ಘನವಾದ ಶುದ್ಧ ಸಂಗೀತ ಪರಂಪರೆಯನ್ನು ಎತ್ತಿ ಹಿಡಿದು ಅದನ್ನು ಪ್ರತಿಪಾದಿಸುತ್ತಾ ಆಚರಣೆಗೆ ತಂದವರೂ ಗಹನವಾದ, ಗಾಢವಾದ, ಮೌಲಿಕ ಸಂಗೀತ ವಿಚಾರಗಳನ್ನು ವೈಚಾರಿಕ ಮನೋಭಾವದಿಂದ ವಿಶ್ಲೇಷಿಸಿ ಸತ್ವಪೂರ್ಣವಾದ ಸಂಗೀತ ಲಕ್ಷ್ಯಲಕ್ಷಣಗಳ ಅಭಿವ್ಯಕ್ತಿಗೆ ತಮ್ಮನ್ನು ತೊಡಗಿಸಿಕೊಂಡಿರುವವರೂ ನಾಡಿನ ಅಗ್ರ ಶ್ರೇಣಿಯ ವೈಣಿಕರೂ ಈ ನಿಟ್ಟಿನಲ್ಲಿ ಅಪಾರ ಶಿಷ್ಯವರ್ಗಕ್ಕೆ ಮಾರ್ಗದರ್ಶನ ನೀಡುತ್ತಾ ಬಂದವರು ರಾಜ್ಯ ಸಂಗೀತ ವಿದ್ವಾನ್‌ ಪ್ರೊ. ರಾ. ವಿಶ್ವೇಶ್ವರನ್‌ ಅವರು.

ರಾ. ವಿಶ್ವೇಶ್ವರನ್‌ ಅವರ ಜನನ ದಿನಾಂಕ ೧೫.೩.೧೯೩೧ರಂದು ಆಯಿತು. ಇವರದು ಹೆಸರಾಂತ ಸಂಗೀತ ಕುಟುಮಬ. ಇವರ ತಾಯಿ ಶ್ರೀಮತಿ ವರಲಕ್ಷ್ಮಿ. ವಿದ್ವಾನ್‌ ವೀಣಾಸುಂದರ ಶಾಸ್ತ್ರಿಗಳ ಶಿಷ್ಯರು, ಇವರಿಂದ ಗಾಯನಾಭ್ಯಾಸಮಾಡಿದ ಉತ್ತಮ ಗಾಯಕಿ. ಚಕ್ಕನಿರಾಜ ಮಾರ್ಗಮುಲುಂಡಗ, ಬಾಲಗೋಪಾಲ ಮುಂತಾದ ಕೃತಿಗಳನ್ನು ಬಲು ಸುಂದರವಾಗಿ ಹಾಡುತ್ತಿದ್ದವರು. ಆದರೆ ಅಂದಿನ ಕಾಲ ಪ್ರವೃತ್ತಿಯಂತೆ ಈಕೆ ವೇದಿಕೆಯನ್ನೇರಲಿಲ್ಲವಷ್ಟೆ. ಇವರ ತಂದೆ ಶ್ರೀ ರಾಮಯ್ಯನವರು ಸಂಗೀತ ರಸಿಕರು. ರಾಮಯ್ಯನವರ ತಂದೆಯವರು ಸಂಗೀತ ಪ್ರೇಮಿಗಳಾದ್ದು ಇವರು ತಮ್ಮ ಮನೆಯಲ್ಲಿ ಪ್ರತಿ ಶುಕ್ರವಾರದಂದು ತಪ್ಪದೆ ಭಜನೆ ಮಾಡುತ್ತಿದ್ದವರು. ವರಲಕ್ಷ್ಮಿ ರಾಮಯ್ಯನವರಿಗೆ ನಾಲ್ಕು ಜನ ಗಂಡು ಮಕ್ಕಳು, ಅವರುಗಳೆಂದರೆ ರಾ. ಚಂದ್ರಶೇಖರಯ್ಯ, ರಾ. ಸತ್ಯನಾರಾಯಣ, ರಾ. ಸೀತಾರಾಂ ಮತ್ತು ರಾ. ವಿಶ್ವೇಶ್ವರನ್‌. ಈ ಎಲ್ಲರೂ ಸಂಗೀತ ವಿದ್ವಾಂಸರು, ಅಪೂರ್ವ ಮೇಧಾವಿಗಳು, ಸಂಗೀತ ಕ್ಷೇತ್ರದಲ್ಲಿ ಖ್ಯಾತ ನಾಮರು. ರಾ. ವಿಶ್ವೇಶ್ವರನ್‌ ಅವರು ತಮ್ಮ ತಾಯಿಯಿಂದ ಸಂಗೀತ ಸ್ಪೂರ್ತಿ ಪಡೆದು ತಮ್ಮ ಐದನೇ ವಯಸ್ಸಿಗೇ ಅಣ್ಣ ರಾ. ಸೀತಾರಾಂ ಅವರಲ್ಲಿ ಕರ್ನಾಟಕ ಸಂಗೀತ ಗಾಯನ ಪಾಠವನ್ನು ಪಡೆಯಲಾರಂಭಿಸಿದರು. ಬೆಳಯುವ ಸಿರಿಮೊಳಕೆಯಲ್ಲಿ ಎಂಬ ಮಾತಿಗನುಗುಣವಾಗಿ ಸಂಗೀತದ ಬಗೆಗೆ ಅಪಾರ ಒಲವಿದ್ದ ಚಿಕ್ಕ ಬಾಲಕ ವಿಶ್ವೇಶ್ವರನ್‌ ಅವರು ತಮ್ಮ ಅಣ್ಣಂದಿರು ಹಾಡಿ ಕೊಳ್ಳುತ್ತಿದ್ದ ರಾಗಗಳ ಸ್ವರಗಳನ್ನು ನಿರರ್ಗಳವಾಗಿ, ನಿರಾಯಾಸವಾಗಿ ಯಾರ ಮಾರ್ಗದರ್ಶನವಿಲ್ಲದೆ ಹಾಡಿ ಮನೆ ಮಂದಿಗೆಲ್ಲಾ ಸೋಜಿಗವನ್ನುಂಟುಮಾಡುತ್ತಿದ್ದರು. ಬಾಲ ಪ್ರತಿಭಾವಂತರಾಗಿ (child Prodigy) ತಮ್ಮ ಒಂಭತ್ತರ ಹರೆಯದಲ್ಲಿಯೇ ಗಾಯನ ಕಚೇರಿಗಳಿಂದ ತಮ್ಮ ಸಂಗೀತೋಪಾಸನೆಯನ್ನು ಆರಂಭಿಸಿದರು.

