ಸಂರಕ್ಷಣೆ

ರೇಷ್ಮೆಹುಳುಗಳಿಗೆ ಊಜಿ ಹಾವಳಿ ಇರುವುದರಿಂದ ಹುಳುಗಳನ್ನು ನೈಲಾನ್ ಬಲೆಯ ಒಳಗೆ ಸಾಕಣೆಮಾಡಬೇಕು. ಇದರ ಜೊತೆಗೆ ಊಜಿಪುಡಿ ಮತ್ತು ಊಜಿನಾಶಕದಂಥ ಔಷಧಿಗಳನ್ನು ಮತ್ತು ಊಜಿಟ್ಯ್ರಾಪ್‌ನಂತಹ ಸಾಧನಗಳನ್ನು ಉಪಯೋಗಿಸುವುದರಿಂದ ಹಾನಿ ಪ್ರಮಾಣ ಕಡಿಮೆಮಾಡಬಹುದು. ರೇಷ್ಮೆ ಹುಳು ಸಾಕಣೆಮನೆಯನ್ನು ಸರಿಯಾಗಿ ಸೋಂಕು ನಿವಾರಣೆ ಮಾಡಬೇಕು. ಹುಳುಗಳನ್ನು ಸಾಕುವಾಗ ಹಾಸುಗೆ ಸೋಂಕು ನಿವಾರಕಗಳನ್ನು ಉಪಯೋಗಿಸುವುದರಿಂದ ರೋಗ ತಪ್ಪಿಸಬಹುದು.

೨೭) ಹಣ್ಣಾದಮಾಗಿದ ಹುಳುಗಳನ್ನು ಗೂಡುಕಟ್ಟಲು ಚಂದ್ರಿಕೆಗೆ ಹೇಗೆ ಬಿಡಬೇಕು ಮತ್ತು ಗೂಡುಗಳನ್ನು ಬಿಡಿಸುವ ವಿಧಾನಗಳಾವುವು? ವಿವರಿಸಿ.

ಹುಳುಗಳು ಐದನೇ ಹಂತದ ೭ನೇ ದಿನ ಸೊಪ್ಪು ತಿನ್ನುವುದನ್ನು ಕಡಿಮೆ ಮಾಡುತ್ತವೆ. ಹಿಕ್ಕೆಗಳನ್ನು ಹಾಕಿ ಗೂಡುಕಟ್ಟಲು ತಯಾರಾಗುತ್ತವೆ. ಅಂತಹ ಸಮಯದಲ್ಲಿ ಹುಳು ಸ್ವಲ್ಪ ಕುಗ್ಗುತ್ತವೆ. ಅನಂತರ ತಲೆ ಎತ್ತಿಕೊಂಡು ಹರಿದಾಡುತ್ತವೆ. ಆಗ ಸೊಪ್ಪು ಕೊಡುವುದನ್ನು ಕಡಿಮೆಮಾಡಿ ಗಾಳಿ ಸಂಚಾರ ಸುಗಮಗೊಳಿಸಬೇಕು. ಹಣ್ಣಾದ ಹುಳುಗಳನ್ನು ಆಯ್ದು ಚಂದ್ರಿಕೆ ಮೇಲೆ ಬಿಡಬೇಕು. ಅಥವಾ ಹೆಚ್ಚಿನ ಮಟ್ಟಿಗೆ ಹಣ್ಣಾಗಿದ್ದರೆ ರೆಂಬೆಯನ್ನು ಎತ್ತಿ ಅಲ್ಲಾಡಿಸಿ ಬಿದ್ದಂತಹ ಹುಳುಗಳನ್ನೆಲ್ಲಾ ಸೇರಿಸಿ ಒಟ್ಟಿಗೆ ಚಂದ್ರಿಕೆಯ ಮೇಲೆ ಬಡಬೇಕು ಇಂತಹ ಕೊಠಡಿಯಲ್ಲಿ ಉಷ್ಣಾಂಶ ೨೪(೦)ಸೆ. ಮತ್ತು ಶೈತ್ಯಾಂಶ ಶೇ. ೬೦ರಿಂದ ೬೫ ಇದ್ದು ಹೆಚ್ಚು ಗಾಳಿ ಸಂಚಾರವಿರಬೇಕು. ಬೇಸಿಗೆ ಕಾಲದಲ್ಲಿ ೫ನೇ ದಿನ ಮತ್ತು ಚಳಿಗಾಲದಲ್ಲಿ ೬ನೇ ದಿನ ಗೂಡು ಬಿಡಿಸಬೇಕು. ಕಾರ್ಯಸುಲಭತೆ ಮತ್ತು ಕೆಲಸಗಾರರ ಉಳಿತಾಯ ದೃಷ್ಟಿಯಿಂದ ಚಂದ್ರಿಕೆಗೆ ಬದಲಾಗಿ ಸ್ವತಃ ಹುಳುಗಳು ಗೂಡುಕಟ್ಟಿಕೊಳ್ಳುವಂತಹ ಸಾಧನಗಳನ್ನು ಬಳಸುವುದು ಒಳ್ಳೆಯದು. ಉತ್ತಮ ಗುಣಮಟ್ಟದ ಗೂಡಿಗೆ ರೋಟರಿ ಚಂದ್ರಿಕೆ ಬಳಸಬಹುದಾಗಿದೆ.

೨೮) ರೆಂಬೆ ಪದ್ಧತಿಯಲ್ಲಿ ಪ್ರೌಢ ಹುಳುಸಾಕಣೆ ಮಾಡುವುದರ ಪರಿಣಾಮಗಳೇನು?

  • ಪ್ರೌಢಾವಸ್ಥೆಯ ಹುಳುಸಾಕಣೆಗೆ ರೆಂಬೆ ಪದ್ಧತಿ ಅಳವಡಿಸಿಕೊಳ್ಳುವುದರಿಂದ:
  • ಹಿಪ್ಪುನೇರಳೆ ಸೊಪ್ಪು ಹೆಚ್ಚು ಕಾಲ ತಾಜಾಸ್ಥಿತಿಯಲ್ಲಿರುತ್ತದೆ.
  • ಹುಳುಗಳನ್ನು ಮುಟ್ಟುವ/ಸ್ಪರ್ಶಿಸುವ ಸಾಧ್ಯತೆಗಳು ಕಡಿಮೆ ಇರುವುದರಿಂದ ರೋಗಸಾಧ್ಯತೆ ಕಡಿಮೆ ಇರುತ್ತದೆ.
  • ರೆಂಬೆ ಪದ್ಧತಿಯಲ್ಲಿ ನಾಲ್ಕನೆ ಜ್ವರದ ನಂತರ ಒಂದು ಸಾರಿ ಮಾತ್ರ ಹಾಸುಗೆ ಶುಚಿಗೊಳಿಸಬೇಕಾಗುತ್ತದಷ್ಟೆ.
  • ಹುಳುವಿನ ಹಾಸುಗೆಯಲ್ಲಿ ರೆಮಬೆಗಳಿರುವುದರಿಂದ ಗಾಳಿ ಸಂಚಾರವಿರುತ್ತದೆ. ಸಾಮಾನ್ಯವಾಗಿ ಹುಳುಗಳು ಕಡ್ಡಿಗಳ ಮೇಲಿರುವುದರಿಂದ ಕಸದಿಂದ ಬರಬಹುದಾದಂತಹ ಅಂಟುರೋಗ ಸಹ ಕಡಿಮೆಯಾಗುತ್ತದೆ.
  • ಶೇ. ೨೦ರಷ್ಟು ಸೊಪ್ಪಿನ ಉಳಿತಾಯವಾಗುತ್ತಿದ್ದು, ಖರ್ಚಿನಲ್ಲಿ ಮಿತವ್ಯಯ ಸಾಧನೆಯಾಗುತ್ತದೆ.

ಅನಾನುಕೂಲತೆಗಳು

  • ಹಸುಗಳಿಗೆ ಹಾಕಲು ಉಳಿಕೆ ಸೊಪ್ಪು ಸಿಗುವುದಿಲ್ಲ.
  • ಹೊಸದಾಗಿ ತೋಟಮಾಡಲು ಕಡ್ಡಿ ಸಿಗುವುದಿಲ್ಲ.
  • ಪ್ರತ್ಯೇಕ ಹುಳುಸಾಕಣೆ ಮನೆ ಬೇಕಾಗುತ್ತದೆ.
  • ಮನೆಯ ವಿಸ್ತೀರ್ಣ ಇನ್ನೂ ಹೆಚ್ಚಾಗಿರಬೇಕಾಗುತ್ತದೆ.

) ರೇಷ್ಮೆಗೂಡು ಸಾಕಣೆ ಮತ್ತು ಮಾರಾಟಮಾಡುವ ಪರಿ ಕುರಿತು ವಿವರಿಸಿ?

ರೇಷ್ಮೆಗೂಡನ್ನು ಬಿಡಿಸಿದನಂತರ ಅದಕ್ಕೆ ಅಂಟಿಕೊಂಡಿರುವ ಹಿಕ್ಕೆಕಸವನ್ನು ತೆಗೆಯಬೇಕು. ಕಳಪೆಗೂಡು ಮತ್ತು ಜೋಡಿಗೂಡುಗಳನ್ನು ಬೇರ್ಪಡಿಸಿ ಹಗುರವಾಗಿ ಗೋಣಿಚೀಲಕ್ಕೆ ತುಂಬಿ ತಂಪಾದ ಸಮಯದಲ್ಲಿ ಸಾಗಿಸಬೇಕು. ಕಳಪೆ ಗೂಡುಗಳನ್ನು ಬೇರ್ಪಡಿಸುವುದು ಯುಕ್ತ ಗೂಡನ್ನು ಶುದ್ಧಮಾಡುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ.

೩೦) ರೇಷ್ಮೆಗೂಡು ಸಾಕಣೆಯ ಆರ್ಥಿಕತೆ ಬಗ್ಗೆ ತಿಳಿಸಿ?

ಹುಳುಸಾಕಣೆ ಖರ್ಚು(೩೦೦ ಮೊಟ್ಟೆಗಳಿಗೆ)

೧) ಮೇಣದ ಕಾಗದ

ರೂ.೨೦-೦೦

೨) ಹಳೆ ದಿನಪತ್ರಿಕೆ

ರೂ.೧೦೦-೦೦

೩) ಕ್ಲಿನಿಟಾಲ್ ಪ್ಲಸ್ (ಪ್ರತಿ ಲೀ.ಗೆ ರೂ.೯೮-೦೦)

ರೂ.೨೯೪-೦೦

೪) ಬ್ಲೀಚಿಂಗ್ ಪುಡಿ(ಪ್ರತಿ ಕಿ.ಗ್ರಾಂ ಗೆ ರೂ.೨೦-೦೦)

ರೂ.೨೦೦-೦೦

೫) ಸುಣ್ಣದ ಪುಡಿ(ಪ್ರತಿ ಕಿ.ಗ್ರಾಂ ಗೆ ರೂ. ೬-೦೦)

ರೂ.೩೦೦-೦೦

೬) ಕೋರ ಬಟ್ಟೆ

ರೂ.೧೦೦-೦೦

೭) ಗೋಣಿತಾಟು

ರೂ.೧೦೦-೦೦

೮) ವಿದ್ಯುತ್ ಖರ್ಚು

ರೂ.೩೦೦-೦೦

೯) ಮೊಟ್ಟೆಗಳ ವೆಚ್ಚ(೧೦೦ ಮೊಟ್ಟೆಗಳಿಗೆ ರೂ.೩೦೦-೦೦)

ರೂ.೯೦೦-೦೦

೧೦) ಇತರೆ ವೆಚ್ಚ

ರೂ.೨೦೦-೦೦

೧೧) ಕೆಲಸಗಾರರ ವೆಚ್ಚ(ಪ್ರತಿ ಆಳಿಗೆ ರೂ.೫೦-೦೦

ರೂ.೪,೦೦೦-೦೦

ಒಟ್ಟು

ರೂ.,೫೧೪೦೦

ಇತರೆ ಖರ್ಚುಗಳು (ವರ್ಷಕ್ಕೆ)

