) ನಮ್ಮ ಪ್ರದೇಶದಲ್ಲಿ ಸಾಕಬಹುದಾದನಂತಹ ರೇಷ್ಮೆಹುಳುಗಳ ತಳಿಗಳಾವುವು ತಿಳಿಸಿ?

ನಮ್ಮ ಪ್ರದೇಶದಲ್ಲಿ ವಾಣಿಜ್ಯ ರೇಷ್ಮೆ ಬೇಸಾಯಕ್ಕೆ ಸೂಕ್ತವಾದ ತಳಿಗಳೆಂದರೆ:

ಅ) ಬಹುಸಂತತಿ ತಳಿ (ಮಲ್ಟಿ ವೋಲ್ಟೈನೆ) x ದ್ವಿಸಂತತಿ ತಳಿ (ಬೈ ವೋಲ್ಟೈನ್)
ಬಿಎಲ್ ೨೩ x ಎನ್‌ಬಿಡಿ (ಮಳೆಯಾಶ್ರಿತ)
ಬಿಎಲ್ ೨೪ x ಎನ್‌ಬಿಡಿ (ನೀರಾವರಿ)
ಪಿಎಮ್ x ಸಿಎಸ್‌ಆರ್
ಬಿಎಲ್ x ಸಿನಿಚಿ

ಆ) ದ್ವಿ ತಳಿ x ದ್ವಿ ತಳಿ (ಬೈವೋಲ್ಟೈನ್ x ಬೈ ವೋಲ್ಟೈನ್)
ಸಿಎಸ್‌ಆರ್ ೨ x ಸಿಎಸ್‌ಆರ್ ೪
ಸಿಎಸ್‌ಆರ್ ೨ x ಸಿಎಸ್‌ಆರ್ ೫
ಸಿಎಸ್‌ಆರ್ ೧೮ x ಸಿಎಸ್‌ಆರ್ ೧೯
ಸಿಎಸ್‌ಆರ್ ೧೬ x ಸಿಎಸ್‌ಆರ್ ೧೭
ಸಿಎಸ್‌ಆರ್ ೧೨ x ಸಿಎಸ್‌ಆರ್ ೬
ಸಿಎಸ್‌ಆರ್ ೩ x ಸಿಎಸ್‌ಆರ್ ೬

) ಸಿ.ಎಸ್.ಆರ್.ಬೈವೋಲ್ಟೈನ್ ಹೈಬ್ರಿಡ್ ತಳಿಗಳ ಬಗ್ಗೆ ಮಾಹಿತಿ ಕೊಡಿ?

ಸಿ.ಎಸ್.ಆರ್.ಬೈವೋಲ್ಟೈನ್ ಹೈಬ್ರಿಡ್ ತಳಿಗಳ ವಿವರ ಈ ಕೆಳಕಂಡಂತಿದೆ:

ಗುಣ

ಸಿ.ಎಸ್.ಆರ್.
೨ x ೪

ಸಿ.ಎಸ್.ಆರ್.
೨ x ೫

ಸಿ.ಎಸ್.ಆರ್.
೩ x ೬

ಸಿ.ಎಸ್.ಆರ್.
೧೨ x ೬

ಹುಳುವಿನ ಗುರುತು ಸಾದ, ನೀಲಿ ಬಿಳುಪು ಸಾದ, ನೀಲಿ ಬಿಳುಪು ಗುರುತಿದೆ ನೀಲಿ ಬಿಳುಪು ಗುರುತಿದೆ ನೀಲಿ ಬಿಳುಪು
ಗೂಡಿನ ಬಣ್ಣ ಬಿಳಿ ಕಂದುಬಣ್ಣ ಬಿಳಿ ಬಿಳಿ
ಗೂಡಿನ ಗಾತ್ರ ಸಣ್ಣದರಿಂದ ಮಧ್ಯಮ ಸಣ್ಣದರಿಂದ ಮಧ್ಯಮ ಸಣ್ಣದರಿಂದ ಮಧ್ಯಮ ಸಣ್ಣದರಿಂದ ಮಧ್ಯಮ
ಕೋಶಾವಸ್ಥೆ ಪ್ರಮಾಣ (ಶೇ.) ೯೬.೫೯ ೯೭.೧ ೯೪.೧ ೯೧.೦೦
ಗೂಡು ರೇಷ್ಮೆ ಅನುಪಾತ ೨೩.೫ ೨೪.೧ ೨೪.೫ ೨೩.೯
ಕಚ್ಚಾರೇಷ್ಮೆ(ಶೇ.) ೨೦.೦೦ ೨೦.೫೦ ೧೯.೮೦ ೧೯.೯೦
ರೇಷ್ಮೆ ದಾರದ ಉದ್ದ(ಮೀ.) ೧೧.೪೭ ೧೨.೧೯ ೧೨.೯೫ ೧೨.೦೦
ನೀಟ್‌ನೆಸ್ ೯೪.೪ ೯೫.೩೦ ೯೪.೦೦ ೯೪.೦೦
ಶೇಕಡಾವಾರು ರೇಷ್ಮೆ ಬಿಚ್ಚಾಣಿಕೆ ೮೫ ೭೯ ೮೧ ೮೨
ರೆಂಡಿಟ್ಟ* ೪.೮ ೫.೦ ೫.೦
ರೇಷ್ಮೆ ನೂಲಿನ ಗುಣಮಟ್ಟ ೨೪.೩೪ ೨೪.೩೪ ೨೪.೩೪ ೨೪.೩೪
ಹುಳು ಸಾಕುವ ಕಾಲ ಸೆಪ್ಟೆಂಬರ್ ಫೆಬ್ರವರಿ ಸೆಪ್ಟೆಂಬರ್ ಫೆಬ್ರವರಿ ಸೆಪ್ಟೆಂಬರ್ ಫೆಬ್ರವರಿ ಸೆಪ್ಟೆಂಬರ್ ಫೆಬ್ರವರಿ

) ಗುಣಮಟ್ಟದ ರೇಷ್ಮೆ ಮೊಟ್ಟೆ ಪಡೆಯಲು ಬಿತ್ತನೆ ಕೋಠಿಗಳಲ್ಲಿ ಅನುಸರಿಸಬೇಕಾದ ಕ್ರಮಗಳೇನು?

ಉತ್ತಮ ಗೂಡಿನ ಇಳುವರಿ ಪಡೆಯಲು, ಉತ್ತಮ ಗುಣಮಟ್ಟದ ಮೊಟ್ಟೆ ಬೇಕಾಗುತ್ತದೆ. ಇಂಥ ಮೊಟ್ಟೆ ಪಡೆಯಲು ಪ್ರತಿ ಹಂತದಲ್ಲೂ ಎಂದರೆ, ಬಿತ್ತನೆ ಗೂಡಿನ ಬೆಳವಣಿಗೆಯಿಂದ ಹಿಡಿದು ಮೊಟ್ಟೆ ಪರಿಪಾಕಿಸುವವರೆಗೆ ತುಂಬಾ ಎಚ್ಚರವಹಿಸಬೇಕು. ಈ ದಿಸೆಯಲ್ಲಿ ಗಮನಿಸಬೇಕಾದ ಅಂಶಗಳು ಈ ಮುಂದಿನಂತಿವೆ:

) ಸೋಂಕು ನಿವಾರಣೆ:ಮೊಟ್ಟೆ ಉತ್ಪಾದನಾ ಕೋಠಿಗಳಲ್ಲಿ ಸರಿಯಾಗಿ ಸೋಂಕು ನಿವಾರಣೆ ಮಾಡಬೇಕು. ಬಿತ್ತನೆ ಗೂಡು ತರುವ ಎರಡು ದಿನಗಳ ಮುಂಚೆ ೫೦೦ ಪಿ.ಪಿ.ಎಂ. ಸೆರನೊವ ಕ್ಲಿನಿಟಾಲ್ ಪ್ಲಸ್ ಸೋಂಕುನಿವಾರಕದಿಂದ ಕೊಠಡಿ ಮತ್ತು ಸಲಕರಣೆಗಳನ್ನು ಉಪಚರಿಸಿ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಬಿತ್ತನೆ ಗೂಡು ಬರುವ ಒಂದು ದಿನ ಮೊದಲು ಸಲಕರಣೆಗಳನ್ನು ಒಳಗಿಟ್ಟು ೫೦೦ ಪಿ.ಪಿ. ಎಂ. ಸೆರಿನೊವ ಕ್ಲಿನಿಟಾಲ್ ಪ್ಲಸ್‌ನಿಂದ ಮತ್ತೊಮ್ಮೆ ಸೋಂಕುನಿವಾರಣೆ ಮಾಡಿ ಅನಂತರ ಬಿತ್ತನೆಗೂಡು ತರಬೇಕು.

