವನೂ ಮನುಷ್ಯನೇ ಅವಳ ಪತ್ನಿಯು ಅಪಹರಣಗೊಂಡಿದ್ದಳು. ರಾವಣನನ್ನು ಯುದ್ಧದಲ್ಲಿ ಕೊಲ್ಲಲಾಯಿತು. ಪತ್ನಿಯು ಪುನಃ ತನ್ನ ವಶವಾದಳು ರಾಮನು ನಂತರ ರಾಜ್ಯವಾಳಿದ ಕೊನೆಗೆ ಗೃಹಕಲಹಗಳಿಂದಾಗಿ ನೊಂದು ಸರಯೂ ನದಿಯಲ್ಲಿ ಪ್ರಾಣಾಂಕಿತನಾದ. ಈಗ ಹೇಳಿ ತಮ್ಮ ಕರ್ಮದಿಂದ ಬಿಡಿಸಿಕೊಳ್ಳದೆ ಶಿಕ್ಷೆ ಅನುಭವಿಸಿದ ರಾಮ ಬೇರೆಯವರಿಗೆ ಇನ್ನೇನು ರಕ್ಷಣೆ ನೀಡಬಲ್ಲ ಇಂಥ ವ್ಯಕ್ತಿ ಪೂಜೆಗೆ ಅರ್ಹನೆ.

ಇನ್ನು ರಾಮ ಏಕಪತ್ನಿವ್ರತಸ್ಥ ಎಂದು ಹೇಳುವುದು ಎಷ್ಟು ಸಮಂಜಸ. ಹಲವಾರು ವಿದ್ವಾಂಸರ ಪ್ರಕಾರ ರಾಮನು ಏಕಪತ್ನಿವ್ರತಸ್ಥನಲ್ಲ ಅವನಿಗೆ ಅನೇಕ ಸ್ತ್ರೀಯರಿದ್ದರು ಎಂದು ಜೈನರಾಮಾಯಣದಲ್ಲಿ ಕಂಡುಬರುತ್ತೆ. ವಾಲ್ಮೀಕಿ ರಾಮಾಯಣದಲ್ಲಿ ಇದು ಪರೋಕ್ಷವಾಗಿ ಪ್ರತಿಪಾದಿತವಾಗುತ್ತದೆ. ಮಂಥರೆಯು ಕೈಕೆಯನ್ನು ಎಚ್ಚರಿಸುತ್ತಾ ರಾಮನೇನಾದರು ರಾಜನಾದರೆ ಅವನ ಉತ್ತಮಸ್ತ್ರೀಯರೆಲ್ಲ ಸಂತೋಷಪಡುವರು ಮತ್ತು ನಿನ್ನ ಸೊಸೆಯಂದಿರು ಭಾಗ್ಯಹೀನರಾಗುವರು ಭರತನಂತು ಅಧೋಗತಿ ಪಡೆಯುವನು. ರಾಮಾಯಣವನ್ನು ವ್ಯಾಖ್ಯಾನಿಸುವವರು ರಾಮನ ಸ್ತ್ರೀಯರು ಎನ್ನುವುದು ಅವನ ಹೆಂಡತಿಯರೆಂದು ಹೇಳದೆ ರಾಮನ ದಾಸಿಯರು ಎಂದು ಪ್ರಯೋಗಿಸುವರು. ಹಾಗಾದರೆ ಮಂಥರೆಯು ಹೇಳಿದ “ನಿನ್ನ ಸೊಸೆಯರು” ಎಂದು ವಿಚಾರಿಸಿದಾಗ ಭರತನಿಗೆಷ್ಟು ಹೆಂಡತಿಯರು ಎಂಬುದು ಗಮನಿಸಬೇಕಾದ ವಿಷಯ ಇನ್ನೊಂದು ಕಡೆ. “ರಾಕ್ಷಸ ಸ್ತ್ರೀಯರು ಸೀತೆಯನ್ನು ಹೆದರಿಸಿದಾಗ ಸೀತೆಯು ಭಯಭೀತಳಾಗಿ ರಾಮನು ತಂದೆಯ ಆಜ್ಞೆಯನ್ನು ಪೂರೈಸಿದಾಗ ತನ್ನ ವ್ರತವೂ ಪೂರ್ಣವಾದಾಗ ರಾಮನು ವನಕ್ಕೆ ಮರಳಿದಾಗ ಅನೇಕ ಮನೋಹರವಾದ ವಿಶಾಲ ನೇತ್ರಗಳನ್ನು ಹೊಂದಿರುವ ಉತ್ತಮ ಸ್ತ್ರೀಯರ ಜೊತೆಗೆ ರಮಿಸುತ್ತಾ ಸುಖವಾಗಿರುವನು ಎಂದು ಹೇಳಿದೆ ಸೀತೆಯ ಮಾತಲ್ಲಿ ಅಯೋಧ್ಯಕಾಂಡದಲ್ಲಿ ಸ್ತ್ರೀಯರು ದಾಸಿಯರಾದರೆ ಸುಂದರ ಕಾಂಡದಲ್ಲಿ ಸ್ತ್ರೀಯರೊಂದಿಗೆ ರಾಮ ಸುಖಿಸುತ್ತಾನೆ ಎಂದು ಯೋಚಿಸುವುದು ತಪ್ಪಾಗುತ್ತದೆ ಅಲ್ಲವೇ?

