ರಾಯಚೂರು ಇತಿಹಾಸ

ಕನ್ನಡ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊತ್ತು ನಿಂತ ಹಲವು ಜಿಲ್ಲೆಗಳಲ್ಲಿ ರಾಯಚೂರು ಜಿಲ್ಲೆಯು ಒಂದು ಹಿಂದಿನ ಕಾಲದಲ್ಲಿ ಎಡದೊರೆನಾಡು ಯಡದೊರೆನಾಡು ಮಿರ್ಚ್ಛಾಸಿರ, ಮಧ್ಯಕಾಲದಲ್ಲಿ ರಾಯಚೂರು ದೋ ಆಬ್ ಎಂಬುವದಾಗಿ ಗುರುತಿಸಲ್ಪಟ್ಟು ಇತಿಹಾಸ ಪುಟಗಳಲ್ಲಿ ರಾರಾಜಿಸಿದ ಚರಿತ್ರೆ ಈ ಜಿಲ್ಲೆಗಿದೆ.

ಕೃಷ್ಣಾ ಮತ್ತು ತುಂಗಭದ್ರ ನದಿಗಳ ನಡುವೆ ಈ ಜಿಲ್ಲೆ ೫ ತಾಲ್ಲೂಕುಗಳನ್ನು ಹೊಂದಿದೆ (ರಾಯಚೂರು, ಲಿಂಗಸುಗೂರು, ಸಿಂಧನೂರು, ಮಾನ್ವಿ ದೇವದುರ್ಗ) ಈ ಜಿಲ್ಲೆಯ ಜನಜೀವನ ಹಾಗೂ ಚರಿತ್ರೆಯನ್ನು ನಿರೂಪಿಸುವಲ್ಲಿ ಪ್ರಾಕೃತಿಕ ಪರಿಸರವೂ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಇಲ್ಲಿ ಫಲವತ್ತಾದ ಭೂಮಿ  ಮತ್ತು ಖನಿಜ ಸಂಪತ್ತು ರಾಜ ಮಹಾರಾಜರನ್ನು ತನ್ನಡೆಗೆ ಆಕರ್ಷಿಸಿದೆ. ಇಲ್ಲಿಯ ಬೆಟ್ಟಗುಡ್ಡಗಳಲ್ಲಿ ಕೋಟೆಕೊತ್ತಲೆಗಳು ನಿರ್ಮಾಣವಾಗಿವೆ. ಕಲಾಸಂಪತ್ತಿನಿಂದಾಗಿ ನಯನ ಮನೋಹರ ದೇವಾಲಯಗಳು ಮೈದಳೆದಿವೆ.

ಕನ್ನಡ ನಾಡಿನ ಪ್ರಪ್ರಥಮ ಸಾಮ್ರಾಜ್ಯ ಶಾಹಿ ಮನೆತನ ಬಾದಾಮಿ ಚಾಲುಕ್ಯ ಇವರ ಕುರುಹುಗಳು ಜಿಲ್ಲೆಯ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ದೊರೆತಿವೆ. ವಾರಂಗಲ್ಲಿನ ಕಾಕತೀಯರು, ದೇವಗಿರಿಯ ಸೇವುಣರು, ವಿಜಯನಗರದ ಅರಸರು, ಬಹಮನಿ ಸುಲ್ತಾಅರು, ಹೈದ್ರಾಬಾದಿನ ನಿಜಾಮರು, ಆಳಿದ ಪ್ರದೇಶವಾಗಿ ಇತಿಹಾಸ ಪ್ರಸಿದ್ಧವಾಗಿದೆ. ಶರಣರು, ದಾಸರು, ಸೂಫಿಗಳು ತಿರುಗಾಡಿದ ಪವಿತ್ರನೆಲವಾಗಿ ಸೌಹಾರ್ದತೆಗೆ ಹೆಸರಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ.

ಬನ್ನಿ! ಒಮ್ಮೆ ನಮ್ಮೂರ ಸೊಬಗು ನೋಡಲು.

