ಗಳಿಸಿದಷ್ಟು ಹಣ ಬಳಸಿ ಉಳಿಸುವ ಮಾದರಿ ಸಂಸಾರ | ಮಾಡುವ ಹಾದಿಯ   ತೆಗೆದಾರ ಬ್ಯಾಂಕಿನ ನೀತಿನಿಯೋಜಕರು |   ||ಪ||

ಮೊಟ್ಟ ಮೊದಲು ನಾವು ದುಡಿಯಲುಬೇಕು | ಅಷ್ಟರಲ್ಲೆ ಖರ್ಚು ಮಾಡಲು ಬೇಕು |
ಒಟ್ಟು ನಾಲ್ಕು ದುಡ್ಡು ಉಳಿಸಿ ಇಟ್ಟರ | ನಮಗೆ ಮುಂದಿನ ಬಾಳಿಗಾಸರ||೧||

 ಹಾದಿಯ ತೆಗೆದಾರ ಬ್ಯಾಂಕಿನ ನೀತಿನಿಯೋಜಕರು  ||
ಬಡತನವಿದ್ದರೂ ಹೊಟ್ಟೆಗೆ ಬೇಕು | ಕಡೆತನ ನಮಗ ಬಟ್ಟೆಯು ಬೇಕು
ಎಲ್ಲಕೆ ಮೊದಲು ದುಡ್ಡಿರಬೇಕು | ದುಡ್ಡಿರದಿದ್ದರೆ ಬಾಳುವೆ ಸಾಕು||೨||

 ಹಾದಿಯ ತೆಗೆದಾರ ಬ್ಯಾಂಕಿನ ನೀತಿನಿಯೋಜಕರು ||
ಒಟ್ಟಿಗೆ ಇದ್ದಾಗ ದುಂದ ಮಾಡತಾರ | ಹೊಟ್ಟಿಗಿಲ್ಲದಾಗ ಬಿಕ್ಕೆಬೇಡತಾರ
ಇಲ್ಲದಿದ್ದರ ಸಾಲ ಮಾಡತಾರ | ಅದೇ ಶೂಲದಾಗ ಸತ್ತು ಹೋಗತಾರ||೩||

 ಹಾದಿಯ ತೆಗೆದಾರ ಬ್ಯಾಂಕಿನ ನೀತಿನಿಯೋಜಕರು ||
ಹೊಟ್ಟೆತುಂಬ ಸಹ ಅನ್ನ ತಿನ್ನದೆ | ಗಂಟುಕೂಡಿಸಿ ಖರ್ಚು ಮಾಡದೆ |
ಖೊಟ್ಟಿ ಜನರಿಗೆ ಸಾಲಕೊಟ್ಟರೆ ತಿರುಗಿ ಬಾರದ್ದಕ್ಕ ಮರುಗಿ ಸಾಯತಾರ||೪||

 ಹಾದಿಯ ತೆಗೆದಾರ ಬ್ಯಾಂಕಿನ ನೀತಿನಿಯೋಜಕರು ||
ತಮ್ಮಲ್ಲಿದ್ದ ಹಣ ಬ್ಯಾಂಕಿನಲಿಟ್ಟರ ಸಾವಕಾರ ಸಾಲಗಾರ ಇಬ್ಬರಿಗಾಸರ
ಇಬ್ಬರೂ ಬದುಕುವ ದಾರಿ ಮಾಡ್ಯಾರ ಪತ್ತಿನ ಸಾಲದ ಅನುಕೂಲ ನಿಡ್ಯಾರ||೫||

 ಹಾದಿಯ ತೆಗೆದಾರ ಬ್ಯಾಂಕಿನ ನೀತಿನಿಯೋಜಕರು ||
ಇದ್ದಾಗ ಇಟ್ಟರ ಇಲ್ಲದಾಗ ಬೇಡಿದರ ಬ್ಯಾಂಕಿನ ಮೂಲಕ ವ್ಯವಹಾರ ಮಾಡಿದರ
ಸುಖಸಂಸಾರದ ದಾರಿ ಸುಸೂತ್ರ ವಾಲಿ ಶರಣರು ಹೇಳಿ ತಿಳಸತಾರ||೬||

 ಹಾದಿಯ ತೆಗೆದಾರ ಬ್ಯಾಂಕಿನ ನೀತಿನಿಯೋಜಕರು ||

ರಚನೆ :  ಶರಣಪ್ಪವಾಲಿ
ಕೃತಿ :  ಶರಣಸ್ಮೃತಿ