ಭಾರತಿಯರ ಕೀರ್ತಿ | ಬಹುಕಾಲ ಬೆಳಗುತ ಬಂದೈತಿ   ||ಪ||

ವಿಂಧ್ಯ ಹಿಮಾಚಲ ನೆಲಸಿದ ದೇಶ | ಗಂಗಾ ಸಿಂಧು ಸಂಚಲಿಸಿದ ದೇಶ
ಸುತ್ತು ಸಾಗರಾ ಮುತ್ತಿಡುತಿರುವವು ಧಾನ್ಯ ಖನಿಜ ಶ್ರೀಗಂಧದ ಕೋಶ||೧||
ಭಾರತೀಯರ ಕೀರ್ತಿ………

ರಾಮಕೃಷ್ಣ ಆ ಬುದ್ಧರ ಬೀಡು | ಬಸವ ಮಧ್ವ ಚೈತನ್ಯರನಾಡು
ಗಾಂಧಿ ತಿಲಕ ಆ ಬೋಸರ ನೋಡು | ಘೋಷ ರಮಣ ಮಹರ್ಷಿಯರ ಬೀಡು||೨||
ಭಾರತೀಯರ ಕೀರ್ತಿ……….

ಪಾರತಂತ್ರ್ಯನೊಗ ಕಳಚಿದ ಮೋಡಿ | ಸರ್ವಧರ್ಮ ಸಮರಸತೆಯ ನಾಡಿ |
ಪೂರ್ಣಯೋಗ ದಿವ್ಯ ಜನ್ಮಕೆ ಜೋಡಿ | ಪರಜನ ಅಚ್ಚರಿ ಪಡೆವರು ನೋಡಿ||೩||
ಭಾರತೀಯರ ಕೀರ್ತಿ………

ಆಗಬೇಕು ನಾವು ಭಾರತೀಯರು | ಜಾತಿಪಂಥ ಕುಲ ಮೀರಿದ ಜನರು
ಆತ್ಮಯೋಗದಲ್ಲಿ ನೆಲೆ ನಿಂತವರು | ಅಗ್ನಿಲಿಂಗವನ್ನೆಬ್ಬಿಸಿದವರು||೪||
ಭಾರತೀಯರ ಕೀರ್ತಿ……..

ರಚನೆ :  ಶರಣಪ್ಪವಾಲಿ
ಕೃತಿ :  ಶರಣಸ್ಮೃತಿ