Categories
ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ರಾಮ ಮನೋಹರ ಲೋಹಿಯಾ

ಈ ಶತಮಾನದ ಮೂರನೆಯ ದಶಕದ ಕೊನೆ. ಜಿನೀವಾ ನಗರದಲ್ಲಿ ‘ಲೀಗ್‌ ಆಫ್‌ ನೇಷನ್ಸ್‌’ (ಆಗಿನ ಪ್ರಪಂಚ ರಾಷ್ಟ್ರಸಂಸ್ಥೆ) ಸಭೆ. ಅಲ್ಲೊಂದು ಮೋಜಿನ ಘಟನೆ ನಡೆಯಿತು. ಒಬ್ಬ ಮಹಾರಾಜ ಭಾರತದ ಪ್ರತಿನಿಧಿಯಾಗಿ ಮಾತನಾಡುತ್ತಿದ್ದ. ಪ್ರೇಕ್ಷಕರ ಗ್ಯಾಲರಿಯಲ್ಲಿ ಇಪ್ಪತ್ತರ ಹರೆಯದ ಒಬ್ಬ ಗಿಡ್ಡ ಹುಡುಗ ಕುಳಿತಿದ್ದ. ಕನ್ನಡಕ ಧರಿಸಿದ್ದ. ಮಹಾರಾಜ ಮಾತನಾಡಲೆದ್ದ ಕೂಡಲೇ ಈತ ಸಿಳ್ಳು ಹೊಡೆಯಲಾರಂಭಿಸಿದ. ಸಿಳ್ಳು ಒಂದೇ ಸಮನೆ ನಡೆಯಿತು. ಅಲ್ಲಿಂದ ಆ ತರುಣನನ್ನು ಹೊರದೂಡಿದರು. ಈ ವಿಚಿತ್ರ ಪ್ರತಿಭಟನೆ ತೋರಿದ ವ್ಯಕ್ತಿ ಮತ್ತಾರೂ ಅಲ್ಲ. ಭಾರತದ ರಾಜಕಾರಣದ ‘ಸಿಡಿಲಮರಿ’ ಎಂದು ಹೆಸರಾದ ಡಾಕ್ಟರ್ ರಾಮ ಮನೋಹರ ಲೋಹಿಯಾ.

ಶಿಕ್ಷಣದೊಂದಿಗೇ ದೇಶದ ಕೆಲಸ

ಲೋಹಿಯಾ ಹುಟ್ಟಿದ್ದು ೧೯೧೦ರಲ್ಲಿ. ಅವರ ತಂದೆ ಹೀರಾಲಾಲರು ಉತ್ತರ ಪ್ರದೇಶದ ಫೈಜಾಬಾದಿನ ವ್ಯಾಪಾರಿ. ರಾಮ ಮನೋಹರನಿಗೆ ಎರಡೂವರೆ ವರ್ಷವಾಗಿದ್ದಾಗ ತಾಯಿ ತೀರಿಕೊಂಡಳು.ಹುಡುಗನ ಅಜ್ಜಿ ಅವನನ್ನು ಸಾಕಿದಳು. ತಂದೆಗೆ ಮಹಾತ್ಮ ಗಾಂಧೀಜಿಯಲ್ಲಿ ಬಹಳ ಭಕ್ತಿ, ನಿಷ್ಠೆ. ತಮ್ಮ ಮಗ ಒಂಬತ್ತು ವರ್ಷದ ಬಾಲಕನಿದ್ದಾಗಲೇ ಗಾಂಧೀಜಿಯವರ ದರ್ಶನ ಮಾಡಿಸಿದರು. ೧೯೨೩ರಲ್ಲಿ ಬಿಹಾರದ ಗಯಾದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಮಹಾಧಿವೇಶನ ನಡೆಯಿತು. ಆಗ ಎಳೆಯ ಲೋಹಿಯಾ ಕಾಂಗ್ರೆಸ್‌ ಸ್ವಯಂಸೇವಕ. ೧೯೨೬ ರಲ್ಲಿ ನಡೆದ ಗೌಹತಿ ಅಧಿವೇಶನಕ್ಕೂ ಹೋಗಿದ್ದರು.

ಲೋಹಿಯಾ ಕಲಿತದ್ದು ಮುಂಬಯಿ, ಕಾಶಿ ಹಾಗೂ ಕಲ್ಕತ್ತಾಗಳಲ್ಲಿ. ೧೯೨೫ರಲ್ಲಿ ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ಮೊದಲನೇ ದರ್ಜೆಯಲ್ಲಿ ತೇರ್ಗಡೆಯಾದರು. ಕಾಶಿ ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷ ಅಭ್ಯಾಸ ಮಾಡಿ, ಅನಂತರ ಕಲ್ಕತ್ತಾದ ವಿದ್ಯಾಸಾಗರ ಕಾಲೇಜನ್ನು ಸೇರಿ ೧೯೨೯ರಲ್ಲಿ ಇಂಗ್ಲೀಷ್‌ ಭಾಷೆಯ ಆನರ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಚಳುವಳಿಯ ಸೆಳೆತ. ಉಚ್ಚ ವ್ಯಾಸಂಗಕ್ಕಾಗಿ ಜರ್ಮನಿಗೆ ಹೋದರು. ಅಲ್ಲಿ ಆಗ ಹಿಟ್ಲರ್ ಮೇಲುಗೈಯಲ್ಲಿದ್ದ. ಬರ್ಲಿನ್‌ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್‌ ಪದವಿಗೆ ಪ್ರಬಂಧ ಬರೆದರು. ವಿಷಯ: ಭಾರತದಲ್ಲಿ ನಡೆದಿದ್ದ ‘ಉಪ್ಪಿನ ಸತ್ಯಾಗ್ರಹ’. ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ಎರಡರಲ್ಲೂ ಅವರಿಗೆ ಡಾಕ್ಟರೇಟ್‌ ಪದವಿ ದೊರೆಯಿತು. ೧೯೩೨ರಲ್ಲಿ ಭಾರತಕ್ಕೆ ಮರಳಿದರು.

ಕಾಂಗ್ರೆಸ್ ಸಮಾಜವಾದೀ ಪಕ್ಷ

ಆಗ ದೇಶದಾದ್ಯಂತ ಗಾಂಧೀಜಿ ಹೂಡಿದ ಸತ್ಯಾಗ್ರಹ ಹಬ್ಬಿತು. ಲೋಹಿಯಾ ಅದರಲ್ಲಿ ಸೇರಿದರು. ಸೆರೆಮನೆ ವಾಸ ಅವರಿಗೆ ಸಿಕ್ಕ ಬಹುಮಾನ. ಆಗ ಕಾಂಗ್ರೆಸಿನಲ್ಲಿದ್ದ ಹರೆಯದ ಹುಡುಗರು ಒಂದು ಆಲೋಚನೆ ಮಾಡಿದರು. ಹಿರಿಯರ ವೇಗ ಅವರಿಗೆ ಸಾಲದೆನಿಸಿತು. ಬೇಗಬೇಗ ಮುನ್ನುಗ್ಗುವ ತವಕ. ನಾಸಿಕ್‌ ರೋಡ್‌ ಸೆರೆಮನೆಯಲ್ಲಿ ಇಂಥ ಹಲವು ತರುಣರು ಒಟ್ಟಿಗೆ ಇದ್ದರು. ಅವರಿಗೆಲ್ಲ ಬಡವರಲ್ಲಿ, ರೈತರಲ್ಲಿ, ಕಾರ್ಮಿಕರಲ್ಲಿ ಬಹಳ ಅನುಕಂಪ. ಅವರ ಏಳಿಗೆಗಾಗಿ ದುಡಿಯುವ ಸಂಕಲ್ಪ. ಅದಕ್ಕೆ ಕಾಂಗ್ರೆಸ್ಸಿನೊಳಗೆ ತರುಣರ ಒಂದು ಗುಂಪು ಕಟ್ಟಿದರು. ಇದರ ಮೂಲಪುರುಷರಲ್ಲಿ ಜಯಪ್ರಕಾಶ ನಾರಾಯಣ, ರಾಮ ಮನೋಹರ ಲೋಹಿಯಾ, ಯುಸುಫ್‌ ಮೆಹರಲ್ಲೀ, ಅಚ್ಯುತ ಪಟವರ್ಧನ, ಅಶೋಕ ಮೆಹತಾ, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಆಚಾರ್ಯ ನರೇಂದ್ರ ದೇವ ಮುಂತಾದವರೆಲ್ಲ ಸೇರಿದ್ದರು. ಶ್ರಮಜೀವಿಗಳ ರಾಜ್ಯವನ್ನು ಸ್ಥಾಪಿಸುವ ಕನಸು ಕಂಡರು. ಅದಕ್ಕಾಗಿಯೇ ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸಬೇಕೆಂದು ಪಟ್ಟು ಹಿಡಿದರು. ‘ಕಾಂಗ್ರೆಸ್‌ ಸೋಷಿಯಲಿಸ್ಟ್‌’ ಎಂಬ ಪತ್ರಿಕೆಗೆ ಲೋಹಿಯಾ ಸಂಪಾದಕರಾದರು.

ವಿದೇಶ ವ್ಯಾಸಂಗ ಮಾಡಿ ಬಂದಿದ್ದ ರಾಮ ಮನೋಹರರಿಗೆ ಅಂತರರಾಷ್ಟ್ರೀಯ ವಿಷಯಗಳು ತುಂಬ ಚೆನ್ನಾಗಿ ತಿಳಿದಿದ್ದವು. ಕಾಂಗ್ರೆಸ್‌, ವಿದೇಶಾಂಗ ಶಾಖೆಯೊಂದನ್ನು ಸ್ಥಾಪಿಸಿತು. ಅದರ ಮೇಲ್ವಿಚಾರಣೆ ಇವರ ಕೈಗೆ ಬಂತು. ಜಗತ್ತಿನ ಬೇರೆಬೇರೆ ದೇಶಗಳ ಪ್ರಗತಿಪರರೊಡನೆ ಕಾಂಗ್ರೆಸ್ಸಿನ ಸಂಬಂಧ ಕಲ್ಪಿಸಿದರು. ವಿದೇಶಗಳಲ್ಲಿರುವ ಭಾರತೀಯರ ಹಿತರಕ್ಷಣೆಗೆ ಪ್ರತ್ಯೇಕ ಶಾಖೆ ರಚಿಸಿದರು.

ಸೆರೆಮನೆ ವಾಸ

೧೯೨೬ರಲ್ಲಿ ಲೋಹಿಯಾ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಸದಸ್ಯರಾಗಿ ಆಯ್ಕೆ ಹೊಂದಿದರು. ದೇಶದಾದ್ಯಂತ ಸಂಚರಿಸಿದರು. ಯುವಜನರನ್ನು ಸ್ವಾತಂತ್ಯ್ರ ಚಳುವಳಿಗೆ ಸೆಳೆದರು. ೧೯೩೮ರಲ್ಲಿ ರಾಜ ದ್ರೋಹದ ಆಪಾದನೆಗೆ ಗುರಿಪಡಿಸಿ ಬ್ರಿಟಿಷರು ಕಲ್ಕತ್ತೆಯಲ್ಲಿ ಇವರನ್ನು ಬಂಧಿಸಿದರು.

೧೯೨೯ರಲ್ಲಿ ಎರಡನೆಯ ಮಹಾಯುದ್ಧ ಆರಂಭ. ಯುದ್ಧಕ್ಕೆ ಭಾರತವನ್ನು ಬಲಾತ್ಕಾರವಾಗಿ ಬ್ರಿಟಿಷರು ಸೆಳೆದಿದ್ದರು. ಡಾ. ಲೋಹಿಯಾ ಯುದ್ಧ ವಿರೋಧಿಯಾಗಿದ್ದರು. ಅವರು ಮಾಡಿದ ಯುದ್ಧ ವಿರೋಧಿ ಭಾಷಣಗಳಿಗಾಗಿ ೧೯೪೦ರಲ್ಲಿ ಅವರನ್ನು ಬ್ರಿಟಿಷ್‌ ಸರ್ಕಾರ ಮತ್ತೆ ಸೆರೆಮನೆಗೆ ದೂಡಿತು.