೧) ೩೦೦ ಮೊಟ್ಟೆಗಳಿಗೆ ಸೊಪ್ಪನ್ನು ಬೆಳೆಸಲು ತಗಲುವ ವೆಚ್ಚ ಕಿ.ಗ್ರಾಂ ಗೆ ರೂ.೦.೮೦) ರೂ. ೨೧,೬೦೦-೦೦
೨) ಕಟ್ಟಡದ ವೆಚ್ಚ(೧,೮೦,೦೦೦, ಬಳಕೆಯ ಅವಧಿ ೨೦ ವರ್ಷಗಳು ರೂ. ೧೫,೦೦೦-೦೦
ಬಡ್ಡಿ ಶೇ.೧೫/-ರಂತೆ ರೂ. ೨,೨೫೦-೦೦
೩) ಸಾಕಣೆ ಉಪಕರಣಗಳ ವೆಚ್ಚ (ಸರಾಸರಿ) ೧೦ ವರ್ಷಗಳ ಕಾಲಾವಧಿ) ರೂ. ೫,೮೮೯-೦೦
ಬಡ್ಡಿ ಶೇ.೧೫/-ರಂತೆ ರೂ. ೮೮೩-೦೦
೪) ಆವರ್ತಕ ವೆಚ್ಚ ರೂ. ೬,೬೦೫-೦೦
ಒಟ್ಟು ರೂ.೫೨,೨೨೭೦೦

ಆದಾಯ ವರ್ಷಕ್ಕೆ

ಸರಾಸರಿ ಗೂಡಿನ ಇಳುವರಿ ಪ್ರತಿ ೧೦೦ ಮೊಟ್ಟೆಗೆ ೬೦ ಕಿ.ಗ್ರಾಂ ನಂತೆ ಗೂಡಿನ ಮಾರಾಟದಿಂದ ಬರುವ ಆದಾಯ ರೂ. ೨,೪೪,೦೦೦-೦೦

೩೦೦ ಮೊಟ್ಟೆ ರೇಷ್ಮೆ ಹುಳುಗಳನ್ನು ಸಾಕಲು ತಗಲುವ ವೆಚ್ಚ

ರೂ.ಗಳು
೧) ಪ್ರೌಢ ಹುಳು ಸಾಕಾಣಿಕೆ ರ‍್ಯಾಕುಗಳು – ಪ್ರತಿ ೧೦ಮೊಟ್ಟೆಗೆ ೮೦೦ಚ. ಅಡಿಯಂತೆ ೩೦೦ ಮೊಟ್ಟೆಗಳಿಗೆ ೨೪೦೦ಚ. ಅಡಿಯಷ್ಟು ಹಾಸುಗೆ ನೆಲದ ವಿಸ್ತೀರ್ಣ ೬೦೦ ಚ.ಅಡಿ

೧೫,೦೦೦-೦೦

೨) ಚಾಕಿ ಸಾಕಣೆ
ದಡೇವುಗಳು ೪ (೧ಕ್ಕೆ ರೂ.೨೦೦/- ರಂತೆ)

೮೦೦-೦೦

ತಟ್ಟೆಗಳು ೪’ x ೩’ x ೩’ ಅಳತೆಯ ೨೦೦ಕ್ಕೆ ರೂ.೩೦ರಂತೆ)

೬,೦೦೦-೦೦

೩) ಎಲೆ ಕತ್ತರಿಸುವ ಮಣೆ ೨(ಪ್ರತಿ ಮಣೆಗೆ ರೂ.೧೦೦ರಂತೆ)

೬,೦೦೦-೦೦

೪) ಇರುವೆ ಪಾತಿಕಲ್ಲಿಗೆ ೧೬ (ಪ್ರತಿ ಪಾತಿ ಕಲ್ಲಿಗೆ ರೂ. ೨೮ರಂತೆ)

೩೨೦-೦೦

೫) ಎಲೆ ಶೇಖರಿಸುವ ಪೆಟ್ಟಿಗೆ ೫’ x ೨ ೧/೨’ x ೨ ೧/೨’)

೮೦೦-೦೦

೬) ಸಿಂಪರಣಾ ಯಂತ್ರ

೫,೦೦೦-೦೦

೭) ಉಷ್ಣಾಂಶ ಮತ್ತು ಶೈತ್ಯಾಂಶ ಮಾಪಕ

೪೦೦-೦೦

೮) ರಾಸಾಯನಿಕಗಳನ್ನಿಡಲು ಡಬ್ಬಗಳು

೩೦-೦೦

೯) ಚಿಮುಟ

೨೦-೦೦

೧೦) ಸೊಪ್ಪು ಕೊಡುವ ಸ್ಟ್ಯಾಂಡ್

೩೦೦-೦೦

೧೧) ಚಾಪೆ (ರೆಕ್ಸೀನ್೬’*೪’)

೮೦೦-೦೦

೧೨) ಮುಖವಾಡ

೧,೦೦೦-೦೦

೧೩) ಪ್ಲಾಸ್ಟಿಕ್ ಬೇಸಿನ್

೩೦-೦೦

೧೪) ಪ್ಲಾಸ್ಟಿಕ್ ಬಕೆಟ್

೪೦-೦೦

೧೫) ಕಾಲೊರೆಸುವ ಬಟ್ಟೆ

೩೦-೦೦

೧೬) ಪ್ಲಾಸ್ಟಿಕ್ ಜರಡಿ

೨೦-೦೦

೧೭) ಫೋಂ ರಬ್ಬರ್ ಪ್ರತಿ ಕಿ.ಗ್ರಾಂ ೧೫೦/-(೨*೧೫೦)

೩೦೦-೦೦

೧೮) ಹಾಸುಗೆ ಬದಲಾವಣೆ ಬಲೆಗಳು (೩೦೦ ಮೊಟ್ಟೆಗಳಿಗೆ)

೬,೦೦೦-೦೦

೧೯) ಬಿದಿರಿನ ಚಂದ್ರಿಕೆಗಳು ೩೦೦ ಮೊಟ್ಟೆಗಳಿಗೆ ೧೫೦ ಬೇಕಾಗುತ್ತವೆ.

೨೨,೫೦೦-೦೦

ಒಟ್ಟು ರೂ.

೫೮,೮೯೦೦೦

೩೦೦ ಮೊಟ್ಟೆಗಳನ್ನು ಸಾಕಲು ಸಾಕಣೆಕೊಠಡಿಗೆ ತಗಲುವ ವೆಚ್ಚ

ಪ್ರೌಢ ಹುಳುಗಳ ಸಾಕಣೆಗೆ (ರೆಂಬೆ ಪದ್ಧತಿ) ೨,೫೦,೦೦೦-೦೦
ಚಾಕಿ ಸಾಕಣೆ ಕೊಠಡಿ ೫೦,೦೦೦-೦೦
ಒಟ್ಟು ,೦೦,೦೦೦೦೦

೩೧) ಹುಳುಸಾಕಣೆ ಕಟ್ಟಡ/ಮನೆಯ ಸ್ಥಳ ವಿವರ ಮತ್ತು ವಿನ್ಯಾಸ ಹೇಗಿರಬೇಕು?

ಸಾಮಾನ್ಯವಾಗಿ ಸಾಕಣೆಗೆ ಉಪಯೋಗಿಸುವ ಕಟ್ಟಡವು ಜೌಗು ಭೂಮಿಯಲ್ಲಿರಬಾರದು. ಸರಾಗವಾಗಿ ಗಾಳಿ ಬೆಳಕು ಸಂಚರಿಸುವಂತಿರಬೇಕು. ಸೂರ್ಯನ ಶಾಖ ಮತ್ತು ಒಣಹವೆ ಮನೆಯೊಳಗೆ ನೇರವಾಗಿ ಬಾರದಂತೆ ಇರಬೇಕು. ಮನೆ ಜೌಗುಪ್ರದೇಶದಲ್ಲಿದ್ದರೆ ಸುತ್ತಲೂ ಆಳವಾದ ಕಾಲುವೆ ತೋಡಿ ತೇವಾಂಶವನ್ನು ಹೀರಿಕೊಳ್ಳುವಂತೆ ವ್ಯವಸ್ಥೆ ಮಾಡಬೇಕು. ಅಡಿಪಾಯವನ್ನು ಸಾಕಷ್ಟು ಎತ್ತರಕ್ಕೆ ಕಟ್ಟಿ, ನೆಲವು ಒಣಗಿರುವಂತೆ ನೋಡಿಕೊಳ್ಳಬೇಕು. ತೇವಾಂಶವು ಅತಿಯಾಗಿದ್ದರೆ ಸರಾಗವಾಗಿ ಗಾಳಿಬೆಳಕು ಬೀಳುವಂತೆ ಹೆಚ್ಚು ಕಿಟಕಿಗಳನ್ನು ಇಡಬೇಕು. ಕಟ್ಟಡದ ಹತ್ತಿರದಲ್ಲಿ ನದಿ ಅಥವಾ ಇತರೆ ಜೌಗು ಪ್ರದೇಶಗಳಿದ್ದು ಬೀಸುಗಾಳಿಯಿಂದ ತೇವಾಂಶ ಹೆಚ್ಚುವಂತಿದ್ದರೆ, ಆ ದಿಕ್ಕಿನ ಕಿಟಕಿಗಳನ್ನು ಮುಚ್ಚಬೇಕು. ಕಟ್ಟಡದ ಸುತ್ತಮುತ್ತ ದಟ್ಟವಾಗಿ ಮರಗಳಿದ್ದು ಗಾಳಿಯ ಚಲನೆ ಮಂದವಾಗಿದ್ದರೆ ಅವುಗಳನ್ನು ಕತ್ತರಿಸಬೇಕು. ಸಾಕಣೆಗೆ ಮನೆಯನ್ನು ಆಯ್ಕೆ ಮಾಡುವಾಗ ಮಧ್ಯಾಹ್ನದ ಹೊತ್ತು ಬಿಸಿಲು ಬೀಳದಂತಹ ಮನೆಯನ್ನು ಆರಿಸಬೇಕು. ಹಗಲು ಸಮಯದಲ್ಲಿ ಸೂರ್ಯನ ನೇರ ಕಿರಣಗಳನ್ನು ಮತ್ತು ರಾತ್ರಿ ತಣ್ಣನೆಯ ಗಾಳಿ ತಡೆಯಲು ಸುತ್ತಮುತ್ತ ಸಣ್ಣ ಮರಗಳನ್ನು ಬೆಳೆಸುವುದು ಒಳ್ಳೆಯದು.

ಉತ್ತರ ದಕ್ಷಿಣವಾಗಿ ಮನೆಯನ್ನು ನಿರ್ಮಿಸುವುದು ಅನುಕೂಲಕರ. ಮನೆಯ ಉದ್ದ ಪೂರ್ವ ಪಶ್ಚಿಮಕ್ಕೂ ಅಗಲ ಉತ್ತರ ದಕ್ಷಿಣಕ್ಕೂ ಇರಬೇಕು. ಈ ದಿಕ್ಕಿನಲ್ಲಿ ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗದಿದ್ದಲ್ಲಿ ವಾಯುವ್ಯ ದಿಕ್ಕಿಗೆ ಅಭಿಮುಖವಾಗಿಯಾದರೂ ಕಟ್ಟಡವನ್ನು ನಿರ್ಮಿಸಬೇಕು. ಕೊಠಡಿಯ ಅಗಲವು ಮುಂಭಾಗದ ಉದ್ದಕ್ಕಿಂತ ಕಡಿಮೆಯಿರಬೇಕು. ವಿಸ್ತಾರವಾದ ಪಡಸಾಲೆ ಇರುವುದು ಒಳ್ಳೆಯದು. ಕಿಟಕೆಗಳು ದೊಡ್ಡದಾಗಿದ್ದು ಸಾಕಷ್ಟು ಗಾಳಿ ಸಂಚಾರವಾಗುವಂತಿರಬೇಕು. ಕಿಟಕಿಗಳು ಯಾವಾಗಲೂ ಎದುರುಬದುರಾಗಿರಬೇಕು. ಕೊಠಡಿಯ ಬಾಗಿಲಿಗೆಲ ಎದುರಾಗಿ ಸಾಕಷ್ಟು ಕಿಟಕಿಗಳನ್ನಿಟ್ಟು ಗಾಳಿ ಸರಾಗವಾಗಿ ಚಲಿಸುವಂತೆ ಮಾಡಬೇಕು.