ರಾಯಚೂರು ಜಿಲ್ಲೆಯ ಕರ್ನಾಟಕ ಉತ್ತರ ಈಶಾನ್ಯ ಭಾಗದ ಮೈದಾನ ಪ್ರದೇಶದಲ್ಲಿ ವ್ಯಾಪಿಸಿದೆ. ಜಿಲ್ಲೆಯ ವಿಸ್ತೀರ್ಣ ೮೩೮೩ ಚ.ಕಿ.ಮೀ ಗಳಾಗಿದ್ದು ಪ್ರತಿ ಚ.ಕಿ.ಮೀಗೆ ಜನ ಸಾಂದ್ರತೆ ೧೯೯ ಇರುತ್ತದೆ. ಜಿಲ್ಲೆಯ ೨೦೦೧ ರ ಜನಗಣತಿ ಪ್ರಕಾರ ೮೩ ಜನವಸತಿ ಇರುವ ಹಾಗೂ ೫೩ ಜನವಸತಿ ಇಲ್ಲದ ಗ್ರಾಮಗಳಿವೆ. ಜಿಲ್ಲೆಯಲ್ಲಿ ೧೬.೭೦ ಲಕ್ಷ ಜನಸಂಖೈ ಇದೆ ಇದರಲ್ಲಿ ೮.೪೨ ಸಾವಿರ ಮಹಿಳೆಯರು. ೧೨.೪೯ ಲಕ್ಷ ಗ್ರಾಮೀಣ ಜನ ಸಂಖೈ ಮತ್ತು ೪.೨೧ ಲಕ್ಷ ನಗರವಾಸಿಗಳಾಗಿರುತ್ತಾರೆ.

ಭೌಗೋಳಿಕ ಲಕ್ಷಣಗಳು

ಜಿಲ್ಲೆಯು ಭೌಗೋಳಿಕವಾಗಿ ಬಯಲು ಪ್ರದೇಶವಾಗಿದ್ದು ಯಾಮಿನಿ ಶ್ರೇಣಿಗೆ ಸೇರಿದ ಬೆಟ್ಟ ಗುಡ್ಡಗಳು ಎರಡು ಮಹತ್ವದ ನದಿಗಳಾದ ಕೃಷ್ಣ, ತುಂಗಭದ್ರಗಳಿಂದ ಆವೃತಗೊಂಡಿದೆ. ಹವಾಗುಣ ಬೇಸಿಗೆಯಲ್ಲಿ ರಾಜ್ಯದಲ್ಲಿಯ ಅತೀ ಹೆಚ್ಚು ಉಷ್ಣತೆಯನ್ನು ಹೊಂದಿರುತ್ತದೆ. ಮೇ ತಿಂಗಳಿನಲ್ಲಿ ೪೫ ಡಿಗ್ರಿ ಸೆಂ.ಗ್ರೇ ವರೆಗು ಉಷ್ಣತೆ ಇರುತ್ತದೆ. ಜಿಲ್ಲೆಯ ವಾಡಿಕೆ ಮಳೆ ೬೨೧ ಮಿ.ಮಿ ಗಳಾಗಿದೆ.

ನೈಸರ್ಗಿಕ ಸಂಪನ್ಮೂಲಗಳು

ಕೃಷ್ಣ, ತುಂಗಭದ್ರ ನದಿಗಳಿಂದ ನೀರಾವರಿ ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಪೂರೈಸುತ್ತಿದೆ. ಜಿಲ್ಲೆಗೆ ಹೆಮ್ಮೆಯೆನಿಸಿರುವ ಚಿನ್ನ ಉತ್ಪಾದನ ಕೇಂದ್ರವು ಲಿಂಗಸುಗೂರಿನ ಹಟ್ಟಿ ಗ್ರಾಮದಲ್ಲಿ ಸ್ಥಾಪನೆಗೊಂಡಿದೆ. ಮಸ್ಕಿಹಟ್ಟಿ ಮತ್ತು ಒಂದಲಿಯ ಸುತ್ತಮುತ್ತಲು ಪ್ರದೇಶದಲ್ಲಿ ಪುರಾತನ ಚಿನ್ನದ ಗಣ್ಣಿಗಳಿದ್ದವೆಂದು ತಿಳಿದುಬರುತ್ತದೆ. ಮಾನ್ವಿ ತಾಲ್ಲೂಕಿನ ವಟಗಲ್ಲಿನಲ್ಲಿ ಇತ್ತೀಚಿಗೆ ನಡೆದ ಆದಿ ಮಾನವ ಸ್ಥಳದ ಉತ್ಚನನದಲ್ಲಿ ತಾಮ್ರದ ವಸ್ತುಗಳು ಸಿಕ್ಕಿರುವುದು ತಾಮ್ರದ ಗಣಿಗಾರಿಕೆ ಈ ಜಿಲ್ಲೆಯಲ್ಲಿ ಚಿನ್ನದ ಗಣಿಗಾರಿಕೆಯಷ್ಟೇ ಪುರಾತನದ್ದು, ಮಾನ್ವಿ ತಾಲ್ಲೂಕಿನ ಕಲ್ಲೂರಿನಲ್ಲಿ ತಾಮ್ರದ ನಿಕ್ಷೇಪವನ್ನು ಸಂಶೋಧಿಸಲಾಗಿದೆ.