೧೯೪೨- ಮಹಾತ್ಮಗಾಂಧೀಜಿ ದೇಶಕ್ಕೆ ಒಂದು ಕರೆ ಕೊಟ್ಟರು. ಬ್ರಿಟಿಷರಿಗೆ ಸವಾಲು ಎಸೆದರು. ‘ಭಾರತ ಬಿಟ್ಟು ತೊಲಗಿ’ ಎಂದು ತಗಾದೆ ಮಾಡಿದರು. ಆ ವರ್ಷ ಆಗಸ್ಟ್‌ ಏಳು-ಎಂಟರಂದು ಮುಂಬಯಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಸಭೆ ಸೇರಿತು. ಅಲ್ಲಿ ಲ‘ಚಲೇ ಜಾವ್‌’ ನಿರ್ಣಯ ಅಂಗೀಕಾರವಾಯಿತು. ಆಗಸ್ಟ್‌ ೯ ರಂದು ಬೆಳಗಿನ ಜಾವ ಬ್ರಿಟಿಷ್‌ ಸರ್ಕಾರ ಗಾಂಧೀಜಿ ಮತ್ತು ಇತರ ಎಲ್ಲ ರಾಷ್ಟ್ರನಾಯಕರನ್ನು ಸೆರೆಮನೆಗೆ ಒಯ್ದಿತು. ದೇಶಕ್ಕೆ ಬಾಪೂ ಒಂದು ಮಂತ್ರ ಕೊಟ್ಟರು- ‘ಮಾಡು ಇಲ್ಲ ಮಡಿ’. ಈ ಮಂತ್ರವನ್ನು ಕೇಳಿ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಪ್ರಚಂಡವಾಗಿ ಎದ್ದು ನಿಂತಿತು. ಎಷ್ಟೋ ಮಂದಿ ರಾಷ್ಟ್ರನಾಯಕರು ಸರ್ಕಾರದ ಕಣ್ಣು ತಪ್ಪಿಸಿ ತಲೆಮರೆಸಿಕೊಂಡು ಚಳುವಳಿಯನ್ನು ಸಂಘಟಿಸಿದರು. ಅವರಲ್ಲಿ ಲೋಹಿಯಾ ಅಗ್ರಗಣ್ಯರು. ಗುಪತ್ತ ಆಕಾಶವಾಣಿ ಕೇಂದ್ರವೊಂದನ್ನು ಅವರು ನಡೆಸಿದರು. ಜಯಪ್ರಕಾಶ ನಾರಾಯಣರೊಡಗೂಡಿ ಭೂಗತ ಚಳುವಳಿಯನ್ನು ಸಂಘಟಿಸಿದರು.

೧೯೪೪ರಲ್ಲಿ ಸರ್ಕಾರ ಲೋಹಿಯಾ ಅವರನ್ನು ಬಂಧಿಸಿತು. ಸೆರೆಮನೆಯಲ್ಲಿ ಬಗೆಬಗೆಯ ಚಿತ್ರಹಿಂಸೆಗೆ ಗುರಿಪಡಿಸಿತು. ಒಂದೊಂದು ದಿನ ಒಂದೊಂದು ತೂಕದ ಅಳತೆಯ ಕೈಕೋಳಗಳನ್ನು ತೊಡಿಸುವುದು, ಅವರನ್ನು ಅಧಿಕಾರಿಯ ಕೊಠಡಿಯಲ್ಲಿ ಕೂಡಿಸಿ ಒಂದೇ ಶಬ್ದವನ್ನು ಗಂಟೆಗಟ್ಟಲೆ ಅವರ ಮುಂದೆ ಉಚ್ಚರಿಸುವುದು, ಇಡೀ ರಾತ್ರಿ ಅವರು ಕಣ್ಣನ್ನು ಮುಚ್ಚದಂತೆ ನಿರ್ಬಂಧಿಸುವುದು, ಅವರು ಕಣ್ಣು ಮುಚ್ಚಿದರೆ ತಲೆ ಹಿಡಿದು ಸುತ್ತಿಸುವುದು ಇಲ್ಲವೆ ಕೈಕೋಳಗಳನ್ನು ಜಗ್ಗುವುದು, ನಾಲ್ಕೈದು ರಾತ್ರಿ ಅವರು ನಿದ್ರೆ ಮಾಡದಂತೆ ಪಕ್ಕದಲ್ಲೆ ಲೋಹದ ತುಂಡಿನಿಂದ ಮೇಜನ್ನು ಕುಟ್ಟುವುದು, ಅವರ ಎದುರಿಗೆ ರಾಷ್ಟ್ರೀಯ ನಾಯಕರನ್ನು ಬಾಯಿಗೆ ಬಂದಂತೆ ಬೈಯ್ಯುವುದು-ಹೀಗೆ ವಿಧವಿಧವಾಗಿ ಅವರಿಗೆ ಹಿಂಸೆ. ಆಯಾಸಗೊಂಡಿದ್ದ, ನಿಶ್ಯಕ್ತರಾಗಿದ್ದ ಲೋಹಿಯಾ, ಗಾಂಧೀಜಿಯನ್ನು ಬೈಯುತ್ತಿದ್ದ ಅಧಿಕಾರಿಗೆ ‘ಮುಚ್ಚು ಬಾಯಿ’ ಎಂದು ಗುಡುಗಿದರು. ಪೊಲೀಸಿನವನು ಎಗರಾಡಿದ. ಆದರೆ ಮತ್ತೆ ಹಾಗೆ ಮಾಡಲಿಲ್ಲ. ಕಡೆಗೆ ೧೯೪೬ರಲ್ಲಿ ಅವರ ಬಿಡುಗಡೆ ಆಯಿತು.

ಆ ವೇಳೆಗಾಗಲೇ ಭಾರತದ ಸ್ವಾತಂತ್ಯ್ರ ಹತ್ತಿರ ಬಂದಿತ್ತು. ಬ್ರಿಟಿಷರ ಗುಲಾಮಗಿರಿ ತಪ್ಪಿದರೂ ಪೋರ್ಚುಗೀಸರ ಗುಲಾಮಗಿರಿ ತಪ್ಪುವಂತಿರಲಿಲ್ಲ. ಗೋವೆ, ದೀವ್‌,ದಮನ್‌ ಈ ಭಾಗಗಳನ್ನು ನಾನೂರೈವತ್ತು ವರ್ಷಗಳಿಂದ ಪೋರ್ಚುಗೀಸ್‌ ಸಾಮ್ರಾಜ್ಯ ಶಾಹಿಗಳು ಆಳುತ್ತಿದ್ದರು. ಬ್ರಿಟಿಷರಿಗಿಂತ ಅವರ ಆಳ್ವಿಗೆ ಘೋರವಾಗಿತ್ತು. ೧೯೪೬ರಲ್ಲಿ ಸೆರೆಮನೆಯಿಂದ ಹೊರಬಂದ ಕೂಡಲೇ ಲೋಹಿಯಾ ಅವರ ಗಮನ ಗೋವೆಯ ಕಡೆ ತಿರುಗಿತು. ಕರ್ನಾಟಕದ ಬೆಳಗಾವಿ ನಗರಕ್ಕೆ ಬಂದರು. ಗೋವೆಯಲ್ಲಿ ಚಳುವಳಿ ನಡೆಸಲು ಸಂಘಟನೆಗೆ ತೊಡಗಿದರು. ಗೋವೆಯನ್ನು ಪ್ರವೇಶಿಸಿದರು. ಪೋರ್ಚುಗೀಸ್‌ ಸರ್ಕಾರ ಅವರನ್ನು ಬಂಧಿಸಿ ಹೊರದೂಡಿತು. ಹೀಗೆ ಗೋವೆಯ ವಿಮೋಚನೆಗೆ ಲೋಹಿಯಾ ತಳಹದಿ ಹಾಕಿದರು.

ಅತ್ತ ಉತ್ತರದ ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳ; ಅಲ್ಲಿ ರಾಣಾ ಮನೆತನದ ದಬ್ಬಾಳಿಕೆ. ನೇಪಾಳದ ತರುಣರು ಕಾಶಿಯಲ್ಲಿ ಕಲಿತವರು. ಅವರಿಗೆಲ್ಲ ಲೋಹಿಯಾ ರಾಜಕೀಯ ಗುರು. ನೇಪಾಳದಲ್ಲಿ ರಾಣಾಶಾಹಿಯ ಅಂತ್ಯಕ್ಕಾಗಿ ನಡೆದ ಚಳುವಳಿಗೆ ಇವರದೇ ಸ್ಫೂರ್ತಿ.

ಸಮಾಜವಾದೀ ಪಕ್ಷ

೧೯೪೭ರ ಆಗಸ್ಟ್‌ ೧೫. ಭಾರತ ಸ್ವತಂತ್ರವಾಯಿತು. ಆದರೆ ಎರಡು ಹೋಳಾಯಿತು. ಈ ದುರಂತ ಕಂಡು ಲೋಹಿಯಾ ಕಸಿವಿಸಿಗೊಂಡರು.

೧೯೪೮ ಜನವರಿ ೩೦ ರಂದು ಗಾಂಧೀಜಿಯ ಕೊಲೆ ಆಯಿತು. ದೇಶದಾದ್ಯಂತ ಕೋಮುವಾರು ವಿಷಜ್ವಾಲೆ ಆವರಿಸಿತು. ಈ ಸಂದರ್ಭದಲ್ಲಿ ಕಾಂಗ್ರೆಸಿನ ಹಿರಿಯ ನಾಯಕರು ಅನುಸರಿಸಿದ ನೀತಿ ಕಾಂಗ್ರೆಸ್‌ ಸಮಾಜವಾದೀ ಪಕ್ಷಕ್ಕೆ ಸರಿತೋರಲಿಲ್ಲ. ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಶ್ರಮಜೀವಿಗಳ ಸಂಘಟನೆಗೆ ಸಮಾಜ ವಾದಿಗಳು ಸಂಕಲ್ಪ ತಳೆದರು. ಆ ವರ್ಷ ಏಪ್ರಿಲ್‌ ೧೫ ರಂದು ಕಾಂಗ್ರೆಸ್ಸನ್ನು ತೊರೆದು ಸಮಾಜವಾದಿಗಳೆಲ್ಲ ಹೊರಬಂದರು. ತಮ್ಮದೇ ಆದ ಪ್ರತ್ಯೇಕ ಪಕ್ಷ ರಚಿಸಿದರು. ಅವರ ಅಗ್ರ ನಾಯಕರಲ್ಲಿ ಲೋಹಿಯಾ ಒಬ್ಬರಾದರು.

ಅನಂತರ ದೇಶದ ಆದ್ಯಂತ ಲೋಹಿಯಾ ಸಂಚಾರ ಕೈಗೊಂಡರು. ಜವಾಹರಲಾಲ್‌ ನೆಹರೂ ಅವರ ಸರ್ಕಾರ ಅನುಸರಿಸುತ್ತಿದ್ದ ಧೋರಣೆಗಳನ್ನು ಉಗ್ರವಾಗಿ ಟೀಕಿಸಿದರು. ತಮ್ಮದೇ ಆದ ರೀತಿಯಲ್ಲಿ ಸಮಾಜವಾದೀ ಪಕ್ಷದ ನೀತಿ ನಿಲುವುಗಳನ್ನು ಪ್ರತಿಪಾದಿಸಿದರು. ದೇಶದ ಯುವಜನರ ಮನಸ್ಸನ್ನು ಸೂರೆಗೊಂಡರು.

ಕರ್ನಾಟಕದ ಕಾಗೋಡಿನಲ್ಲಿ

ಕರ್ನಾಟಕಕ್ಕೂ ರಾಮ ಮನೋಹರ ಲೋಹಿಯಾ ಅವರಿಗೂ ಆತ್ಮೀಯ ಸಂಬಂಧ ಏರ್ಪಟ್ಟ ಒಂದು ಮಹತ್ವದ ಪ್ರಸಂಗ. ಕನ್ನಡ ನಾಡಿನ ಮಲೆನಾಡಿನ ಜಿಲ್ಲೆ ಶಿವಮೊಗ್ಗ. ಅಲ್ಲಿ ಗಂಧದ ಕೆತ್ತನೆಗೆ ಪ್ರಸಿದ್ಧಿಯಾದ ಸಾಗರ ತಾಲ್ಲೂಕು. ಅಲ್ಲೊಂದು ಸಣ್ಣ ಹಳ್ಳಿ ಕಾಗೋಡು. ಆ ಊರಿನಲ್ಲಿ ಒಬ್ಬರೇ ಒಬ್ಬರು ಜಮೀನುದಾರರು. ಉಳಿದವರೆಲ್ಲ ಗೇಣಿಕಾರರು, ಒಕ್ಕಲುಗಳು. ಅವರ ಆರ್ಥಿಕ, ಸಾಮಾಜಿಕ ಸ್ಥಿತಿ ತುಂಬ ಶೋಚನೀಯ ಆಗಿತ್ತು. ರೈತರು ಭೂ ಒಡೆಯರ ಎದುರು ನೆಟ್ಟಗೆ ನಿಲ್ಲಲೂ ಅಂಜುತ್ತಿದ್ದರು. ಮೊಣಕಾಲಿನಿಂದ ಮೇಲಕ್ಕೆ ಧೋತರ ಉಡಬೇಕು. ಹೆಂಗಸರು ಸೀರೆಯನ್ನು ಕಾಲಿನತನಕ ಉಡುವಂತಿಲ್ಲ. ಒಡೆಯರ ಮನೆಯಲ್ಲಿ ಬಿಟ್ಟಿ ದುಡಿತ, ವಿದ್ಯೆಯ ಗಂಧವೇ ಇಲ್ಲ. ಇವೆಲ್ಲ ವಿಧಿ ವಿಲಾಸ ಎಂದು ನಂಬಿದ್ದ ಮೂಕ ಜನ.