ಸಂಗೀತ ಶಿಕ್ಷಣ: ವಿಶ್ವೇಶ್ವರನ್‌ ಅವರು ಈ ಹಿಂದೆಯೇ ತಿಳಿಸಿದಂತೆ ತಮ್ಮ ಸಂಗೀತಗಾಯನ ಶಿಕ್ಷಣವನ್ನು ತಮ್ಮ ಸೋದರ ರಾ. ಸೀತಾರಾಂ ಅವರಲ್ಲಿ ತಮ್ಮ ಚಿಕ್ಕವಯಸ್ಸಿನಲ್ಲಿ ಪಡೆದುಕೊಂಡರು. ಮುಂದೆ ಮಾನುಷ ಗುರುವಿಲ್ಲದೆಯೆ ತಮ್ಮ ಸ್ವಸಾಧನೆ, ಸ್ವಪ್ರತಿಭೆ, ಕೇಳ್ಮೆ, ಅಧ್ಯಯನಗಳಿಂದ ಗಾಯನ, ವೀಣಾವಾದನ, ಗೋಟುವಾದ್ಯ ವಾದನಗಳಲ್ಲಿ ಅಸಾಧಾರಣ ಜ್ಞಾನ, ಪರಿಣತಿ ಗಳಿಸಿಕೊಂಡರು. ಇದಲ್ಲದೆ ಉತ್ತಮ ಸಂಗೀತ ಶಾಸ್ತ್ರಜ್ಞರಾಗಿಯೂ, ವಾಗ್ಗೆಯಕಾರರಾಗಿಯೂ ಕೂಡ ಅಪ್ರತಿಮ ಸಾಧನೆ ಮಾಡಿದರು. ಈ ಎಲ್ಲ ದಿಶೆಗಳಲ್ಲಿಯೂ ಇವರಿಗೆ ಸ್ವ ಅನುಭವ, ಸ್ವಸಾಧನೆ, ಸ್ವಯಂ ಪರಿಶ್ರಮಗಳೇ ಗುರುವು. ತಾಯಿ ವಾಗ್ದೇವಿಯ ಮುಂದೆ ಕುಳಿತು ಪ್ರತಿನಿತ್ಯ ಮಾಡುವ ಸಂಗೀತ ಸಾಧನೆಯೇ ಇವರ ಪ್ರಗತಿಗೆ ದಾರಿದೀಪವಾಯಿತು. ಸದಾ ಅಧ್ಯಯನ ಶೀಲರಾಗಿರುವ ಇವರಿಗೆ ಸಂಗೀತ ಕಾಯಕವೇ ಕೈಲಾಸವಾಯಿತು. ಇದರೊಂದಿಗೆ ಅವರು ಮೈಸೂಫರು ವಿಶ್ವವಿದ್ಯಾನಿಲಯದ ಎಂ.ಎ. ಇಂಡಾಲಜಿ ಪದವೀಧರರು.

ವಿಶಿಷ್ಟ ಶೈಲಿ: ವಾದನ, ಗಾಯನಗಳಲ್ಲಿ ರಾ. ವಿ. ಅವರದು ಒಂದು ವಿಶಿಷ್ಟ ಶೈಲಿ. ತಮ್ಮ ಸ್ವಂತ ಪ್ರತಿಭೆಯಿಂದ ವೀಣಾವಾದನದಲ್ಲಿ ತೊಡಗಿ, ತಮ್ಮದೇ ಆದ ವಾದನ ತಂತ್ರವನ್ನು ನಿರ್ಮಿಸಿಕೊಂಡು ಸುಮಾರು ೫೫ ವರ್ಷಗಳಿಂದಲೂ ಸತತವಾದ ಪ್ರಯೋಗ, ಸಂಶೋಧನೆಗಳ ಫಲದಿಂದ ಇವರು ಗಾಯನ ಶೈಲಿಯ ವೈಣಕ ಶ್ರೇಷ್ಠರು ಎಂದು ಸ್ವದೇಶ ವಿದೇಶಗಳಲ್ಲಿ ಮಾನ್ಯತೆ ಪಡೆದಿದ್ದಾರೆ. ದಿವಂಗತ ಪದ್ಮಭೂಷಣ ವಿದ್ವಾನ್‌ ಡ.ಎಸ್‌. ಬಾಲಚಂದರ್ ಅವರು ಇವರ ವಾದನ ಶೈಲಿಗೆ ಮರುಳಾದವರು ಹಾಗೂ ಇವರ ವಾದನದ ಬಗೆಗೆ ಅತ್ಯಂತ ಹೆಚ್ಚಿನ ಗೌರವವನ್ನು ತಳೆದವರು. ಅಂತೆಯೇ ಬಾಲಚಂದರ್ ಅವರ ವೀಣಾ ವಾದನದ ಬಗೆಗೂ ರಾ.ವಿ. ಅವರಿಗೆ ಅತ್ಯಂತ ಗೌರವ, ಹೆಮ್ಮೆ. ಇವರಿಬ್ಬರದೂ ಘನವಾದ ವೀಣಾವಾದನ ಶೈಲಿ. ರಾ.ವಿ. ಅವರು ತಮ್ಮ ವಿಶಿಷ್ಟ ವೀಣಾವಾದನ ಶೈಲಿಯಿಂದ ೧೯೭೩ರಲ್ಲಿ ವಿದ್ವಜ್ಜನರ ಸಮ್ಮುಖದಲ್ಲಿ ಮದ್ರಾಸಿನಲ್ಲೂ, ೧೯೮೮ರಲ್ಲಿ ಮೈಸೂರಿನಲ್ಲೂ ಗಾಯನ ಶೈಲಿಯ ಸೂಕ್ಷ್ಮಗಮಕ ಪರಿಪ್ಲುತವಾದ ವೀಣಾವಾದಕರೆಂದು ಪುರಸ್ಕರಿಸಲ್ಪಟ್ಟರು. ಒಂದು ಮೀಟಿನಿಂದ ಹಲವಾರು ಸ್ವರಗಳ ನಾದೋತ್ಪತ್ತಿ ಮಾಡುವ, ಬಲಗೈ ಬೆರಳುಗಳಿಂದ ತಂತಿಯನ್ನು ಮೀಟದೆಯೆ ಅದೆಷ್ಟೋ ನಿಮಿಷಗಳ ರಾಗಾಲಾಪನೆಯನ್ನು ನುಡಿಸುವ ಸಂಶೋಧನಾತ್ಮಕವಾದ ಇವರ ವಿಶೇಷ ವೀಣಾವಾದನ ತಂತ್ರವು ವೀಣಾ ವಾದ್ಯದ ಚರಿತ್ರೆಯಲ್ಲಿಯೇ ಏಕೈಕ ದಾಖಲೆಯಾಗಿದೆ. ಇವರ ವೀಣಾವಾದನದಲ್ಲಿ ರಾಗ ರಸವು ತುಂಬಿ ಬಂದು ಮಜಲು ಮಜಲುಗಳಾಗಿ ಔನ್ನತ್ಯಕ್ಕೇರುತ್ತಾ ತುಂಬಿ ಬರುತ್ತದೆ. ಇದರೊಂದಿಗೆ ಬಳ್ಳಾರಿ ಬಿಟ್ಟು ಬೆಂಗಳೂರಿಗೆ ಹೋಗುವವರೆಗೂ ಇವರಿಬ್ಬರೂ ಪುಟ್‌ಬಾಲ್‌ (football) ಆಟದಲ್ಲೂ ಬಹಳ ನುರಿತ ಆಟಗಾರರಾಗಿದ್ದರು. ಇವರಿಬ್ಬರೂ ಒಟ್ಟಾಗಿಯೇ ಇರುವಂತೆ ಬೆಸುಗೆಯನ್ನು ಗಟ್ಟಿಗೊಳಿಸಿದ್ದು ಅವರ ಸಂಗೀತ ಪ್ರೇಮ.