ಮೇಲ್ಛಾವಣಿಯನ್ನು ಶಾಖವನ್ನು ಹೀರದಂತಹ ವಸ್ತುವಿನಿಂದ ಅಥವಾ ಮರದ ಹಲಗೆಗಳಿಂದ ಮಾಡಿರಬೇಕು. ಸಾಮಾನ್ಯವಾಗಿ ಹುಲ್ಲು ಅಥವಾ ಹೆಂಚಿನಿಂದ ಮಾಡಲಾದ ಮೇಲ್ಛಾವಣಿಯು ರೇಷ್ಮೆ ಹುಳು ಸಾಕಣೆಗೆ ಅನುಕೂಲಕರ. ರೇಷ್ಮೆ ಹುಳುಸಾಕುವ ಮನೆಯ ಮೇಲ್ಛಾವಣಿ ಸಾಕಷ್ಟು ಎತ್ತರದಲ್ಲಿರುವುದು ಒಳ್ಳೆಯದು. ಉತ್ತಮ ಗಾಳಿ ಸಂಚಾರಕ್ಕೆ ಗೋಡೆಯ ಮೇಲೆ ಸ್ಥಳ ಬಿಟ್ಟು ಮೇಲ್ಛಾವಣಿ ಹೊದಿಸಬೇಕು. ಇವುಗಳ ಮಧ್ಯೆ ಇರುವ ಸ್ಥಳವು ಉತ್ತಮ ಗಾಳಿ ಸಂಚಾರಕ್ಕೆ ಅನುಕೂಲವಾಗುವುದು.

ಮನೆಯಲ್ಲಿ ನಾಲ್ಕು ಕೊಠಡಿಗಳಿದ್ದು, ಅವುಗಳನ್ನು ಒಂದರಲ್ಲಿ ಹೆಚ್ಚು ತೇವಾಂಶ ಮತ್ತು ಉಷ್ಣಾಂಶಗಳಿರುವಂತೆ ತಂತಿಬಲೆಗಳನ್ನು ಅಳವಡಿಸಬೇಕು.

೩೨) ಚಂದ್ರಿಕೆಯಲ್ಲಿ ಹಣ್ಣಾದ ಹುಳುಗಳನ್ನು ಹೇಗೆ, ಎಷ್ಟು ಪ್ರಮಾಣದಲ್ಲಿ ಬಿಡಬೇಕು?

ಹಣ್ಣಾದ ಹುಳುಗಳನ್ನು ವ್ಯವಸ್ಥಿತ ರೀತಿಯಲ್ಲಿ ಚಂದ್ರಿಕೆಗೆ ಬಿಡದಿದ್ದರೆ ಉತ್ತಮ ಗೂಡುಗಳು ದಪರೆಯುವುದು ಕಷ್ಟ. ಹುಳುಗಳನ್ನು ಪತ್ತಾಗಿ ಬಿಟ್ಟಾಗ ಅಧಿಕ ಸಂಖ್ಯೆಯಲ್ಲಿ ಜೋಡಿಗೂಡುಗಳು ತಯಾರಾಗುತ್ತವೆ. ಇವುಗಳಿಂದ ನೂಲು ತೆಗೆಯಲು ಆಗುವುದಿಲ್ಲ. ಹೆಚ್ಚು ಹುಳುಗಳನ್ನು ಚಂದ್ರಿಕೆಗೆ ಹಾಕುವುದರಿಂದ ಮಲಮೂತ್ರಗಳ ವಿಸರ್ಜನೆಯಿಂದ ಗೂಡುಗಳ ಬಣ್ಣ ಹದಗೆಡುತ್ತದೆ ಮತ್ತು ಗಾಳಿ ಸಂಚಾರಕ್ಕೆ ಅಡಚಣೆ ಉಂಟಾಗಿ ಅತಿ ಕೀಳುಮಟ್ಟದ ಗೂಡುಗಳು ರೂಪುಗೊಳ್ಳುತ್ತವೆ. ಸರಿಯಾದ ಸಂಖ್ಯೆಯಲ್ಲಿ ಹುಳುಗಳನ್ನು ಚಂದ್ರಿಕೆಗೆ ಬಿಡುವುದು ಎಂದರೆ ಚಂದ್ರಿಕೆಯ ೩೦ x ೩೦ ಸೆಂ.ಮೀ. ಸ್ಥಳದಲ್ಲಿ ಸುಮಾರು ೫೦ ಹುಳುಗಳನ್ನು ಬಿಡುವುದು. ಒಂದು ಹುಳುವಿಗೆ ದೊರೆಯುವ ಸ್ಥಳಾವಕಾಶ ಒಂದು ಘನ ಅಂಗುಲ ಅಥವಾ ೨ ಘನ ಸೆಂ.ಮೀ.ಗಳು. ೧.೮ x  ೧.೨ (ಎತ್ತರ  x ಅಗಲವುಳ್ಳ) ಚ.ಮೀ. ಚಂದ್ರಿಕೆಯಲ್ಲಿ ೧,೦೦೦ದಿಂದ ೧,೧೦೦ ಹುಳುಗಳನ್ನು ಬಿಡಬಹುದು.

೩೩) ಎಲೆ ಶೇಖರಣೆ ಮಾಡುವ ಕೊಠಡಿಯಲ್ಲಿ ಗಾಳಿ ಬೆಳಕು ಇರಬೇಕೆ ಅಥವಾ ಬೇಡವೆ?

ಎಲೆ ಶೇಖರಣೆ ಮಾಡುವಾಗ ಶೇಖರಣ ಕೊಠಡಿಯಲ್ಲಿ ಮುಬ್ಬಗತ್ತಲು ಮತ್ತು ನಿಧಾನವಾಗಿ ಗಾಲಿ ಚಲಿಸುಂತಹ ವಾತಾವರಣವಿರಬೇಕು. ಕೋಣೆಯಲ್ಲಿ ಹೆಚ್ಚು ಗಾಳಿ ಸಂಚಾರವಿರುವಾಗ ಎಲೆಗಳ ರಾಶಿಯನ್ನು ಒದ್ದೆಯಾದ ಗೋಣಿತಾಟಿನಿಂದ ಇರಬೇಕು. ಎಲೆ ರಾಶಿಯ ಒಳಗಿನ ಉಷ್ಣತೆಯನ್ನು ಕಡಿಮೆ ಮಾಡಬಹುದು. ೨೦ ಸೆಂ.ಮೀ.ಗಿಂತ ಕಡಿಮೆ ಉಷ್ಣತೆ ಹಾಗೂ ಶೇ. ೯೦ ರಷ್ಟು ತೇವಾಂಶದಲ್ಲಿ ಶೇಖರಿಸುವುದರಿಂದ ಎಲೆಗಳ ಗುಣಮಟ್ಟವನ್ನು ಕಾಪಾಡಬಹುದು. ಎಲೆಗಳನ್ನು ಹೆಚ್ಚೆ ಅಂದರೆ ೨೪ ಗಂಡೆಗಳವರೆಗೂ ಶೇಖರಣೆ ಮಾಡಬಹುದು.

೩೪) ಹಣ್ಣಾದ ಹುಳುಗಳನ್ನು ಚಂದ್ರಿಕೆಯಲ್ಲಿ ಹಾಕಿ ಬಿಸಿಲಿಗೆ ಇಡಬಹುದೆ? ಹಾಗಿದ್ದರೆ ಎಷ್ಟು ಹೊತ್ತು ಇಡಬೇಕು?

ಸಾಮಾನ್ಯವಾಗಿ ಹುಳುಗಳು ಸಾಕಣೆ ಸಮಯಕ್ಕಿಂತ ಗೂಡುಕಟ್ಟುವ ಸಮಯದಲ್ಲಿ ಹೆಚ್ಚು ಉಷ್ಣತೆಯನ್ನು ಇಷ್ಟಪಡುತ್ತವೆ. ಚೆನ್ನಾಗಿ ಹಣ್ಣಾದ ಹುಳುಗಳನ್ನು ಚಂದ್ರಿಕೆಗೆ ಬಿಟ್ಟ ಒಂದು ಗಂಟೆಯನಂತರ ಚಂದ್ರಿಕೆಗಳನ್ನು ಬಿಸಿಲಿನಲ್ಲಿ ಅರ್ಧಗಂಟೆ ಕಾಲ ಇಡಬಹುದು. ಹೀಗೆ ಮಾಡುವುದರಿಂದ ಹುಳುವು ಅರ್ಧ ದ್ರವರೂಪದಲ್ಲಿರುವ ಎಡೆಯ ಹಿಕ್ಕೆಯನ್ನು ವಿಸರ್ಜನೆ ಮಾಡಲು ಸಹಾಯವಾಗುತ್ತದೆ. ಇದರಿಂದಾಗಿ ಹಿಕ್ಕೆಯಿಂದ ಗೂಡಿನ ಗುಣಮಟ್ಟ ಹಾಳಾಗುವುದನ್ನು ತಡೆಗಟ್ಟಬಹುದಾಗಿದೆ. ನೂಲು ತೆಗೆಯುವ ದೃಷ್ಟಿಯಿಂದ ಹುಳುಗಳು ಗೂಡು ಕಟ್ಟುತ್ತಿರುವ ವಾತಾವರಣದಲ್ಲಿ ಶುಷ್ಕ ವಾತಾವರಣವಿರುವುದು ಒಳ್ಳೆಯದು. ಸಾಕಷ್ಟು ಗಾಳಿ ಸಂಚಾರವಿದಲ್ಲದಿದ್ದರೆ ಆರ್ದ್ರತಾಂಶ ಹೆಚ್ಚಾಗಿ ಹುಳುಗಳ ಆರೋಗ್ಯ ಹಾಳಾಗಿ, ಗೂಡುಗಳ ಗುಣಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಚಂದ್ರಿಕೆಗಳನ್ನು ಹೊರಗಡೆ ಬಿಸಿಲಿಗೆ ಇಡುವಾಗ ಹಾಳಿಯ ಹೊಡೆತ ಮತ್ತು ನೇರವಾಗಿ ಸೂರ್ಯನ ಬೆಳಕು ಚಂದ್ರಿಕೆ ಮೇಲೆ ಬೀಳದಂತೆ ಎಚ್ಚರಿಕೆವಹಿಸಬೇಕು.

೩೫) ಕೊನೆಯಲ್ಲಿ ಒಂದೊಂದು ತಟ್ಟೆಯಲ್ಲೂ ಸ್ವಲ್ಪ ಹುಳುಗಳು ಹಣ್ಣಾಗದೆ ಹಾಗೆಯೇ ಉಳಿದಿರುತ್ತವೆ. ಇದಕ್ಕೇನಾದರೂ ಪರಿಹಾರವಿದೆಯೇ?