 

ರಾಯಚೂರು ಕೋಟೆ ಇತಿಹಾಸ ಘಟನಾವಳಿ

 • ಕ್ರಿ.ಶ. ೧೧೦೮ ರಿಂದ ೧೧೫೨ ಮಧ್ಯದಲ್ಲಿ ಕೋಟೆ ಹೊಯ್ಸಳ ವಿಷ್ಣುವರ್ಧನನ ವಶ
 • ಕ್ರಿ.ಶ.೧೨೯೪ ಕಾಕತೀಯ ರಾಣಿ ರುದ್ರಾಂಬೆಯ ಕಾಲದಲ್ಲಿ ಗೋನೆಗನ್ನಯ್ಯ ರೆಡ್ಡಿ ಆದೇಶದಂತೆ ವಿಠಲನಾಥನನಿಂದ ಒಳಕೋಟೆ ನಿರ್ಮಾಣ.
 • ಕ್ರಿ.ಶ. ೧೩೬೬-೬೭ ವಿ.ಬುಕ್ಕ I ಮಹಮ್ಮದ್ ಶಾಹ ನಡುವೆ ಯುದ್ಧ
 • ಕ್ರಿ.ಶ. ೧೩೭೫-೭೬ ವಿ.ಬುಕ್ಕ I ಮತ್ತು ಬ.ಫಿರೋಜ್ ಶಾಹ ಯುದ್ಧ
 • ಕ್ರಿ.ಶ. ೧೩೯೮-೯೯ ವಿ.ಹರಿಹರ II ಮತ್ತು ಬ.ಫಿರೋಜ್ ಶಾಹ ನಡುವೆ ಯುದ್ಧ 
 • ಕ್ರಿ.ಶ. ೧೪೨೨-೨೩ ವಿ.ದೇವರಾಯ II ಮತ್ತು ಬ.ಅಹಮದ್ ಶಾಹ () ನಡುವೆ ಯುದ್ಧ
 • ಕ್ರಿ.ಶ. ೧೪೩೫-೩೬ ವಿ.ದೇವರಾಯ II ಮತ್ತು ಅಲ್ಲಾವುದ್ದಿನ್ ನಡುವೆ ಯುದ್ಧ
 • ಕ್ರಿ.ಶ. ೧೪೪೩-೪೪ ವಿ.ದೇವರಾಯ II ಮತ್ತು ಬ.ಅಲ್ಲಾವುದ್ದೀನ್ ನಡುವೆ ಯುದ್ಧ
 • ಕ್ರಿ.ಶ. ೧೪೬೮-೬೯ ಬ.ಮಹಮ್ಮದ್ ಶಾಹ IIIನೇಯ ಕಾಲದಲ್ಲಿ ಕೋಟೆಯ ಕಾಟಿ ದರ್ವಾಜ್ ನಿರ್ಮಾಣ
 • ಕ್ರಿ.ಶ. ೧೪೬೯-೭೦ ಬ.ಮಹಮ್ಮದ್ ಶಾಹ IIIನೇಯ ಕಾಲದಲ್ಲಿ ಕೋಟೆಯ ಮಕ್ಕಾ ದರ್ವಾಜ್ ನಿರ್ಮಾಣ
 • ಕ್ರಿ.ಶ. ೧೪೭೭-೭೮ ಅ.ಅಲಿ ಆದಿಲ್ ಶಾಹ ನ Iನೇ ಕಾಲದಲ್ಲಿ ಒಂದು ಮಸೀದಿಯ ನಿರ್ಮಾಣ
 • ಕ್ರಿ.ಶ. ೧೪೮೦-೮೧ ಬ.ಮಹಮ್ಮದ್ ಶಾಹನ ಕಾಲದಲ್ಲಿ ಒಂದು ಕಟ್ಟಡ ನಿರ್ಮಾಣ
 • ಕ್ರಿ.ಶ. ೧೪೯೧-೧೫೦೩ ವಿ.ನರಸನಾಯಕ್ ಮತ್ತು ಆ.ಯುಸುಫ್ ಆದಿಲ್ ಖಾನ್ ನಡುವೆ ಯುದ್ಧ ಕೋಟೆ ನರಸನಾಯಕನ ವಶ
 • ಕ್ರಿ.ಶ. ೧೫೦೬ ಆ.ಯುಸುಫ್ ಆದಿಲ್ ಶಾಹ ನ ಕಾಲದಲ್ಲಿ ಭಾವಿ (ಶಂಕರಚೌರಿ) ಯ ನಿರ್ಮಾನ
 • ಕ್ರಿ.ಶ. ೧೫೦೫ ರಿಂದ ೧೫೦೯ ವಿ.ನರಸಿಂಹ ಮತ್ತು ಅ.ಯುಸುಫ್ ಆದಿಲ್ ಶಾಹ ನಡುವೆ ಯುದ್ಧ