ತಂದೆ ರಾಘವೇಂದ್ರಾಚಾರ್ ೧೯೪೬ ರಲ್ಲಿ ತೀರಿ ಕೊಂಡನಂತರ ವೆಂಕಟೇಶ್‌ ಮತ್ತು ಶೇಷಗಿರಿಯವರು ತಮ್ಮ ಸಂಗೀತ ಶಿಕ್ಷಣವನ್ನು ಅಣ್ಣ ನರಸಿಂಹಮೂರ್ತಿಯವರಲ್ಲಿ ಮುಂದುವರಿಸಿದರು. ೧೦-೧೨ ವರ್ಷಗಳಿರುವಾಗಿನಿಂದಲೇ ಸುತ್ತಮುತ್ತಲ ಊರುಗಳಲ್ಲಿ ಹಾಡಲು ಪ್ರಾರಂಭಿಸಿದರು. ಈ ಚಿಕ್ಕಬಾಲಕರ ಸಂಗೀತ ಕೇಳಿ ಆನಂದಿಸಿದ ಶ್ರೋತೃಗಳು, ಬೇರೆ ಬೇರೆ ಊರುಗಳಲ್ಲೂ ಇವರನ್ನು ಕಚೇರಿಗಳಿಗೆ ಆಹ್ವಾನಿಸುತ್ತಿದ್ದರು. ಅವಿರತ ಸಾಧನೆಯಿಂದ ಇವರು ವಿದ್ಯೆಯನ್ನು ಸ್ವಾಧೀನ ಪಡಿಸಿಕೊಂಡಿದ್ದರು. ಒಮ್ಮೆ ಬಳ್ಳಾರಿಗೆ ಆಗಮಿಸಿದ್ದ ಶ್ರೀ ಪರಮೇಶ್ವರ ಭಾಗವತರೆಂಬುವರು ಇವರನ್ನು ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದರು. ಸಹೋದರರು ಕಚೇರಿ ಮುಗಿಸಿಕೊಂಡು ಬೆಂಗಳೂರಿಗೆ ಬಂದು ತಮ್ಮ ಸೋದರ ಮಾವ ಶ್ರೀ ಭೀಮಸೇನಾಚಾರ್ಯರ ಮನೆಯಲ್ಲಿ ಇಳಿದುಕೊಂಡರು. ಇವರುಗಳು ಬೆಂಗಳೂರಿಗೆ ಬಂದಿರುವುದನ್ನು ತಿಳಿದು ಶ್ರೀ ಪರಮೇಶ್ವರ ಭಾಗವತರು ಆ ಸಮಯ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಒಂದು ವಿಶೇಷ ಸಭೆಗೆ ಆಹ್ವಾನಿಸಿದರು. ಪ್ರೊ. ಪಿ. ಸಾಂಬಮೂರ್ತಿ ಮುಂತಾದ ತಜ್ಞರು ಕಲೆತು ಸಂಗೀತಕ್ಕೆ ಸಂಬಂಧಿಸಿದ ವಿಷಯ ನಿರೂಪಣೆ ಚರ್ಚೆಗಳು ಮುಂತಾದುವನ್ನು ಮಾಡುತ್ತಿದ್ದರು. ಹಾಗೆ ವಿದ್ವನ್ಮಣಿಗಳ ಸಮ್ಮುಖದಲ್ಲಿ ಸಂಜೆ ಬಳ್ಳಾರಿ ಸಹೋದರರ ಗಾಯನ ಕಚೇರಿ ನಡೆಯಿತು. ಇವರ ಗಾಯನ ಕೇಳಿದ ಆ ತಜ್ಞರೆಲ್ಲ ತಲೆದೂಗಿ ಆನಂದ ಪಟ್ಟರು. ಪ್ರೊ. ಪಿ. ಸಾಂಬಮೂರ್ತಿಯವರೂ, ಶ್ರೀ ರಾಘವೇಂದ್ರಾಚಾರ್ಯರೂ ಹಿಂದೆ ಒಟ್ಟಾರೆ ಕ್ವೀನ್‌ ಮೇರೀಸ್‌ ಕಾಲೇಜಿನಲ್ಲಿ ಒಟ್ಟಾಗಿ ಕೆಲಸ ಮಾಡಿದವರು. ಈ ಸಹೋದರರು ರಾಘವೇಂದ್ರಾಚಾರ್ಯರ ಮಕ್ಕಳೆಂದು ತಿಳಿದು ಸಾಂಬಮೂರ್ತಿಯವರು “ಇವರು ನಮ್ಮ ಸ್ನೇಹಿತರಾಗಿದ್ದ ರಾಘವೇಂದ್ರಾಚಾರ್ಯರ ಮಕ್ಕಳೇ!” ಎಂದು ತುಂಬು ಹೃದಯದಿಂದ ಆಶೀರ್ವದಿಸಿದರು.

ಈ ಕಚೇರಿಯನಂತರ ಶ್ರೀ ಪರಮೇಶ್ವರ ಭಾಗವತರು, ಮೃದಂಗ ವಿದ್ವಾನ್‌ ಶ್ರೀ ಟಿ.ಎ.ಎಸ್‌. ಮಣಿಯವರ ತಂದೆಯವರು ಬಳ್ಳಾರಿ ಸಹೋದರರನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ನೆಲೆಸುವಂತೆ ಮನವೊಲಿಸಿದರಂತೆ. ಬಳ್ಳಾರಿಗಿಂತ ಬೆಂಗಳೂರಿನಲ್ಲಿ ಹೆಚ್ಚಿನ ಅವಕಾಶಗಳು ಇರುವುದನ್ನು ಮನಗಂಡು, ಸಹೋದರರು ೧೯೫೫ರ ವೇಳೆಗೆ ಮಲ್ಲೇಶ್ವರಂ ಮೂರನೆಯ ಕ್ರಾಸ್‌ನಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡು, ಅಲ್ಲಿಗೆ ಬಂದು ನೆಲೆಸಿದರು.

ಬೆಂಗಳೂರು ವಾಸ: ಬಳ್ಳಾರಿ ಸೋದರರಾದ ವೆಂಕಟೇಶ್‌ ಮತ್ತು ಶೇಷಗಿರಿಯವರು ಒಟ್ಟಾಗಿಯೇ ಇದ್ದು, ಒಟ್ಟಾಗಿಯೇ ಹಾಡುತ್ತಿದ್ದುದರಿಂದ ಇವರ ಸಂಗೀತ ಕಚೇರಿಗಳನ್ನು ಬೇರ ಬೇರೆಯಾಗಿ ಗುರುತಿಸುವುದು ಸೂಕ್ತವಾಗಲಾರದು. ಅದು ಶೇಷಗಿರಿ ಆಚಾರ್ಯರು ಸಂಗೀಥ ರಚನಕಾರರಾಗಿ ಸಂಗೀತ ಕ್ಷೇತ್ರಕ್ಕೆ ಕೊಟ್ಟಿರುವ ವಿಶೇಷ ಕೊಡುಗೆಯನ್ನು ಮುಂದೆ ವಿವರವಾಗಿ ತಿಳಿಸುವ ಪ್ರಯತ್ನ ಮಾಡಿದೆ.

ಈ ಸೋದರರ ದಿನಚರಿ ಬೆಂಗಳೂರಿಗೆ ಬಂದ ನಂತರ ಬೆಳಿಗ್ಗೆ ೪ ಗಂಟೆಗೆ ಆರಂಭವಾಗುತ್ತಿತ್ತು. ಸೋದರ ಮಾವ ಶ್ರೀ ಭೀಮಸೇನಾಚಾರ್ಯ, ಶ್ರೀ ಟಿ.ಎ.ಎಸ್‌. ಮಣಿಯವರೂ, ವೆಂಕಟೇಶ ಮತ್ತು ಶೇಷಗಿರಿಯವರೂ ಕಲೆತು ಗಾಳಿಸೇವನೆಗಾಗಿ ಜಾಲಹಳ್ಳಿಯವರೆಗೂ ನಡೆದು ಹೋಗಿ, ಅಲ್ಲಿ ವಿಶಾಲವಾದ ಬಯಲಿನಲ್ಲಿ ಕುಳಿತು ಧ್ಯಾನಮಾಡುತ್ತಿದ್ದರಂತೆ, ಅರ್ಧ ಮುಕ್ಕಾಲು ಗಂಟೆ ಹೀಗೆ ಧ್ಯಾನ ಮಾಡಿದ ಮೇಲೆ ಹಿಂತಿರುಗುತ್ತಿದ್ದರಂತೆ. ನಡೆಯುವಾಗ ಮಾತಿಲ್ಲ, ಬರಿ ಮೌನ, ಮನೆಗೆ ಹಿಂತಿರುಗಿದ ನಂತರ ಅಕಾರ ಸಾಧನೆ ಮಾಡುವುದು, ಅನಂತರ ವೆಂಕಟೇಶ್‌ ಅವರು ಮನೆಯ ಪಾಠಗಳಿಗೆ ಹೋದರೆ, ಸಹೋದರ ಶೇಷಗಿರಿ ಸಾಧನೆ ಮುಂದುವರೆಸುತ್ತಿದ್ದರು. ಮಧ್ಯಾಹ್ನ ಇಬ್ಬರೂ ಕೂಡಿ ಸಾಧನೆ ಮಾಡುತ್ತಿದ್ದರು. ಸಂಜೆ ವೇಳೆ ಬೇರೆಯವರ ಸಂಗೀತ ಕೇಳುವುದು ಇವರ ಮುಖ್ಯ ಹವ್ಯಾಸ. ತಮ್ಮದೇ ಕಚೇರಿ ಇರುವಾಗ ಕೊಂಚ ವೇಳೆಯಾದರೂ ಬೇರೆಯವರ ಕಚೇರಿ ಕೇಳಿಕೊಂಡೇ ತಮ್ಮ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು.

ಸಭಾ ಸಂಗೀತ ಕಚೇರಿಗಳು, ರೇಡಿಯೋ ಕಾರ್ಯಕ್ರಮಗಳು ಮತ್ತು ಎಲ್‌.ಪಿ. ರೆಕಾರ್ಡುಗಳನ್ನು ತಪ್ಪದೆ ಕೇಳುವುದು, ಕೇಳಿದ್ದನ್ನೆಲ್ಲ ಕುಳಿತು ಹಾಡಿ ಸಾಧಿಸುವುದು ಇದು ಅವರ ಕ್ರಮ. ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮತ್ತು ಎಂ.ಎಲ್‌.ವಸಂತ ಕುಮಾರಿಯವರ ನೆರವಲ್‌ ಕ್ರಮ, ಜಿ.ಎನ್‌. ಬಾಲಸುಬ್ರಹ್ಮರ್ಣಯಂ ಅವರ ಬಿರ್ಕಾಗಳು, ಆಲತ್ತೂರು ಸಹೋದರರ ಸ್ವರ ವಿನ್ಯಾಸ ಕ್ರಮ ಇವುಗಳನ್ನೆಲ್ಲ ಕೇಳಿ ಅವರಂತೆ ಹಾಡಲು ಅಭ್ಯಾಸ ಮಾಡಿ, ಈ ಎಲ್ಲ ಶೈಲಿಗಳ  ವಿಶಿಷ್ಟತೆಯೂ ಅಂತರ್ಗತವಾಗಿ ಇವರದೇ ಒಂದು ವಿಶಿಷ್ಟ ಶೈಲಿಯಾಗಿ ಇವರ ಗಾಯನ ಪಾಕಗೊಂಡಿತು. ತ್ರಿಕಾಲದಲ್ಲಿ ವರ್ಣ ಅಲ್ಲದೆ ವೈವಿಧ್ಯಪೂರ್ಣ ತಾನಗಳು, ಕ್ಲಿಷ್ಟ ತಾಳಗಳಲ್ಲಿ ಪಲ್ಲವಿಗಳು ಎಲ್ಲವನ್ನೂ ತಾವೇ ಕುಳಿತು ಸಾಧನೆ ಮಾಡಿ ಅನಂತರ ಕಚೇರಿಗಳಲ್ಲಿ ಹಾಡುತ್ತಿದ್ದರು.

ಸಂಗೀತ ಕಚೇರಿಗಳು: ಬಳ್ಳಾರಿ ಸಹೋದರರು ದೇಶ ಸಂಚಾರ ಮಾಡಿ ಹಲವಾರು ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಆಂಧ್ರಪ್ರದೇಶ, ತಮಿಳು ನಾಡು, ಕೇರಳ ಮತ್ತು ಮುಂಬಯಿಗಳಲ್ಲಿ ಹಾಡಿದ್ದಾರೆ. ಸಂಗೀಥ ಕಲಾನಿಧಿ ಟಿ. ಚೌಡಯ್ಯನವರು ವಿಶೇಷವಾಗಿ ಇವರ ಕಚೇರಿಯನ್ನು ೧೫.೧.೧೯೬೧ ರಲ್ಲಿ ಕೊಯಮತ್ತೂರಿನ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಏರ್ಪಾಡು ಮಾಡಿದ್ದರಂತೆ. ೧೯೭೧ರಲ್ಲಿ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ಹಾಡಿದ್ದಾರೆ. ಗಣಪತಿ ಉತ್ಸವ, ರಾಮೋತ್ಸವಗಳಲ್ಲಿ ಪ್ರತಿ ನಿತ್ಯ ಕಚೇರಿಗಳು ತಿಂಗಳಿನಲ್ಲಿ ಮೂವತ್ತು ದಿವಸಗಳೂ ಹಾಡಿದ್ದುಂಟು. ಹೊರ ಊರಿನ ಭಾರೀ ವಿದ್ವಾಂಸರನ್ನೆಲ್ಲ ಕರೆಯುವ ಸಂಗೀತೋತ್ಸವಗಳಲ್ಲಿ ಬಳ್ಳಾರಿ ಸಹೋದರರ ಕಚೇರಿಯು ತಪ್ಪದೆ ಇರುತ್ತಿತ್ತು ಎಂಬುದು ಹೆಮ್ಮೆ ಪಡಬೇಕಾದ ವಿಷಯ. ಕರ್ನಾಟಕದ ಹಿರಿಯ ಕಲಾವಿಮರ್ಶಕರಾಗಿದ್ದ ‘ಸಾರಗ್ರಾಹಿ’ ಬಳ್ಳಾರಿ ಸಹೋದರರ ಗುಣಗಾನವನ್ನು ಹೀಗೆ ಮಾಡಿದ್ದಾರೆ. “ಹಿರಿಯರಾದ ವೆಂಕಟೇಶ ಎಂಬುವರ ಶಾರೀರದಲ್ಲಿ ಸುನಾದ ಹರಿಯುತ್ತೆ, ಕಿರಿಯ ಸಹೋದರರಾದ ಶೇಷಗಿರಿಯವರ ಶಾರೀರದಲ್ಲಿರುವ ಸ್ವಾಭಾವಿಕವಾದ ಒಂದು ವೈಶಿಷ್ಟ್ಯದಿಂದ ಗಮಕಾಂಶವೂ, ಅಕಾರಗಳ ನುಡಿಕಾರವೂ ಹೆಚ್ಚು ಪರಿಣಾಮಕಾರಿಯಾಗಿ ಹೊರಬೀಳುತ್ತದೆ”. ಮುಂದೆ ಈ ಸಹೋದರರು ಸಾವಿರಾರಉ ಕಚೇರಿಗಳನ್ನು ಮಾಡಿ ಖ್ಯಾತಿ ಪಡೆದರು.

ಇವರ ಕಚೇರಿಗಳಲ್ಲಿ ಪ್ರೌಢವಾದ ರಾಗ-ತಾನ ಪಲ್ಲವಿಯು ಪ್ರಮುಖವಾಗಿರುತ್ತಿದ್ದುದನ್ನು ಅವರ ಬಗ್ಗೆ ಬಂದ ವಿಮರ್ಶೆಗಳಿಂದ ತಿಳಿಯಬಹುದು. ಕ್ಲಿಷ್ಟ ಪಲ್ಲವಿಗಳನ್ನು ತ್ರಿಕಾಲ, ತ್ರಿಶ್ರಮಾಡುವುದು, ವಿಲೋಮ ಮಾಡುವುದು ಅದಕ್ಕೆ ಮಾಡುವ ಸ್ವರ ಕಲ್ಪನೆ,ಲೆಕ್ಕಾಚಾರವಿಟ್ಟು ಮಕುಟಗಳನ್ನು, ಕೋರ್ವೆಗಳನ್ನು ಹೆಣೆಯುವುದು ಇದೆಲ್ಲ ಈ ಸಹೋದರರಿಗೆ ಪ್ರಿಯವಾಗಿತ್ತು.

