ಜನನ : ೧೯೪೧ ರಲ್ಲಿ

ಮನೆತನ: ಸಾಹಿತ್ಯ-ಸಂಸ್ಕೃತಿ ಜ್ಯೋತಿಷ್ಯಾಶಾಸ್ತ್ರ ಬಲ್ಲವರ ಮನೆತನ. ತಂದೆ ಟಿ. ಎಂ. ಮಹಾಂತಯ್ಯಶಾಸ್ತ್ರಿಗಳು ಹೆಸರಾಂತ ಜ್ಯೋತಿಷಿಗಳು.

ಶಿಕ್ಷಣ : ತಂದೆಯವರಿಂದ, ಅನಂತರ ವೇ. ಮೂ. ಕೆ. ಎಂ. ಅಯ್ಯಪ್ಪಶಾಸ್ತ್ರಿಗಳಿಂದ ಭಾಷೆ – ಕಾವ್ಯ – ಜ್ಯೋತಿಷ್ಯ – ವಾಸ್ತು ಶಾಸ್ತ್ರಗಳಲ್ಲಿ ಶಿಕ್ಷಣ ಪಡೆದು ಮುಂದೆ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಡಾ|| ಪುಟ್ಟರಾಜಗವಾಯಿಗಳಲ್ಲಿ ಉಭಯ ಗಾನ ಪದ್ಧತಿ (ದಕ್ಷಿಣಾದಿ – ಉತ್ತರಾದಿ)ಗಳಲ್ಲಿ ಶಿಕ್ಷಣ ಪಡೆದು ಕೀರ್ತನ ಕಲೆಯನ್ನು ಅಭ್ಯಸಿಸಿದರು.

ಕ್ಷೇತ್ರ ಸಾಧನೆ : ಪಂಚಾಕ್ಷರಿ ಗವಾಯಿಗಳ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ ಸಂಘದಲ್ಲಿ ಬಾಲ ನಟನಾಗಿ ಸೇರಿ ಅದರ ಪ್ರಭಾವದಿಂದ ಕೀರ್ತನ ಕಲೆಯಲ್ಲಿ ಹೆಚ್ಚಿನ ಆಸಕ್ತಿ ತಳೆದರು. ಕೇವಲ ಕರ್ನಾಟಕ ರಾಜ್ಯವೇ ಅಲ್ಲದೆ ಹೊರ ರಾಜ್ಯಗಳಾದ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ ಮುಂತಾದೆಡೆಗಳಲ್ಲೂ ಸಂಚಾರ ಮಾಡಿ ಕಥಾ ಕೀರ್ತನೆಗಳನ್ನು ನಡೆಸಿರುತ್ತಾರೆ. ಆಕಾಶವಾಣಿ ಕಲಾವಿದರೂ ಸಹ. ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ಕೆಲ ಕಾಲ ಸೇವೆಯಲ್ಲಿದ್ದು ಪ್ರಸ್ತುತ ಅದರ ಕಾರ್ಯಕಾರಿ ಸಮಿತಿ ಸದಸ್ಯರಾಗಿರುತ್ತಾರೆ. ಕನ್ನಡ – ಸಂಸ್ಕೃತಿ ಇಲಾಖೆಯ ನಿಯೋಜಿತ ಕಲಾವಿದರೂ ಆಗಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಅನೇಕ ಸಂಘ-ಸಂಸ್ಥೆಗಳು, ಮಠ ಮಾನ್ಯಗಳು ಇವರನ್ನು ಗೌರವಿಸಿ ಸನ್ಮಾನಿಸಿ ಕೀರ್ತನ ಕೇಸರಿ, ಕೀರ್ತನ ಕಂಠೀರವ, ಕೀರ್ತನಾಲಂಕಾರ, ಹರಿಕಥಾ ವಿದ್ವಾನ್ ಮುಂತಾಗಿ ಬಿರುದು ನೀಡಿ ಗೌರವಿಸಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೭-೯೮ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.