ಸ್ವಾತಂತ್ಯ್ರದ ಬಳಿಕ ಹೊಸ ಗಾಳಿ ಮಲೆನಾಡಿಗೆ ಬೀಸಿತು. ರೈತರು ಎಚ್ಚರಗೊಂಡರು. ತಾವೂ ಮನುಷ್ಯರು ಎಂಬುದನ್ನು ಕಂಡುಕೊಂಡರು. ಸಂಘ ಕಟ್ಟಿದರು. ಇದು ಭೂ ಒಡೆಯರಿಗೆ ಹಿಡಿಸಲಿಲ್ಲ. ಬಹು ಕಾಲದಿಂದ ತುಳಿದಿಟ್ಟಿದ್ದ ಜನ ತಿರುಗಿಬಿದ್ದರೆ ಹೇಗೆ? ಒಡೆಯರನ್ನು ಭಯ ಆವರಿಸಿತು. ಗೇಣಿದಾರರನ್ನು ಕಾಗೋಡಿನ ಜಮೀನುದಾರರು ಭೂಮಿಯಿಂದ ಬಿಡಿಸಿದರು. ೧೯೫೧ರಲ್ಲಿ ರೈತರು ಕೂಡಿ ಯೋಚಿಸಿದರು. ಅನ್ಯಾಯವನ್ನು ಎದುರಿಸಲೇಬೇಕೆಂದು ನಿಶ್ಚಯಿಸಿದರು. ‘ರೈತ ಸಂಘ’ ಮತ್ತು ಕರ್ನಾಟಕದ ‘ಸಮಾಜವಾದೀ ಪಕ್ಷ’ ಈ ಅನ್ಯಾಯದ ವಿರುದ್ಧ ಸತ್ಯಾಗ್ರಹ ಹೂಡಿದವು. ಅನೇಕ ದಿನ ರೈತರು ಗುಂಪುಗುಂಪಾಗಿ ಗದ್ದೆಗೆ ಇಳಿದು ತಮ್ಮ ಹಕ್ಕಿನ ಸ್ಥಾಪನೆಗಾಗಿ ಹೋರಾಟ ಹೂಡಿದರು. ಸರ್ಕಾರ ಭೂ ಒಡೆಯರ ಪಕ್ಷ ವಹಿಸಿತು. ರೈತರು ಸಮಾಜವಾದಿಗಳ ನೇತೃತ್ವದಲ್ಲಿ ನೂರುಗಟ್ಟಲೆ ಸಂಖ್ಯೆಯಲ್ಲಿ ಸಾಗರ ಮತ್ತು ಶಿವಮೊಗ್ಗೆಗಳ ಸೆರೆಮನೆಗಳನ್ನು ತುಂಬಿದರು.

೧೯೫೧ರ ಜುಲೈ ತಿಂಗಳಲ್ಲಿ ಡಾ. ಲೋಹಿಯಾ ಅವರಿಗೆ ಈ ಸುದ್ಧಿ ತಿಳಿಯಿತು. ಕನ್ನಡ ನಾಡಿಗೆ ಅವರು ಧಾವಿಸಿ ಬಂದರು. ಬೆಂಗಳೂರಿನಿಂದ ನೆಟ್ಟಗೆ ಇಲ್ಲಿನ ನಾಯಕರೊಂದಿಗೆ ಸಾಗರಕ್ಕೆ ತೆರಳಿದರು; ಅಲ್ಲಿಂದ ಕಾಗೋಡು ಗ್ರಾಮಕ್ಕೆ. ಒಳ್ಳೆಯ ಮಳೆಗಾಲ; ಒಂದೇ ಸಮನೆ ಮಳೆ ಬೀಳುತ್ತಿತ್ತು. ಜುಲೈ ೧೨ರ ಮಧ್ಯಾಹ್ನ. ಸ್ವಲ್ಪ ಹೊಳವಾಗಿತ್ತು. ಕಾಗೋಡಿನ ರೈತರ ನೇತೃತ್ವ ವಹಿಸಿ ಗದ್ದೆಗೆ ಇಳಿದು ಸಮಾಜವಾದೀ ಪಕ್ಷದ ಧ್ವಜ ಹಿಡಿದು ಲೋಹಿಯಾ ಸತ್ಯಾಗ್ರಹ ನಡೆಸಿದರು. ಆ ಊರಿನಲ್ಲಿ ಮೆರವಣಿಗೆ ನಡೆದಾಗ ಅತ್ಯಂತ ಸ್ತಬ್ಧ ವಾತಾವರಣ. ಸತ್ಯಾಗ್ರಹ ಮುಗಿಸಿ ಸಾಗರದ ರೈಲ್ವೆ ನಿಲ್ದಾಣದ ವಿಶ್ರಾಂತಿ ಗೃಹಕ್ಕೆ ಲೋಹಿಯಾ ಬಂದರು. ಅಂದು ರಾತ್ರಿ ಸುಮಾರು ಹನ್ನೆರಡು ಗಂಟೆಯ ಸಮಯ. ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು ಲೋಹಿಯಾ ಅವರನ್ನು ಬಂಧಿಸಿದರು.

ಸಾಗರದ ಪೊಲೀಸ್‌ ಲಾಕಪ್‌ನಲ್ಲಿ ಅಂದು ಇಡೀ ರಾತ್ರ ಇತರ ಬಂಧಿಗಳೊಡನೆ ಕುಳಿತೇ ಸಮಯ ಕಳೆದರು ಲೋಹಿಯಾ. ಮರುದಿನ ಶಿವಮೊಗ್ಗೆ ಜೈಲಿಗೆ ಅವರನ್ನೂ ಇತರ ನಾಯಕರನ್ನೂ ಒಯ್ದರು. ಅಲ್ಲಿ ಸಾಕಷ್ಟು ಮಂದಿ ಸತ್ಯಾಗ್ರಹಿಗಳು ತುಂಬಿದ್ದರು. ಅಂದು ಸಂಜೆಯೇ ಲೋಹಿಯಾ ಒಬ್ಬರನ್ನೇ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸರ್ಕಾರಿ ಅತಿಥಿ ಗೃಹದಲ್ಲಿ ಬಂಧನದಲ್ಲಿಟ್ಟರು. ಅನಂತರ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದಾಗ ಲೋಹಿಯಾ ಅವರ ಬಿಡುಗಡೆ ಆಯಿತು.

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಕಾಗೋಡಿನಲ್ಲಿ ಸತ್ಯಾಗ್ರಹ ನಡೆಸಿದರು.

ಮಾನವೀಯತೆ

ಶಿವಮೊಗ್ಗೆ ಜೈಲಿನಲ್ಲಿ ಸತ್ಯಾಗ್ರಹಿಗಳಿಗೆ ಸಾಕಷ್ಟು ಊಟ ಕೊಡುತ್ತಿರಲಿಲ್ಲ. ಸರ್ಕಾರ ಕೊಡುತ್ತಿದ್ದ ಆಹಾರ ಪದಾರ್ಥ ಒಂದು ಹೊತ್ತಿಗೆ ಮಾತ್ರ ಸಾಲುತ್ತಿತ್ತು. ಇನ್ನೊಂದು ಹೊತ್ತು ಹೊರಗಿನಿಂದ ಹಿತೈಷಿಗಳು ಕಳಿಸಿದ ತಿಂಡಿ ತೀರ್ಥಗಳಿಂದ ಸತ್ಯಾಗ್ರಹಿಗಳು ತೃಪ್ತರಾಗುತ್ತಿದ್ದರು. ಲೋಹಿಯಾ ಅವರಿಗೆ ಈ ಸ್ಥಿತಿ ಕಂಡು ಬಹು ಮರುಕವಾಯಿತು. ಆದರೆ ಅವರ ಬಳಿ ಹಣ ಇರಲಿಲ್ಲ. ಅವರ ಕಿಸೆಯಲ್ಲಿದ್ದ ಹಣದ ಚೀಲದಲ್ಲಿ ಮೂವತ್ತೆರಡು ರೂಪಾಯಿಗಳಿದ್ದವು. ತಮ್ಮನ್ನು ಬೆಂಗಳೂರಿಗೆ ಒಯ್ಯಲು ಪೊಲೀಸ್‌ ಅಧಿಕಾರಿಗಳು ಬಂದಾಗ ಆ ಹಣದ ಚೀಲವನ್ನೇ ತಮ್ಮೊಡನೆ ಸೆರೆಯಲ್ಲಿದ್ದವರ ಕೈಯಲ್ಲಿ ಇಟ್ಟರು. ‘ಇದರಿಂದ ಎಷ್ಟು ತಿಂಡಿ ಬರುತ್ತದೋ ಅದನ್ನೆಲ್ಲ ತರಿಸಿ ಎಲ್ಲರಿಗೂ ಕೊಡು’ ಎಂದು ಹೇಳಿದರು. ಅವರ ಗೆಳೆಯರು ಬೇಡವೆಂದರೂ ಅವರು ಕೇಳಲೇ ಇಲ್ಲ.

ಕರ್ನಾಟಕದ ರೈತರ ಹೋರಾಟದಲ್ಲಿ ಮಾತ್ರವೇ ಲೋಹಿಯಾ ಭಾಗವಹಿಸಿದರೆಂದಲ್ಲ. ದೇಶದ ಎಲ್ಲ ಕಡೆಯ ದೀನದಲಿತರ ಹೋರಾಟಗಳಲ್ಲೆಲ್ಲ ಅವರು ಭಾಗವಹಿಸಿದರು. ಅನ್ಯಾಯದ ವಿರುದ್ಧ ಶ್ರಮಜೀವಿಗಳ ಎಲ್ಲ ಚಳವಳಿಗಳಲ್ಲೂ ಮುಂದಾಳಾಗಿ ನಿಲ್ಲುತ್ತಿದ್ದರು. ಶ್ರೀಸಾಮಾನ್ಯರ ವಿಷಯದಲ್ಲಿ ಮರುಕವಷ್ಟೇ ಅಲ್ಲ, ಅಪಾರ ಗೌರವ.

ಒಮ್ಮೆ ಸಾಗರದಿಂದ ಶಿವಮೊಗ್ಗೆಗೆ ರೈಲಿನಲ್ಲಿ ಮೂರನೆಯ ದರ್ಜೆಯ ಗಾಡಿಯಲ್ಲಿ ಪಯಣ. ಅವರೊಡನೆ ಹಲವರು ಸಮಾಜವಾದೀ ಪಕ್ಷದ ಕಾರ್ಯಕರ್ತರು ಇದ್ದರು. ಅವರಲ್ಲಿ ಕೆಲವರು ಕಾಲು ನೀಡಿ ಎದುರಿದ್ದವರನ್ನೂ ಗಮನಿಸದೆ ಕುಳಿತಿದ್ದರು. ಲೋಹಿಯಾ ಅವರಿಗೆ ಅದು ಸಹಿಸಲಿಲ್ಲ. ಏಕೆಂದರೆ ಎದುರಿನ ಸಾಲಿನಲ್ಲಿ ಅನೇಕ ರೈತರು ಕುಳಿತಿದ್ದರು. ‘ಇದು ಸಮಾಜವಾದಿಗಳಿಗೆ ಸಲ್ಲದ ನೆಡೆ, ನಿನ್ನ ಗೆಳೆಯರಿಗೆ ತಿಳಿಸಿ ಹೇಳು’ – ಎಂದು ತಮ್ಮ ಗೆಳೆಯರಿಗೆ ತಿಳಿಸಿದರು. ಹೀಗೆ ಸಣ್ಣ ವಿಷಯಗಳಲ್ಲಿಯೂ ಅವರು ಬಹಳ ಎಚ್ಚರದಿಂದ ಇರುತ್ತಿದ್ದರು.

ಪ್ರಜಾ ಸಮಾಜವಾದೀ ಪಕ್ಷ

೧೯೫೨ರಲ್ಲಿ ಮೊಟ್ಟಮೊದಲ ಬಾರಿಗೆ ದೇಶದ ಆದ್ಯಂತ ಮಹಾಚುನಾವಣೆ ನಡೆಯಿತು. ಎಲ್ಲ ಕಡೆಯೂ ಸಮಾಜವಾದೀ ಪಕ್ಷ ತನ್ನ ಹುರಿಯಾಳುಗಳನ್ನು ನಿಲ್ಲಿಸಿತ್ತು. ಡಾ. ಲೋಹಿಯಾ ಸ್ವತಃ ಸ್ಪರ್ಧಿಲಿಲ್ಲ. ಎಲ್ಲ ರಾಜ್ಯಗಳಲ್ಲೂ ಸಂಚರಿಸಿ ಪಕ್ಷದ ಪ್ರಜಾರ ಕಾರ್ಯದಲ್ಲಿ ತೊಡಗಿದರು. ಆಗ ಮೈಸೂರು ರಾಜ್ಯಕ್ಕೂ ಬಂದಿದ್ದರು. ಅನೇಕ ಸಭೆಗಳನ್ನು ಕುರಿತು ಭಾಷಣ ಮಾಡಿದರು. ಆ ಚುನಾವಣೆಯಲ್ಲಿ ಸಮಾಜವಾದಿಗಳಿಗೆ ಅಷ್ಟಾಗಿ ಗೆಲುವು ದೊರೆಯಲಿಲ್ಲ.

ಅನಂತರ ಒಂದು ವರ್ಷದೊಳಗಾಗಿ ಸಮಾಜವಾದೀ ಪಕ್ಷ ಹಾಗೂ ಆಚಾರ್ಯ ಕೃಪಲಾನಿಯವರು ಸ್ಥಾಪಿಸಿದ್ದ ಕಿಸಾನ್‌ ಮಜದೂರ್ ಪ್ರಜಾಪಕ್ಷಗಳೆರಡೂ ವಿಲೀನಗೊಂಡವು. ಹೊಸ ಪಕ್ಷಕ್ಕೆ ಪ್ರಜಾ ಸಮಾಜವಾದೀ ಪಕ್ಷ ಎಂದು ಹೆಸರಿಸಲಾಯಿತು. ಅದಕ್ಕೆ ಆಚಾರ್ಯ ಕೃಪಲಾನಿಯವರು ಅಧ್ಯಕ್ಷರಾದರು. ಡಾ. ರಾಮ ಮನೋಹರ ಲೋಹಿಯಾ ಪ್ರಧಾನ ಕಾರ್ಯದರ್ಶಿ ಆದರು. ಹಿಂದೆ ಆಚಾರ್ಯ ಕೃಪಲಾನಿ ಅವರು ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಲೋಹಿಯಾ ಕಾಂಗ್ರೆಸ್ಸಿನ ವಿದೇಶಾಂಗ ವಿಭಾಗದ ಮುಖ್ಯಸ್ಥರಾಗಿದ್ದರು. ಆಗ ಅವರು ಕೃಪಲಾನಿಯವರ ಕುಟುಂಬದ ಒಬ್ಬ ಸದಸ್ಯರೇ ಆಗಿದ್ದರು. ಅವರೊಂದಿಗೇ ವಾಸ. ಹೀಗಾಗಿ ಕೃಪಲಾನಿಯವರಿಗೆ ಲೋಹಿಯಾ ಅವರ ಬಗೆಗೆ ಅಪಾರ ವಾತ್ಸಲ್ಯ.