ರೇಡಿಯೋ ಕಚೇರಿ: ಈ ಸಹೋದರರು ಸಾರ್ವಜನಿಕ ಕಚೇರಿಗಳಲ್ಲಿ ಒಟ್ಟಿಗೆ ಹಾಡುತ್ತಿದ್ದರು ರೇಡಿಯೋದಲ್ಲಿ ಇಬ್ಬರೂ ಬೇರೆ ಬೇರೆಯಾಗಿಯೇ ಆಡಿಷನ್‌ ಮಾಡಿಕೊಂಡು, ಒಬ್ಬೊಬ್ಬರೇ ಹಾಡುತ್ತಿದ್ದರು. ಇಬ್ಬರು ‘ಎ’ ದರ್ಜೆಯ ಕಲಾವಿದರಾಗಿದದರು. ೧೯೬೯ರಲ್ಲಿ ಮದ್ರಾಸಿನಲ್ಲಿ ರೇಡಿಯೋ ಸಂಗೀತ ಸಮ್ಮೇಳನದಲ್ಲಿ ಹಾಡುವಗ ಇಬ್ಬರೂ ಒಟ್ಟಾಗಿಯೇ ಹಾಡಿದ್ದಾರೆ.

ಇವರ ಕಾರ್ಯಕ್ರಮಗಳು ದೊಡ್ಡ ದೊಡ್ಡ ವೇದಿಕೆಗಳಲ್ಲಿ ನಡೆದಿರುವುದೇ ಅಲ್ಲದೆ ನಾಡಿನ ಅತಿ ಉಚ್ಚಶ್ರೇಣಿಯ ಕಲಾವಿದರು ಇವರಿಗೆ ಪಕ್ಕವಾದ್ಯಗಳನ್ನು ನುಡಿಸಿದ್ದಾರೆ. ಅವರಲ್ಲಿ ಕೆಲವರನ್ನು ಮಾತ್ರ ಹೆಸರಿಸಬಹುದಾದರೆ ಸರ್ವಶ್ರೀ ಲಾಲ್‌ಗುಡಿ ಜಯರಾಮನ್‌, ಎಂಎಸ್‌. ಗೋಪಾಲಕೃಷ್ಣನ್‌, ಎಂ. ಚಂದ್ರಶೇಖರ್, ಅನ್ನವರಪು ರಾಮಸ್ವಾಮಿ, ಎಸ್‌. ಮಹದೇವಪ್ಪ ಪಿಟೀಲಿನಲ್ಲೂ, ಮೃದಂಗದಲ್ಲಿ ಸರ್ವ ಶ್ರೀ ಪಾಲಘಾಟ್‌ ಮಣಿಅಯ್ಯರ್, ಪಾಲಘಾಟ್‌ ರಘು, ಟಿ.ಕೆ,ಮೂರ್ತಿ ಶಿವರಾಮನ್‌ ಮುಂತಾದವರು.

ಕೃತಿಭಂಡಾಋದ ಕೊಡುಗೆ: ಕೇಳಿದೊಡನೆ ಸುಖ ನೀಡುವುದು ಸಂಗೀತ, ಅಲ್ಲಿಂದ ಮುಂದೆ ಒಬ್ಬ ಗಾಯಕನ/ವಾದಕನ ಶೈಲಿ, ಅವನ ವಿದ್ವತ್ತು, ಅವನ ಅಸ್ತಿತ್ವ ಹೇಗೆ ಮುಂದುವರೆಯುತ್ತದೆ? ಈಗೇನೋ ಕ್ಯಾಸೆಟ್‌ಗಳು, ಸಿ.ಡಿಗಳಲ್ಲಿ ಮುದ್ರಿಸಿ ಇಡುವ ಭಾಗ್ಯ ಇದೆ. ಆದರೆ ಬಳ್ಳಾರಿ ಸಹೋದರರ ಗಾಯನದ ಧ್ವನಿಸುರಳಿಗಳು ಬಹುಶಃ ಹೆಚ್ಚಾಗಿ ಇಲ್ಲ. ಇತ್ತೀಚೆಗೆ ಹೊಸದಾಗಿ ಒಂದು ಸಿ.ಡಿ. ಮತ್ತು ಕ್ಯಾಸೆಟ್‌ ಜೋಡಿ ಮಾತ್ರ ಲಭ್ಯವಿದೆ. ಹಿಂದೆ ಅವರು ಹಾಡಿದ ನೆನಪುಗಳು ಮಾತ್ರ ಮನಸ್ಸಿನಾಳದಲ್ಲಿ ಆ ನೆನಪಿನ ಸುಖವನ್ನು ಮೆಲುಕು ಹಾಕಬೇಕಷ್ಟೆ, ಆದರೆ ಗಾಯಕರು ತಮ್ಮ ಕಲೆಗಾರಿಕೆಯನ್ನು ತಮ್ಮ ರಚನೆಗಳಲ್ಲಿ ಹಿಡಿದಿದ್ದರೆ ಸಂಗೀತ ಪ್ರಪಂಚಕ್ಕೆ ಮುಂದೆ ಬಹಳ ಕಾಲದವರೆಗೂ ರಚನಕಾರರು ದಾರಿದೀಪವಾಗಬಲ್ಲರು. ಅವರ ಕೃತಿಗಳು ಮುಂದಿನ ಅನೇಕ ಪೀಳಿಗೆಗಳವರ ನಾಲಿಗೆಯ ಮೇಲೆ ನಲಿದಾಡಲು ಸಾಧ್ಯ!