) ಸಾಗಾಣಿಕೆ: ತಂಪಾದ ಸಮಯದಲ್ಲಿ ಬಿದಿರಿನ ಬ್ಯಾಸ್ಕೆಟ್ ಅಥವಾ ರಂಧ್ರಗಳಿರುವ ಪ್ಲಾಸ್ಟಿಕರ ಬ್ಯಾಸ್ಕೆಟ್‌ಗಳಲ್ಲಿ ಗೂಡುಗಳನ್ನು ಬಿಡಿಬಿಡಿಯಾಗಿ ತುಂಬಿ ಬಿತ್ತನೆ ಗೂಡಿನ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡು ಸಾಗಿಸಬೇಕು.

) ಬಿತ್ತನೆ ಗೂಡಿನ ಸಂರಕ್ಷಣೆ: ಬಿತ್ತನೆ ಗೂಡುಗಳನ್ನು ಬಿತ್ತನೆ ಕೋಠಿಗೆ ತಂದ ತಕ್ಷಣ ತಟ್ಟೆಗಳಲ್ಲಿ ತೆಳುವಾಗಿ ಹರಡಬೇಕು. ಅನಂತರ ಅದರಲ್ಲಿ ಕರಗಿದ ಗೂಡು, ಊಜಿಕೊರೆದ ಗೂಡು ಮತ್ತು ಕಳಪೆ ಗೂಡುಗಳನ್ನು ತೆಗೆದು ಬೇರ್ಪಡಿಸಬೇಕು. ಜೊತೆಗೆ ಗೂಡಿನ ತೂಕದ ಆಧಾರದ ಮೇಲೆ ಹೆಣ್ಣು ಮತ್ತು ಗಂಡು ಗೂಡುಗಳನ್ನು ಸಹ ಬೇರ್ಪಡಿಸಬಹುದು. ಬಿತ್ತನೆ ಗೂಡಿನ ಕೊಠಡಿಯಲ್ಲಿ ೨೫+೧(ಡಿಗ್ರಿ) ಸೆಂಟಿಗ್ರೇಡ್ ಮತ್ತು ಶೇ.೭೫ರಷ್ಟು ಶೈತ್ಯಾಂಶ ಇರಬೇಕು. ಇದರ ಜೊತೆಗೆ ೧೨ ಗಂಟೆಗಳ ಕತ್ತಲೆ ಮತ್ತು ೧೨ಗಂಟೆಗಳ ಕಾಲ ಬೆಳಕು ಇರುವಂತೆ ನೋಡಿಕೊಳ್ಳಬೇಕು.

) ಕೃತಕವಾಗಿ ಚಿಟ್ಟೆ ಬೇಗ ಹೊರಬರುವಂತೆ ಮಾಡುವುದು : ಈ ರೀತಿ ಮಾಡುವುದರಿಂದ ಹೊರಬಂದ ಚಿಟ್ಟೆಗಳನ್ನು ಬೇಗ ಪರೀಕ್ಷಿಸಿ ಈ ಗುಂಪಿನಲ್ಲಿ ರೋಗವಿದ್ದರೆ ಚಿಟ್ಟೆ ಹೊರಬರವುದಕ್ಕಿಂತ ಮೊದಲು ಗೂಡುಗಳನ್ನು ನೂಲು ಬಿಚ್ಚುವುದಕ್ಕೆ ಉಪಯೋಗಿಸಿ ನಷ್ಟ ತಡೆಯಬಹುದು.

) ಮೊಟ್ಟೆ ತಯಾರಿ : ಚಿಟ್ಟೆ ಹೊರಬರುವುದಕ್ಕೆ ಒಂದು ದಿನ ಮೊದಲು ಸಂಪೂರ್ಣವಾಗಿ ಕತ್ತಲಿದ್ದು ಬೆಳಿಗ್ಗೆ ೫ ಗಂಟೆಗೆ ಬೆಳಕು ಕೊಟ್ಟರೆ ಸಮನಾಗಿ ಚಿಟ್ಟೆಗಳು ಹೊರಬರುತ್ತವೆ. ಇದಕ್ಕಿಂತ ಮೊದಲು ಗಂಡು ಚಿಟ್ಟೆ ಹೊರಬಂದಿದ್ದರೆ ಅವುಗಳನ್ನು ೫(ಡಿಗ್ರಿ)ರಿಂದ ೭(ಡಿಗ್ರಿ)ಸೆ.ಉಷ್ಣಾಂಶ ಮತ್ತು ಶೇ. ೭೫ ಶೈತ್ಯಾಂಶದಲ್ಲಿ ಇಡುವುದರ ಮೂಲಕ ಅವುಗಳನ್ನು ೩ ರಿಂದ ೪ ದಿನಗಳವರೆಗೆ ಇಟ್ಟುಕೊಳ್ಳಬಹುದು. ಚಿಟ್ಟೆ ಹೊರಬಂದ ನಂತರ ಹೆಣ್ಣು ಮತ್ತು ಗಂಡು ಚಿಟ್ಟೆಗಳನ್ನು ಒಂದು ತಟ್ಟೆಯಲ್ಲಿ ಹಾಕಿದರೆ ಅಂಟಿಕೊಳ್ಳುತ್ತವೆ. ೩.೫ರಿಂದ೪ಗಂಟೆಗಳನಂತರ ಗಂಡು ಮತ್ತು ಹೆಣ್ಣು ಚಿಟ್ಟೆಗಳನ್ನು ಬೇರ್ಪಡಿಸಿ ಹೆಣ್ಣು ಚಿಟ್ಟೆಯನ್ನು ಮೊಟ್ಟೆ ಇಡುವ ಹಾಳೆಯ ಮೇಲೆ ಹಾಕಿ, ಸೆಲ್ಯೂಲ್‌ನಿಂದ ಮುಚ್ಚಬೇಕು. ಹಾಗೆಯೇ ಗಂಡು ಚಿಟ್ಟೆಯನ್ನು೫-೭(ಡಿಗ್ರಿ)ಸೆ.ನಲ್ಲಿ ಶೇಖರಿಸಿ ಪುನಃ ಬಳಸಬಹುದು. ಮೊಟ್ಟೆಮಾಡುವ ಬಿತ್ತನೆ ಕೋಠಿಗಳಲ್ಲಿ ೨೫(ಡಿಗ್ರಿ)ಸೆ.ಉಷ್ಣಾಂಶ ಮತ್ತು ಶೇ. ೭೫ರಷ್ಟು ಶೈತ್ಯಾಂಶ ಇರುವುದು ಸೂಕ್ತ.

) ತಾಯಿ ಚಿಟ್ಟೆ ಪರೀಕ್ಷೆ : ಮೊಟ್ಟೆ ಇಟ್ಟನಂತರ ತಾಯಿ ಚಿಟ್ಟೆಯನ್ನು ಚೆನ್ನಾಗಿ ಅರೆದು ರಸವನ್ನು ಸ್ಲೈಡ್ ಮೇಲಿಟ್ಟು ಸೂಕ್ಷ್ಮದರ್ಶಕದ ಮೂಲಕ ಪೆಬ್ರಿನ್/ಗಂಟುರೋಗ ಇರುವಿಕೆಯನ್ನು ತಿಳಿಯಲು ಪರೀಕ್ಷಿಸಬೇಕು. ತಾಯಿಚಿಟ್ಟೆಯಲ್ಲಿ ಗಂಟುರೋಗ ಇಲ್ಲದಿದ್ದರೆ ಮಾತ್ರ ಮೊಟ್ಟಯನ್ನು ಉಪಯೋಗಿಸಬಹುದು.