ಈ ಅವಧಿಯಲ್ಲಿ ತಿರುವಾಂಕೂರು ಕೊಚ್ಚಿ ಎರಡು ದೇಶೀಯ ಸಂಸ್ಥಾನಗಳೂ ಕೂಡಿ ಒಂದು ರಾಜ್ಯ ಆಗಿತ್ತು. ಪ್ರಜಾ ಸಮಾಜವಾದೀ ಪಕ್ಷದ ನೇತೃತ್ವದ ಸರ್ಕಾರ ಅಲ್ಲಿ ಇತ್ತು. ಪಟ್ಟಂತಾನುಪಿಳ್ಳೆ ಮುಖ್ಯಮಂತ್ರಿ. ಆ ರಾಜ್ಯದಲ್ಲಿ ಒಂದು ಕಡೆ ತೋಟದ ನೌಕರರ ಚಳುವಳಿ ನಡೆಯಿತು. ಅದಕ್ಕೆ ಸಂಬಂಧಿಸಿದಂತೆ ನೌಕರರ ಮೇಲೆ ಸರ್ಕಾರ ಗೋಲಿಬಾರು ನಡೆಸಿತು. ತಮ್ಮ ಪಕ್ಷದ ಸರ್ಕಾರವೇ ಹೀಗೆ ಮಾಡಿದುದನ್ನು ಲೋಹಿಯಾ ಅವರು ಸಹಿಸಲಿಲ್ಲ. ಪ್ರಜೆಗಳ ಹೆಸರಿನಲ್ಲಿ ಅಧಿಕಾರ ನಡೆಸುವ ಸರ್ಕಾರ ಪ್ರಜೆಗಳ ಮೇಲೆ ಗೋಲಿಬಾರು ಮಾಡತಕ್ಕದ್ದಲ್ಲ ಎಂಬುದು ಅವರ ನಿಲುವು. ಪ್ರಜಾ ಸಮಾಜವಾದೀ ಪಕ್ಷದ ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕೆಂದು ಲೋಹಿಯಾ ಆಗ್ರಪಡಿಸಿದರು. ಅದಕ್ಕಾಗಿ ಪ್ರಬಲವಾದ ತಗಾದೆಯನ್ನೇ ಹೂಡಿದರು. ಪಕ್ಷದಲ್ಲಿ ಅನೇಕ ನಾಯಕರು ಈ ವಾದವನ್ನು ಮನ್ನಿಸಲಿಲ್ಲ. ಆದರೆ ಲೋಹಿಯಾ ತಮ್ಮ ವಿಚಾರದ ಪ್ರತಿಪಾದನೆ ಬಿಡಲಿಲ್ಲ. ಕಡೆಗೆ ೧೯೫೫ರಲ್ಲಿ ಪ್ರಜಾ ಸಮಾಜವಾದೀ ಪಕ್ಷ ಲೋಹಿಯಾ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಿತು.

ಹೊಸ ಪಕ್ಷ

ಆದರೆ ಸಮಾಜವಾದೀ ಆಂದೋಲನದಲ್ಲಿ ಲೋಹಿಯಾ ಸೂಜಿಗಲ್ಲಿನಂಥ ವ್ಯಕ್ತಿ. ಅವರ ವಿಚಾರಕ್ಕೆ ಒಲಿದವರು ಅಪಾರ ಸಂಖ್ಯೆಯ ಯುವಕರೂ ಯುವತಿಯರೂ ಇದ್ದರು. ಅವರಿಗೆಲ್ಲ ಈ ಶಿಸ್ತಿನ ಕ್ರಮ ಹಿಡಿಸಲಿಲ್ಲ. ಮತ್ತೆ ಸಮಾಜವಾದೀ ಪಕ್ಷವನ್ನೇ ಕಟ್ಟುವ ಸಂಕಲ್ಪ ಮೂಡಿಬಂತು. ೧೯೫೫ರ ಡಿಸೆಂಬರ್ ತಿಂಗಳ ಕೊನೆಯ ಭಾಗದಲ್ಲಿ ಹೈದರಾಬಾದಿನಲ್ಲಿ ಲೋಹಿಯಾವಾದೀ ಸಮಾಜವಾದಿಗಳೆಲ್ಲ ಸಮ್ಮೇಳನ ಸೇರಿದರು. ವಿಚಾರ ವಿನಿಮಯ ನಡೆಯಿತು. ಕಡೆಗೆ ‘ಸೋಷಿಯಲಿಸ್ಟ್‌ ಪಕ್ಷ’ ಮತ್ತೆ ಹುಟ್ಟಿತು. ೧೯೫೫ರ ಡಿಸೆಂಬರ್ ೩೧ರ ಮಧ್ಯರಾತ್ರಿ ಅಲ್ಲಿ ಒಂದು ಪಂಜಿನ ಮೆರವಣಿಗೆ ನಡೆಯಿತು. ಹೊಸ ಪಕ್ಷದ ಉದಯದ ಘೋಷಣೆ ಹೈದರಾಬಾದಿನಲ್ಲಿ ನಡೆಯಿತು.

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

‘ಈ ದೇಶದ ೨೭ ಕೋಟಿ ಜನಕ್ಕೆ ದಿನವೊಂದರ ಉತ್ಪನ್ನ ಇಪ್ಪತ್ತೊಂದು ಪೈಸೆ.’

ಸಮಾಜವಾದೀ ಪಕ್ಷ ಒಂದು ನಿರ್ದಿಷ್ಟ ಕಾರ್ಯಕ್ರಮ ರೂಪಿಸಿತು. ಅದನ್ನು ರಚಿಸಿದವರು ಲೋಹಿಯಾ ಅವರೇ. ಮೂಲಭೂತ ಸಿದ್ಧಾಂತಗಳನ್ನು ವಿವರಿಸಿದರು. ಅದಕ್ಕೆ ತಕ್ಕ ವ್ಯಾವಹಾರಿಕ ಕಾರ್ಯಕ್ರಮಗಳನ್ನು ಸ್ಪಷ್ಟಪಡಿಸಿದರು. ತಮ್ಮ ಅಭಿಪ್ರಾಯಗಳ ಪ್ರಚಾರಕ್ಕಾಗಿ ‘ಮ್ಯಾನ್‌ಕೈಂಡ್‌’ ಎಂಬ ಇಂಗ್ಲಿಷ್‌ ಮಾಸಪತ್ರಿಕೆಯನ್ನು ಹೈದರಾಬಾದಿನಿಂದಲೇ ಪ್ರಾರಂಭಿಸಿದರು. ಅದೇ ಬಗೆಯ ‘ಜನ’ ಎಂಬ ಹಿಂದೀ ಮಾಸಪತ್ರಿಕೆಯನ್ನೂ ಹೊರಡಿಸಿದರು.

ಲೋಹಿಯಾ ವಿಚಾರಧಾರೆ

ಲೋಹಿಯಾ ಅಸಾಧಾರಣ ಪ್ರತಿಭಾಶಾಲಿ. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಿದ್ಧಾಂತಗಳನ್ನು ಕರತಲಾಮಲಕ ಮಾಡಿಕೊಂಡಿದ್ದರು. ಪಾಶ್ಚಾತ್ಯ ಜಗತ್ತಿನ ಚಿಂತಕರ ವಿಚಾರಗಳು ಅವರ ಮೇಲೆ ಪ್ರಭಾವ ಬೀರಿದ್ದವು. ಅವರಲ್ಲಿ ಮುಖ್ಯರಾದವರು ಕಾರ್ಲ್ ಮಾರ್ಕ್ಸ್. ಭಾರತದಲ್ಲಿ ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹ ಸಿದ್ಧಾಂತ ವಿಶೇಷ ಪರಿಣಾಮ ಬೀರಿತ್ತು. ನಿರಾಯುಧರಾದ ಕೋಟಿ ಕೋಟಿ ಜನ ಬ್ರಿಟಿಷ್‌ ಸಾಮ್ರಾಜ್ಯವನ್ನೇ ಎದುರಿಸಿದ ರೀತಿ ಲೋಹಿಯಾ ಅವರಿಗೆ ಬಹಳ ಮೆಚ್ಚುಗೆಯಾಯಿತು. ಸಮಾಜವಾದೀ ಸಿದ್ಧಾಂತವನ್ನು ಸತ್ಯಾಗ್ರಹದ ವಿಧಾನದ ಮೂಲಕ ಜಾರಿಗೆ ತರುವ ರೀತಿಯನ್ನು ಅವರು ಪ್ರತಿಪಾದಿಸಿದರು. ಬಡವ-ಬಲ್ಲಿದ, ಒಡೆಯ-ಆಳು ಈ ಭೇದಗಳನ್ನು ಸಾತ್ವಿಕವಾಗಿ ಬಗೆಹರಿಸಬಹುದು ಎಂದು ಅವರು ನಂಬಿದ್ದರು. ಭಾರಿ ಯಂತ್ರ ಯೂರೋಪ್‌ ಮತ್ತು ಅಮೆರಿಕದಂತಹ ಖಂಡಗಳಿಗೆ ವರದಾನವಾಗಬಹುದು. ಭಾರತದಲ್ಲಿ ಅಪಾರ ಜನಸಂಖ್ಯೆ. ಕೋಟಿಗಟ್ಟಲೆ ಜನರಿಗೆ ಕೆಲಸ ಒದಗಿಸುವುದೇ ದೊಡ್ಡ ಪ್ರಶ್ನೆ. ‘ಅದಕ್ಕೆ ಸಣ್ಣ ಸಣ್ಣ ಯಂತ್ರಗಳೇ ಉತ್ತರ. ಬಂಡವಾಳ ಶಾಹಿ ಹಾಗೂ ಕಮ್ಯೂನಿಸ್ಟ್‌ ತತ್ವಗಳಲ್ಲಿ ಅಂತರವಿದ್ದರೂ ಎರಡು ವ್ಯವಸ್ಥೆಯಲ್ಲೂ ಭಾರಿ ಯಂತ್ರಗಳಿಗೆ ಮನ್ನಣೆ. ಒಡೆತನ ಬದಲಾಯಿಸಿದ ಮಾತ್ರಕ್ಕೆ ಸಮಾನತೆ ಬರುವುದಿಲ್ಲ. ಯಂತ್ರದ ಸ್ವರೂಪವನ್ನೇ ಬದಲಾಯಿಸಬೇಕು. ಇದು ಲೋಹಿಯಾ ಅವರ ವಿಚಾರಧಾರೆ.

ದೇಶಭಾಷೆಗಳ ವಿಷಯದಲ್ಲಿ ಖಚಿತ ಅಭಿಪ್ರಾಯ ಲೋಹಿಯಾ ಅವರದು. ನೂರರಲ್ಲಿ ಇಬ್ಬರಿಗೆ ಮಾತ್ರ ಅಲ್ಪಸ್ವಲ್ಪ ಗೊತ್ತಿರುವ ಇಂಗ್ಲಿಷ್‌ ಭಾಷೆ ಸಾರ್ವಜನಿಕ ಬಳಕೆಯಿಂದ ಹೋಗಬೇಕೆಂಬುದು ಅವರ ಹಟ. ಪ್ರಜಾಪ್ರಭುತ್ವದಲ್ಲಿ ಜನತೆಯ ಭಾಷೆಯಲ್ಲೇ ಆಡಳಿತ ನಡೆಸಬೇಕು. ಆಗ ಮಾತ್ರವೇ ಸರ್ಕಾರದ ನಡವಳಿಕೆ ಎಲ್ಲ ಜನರಿಗೆ ಅರ್ಥವಾಗುತ್ತದೆ. ಅದರಿಂದ ಸಾಮಾನ್ಯರನ್ನು  ಯಾರೂ ಮೋಸಮಾಡುವಂತಿಲ್ಲ. ಶಾಲೆ ಕಾಲೇಜುಗಳಲ್ಲಿ ದೇಶ ಭಾಷೆಯೇ ಶಿಕ್ಷಣ ಮಾಧ್ಯಮ ಆಗಬೇಕು. ಅದರಿಂದ ಮಕ್ಕಳಿಗೆ ವಿದ್ಯೆ ಸುಲಭವಾಗಿ ಬರುತ್ತದೆ. ನಮ್ಮದಲ್ಲದ ಇಂಗ್ಲಿಷ್‌ ಭಾಷೆಯನ್ನು ಕಲಿಯಲು ಹತ್ತು-ಹದಿನಾಲ್ಕು ವರ್ಷ ವ್ಯರ್ಥ.ಅದಾದ ಮೇಲೆಯೂ ಅದರಲ್ಲಿ ನಾವು ಪ್ರವೀಣರಾಗುವುದಿಲ್ಲ. ಇಂಗ್ಲಿಷ್‌ ಕಲಿತವರು ಜನ ಸ್ತೋಮದಿಂದ ಬೇರೆ ಎಂದು ತಿಳಿಯುತ್ತಾರೆ. ಇವರು ಪರಾವಲಂಬಿ ಜನ. ಬುದ್ಧಿವಂತರಿಗೂ ಸಾಮಾನ್ಯರಿಗೂ ನಡುವೆ ಬಿರುಕು ಬೀಳಿಸಿದೆ ಈ ಇಂಗ್ಲಿಷ್‌ ಭಾಷೆ. ಅದರ ಬದಲು ದೇಶ ಭಾಷೆಯೇ ಎಲ್ಲ ರಂಗಗಳಲ್ಲಿ ಜಾರಿಗೆ ಬರಬೇಕು. ನ್ಯಾಯಾಲಯದಲ್ಲಿ, ಪೇಟೆಯಲ್ಲಿ ಜನ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ದೇಶಭಾಷೆಗೆ ಮೊದಲ ಸ್ಥಾನ ಕೊಡಬೇಕು. ಇದು ಲೋಹಿಯಾ ಅವರ ವಿಚಾರಧಾರೆ.