 • ಕ್ರಿ.ಶ. ೧೫೧೦ ಬ.ಮಹಮ್ಮದ್ ಶಾಹ ನ ಕಾಲದಲ್ಲಿ ಏಕ ಮಿನಾರ್ ಮಸೀದಿಯ ನಿರ್ಮಾಣ
 • ಕ್ರಿ.ಶ. ೧೫೧೩-೧೪ ಬ.ಮಹಮ್ಮದ್ ಶಾಹ ನ ಕಾಲದಲ್ಲಿ ಏಕ ಮಿನಾರ್ ಮಸೀದಿಯ ನಿರ್ಮಾಣ
 • ಕ್ರಿ.ಶ. ೧೫೧೫ ಅ.ಇಸ್ಮಾಯಿಲ್ ಆದಿಲ್ ಶಾಹ ನ ಕಾಲದಲ್ಲಿ ಒಂದು ಮಸೀದಿಯ ನಿರ್ಮಾಣ
 • ಕ್ರಿ.ಶ. ೧೫೨೦ ವಿ.ಕೃಷ್ಣರಾಯ ಆ.ಇಸ್ಮಾಯಿಲ್ ಆದಿಲ್ ಶಾಹ ನಡುವೆ ಯುದ್ಧ ಕೋಟೆ ಕೃಷ್ಣದೇವರಾಯನ ವಶ
 • ಕ್ರಿ.ಶ. ೧೫೩೦-೩೧ ಬಿ.ಅಚ್ಚುತರಾಯ ಮತ್ತು ಆ.ಇಸ್ಮಾಯಿಲ್ ಆದಿಲ್ ಶಾಹ ನ ನಡುವೆ ಯುದ್ಧ ಕೋಟೆ ೧ ಇಸ್ಮಾಯಿಲ್ ಆದಿಲ್ ಶಾಹ ನ ವಶ
 • ಕ್ರಿ.ಶ. ೧೫೪೬-೪೭ ಅ.ಇಬ್ರಾಹಿಮ್ ಆದಿಲ್ ಶಾಹ ನಿಂದ ಅಂಧೇರಿ ಚೌಡಿಯ ಹತ್ತಿರವಿರುವ ಕೊತ್ತಳದ ನಿರ್ಮಾಣ
 • ಕ್ರಿ. ಶ. ೧೭೫೦-೫೧ ಅ. ಇಬ್ರಾಹಿಮ್ ಆದಿಲ್ ಶಾಹನಿಂದ ಖುಶ್ರೌ ಬುರ್ಜ್‌ನ ಹತ್ತಿರದ ಕೊತ್ತಾಳದ  ನಿರ್ಮಾಣ
 • ಕ್ರಿ.ಶ. ೧೫೪೮-೪೯ ಅ,ಇಬ್ರಾಹಿಮ್ ಆದಿಲ್ ಶಾಹನಿಂದ ಕೋಟೆಯ ಕಾಟಿ ದರ್ವಾಜ ನಿರ್ಮಾಣ
 • ಕ್ರಿ.ಶ. ೧೫೫೦ ಅ.ಇಬ್ರಾಹಿಂ ಆದಿಲ್ ಶಾಹಿನಿಂದ ಅಂಧೇರಿ ‌ಚೌಡಿಯ ಹತ್ತಿರದ ಕಟ್ಟಡದ ನಿರ್ಮಾಣ
 • ಕ್ರಿ.ಶ.೧೫೫೧ ವಿ.ರಾಮರಾಯ ಮತ್ತು ಆ. ಇಬ್ರಾಹಿಮ್ ಆದಿಲ್ ಶಾಹಾ ನಡುವೆ ಯುದ್ದ ಕೋಟೆ ರಾಮರಾಯನ ವಶ.
 • ಕ್ರಿ.ಶ. ೧೫೫೧ ವಿ.ಸದಾಶಿವ ರಾಯನಿಂದ ನಾವಿದರಿಗೆ ಭೂಮಿದಾನ
 • ಕ್ರಿ.ಶ. ೧೫೫೩ ವಿ.ಸದಾಶಿವ ರಾಯನಿಂದ ಒಂದು ದೇವರಿಗೆ ಹಣದ ದಾನ
 • ಕ್ರಿ.ಶ. ೧೫೫೮ ವಿ.ರಾಮರಾಯನಿಂದ ರಾಯಚೂರಿನ ಬೋವಿಗಳಿಗೆ ಕೆಲವು ಹಕ್ಕುಗಳ ದಾನ
 • ಕ್ರಿ.ಶ. ೧೫೬೦ ವಿ.ರಾಮರಾಯ ಮತ್ತು ಮುಸ್ಲಿಂ ಕೂಟದ ನಡುವೆ ಯುದ್ದ ಕೋಟೆ ಮುಸ್ಮಿಮರ ವಶ