ರೇಷ್ಮೆ ಹುಳುವಿನಲ್ಲಿ ಬ್ಯಾಕ್ಟೀರಿಯಾಗಳಿಂದ ಹರಡುವ ವಿವಿಧ ರೋಗಗಳಿಗೆ ಫ್ಲಾಚರಿ ಎಂದು ಕರೆಯುತ್ತಾರೆ. ಈ ರೋಗವು ಕೆಟ್ಟ ಸಾಕಾಣೆಯಿಂದ ಹರಡುತ್ತದೆ. ಈ ರೋಗ ಬಂದಾಗ ಹುಳುಗಳು ಹಣ್ಣಾಗದೆ ತಟ್ಟೆಯಲ್ಲಿಯೇ ಉಳಿಯುತ್ತವೆ. ಒಂದು ಸಲ ಈ ರೋಗವು ಹರಡಿತೆಂದರೆ ಇದನ್ನು ಹೋಗಲಾಡಿಸುವುದು ಬಹಳ ಕಷ್ಟ. ಹಣ್ಣಾಗೆ ಹಾಗೆಯೇ ಉಳಿದ ಹುಳುಗಳನ್ನು ಭೂಮಿಯಲ್ಲಿ ಹೂಳಬೇಕು. ಕೆಲವು ಕಡೆ ರೈತರು ಇಂತಹ ಹುಳುಗಳನ್ನು ತಟ್ಟಯಲ್ಲಿ ಹಾಕಿ ಅದರ ಮೇಲೆ ಇನ್ನೊಂದು ತಟ್ಟೆಯನ್ನು ಮುಚ್ಚಿ ಜೆಲ್ಲಿ ಗೂಡುಗಳನ್ನು ಮಾಡುತ್ತಾರೆ. ಆದ್ದರಿಂದ ಈ ರೋಗವನ್ನು ತಡೆಗಟ್ಟಲು ಪ್ರತಿಯೊಂದು ಬಾರಿ ಹುಳುಸಾಕಣೆ ಮಾಡುವಾಗಲೂ ಹುಳುವಿನ ಕೊಠಡಿಯನ್ನು ಮತ್ತು ಉಪೆರಣಗಳನ್ನು ಶೇ. ೨ರ ಫಾರ್ಮಲಿನ್‌ನಿಂದ ತೊಳೆಯಬೇಕು. ಮೊಟ್ಟೆಗಳಿಗೆ ಸರಿಯಾಗಿ ಪರಿಪಾಕತೆ/ಸಂಸ್ಕರಣೆ ಮಾಡಬೇಕು ಹಾಗೂ ಒಳ್ಳೆಯ ಸಾಕಣೆಗೆ ಗುಣಮಟ್ಟದ ಸೊಪ್ಪನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಬೇಕು.

೩೬) ಮೊದಲನೆ ಜ್ವರಕ್ಕಿಂತ  ಮುಂಚೆ ಕೈಯಿಂದ ಕಸ ತೆಗೆಯುವುದು ಒಳ್ಳೆಯದೋ ಅಥವಾ ಬಲೆ ಉಪಯೋಗಿಸುವುದು ಒಳ್ಳೆಯದೋ? ಬಲೆ ಆದಲ್ಲಿ ಯಾವ ರೀತಿಯ ಬಲೆ ಉಪಯೋಗಿಸಬೇಕು?

ಚಾಕಿಮರಿಗಳ ತಟ್ಟೆಯಲ್ಲಿ ಕಸತೆಗೆಯುವಾಗ, ಅವು ಸೂಕ್ಷ್ಮವಾಗಿರು ಕಾರಣ ಹೆಚ್ಚು ಹುಳುಗಳು ಕಸದ ಜೊತೆ ಅರಿವಿಲದಲದಂತೆ ಜಾರಿಕಳೆದುಹೋಗುತ್ತವೆ. ಮೊದಲಿನ ಜ್ವರಕ್ಕಿಂತ ಮುಂಚೆ ಕೈಯಿಂದ ಕಸ ತೆಗೆಯುವುದರಿಂದ ಹುಳುಗಳಿಗೆ ಹಾನಿಯಾಗುತ್ತದೆ. ಇದರಿಂದ ಗೂಡುಗಳ ಇಳುವರಿ ಕಡಮೆಯಾತ್ತದೆ. ಆದ್ದರಿಂದ ಬಲೆ ಉಪಯೋಗಿಸಿ ಕಸ ತೆಗೆಯುವುದು ಒಳ್ಳೆಯದು. ಚಾಕಿ ಮರಿಗಳಿಗೆ ೨.೦ ಚ.ಮಿ.ಮೀ. ರಂಧ್ರದ ಅಳತೆ ಇರುವ ಬಲೆ ಉಪಯೋಗಿಸಬೇಕು. ಬೆಳಗಿನ ಸೊಪ್ಪು ಕೊಡುವ ಮೊದಲು ಸಾಕಣೆ ತಟ್ಟಗಳಲ್ಲಿ ಈ ಬಲೆಗಳನ್ನು ಹರಡಿ ಅದರ ಮೇಲೆ ಕತ್ತಿಸಿದ ಸೊಪ್ಪನ್ನು ಹಾಕಬೇಕು. ಹುಳುಗಳು ಬಲೆಯ ಮೂಲಕ ತೂರಿ ಸೊಪ್ಪಿನ ಮೇಲಕ್ಕೆ ಬರುತ್ತವೆ.

೩೭) ಮೊದಲನೆ, ಎರಡನೆ ಮತ್ತು ಮೂರನೆ ಹಂತಗಳಲ್ಲಿ ಒಂದು, ಎರಡು ಹಾಗೂ ಮೂರು ಬಾರಿ ಮಾತ್ರ ಕಸ ತೆಗೆದರೆ ಸಾಕು ಅಂತೀರಲ್ಲ, ಬೆಡ್ (ತಳಹಾಸು) ಹೆಚ್ಚಾಗುವುದಿಲ್ಲವೆ?

ಹುಳುಗಳು ತಟ್ಟೆಗೆಹಾಕಿದ ಸೊಪ್ಪನ್ನೆಲ್ಲಾ ತಿನ್ನುವುದಿಲ್ಲ. ಸಾಮಾನ್ಯವಾಗಿ ತಿಂದ ಸೊಪ್ಪಿನ ತೂಕದಲ್ಲಿ ೩/೫ ಭಾಗದಷ್ಟನ್ನು ಮಲರೂಪದಲ್ಲಿ ವಿಸರ್ಜಿಸುತ್ತವೆ. ಉಳಿದ ೨/೫ ಭಾಗವನ್ನು ಮಾತ್ರ ಜೀರ್ಣಿಸಿಕೊಳ್ಳುತ್ತವೆ. ಪ್ರತಿ ಬಾರಿ ಸೊಪ್ಪು ಮೇಯಿಸಿದ ಮೇಲೆ ಹುಳುಗಳು ತಿಂದು ಬಿಟ್ಟ ಎಲೆ ಚೂರುಗಳು ತಟ್ಟೆಯಲ್ಲಿ ಉಳಿಯುತ್ತವೆ. ರೇಷ್ಮೆ ಹುಳುಗಳು ಆರೋಗ್ಯವನ್ನು ಕಾಪಾಡಲು ಅವುಗಳು ಹಾಕಿದ ಹಿಕ್ಕೆ ಮತ್ತು ತಿನ್ನದೆ ಉಳಿದ ಸೊಪ್ಪು ಇವುಗಳನ್ನು ಆಗಿಂದಾಗ್ಗೆ ತೆಗೆದುಹಾಕಬೇಕು. ಹುಳುಗಳ ಅರೋಗ್ಯ ದೃಷ್ಟಿಯಿಂದ ಹೆಚ್ಚು ಬಾರಿ ಕಸ ತೆಗೆಯುವುದು ಒಳ್ಳೆಯದು. ಇದು ಸಾಧುವಾಗಿ ಕಂಡರೂ ಪ್ರಾಯೋಗಿಕವಾಗಿ ಸಾಧ್ಯವಾಗುವುದಿಲ್ಲ. ಏಕೆಂದರೆ ಕಸ ತೆಗೆಯಲು ಹೆಚ್ಚು ಶ್ರಮ ಮತ್ತು ಹೆಚ್ಚುಕೂಲಿಗಳ ಅವಶ್ಯಕತೆ ಇದ್ದು ವೆಚ್ಚ ಹೆಚ್ಚುತ್ತದೆ. ಪ್ರತಿ ಬಾರಿ ಕಸ ತೆಗೆಯುವಾಗಲೂ ಕಸದ ಜೊತೆಯಲ್ಲಿ ಕೆಲವು ಹುಳುಗಳು ನಷ್ಟವಾಗುತ್ತವೆ. ಅದರಲ್ಲೂ ಚಾಕಿ ಮರಿಗಳ ತಟ್ಟಯಲ್ಲಿ ಕಸ ತೆಗೆಯುವಾಗ ಕಳೆದುಹೋಗುತ್ತವೆ. ಹೀಗಾಗಿ ಅತಿ ಹೆಚ್ಚಾಗಿ ದಸ ತೆಗೆಯುವುದರಿಂದ ಹುಳುಗಳು ನಷ್ಟವಾಗುವ ಸಂಭವವಿರುತ್ತದೆ. ಆದ್ದರಿಂದ ಹುಳುಗಳ ಮೊದಲನೆ, ಎರಡನೆ ಮತ್ತು ಮೂರನೆ ಹಂತಗಳಲ್ಲಿ ಒಂದು, ಎರಡು ಹಾಗೂ ಮೂರು ಬಾರಿ ಮಾತ್ರ ಕಸ ತೆಗೆಯುವುದು ಒಳ್ಳೆಯದು. ಶಿಫಾರಸುಮಾಡಿರುವ ಹಾಗೆ ಹುಳುಗಳಿಗೆ ಸ್ಥಳಾವಕಾಶ ಹಾಗೂ ಸೊಪ್ಪ ಕೊಡುವುದನ್ನು ಪಾಲಿಸದರೆ ಬೆಡ್ (ತಳಹಾಸು) ಯಾವುದೇ ಕಾರಣಕ್ಕೂ ಹೆಚ್ಚಾಗುವುದಿಲ್ಲ.

೩೮) ಹುಳುಗಳು ಜ್ವರದಲ್ಲಿರುವಾಗ ಹಾಸುಗೆಯ ಮೇಲೆ ಸುಣ್ಣದ ಪುಡಿಯನ್ನು ಉದುರಿಸಬಹುದೆ?

ಹುಳುಗಳು ಜ್ವರಕ್ಕೆ ಕುಳಿತುಕೊಳ್ಳುವಾಗ ಕೊನೆಯಬಾರಿ ಮೇವು ಕೊಟ್ಟಮೇಲೆ ಸುಣ್ಣದ ಪುಡಿ ಸಿಂಪಡಿಸುವುದು ಪ್ರಯೋಜನಕಾರಿ. ಇದರಿಂದ ಮುಂಚಿತವಾಗಿ ಪೊರೆಬಿಟ್ಟು ಹೊರಬಂದ ಹುಳುಗಳು ಸೊಪ್ಪು ತಿನ್ನಲು ಪ್ರಾರಂಭಿಸಿ ಮುಂದಿನ ಬೆಳವಣಿಗೆಯಲ್ಲಿ ಏರು-ಪೇರಾಗುವುದನ್ನು ತಪ್ಪಿಸಬಹುದು. ಸುಣ್ಣದ ಪುಡಿ ಸಿಂಪಡಿಸುವುದರಿಂದ ಪೊರೆಬಿಡುವ ಸಮಯದಲ್ಲಿ ಸಾಕಣೆ ಮಾಡುವ ತಟ್ಟೆಯೂ ಶುಭ್ರವಾಗಿರುತ್ತದೆ. ಸೊಪ್ಪು ಕೊಡುವ ಪ್ರಮಾಣವನ್ನು ಸರಿದೂಗಿಸಿ ಕೊಟ್ಟರೆ ತಟ್ಟೆಯಲ್ಲಿರುವ ಸೊಪ್ಪು ತಾನಾಗಿಯೇ ಒಣತುತ್ತದೆ. ಯಾವುದೇ ಕಾರಣಕ್ಕೂ ಹುಳುಗಳು ಜ್ವರದಲ್ಲಿದ್ದಾಗ ಸುಣ್ಣದ ಪುಡಿಯನ್ನು ಉದುರಿಸಬಾರದು. ಸುಣ್ಣದ ಪುಡಿಯ ಉಪಚಾರದಿಂದ ಹುಳುಗಳ ಹಾಸುಗೆಯಲ್ಲಿ ಶುಷ್ಕ ವಾತಾವರಣ ಏರ್ಪಡುತ್ತದೆ. ರೋಗಾಣುಗಳು ಸಾಯಲಿ ಸಹ ಇದು ಸಹಕಾರಿಯಾಗುತ್ತದೆ.

೩೯) ಮೊಟ್ಟೆಗಳು ಇಂದು ಸ್ವಲ್ಪ / ನಾಳೆ ಸ್ವಲ್ಪದಂತೆ ವಿವಿಧ ಅವಧಿಯಲ್ಲಿ ಒಡೆದರೆ ಆಗ ತಂಗಳು ಚಾಕಿ ಕಟ್ಟಬಹುದು?