) ಮೊಟ್ಟೆಯ ಮೇಲಿನ ಸೋಂಕು ನಿವಾರಣೆ : ಗಂಟುರೋಗ ಇಲ್ಲದಿರುವಕೆಯನ್ನು ಖಾತರಿಪಡಿಸಿಕೊಂಡ ನಂತರ ಮೊಟ್ಟೆಗಳನ್ನು ಶೇ. ೨ರ ಫಾರ್ಮಲಿನ್ ಅಥವಾ ೫೦೦ ಪಿ.ಪಿ.ಎಂ. ಕ್ಲೋರಿನ್ ಡೈಯಾಕ್ಸೈಡ್ (ಸೆರಿನೋವ ಕ್ಲಿನಿಟಾಲ್ ಪ್ಲಸ್, ಸ್ಯಾನಿಟಿಕ್ ಇತರೆ) ನಿಂದ ತೊಳೆದು ಸೋಂಕು ನಿವಾರಿಸಬೇಕು.

) ಮೊಟ್ಟೆ ಪರಿಪಾಕಿಸುವುದು: ರೇಷ್ಮೆ ಹುಳುಗಳು ಆರೋಗ್ಯವಾಗಿ ಬೆಳೆದು ಉತ್ತಮ ಗೂಡು ಇಳುವರಿ ಪಡೆಯಬೇಕಾದರೆ ಮೊಟ್ಟೆ ಪರಿಪಾಕಿಸುವುದು ಬಹಳ ಮುಖ್ಯ. ಆದ್ದರಿಂದ ಮೊಟ್ಟೆಗಳನ್ನು ೨೫(ಡಿಗ್ರಿ)ಸೆ. ಉಷ್ಣಾಂಶ ಮತ್ತು ಶೇ. ೭೫ರಷ್ಟು ಶೈತ್ಯಾಂಶದಲ್ಲಿಡಬೇಕು. ಹಾಗೆಯೇ ೧೬ ಗಂಟೆಗಳ ಕಾಲ ಬೆಳಕು ಮತ್ತು ೮ ಗಂಟೆಗಳ ಕಾಲ ಕತ್ತಲು ಇರುವಂತೆ ನೋಡಿಕೊಳ್ಳಬೇಕು.

) ರೇಷ್ಮೆ ಮೊಟ್ಟೆ ಸಾಕಣೆ ಕೈಚೀಲದ ಪ್ರಯೋಜನವೇನು?

ರೇಷ್ಮೆ ಮೊಟ್ಟೆಗಳನ್ನು ಹೆಚ್ಚು ಬಿಸಿಲಿನ ತಾಪ ಅಥವಾ ಉಷ್ಣಾಂಶ ಇರುವ ಸಮಯದಲ್ಲಿ ಸಾಗಾಣಿಕೆ ಮಾಡಬಾರದು. ತಂಪಾದ ಸಮಯದಲ್ಲಿ ಕೈಚೀಲದಲ್ಲಿಟ್ಟುಕೊಂಡು ಸಾಗಿಸಬೇಕು, ಇದರಿಂದ :

೧) ಕೈಚೀಲದ ಒಳಗಡೆ ಸಾಕಷ್ಞು ಗಾಳಿ ಸಂಚಾರವಿರುತ್ತದೆ.

೨) ಮೊಟ್ಟೆಯ ಸುತ್ತ ಇರುವ ಫ್ರೇಮ್ ರಬ್ಬರ್ ತೇವವಾಗಿರುವುದರಿಂದ ಸಾಕಷ್ಟು ಶೈತ್ಯಾಂಶ ಮತ್ತು ಉತ್ತಮ ಉಷ್ಣಾಂಶ ಕಾಪಡುವುದಕ್ಕೆ ಸಹಾಯವಾಗುತ್ತದೆ.

೩) ಮೊಟ್ಟೆಯ ಮೇಲೆ ಒತ್ತಡ ಇರುವುದಿಲ್ಲ.

೪) ಇದನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಹಲವು ವರ್ಷಗಳವರೆಗೆ ಉಪಯೋಗಿಸಬಹುದು.

೫) ಮೊಟ್ಟೆ ಸಾಗಾಣಿಕೆ ಸುಲಭವಾಗಿರುತ್ತದೆ.

) ಬಿಡಿ ರೇಷ್ಮೆಮೊಟ್ಟೆಗಳ ಉತ್ಪಾದನೆಮಾಡುವುದು ಹೇಗೆ?

ಬಿಡಿ ಮೊಟ್ಟೆಗಳನ್ನು ಈ ಮುಂದಿನ ಕ್ರಮದಲ್ಲಿ ಸಿದ್ಧಪಡಿಸಬಹುದು :

) ಹಾಳೆಗಳ ತಯಾರು :  ಒಂದು ಲೀ. ನೀರಿನಲ್ಲಿ ೪೦ರಿಂದ ೫೦ಗ್ರಾಂ ಮೈದಾಹಿಟ್ಟನ್ನು ಬೇಯಿಸಿ ಪೇಸ್ಟಿನಂತೆ ಮಾಡಿಕೊಳ್ಳಬೇಕು. ಅನಂತರ ಇದನ್ನು ಹಾಳೆಯ ಮೇಲೆ ತೆಳುವಾಗಿ ಅಂಟಿಸಬೇಕು.

) ಮೊಟ್ಟೆ ಇಡಿಸುವುದು

 • ಮೊದಲು ಮೈದಾಹಿಟ್ಟು ಅಂಟಿಸಿದ ಹಾಳೆಗಳನ್ನು ತಟ್ಟೆಯ ತುಂಬಾ ಹರಡಬೇಕು.
 • ಅನಂತರ ಪ್ರತಿ ಚದರ ಅಡಿಗೆ ೪೦ ರಿಂದ ೫೦ ರಂತೆ ಹೆಣ್ಣು ಚಿಟ್ಟೆಗಳನ್ನು ಈ ಮೊಟ್ಟೆ ಇಡಿಸುವ ತಟ್ಟೆಯಲ್ಲಿ ಬಿಡಬೇಕು.
 • ಅನಂತರ ಈ ಹೆಣ್ಣು ಚಿಟ್ಟೆ ಬಿಟ್ಟ ತಟ್ಟೆಗಳನ್ನು ಕತ್ತಲಲ್ಲಿ ದಡೇವುಗಳ ಮೇಲೆ ಜೋಡಿಸಬೇಕು.
 • ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ಪಡೆಯಲು ೨೫(ಡಿಗ್ರಿ)ಸೆ. ಉಷ್ಣಾಂಶ ಮತ್ತು ಶೇ.೭೫ರ ಶೈತ್ಯಾಂಶವನ್ನು ಕಾಪಾಡಿಕೊಳ್ಳಬೇಕು.

) ಬಿಡಿ ಮೊಟ್ಟೆಗಳನ್ನು ಸಾಗಿಸುವಿಕೆ

 • ಗಂಟುರೋಗ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಹುಳುಸಾಕಣೆ ತಾಯಿ ಚಿಟ್ಟೆ ಪರೀಕ್ಷೆ ಮಾಡಬೇಕು.
 • ಮೊಟ್ಟೆಯ ಹಾಳೆಯಲ್ಲಿರುವ ಅಂಟುತೆಗೆಯಲು ೨೦ರಿಂದ ೩೦ನಿಮಿಷಗಳ ಕಾಲ ನೀರಿನಲ್ಲಿ ಅದ್ದಬೇಕು.
 • ಹೀಗೆ ನೀರಿಗೆ ಅದ್ದಿದ ಮೊಟ್ಟೆಹಾಳೆಗಳನ್ನು ತಟ್ಟೆಯ ಮೇಲೆ ಹರಡಿ, ಜೋಪಾನವಾಗಿ ಹಾಳೆಗಳಿಂದ ಮೊಟ್ಟೆಗಳನ್ನು ಬೇರ್ಪಡಿಸಬೇಕು.
 • ಹೀಗೆ ಬೇರ್ಪಡಿಸಿದ ಮೊಟ್ಟೆಗಳನ್ನು ನೈಲಾನ್ ಚೀಲದಲ್ಲಿ ತುಂಬಿಕೊಳ್ಳಬೇಕು.

