ತನ್ನ ತಾಯಿ ಅಭಿಮಾನ ತನ್ನದೆಂದೆನ್ನುವ ಸುಧೆಸೂಕ್ತಿಯನಾ |
ತಿಳಿಯುವುದೆ ಧರ್ಮ ಮಾನವನಾ ||
ಕನ್ನಡ ನಾಡಿನ ಉನ್ನತಿ ಬಯಸುವ ಸನ್ನುತ ಶರಣರ ವಚನಾ |
ಕೃತಿಗಿಳಿಯುವ ಹಿತ ಬಯಸುವೆನಾ   ||ಅ.ಪ||

ನೂರಾರು ಜಾತಿಯಲಿ ಹುಟ್ಟಿದ ಕನ್ನಡ ಜನ |
ಭಾರತದಿ ಬೆಳಗಿಹ ಇಂದಿನ ಕನ್ನಡ ತನ |
ಹೋರಾಡಿ ಕೂಡಿಸಿದ ಈ ಕನ್ನಡ ಕುಲವನ್ನ | ಒಡೆಯದಿರಿ |
ಒಡೆಯದಿರಿ ಒಡೆದು ಮಡಿಯದಿರಿ ಅನ್ನುವ ಕನ್ನಡಕವಿ ಕಹಳೆಯನ |
ತಿಳಿಯುವದೆ ಧರ್ಮ ಮಾನವನ ||೧||

ತಾಯಿ ಅನ್ನುವ ಭಾವ ಬೆಳೆದರೆ ತಾಯಿಯ ಸ್ತನ ತೊರೆಯುವವು |
ಕ್ಷೀರಾಮೃತ ಪಾನ ಮಾಡುವೆವು ||
ಕನ್ನಡಕ್ಕಾಗಿ ಕೈಯೆತ್ತಿ ಕಲ್ಪತರು ಪಡಿ |
ಕನ್ನಡಕ್ಕಾಗಿ ಕೊರಳೆತ್ತಿ ಅಮೃತವ ಕುಡಿ |
ಕನ್ನಡಕ್ಕಾಗಿ ಕಿರಿಬೆರಳಾದರು ಎತ್ತಿ ಹಿಡಿ | ಕನ್ನಡಕೆ |
ಕನ್ನಡಕೆ ತನು-ಮನ ಸೇವೆ ಸಲ್ಲಿಸಿ ಸಾಧಿಸಿ ಏಕೀಕರಣ
ತಿಳಿಯುವದೆ ಧರ್ಮ ಮಾನವನಾ   ||೨||

ಕನ್ನಡ ನಾಡಿಗೆ ಸಣ್ಣಾಗುವ ನಮ್ಮ ಗೀಗೀ ಮೇಳ ವಾಲಿ ಶರಣ
ಆತನ ಪದವ ಕೇಳ್ರಿ ಮುನ್ನಾ ||


ರಚನೆ :
 ಶರಣಪ್ಪವಾಲಿ
ಕೃತಿ :  ಶರಣ ಸ್ಮೃತಿ