ಶೇಷಗಿರಿಯವರಿಗೆ ಈ ರಚನಾ ಕೌಶಲ ಒದಗಿ ಬಂದ ವಿಶೇಷ ಸಂದರ್ಭ ಯಾವುದು? “೧೯೬೧ ನೇ ಇಸವಿ ನರಕ ಚತುರ್ದಶಿಯ ಶುಭದಿನದಂದು ರಾತ್ರಿ ಪ್ರಣವನಾದವನ್ನು ಬಲಗಿವಿಯಲ್ಲಿ ಕೆಲವು ಬಾರಿ ಕೇಳಿದೆ. ಕೆಲವೇ ನಿಮಿಷಗಳ ನಂತಹ ‘ಓಂಕಾರ ರೂಪ ಶ್ರೀ ಗಜವದನ’ ಎಂಬ ಹಿಂದೋಳ ರಾಗ, ಆದಿತಾಳದ ಕೃತಿಯನ್ನು ಪ್ರಪ್ರಥಮವಾಗಿ ‘ವಿಶೇಷ’ ಅಂಕಿತದಿಂದ ರಚಿಸಿದೆ”.- ಎಂದು ಶೇಷಗಿರಿ ಆಚಾರ್ಯರು ತಮ್ಮ ‘ವಿಶೇಷ ಕೃತಿ ಮಾಲಾ’ ಎಂಬ ಪುಸ್ತಕದ ಬಿನ್ನಹದಲ್ಲಿ ಬರೆದುಕೊಂಡಿದ್ದಾರೆ. ಅಂದರೆ ಶೇಷಗಿರಿಯವರು ತಮ್ಮ ೨೬ನೆಯ ವಯಸ್ಸಿನಿಂದಲೇ ರಚನೆಗೆ ತೊಡಗಿದರು ಎಂಬುದು ತಿಳಿಯುತ್ತದೆ. ಅವರು ಸುಮಾರು ೩೫೦ಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಹಿಂದೂ ಪುರಾಣದ ಎಲ್ಲ ದೇವದೇವಿಯರು, ತ್ಯಾಗರಾಜದೀಕ್ಷಿತರು, ರಾಘವೇಂದ್ರ ಸ್ವಾಮಿ, ವ್ಯಾಸರಾಯರು, ವಾದಿರಾಜರು, ವಿಜಯದಾಸರು, ಶಂಕರಾಚಾರ್ಯರು, ಶಿರಡಿ ಸಾಯಿಬಾಬಾ, ರಮಣ ಮಹರ್ಷಿಗಳು, ಯೋಗಿ ಲಕ್ಷ್ಮಮ್ಮ ಮುಂತಾದ ಎಲ್ಲರ ಮೇಲೂ ಕೃತಿ ರಚಿಸಿದ್ದಾರೆ. ಇವರ ಕೃತಿಗಳ ಸಂಖ್ಯೆ ವಿಪುಲವಾಗಿದ್ದು, ಅವರು ಸದಾ ದೈವಚಿಂತನೆಯಲ್ಲಿರುತ್ತಿದ್ದರೆನ್ನುವುದಕ್ಕೆ ಇವು ಸಾಕ್ಷಿಯಾಗಿದೆ. ಇವರು ಪರಮ ದೈವಭಕ್ತರು. ಸತತವಾಗಿ ಸಂಗೀತವನ್ನೇ ಧ್ಯಾನಿಸುವ, ದೇವರನ್ನೂ, ಆಧ್ಯಾತ್ಮ ಚಿಂತನೆಯನ್ನೂ ಮಾಡುವಂತಹ ಸಾತ್ವಿಕ ಮನೋಧರ್ಮದವರಾಗಿದ್ದರೆಂದು ಅವರ ಕೃತಿಗಳಿಂದ ಅರ್ಥಮಾಡಿಕೊಳ್ಳಬಹುದು. ಕೆಲವೊಮ್ಮೆ ಕಚೇರಿಗಳಿಗೆಂದು ಹೋದ ಊರುಗಳಲ್ಲಿ ಅಲ್ಲಿನ ದೈವಗಳ ಮೇಲೆ ಕೃತಿ ರಚಿತವಾಗುತ್ತಿತ್ತಂತೆ. ಒಮ್ಮೆ ಗಿರಿಜಾ ಕಲ್ಯಾಣ ಉತ್ಸವದಲ್ಲಿ ನಂಜನಗೂಡಿನಲ್ಲಿ ಹಾಡಲು ಆಹ್ವಾನ ಬಂದಿದ್ದು ‘ಶಿವನ ಮೇಲೆ ಒಂದು ಕೃತಿಯನ್ನು ನೀ ಮಾಡಿದರೆ ಚೆನ್ನಾಗಿತ್ತು’ ಎಂದು ಅಣ್ಣ ವೆಂಕಟೇಶ್‌ ಹೇಳಿದಾಗ-‘ಹೌದು, ಆದರೆ ಯಾವುದೂ ತಯಾರಾಗಿಲ್ಲ’-ಎಂದ ಶೇಷಗಿರಿ, ಮರುದಿನ ಬೆಳಿಗ್ಗೆ ‘ಚಂದ್ರಶೇಖರಂ ಭಜಾಮಿ ಸತತಂ’ ಚಂದ್ರಕೌಂಸ್‌ ರಾಗದ ಕೃತಿಯನ್ನು ರಚಿಸಿ-‘ಇದೋ, ಒಂದು ಕೃತಿ ತಯಾರಾಗಿದೆ’-ಎಂದರಂತೆ ಅವರಣ್ಣನ ಬಳಿ! ಎಷ್ಟೋ ಬಾರಿ ಪ್ರಯಾಣ ಸಂದರ್ಭದಲ್ಲಿ ಬಸ್‌ ಟಿಕೆಟ್‌, ಆಹ್ವಾನ ಪತ್ರಿಕೆಯ ಲಕೋಟೆಗಳ ಮೇಲೆ ಬರೆದಿರುವುದನ್ನು ಅವರ ಮನೆಯಲ್ಲಿ ನೋಡಬಹುದು.

ಕೃತಿಗಳು ಬರೀ ಸಾಹಿತ್ಯವಾಗಿ-ಪದ್ಯವಾಗಿ ಗೋಚರಿಸದೆ ಅದಕ್ಕೆ ಸಂಗೀತವೂ ಸೇರಿ ಬಂದಾಗ ಅವು ವಾಗ್ಗೇಯ ಕೃತಿಗಳು ಎನಿಸಿಕೊಳ್ಳುತ್ತವೆ. ಕೆಲವೊಮ್ಮೆ ಶೇಷಗಿರಿ ಅವರಿಗೆ ಗೋಚರಿಸಿದ ರಾಗಗಳು ಆರ್ಷೆಯವಾದ, ಬಳಕೆಯಲ್ಲಿರುವ ರಾಗಗಳಾಗಿ ಇರುತ್ತಿದ್ದವು. ಅಪರೂಪದ ರಾಗ ಛಾಯೆಗಳೂ ಅದುವರೆಗೂ ಕೇಳಿರದಂಥ ರಾಗಗಳೂ ಗೋಚರಿಸಿದಾಗ, ಆ ರಾಗದ ಛಾಯೆಗಳನ್ನು ಸಂಗೀತ ಗ್ರಂಥಗಳಲ್ಲಿ, ಹುಡುಕಿ ರಾಗ ನಿರ್ಧಾರ ಮಾಡುತ್ತಿದ್ದರೆಂದು ಅವರ ಪತ್ನಿ ಶ್ರೀಮತಿ ಕೃಷ್ಣವೇಣಿ ಹೇಳುತ್ತಾರೆ. ಹೀಗೆ ಅವರಿಂದ ಅಪರೂಪ ರಾಗಗಳು ಬೆಳಕಿಗೆ ಬಂದಿವೆ. ಅವು ಯಾವುವೆಂದರೆ ಹ್ರಾದಿನಿ, ನಿಟಿಲಪ್ರಕಾಶಿನಿ, ತ್ರಿಮೂರ್ತಿ, ನಾಗಗಿರಿ, ಈಶಗಿರಿ, ಗಗನರಂಜನಿ, ಅಕ್ಷರಿ, ಓಂಕಾರಿ, ಸೂತ್ರಧಾರಿ, ಮನೋರಂಜನಿ, ಹಂಸಮೋಹನ, ಶ್ರೀ ಚಿಂತಾಮಣಿ. ಇವುಗಳಲ್ಲಿ ಕೆಲವನ್ನು ಅವರೇ ಸೃಷ್ಟಿಸಿಯೂ ಇದ್ದಾರೆ. ಉದಾಹರಣೆಗಾಗಿ ‘ಅಕ್ಷರಿ’ ಎಂಬ ರಾಗದಲ್ಲಿರುವ ‘ಅನುದಿನ ಮನದಲಿ ಆರಾಧಿಸುವರ’ ಎಂಬ ಕೃತಿ. ಈ ರಾಗದ ಸ್ವರೂಪವಾಗಲೀ, ‘ಅಕ್ಷರಿ’ ಎಂದೇ ಗೋಚರಿಸಿದ ಹೆಸರಾಗಲೀ ಯಾವ ಗ್ರಂಥಗಳಲ್ಲೂ ದೊರೆಯಲಿಲ್ಲವಾಗಿ ಇದು ಇವರದೇ ಹೊಸ ಕಲ್ಪನೆ ಎಂದು ಹೇಳಬಹುದು. ಈ ಕೃತಿಯಲ್ಲಿ ಅಕಾರಾದಿಯಾಗಿ ವರ್ಣಗಳನ್ನು ಅನುಕ್ರಮದಲ್ಲಿ ಒಳಗೊಂಡ ಪಾದಗಳನ್ನುಳ್ಳ ಅಕ್ಷರಮಾಲಾ ಕೃತಿಯಾಗಿದೆ.

ಇದಲ್ಲದೆ ಸರಿಗ ಇತ್ಯಾದಿ ಸ್ವರಗಳನ್ನು ಯಥೋಚಿತ ಕ್ರಮದಲ್ಲಿ ಸಹಜವಾಗಿ ಮೂಡಿಸಿರುವ ಸಪ್ತಸ್ವರ ಮಾಲಾ ಕೃತಿಯೂ ಇದೆ.