) ಮೊಟ್ಟೆಯ ಮೇಲಿನ ಅಂಟು ತೆಗೆಯುವುದು

ಮೊಟ್ಟೆಯ ಮೇಲಿ ಅಂಟು ತೆಗೆಯುವುದು ಅವಶ್ಯವಾಗಿದ್ದರಿಂದ ಶೇ.೦.೪ರ ಬ್ಲೀಚಿಂಗ್ ದ್ರಾವಣ ತಯಾರಿಸಿ ಅದನ್ನು ಸ್ವಲ್ಪ ಸಮಯ ಬಿಡಬೇಕು. ತದನಂತರ ಈ ಬಿಡಿ ಮೊಟ್ಟೆಗಳನ್ನು ಆ ಬ್ಲೀಚಿಂಗ್ ದ್ರಾವಣದಲ್ಲಿ ಹಾಕಿ ೧೦ರಿಂದ ೧೫ನಿಮಿಷಗಳು ಚೆನ್ನಾಗಿ ತೊಳೆಯಬೇಕು.

) ಬಿಡಿ ಮೊಟ್ಟೆಗಳನ್ನು ಒಣಗಿಸುವುದು

 • ಮೊಟ್ಟೆಗಳನ್ನು ನೈಲಾನ್ ಚೀಲಗಳಲ್ಲಿ ತುಂಬಿ ಮೆಲ್ಲಗೆ ಹಿಂಡಬೇಕು.
 • ಅನಂತರ ಈ ಬಿಡಿ ಮೊಟ್ಟೆಗಳನ್ನು ಪ್ಲಾಟ್‌ಫಾರ್ಮ ಮೇಲೆ ಹಾಕಿ ತೆಳುವಾಗಿ ಹರಡಬೇಕು.
 • ಸ್ವಲ್ಪ ಸಮಯ ಪಂಕವನ್ನು ಚಾಲನೆಯಲ್ಲಿಡಬೇಕು.

) ದ್ವಿಸಂತತಿ ತಳಿ ಮೊಟ್ಟೆಗಳಿಗೆ ಆಮ್ಲೋಪಚಾರ

 • ಬಿಡಿ ಮೊಟ್ಟೆಗಳನ್ನು ನೈಲಾನ್ ಚೀಲದಲ್ಲಿ ಹಾಕಿ ಸರಿಯಾಗಿ ಕಟ್ಟಬೇಕು.
 • ಈ ಚೀಲವನ್ನು ಹೈಡ್ರೋಕ್ಲೋರಿಕ್ ಆಮ್ಲ ದ್ರಾವಣದಲ್ಲಿ ೫ ರಿಂದ ೬ ನಿಮಿಷ ಅದ್ದಬೇಕು(೧.೦೬೪-ಸಾಪೇಕ್ಷ ಸಾಂದ್ರತೆ ಹಾಗೂ ಶೇ.೪೫ರಷ್ಟು ಉಷ್ಣತೆ).
 • ಅನಂತರ ಈ ಚೀಲವನ್ನು ಹೊರತೆಗೆದು ೨೦ ರಿಂದ ೩೦ ನಿಮಿಷಗಳ ಕಾಲ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.
 • ಮೊದಲೇ ತಿಳಿಸಿದ ಹಾಗೆ ಪ್ಲಾಟ್ ಫಾರ್ಮನ ಮೇಲೆ ತೆಳುವಾಗಿ ಹರಡಿ, ಪಂಕವನ್ನು ಚಾಲನೆಯಲ್ಲಿಟ್ಟು ಒಣಗಿಸಬೇಕಾಗುತ್ತದೆ.

) ಮೊಟ್ಟೆ ತೂರುವುದು/ಬೇರ್ಪಡಿಸುವುದು

ಹಗುರವಾದ/ಯೋಗ್ಯವಲ್ಲದ ಮೊಟ್ಟೆಗಳನ್ನು ಬೇರ್ಪಡಿಸಲು ಈ ಮೊಟ್ಟೆಗಳನ್ನು ಬೇರ್ಪಡಿಸುವ ಯಂತ್ರದಲ್ಲಿ ಹಾಕಿ ಪಂಕಚಾಲನೆ ಮಾಡಿ ತೂರುವುದರಿಂದ ಹಗುರವಾದ ಮೊಟ್ಟೆ ಹಾರಿಹೋಗುತ್ತದೆ.

) ಮೊಟ್ಟೆಗಳನ್ನು ಪೊಟ್ಟಣ/ಪ್ಯಾಕ್ ಮಾಡುವುದು

ಮೊದಲು ೨೦,೦೦೦ ಮೊಟ್ಟೆಗಳ ಲೆಕ್ಕ ಹಾಕಿ ಈ ಮೊಟ್ಟೆಗಳ ತೂಕ ಕಂಡು ಹಿಡಿದುಕೊಂಡಮೇಲೆ, ಆ ನಿರ್ದಿಷ್ಟ ತೂಕದ ಮೊಟ್ಟೆಗಳನ್ನು ಪ್ಯಾಕ್ ಮಾಡಬೇಕು.

) ಸೋಂಕು ನಿವಾರಣೆಗೆ ಯಾವ ಸೋಂಕು ನಿವಾರಕಗಳನ್ನು ಬಳಸಬೇಕು?

) ಬ್ಲೀಚಿಂಗ್ ಪುಡಿ: ಮಾರುಕಟ್ಟೆಯಲ್ಲಿ ಹಲವು ಹೆಸರಿನಲ್ಲಿ ಬ್ಲೀಚಿಂಗ್ ಪುಡಿ ಲಭ್ಯವಿರುತ್ತದೆ. ಆದರೆ ಅದರಲ್ಲಿ ಶೇ.೩೪ರಷ್ಟು ಕ್ಲೋರಿನ್ ಅಂಶವಿರುವ ಪುಡಿಯನ್ನು ಖಾತರಿಪಡಿಸಿಕೊಂಡು ಕೊಂಡುಕೊಳ್ಳಬೇಕು. ಈ ಪುಡಿಯನ್ನು ಶೇ. ೨ರ ಪ್ರಮಾಣದಲ್ಲಿ ತೆಗೆದುಕೊಂಡು, ಅದಕ್ಕೆ ಶೇ.೦,೩ರ ಸುಣ್ಣ ಸೇರಿಸಿ ಸೋಂಕು ನಿವಾರಣೆ ಮಾಡಬೇಕು.

) ಸ್ಥಿರೀಕರಿಸಿದ ಕ್ಲೋರಿನ್ ಡೈ ಅಕ್ಸೈಡ್: ಇತ್ತೀಚೆಗೆ ಶಿಫಾರಸು ಮಾಡಿದಂತೆ ಇದರ ಬಳಕೆ ಉಪಯುಕ್ತವಾಗಿದ್ದು ಜನಪ್ರಿಯವಾಗಿದೆ. ಮನುಷ್ಯರಿಗಾಗಲೀ, ಪ್ರಾಣಿಗಳಿಗಾಗಲೀ ಇದರಿಂದ ಯಾವುದೇ ರೀತಿಯ ಹಾನಿಯಲ್ಲ. ಇದು ಮಾರುಕಟ್ಟೆಯಲ್ಲಿ ಸೆರಿನೋವ, ಕ್ಲಿನಿಟಾಲ್ ಪ್ಲಸ್, ಸ್ಯಾನಿಟೆಕ್, ಸ್ಯಾನಿಟಾಲ್ ಪ್ಲಸ್ ಎಂಬ ಹೆಸರುಗಳಲ್ಲಿ ದೊರೆಯುತ್ತದೆ. ಇದು ೨೦,೦೦೦ ಪಿ.ಪಿ.ಎಂ. ಪ್ರಮಾಣದಲ್ಲಿ ದೊರೆಯುತ್ತಿದ್ದು ಇದನ್ನು ೫೦೦ ಪಿ.ಪಿ.ಎಂ.ಗೆ ಪರಿವರ್ತಿಸಿ ಇದಕ್ಕೆ ಶೇ.೦.೫ರ ಸುಣ್ಣವನ್ನು ಸೇರಿಸಿ ಸೋಂಕು ನಿವಾರಣೆ ಮಾಡಬೇಕು.