ಸಾಮಾನ್ಯವಾಗಿ ರೇಷ್ಮೆ ಮರಿಹುಳುಗಳು ಬೆಳಗಿನ ಹೊತ್ತು ಮೊಟ್ಟೆಯೊಡೆದು ಹೊರಬರುತ್ತವೆ. ಈ ಕ್ರಿಯೆ ಮಧ್ಯಾಹ್ನದವರೆಗೂ ನಡೆಯುತ್ತಲೇ ಇರುತ್ತದೆ. ಮರಿಯಾಗದೆ ಉಳಿದಿರುವ ಮಪಟ್ಟಗಳು ಮರುದಿವಸ ಮರಿಯಾಗುತ್ತವೆ. ದಿನದ ಬೆಳಿಗ್ಗೆ ಬಹುಪಾಲು ಮೊಟ್ಟೆಗಳು ಮರಿಯಾಗುವುದರಿಂದ ಅವುಗಳನ್ನು ಮಧ್ಯಾಹ್ನಕ್ಕೆ ಮುಂಚೆ ಚಾಕಿ ಮಾಡುವುದು ಬಹು ಮುಖ್ಯ. ಉಳಿದ ಹಲವು ಮರಿಗಳಿಗಾಗಿ ಸಂಜೆಯವರೆಗೆ ಚಾಕಿಕಟ್ಟಲು ಕಾಯುವುದು ಕಷ್ಟ. ಅನೇಕ ಕಾರಣಗಳಿಂದ ಮರಿ ಹೊರಬರಲು ಸಮಯವು ಸಮರ್ಪಕವಾಗಿರದೆ ಮರಿಮಾಡು ದಿನ, ಕೇವಲ ಶೇ. ೫೦ಕರಷ್ಟ ಮೊಟ್ಟಗಳು ಮಾತ್ರ ಮರಿಯಾದರೆ ಮೊದಲ ದಿನ ಹೊರಬಂದ ಮರಿಗಳನ್ನು ಗರಿಯಿಂದ ಬೇರ್ಪಡಿಸಿ ಅವುಗಳನ್ನು ೧೦ಸೆ.ನ ಉಷ್ಣಾಂಶದಲ್ಲಿ ರೆಫ್ರಿಜರೇಟರ್ನಲ್ಲಿಟ್ಟು ಮುಂದಿನ ದಿನ ಹೊರಬಂದ ಮರಿಗಳ ಜೊತೆ ಸೇರಿಸಿ ಒಂದೇ ಸಲ ಚಾಕಿ ಕಟ್ಟಬಹುದು.

೪೦) ಚಾಕಿಗೆ ಸೊಪ್ಪನ್ನು . ಸೆಂ.ಮೀ. ಚೌಕಾಕಾರವಾಗಿ ಕತ್ತರಿಸಿ ಹಾಕಬೇಕೆಂದು ಹೇಳುತ್ತಾರೆ. ಆದರೆ ಬಹು ಹಿಂದಿನ ಕಾಲದಿಂದಲೂ ಕೂದಲು ಎಳೆಯೋಪಾದಿಯಲ್ಲಿ ಕತ್ತರಿಸಿದ ಸೊಪ್ಪು ಕೊಟ್ಟು ಸಾಕುತ್ತಿದ್ದೇವೆ. ಇದರಿಂದ ಯಾವ ಬೆಳೆಯೂ ಕೆಟ್ಟಿಲ್ಲ. ಇದಕ್ಕೆ ಕಾರಣ ತಿಳಿಸಿ?

ಸಣ್ಣಹುಳುಗಳಿಗೆ ಮೇಯಿಸುವ ಎಳೆಯ ಸೊಪ್ಪನ್ನು ಕೂದಲ ಎಳೆಗಳಂತೆ ಸಣ್ಣಗೆ ಕತ್ತರಿಸಿ ಹಾಕಬಾರದು. ಕತ್ತರಿಸಿದ ಎಲೆಚೂರುಗಳು ಹುಳುಗಳ ಗಾತ್ರಕ್ಕೆ ಅನುಗುಣವಾಗಿರಬೇಕು. ಸೊಪ್ಪನ್ನು ಚೌಕಾಕಾರದಲ್ಲಿ ಕತ್ತರಿಸಿವುದರಿಂದ ಸೊಪ್ಪು ಬೇಗ ಒಣಗುವುದಿಲ್ಲ. ಸೊಪ್ಪು ಅಂಚುಗಳಲ್ಲಿ ಒಣಗಲು ಆರಂಭಿಸಿ ಅದರ ಮಧ್ಯಭಾಗ ನಿಧಾನವಾಗಿ ಒಣಗುತ್ತದೆ. ಚೌಕವಾಗಿ ಕತ್ತರಿಸುವುದರಿಂದ ಹೆಚ್ಚಿ ಎಲೆಯಂಚು ಬೇಗ ಗಾಳಿಗೆ ತೆರೆಯುವುದಿಲ್ಲ. ಮತ್ತು ಕತ್ತರಿಸಿದ ಎಲೆಯ ಮಧ್ಯಭಾಗವು ಅಂಚಿನಿಂದ ದೂರವಾಗಿರುತ್ತದೆ. ಹೀಗಾಗಿ ಕತ್ತರಿಸಿದ ಎಲೆಯ ಮಧ್ಯಭಾಗವು ಅಂಚಿನಿಂದ ದೂರವಾಗಿರುತ್ತದೆ. ಹೀಗಾಗಿ ಕತ್ತರಿಸಿದ ಸೊಪ್ಪಿನಲ್ಲಿ ಹೆಚ್ಚು ತೇವಾಂಶವು ದೀರ್ಘಕಾಲ ಉಳಿಯುತ್ತದೆ. ಕಸ ತೆಗೆಯುವಾಗ ಈ ಕೂದಲೆಳೆಯ ಸೊಪ್ಪಿನ ಜೊತೆ ಹುಳುಗಳು ಕೂಡ ಸೇರಿಹೋಗುವ ಸಂಭವವಿರುತ್ತದೆ. ಆದ್ದರಿಂದ ಉತ್ತಮ ಚಾಕಿ ಸಾಕಣೆಗೆ ಅಗತ್ಯವಾದ ಹೆಚ್ಚಿನ ತೇವಾಂಶ ಎಲೆಗಳಲ್ಲಿರುವಂತೆ ಕಾಪಾಡಲು, ಸೊಪ್ಪನ್ನು ಚೌಕಾಕಾರದಲ್ಲಿ ಕತ್ತರಿಸಿ ಹುಳು ಸಾಕುವುದು ಅಗತ್ಯ.

೪೧) ಸಾಕಣೆ ಕೊಠಡಿಯ ಉಷ್ಣಾಂಶವನ್ನು ಹೆಚ್ಚುಕಡಿಮೆಮಾಡುವ ಬಗ್ಗೆ ಮಾಹಿತಿ ಕೊಡಿ?

ರೇಷ್ಮೆಹುಳು ಶೀತರಕ್ತದ ಪ್ರಾಣಿ. ಹೀಗಾಗಿ ಉಷ್ಣಾಂಶವು ಹುಳುವಿನ ಶಾರೀರಿಕ ಕ್ರಿಯೆಗಳ ಮೇಲೆ ಪ್ರತ್ಯಕ್ಷ ಪರಿಣಾಮ ಬೀರುತ್ತದೆ. ಉಷ್ಣಾಂಶ ಹೆಚ್ಚಿದಾಗ ಹುಳದ ಶಾರೀರಿಕ ಕ್ರಿಯೆಗಳ ವೇಗ ಹೆಚ್ಚಿ, ಬೆಳವಣಿಗೆಯ ಕಾಲ ಹೆಚ್ಚುತ್ತದೆ. ರೇಷ್ಮೆಹುಳುಗಳ ಸರಿಯಾದ ಬೆಳವಣಿಗೆಗೆ ಬೇಕಾದ ಉಷ್ಣಾಂಶ ೨೩(೦)ಸೆ. ಉಷ್ಣಾಂಶ ಕಡಿಮೆಯಾದಾಗ ವಿದ್ಯುಚ್ಛಕ್ತಿ ಕಾವು ಯಂತ್ರಗಳು ಅಥವಾ ಇದ್ದಿಲು ಒಲೆಗಳ್ನು ಬಳಸಿ ಉಷ್ಣಾಂಶವನ್ನು ಹೆಚ್ಚಿಸಬಹುದು. ವಿದ್ಯುಚ್ಛಕ್ತಿ ಕಾವು ಯಂತ್ರಗಳು ಹೊಗೆಯನ್ನು ಹೊರಸೂಸುವುದಿಲ್ಲವಾದ್ದರಿಂದ ಅವುಗಳ ಬಳಕೆಗೆ ಶಿಫಾರಸ್ಸು ಮಾಡಲಾಗಿದೆ. ಇದ್ದಿಲು ಒಲೆಗಳನ್ನು ಬಳಸುವಾಗ ಇದ್ದಿಲು ಒಲೆಯನ್ನು ಹೊರಗಡೆ ಹತ್ತಿಸಿ, ಕೆಂಡಗಳಾಗಿ ಮಾಡಿ ಆಮೇಲೆ ಸಾಕುವ ಮನೆಗೆ ತೆಗೆದುಕೊಂಡು ಹೋಗಬೇಕು. ಬೇಸಿಗೆ ಕಾಲದಲ್ಲಿ ಉಷ್ಣಾಂಶ ಹೆಚ್ಚಾದಾಗ ಬಾಗಿಲು ಮತ್ತು ಕಿಟಕಿಗಳನ್ನು ತೆಗೆದು ಗಾಳಿಯಾಡುವಂತೆ ಮಾಡಿ ಕಿಟಕಿ/ಬಾಗಿಲುಗಳ ಹತ್ತಿರ ಆಗಾಗ್ಗೆ ನೀರು ಚಿಮುಕಿಸಿ ಉಷ್ಣಾಂಶ ತಗ್ಗಿಸಬೇಕು. ಹುಳುಸಾಕುವ ಮನೆಯಲ್ಲಿ ಚೆನ್ನಾಗಿ ಗಾಳಿಯಾಡುವಂತೆ ಮಾಡುವುದು ಹಾಗೂ ಚಾಕಿ ಹಂತಗಳಲ್ಲಿ ತಪ್ಪದೇ ಮೇಣದ ಕಾಗದ ಮತ್ತು ಒದ್ದೆಯ ಫೋಂ ರಬ್ಬರನ್ನು ಬಳಸುವುದು ಅವಶ್ಯಕ.

೪೨) ಕೊಂಬೆಸಾಕಣೆಯಲ್ಲಿ ಕುಡಿಯೆಲೆ ಹಾಕುವುದು ಸೂಕ್ತವೆ?

ಕೊಂಬೆಸಾಕಣೆಯಲ್ಲಿ ೪ ಮತ್ತು ೫ನೇ ಹಂತದ ಹುಳುಗಳನ್ನು ಸಾಕಣೆ ಮಾಡುತ್ತಾರೆ. ೪ ಮತ್ತು ೫ನೇ ಹಂತದ ಹುಳುಗಳಿಗೆ ಬಲಿತ ಎಲೆಗಳು ಸೂಕ್ತ. ಆದುದರಿಂದ ಕುಡಿಎಲೆ ಹಾಕುವುದು ಸೂಕ್ತವಲ್ಲ.

೪೩) ಸಾಕಣೆ ಕೊಠಡಿಯ ಶೈತ್ಯಾಂಶವನ್ನು ಹೆಚ್ಚುಕಡಿಮೆ ಮಾಡುವುದು ಹೇಗೆ?

