1)    ಅತ್ಯುತ್ತಮ ಗುಣಮಟ್ಟದ ರೇಷ್ಮೆದಾರವನ್ನು ಕೊಡುವ ರೇಷ್ಮೆ ಹುಳುವಿನ ವೈಜ್ಞಾನಿಕ ಹೆಸರೇನು?

2)   ರೇಷ್ಮೆ ಹುಳದ ಪಾಲನೆಯನ್ನು ‘ಮೋರಿ ಕಲ್ಚರ್ (Mori culture)’ ಎನ್ನುತ್ತಾರೆ. ಒಟ್ಟಾರೆಯಾಗಿ ರೇಷ್ಮೆ ಹುಳದ ಪಾಲನೆ, ಹಿಪ್ಪನೇರಳೆ ಗಿಡಗಳ ಬೇಸಾಯ ಇವೆಲ್ಲ ಸೇರಿದಂತೆ ರೇಷ್ಮೆ ಕೃಷಿಯ ಹೆಸರೇನು?

3)   ಒಂದು ರೇಷ್ಮೆ ಗೂಡಿನಲ್ಲಿ ಒಂದೇ ಎಳೆ ಇರುತ್ತದೆ. ಆದರೆ ಅದರ ಉದ್ದ ಎಷ್ಟು ಎಂದು ಊಹಿಸಬಲ್ಲಿರಾ?

4)   ರೇಷ್ಮೆ ಹುಳುವಿಗೆ ಕಣ್ಣು ಕಾಣದು. ಅಲ್ಲದೆ ಅದಕ್ಕೆ ಹಾರಾಡಲು ಆಗದು. ನಾಲ್ಕರಿಂದ ಆರು ದಿನಗಳಲ್ಲಿ ಅದು ಸುಮಾರು 500 ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳು ಎಷ್ಟು ಸಣ್ಣವೆಂದರೆ ಒಂದು ಗುಂಡು ಪಿನ್ನಿನ ತಲೆಯ ಮೇಲೆ ಕೂಡಬಲ್ಲವು. ಮೊಟ್ಟೆಯ ತೂಕ ಹೆಚ್ಚಿದಾಗ ಎಷ್ಟು ಇರುತ್ತದೆ ಊಹಿಸಿ?

5)   ರೇಷ್ಮೆ ಹುಳುಗಳು ಭಾರೀ ಬಕಾಸುರಗಳು. ಅವು ಯಾವ ಪರಿ ಸೊಪ್ಪನ್ನು ತಿನ್ನುತ್ತವೆ ಎಂಬುದನ್ನು ಹುಟ್ಟಿದ ಒಂದು ತಿಂಗಳಲ್ಲಿ ಅದರ ತೂಕ ಎಷ್ಟು ಹೆಚ್ಚಿತು ಎಂಬುದರ ಮೇಲೆ ತಿಳಿಯಬಹುದು. ಹೀಗೆ ಅದರ ತೂಕ ಎಷ್ಟಿರುತ್ತದೆ, ಊಹಿಸಿ?

6) ಸುಮಾರು ಒಂದು ಕಿಲೋ ಗ್ರಾಂ ರೇಷ್ಮೆ ದಾರವನ್ನು ಪಡೆಯಲು ಎಷ್ಟು ಕಾಡುಗಳಲ್ಲಿ ಅಲೆಯಬೇಕು?

7)   ರೇಷ್ಮೆ ವಸ್ತ್ರವು ವಾತಾವರಣಕ್ಕೆ ಹೊಂದಿಕೊಳ್ಳಬಲ್ಲುದು ಹೀಗೆಂದರೇನು?

8)   ರೇಷ್ಮೆ ಹುಳುವಿಗೂ, ಮನುಷ್ಯನಿಗೂ ಇರುವ ನಿಕಟ ‘ಸಂಬಂಧ’ದ ಪರಿಣಾಮವೇನು.  ಊಹಿಸಬಲ್ಲಿರಾ ?

9)   ರೇಷ್ಮೆ ಹುಳು ಗೂಡುಕಟ್ಟುವಾಗ 8 ಅಂಕಿಯ ಆಕಾರದಲ್ಲಿ ಸತತವಾಗಿ 3 ಲಕ್ಷ ಬಾರಿ ಸುತ್ತುತ್ತದೆ. ಆ ಮೇಲೆ ಈ ಗೂಡಿನಲ್ಲಿ 16 ದಿನಗಳ ವರೆಗೆ ಇದ್ದು, ಅನಂತರ ಅದು ಪತಂಗವಾಗುತ್ತದೆ. ಆಗ ಅದು ಒಂದು ಕ್ಷಾರೀಯ ಪದಾರ್ವನ್ನು ಸ್ರವಿಸುತ್ತದೆ. ಏಕೆ ಹೇಳಬಲ್ಲಿರಾ?

ಉತ್ತರಗಳು

1)   ಬಾಂಬಿಕ್ಸ್ ಮೋರಿ (Bombyx mori)

2)   ಸೆರಿಕಲ್ಚರ್ (Sericulture)

3)   ಸುಮಾರು 900 ಮೀಟರ್‌ಗಳು

4)   ಕೇವಲ 5 ಗ್ರಾಂ

5)   ಒಂದು ತಿಂಗಳಿಗೆ 10 ಸಾವಿರ ಪಟ್ಟು ಹೆಚ್ಚಾಗುತ್ತದೆ.

6)   667 ಕಾಡುಗಳು.

7)   ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪಗೆ ಇರುತ್ತದೆ.

8)   ಮನುಷ್ಯ ಎಲ್ಲ ಜೀವಿಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಾನೆ.  ವಿಚಿತ್ರವೆಂದರೆ ರೇಷ್ಮೆ ಹುಳುಗಳು ಅವನಿಲ್ಲದೆ ಬದುಕಲಾರವು.

9) ಗೂಡಿನಲ್ಲಿ ರಂಧ್ರಕೊರೆದು ಹೊರಬರುವುದಕ್ಕಾಗಿ.