) ಸುಟ್ಟ ಸುಣ್ಣ : ಸುಣ್ಣದ ನೀರು ಸಹ ಸೋಂಕು ನಿವಾರಣೆಯಲ್ಲಿ ಸಹಕಾರಿ ಶೇ.೦.೫ರ ಸುಟ್ಟ ಸುಣ್ಣದ ತಿಳಿ ನೀರನ್ನು ಇತರ ಸೋಂಕು ನಿವಾರಕಗಳ ಜೊತೆ ಒಂದು ಬಾರಿ ಸೋಂಕು ನಿವಾರಣೆ ಮಾಡುವುದರಿಂದ ಪರಿಣಾಮಕಾರಿಯಾಗಿ ವೈರಸ್ ನಾಶಪಡಿಸಬಹುದು.

) ಫಾರ್ಮಲಿನ್ : ಇದೂ ಸಹ ರೋಗ ತರುವ ಸೂಕ್ಷ್ಮಜೀವಿಗಳನ್ನು ಕೊಲ್ಲುವುದರ ಮೂಲಕ ರೇಷ್ಮೆ ಹುಳುಗಳ ಆರೋಗ್ಯ ಕಾಪಾಡಬಲ್ಲುದು. ಆದರ, ಇದು ಮನುಷ್ಯರ ರೋಗಕ್ಕೆ ಹಾನಿಕಾರಕ. ಆದ್ದರಿಂದ ಇತ್ತೀಚೆಗೆ ಸ್ಥಿರೀಕರಿಸಿದ ಕ್ಲೋರಿನ್ಸೈಆಕ್ಸೈಡ್ ಹೆಚ್ಚು ಜನಪ್ರಿವಾಗುತ್ತಿದೆ. ಇದನ್ನು ಸೋಂಕು ನಿವಾರಣೆಗೆ ಬಳಸುವುದಾದರೆ ಶೇ.೨ ಮತ್ತು ಶೇ.೦.೦೫ರ ಮಾರ್ಜಕದ ಜೊತೆಯಲ್ಲಿ ಉಪಯೋಗಿಸಬೇಕು.

) ಸೋಂಕು ನಿವಾರಣೆಗೆ ಬಳಸುವ ಸಾಧನ ಸಲಕರಣೆಗಳಾವುವು?

ಸೋಂಕು ನಿವಾರಣೆಗೆ: ಸೋಂಕು ನಿವಾರಕ, ಸೋಪಿನ ಪೌಡರ್, ಸಿಂಪರಣಾ ಸಾಧನ (ರಾಕ್ ಸ್ಪ್ರೇಯರ್, ಪವರ್ ಸ್ಪ್ರೇಯರ್) ಬಕೆಟ್, ಅಳತೆ ಸಾಧನಗಳು (ಅಳತೆ ಮಾಡಲು ಜಾರ್ ಮತ್ತು ತೂಕಕ್ಕೆ ಸ್ಕೇಲ್), ಮುಖವಾಡ, ಸುಣ್ಣದ ಪುಡಿ, ಕೈಚೀಲ, ಮಸ್ಲಿನ್ ಬಟ್ಟೆ ಮತ್ತು ರೂಂ ಹೀಟರ‍್ಗಳು ಬೇಕಾಗುತ್ತದೆ.

) ರೇಷ್ಮೆಹುಳು ಸಾಕಣೆಯಲ್ಲಿ ಬಳಸಬಹುದಾದ ಹಾಸಿಗೆ ಸೋಂಕು ನಿವಾರಕಗಳಾವುವು?

ಮಾರುಕಟ್ಟೆಯಲ್ಲಿ ಹಲವು ಹಾಸಿಗೆ ಸೋಂಕು ನಿವಾರಕಗಳು ದೊರೆಯುತ್ತಿದ್ದು ಈ ಕೆಳಗಿನವುಗಳನ್ನು ಉಪಯೋಗಿಸಬಹುದು :

ವಿಜಯ ಪರ್, ವಿಜೇತ, ರೇಷಮ್ ಜ್ಯೋತಿ, ಸುರಕ್ಷ, ಸಂಜೀವಿನ, ಸೆರಿಕಾನ್, ‘ಎ’ ಪುಡಿ ಮತ್ತು ‘ಬಿ’ಪುಡಿ.

) ರೇಷ್ಮೆ ಹುಳುಮನೆ ಮತ್ತು ಸಲಕರಣೆಗಳನ್ನು ಸೋಂಕು ನಿವಾರಣೆ ಮಾಡಲು ಯಾವ ಸೋಂಕುನಿವಾರಕಗಳನ್ನು ಬಳಸಬೇಕು ಹಾಗೂ ಅವುಗಳನ್ನು ಹೇಗೆ ಬಳಸಬೇಕು?

ರೇಷ್ಮೆ ಹುಳುಮನೆ ಮತ್ತು ಸಲಕರಣೆಗಳ ಸೋಂಕುನಿವಾರಣೆಗೆ ಶಿಫಾರಸ್ಸು ಮಾಡಿದ, ಲಭ್ಯವಿರುವ ಸೋಂಕು ನಿವಾರಕಗಳ ವಿವಿರ ಈ ಮುಂದಿನಂತಿರುತ್ತದೆ:

) ಬ್ಲೀಚಿಂಗ್ ಪುಡಿ

ಶೇ.೩೦ರ ಕ್ಲೋರಿನ್ ಇರುವ ಬ್ಲೀಚಿಂಗ್ ಪುಡಿಯನ್ನು ಶೇ.೨ರ ದ್ರಾವಣದಲ್ಲಿ ತಯರಿಸಬೇಕು. ಇದಕ್ಕೆ ೧ಲೀ. ನೀರಿಗೆ ೨೦ಗ್ರಾಂ ಬ್ಲೀಚಿಂಗ್ ಪುಡಿ ಹಾಕಬೇಕು. ಹಾಗೂ ಶೇ.೦.೩ರ ಸುಣ್ಣದ ಪ್ರಮಾಣಕ್ಕೆ ೩ಗ್ರಾಂ ಸುಟ್ಟಸುಣ್ಣವನ್ನು ಅದೇ ಒಂದು ಲೀ. ನೀರಿಗೆ ಸೇರಿಸಿದರೆ ಶೇ. ೨ರ ಬ್ಲೀಚಿಂಗ್ ಮತ್ತು ಶೇ.೦.೩ರ ಸುಣ್ಣದ ದ್ರಾವಣ ದೊರೆಯುತ್ತದೆ. ಇದನ್ನು ರೇಷ್ಮೆ ಹುಳುಮನೆ ಮತ್ತು ಸಲಕರಣೆಗಳ ಸೋಂಕು ನಿವಾರಣೆಗೆ ಬಳಸಬಹುದು.