ನಮ್ಮ ಸಮಾಜದ ಅರ್ಧಭಾಗ ಮಹಿಳೆಯರು. ಭಾರತದಲ್ಲಿ ಅವರ ಸ್ಥಿತಿ ಶೋಚನೀಯ. ಅಡಿಗೆ ಮಾಡಿ, ಮಕ್ಕಳು ಹಡೆದು ಗಂಡಸಿನ ಅಡಿಯಾಳಾಗಿರುವುದೇ ಆಕೆಯ ಗತಿ. ಹೆಣ್ಣು ಗಂಡಿಗೆ ಸಮವಲ್ಲ ಇದು ಬೇರು ಬಿಟ್ಟ ಕುರುಡು ನಂಬಿಕೆ. ಮಹಿಳೆಗೆ ಕಾನೂನಿಲ್ಲಿ ಸಮಾನತೆ ಸಿಕ್ಕಿದರೂ ಕಾರ್ಯತಃ ಅದು ದೊರೆತಿಲ್ಲ. ಅದಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸ್ಥಾನ ಕಾದಿರಿಸಬೇಕು. ಮನೆಗೆಲಸದ ಜೀತದಿಂದ ಅವರನ್ನು ಪಾರುಮಾಡಬೇಕು. ಅವರಲ್ಲಿ ಅಡಗಿರುವ ಶಕ್ತಿಯನ್ನೆಲ್ಲ ಬೆಳಕಿಗೆ ತರಬೇಕು. ಹೆಣ್ಣು ಬಂಧಿಯಾಗಿರುವವರೆಗೆ ಸಮಾಜ ಮುಂದುವರಿಯುವುದಿಲ್ಲ. ಸಮಾಜ ಪದ್ಧತಿಯಲ್ಲಿ ಬೇರು ಬಿಟ್ಟಿರುವ ಕಂದಾಚಾರಗಳನ್ನು ತೊಲಗಿಸಬೇಕು. ಹಳ್ಳಿಯ ಹೆಣ್ಣು ಮಕ್ಕಳಿಂದ ಹಿಡಿದು ಎಲ್ಲರಿಗೂ ನ್ಯಾಯ ದೊರೆಯಬೇಕು. ಇದಕ್ಕಾಗಿ ಪ್ರಬಲ ಪಟ್ಟು ಹಿಡಿದರು ಲೋಹಿಯಾ. ಅವರ ನಂಬಿಕೆಯಂತೆ ನಾರಿಯರ ಬಿಡುಗಡೆ ಸಮಾಜ ಕ್ರಾಂತಿಯ ಅಡಿಗಲ್ಲಾಗಿತ್ತು. ಅದಿಲ್ಲದೆ ಪ್ರಗತಿ ಇಲ್ಲ-ಅವರ ದೃಢವಾದ ಅಭಿಪ್ರಾಯ.

ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಲೋಹಿಯಾ ತಜ್ಞರೆಂಬ ಕೀರ್ತಿ ಪಡೆದಿದ್ದರು. ರಷ್ಯದ ಗುಂಪಿಗಾಗಲಿ, ಅಮೆರಿಕದ ಗುಂಪಿಗಾಗಲಿ ಭಾರತ ಸೇರಬಾರದೆಂಬ ನೀತಿ ಅವರದು. ಅಲಿಪ್ತವಾಗಿ ಉಳಿಯಬೇಕು. ಹೀಗೆ ಉಳಿಯುವುದೆಂದರೆ ಕೆಲವೊಮ್ಮೆ ರಷ್ಯಕ್ಕೆ ‘ಸೈ’ ಎನ್ನುವುದು, ಮತ್ತೆ ಕೆಲವೊಮ್ಮೆ ಅಮೆರಿಕಕ್ಕೆ ‘ಹೂಂ’ ಗುಟ್ಟುವುದಲ್ಲ ಎನ್ನುತ್ತಿದ್ದರು. ಏಷ್ಯಾ ಹಾಗೂ ಆಫ್ರಿಕಗಳ ಸ್ವತಂತ್ರ ರಾಷ್ಟ್ರಗಳು ತಮ್ಮದೇ ಆದ ಮೂರನೆಯ ಬಣವೊಂದನ್ನು ರಚಿಸಿಕೊಳ್ಳಬೇಕೆಂಬುದು ಅವರ ಅಭಿಪ್ರಾಯವಾಗಿತ್ತು.

ಮನುಷ್ಯ ಮನುಷ್ಯನನ್ನು ಮೈ ಬಣ್ಣದ ಆಧಾರದ ಮೇಲೆ ದ್ವೇಷಿಸುವುದು ಸಲ್ಲ. ವರ್ಣದ್ವೇಷ ಮಾನವ ಕುಲಕ್ಕೆ ಮಹಾ ದ್ರೋಹ, ಎಲ್ಲ ಮಾನವರೂ ಸಮಾನರು. ಲೋಹಿಯಾ ಈ ತತ್ವದ ನಿಷ್ಠಾವಂತ ಅನುಯಾಯಿ. ಹಾಗೆಂದೇ ಅಮೆರಿಕದ ಮಿಸಿಸಿಪಿಯ ಜಾಕ್‌ಸನ್‌ ಎಂಬ ಸ್ಥಳದ ಉಪಹಾರ ಗೃಹದಲ್ಲಿ ನಡೆದ ವರ್ಣದ್ವೇಷದ ಪ್ರಕರಣದಲ್ಲಿ ಲೋಹಿಯಾ ಸತ್ಯಾಗ್ರಹ ಹೂಡಿದರು. ಅವರ ಬಂಧನವೂ ಆಯಿತು.

ರಾಮ ಮನೋಹರ ಲೋಹಿಯಾ ತಮ್ಮ ಐವತ್ತೇಳು ವರ್ಷಗಳ ಜೀವಮಾನದಲ್ಲಿ ಇಪ್ಪತ್ತು ಬಾರಿ ಸೆರೆಮೆನವಾಸ ಅನುಭವಿಸಿದರು. ಸ್ವತಂತ್ರ ಭಾರತ ಸರ್ಕಾರವೇ ಅವರನ್ನು ಹನ್ನೆರಡು ಬಾರಿ ಬಂಧಿಸಿತ್ತು. ಸತ್ಯಾಗ್ರಹ ತತ್ವವನ್ನು ನೆರೆನಂಬಿದ್ದ ಅವರು ಅನ್ಯಾಯ ಸಣ್ಣದೇ ಇರಲಿ, ದೊಡ್ಡದೇ ಇರಲಿ ಅದರ ಎದುರು ಹೋರಾಡುವುದೇ ತಮ್ಮ ಪರಮ ಧರ್ಮ ಎಂದು ತಿಳಿದಿದ್ದರು.

ಲೋಹಿಯಾ ಹಿಂಸೆಯನ್ನು ನಂಬಿದವರಲ್ಲ. ಸ್ವಭಾವತಃ ತರಬೇತಿಯಿಂದ ಅಹಿಂಸಾತ್ಮಕ ವ್ಯಕ್ತಿ. ಕೇಡನ್ನು ಕಂಡರೆ ಕಿಡಿಕಿಡಿ ಆಗುತ್ತಿದ್ದರು. ಆದರೆ ತಾಳ್ಮೆ ಗೆಡುತ್ತಿರಲಿಲ್ಲ. ಅಹಿಂಸೆ ಹೇಡಿತನಕ್ಕೆ ಒಂದು ಮುಖವಾಡ ಅಲ್ಲ ಎಂದು ಬಾರಿಬಾರಿಗೂ ಹೇಳುತ್ತಿದ್ದರು. ನೂರು ವರ್ಷ ಕಾಲ ಆಕಳಿನಂತೆ ಸಾಧುತನ ತೋರಿಸಿ, ಕ್ಷಣಕಾಲ ಹುಲಿಯಂತೆ ಅಬ್ಬರಿಸುವುದು ಭಾರತೀಯರ ಜಾಯಮಾನ. ಅನುಗಾಲವೂ ಮನುಷ್ಯರಂತೆ ತಲೆ ಎತ್ತಿ ನಿಲ್ಲಿ ಎಂದು ಸದಾ ಹೇಳುತ್ತಿದ್ದರು. ತಾವು ಹಾಗೆಯೇ ನಡೆಯುತ್ತಿದ್ದರು. ಜಗತ್ತಿನ ಯಾವ ಶಕ್ತಿಗೂ ಅವರು ಮಣಿಯುವ ಚೇತನವಾಗಿರಲಿಲ್ಲ.

ಗದ್ದುಗೆಗಿಂತ ಗುದ್ದಲಿಯೇ ಇರಲಿ – ಎಂದು ನಂಬಿದವರು ಲೋಹಿಯಾ. ದೇಶವನ್ನು ಕಟ್ಟಬೇಕು. ನಮ್ಮದು ಜನನಿಬಿಡ ದೇಶ. ಉಪಕರಣ ಕಡಿಮೆ. ಶ್ರಮಶಕ್ತಿ ಅಪಾರ. ಅದನ್ನು ಪೂರಾ ಬೆಳೆಸಿಕೊಳ್ಳಬೇಕು, ಎಲ್ಲರೂ ಗುದ್ದಲಿ ಹಿಡಿದರೆ ಅದು ಸಾಧ್ಯ ಎಂದು ಯಾವಾಗಲೂ ಹೇಳುತ್ತಿದ್ದರು. ದೇಶಕ್ಕಾಗಿ ಪ್ರತಿ ದೃಢಕಾಯನೂ ದಿನಕ್ಕೆ ಒಂದು ಗಂಟೆ ದುಡಿತ ದಾನ ಮಾಡಿದರೆ ದೇಶ ಶ್ರೀಮಂತ ವಾದೀತೆಂಬ ಕಲ್ಪನೆ ಅವರದಾಗಿತ್ತು. ಗುದ್ದಲಿ – ಸೆರೆಮನೆ ಅವರ ಕಾರ್ಯಕ್ರಮದ ಎರಡು ಮುಖ.

‘ದಿನಕ್ಕೆ ವರಮಾನ ಇಪ್ಪತ್ತೊಂದು ಪೈಸೆ

೧೯೬೨ರ ಮಹಾ ಚುನಾವಣೆಯಲ್ಲಿ ಆಗಿನ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರು ಅವರ ವಿರುದ್ದ ಉತ್ತರ ಪ್ರದೇಶದ ಫೂಲ್ಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತರು. ಆದರೆ ಅವರದು ದೇಶದ ಅತಿ ಶಕ್ತಿಶಾಲಿ ವ್ಯಕ್ತಿಗೂ ಸೆಡ್ಡು ಹೊಡಯುವ ಸಾಹಸ.

ಅನಂತರ ೧೯೬೩ರ ಮೇ ತಿಂಗಳಲ್ಲಿ ಉತ್ತರ ಪ್ರದೇಶದ ಫರೂಕಾಬಾದಿನಿಂದ ಲೋಕಸಭೆಗೆ ಮರು ಚುನಾವಣೆ ನಡೆಯಿತು. ಆಗ ನಿಂತು ಗೆದ್ದು ಲೋಕಸಭೆಯನ್ನು ಪ್ರವೇಶಿಸಿದರು. ಲೋಕಸಭೆಯನ್ನು ಜನಮನದ ಕನ್ನಡಿಯಾಗಿಸಬೇಕು ಎಂದು ಅವರ ಆಸೆ. ಮೊಟ್ಟ ಮೊದಲು ಮಾಡಿದ ಭಾಷಣವೇ ಚರಿತ್ರಾರ್ಹ. ‘ಈ ದೇಶದ ಸುಮಾರು ೨೭ ಕೋಟಿ ಜನಕ್ಕೆ ದಿನವೊಂದರ ಉತ್ಪನ್ನ ಇಪ್ಪತ್ತೊಂದು ಪೈಸೆ’ – ಈ ಮಾತನ್ನು ಲೋಹಿಯಾ ಲೋಕಸಭೆಯಲ್ಲಿ ಹೇಳಿದಾಗ ಸರ್ಕಾರಿ ವಕ್ತಾರರು ಕಕ್ಕಾಬಿಕ್ಕಿ ಆದರು. ಇಂಥ ಕಡುಬಡವರ ಸ್ಥಿತಿ ಸುಧಾರಿಸಲು ಮೊಟ್ಟ ಮೊದಲ ಗಮನಕ್ಕಾಗಿ ವಾದಿಸಿದರು. ಪ್ರಧಾನಮಂತ್ರಿ ರಕ್ಷಣೆಗಾಗಿ ದಿಡವೊಂದಕ್ಕೆ ಈ ಬಡದೇಶ ಇಪ್ಪತ್ತೈದು ಸಾವಿರ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಅವರು ಪ್ರತಿಪಾದಿಸಿದಾಗ ಎಲ್ಲರೂ ಬೆಕ್ಕಸ ಬೆರಗಾದರು. ಅದನ್ನು ವಿವರಿಸಿ ಒಂದು ಪುಸ್ತಕವನ್ನೆ ಬರೆದರು. ಲೋಕ ಪ್ರಿಯ ನಾಯಕರು ಜನತೆಯಿಂದ ದೂರವಾಗಬಾರದೆಂದು ಅವರ ವಾದ.