ಶೇಷಗಿರಿಯವರು ೭೨ ಮೇಳಕರ್ತ ರಾಗಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳ ನಿಧಾನಗತಿ, ರಾಗಭಾವಗಳು, ವಿಶೇಷಣಗಳನ್ನು ಹೆಣೆದಿರುವುದು ಮತ್ತು ರಾಗದ ಹೆಸರುಗಳನ್ನು ಕೃತಿಯಲ್ಲಿ ಸೂಚಿಸಿರುವುದು ಇವೆಲ್ಲ ಅಂಶಗಳಿಂದ ಇವರ ಸಂಸ್ಕೃತ ರಚನೆಗಳು ಬಹಳ ಮಟ್ಟಿಗೆ ದೀಕ್ಷಿತರ ಕೃತಿಗಳನ್ನು ಹೋಲುತ್ತವೆ. ತೆಲುಗು ಮತ್ತು ಕನ್ನಡ ರಚನೆಗಳು ಸ್ವಂತಿಕೆಯಿಂದ ಬೆಳಗುವಂತಿದೆ. ಹಿಂದಿ ಮತ್ತು ತಮಿಳಿನಲ್ಲಿ ಒಂದೊಂದು ರಚನೆ ಮಾಡಿದ್ದಾರೆ. “ಕೊಲ್ಲಾಪುರದ ಲಕ್ಷ್ಮಿಯನ್ನು ಮನಸ್ಸಿನಿಂದ ಕೊಂಡಾಡಿ ರಚಿಸಿದ ಕೃತಿಯ ಸಾರಾಂಶವು, ಮಾರನೆಯ ದಿನವೇ ಪ್ರತ್ಯಕ್ಷವಾದ ಘಟನೆಯೊಂದು ನಡೆದು ನನ್ನನ್ನು ಮೂಕನನ್ನಾಗಿ ಮಾಡಿದ  ಸಂದರ್ಭವು ಜೀವನದಲ್ಲಿ ಮರೆಯಲಾಗದು” ಎಂದು ಸ್ವತಃ ಶೇಷಗಿರಿಯವರೇ ತಮ್ಮ ಅನುಭವವನ್ನು ಹೇಳಿದ್ದಾರೆ. ‘ನಡಚಿ ವಚ್ಚೆ ಮಾ ಕುಲದೈವಮು’ ಎಂಬ ಸಾರಂಗ ರಾಗದ ಕೃತಿ ನರಸಿಂಹ ದೇವರು ಕಂಡಂತಾಗಿ ರಚಿಸಿದ್ದು.

ಶ್ರೇಷ್ಠಗಾಯಕರಾಗಿದ್ದ ಶ್ರೀ ಶೇಷಗಿರಿ ಆಚಾರ್ಯರು ಶಿವಮೊಗ್ಗದಲ್ಲಿ, ಒಂದು ಸಮಾರಂಭದಲ್ಲಿ ಸತತವಾಗಿ ಏಳುಗಂಟೆಗಳು ಕಚೇರಿಯನ್ನು ಮಾಡಿ ೧೯೬೮ರ ನಂತರ ಅವರ ಶಾರೀರ ಮುಚ್ಚಿಕೊಂಡು ಹಾಡುವುದು ಕಷ್ಟವಾಯಿತು. ಔಷಧೋಪಚಾರಗಳೆಲ್ಲ ಆದವು. ವರ್ಷಂಪ್ರತಿ ಮಂತ್ರಾಲಯಕ್ಕೆ ಹೋಗಿ ಸೇವೆ ಮಾಡುವ ಪದ್ಧತಿಯ ಪ್ರಕಾರ ಕಂಠದ ತೊಂದರೆ ಕಾಣಿಸಿಕೊಂಡ ಮೇಲೂ ಗುರುಗಳ ಸೇವೆ ಮಾಡಿಬಂದರು. ನಂತರ ಅವರು ಕಳೆದುಕೊಂಡ ಶಾರೀರ ಸಂಪತ್ತು ಕೊಂಚ ಭಾಗ ಅವರಿಗೆ ತಿರುಗಿ ಬಂದಿತು. ಆ ನಂತರ ಕೃತಿ ರಚನಾ ಕೌಶಲ ಹೆಚ್ಚಾಯಿತು.

ಸನ್ಮಾನಗಳು: ಮೈಸೂರಿನ ಹನುಮಜಯಂತಿ ಉತ್ಸವದಲ್ಲಿ ಶ್ರೀ ಶ್ರೀ ಶ್ರೀ ೧೦೮ ಪರಕಾಲಮಠದ ಸ್ವಾಮಿಗಳು ೧೯೮೧ ರಲ್ಲಿ ಗಾನಗಂಧರ್ವ ಬಿರುದನ್ನಿತ್ತು ಗೌರವಿಸಿದ್ದಾರೆ. ೧೯೮೩ರಲ್ಲಿ ಫಲ ಪುಷ್ಪ ಶಾಲುಗಳೊಂದಿಗೆ, ‘ರಮ್ಯ ಎಜುಕೇಷನಲ್‌ ಅಂಡ್‌ ಕಲ್ಚರಲ್‌ ಸೊಸೈಟಿಯವರು ಗೌರವಿಸಿದ್ದಾರೆ. ತ್ಯಾಗರಾಜ ಸಂಗೀತ ಸಭಾ, ರಾಜಾಜಿನಗರ ಇವರು ೧೯೮೪ ರಲ್ಲಿ ಶ್ರೀ ಎ. ಸುಬ್ಬರಾಯರ ಅಧ್ಯಕ್ಷತೆಯಲ್ಲಿ ಕಲಾನಿಧಿ ಬಿರುದನ್ನಿತ್ತು ಗೌರವಿಸಿದ್ದಾರೆ.