) ಫಾರ್ಮಲಿನ್

ಮಾರುಕಟ್ಟೆಯಲ್ಲಿ ದೊರೆಯುವ ಶೇ.೩೬ರ ಪ್ರಮಾಣದ ಫಾರ್ಮಲಿ‌‌ನ್‌ನಿಂದ ಶೇ.೨ರ ಪ್ರಮಾಣದ ಫಾರ್ಮಲಿನ್ ತಯಾರಿಸಬೇಕಾದರೆ ಒಂದು ಭಾಗ ಫಾರ್ಮಲಿನ್ ಅನು ೧೮ ಭಾಗ ನೀರಿನ ಜೊತೆ ಮಿಶ್ರಮಾಡಿ, ಇದರ ಜೊತೆಗೆ ಶೇ.೦.೦೫ರ ಸೋಪಿನ ನೀರು ಸೇರಿಸಬೇಕು. ಉದಾಹರಣೆಗೆ: ೭೫ಲೀ. ಫಾರ್ಮಲಿನ್ ದ್ರಾವಣ ತಯಾರಿಸಲು ಮೊದಲು ೭೫ ಅನ್ನು ೧೮ರಿಂದ ಭಾಗಿಸಬೇಕು. ೭೫/೧೮ = ೪.೧೭ಲೀ. ಬರುತ್ತದೆ. ಇದನ್ನು ೭೫ರಲ್ಲಿ ಕಳೆಯಬೇಕು. ೭೫-೪.೧೭ = ೭೦.೫೯ ಬರುತ್ತದೆ. ಅಂದರೆ ೪.೧೭ಲೀ.ಶೇ.೩೬ರ ಫಾರ್ಮಲಿನ್ ಅನ್ನು ೭೦.೫೯ಲೀ. ನೀರಿಗೆ ಮಿಶ್ರಣಗೊಳಿಸಬೇಕು. ಇದರ ಜೊತೆಗೆ ೦.೫ಗ್ರಾಂ ಸೋಪಿನ ಪೌಡರ್ ಸೇರಿಸಬೇಕು.

) ಸ್ಥಿರೀಕರಿಸಿದ ಕ್ಲೋರಿನ್ ಡೈ ಆಕ್ಸೈಡ್

ಮಾರುಕಟ್ಟೆಯಲ್ಲಿ ೨೦,೦೦೦ ಪಿ.ಪಿ.ಎಂ. ಪ್ರಮಾಣದಲ್ಲಿ ದೊರೆಯುತ್ತಿದ್ದು. ೫೦೦ಪಿ.ಪಿ.ಎಂ.ಸ್ಥಿರೀಕರಿಸಿದ ಕ್ಲೋರಿನ್ ಡೈಆಕ್ಸೈಡರ ಮತ್ತು ಶೇ.೦.೫ರ ಸುಣ್ಣದ ದ್ರಾವಣ ತಯಾರಿಸಲು ಈ ಕೆಳಗಿನ ವಿಧಾನ ಅನುಸರಿಸಬೇಕು:

೧) ಒಂದು ಶುದ್ಧವಾದ ಪಾತ್ರೆಯಲ್ಲಿ ೫೦ಗ್ರಾಂ ಕ್ರಿಯಾಕಾರಕ ಹರಳುಗಳನ್ನು (Activator Crystals) ಹಾಕಬೇಕು

೨) ಅದೇ ಪಾತ್ರೆಗೆ ಅರ್ಧ ಲೀ. ಕ್ಲಿನಿಟಾಲ್ ಪ್ಲಸ್ ಹಾಕಬೇಕು.

೩) ೫೦ ಗ್ರಾಂ ಕ್ರಿಯಾಕಾರಕ ಹರಳು ಮತ್ತು ಅರ್ಧ ಲೀ. ಕ್ಲಿನಿಟಾಲ್‌ಪ್ಲಸ್ ಅನ್ನು ಕಡ್ಡಿಯಿಂದ ಕಲಕಬೇಕು.

೪) ಹೀಗೆ ದೊರೆತ ಅರ್ಧ ಲೀ.ದ್ರಾವಣವನ್ನು ೧೯ಲೀ. ನೀರಿಗೆ ಹಾಕಬೇಕು.

೫) ಇನ್ನೊಂದು ಪಾತ್ರೆಯಲ್ಲಿ ಅರ್ಧ ಲೀ. ನೀರಿಗೆ ೧೦೦ಗ್ರಾಂ ಸುಟ್ಟ ಸುಣ್ಣ ಹಾಕಿ, ಸುಣ್ಣದ ತಿಳಿನೀರು ತಯಾರಿಸಬೇಕು.

೬) ಈ ಸುಣ್ಣದ ತಿಳಿಯನ್ನು ಮೊದಲೇ ತಯಾರಿಸಿದ ೧.೫ಲೀ. ದ್ರಾವಣಕ್ಕೆ ಸೇರಿಸಿ ಸೋಂಕು ನಿವಾರಣೆಗೆ ಬಳಸಬೇಕು.

) ಸುಣ್ಣ

ಶೇ.೫ರ ಸುಣ್ಣದ ತಿಳಿನೀರನ್ನು ಸಹ ಒಂದು ಸಾರಿ ಸೋಂಕು ನಿವಾರಣೆಗೆ ಬಳಸಬಹುದು. ಇದನ್ನು ತಯಾರಿಸಲು ೨೦ಲೀ.ನೀರಿಗೆ ೧ಕಿ.ಗ್ರಾಂ ಸುಟ್ಟಸುಣ್ಣವನ್ನು ಮಿಶ್ರಮಾಡಬೇಕು.

೧೦) ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ರೇಷ್ಮೆಹುಳುವಿನ ಸೋಂಕು ನಿವಾರಕಗಳು ಮತ್ತು ಅವುಗಳನ್ನು ಉಪಯೋಗಿಸುವ ಪ್ರಮಾಣ ಮತ್ತು ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿ?

ವಿವಿಧ ರೇಷ್ಮೆ ಹುಳುವಿನ ಹಾಸುಗೆ ಸೋಂಕು ನಿವಾರಕಗಳು ಈ ಮುಂದಿನಂತಿವೆ:

ವಿಜಯ ಪವರೆ, ವಿಜೇತ, ರೇಷಮ್ ಜ್ಯೋತಿ, ಸುರಕ್ಷ, ಸಂಜೀವಿನಿ, ‘ಎ’ಪುಡಿ, ‘ಬಿ’ ಪುಡಿ, ‘ಸಿ’ ಪುಡಿ, ಸೆರಿಕಾನ್, ಈ ಎಲ್ಲಾ ಹಾಸುಗೆ ಸೋಂಕು ನಿವಾರಕಗಳನ್ನು ಪ್ರತಿ ಚದರಡಿಗೆ ೫ಗ್ರಾಂನಂತೆ ಧೂಳೀಕರಿಸಬೇಕು. ನೂರುಮೊಟ್ಟೆ ರೇಷ್ಮೆಹುಳುಗಳಿಗೆ ಪ್ರತಿ ಹಂತದಲ್ಲಿ ಈ ಕೆಳಗೆ ತಿಳಿಸಿದ ಪ್ರಮಾಣದಲ್ಲಿ ಹುಳುಗಳ ಮೇಲೆ ಸಮಾನವಾಗಿ ಧೂಳಿಸಬೇಕು (ಗ್ರಾಂಗಳಲ್ಲಿ).

 

               

ರೇಷ್ಮೆ ಹುಳು ಸಾಕಣೆ

ರೆಂಬೆ ಪದ್ಧತಿ ತಟ್ಟೆ ಪದ್ಧತಿ
ಮೊದಲನೆ ಜ್ವರದಿಂದ ಎದ್ದನಂತರ, ಸೊಪ್ಪುಕೊಡುವ ಮೊದಲು

೫೦

೫೦

ಎರಡನೇ ಜ್ವರದಿಂದ ಎದ್ದನಂತರ, ಸೊಪ್ಪು ಕೊಡುವ ಮೊದಲು

೧೦೦

೧೦೦

ಮೂರನೇ ಜ್ವರದಿಂದ ಎದ್ದನಂತರ, ಸೊಪ್ಪು ಕೊಡುವ ಮೊದಲು

೬೫೦

೫೫೦

ನಾಲ್ಕನೇ ಜ್ವರದಿಂದ ಎದ್ದನಂತರ, ಸೊಪ್ಪು ಕೊಡುವ ಮೊದಲ

೧೨೦೦

೮೦೦

ಕಡೇ ಹಂತದ ನಾಲ್ಕನೇ ದಿನ, ಕಸ ತೆಗೆದನಂತರ

೨೦೦೦

೧೫೦೦

ಒಟ್ಟು

೪೦೦೦

೩೦೦೦

೧೧) ಹುಳುಸಾಕಣೆ ಸಂದರ್ಭದಲ್ಲಿ ರೇಷ್ಮೆಹುಳು ಹಾಸುಗೆ ಮತ್ತು ಮನೆಯ ಶುಚಿತ್ವ ಕಾಪಾಡುವುದು ಹೇಗೆ?