ಸರಳ ಜೀವಿ

ಲೋಹಿಯಾ ನಾಯಕರಾಗಿದ್ದರೂ ಬಹಳ ಸರಳ ಜೀವಿ. ಆಡಂಬರ ಅವರಿಗೆ ಆಗುತ್ತಿರಲೇ ಇಲ್ಲ. ಅವರ ಖಾಸಗಿ ವಸ್ತುಗಳೂ ಹೆಚ್ಚಿರಲಿಲ್ಲ. ಉಡುವ ಧೋತರ, ತೊಡುವ ಅಂಗಿಯ ವಿಷಯದಲ್ಲಿಯೂ ಅವರಿಗೆ ಗಮನ ಇರುತ್ತಿರಲಿಲ್ಲ. ಒಮ್ಮೆ ಪ್ರವಾಸದಲ್ಲಿ ಅವರ ಪೆಟ್ಟಿಗೆ ತೆಗೆದು ನೋಡಿದಾಗ ಎಲ್ಲವೂ ಹರಿದಿದ್ದ ಅಂಗಿಗಳೇ ಇದ್ದವು. ಕಡೆಗೆ ತುರ್ತಾಗಿ ಪೇಟೆಯಿಂದ ಜುಬ್ಬಾ ಹೊಲಿಸಿ ತರಬೇಕಾಯಿತು. ತಮ್ಮ ಅಗತ್ಯಗಳ ಬಗೆಗೆ ಎಂದೂ ಚಿಂತಿಸಲೇ ಇಲ್ಲ.

ಭಾರತದ ಮತ್ತೊಂದು ಪಿಡುಗು-ಜಾತಿ. ಮೇಲು, ಕೀಳಿನ ನಾನಾ ಶ್ರೇಣಿ. ಆಸ್ತಿಯ ಬಲ, ಮೇಲು ಜಾತಿಯ ಬಲ, ಇಂಗ್ಲಿಷ್‌ ವಿದ್ಯೆಯ ಬಲ, ಇವು ಮೂರರಲ್ಲಿ ಯಾವುದಿದ್ದರೂ ಗೆಲ್ಲಬಲ್ಲವರಿದ್ದಾರೆ. ಇವು ಮೂರು ಇಲ್ಲದ ಪಾಮರ ಜನಕೋಟಿಯೇ ಹೆಚ್ಚು. ಸರ್ಕಾರಿ ನೌಕರರಲ್ಲಿ ನೂರಕ್ಕೆ ಅರವತ್ತು ಭಾಗ ಹಿಂದುಳಿದ ಜಾತಿಯ ಜನಕ್ಕೆ ಹಾಗೂ ಹೆಂಗಸರಿಗೆ ಕಾದಿರಿಸಬೇಕು. ರಾಜಕೀಯ ಸ್ಥಾನಮಾನಗಳಲ್ಲಿ ಹಾಗೆಯೇ. ಇದು ಲೋಹಿಯಾ ಅವರ ಆಚಲ ನಿಲುವು.

ಎಲ್ಲರಿಗೂ ಸಮಾನ ಅವಕಾಶ-ಇದೊಂದು ಸಿದ್ಧಾಂತ. ಶತಮಾನಗಳಿಂದ ತುಳಿತಕ್ಕೆ ಸಿಕ್ಕವರಿಗೂ ಎಲ್ಲ ರೀತಿಯಿಂದ ಮುಂದುವರಿದವರಿಗೂ ಪೈಪೊಟಿ ಏರ್ಪಟ್ಟರೆ ಮುಂದುವರಿದವರೇ ಗೆಲ್ಲುತ್ತಾರೆ. ಆದಕಾರಣ ಹಿಂದುಳಿದ ಜನರಿಗೆ ವಿಶೇಷ ಅವಕಾಶವೇ ಸರಿ. ಅದೇ ನ್ಯಾಯೋಚಿತ. ಈ ಸಾಮಾಜಿಕ ಸಿದ್ಧಾಂತದ ಆಧಾರದ ಮೇಲೆ ತಮ್ಮ ಕಾರ್ಯಕ್ರಮಗಳನ್ನು ಯೋಜಿಸಿದರು.

ಪರಂಪರೆಯಿಂದಲೂ ಭಾರತದಲ್ಲಿ ನುಡಿಗೂ ನಡೆಗೂ ಅಂತರ. ಇದನ್ನು ಮುಚ್ಚುವ ಅಗತ್ಯವನ್ನು ಲೋಹಿಯಾ ಒತ್ತಿ ಒತ್ತಿ ಹೇಳುತ್ತಿದ್ದರು. ಅವರು ಯಾವ ಖಾಸಗಿ ಆಸ್ತಿಯನ್ನೂ ಹೊಂದಿರಲಿಲ್ಲ. ಲೋಕಸಭಾ ಸದಸ್ಯರಾಗುವವರೆಗೆ ಅವರಿಗೆ ಯಾವ ಆದಾಯವೂ ಇರಲಿಲ್ಲ. ಸ್ನೇಹಿತರು, ಹಿತೈಷಿಗಳೇ ಅವರ ಯೋಗಕ್ಷೇಮವನ್ನೆಲ್ಲ ನೋಡಿಕೊಳ್ಳುತ್ತಿದ್ದರು.

ದೆಹಲಿಯಲ್ಲಿ ಅವರು ಇದ್ದ ಮನೆ ಸಹ ಕಾರ್ಯಕರ್ತರಿಗೆಲ್ಲ ತೆರವಾಗಿರುತ್ತಿತ್ತು. ೧೯೬೭ರಲ್ಲಿ ಕನೌಜ ಕ್ಷೇತ್ರದಿಂದ ಮತ್ತೆ ಲೋಕಸಭೆಗೆ ಆರಿಸಿ ಬಂದರು. ೧೯೬೭ರ ಸೆಪ್ಟೆಂಬರ್ ನಲ್ಲಿ ಒಂದು ಶಸ್ತ್ರಚಿಕಿತ್ಸೆಗೆ ಆಸ್ಪತ್ರೆ ಸೇರಿದರು. ಶಸ್ತ್ರಕ್ರಿಯೆ ನಡೆಯಿತು. ಆದರೆ, ಅದರ ಪರಿಣಾಮವಾಗಿ ಅವರು ಚೇತರಿಸಿಕೊಳ್ಳಲೇ ಇಲ್ಲ. ೧೯೬೭ರ ಅಕ್ಟೋಬರ್ ೧೨ ರಂದು ಲೋಹಿಯಾ ಇಲ್ಲವಾದರು.

ಬಹುಮುಖ ಪ್ರತಿಭಾಶಾಲಿ

ಬಹುಮುಖ ಪ್ರತಿಭಾಶಾಲಿ ರಾಮ ಮಹೋಹರ ಲೋಹಿಯಾ. ಅವರ ಬುದ್ಧಿ ಬಹುತೀಕ್ಷ್ಣ. ಅವರ ಬರಹ ತೀರಾ ಹರಿತ. ಮಾತುಗಾರಿಗೆಯಲ್ಲೂ ಪ್ರಚಂಡರು. ಸಾರ್ವಜನಿಕ ಸಭೆಗಳಲ್ಲೆಲ್ಲ ಹಿಂದೀ ಭಾಷೆಯಲ್ಲೇ ಮಾತನಾಡುತ್ತಿದ್ದರು. ಆಯಾ ರಾಜ್ಯ ಭಾಷೆಯಲ್ಲಿ ಭಾಷಾಂತರ ನಡೆಯುತ್ತಿತ್ತು. ಇಂಗ್ಲಿಷ್‌, ಜರ್ಮನ್‌, ಫ್ರೆಂಚ್‌ ಭಾಷೆಗಳು ಅವರಿಗೆ ತುಂಬಾ ಚೆನ್ನಾಗಿ ತಿಳಿದಿತ್ತು. ಬಂಗಾಳಿ ಭಾಷೆಯಲ್ಲೂ ಅವರಿಗೆ ಪರಿಣತಿ ಇತ್ತು. ಅವರ ತರ್ಕಶಕ್ತಿ ತೀಕ್ಷ್ಣ. ಯಾವುದೇ ವಿಷಯದ ಅಧ್ಯಯನಕ್ಕೆ ಇಳಿದರೆ ಅದರ ಆಳ ಅಗಲವೆಲ್ಲವನ್ನೂ ಶೋಧಿಸಿ ಬಿಡುತ್ತಿದ್ದರು. ಅರ್ಥಶಾಸ್ತ್ರದ ಕಡೆ ವಿಶೇಷ ಒಲವು. ಅಂಕಿ ಸಂಖ್ಯೆಗಳಲ್ಲಿ ಅವರನ್ನು ಯಾರೂ ಮೋಸಗೊಳಿಸುವುದು ಸಾಧ್ಯವಿರಲಿಲ್ಲ.

ಅವರು ಸಾಕಷ್ಟು ಗ್ರಂಥಗಳನ್ನು ಬರೆದಿದ್ದಾರೆ. ‘ಮಾರ್ಕ್ಸ್, ಗಾಂಧಿ ಮತ್ತು ಸಮಾಜವಾದ’ – ಎಂಬುದು ಅವರ ಉದ್ಗಂಥ. ‘ಭಾರತದ ವಿಭಜನೆಯ ಅಪರಾಧಿಗಳು’, ‘ಇತಿಹಾಸ ಚಕ್ರ’, ‘ರಾಜಕೀಯದ ಮಧ್ಯೆ ಬಿಡುವು’, ‘ಅಧಿಕಾರ ಸಂಕಲ್ಪ’ ಇವು ಅವರ ಕೃತಿಗಳಲ್ಲಿ ಕೆಲವು. ಸಮ್ಮೇಳನ-ಸಭೆಗಳಲ್ಲಿ ಸಾಮಾನ್ಯವಾಗಿ ನಾಯಕರೆಲ್ಲ ವೇದಿಕೆಯ ಮೇಲೆ ಕುಳಿತಿರುತ್ತಿದ್ದರು. ಲೋಹಿಯಾ ಇದಕ್ಕೆ ಯಾವಾಗಲೂ ಅಪವಾದ. ಸದಾ ಪ್ರತಿನಿಧಿಗಳ ಸಮೂಹದಲ್ಲೇ ಇರುತ್ತಿದ್ದರು. ಒಮ್ಮೆ ಮಧ್ಯಪ್ರದೇಶದ ಒಂದು ನಗರದಲ್ಲಿ ಪ್ರಜಾ ಸಮಾಜವಾದೀ ಪಕ್ಷದ ವಿಶೇಷ ಅಧಿವೇಶನ ಸೇರಿತು. ಕಾಂಗ್ರೆಸಿನೊಡನೆ ಸಹಕಾರ ಇರಬೇಕೆ ಎಂಬುದು ಪ್ರಧಾನ ಚರ್ಚಾ ವಿಷಯ. ಅಶೋಕ ಮೆಹತಾ ಸಹಕರಿಸಬೇಕೆಂದು ವಾದಿಸಿದರು. ಲೋಹಿಯಾ ಅದಕ್ಕೆ ನೇರ ವಿರೋಧಿ. ತಮ್ಮ ವಾದವನ್ನು ತುಂಬ ಸ್ಪಷ್ಟವಾಗಿ ಮಂಡಿಸಿದರು. ಮಾತು. ಹೃದಯ ಮುಟ್ಟಿತು. ಎಲ್ಲರ ಬುದ್ಧಿಯನ್ನೂ ಎಚ್ಚರಿಸಿತು. ಕಡೆಗೆ ಜಯಪ್ರಕಾಶ ನಾರಾಯಣರು ‘ಸಹಕಾರ ಸಾಧ್ಯವಿಲ್ಲ’ ಎಂದೂ ನೆಹರೂ ಅವರಿಗೆ ತಿಳಿಸುವೆ ಎಂದು ಚರ್ಚೆ ಮುಗಿಸಿಬಿಟ್ಟರು. ಹೀಗೆ ಲೋಹಿಯಾ ಸಮ್ಮೇಳನವನ್ನೆ ಗೆದ್ದುಕೊಂಡರು.