ರೇಷ್ಮೆಹುಳು ಸಾಕಣೆಯಲ್ಲಿ ತೇವಾಂಶದ ಪಾತ್ರ ಪ್ರತ್ಯಕ್ಷ ಮತ್ತು ಪರೋಕ್ಷವಾಗಿರುತ್ತದೆ. ಪ್ರತ್ಯಕ್ಷವಾಗಿ ಹುಳುಗಳ ಶಾರೀರಿಕ ಕ್ರಿಯೆಗಳ ಮೇಲೆ ಪರಿಣಾಮಕಾರಿಯಾಗಿರುತ್ತದೆ, ಹಾಗೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೇವಾಂಶವು ಹಾಸುಗೆಮೇಲಿನ ಸೊಪ್ಪು ಬಾಡದಂತೆ ಎರವಾಗುತ್ತದೆ. ಕಡಿಮೆ ತೇವಾಂಶವಿದ್ದಲ್ಲಿ ಎಳೆಯ ರೇಷ್ಮೆ ಹುಳುಗಳಿಗೆ ಕೊಡುವ ಚಿಕ್ಕ ಎಲೆ ತುಂಡುಗಳು ಬೇಗ ಬಾಡುವುದರಿಂದ ಹುಳುಗಳಿಗೆ ಸರಿಯಾಗಿ ಸೊಪ್ಪು ಸಿಗದೆ ಅವು ಬಲಹೀನವಾಗಿ ರೋಗಗಳಿಗೆ ಹಾಗೂ ಇತರ ಅನನುಕೂಲ ಪರಿಸ್ಥಿತಿಗಳಿಗೆ ಸುಲಭವಾಗಿ ತುತ್ತಾಗುತ್ತವೆ.

ಚಾಕಿ ಸಾಕಣೆಯಲ್ಲಿ ಸಾಕಷ್ಟು ತೇವಾಂಶ ಉಳಿಸಲು ಹಾಸುಗೆಯ ಕೆಳಗೆ ಹಾಗೂ ಮೇಲೆ ಮೇಣಸವರಿದ ಕಾಗದದಬಳಕೆ ಮತ್ತು ಸುತ್ತಲೂ ಒದ್ದೆಯ ಫೋಂ ರಬ್ಬರನ್ನು ಬಳಸುವುದು ತುಂಬಾ ಮುಖ್ಯ. ತೇವಾಂಶ ಕಡಿಮೆಮಾಡಲು ಕಿಟಕಿ, ಬಾಗಿಲುಗಳನ್ನು ಮುಚ್ಚಿಡಬೇಕು.

೪೪) ಮೇಜು ಸಾಕಣೆಯಲ್ಲಿ ಸತ್ತಹುಳುಗಳನ್ನು ತೆಗೆಯುವುದು ಹೇಗೆ?

ಮೇಜು ಸಾಕಣೆಯಲ್ಲಿ ಸತ್ತ ಹುಳುಗಳು, ರೋಗಗ್ರಸ್ಥ ಹುಳುಗಳು ಹಾಗೂ ವಿಷಶಂಕಿತ ಹುಳುಗಳನ್ನು ಕೈಯಿಂದ ಆರಿಸಿ ತೆಗೆದು ಶೇ. ೨ರ ಫಾರ್ಮಲಿನ್ ದ್ರಾವಣದಲ್ಲಿ ಹಾಕಬೇಕು. ಫಾರ್ಮಲಿನ್ ದ್ರಾವಣ ಇಲ್ಲದಿರುವಾಗ ಸುಣ್ಣದ ನೀರಿನಲ್ಲಿ ಹಾಕಿ, ಅನಂತರ ಮಣ್ಣಿನಲ್ಲಿ ಹೂಳಬೇಕು.

೪೫) ಸಾಕಣೆ ಕೊಠಡಿಯಲ್ಲಿ ಥರ್ಮಾಮೀಟರ್ ಮತ್ತು ಹೈಗ್ರೋಮೀಟರ್ ಅಗತ್ಯವಿದೆಯೇ?

ರೇಷ್ಮೆ ಹುಳು ಸಾಕುವ ಮನೆಯ ಉಷ್ಣಾಂಶ ಮತ್ತು ತೇವಾಂಶವನ್ನು ಕಾಲಕಾಲಕ್ಕೆ ತಿಳಿಯಲು ಥರ್ಮಾಮೀಟರ್ ಮತ್ತು ಹೈಗ್ರೋಮೀಟರ್ ಅನ್ನು ಬಳಸಬೇಕು. ಇದರಿಂದ ರೇಷ್ಮೆಹುಳು ಸಾಕಣೆಗೆ ಶಿಫಾರಸ್ಸು ಮಾಡಿರುವಂತೆ ಕಾಲಕಾಲಕ್ಕೆ ಅಗತ್ಯತೆಗೆ ತಕ್ಕಂತೆ ಉಷ್ಣಾಂಶ ಮತ್ತು ತೇವಾಂಶಗಳನ್ನು ಒದಗಿಸುವುದಕ್ಕೆ ಅನುಕೂಲವಾಗುತ್ತದೆ.

೪೬) ಮನೆಯಲ್ಲಿ ಸೊಪ್ಪು ಅಥವಾ ಕೊಂಬೆ ಸೊಪ್ಪಿನ ಸಂಗ್ರಹಣೆಯ ಬಗ್ಗೆ ತಿಳಿಸಿ?

ಗಿಡದಿಂದ ಕಿತ್ತಸೊಪ್ಪು ಒಣಗುವುದರಿಂದ ನೀರಿನಂಶ ಮತ್ತು ಪೋಷಕಾಂಶಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ನೀರಿನಂಶ ಒಂದು ನಿರ್ದಿಷ್ಟಮಟ್ಟಕ್ಕಿಂತ ಕಡಿಮೆಯಾದಲ್ಲಿ ಅಂತಹ ಸೊಪ್ಪನ್ನು ಹುಳುಗಳು ತಿನ್ನುವುದಿಲ್ಲ. ಒಂದು ವೇಳೆ ಸೇವಿಸಿದಲ್ಲಿ ಹುಳುಗಳಿಗೆ ರೋಗ ತಗಲುವುದಲ್ಲದೆ ಗೂಡಿನ ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ಎಲೆಗಳನ್ನು ತೇವವಿರುವ ತಂಪಾದ ಶುಭ್ರಪ್ರದೇಶದಲ್ಲಿ ಶೇಖರಿಸಿಡಬೇಕು. ಬಿಡಿ ಎಲೆಗಳನ್ನು ತೇವವಿರುವ ತಂಪಾದ ಶುಭ್ರಪ್ರದೇಶದಲ್ಲಿ ಶೇಖರಿಸಿಡಬೇಕು. ಬಿಡಿ ಎಲೆಗಳನ್ನು ಬಿದಿರಿನ ಬುಟ್ಟಿಗಳಲ್ಲಿ ಶೇಖರಿಸಿಟ್ಟು ಶುಭ್ರವಾದ ತೇವದ ಖೋರಾ ಬಟ್ಟೆ ಅಥವಾ ಗೋಣಿ ತಾಟನ್ನು ಹೊದಿಸಬೇಕು. ಉಷ್ಣ ಪ್ರದೇಶಗಳಲ್ಲಿ ಎಲೆಗಳನ್ನು ಮಣ್ಣಿನ ಮಡಕೆಗಳಲ್ಲಿ ಶೇಖರಿಸಿ, ತೇವದ ಉಸುಕಿನ ಮೇಲಿಟ್ಟು ಒದ್ದೆ ಬಟ್ಟೆಯಿಂದ ಮುಚ್ಚಿ ಚಾಕಿ ಹುಳುಗಳ ಸಾಕಣೆಗೆ ಬಳಸುವುದು ಒಳ್ಳೆಯದು. ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿಡಲು ಮರದ ಕೋಣೆಗಳನ್ನು ಬಳಸಬಹುದು. ಇದನ್ನು ತೇವದ ಗೋಣಿತಾಟಿನಿಂದ ಮುಚ್ಚಬೇಕು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲೆಗಳನ್ನು ಸಂಗ್ರಹಣೆ ಮಾಡಬೇಕಾದರೆ, ಶುಭ್ರವಾದ ನೆಲದ ಮೇಲೆ ತೇವದ ಗೋಣಿ ತಾಟನ್ನು ಹಾಕಿ, ಅದರ ಮೇಲೆ ಎಲಗಳನ್ನು ಸಡಿಲವಾಗಿ ಗುಡ್ಡೆ ಹಾಕಿ, ಮೇಲೊಂದು ಗೋಣಿತಾಟು ಮುಚ್ಚಬೇಕು. ಬೇಸಿಗೆಯಲ್ಲಿ ೩ ರಿಂದ ೪ ಗಂಟೆಗೊಂದು ಬಾರಿ ಗೋಣಿತಾಟಿನ ಮೇಲೆ ಸೂಕ್ತ ಪ್ರಮಾಣದಲ್ಲಿ ನೀರು ಚುಮುಕಿಸಬೇಕು. ಗೋಣಿತಾಟು ಒದ್ದೆಯಾಗಿರುವಂತೆ ಎಚ್ಚರವಹಿಸಬೇಕು.

೪೭) ಬಲಿತ ಹುಳುಗಳಿಗೆ ಸೊಪ್ಪು ಕೊಡುವಾಗ ನಿಗಾವಹಿಸಬೇಕಾದ ಅಂಶಗಳಾವುವು?

ನಾಲ್ಕು ಮತ್ತು ಐದನೇ ಹಂತದಲ್ಲಿ ಹುಳುಗಳು ತಮ್ಮ ಜೀವನಾವಧಿಯಲ್ಲಿ ಕೊಟ್ಟ ಆಹಾರದಲ್ಲಿ ಶೇ.೯೦ರಿಂದ ೫ರಷ್ಟು ಭಾಗವನ್ನು ತಿನ್ನುತ್ತವೆ. ಈ ಆಹಾರವನ್ನು ರೇಷ್ಮೆ ಗ್ರಂಥಿಗಳ ಬೆಳವಣಿಗೆ, ರೇಷ್ಮೆ ದ್ರವವನ್ನು ಸಂಗ್ರಹಿಸಲು ಮತ್ತು ಮುಂದಿನ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕಾಂಶಗಳ ಸಂಗ್ರಹಣೆಗೆ ಉಪಯೋಗಿಸುತ್ತವೆ. ಹುಳುಗಳು ತಮ್ಮ ಮುಂದಿನ ಬೆಳವಣಿಗೆಯಲ್ಲಿ ಆಹಾರ ಸೇವಿಸಲು ಆಶಕ್ತವಾಗಿರುವುದರಿಂದ ಕೋಶಾವಸ್ಥೆ ಮತ್ತು ಚಿಟ್ಟೆಯಾಗಿ ರೂಪಾಂತರಗೊಂಡಾಗ ಬೇಕಾಗುವ ಶಕ್ತಿಯನ್ನು ಸಹ ಕೂಡಿಡಬೇಕು. ಆದುದರಿಂದ ಬಲಿತ ಹುಳುಗಳಿಗೆ ಉತ್ತಮ ಗುಣಮಟ್ಟದ ಸೊಪ್ಪನ್ನು, ಸಾಕಷ್ಟು ಪ್ರಮಾಣದಲ್ಲಿ ಒದಗಿಸಬೇಕು. ೪ ಮತ್ತು ೫ನೇ ಹಂತದ ಹುಳುಗಳಿಗೆ ಎಲೆಗಳನ್ನು ಕತ್ತರಿಸದೆ ಹಾಗೆಯೇ ಮೇಯಿಸುವುದು ವಾಡಿಕೆ. ಇದರಿಂದ ಎಲೆಗಳು ಹೆಚ್ಚು ಕಾಲ ರಸವತ್ತಾಗಿ ಉಳಿದು ಹುಳುಗಳು ಆಸಕ್ತಿಯಿಂದ ತಿನ್ನಲು ಅನುಕೂಲವಾಗುತ್ತದೆ. ಕೊನೆಯ ಹಂತಗಳಲ್ಲಿ ಬೆಳೆಯುತ್ತಿರುವ ಹುಳುಗಳಿಗೆ ಹೆಚ್ಚಿನ ಸಾರಜನಕ ಅಂಶ ಅವಶ್ಯಕವಾಗಿದ್ದರೂ ಎಲೆಗಳಲ್ಲಿ ಹೆಚ್ಚು ನೀರಿನ ಅಂಶವಿದ್ದಂತಿರಬೇಕು. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೊಪ್ಪು ಕೊಟ್ಟರೆ ಸಾಕಾಗುತ್ತದೆ. ರಾತ್ರಿಯ ಹೊತ್ತು ಹೆಚ್ಚು ಸೊಪ್ಪು ಕೊಡುವುದು ಉತ್ತಮ.