ಇವರು ಹಾಡುಗಾರಿಕೆಯಲ್ಲದೆ ವಯೋಲಿನ್‌, ಗೋಟುವಾದ್ಯ, ಖಂಜರಿ ವಾದ್ಯಗಳನ್ನು ಅಭ್ಯಾಸ ಮಾಡಿದ್ದಾರೆ. ೧೯೭೪ ರಿಂದ ೧೯೮೧ ರವೆಗೂ ಬೆಂಗಳೂರಿನ ವಿಶ್ವವಿದ್ಯಾನಿಲಯದ ಸಂಗೀತ ನೃತ್ಯ ನಾಟಕ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಶಿಷ್ಯರಾದ ವಿದುಷಿ ಆರ್.ಎ. ರಮಾಮಣಿಯವರು ಭಕ್ತಿ ಗೌರವಗಳಿಂದ ತಮ್ಮ ಗುರುಗಳನ್ನು ಕೊಂಡಾಡುತ್ತಾರೆ. ಶಿಷ್ಯರಿಗೆ ಕಲಿಸಿಕೊಡಬೇಕೆಂಬಾಸೆ, ಅವರ ಶಿಷ್ಯ ವಾತ್ಸಲ್ಯ, ಇವುಗಳು ಅನುಪಮ ಗುಣಗಳಾಗಿದ್ದುವಂತೆ. ಮನೋಧರ್ಮ ಸಂಗೀತ ಹಾಡುವಾಗ ಅವರ ಕಲ್ಪನೆಯ ಮಜಲುಗಳು ಬಹಳ ಉತ್ತುಂಗದಲ್ಲಿದ್ದು ಸಾಮಾನ್ಯರಿಗೆ ಈ ಭಾವಗಳು ಎಟುಕಲು ಸಾಧ್ಯವೆ ಎನಿಸಿದರೂ, ಶಿಷ್ಯರ ಅರ್ಹತೆ ತಿಳಿದುಕೊಂಡು, ಅವರಿಗೆ ಸಾಧನೆಯಿಂದ ಆ ಎತ್ತರ ಮುಟ್ಟಲು ಸಾಧ್ಯ ಅರಿವಾಗಿ ಬಿಟ್ಟರೆ ಪಟ್ಟುಬಿಡದೆ ಶಿಷ್ಯರಿಂದ ಹಾಡಿಸುತ್ತಿದ್ದಂತೆ ಶೇಷಗಿರಿಯವರು. ಇವರ ಮತ್ತೊಬ್ಬ ಶಿಷ್ಯೆ ವಿದುಷಿ ಡಾ. ಸರ್ವಮಂಗಳಾ ಶಂಕರ್ ಅವರು “ಅಗಾಧ ಮನೋಧರ್ಮ, ಮಿಂಚಿನಂತೆ ಬಂದು ಹೋಗುವ ಝಳಪಿನ ಸಂಚಾರ, ತ್ರಿಕಾಲ ಮಿಶ್ರಣದ ಶುದ್ಧ ಗಾಯನ ಶೈಲಿ, ಸಂಪ್ರದಾಯಬದ್ಧ ಬಿಗುಸಂಗೀತ, ಒಂದೇ ರಾಗದಲ್ಲಿ ದಿನಗಟ್ಟಲೆ ಸ್ವರಕಲ್ಪನೆ ಮಾಡುವೆ ಒಮ್ಮೆ ಹಾಡಿದುದನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂದು ಹೇಳುವ ದಾಷ್ಟಿಕೆ, ಅದರಂತೆಯೇ ಇದ್ದ ಅಪೂರ್ವ ಜ್ಞಾನ ಭಂಡಾರ-ಮನೋಧರ್ಮ, ಬಾಯಿಬಿಟ್ಟು ಹಾಡುವ ತುಂಬುನಾದ ಗಾಯನ ಶೈಲಿ, ಅತ್ಯಂತ ಪರಿಣಾಮಕಾರಿ ಗಮಕ ಪ್ರಯೋಗ ರೀತಿ, ಇವೆಲ್ಲಕ್ಕೆ ತಿಲಕಪ್ರಾಯದಂತೆ ಮಾತೃಹೃದಯ, ಶಿಷ್ಯರಿಗೆ ತಂದೆಯವರೇ ಪಾಠ ಹೇಳಿಕೊಡುತ್ತಿದ್ದಾರೇನೋ ಎಂಬಂತೆ ಭಾಸವಾಗುವ ನೆಮ್ಮದಿಯ ಪಾಠ ವೈಖರಿ ಇವು ನಮ್ಮ ಗುರುಗಳ ವೈಶಿಷ್ಟ್ಯ. ಹೇಳಿಕೊಟ್ಟ ಸಂಚಾರವನ್ನು ಶಿಷ್ಯೆ ಸರಿಯಾಗಿ ಅನುಸರಿಸಿದರೆ ಸವಾಲಿನಂತೆ ಮತ್ತೊಂದು ಪ್ರಯೋಗ, ಅದಕ್ಕಿಂತ ಕ್ಲಿಷ್ಟವಾದ ಮತ್ತೊಂದು ಪ್ರಯೋಗ, ಮಗದೊಂದು  ಕ್ಲಿಷ್ಟಪ್ರಯೋಗ, ಹೀಗೆ ಅವರ ತರಗತಿಯೇ ಒಂದು ವಿಶೇಷ ಅನುಭವ ನೀಡುತ್ತಿತ್ತು. ಹೀಗೆ ಅವರಿಂದ ಪಾಠ ಕಲಿತ, ಮನೋಧರ್ಮದ ಆಳ ಅಗಲಗಳನ್ನು ಅರಿತ ನಾವೇ ಧನ್ಯರು. ಅವರ ಸಾವು ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡನಷ್ಟ. ಒಟ್ಟಿನಲ್ಲಿ ನಮ್ಮ ಮೇಷ್ಟ್ರು ಅಪೂರ್ವ ವ್ಯಕ್ತಿ ಹಾಗೂ ಪ್ರಾತಃ ಸ್ಮರಣೀಯರು” ಎನ್ನುತ್ತಾರೆ. ಕಾಲೇಜಿನಲ್ಲಿ ಅವರಿಂದ ಪಾಠ ಕಲಿತ ವಿದುಷಿ ಶ್ರೀಮತಿ ಪದ್ಮಾ ಗುರುದತ್‌ ಅವರೂ ಶೇಷಗಿರಿಯವರ ಸಹೃದಯತೆ, ನಯವಂತಿಕೆಗಳನ್ನು ಕೊಂಡಾಡುತ್ತಾರೆ. ತಪ್ಪುತಿದ್ದಬಹುದೆ? ನೀವು ಬೇಸರಿಸಿಕೊಳ್ಳುವುದಿಲ್ಲ ತಾನೆ? ಎಂದು ಶಿಷ್ಯರನ್ನು ಕೇಳುತ್ತಿದ್ದರಂತೆ. ‘ಸರಿಯಾಗಿ ಪದಚ್ಛೇದ ಮಾಡಿ ಹಾಡಿದರೆ, ನಿಮ್ಮ ಹಾಡುಗಾರಿಕೆ ಇನ್ನೂ ಉತ್ತಮವಾಗಿರುತ್ತದೆ’ ಎನ್ನುತ್ತಿದ್ದರಂತೆ. ಶೇಷಗಿರಿಯವರ ಪ್ರಮುಖ ಶಿಷ್ಯರು: ಆರ್.ಎ. ರಮಾಮಣಿ, ಡಾ. ಸರ್ವಮಂಗಳಾ ಶಂಕರ್, ಸುಲೋಚನ, ಎಂ. ರಾಘವೇಂದ್ರ, ಉಷಾಚಾರ್ ಮತ್ತು ಪುತ್ರಿ ಎಂ.ಎಸ್‌. ವಿದ್ಯಾ.

ಇದುವರೆಗೆ ಅವರ ೨೫ ರಚನೆಗಳನ್ನು ಮಾತ್ರ ಒಳಗೊಂಡ ‘ವಿಶೇಷ ಕೃತಿ ಮಾಲಾ’ ಎಂಬ ಪುಸ್ತಕ ೧೯೮೫ರಲ್ಲಿ ಪ್ರಕಟವಾಗಿದೆ. ಇನ್ನುಳಿದ ಕೆಲವು ರಚನೆಗಳನ್ನು ಸ್ವತಃ ಶೇಷಗಿರಿಯವರೇ ಸ್ವರಪಡಿಸಿ ಬರೆದಿಟ್ಟಿದ್ದಾರೆ. ಇನ್ನೂ ಕೆಲವಕ್ಕೆ ರಾಗಗಳು ಮಾತ್ರ ಸೂಚಿತವಾಗಿವೆ. ಇವೆಲ್ಲದರ ಸ್ವರ ಪ್ರಸತಾರ ಆಗಬೇಕು.

ಶೇಷಗಿರಿಯವರು ತಮ್ಮ ಕೇವಲ ಅರ್ಧಶತಕದ ಜೀವಿತದ ಅವಧಿಯಲ್ಲಿ ಗಾಯಕರಾಗಿ, ವಾದ್ಯಗಾರರಾಗಿ, ರಚನಾಕಾರರಾಗಿ, ಅಧ್ಯಾಪಕರಾಗಿ, ಪ್ರೀತಿಯ ಗುರುವಾಗಿ, ಮನೆಯವರಿಗೆ ಸಹೃದಯ ಬಂಧುವಾಗಿದ್ದು ತಮ್ಮ ಸಾಧನೆಗಳಿಂದ ಈಗಲೂ ನಮ್ಮೊಡನೆ ಇದ್ದಾರೆ. ಇವರ ದೇಹಾಂತ್ಯವು ಮಾತ್ರ ೧೯೮೫ರಲ್ಲಿ ಆಯಿತು. ಶೇಷಗಿರಿಯವರು ಕೀರ್ತಿಶೇಷರು.!

 

ಆಭಾರ:

ಶ್ರೀಮತಿ ಎಂ.ಎಸ್‌.ವಿದ್ಯಾ, ಶ್ರೀಮತಿ ಕೃಷ್ಣವೇಣಿ ಶೇಷಗಿರಿ ಆಚಾರ್, ಶ್ರೀ ಬಳ್ಳಾರಿ ಎಂ. ವೆಂಕಟೇಶಾಚಾರ್