ರೇಷ್ಮೆ ಹುಳು ಹಾಸುಗೆ ಮತ್ತು ಮನೆಯ ಶುಚಿತ್ವ ಕಾಪಾಡಲು ಈ ಮುಂದೆ ತಿಳಿಸುವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು:

 • ಹುಳುಸಾಕಣೆ ಮನೆಯ ಒಳಗೆ ಜನ ಬರುವುದನ್ನು ಮಿತಿಗೊಳಿಸುವುದು
 • ಒಂದೇ ಬಾರಿ ಒಂದಕ್ಕಿಂತ ಹೆಚ್ಚು ಹುಳು ಸಾಕದಿರುವುದು.
 • ಹುಳುಸಾಕಣೆ ಸಲಕರಣೆಗಳನ್ನು ಎರವು ಪಡೆಯದಿರುವುದು.
 • ರೋಗ್ರಸ್ತ ಹುಳುಗಳನ್ನು ಎಲೆಂದರಲ್ಲಿ ನೆಲದ ಮೇಲೆ ಬಿಸಾಡದಿರುವುದು
 • ಸೊಪ್ಪು ಕೊಡುವಾಗ ಹಾಗೂ ಹಾಸುಗೆ ಕಸ ತೆಗೆಯುವಾಗ ಗುಳುಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದು.

) ಕೈಗಳ ಸೋಂಕು ನಿವಾರಣೆ

ಹುಳುಮನೆಯೊಳಗೆ ಹೋಗುವ ಮೊದಲು, ರೋಗಗ್ರಸ್ತ ಹುಳುಗಳನ್ನು ಆಯ್ದನಂತರ, ಹಾಸುಗೆ ಕಸ ತೆಗೆದನಂತರ ಮತ್ತು ಸೊಪ್ಪು ಕೊಡುವ ಮೊದಲು ೫೦೦ಪಿ.ಪಿ.ಎಂ. ಕ್ಲೋರಿನ್‌ಡೈಯಕ್ಸೈಡ್ (ಕ್ಲಿನಿಟಾಲ್‌ಪ್ಲಸ್) ಮತ್ತು ಶೇ.೦.೫ರ ಸುಣ್ಣದ ದ್ರಾವಣಗಳಿಂದ ತಯಾರಿಸಿದ ದ್ರಾವಣದಲ್ಲಿ ಕೈಗಳನ್ನು ಅದ್ದಿ ಶುಚಿಗೊಳಿಸಬೇಕು.

) ಪಾದಗಳ ಸೋಂಕು ನಿವಾರಣೆ

ರೇಷ್ಮೆ ಹುಳು ಸಾಕಣೆ ಮನೆಯ ಒಳಗೆಹೋಗುವ ಮೊದಲು ೫೦೦ಪಿ.ಪಿ.ಎಂ. ಕ್ಲೋರಿನ್‌ಡೈಯಾಕ್ಸೈಡ್‌(ಕ್ಲಿನಿಟಾಲ್‌ಪ್ಲಸ್) ಮತ್ತು ಶೇ.೦.೫ರ ಸುಣ್ಣದ ದ್ರಾವಣ ಅಥವಾ ಶೇ.೨ರ ಬ್ಲೀಚಿಂಗ್ ದ್ರಾವಣದಲ್ಲಿ ಕಾಲು ಅದ್ದಿ ಒಳಗೆ ಹೋಗಬೇಕು.

) ಮೊಟ್ಟೆಗಳ ಹೊರಮೈ ಸೋಂಕು ನಿವಾರಣೆ

ಶೇ.೨ರ ಫಾರ್ಮಲಿನ್ ದ್ರಾವಣ ಅಥವಾ ೫೦೦ಪಿ.ಪಿ.ಎಂ. ಕ್ಲೋರಿನ್‌ಡೈಯಾಕ್ಸೈಡ್(ಕ್ಲಿನಿಟಾಲ್‌ಪ್ಲಸ್) ಮತ್ತು ಶೇ.೦.೫ರ ಸುಣ್ಣದ ದ್ರಾವಣದಲ್ಲಿ ೧೦ ನಿಮಿಷ ಮೊಟ್ಟೆಗಳನ್ನು ಅದ್ದಿ ಮೇಲ್ಮೈ ಸೋಂಕು ನಿವಾರಣೆ ಮಾಡಬೇಕು.

) ಹುಳದ ದೇಹ ಮತ್ತು ಹಾಸಿಗೆ ಸೋಂಕು ನಿವಾರಣೆ

ಹುಳುವು ಜ್ವರಕ್ಕೆ ಕುಳಿತಿರುವಾಗ ಚದರ ಅಡಿಗೆ ೩ರಿಂದ ೫ಗ್ರಾಂನಂತೆ ಸುಣ್ಣದ ಪುಡಿಯನ್ನು ಹುಳದ ಹಾಸುಗೆ ಮೇಲೆ ಧೂಳಿಸಬೇಕು. ಜ್ವರದಿಂದ ಎದ್ದನಂತರ ಶಿಫಾರಸ್ಸು ಮಾಡಿರುವ ಯಾವುದಾದರೂ ಒಂದು ಸೋಂಕುನಿವಾರಕವನ್ನು ಚದರಡಿಗೆ ೫ಗ್ರಾಂನಂತೆ ಹುಳದ ಹಾಸುಗೆ ಮೇಲೆ ಧೂಳಿಸಬೇಕು.

) ರೋಗಗ್ರಸ್ತ ಹುಳುಗಳನ್ನು ಒಟ್ಟುಗೂಡಿಸಿ ನಾಶಮಾಡುವುದು

ಸಣ್ಣಗಾತ್ರದ/ರೋಗಗ್ರಸ್ತ ಹುಳುವೆಂದು ಅನುಮಾನಪಟ್ಟ ಹುಳುಗಳನ್ನು ಚಿಮ್ಮುಟದ ಸಹಾಯದಿಂದ ಹೊರತೆಗೆದು ಶೇ. ೫ರ ಬ್ಲೀಚಿಂಗ್ ದ್ರಾವಣಸ ಅಥವಾ ೫೦೦ಪಿ.ಪಿ.ಎಂ. ಕ್ಲೋರಿನ್‌ಡೈಯಾಕ್ಸೈಡ್(ಉದಾ:ಕ್ಲಿನಿಟಾಲ್‌ಪ್ಲಸ್)+ಶೇ.೦.೫ರ ಸುಟ್ಟ ಸುಣ್ಣದ ದ್ರಾವಣದಲ್ಲಿ ಅದ್ದಿ ಮಣ್ಣಿನಲ್ಲಿ ಮುಚ್ಚಿ ನಾಶಮಾಡಬೇಕು.

) ಹುಳುವಿನ ಹಿಕ್ಕೆ ಮತ್ತು ಸಾಕಣೆಯಲ್ಲಿನ ಕಸಕಡ್ಡಿಗಳನ್ನು ಒಟ್ಟುಗೂಡಿಸಿ ವಿನಿಯೋಗಿಸುವುದು.

 • ನೆಲದ ಮೇಲೆ ಹಾಕಿದ ವಿನೈಲ್ ಹಾಳೆಯ ಮೇಲೆ ಕಸಕಡ್ಡಿಗಳನ್ನು ಶೇಖರಿಸಿ ಗೊಬ್ಬರದ ಗುಂಡಿಗೆ ಸಾಗಿಸಬೇಕು.
 • ಗೊಬ್ಬರದ ಗುಂಡಿಯಲ್ಲಿ ಹಾಕಿದನಂತರ ಶೇ.೫ರ ಬ್ಲೀಚಿಂಗ್ ದ್ರಾವಣ ಸಿಂಪಡಿಸಿ, ಮೇಲೆ ಮಣ್ಣು ಮುಚ್ಚಿ ಗೊಬ್ಬರ ಮಾಡಬೇಕು.
 • ವಿನೈಲ್ ಶೀಟ್ ಪ್ರತಿ ಸಾರಿ ಉಪಯೋಗಿಸಿದನಂತರವೂ ಶೇ.೨ರ ಬ್ಲೀಚಿಂಗ್ ದ್ರಾವಣದಲ್ಲಿ ಅದ್ದಬೇಕು ಅಥವಾ ೫೦ ಪಿ.ಪಿ.ಎಂ. ಕ್ಲೋರಿನ್‌ಡೈಯಾಕ್ಸೈಡ್ (ಉದಾ: ಕ್ಲಿನಿಟಾಲ್‌ಪ್ಲಸ್) + ಮತ್ತು ಶೇ.೦.೫ರ ಸುಣ್ಣದ ದ್ರಾವಣದಲ್ಲಿ ಅದ್ದಬೇಕು.