೪೮) ಸಣ್ಣ ರೈತರು ಕೊಂಬೆಸಾಕಣೆ ಪದ್ಧತಿಯನ್ನು ಅನುಸರಿಸಲು ಸಾಧ್ಯವೆ?

ಕೊಂಬೆಸಾಕಣೆ ಪದ್ಧತಿಯಲ್ಲಿ ಮೇವುಕೊಡುವ ಮತ್ತು ಕಸತೆಗೆಯುವ ಶ್ರಮ ಕಡಿಮೆಯಾಗುವುದರಿಂದ ಸಾಕಣೆಗೆ ತಗಲುವ ವೆಚ್ಚ ಬಹಳ ಕಡಿಮೆಯಾಗುತ್ತದೆ. ಇತರೇ ವಿಧಾನಗಳಿಗಿಂತ ನಾಲ್ಕನೇ ಹಂತದಲ್ಲಿ ಶೇ.೬೦ರಷ್ಟು ಮತ್ತು ೫ನೇ ಹಂತದಲ್ಲಿ ಶೇ. ೫೦ರಷ್ಟು ಶ್ರಮ ಮತ್ತು ಬೇಕಾದ ಕೂಲಿಗಳ ಸಂಖ್ಯೆಯನ್ನು ಕಡಿಮೆಮಾಡಬಹುದು. ಇಷ್ಟೇ ಅಲ್ಲದೆ ಹುಳುಗಳಿಗೆ ಹಾಕುವ ಸೊಪ್ಪಿನ ಪ್ರಮಾಣದಲ್ಲೂ ಎಂದರೆ ನಾಲ್ಕನೇ ಹಂತದಲ್ಲಿ ಶೇ.೨೫ರಷ್ಟು ಮತ್ತು ೫ನೇ ಹಂತದಲ್ಲಿ ಶೇ.೧೦ರಷ್ಟು ಮಿತವ್ಯಯ ಸಾಧ್ಯವಾಗುತ್ತದೆ. ಈ ವಿಧಾನವನ್ನು ಮನೆಯ ಒಳಗೂ ಹೊರಗೂ ಅಳವಡಿಸಬಹುದು. ಇದರಿಂದ ಅಂತಸ್ತು ಸಾಕಣೆ ಅಥವಾ ದುಂಡು ತಟ್ಟೆಗಿಂತ ಸುಮಾರು ಶೇ.೫೦ರಷ್ಟು ಹೆಚ್ಚು ಹುಳುಗಳನ್ನು ಸಾಕಬಹುದು. ಇದರಲ್ಲಿ ಸೊಪ್ಪು ಕೊಡುವುದು ಮತ್ತು ದಸ ತೆಗೆಯುವುದು ಬಹಳ ಸುಲಭ. ಇದರಲ್ಲಿರುವ ಒಂದೇ ಒಂದು ತೊಂದರೆ ಎಂದರೆ ಈ ಪದ್ಧತಿಗೆ ಮನೆ ದೊಡ್ಡದಾಗಿರಬೇಕು. ಈ ಅನಕೂಲವಿದ್ದರೆ ಎಲ್ಲಾ ಮಟ್ಟದ ರೈತರುಗಳೂ ಕೊಂಬೆಸಾಕಣೆ ಪದ್ಧತಿಯನ್ನು ಅನುಸರಿಸುವುದು ಒಳ್ಳೆಯದು.

೪೯) ಕಡ್ಡಿ ನಾಟಿಮಾಡಿದ ತಿಂಗಳಿಗೆ ಮೊದಲ ಸಾಕಣೆ ಪ್ರಾರಂಭಿಸಬಹುದು?

ಕಡ್ಡಿ ನಾಟಿಮಾಡಿದನಂತರ ೧೨ ತಿಂಗಳಿಗೆ ಮೊದಲ ಸಾಕಣೆ ಪ್ರಾರಂಭಿಸಿ ಅನಂತರದ ಸಾಕಣೆಗಳನ್ನು ೯ ತಿಂಗಳನಂತರ ಮಾಡಬಹುದು.

೫೦) ತಟ್ಟೆಯಲ್ಲಿನ ಎಲ್ಲಾ ಹುಳುಗಳು ಸರಿಯಾಗಿ ಜ್ವರಕ್ಕೆ ಕುಳಿತಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಹೇಗೆ?

ಹುಳು ಜ್ವರಕ್ಕೆ ಹೋಗುವ ಅವಧಿ ಸಮೀಪಿಸುತ್ತಿದ್ದಂತೆ ಆ ಹಂತದ ಪೂರ್ಣ ಬೆಳವಣಿಗೆ ಮುಗಿದಿರುತ್ತದೆ. ಹುಳು ಜ್ವರಕ್ಕೆ ಹೋದಾಗ ದೇಹವು ದಪ್ಪಗಾಗಿ ಹಳದಿಮಿಶ್ರಿತ ಬಣ್ಣಕ್ಕೆ ತಿರುಗುತ್ತದೆ ಮತ್ತು ಹುಳುಗಳು ತಮ್ಮ ತಲೆಯನ್ನು ಹಾವಿ ಹಾಗೆ ಎತ್ತಿ ನಿಂತಿರುತ್ತವೆ. ಸೊಪ್ಪು ತಿನ್ನುವ ಚಟುವಟಿಕೆ ಮಂದವಾಗಿರುವುದರಿಂದ ಜ್ವರಕ್ಕೆ ಹೋಗಿರುವುದನ್ನು ಸುಲಭವಾಗಿ ಗುರುತಿಸಬಹುದು.

೫೧) ರೇಷ್ಮೆ ಹುಳು ಸಾಕಣೆಯಲ್ಲಿ ಹೆಚ್ಚು ಸ್ಥಳಾವಕಾಶ ಕೊಡುವುದರ ಅಗತ್ಯತೆಯೇನು?

ತಟ್ಟಯಲ್ಲಿರುವ ಹುಳುಗಳ ಸಮಾನವಾದ ಬೆಳವಣಿಗೆ ಮತ್ತು ಅವುಗಳ ಆರೋಗ್ಯ ದೃಷ್ಟಿಯಿಂದ ಅವುಗಳ ಬೆಳವಣಿಗೆಗೆ ಅನುಗುಣವಾಗಿ ಕಾಲಕಾಲಕ್ಕೆ ಹೆಚ್ಚಿನ ಸ್ಥಳಾವಕಾಶ ಒದಗಿಸುವುದು ಅವಶ್ಯಕ.

ಹುಳುಗಳನ್ನು ತುಂಬಾ ಒತ್ತಾಗಿಡುವುದರಿಂದ, ಎಲ್ಲ ಹುಳುಗಳಿಗೂ ಸಮಾನವಾಗಿ ಆಹಾರ ದೊರಕದೆ ತಟ್ಟೆಯಲ್ಲಿರುವ ಎಲ್ಲ ಹುಳುಗಳ ಬೆಳವಣಿಗೆ ಒಂದೇ ಸಮನಾಗಿರುವುದಿಲ್ಲ. ಇದರಿಂದಾಗಿ ಒಳ್ಳೆಯ ಗೂಡುಗಳು ದೊರೆಯುವುದು ಸಾಧ್ಯವಾಗುವುದಿಲ್ಲ. ಒತ್ತಾಗಿಡುವುದರಿಂದ ಹುಳುಗಳ ಶ್ವಾಸೋಭ್ಯಾಸಗಳಿಂದ ಬಿಡುಗಡೆಯಾಗುವ ಅನಿಲಗಳು ಮತ್ತು ಅವುಗಳಿಂದ ಉತ್ಪತ್ತಿಯಾಗುವ ಶಾಖ ಮತ್ತು ಹುಳುಗಳ ಹಿಕ್ಕೆ ಕೊಳೆಯುವುದರಿಂದಾಗಿ ಆರೋಗ್ಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಇಂಥ ಅನಾರೋಗ್ಯಕರ ವಾತಾವರಣದಲ್ಲಿ ಹುಳುಗಳಿಗೆ ಉತ್ಕೃಷ್ಟವಾದ ಸೊಪ್ಪನ್ನು ಸಾಕಷ್ಟು ಪ್ರಮಾಣದಲ್ಲಿ ಕೊಟ್ಟರೂ ಸಹ ಅವು ಅದನ್ನು ಮೇಯಲಾರವು. ಇದರಿಂದ ಅವುಗಳ ಬೆಳವಣಿಗೆ ಕುಂಠಿತವಾಗಿ ಪೂರ್ಣ ಬೆಳವಣಿಗೆಯೇ ನಾಶವಾಗುವುದು.

ಮಿತಿಮೀರಿ ಸ್ಥಳಾವಕಾಶ ಒದಗಿಸುವುದು ಸಹ ಅನಕ್ಷೇಪಣೀಯ. ಇದರಿಂದ ಹಿಪ್ಪುನೇರಳೆ ಸೊಪ್ಪು ವ್ಯರ್ಥವಾಗುವುದೇ ಅಲ್ಲದೆ, ಬೆಳೆದ ಹುಳುಗಳಿಗೆ ಹೆಚ್ಚು ಸಾಕಣೆ ತಟ್ಟೆಗಳನ್ನು ಒದಗಿಸಬೇಕಾಗುತ್ತದೆ. ಹೆಚ್ಚು ಸಲಕರಣೆಗಳು ಮತ್ತು ಕೂಲಿಗಳ ಅವಶ್ಯಕತೆ ಉಂಟಾಗುತ್ತದೆ.

ಸಾಕಷ್ಟು ಸ್ಥಳಾವಕಾಶ ಕೊಡುವುದು ತಾಂತ್ರಿಕ ರೀತಿಯಲ್ಲಿ ಒಂದು ಮುಖ್ಯ ಅಂಶ. ಸಾಮಾನ್ಯವಾಗಿ ಎರಡನೇ ಹಂತದ ಹುಳುಗಳಿಗೆ ಮೊದಲನೇ ಹಂತದ ಹುಳುಗಳ ಎರಡು ಅಥವಾ ಮೂರರಷ್ಟು ಹಾಗೂ ಮೂರನೇ ಹಂತದ ಹುಳುಗಳಿಗೆ ಎರಡನೇ ಹಂತದ ಎರಡರಷ್ಟು ಸ್ಥಳಾವಕಾಶ ಒದಗಿಸಬೇಕು. ನಾಲ್ಕನೇ ಹಂತದ ಹುಳುಗಳಿಗೆ ಮೂರನೇ ಹಂತದ ಮರಿಗಳಿಗೆ ಕೊಡುವ ಸ್ಥಳಾವಕಾಶದ ಎರಡರಷ್ಟು ಕೊಡಬೇಕು. ಹಾಗೆಯೇ ಐದನೇ ಹಂತದ ಹುಳುಗಳಿಗೆ ಅದರ ಹಿಂದಿನ ಬೆಳವಣಿಗೆಯ ಎರಡರಷ್ಟು ಸ್ಥಳಾವಕಾಶವಿರಬೇಕು.

೫೨) ರೆಂಬೆಗಳ ಮೇಲೆ ಹುಳುಸಾಕಣೆ ಕುರಿತು ವಿವರಿಸಿ?

