ಕಂಡೆ ಹೇಳಣ್ಣ ನಮ್ಮ ಶಿವಪುರವ
ಎಂಬ ಊರ ಮಂಡಳ ಗಿರೀಶನ
ಕರುಣದಿಂದ ನಾ ಓಡಿ ಬಂದೆ || ಕಂಡೆ ||

ಜಲವು ಇಲ್ಲದೆ ಬಾವಿ ತುಂಬುವುದೇ
ತುಂಬಿ ತುಳುಕುವುದೇ ಅಳಿಲು ಇಳಿದು
ನೀರ ಕುಡಿಯುವುದೇ ಜಲ ಬತ್ತುವುದೇ || ಕಂಡೆ ||

ನೆಲವು ಇಲ್ಲದೆ ಮರ ಹುಟ್ಟುವುದೇಕಯ್ಯ
ಬಿಟ್ಟುಹುದೆ ಕೈಕಾಲಿಲ್ಲದೆ ಬದುಕಿಹುದು
ಕಾಯ ಕಚ್ಚಿಹುವುದು || ಕಂಡೆ ||

ಗಾಲಿ ಇಲ್ಲದ ರಥ ಉರುಳುವುದೆ ನೆಲ
ಬರಿಯುದೆ ಭಕ್ತಿಯೆಂಬುದು
ಬಂದು ಕಾಯುವುದು ಗುಂಡು ತೇಲುವುದೇ || ಕಂಡೆ ||

ರಕ್ಕೆ ಇಲ್ಲದ ಪಕ್ಷಿ ಹಾರುವುದೇ ಬೈಲಸೇರುವುದೇ
ಲಕ್ಕ ವಿಲ್ಲದ ಗಣಿತ ಮಾಡುವರು
ಜಮ ಕೂಡುವರು || ಕಂಡೆ ||

ಏಸೆ ಮನೆಯೆಂದು ತಿರುಗುಲವ್ವ ಸುಗುಣ
ಕಳಿಯಲ್ಲವ್ವ ಮೂಡಲ ಗೀರೀಶನ
ಕೊಡಲವ್ವ ಮುಕ್ತಿ ಬೇಡಲವ್ವ || ಕಂಡೆ ||