ವಾಸ್ತವವಾಗಿ ಬ್ರಹ್ಮಾಂಡ ಪುರಾಣದಲ್ಲಿ ರಾಮ ಸೀತೆಯನ್ನು ಬಿಟ್ಟು ೧೨೮ ಪತ್ನಿಯರನ್ನು ಹೊಂದಿರುವನೆಂದು ಹೇಳಲಾಗುತ್ತದೆ. ಇದಕ್ಕೆ ಸ್ಕಂದ ಪುರಾಣವು ಪುಷ್ಠಿ ನೀಡುತ್ತದೆ. ದುರ್ವಾಸ ರಾಮಾಯಣದಲ್ಲಿ ಸೀತೆಯ ಅನುಮತಿ ಪಡೆದು ರಾಮ ೧೬ ಸ್ತ್ರೀಯರನ್ನು ವಿವಾಹವಾದ ಜೈನ ರಾಮಾಯಣದಲ್ಲಿ ರಾಮನಿಗೆ ನಾಲ್ಕು ಪತ್ನಿಯರು. ಅವರೆಂದರೆ ಸೀತೆ, ಪ್ರಭಾವತಿ, ರತಿಸಭಾ, ಶ್ರೀರಮಾ ಹೀಗೆ ರಾಮನು ಏಕಪತ್ನಿವ್ರತಸ್ತ ಅಲ್ಲ ಎಂದು ಸಾಬೀತು ಪಡಿಸಿದ ಮೇಲೆಯೂ ರಾಮನು ಪೂಜೆಗೆ ಅರ್ಹನೆ? ಎಂದಿಗೂ ಇಲ್ಲ ಎಂದೇ ಹೇಳಬೇಕಾಗುತ್ತದೆ.

ರಾಮಾಯಣದ ಪ್ರಾರಂಭದಲ್ಲಿ ವಾಲ್ಮೀಕಿ ನಾರದನನ್ನು ಕುರಿತು ಈ ಸಮಯದಲ್ಲಿ ಸಂಸಾರದಲ್ಲಿ ಗುಣವಂತ, ರ, ಧರ್ಮಜ್ಞ, ಉಪಕಾರ ಮಾಡುವವ, ಸತ್ಯವಂತ, ದೃಢಪ್ರತಿಜ್ಞಾವಂತ ಅಂದರೆ ಯಾರು ಎಂದು ಪ್ರಶ್ನಿಸಿದಾಗ ನಾರದನು ಕೊಡುವ ಉತ್ತರ ಬೇರೆಯವರನ್ನು ರಕ್ಷಿಸುವವ ಇದು ಸುಳ್ಳುಪೊಳ್ಳು ಮಾತೆನಿಸುತ್ತದೆ. ಆಚಾರ್ಯ ರಜನೀಕಾಂತರು ಹೇಳುವಂತೆ ಅನಾದಿ ಕಾಲದಿಂದಲೂ ನಮ್ಮ ಹರಿಜನ ಬಂಧುಗಳು ರಾಮ ಕೃಷ್ಣರನ್ನು ಆರಾಧಿಸುತ್ತಾ ಕಾಲಘಟ್ಟಗಳೆ ಸಂದಿವೆ. ಆದರೆ ಎರಡು ದೇವರಲ್ಲಿ ಒಬ್ಬನೂ ಸಹ ಹರಿಜನರಲ್ಲಿ ದಯೆಯನ್ನು ತೋರಿಸಲಿಲ್ಲ. ಅವರು ತಮ್ಮ ಸ್ತಾನದಿಂದ ಯಾವ ಉತ್ತಮಸ್ಥಿತಿಯನ್ನು ಪಡೆಯಲಿಲ್ಲ. ಬದಲಾಗಿ ರಾಮನೇ ಶಂಭೂಕನನ್ನು ಕೊಂದು ಹರಿಜನರ ಪರವಾಗಿ ತನ್ನ ಕನಿಕರವನ್ನು ವ್ಯಕ್ತಪಡಿಸಿದ್ದಾನೆ. ಆದರೂ ಹರಿಜನರು ಏನೂ ತಿಳಿಯದಂತೆ ಅವನನ್ನು ಆರಾಧಿಸುತ್ತಾರೆ. ಇದು ಅವರದೇ ತಪ್ಪು ಯಾರು ಸರಿಮಾಡುವಂತಿಲ್ಲ. ಏಕೆಂದರೆ ಬ್ರಾಹ್ಮಣತ್ವವನ್ನೆ ಉಳಿಸಿ ಬೆಳೆಸಲು ಬೇರೆಯವರನ್ನು ಅನ್ನ, ವಸ್ತ್ರ ಮುಂತಾದವುಗಳಿಂದ ವಂಚಿತರನ್ನಾಗಿ ಮಾಡಿದವರೆಂದು ತಿಳಿಯದೇ ಇದ್ದರೆ ಇದು ತಿಳಿಯಬೇಕಾದ ಸಂಗತಿ. ವೈಶ್ಯರು ಕೃಷ್ಣನನ್ನು ಸಹ ಆರಾಧಿಸುವುದು ಸರಿಯಲ್ಲ. ಗೌತಮಬುದ್ಧನನ್ನು ಬಿಟ್ಟು ಉಳಿದ ಅವನ ಅವತಾರಗಳೆಲ್ಲ ಬ್ರಾಹ್ಮಣಧರ್ಮ ಉಳಿಸುವ ಸಲುವಾಗಿಯೇ ಆಗಿತ್ತು. ರಾಮ ಕೃಷ್ಣರೇ ತಾವು ಹೆಚ್ಚು ತಾವು ಹೆಚ್ಚು ಎನ್ನುವಂತೆ ಜನರಲ್ಲಿ ಜಗಳಹುಟ್ಟಿಸುವಂತೆ ಮಾಡಿದ್ದಾರೆ.

ಕೃಷ್ಣನು ವೈಶ್ಯ ಮತ್ತು ಶೂದ್ರರನ್ನು ಪಾಪಯೋನಿಗಳು ಎಂದು ಕರೆದರೆ ರಾಮನು ಶೂದ್ರ ಶಂಭೂಕನ ತಲೆಯನ್ನೇ ಕಡಿದ. ಇದರಿಂದಲೇ ಈ ದೇವರುಗಳು ವೈಶ್ಯೆ ಮತ್ತು ಶೂದ್ರರಲ್ಲಿ ಅವರ ವಿಚಾರಗಳೇನಿದ್ದವು ಎಂದು ತಿಳಿಯಬಹುದು. ಇಂದು ರಾಮನ ಹೆಸರಿನಲ್ಲಿ ನಡೆಯುತ್ತಿರುವ ಗಲಾಟೆಯನ್ನು ನೋಡಿದರೆ ನಮಗೆ ನಾಚಿಕೆಯಾಗುತ್ತದೆ. ಪೂಜಿಸಲು ಯೋಗ್ಯವಲ್ಲದ ಒಬ್ಬ ಸಾಮಾನ್ಯನಿಗಿಂತ ಕಡೆಯಾದ ರಾಜನಿಗಾಗಿ ನಾವು ಹೋರಾಡುತ್ತಿರುವುದು ವ್ಯರ್ಥ ಪ್ರಯತ್ನದಂತೆ ಭಾಸವಾಗುತ್ತಿದೆ. ಇದನ್ನು ತಿಳಿದು ಜನರು ಎಚ್ಚೆತ್ತುಕೊಳ್ಳುಬೇಕಾದುದು ಅವಶ್ಯಕ. ಒಳ್ಳೆಯ ವಿಚಾರ ಸತ್ಯ ನೀತಿಯನ್ನು ಗೌರವಿಸಿಬೇಕೆ ಹೊರತು ರಾಮ ಹಿಂದೂಧರ್ಮ ಎಂದು ಹೋರಾಡುವುದರಲ್ಲಿ ಯಾವ ಅರ್ಥವೂ ಇಲ್ಲ.