 • ಕ್ರಿ.ಶ. ೧೫೬೫ ಅ.ಅಲಿ ಆದಿಲ್ ಶಾಹನಿಂದ ಕೋಟೆಯ ಶಾಹ ಬುರ್ಜಿನ ನಿರ್ಮಾಣ
 • ಕ್ರಿ.ಶ. ೧೫೬೫ ಅ.ಅಲಿ ಆದಿಲ್ ಶಾಹನಿಂದ ಕೋಟೆಯ ತಾಹಿರ್ ಬುರ್ಜಿನ ನಿರ್ಮಾಣ
 • ಕ್ರಿ.ಶ. ೧೫೭೦ ಅ.ಇಬ್ರಾಹಿಮ್ ಆದಿಲ್ ಶಾಹ ಋ ನಿಂದ ಕೋಟೆಯ ದಿಡ್ಡಿ ಬಾಗಿಲು ಮತ್ತು ಬಾವಿ (ಬಂದ ಬೌಡಿ)ಗಳ ನಿರ್ಮಾಣ.
 • ಕ್ರಿ.ಶ. ೧೫೮೨ ಅ.ಇಬ್ರಾಹಿಮ್ ಶಾಹ ಋ ನಿಂದ ಕೋಟೆಯ ತಮಕ್ಕುಲ್ ದಿಡ್ಡಿಯ ನಿರ್ಮಾಣ.
 • ಕ್ರಿ.ಶ ೧೫೮೨-೮೩ ಅ.ಇಬ್ರಾಹಿಮ್ ಆದಿಲ್ ಶಾಹನಿಂದ ಕೋಟೆಯ ಆಲ್ ಬುರ್ಜ್ ನ ನಿರ್ಮಾಣ
 • ಕ್ರಿ.ಶ. ೧೫೮೯ ಅ.ಇಬ್ರಾಹಿಮ್ ಆದಿಲ್ ಶಾಹನಿಂದ ಕೋಟೆಯ ಒಂದು ಬುರ್ಜ್ ನ ನಿರ್ಮಾಣ
 • ಕ್ರಿ.ಶ. ೧೬೦೯ ಅ.ಇಬ್ರಾಹೀಮ್ ಆದಿಲ್ ಶಾಹನಿಂದ ಗೋಪುರ ಮತ್ತು ಬುರ್ಜ್ ನ ನಿರ್ಮಾಣ
 • ಕ್ರಿ.ಶ. ೧೬೧೯ ಅ.ಇಬ್ರಾಹೀಮ್ ಅದಿಲ್ ಶಾಹ ನ ಕಾಲದಲ್ಲಿ ಕೋಟೆಯ ಕಾಟಿದರವಾಜದಲ್ಲಿ ಕ್ಮಾನು ಮತ್ತು ಕೊಠಡಿ ಜಾಮಿ ಮಸೀದಿ ಕಣಜ ಮತ್ತು ಲೋಹಾರ ವಾಡದಲ್ಲಿಯ ಮನೀದಿಗಳ ನಿರ್ಮಾಣ.
 • ಕ್ರಿ.ಶ. ೧೬೨೨-೨೩ ಅ.ಮಹ್ಮದ್ ಶಾಹನ ಕಾಲದಲ್ಲಿ ಕೋಟೆಯ ಸರಾಫ್ ಬಜಾರನಲ್ಲಿರುವ ಮಸೀದಿಗಳ ನಿರ್ಮಾಣ
 • ಕ್ರಿ.ಶ. ೧೬೨೮-೨೯ ಅ.ಮಹ್ಮದ್ ಶಾಹನ ಕಾಲದಲ್ಲಿ ಕೋಟೆ ಖಾದರೀಯ್ಯ ಬುರ್ಜ್ ನಿರ್ಮಾಣ.
 • ಕ್ರಿ.ಶ. ೧೬೨೯-೩೦ ಖುಶ್ರೌ ಬುರ್ಜ್ ನ ನಿರ್ಮಾಣ.
 • ಕ್ರಿ.ಶ. ೧೬೭೦-೭೧ ಅ.ಸಿಕಂದರ್ ಶಾಹನ ಕಾಲದಲ್ಲಿ ಕೋಟೆಯ ಸಿಕಂದರಿ ದರವಾಜ ನಿರ್ಮಾಣ
 • ಕ್ರಿ.ಶ. ೧೬೭೩-೭೪ ಯರೀಮ್ ಶಾಹನ ಮಸೀದಿಯ ನಿರ್ಮಾಣ
 • ಕ್ರಿ.ಶ. ೧೭೪೯ ಕೋಟೆಯ ಫತೇ ಬುರ್ಜ್ ನ ಪುನರ್ ನಿರ್ಮಾಣ