‘ರಾಮ, ಕೃಷ್ಣ, ಶಿವ’

ರಾಮ ಮನೋಹರ ಲೋಹಿಯಾ ರಾಜಕಾರಣಿಯಾಗಿದ್ದರೂ ನಮ್ಮ ಪುರಾಣಗಳನ್ನು ಚೆನ್ನಾಗಿ ಅರಿತಿದ್ದರು. ಅವನ್ನು ಆಧುನಿಕ ದೃಷ್ಟಿಯಿಂದ ಬಗೆದು ಬಗೆದು ನೋಡುತ್ತಿದ್ದರು. ಅವರು ಪುರಾಣ ಪುರುಷರಾದ ‘ರಾಮ, ಕೃಷ್ಣ, ಶಿವ’-ಅವರನ್ನು ಕುರಿತು ಮನೋಜ್ಞ ಲೇಖನ ಬರೆದಿದ್ದಾರೆ. ಅದರಲ್ಲಿ ಬರೆದಿರುವ ಎಷ್ಟೋ ಮಾತುಗಳು ಮಾರ್ಮಿಕ, ಮನನೀಯ. ಅವರು ಹೇಳುತ್ತಾರೆ: “ರಾಮ, ಕೃಷ್ಣ, ಪ್ರಾಯಶಃ ಇತಿಹಾಸದ ವ್ಯಕ್ತಿಗಳೇ. ಶಿವ ಕೂಡ ಅಂಥ ದೊಡ್ಡ ಗಂಗಾನದಿಗೆ ಕಾಲುವೆಯನ್ನಗೆದ ನಿರ್ಮಾಣ ತಜ್ಞನಿರಬಹುದು. ಅವನೊಬ್ಬ ಪಶುವೈದ್ಯನೋ ಮಹಾ ಪ್ರೇಮಿಯೋ ಅನುಪಮ ದಾನಶೀಲನೋ ಆಗಿದ್ದಿರಬಹುದು.” ಪುರಾಣದ ವ್ಯಕ್ತಿಗಳ ಕಲ್ಪನೆ ಅದನ್ನು ಸೃಷ್ಟಿಸಿದ ಜನಪದದ ಕನಸು ಕೋಟಲೆಗಳ ದಾಖಲೆ ಎಂದಿದ್ದಾರೆ ಅವರು. ಚರಿತ್ರೆಯ ವ್ಯಕ್ತಿಗಳು ಕೇವಲ ಕೆಲವರಿಗೆ ಮಾತ್ರ ಗೊತ್ತು. ಪುರಾಣದ ವ್ಯಕ್ತಿಗಳು ಭಾರತದ ಬಹುಪಾಲು ಜನರಿಗೆ ಜೀವನದಲ್ಲಿ ಬೆರೆತುಹೋದ ಸಂಗತಿ ಎಂಬುದನ್ನು ಲೋಹಿಯಾ ಚೆನ್ನಾಗಿ ಅರಿತಿದ್ದರು.

ರಾಮನ ವಿಷಯದಲ್ಲಿ, ರಾಮಾಯಣ ಕುರಿತು ಅವರಿಗೆ ಅಪಾರ ಪ್ರೇಮ. ರಾಮನನ್ನು ‘ಮರ್ಯಾದಾ ಪುರುಷೋತ್ತಮ’, ಪರಿಮಿತ ವ್ಯಕ್ತಿ ಎಂದು ಕೊಂಡಾಡಿದ್ದಾರೆ. ರಾಮಾಯಣ ಮೇಳವೊಂದನ್ನು ಅಯೋಧ್ಯೆಯ ಬಳಿ ಏರ್ಪಡಿಸಿದ್ದರು. ಅವರು ಹುಟ್ಟಿದ ಊರು ಫೈಜಾಬಾದ್‌ ಸಹ ಅಯೋಧ್ಯೆ ಬಳಿ ಇರುವ ಊರು.

ರಾಮ ಮತ್ತು ಕೃಷ್ಣರ ವ್ಯಕ್ತಿತ್ವ ಕುರಿತು ಲೋಹಿಯಾ ಅವರು ಬರೆದ ಮಾತು ತುಂಬ ಗಮನಾರ್ಹ: “ರಾಮ ವಿಷ್ಣುವಿನ ಅಷ್ಟಾಂಶಗಳಿಂದ ಹುಟ್ಟಿದವ. ಅವನದು ಸೀಮಿತ ವ್ಯಕ್ತಿತ್ವ. ಕೃಷ್ಣನಲ್ಲಿ ವಿಷ್ಣುವಿನ ಹದಿನಾರು ಅಂಶಗಳಿದ್ದವು. ಅವನದು ಸಮುದ್ರ ಸಮನಾದ ತುಂಬು ವ್ಯಕ್ತಿತ್ವ.” ರಾಮ ಮಾತನಾಡಿದುದಕ್ಕಿಂತ ಇತರರ ಮಾತು ಕೇಳಿದ್ದೇ ಹಚ್ಚೆಂದು ಅವರು ಬರೆದಿದ್ದಾರೆ.

ಇಂದು ನಮ್ಮ ದೇಶದಲ್ಲಿ ಕ್ರಿಕೆಟ್‌ ಆಟ ಅತಿ ಜನಪ್ರಿಯ. ಅದರಲ್ಲೂ ನಗರಗಳಲ್ಲಿ ಪಟ್ಟಣಗಳಲ್ಲಿ. ಇದು ವಿರಾಮಕಾಲದ ಆಟ. ಬ್ರಿಟಿಷ್‌ ಸಾಮ್ರಾಜ್ಯಶಾಹೀತನ ಬಿಟ್ಟು ಹೋದ ಬಳುವಳಿ. ಫುಟ್‌ಬಾಲ್‌, ಹಾಕಿ ಆಟಗಳಂತೆ ಇದರಲ್ಲಿ ಅಂಗಸಾಧನೆ ಆಗುವುದಿಲ್ಲ. ಒಲಂಪಿಕ್‌ ಕ್ರೀಡಾಕೂಟಗಳಲ್ಲಿ ಮನ್ನಣೆ ಪಡೆಯುವಂತೆ ನಮ್ಮ ದೇಶ ಕ್ರೀಡಾ ರಂಗದಲ್ಲಿ ಮುನ್ನಡೆಯಬೇಕೆಂದು ವಾದಿಸಿದರು ಲೋಹಿಯಾ. ಕ್ರಿಕೆಟ್‌ ಆಟವನ್ನು ಅವರು ಪುರಸ್ಕರಿಸಲಿಲ್ಲ.

ವಿಶ್ವೇಶರಯ್ಯನವರೊಂದಿಗೆ

ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರನ್ನು ಲೋಹಿಯಾ ಭೇಟಿಯಾದರು. ಆಗ ವಿಶ್ವೇಶ್ವರಯ್ಯನವರಿಗೆ ತೊಂಬತ್ತಾರು ವರ್ಷ. ಮಹಾತ್ಮ ಗಾಂಧಿ ಅವರ ನಂತರ ದೇಶದ ದ್ವಿತೀಯ ಮಹಾಪುರುಷ ಎಂದು ಲೋಹಿಯಾ ಅವರನ್ನು ಬಣ್ಣಿಸಿದ್ದಾರೆ. ಒಂದು ನೂರು ನಿಮಿಷ ಕಾಲ ನಡೆದ ಭೇಟಿಯಲ್ಲಿ ಎಂ.ವಿ. ಅವರ ನೆನಪು ಒಮ್ಮೆಯು ಸೋಲಲಿಲ್ಲ ಎಂದು ಸ್ಮರಿಸಿಕೊಂಡಿದ್ದಾರೆ. ಅವರ ಹರಿತವಾದ ಬುದ್ಧಿ ಶಕ್ತಿ, ಅಸಾಧ್ಯ ಪರಿಶ್ರಮದ ಬದುಕು, ಇಳಿವಯಸ್ಸಿನಲ್ಲೂ ಅಚ್ಚುಕಟ್ಟು-ಇವನ್ನು ಮುಕ್ತ ಪ್ರಶಂಸೆ ಮಾಡಿದ್ದಾರೆ. ಒಂದು ನೂರು ವರ್ಷಗಳ ಹಿಂದೆ ಭಾರತದ ಉಕ್ಕು ಇಂಗ್ಲೆಂಡಿನ ಗ್ಲಾಸ್ಗೋದಲ್ಲಿ ಮಾರಾಟವಾಗುತ್ತಿದ್ದುದನ್ನು ವಿಶ್ವೇಶ್ವರಯ್ಯನವರು ಲೋಹಿಯಾ ಅವರಿಗೆ ತಿಳಿಸಿದರಂತೆ. ಯಾವುದೇ ದರ್ಜೆಯ ಉಕ್ಕನ್ನು, ಕಬ್ಬಿಣವನ್ನು ಗೃಹ ಕೈಗಾರಿಕೆಯಲ್ಲಿ ತಯಾರಿಸಬಹುದು ಎಂದು ಎಂ.ವಿ. ಅವರು ತಿಳಿಸಿದ್ದನ್ನು ಲೋಹಿಯಾ ಬರೆದಿದ್ದಾರೆ. ಈಜಿಪ್ಟ್‌ನ ಆಸ್ವಾನ್‌ ಆಣೆಕಟ್ಟನ್ನು ನೋಡಿಬಂದಿದ್ದರಿಂದ ಕಾವೇರಿ ಕಣಿವೆಯ ಅಗತ್ಯಗಳಿಗೆ ತಕ್ಕ ನಕ್ಷೆ ತಯಾರಿಸಲು ತಮಗೆ ಕಷ್ಟವಾಗಲಿಲ್ಲ.

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ವಿಶ್ವೇಶ್ವರಯ್ಯನವರೊಡನೆ,

ಭಾಷೆ ಅಕ್ಷರ ಶಿಕ್ಷಣಗಳ ವಿಷಯದಲ್ಲಿಯೂ ಲೋಹಿಯಾ ತುಂಬ ಆಸಕ್ತಿ ಇತ್ತು. ಬೇರೆ ಬೇರೆ ಭಾರತೀಯ ಭಾಷೆಗಳ ಲಿಪಿಗಳಲ್ಲಿ ಕಂಡು ಬರುವ ಹೋಲಿಕೆಯನ್ನು ಅವರು ಚೆನ್ನಾಗಿ ಅಧ್ಯಯನ ಮಾಡಿದ್ದರು. ನಮ್ಮ ದೇಶದ ಎಲ್ಲ ಭಾಷೆಗಳಿಗೂ ಒಂದೇ ಲಿಪಿಯನ್ನೇಕೆ ಬಳಸಬಾರದು ಎಂಬುದು ಅವರಿಗೆ ಬಂದಿದ್ದ ಒಂದು ಜಿಜ್ಞಾಸೆ. ಬೇರೆ ಬೇರೆ ಲಿಪಿಗಳಿಂದ ದೇಶದ ವೇಳೆ, ಹಣ ಮತ್ತು ಮನಸ್ಸು ಹಾಳು ಎಂಬುದನ್ನು ಅವರು ಆಗಾಗ ಒತ್ತಿ ಹೇಳುತ್ತಿದ್ದರು. ಯೂರೋಪಿನಂತೆ ನಮಗೂ ಒಂದೇ ಲಿಪಿ ಇದ್ದರೆ ಚೆನ್ನ ಎಂದು ಅವರ ಅಭಿಮತ.

ಲೋಹಿಯಾ ಅನೇಕ ಸಲ ಪ್ರಪಂಚ ಪರ್ಯಟನ ಮಾಡಿದ್ದರು. ಒಮ್ಮೆ ಪಾಸ್‌ಪೋರ್ಟ್ ಇಲ್ಲದೆಯೇ ಬರ್ಮಾದೇಶಕ್ಕೂ ಹೋಗಿ ಬಂದಿದ್ದರು. ಇಡೀ ಜಗತ್ತನ್ನೇ ಪಾಸ್‌ಪೋರ್ಟ್ ಇಲ್ಲದೆ ಸಂಚರಿಸುವುದು ಅವರ ಹಂಬಲಗಳಲ್ಲಿ ಒಂದಾಗಿತ್ತು.