ರೆಂಬೆಗಳ ಮೇಲೆ ಹುಳುಸಾಕುವ ಪದ್ಧತಿ, ಅಂತಸ್ತುಗಳ ಮೇಲೆ ಸಾಕುವ ಪದ್ಧತಿಯನ್ನು ಹೋಲುತ್ತದೆ. ಇಡೀ ಕಾಂಡ/ರೆಂಬೆಗಳನ್ನು ಒದಗಿಸಿ ೪ ಮತ್ತು ೫ನೇ ಹಂತದ ಹುಳುಗಳನ್ನು ಎರಡು ಅಥವಾ ಮೂರು ಅಂತಸ್ತುಗಳ ಮೇಲೆ ಸಾಕಬಹುದು. ಸಾಕುವ ಸ್ಥಳ ಸಾಮಾನ್ಯವಾಗಿ ೧.೫ಮೀ. ಅಗಲವಾಗಿದ್ದು, ಉದ್ದ ೧೧ಮೀ. ಅಥವಾ ಮನೆಯ ಉದ್ದದ ಮೇಲೆ ಅವಲಂಬಿಸಿರುತ್ತದೆ. ಸುಮಾರು ೨೦,೦೦೦ ಹುಳುಗಳನ್ನು ಹಣ್ಣಾಗುವವರೆಗೂ ೧.೫ಮೀ. ಅಗಲ ಹಾಗೂ ೧೧ಮೀ. ಉದ್ದವಿರುವ ಒಂದು ಅಂತಸ್ತಿನಲ್ಲಿ ಸಾಕಬಹುದಾಗಿದೆ. ಅಂತಸ್ತಿನ ಸುತ್ತಲೂ ೧೫ಸೆಂ.ಮೀ. ಅಂಚು ಇರಬೇಕು. ಇಲ್ಲದಿದ್ದರೆ ಹುಳುಗಳು ಕೆಳಗಡೆಬೀಳುವ ಸಂಭವ ಹೆಚ್ಚು. ಎರಡು ಅಂತಸ್ತುಗಳ ಮಧ್ಯೆ ೧.೫ ಅಡಿ ಅಂತರವಿಬೇಕು. ಈ ಅಂತಸ್ತುಗಳನ್ನು ಮಾಡುವುದಕ್ಕೆ ಮರ, ಬಿದಿರು ಅಥವಾ ಕಬ್ಬಿಣದ ಯ್ಯಾಂಗಲ್‌ಗಳನ್ನು ಮತ್ತು ತಂತಿಗಳನ್ನು ಬಳಸಬಹುದು. ಹುಳುವಿನ ಹಾಸುಗೆ ಮಾಡುವುದಕ್ಕೆ ನೈಲಾನ್ ಬಲೆ ಅಥವಾ ಬಿದಿರಿನ ಚಾಪೆಗಳನ್ನು ಅಂತಸ್ತಾಗಿ ಅಳವಡಿಸಬೇಕು.

ಇಡೀ ಕಾಂಡಗಳನ್ನು ಒದಗಿಸುವುದರಿಂದ ಹುಳುಗಳು ಸೊಪ್ಪು ಮೇಯುತ್ತಾ ಮೇಲೆ ಬರುತ್ತವೆ. ಕಾಂಡಗಳನ್ನು ಹರಡಿರುವ ಕಾರಣ ಹುಳುಗಳಿಗೆ ಸ್ವಚ್ಚಗಾಳಿಯೂ ಲಭಿಸುವುದಲ್ಲದೆ ಹುಳುಗಳ ಸಂಖ್ಯೆಯನ್ನು ದಡೇವು ಪದ್ಧತಿಯಲ್ಲಿ ಸಾಕುವುದಕ್ಕಿಂತ ಶೇ.೫೦ರಷ್ಟು ಹೆಚ್ಚಿಸಿ, ಒಂದು ನಿರ್ದಿಷ್ಟ ಸ್ಥಳದಲ್ಲಿ ಸಾಕಲು ಸಾಧ್ಯ. ಮೂರನೇ ಜ್ವರದಿಂದ ಎದ್ದ ರೇಷ್ಮೆ ಹುಳುಗಳಿಗೆ ಮೊದಲನೆ ಸೊಪ್ಪು ಕೊಟ್ಟು, ಬಲೆಗಳನ್ನು ಬಳಸಿ ಕಸ ತೆಗೆದು, ಹುಳುಗಳನ್ನು ಇಡೀ ಕಾಂಡ ಮೇಯಿಸುವ ಅಂತಸ್ತಿನಲ್ಲಿರುವ ಹುಳುವಿನ ಹಾಸುಗೆಗೆ ವರ್ಗಾಯಿಸಲಾಗುತ್ತದೆ. ಹುಳುಗಳನ್ನು ಹಾಕುವುದಕ್ಕೆ ಮುಂಚೆ ಬಲೆ ಹಾಸುಗೆಯ ಮೇಲೆ ಒಂದು ಸ್ವಚ್ಛವಾಗಿರುವ ಕಾಗದ ಹಾಸಿ ಅದರ ಮೇಲೆ ಸೋಂಕು ನಿವಾರಕ ಪುಡಿಯನ್ನು ಉದುರಿಸಲಾಗುತ್ತದೆ. ಸೊಪ್ಪನ್ನು ಕೊಡವಾಗ ಕಾಂಡಗಳು ಹುಳುವಿನ ಹಾಸುಗೆಯ ಅಗಲಕ್ಕೆ ಬೀಳುವಂತೆ ಮಾಡಿ ಹಾಸುಗೆಯ ಉದ್ದಕ್ಕೆ ಲಂಬವಾಗಿಬೇಕು. ಮೊದಲನೇ ಬಾರಿ ಕಾಂಡ ಕೊಟ್ಟಾಗ ಕಾಂಡಗಳ ತುದಿ ಇರುವ ಕಡೆಗೆ, ಎರಡನೇ ಬಾರಿ ಕೊಟ್ಟಾಗ ಆ ಕಡೆಗೆ ಕಾಂಡಗಳ ಬುಡ ಬರುವಂತೆ ಕಾಂಡಗಳನ್ನು ಜೋಡಿಸಬೇಕು. ಈ ರೀತಿ ಮಾಡುವುದರಿಂದ ಎಲ್ಲಾ ಗುಣಮಟ್ಟದ ಎಲೆಗಳನ್ನು ಹಾಸುಗೆಯಲ್ಲಿ ಸಮವಾಗಿ ಮಿಶ್ರಮಾಡಿದಂತೆ ಆಗುತ್ತದೆ. ದಿವಸಕ್ಕೆ ೩ ರಿಂದ ೪ ಬಾರಿ ಇಡೀ ಕಾಡಗಳನ್ನು ಕೊಡಬೇಕು. ಈ ಪದ್ಧತಿಯಲ್ಲಿ ೧೦೦ ಮೊಟ್ಟೆಗಳಿಗೆ ಹಣ್ಣಾಗುವ ಹೊತ್ತಿಗೆ ಬೇಕಾದ ಸ್ಥಳಾವಕಾಶ ಸುಮಾರು ೩೫೦ ಚ.ಅಡಿಗಳು ಕಾಂಡಗಳನ್ನು ಹುಳುಗಳ ಸಮೇತ ಎತ್ತಿ ಬೇರೆ ಕಡೆ ವರ್ಗಾಯಿಸಿ ಸ್ಥಳಾವಕಾಶ ಹೆಚ್ಚು ಮಾಡಬೇಕು. ಶೇ.೯೦ರಷ್ಟು ಹುಳುಗಳು ೪ನೇ ಜ್ವರಕ್ಕೆ ಕುಳಿತಾಗ ಹಸುಗೆಯ ಮೇಲೆ ಸುಣ್ಣದ ಪುಡಿಯನ್ನು ಧೂಳಿಸಬೇಕು. ಇದರಿಂದ ಹಾಸುಗೆ ಸರಿಯಾಗಿ ಒಣಗುತ್ತವೆ. ೫ನೇ ಹಂತದ ಎರಡನೇ ದಿವಸ ಒಂದು ಸಾರಿ ಕಸ ತೆಗೆಯಬೇಕು.

ಕಸ ತೆಗೆಯಲು ಮುಂದಿನಂತೆ ಎರಡು ವಿಧಾನಗಳನ್ನು ಅನುಸರಿಸಬಹುದು:

) ಹಗ್ಗ ಬಳಸುವ ವಿಧಾನ: ಕಸ ತೆಗೆಯಬೇಕಾದಾಗ ಎರಡೆರಡು ಮೀ. ಉದ್ದದ ಎರಡು ಹಗ್ಗಗಳನ್ನು ಸಮಾನಾಂತರವಾಗಿರುವಂತೆ ಹುಳುಗಳ ಹಾಸುಗೆಯ ಮೇಲೆ ಹಾಕಿ ಎರಡು ಸೊಪ್ಪು ಕೊಟ್ಟನಂತರ ಹಗ್ಗದ ಕೊನೆಗಳನ್ನು ಹಿಡಿದು ಮಧ್ಯಕ್ಕೆ ತಂದು ಮೇಲಕ್ಕೆತ್ತಿ ಕೆಳಗಡೆ ಇರು ಹಾಸುಗೆಯನ್ನು ಸ್ವಚ್ಛಮಾಡಿ ನಂತರ ಹಗ್ಗಗಳನ್ನು ಮೊದಲಿನಂತೆ ಹಾಸಿಗೆಯಲ್ಲಿ ಇಟ್ಟು ಹುಳುಗಳಿರುವ ಕಾಂಡಗಳನ್ನು ಸಮನಾಗಿ ಹರಡಬೇಕು.

) ಬಲೆಯ ವಿಧಾನ: ನಾಲ್ಕನೇ ಜ್ವರದಿಂದ ಎದ್ದಮೇಲೆ ಮೊದಲನೆ ಸೊಪ್ಪು ಕೊಡುವ ಮುನ್ನ ೫ಸೆಂ.ಮೀ. ನಷ್ಟು ಕಣ್ಣಿರುವ ಬಲೆಯನ್ನು ೨ x ೧.೫ ಮೀ.ವಿಸ್ತೀರ್ಣಕ್ಕೆ ಹರಡಿ ಎರಡು ಸೊಪ್ಪು ಕೊಟ್ಟನಂತರ ಬಲೆಗಳನ್ನು ಹಾಸುಗೆಯ ಮೇಲೆ ಸಮನಾಗಿ ಹರಡಬೇಕು. ಹುಳುಗಳು ಹಣ್ಣಾದನಂತರ ಅಲ್ಲಿರುವ ಬಲೆಗಳನ್ನು ಎತ್ತಿ ಹಾಸುಗೆಯನ್ನು ಸ್ವಚ್ಛಮಾಡಲು ಅನುಕೂಲವಾಗುತ್ತದೆ.

ಈ ಪದ್ಧತಿ ಅನುಸರಿಸುವುದರಿಂದ ದಡೇವು ಪದ್ಧತಿಗಿಂತ ಶೇ.೩೦ರಷ್ಟು ಕೂಲಿಯಾಳುಗಳ ಉಳಿತಾಯವಾಗುತ್ತದೆ. ಶೇ.೧೫ರಿಂದ ೨೦ರಷ್ಟು ಎಲೆ ಉಳಿತಾಯ, ಬೆಳೆದ ಹುಳುಗಳ ಸಾಕಣೆಯಲ್ಲಿ ಒಂದೇ ಒಂದು ಸಾರಿ ಹಾಸುಗೆ ಸ್ವಚ್ಛಮಾಡುವಿಕೆ ಮತ್ತು ಹಾಸುಗೆಯಲ್ಲಿ ಚೆನ್ನಾಗಿ ಗಾಳಿಯಾಡುವಿಕೆ ಇತ್ಯಾದಿ ಅನುಕೂಲತೆಗಳಿರುತ್ತವೆ. ಆದರೆ ಹುಳುಸಾಕಣೆಗೆ ದಡೇವು ಪದ್ಧತಿಗಿಂತ ಶೇ.೨೫ರಿಂದ ೩೦ರಷ್ಟು ಹೆಚ್ಚು ಕೊಠಡಿಯ ವಿಸ್ತೀರ್ಣ ಬೇಕಾಗುತ್ತದೆ. ಹಾಸುಗೆ ಸ್ವಚ್ಛಮಾಡಿದಾಗ ದನಗಳ ಮೇವಿಗೆ ಸೊಪ್ಪು ಸಿಗುವುದಿಲ್ಲ ಹಾಗೂ ಹುಳುಗಳಿಗೆ ಮೇಯಿಸಲು ಬಳಸಿದ ಕಾಂಡಗಳನ್ನು ಕಸಿತುಂಡು ತಯಾರಿಸಲು ಬಳಸಲಾಗುವುದಿಲ್ಲ.