 

ರಾಯಚೂರು ಕೋಟೆಯ ನಕಾಶೆಯಲ್ಲಿ ಕಾಣುವ ಹೆಸರುಗಳು

 • ಮಕ್ಕಳ ದರವಾಜ್
 • ಬ್ರಿಟೀಶರ ಮದ್ದು ಗುಂಡಿನ ಗ್ರಾಮ
 • ಸೈಲಾನಿ ಶಾಹ ದರ್ಗಾ
 • ಕೋಟೆ ಕಟ್ಟಿದ ದಿನಾಂಕವನ್ನು ತಿಳಿಸುವ ಕನ್ನಡ ಶಾಸನ
 • ಸೈಲಾನಿ ದರ್ವಾಜ(ಬಾಗಿಲು)
 • ಪುಷ್ಕರಣಿ
 • ಶೇಖ್ ಮಿಯಾ ಸಾಹೇಬರ ದರ್ಗಾ ಮತ್ತು ಮಸೀದಿ
 • ಕಾಲೀ ಮಸೀದಿ
 • ರಾಜವಾಡೆ
 • ರಾಜವಾಡೆಗೆ ಹೋಗುವ ಮೆಟ್ಟಿಲು
 • ಅಸರ್ ಶರೀಫ್
 • ಪ್ರಾಚೀನ ಹಿಂದೂ ಅರಮನೆ
 • ಜಾಮಿಯಾ ಮಸೀದಿ
 • ಹಾಅರ್ ಬೇಗ್ ಮಸೀದಿ
 • ಮೀರ್ ಹಸನ್ ಸಾಹೇಬರ ದರ್ಗಾ
 • ದಫ್ತತರ್ ಕಿ ಮಸೀದಿ
 • ಸಿಕಂದರೀ ದರ್ವಾಜ ಮತ್ತು ಮಸೀದಿ
 • ಶಾಹ ಅಬುತಾಹ ಹುಸೇನಿ ದರ್ಗಾ
 • ನವರಂಗ್ ದರ್ವಾಜ (ಬಾಗಿಲು)
 • ಏಕ್ ಮಿ ಆರ್ ಮಸೀದಿ
 • ಯತೀಮ್ ಶಹ ಮಸೀದಿ
 • ಕಾಟಾಇ ರರ್ವಾಜ (ಬಾಗಿಲು)
 • ಅಂದೇರಿ ಬೌಡಿ (ಭಾವಿ)
 • ಖಾಸ್ ಬೌಡಿ (ಭಾವಿ)
 • ಕಂದಕ್ ದರ್ವಾಜ (ಬಾಗಿಲು)
 • ದೋಡ್ಡಿ ದರ್ವಾಜ (ಬಾಗಿಲು)
 • ಉಸ್ಮಾನಿಯಾ ಮಾರ್ಕೆಟ್