ವಿಕೇಂದ್ರಿಕರಣ

ರಾಜಕೀಯ ಅಧಿಕಾರವೆಲ್ಲ ಇಂದು ಕೇಂದ್ರ ಸರ್ಕಾರದಲ್ಲಿ ಹೆಪ್ಪುಗಟ್ಟಿದೆ. ಅಲ್ಪಸ್ವಲ್ಪ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇವೆ. ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ, ಹಳ್ಳಿಗಳಲ್ಲಿ ಸ್ವರಾಜ್ಯ ಇಲ್ಲವೇ ಇಲ್ಲ. ಐದು ವರ್ಷಕ್ಕೆ ಒಮ್ಮೆ ಶ್ರೀಸಾಮಾನ್ಯರು ರಾಜ್ಯ ವಿಧಾನಸಭೆಗೆ, ಲೋಕಸಭೆಗೆ ಪ್ರತಿನಿಧಿಗಳನ್ನು ಆರಿಸುತ್ತಾರೆ. ಒಮ್ಮೆ ಆರಿಸಲ್ಪಟ್ಟ ಪ್ರತಿನಿಧಿಯನ್ನು ಪ್ರಶ್ನಿಸುವ ಅಧಿಕಾರ ಪ್ರಜೆಗೆ ಇಲ್ಲ. ಇದು ಜನತಾ ರಾಜ್ಯದ ಲಕ್ಷಣವಲ್ಲ ಎಂಧು ಲೋಹಿಯಾ ಅವರ ಅಭಿಪ್ರಾಯ. ಅದಕ್ಕಾಗಿ ಅವರು ಬೇರೊಂದು ಪರಿಹಾರ ಸೂಚಿಸಿದರು. ಕೇಂದ್ರ, ರಾಜ್ಯ,ಜಿಲ್ಲೆ ಮತ್ತು ಹಳ್ಳಿ – ಈ ನಾಲ್ಕು ಮಟ್ಟಗಳಲ್ಲೂ ಅಧಿಕಾರ ಹಂಚಿಹೋಗಬೇಕೆಂದು ಅವರ ಸಲಹೆ. ಕೇಂದ್ರದಲ್ಲಿ ಆದಷ್ಟು ಕಡಿಮೆ ಅಧಿಕಾರ, ಹಳ್ಳಿಯಲ್ಲಿ ಹಳ್ಳಿಯ ಮಟ್ಟಿಗೆ ಹೆಚ್ಚು ಅಧಿಕಾರ. ಹಳ್ಳಿಯ ಆಡಳಿತಕ್ಕೆ ಏರ್ಪಡುವ ಪಂಚಾಯಿತಿ ವ್ಯವಸ್ಥೆಗೆ ಪೊಲೀಸ್‌ ಅಧಿಕಾರವೂ ಇರಬೇಕು. ತೆರಿಗೆ ವಸೂಲಿಯ ಹಕ್ಕೂ ಇರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಗ್ರಹಿಸುವ ತೆರಿಗೆಯ ಹಣದಲ್ಲಿ ಒಂದು ಪಾಲು ಹಳ್ಳಿಗೆ ಸಿಗಲೇಬೇಕು. ಹಳ್ಳಿಯ ಅಭಿವೃದ್ಧಿ ಯೋಜನೆ ಹಳ್ಳಿಯವರಿಂದಲೇ ಆಗಬೇಕು. ಆ ವ್ಯವಸ್ಥೆಯನ್ನು ನಾಲ್ಕು ಕಂಬಗಳ ರಾಜ್ಯ-‘ಚಾಖಂಭಾ ರಾಜ್‌’ ಎಂದು ಅವರು ಕರೆದರು. ಈ ಏರ್ಪಾಟಿನಿಂದ ಸ್ವರಾಜ್ಯ ಹಳ್ಳಿಯಿಂದ ಪ್ರಾರಂಭವಾಗಿ ದಿಲ್ಲಿಯವರೆಗೂ ಹಬ್ಬುತ್ತದೆ. ಸಾಮಾನ್ಯ ಜನರಿಗೆ ಆಡಳಿತದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಇದು ಲೋಹಿಯಾ ಅವರ ಸ್ಪಷ್ಟ ಅಭಿಪ್ರಾಯ.

ಅಂತರರಾಷ್ಟ್ರೀಯ ಜಗತ್ತಿನಲ್ಲಿ

ಸ್ವದೇಶದಲ್ಲಿ  ಸತ್ಯಾಗ್ರಹದ ಸಾಧನವನ್ನು ಬಳಸಿದಂತೆಯೇ ವಿದೇಶದಲ್ಲಿಯೂ ಜಗತ್ತಿನ ವ್ಯವಹಾರದಲ್ಲಿಯೂ ಬಳಸಬೇಕೆಂಬುದು ಲೋಹಿಯಾ ಅವರ ವಿಚಾರವಾಗಿತ್ತು. ಅಂತರರಾಷ್ಟ್ರೀಯ ಜಗತ್ತಿನಲ್ಲಿ ಮೇಲು ಕೀಳುಗಳನ್ನು ತೊಡೆಯಬೇಕೆಂಬುದು ಅವರ ಹಂಬಲವಾಗಿತ್ತು. ಅದರ ಮೊದಲ ಹೆಜ್ಜೆಯಾಗಿ ವಿಶ್ವಸಂಸ್ಥೆಯಲ್ಲಿ ಯಾವ ದೇಶಕ್ಕೂ ವಿಶೇಷ ಅಧಿಕಾರ ಇರಬಾರದೆಂದು ಅವರು ಪ್ರತಿಪಾದಿಸುತ್ತಿದ್ದರು. ಜಗತ್ತಿನ ದರಿದ್ರ ರಾಷ್ಟ್ರಗಳು ಒಗ್ಗಟ್ಟಾಗಿ ನಿಲ್ಲಬೇಕೆಂಬುದು ಅವರ ಆಸೆಯಾಗಿತ್ತು. ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಅಣು ಬಾಂಬನ್ನು ಅಮೆರಿಕಾ ಜರ್ಮನಿಯ ಮೇಲೆ ಪ್ರಯೋಗಿಸಲಿಲ್ಲ. ಏಷ್ಯಾ ದೇಶವಾದ ಜಪಾನಿನ ಮೇಲೆ ಪ್ರಯೋಗಿಸಿತು. ಈ ಉದಾಹರಣೆಯಿಂದ ಪಾಶ್ಚಾತ್ಯ ರಾಷ್ಟ್ರಗಳ ವರ್ಣ ಪಕ್ಷಪಾತ ಸ್ಥಿರಪಡುತ್ತದೆ ಎಂದು ಹೇಳುತ್ತಿದ್ದರು.

ಬಡತನ ಮತ್ತು ಅಭ್ಯುದಯ ಒಂದೇ ದೇಶದ ಸಮಸ್ಯೆಗಳಲ್ಲ. ಜಗತ್ತಿನ ಒಂದರ್ಧ ಸಮೃದ್ಧಿಯಲ್ಲಿ ಓಲಾಡುತ್ತಿದೆ. ಇನ್ನೊಂದರ್ಧ ಬಡತನ, ಅಜ್ಞಾನ, ರೋಗ ರುಜಿನ ಮತ್ತು ಅಸಮಾನತೆಯ ಕೂಪದಲ್ಲಿ ತೊಳಲಾಡುತ್ತಿದೆ. ಇಂಥ ಪ್ರಪಂಚದಲ್ಲಿ ಶಾಂತಿ ಮತ್ತು ನೆಮ್ಮದಿ ಅಸಂಭವ. ಅಭಿವೃದ್ಧಿ ಹೊಂದಿರುವ ಮುಂದುವರಿದ ದೇಶಗಳು ಹಿಂದುಳಿದ ದೇಶಗಳ ವಿಷಯದಲ್ಲಿ ತಮ್ಮ ಕರ್ತವ್ಯ ಸಲ್ಲಿಸಬೇಕು. ಜಗತ್ತಿನ ಯಾವುದೇ ಮೂಲೆಯಲ್ಲಿ ದಿಲ್ಲಿಯವರೆಗೂ ಹಬ್ಬುತ್ತದೆ. ಸಾಮಾನ್ಯ ಜನರಿಗೆ ಆಡಳಿತದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಇದು ಲೋಹಿಯಾ ಅವರ ಸ್ಪಷ್ಟ ಅಭಿಪ್ರಾಯ.

ಅಂತರರಾಷ್ಟ್ರೀಯ ಜಗತ್ತಿನಲ್ಲಿ

ಸ್ವದೇಶದಲ್ಲಿ ಸತ್ಯಾಗ್ರಹದ ಸಾಧನವನ್ನು ಬಳಸಿದಂತೆಯೇ ವಿದೇಶದಲ್ಲಿಯೂ ಜಗತ್ತಿನ ವ್ಯವಹಾರದಲ್ಲಿಯೂ ಬಳಸಬೇಕೆಂಬುದು ಲೋಹಿಯಾ ಅವರ ವಿಚಾರವಾಗಿತ್ತು. ಅಂತರರಾಷ್ಟ್ರೀಯ ಜಗತ್ತಿನಲ್ಲಿ ಮೇಲು ಕೀಳುಗಳನ್ನು ತೊಡೆಯಬೇಕೆಂಬುದು ಅವರ ಹಂಬಲವಾಗಿತ್ತು. ಅದರ ಮೊದಲ ಹೆಜ್ಜೆಯಾಗಿ ವಿಶ್ವಸಂಸ್ಥೆಯಲ್ಲಿ ಯಾವ ದೇಶಕ್ಕೂ ವಿಶೆಷ ಅಧಿಕಾರ ಇರಬಾರದೆಂದು ಅವರು ಪ್ರತಿಪಾದಿಸುತ್ತಿದ್ದರು. ಜಗತ್ತಿನ ದರಿದ್ರ ರಾಷ್ಟ್ರಗಳು ಒಗ್ಗಟ್ಟಾಗಿ ನಿಲ್ಲಬೇಕೆಂಬುದು ಅವರ ಆಸೆಯಾಗಿತ್ತು. ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಅಣು ಬಾಂಬನ್ನು ಅಮೆರಿಕಾ ಜರ್ಮನಿಯ ಮೇಲೆ ಪ್ರಯೋಗಿಸಲಿಲ್ಲ. ಏಷ್ಯಾ ದೇಶವಾದ ಜಪಾನಿನ ಮೇಲೆ ಪ್ರಯೋಗಿಸಿತು. ಈ ಉದಾಹರಣೆಯಿಂದ ಪಾಶ್ಚಾತ್ಯ ರಾಷ್ಟ್ರಗಳ ವರ್ಣ ಪಕ್ಷಪಾತ ಸ್ಥಿರಪಡುತ್ತದೆ ಎಂದು ಹೇಳುತ್ತಿದ್ದರು.

ಬಡತನ ಮತ್ತು ಅಭ್ಯುದಯ ಒಂದೇ ದೇಶದ ಸಮಸ್ಯೆಗಳಲ್ಲ. ಜಗತ್ತಿನ ಒಂದರ್ಧ ಸಮೃದ್ಧಿಯಲ್ಲಿ ಓಲಾಡುತ್ತಿದೆ. ಇನ್ನೊಂದರ್ಧ ಬಡತನ, ಅಜ್ಞಾನ, ರೋಗ ರುಜಿನ ಮತ್ತು ಅಸಮಾನತೆಯ ಕೂಪದಲ್ಲಿ ತೊಳಲಾಡುತ್ತಿದೆ. ಇಂಥ ಪ್ರಪಂಚದಲ್ಲಿ ಶಾಂತಿ ಮತ್ತು ನೆಮ್ಮದಿ ಅಸಂಭವ. ಅಭಿವೃದ್ಧಿ ಹೊಂದಿರುವ ಮುಂದುವರಿದ ದೇಶಗಳು ಹಿಂದುಳಿದ ದೇಶಗಳ ವಿಷಯದಲ್ಲಿ ತಮ್ಮ ಕರ್ತವ್ಯ ಸಲ್ಲಿಸಬೇಕು. ಜಗತ್ತಿನ ಯಾವುದೇ ಮೂಲೆಯಲ್ಲಿ ಬರಗಾಲ ಬಂದರೆ ಅಲ್ಲಿಗೆ ಇತರ ದೇಶಗಳು ನೆರವು ನೀಡಲು ಧಾವಿಸಬೇಕು. ಅದಕ್ಕಾಗಿ ಅಂತರ ರಾಷ್ಟ್ರೀಯ ಅಭ್ಯುದಯ ನಿಧಿ ಹಾಗೂ ವ್ಯವಸ್ಥೆಯೊಂದು ಏರ್ಪಡಬೇಕೆಂದು ಲೋಹಿಯಾ ಹೇಳುತ್ತಿದ್ದರು.

ಅಪೂರ್ವ ಸಾಹಸಿ

ದಿಟ್ಟತನದ ಮತ್ತೊಂದು ಹೆಸರು ಲೋಹಿಯಾ ಎನ್ನಿಸುವಂತೆ ಅವರು ಬದುಕಿದರು. ಬ್ರಿಟಿಷರು ಆಳುತ್ತಿದ್ದಾಗ, ಸ್ವಾತಂತ್ಯ್ರ ಬಂದ ಮೇಲೆ ನಿರ್ಭಯವಾಗಿ ತಮ್ಮ ಅಭಿಪ್ರಾಯವನ್ನು ಘೋಷಿಸುತ್ತಿದ್ದರು. ಯಾವಾಗಲೂ ಅವರ ಅಳತೆಗೋಲು ಒಂದೇ-ಈ ದೇಶದ ದೀನರಿಗೆ, ಹಿಂದುಳಿದವರಿಗೆ ಸಹಾಯವಾಗುತ್ತದೆಯೆ. ಅವರ ವಿದ್ವತ್ತು ಬೆರಗುಗೊಳಿಸುವಂತಹದು. ತೀಕ್ಷ್ಣ ಬುದ್ಧಿಶಕ್ತಿ. ಸ್ವತಂತ್ರವಾದ ವಿಚಾರ ರೀತಿ.

ಐದು ಸಾವಿರವರ್ಷಗಳಿಂದ ಭಾರತದ ಸಾಮಾನ್ಯ ಪ್ರಜೆ ಬದುಕಿರುವನೋ ಸತ್ತಿರುವನೋ ಎಂಬುದೇ ಗೊತ್ತಾಗುತ್ತಿಲ್ಲ. ಅವನ ವ್ಯಕ್ತಿತ್ವ ಅರಳಬೇಕು. ಅವನು ಹೊಸ ಮನುಷ್ಯ ನಾಗಬೇಕು. ಅವನು ಬದುಕಿರುವ ಸಮಾಜ ಹೊಸ ಬಗೆಯದಾಗಬೇಕು. ಈ ಬದಲಾವಣೆಯನ್ನು ತರುವುದಕ್ಕಾಗಿ ರಾಮ ಮನೋಹರ ಲೋಹಿಯಾ ದುಡಿದರು, ಮಡಿದರು.