) ಹುಳು ಸಾಕಣೆ ಮನೆಯ ನೆಲದ ಸೋಂಕು ನಿವಾರಣೆ

ಹುಳುವಿನ ಕಸ ತೆಗೆದನಂತರ ಶೇ.೨ರ ಬ್ಲೀಚಿಂಗ್ ಅಥವಾ ೫೦೦ಪಿ.ಪಿ.ಎಂ. ಕ್ಲೋರಿನ್ ಡೈಯಾಕ್ಸೈಡ್ ಮತ್ತು ಶೇ. ೦.೫ರ ಸುಣ್ಣದ ದ್ರಾವಣದಲ್ಲಿ ನೆಲ ಒರೆಸಬೇಕು.

) ಹುಳುಸಾಕಣೆ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಪಾಲಿಸುವುದು

ಮನೆಯ ಸುತ್ತಮುತ್ತ ಎರಡುಮೂರು ದಿನಗಳಿಗೊಮ್ಮೆ ಅದರಲ್ಲೂ ಮನೆಯ ಒಳಗೆ ಹಾದುಹೋಗುವ ಜಾಗದಲ್ಲಿ ಪ್ರತಿ ಚದರ ಅಡಿಗೆ ೧೮ಗ್ರಾಂನಂತೆ ಶೇ.೫ರ ಬ್ಲೀಚಿಂಗ್ ಪೌಡರ್‌ಅನ್ನು ಧೂಳೀಕರಿಸಬೇಕು.

ತಯಾರಿಸುವ ವಿಧಾನ: ಶೇ.೩೨ರ ೧೫೬ಗ್ರಾಂ ಬ್ಲೀಚಿಂಗ್ ಪೌಡರ್‌ನ್ನು ೮೪೪ಗ್ರಾಂ ಸುಟ್ಟಸುಣ್ಣದ ಪುಡಿಗೆ ಸೇರಿಸಿದರೆ ಶೇ.೫ರ ೧ಕಿ.ಗ್ರಾಂ. ಬ್ಲೀಚಿಂಗ್ ಪೌಡರ್ ದೊರೆಯುತ್ತದೆ.

೧೨) ರೇಷ್ಮೆ ಮೊಟ್ಟೆಗಳ ಸಾಕಣೆಗೆ ಬಳಸಬಹುದಾದ ಸಾಮಾನ್ಯ ಸೋಂಕು ನಿವಾರಕಗಳಾವುವು?

ಇತ್ತೀಚಿನ ಶಿಫಾರಸ್ಸಿನಂತೆ ವಿವಿಧ ಹಂತಗಳಲ್ಲಿ ಕ್ಲೋರಿನ್ ಡೈಯಾಕ್ಸೈಡ್(ಕ್ಲಿನಿಟಾಲ್ ಪ್ಲಸ್), ಬ್ಲೀಚಿಂಗ್ ಪುಡಿ ಮತ್ತು ಫಾರ್ಮಲಿನ್ ಬಳಸಬಹುದಾಗಿದೆ. ೧೫೦ಮೊಟ್ಟೆ ಹುಳುಸಾಕಣೆಗೆ ತಗಲುವ ಅಂದಾಜು ವೆಚ್ಚ ಈ ಮುಂದಿನದಂತಿರುತ್ತದೆ:

ಚಟುವಟಿಕೆ

ಪ್ರಮಾಣ

ಒಟ್ಟು

.ಸೋಂಕು ನಿವಾರಣೆ    
೧. ಶುಚಿಗೊಳಿಸಲು ಶೇ.೫ರ ಬ್ಲೀಚಿಂಗ್ ದ್ರಾವಣ ೨ಲೀ.

ಬ್ಲೀಚಿಂಗ್ ೧೦೦ಗ್ರಾಂ

೨. ರೇಷ್ಮೆ ಹುಳುಮನೆ ಮತ್ತು ಸಲಕರಣೆಗೆ ಮೊದಲ ಸೋಂಕು ನಿವಾರಣೆ – ೫೦೦ ಪಿ.ಪಿ.ಎಂ. ಕ್ಲೋರಿನ್ ಡೈಯಾಕ್ಸೈಡ್ (ಕ್ಲಿನಿಟಾಲ್ ಪ್ಲಸ್) ೭೫ಲೀ.

ಕ್ಲಿನಿಟಾಲ್ ಪ್ಲಸ್ ೧.ಲೀ. ಸುಣ್ಣ-೧.೦೬ಕಿ.ಗ್ರಾಂ

೩. ರೇಷ್ಮೆ ಸಾಕಣೆ ಸಲಕರಣೆಗಳನ್ನು ಅದ್ದಲು ಶೇ.೨ರ ಬ್ಲೀಚಿಂಗ್ ಮತ್ತು ಶೇ.೦.೩ರ ಸುಣ್ಣದ ದ್ರಾವಣ ೩೫೨ಲೀ.

ಬ್ಲೀಚಿಂಗ್ ೭೦೪ಕಿ.ಗ್ರಾಂ ಸುಣ್ಣ-೧.೦೬ಕಿ.ಗ್ರಾಂ

೪. ಎರಡನೆ ಬಾರಿಗೆ ರೇಷ್ಮೆ ಹುಳು ಮನೆ ಮತ್ತು ಸಲಕರಣೆಗಳ ಸೋಂಕು ನಿವಾರಿಸಲು ೫೦೦ಪಿ.ಪಿ.ಎಂ. ಕ್ಲೋರಿನ್ ಡೈಯಾಕ್ಸೈಡ್ (ಕ್ಲಿನಿಟಾಲ್‌ಪ್ಲಸ್) ಮತ್ತು ಶೇ.೦.೫ರ ಸುಣ್ಣದ ದ್ರಾವಣ ೭೫ಲೀ.

ಕ್ಲಿನಿಟಾಲ್ ಪ್ಲಸ್ ೧.೯ಲೀ., ಸುಣ್ಣ-೦.೩೮ಕಿ.ಗ್ರಾಂ

. ೫. ಮೊಟ್ಟೆಯ ಮೇಲ್ಮೈ ಸೋಂಕು ನಿವಾರಣೆ ಶೇ.೨ರ ಫಾರ್ಮಲಿನ್ ೨ಲೀ.

ಫಾರ್ಮಲಿನ್ ೦.೧೧ಲೀ.

೬. ರೇಷ್ಮೆ ಹುಳು ಮನೆ ಒಳಗೆ ಹೋಗುವ ದಾರಿ ಮತ್ತು ಅದರ ಸುತ್ತಮುತ್ತಲಿನ ಜಾಗದಲ್ಲಿ ಶೇ.೫ರ ಬ್ಲೀಚಿಂಗ್ ಪುಡಿ ಅಥವಾ ದ್ರಾವಣವನ್ನು ಧೂಲಿಸುವುದು ಅಥವಾ ಸಿಂಪಡಿಸುವುದು. ೧ಕಿ.ಗ್ರಾಂ.

ಬ್ಲೀಚಿಂಗ್ ೦.೧೬ಕಿ.ಗ್ರಾಂ

 


* ೧ಕಿ.ಗ್ರಾಂ ರೇಷ್ಮೆ ಬಿಚ್ಚಲು ಬೇಕಾಗುವ ಗೂಡಿನ ಪ್ರಮಾಣ (ಕಿ.ಗ್ರಾಂನಲ್ಲಿ)