ನೈಸರ್ಗಿಕವಾಗಿ ಬೆಳೆಯುವ ಮರಗಿಡಗಳಿಂದ ದೊರೆಯುವ ಬೀಜಗಳಿಂದ ಬರುವ ಎಣ್ಣೆಯನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಬಹುದಾಗಿದೆ. ನಮ್ಮ ದೇಶದಲ್ಲಿ ೧೦೦ಕ್ಕಿಂತಲೂ ಹೆಚ್ಚು ಮರಗಳಿಂದ ದೊರೆಯುವ ಎಣ್ಣೆ ಬೀಜವನ್ನು ಜೈವಿಕ ಇಂಧನವಾಗಿ ಬಳಸಬಹುದಾಗಿದೆ. ಪ್ರಮುಖವಾಗಿ ಹೊಂಗೆ, ಜಟ್ರೋಫ, ಬೇವು, ಹಿಪ್ಪೆ ಸಿಮರೂಬ ಇನ್ನಿತರ ಸಸ್ಯಗಳನ್ನು ಬೆಳೆದು ಬಯೋಡೀಸಲ್ ಉತ್ಪಾದನೆಗಾಗಿ ಬಳಸಿಕೊಳ್ಳಬಹುದಾಗಿದೆ.

ಕಬ್ಬಿನಿಂದ ಸಕ್ಕರೆ ತಯಾರಿಸಿದ ನಂತರದಲ್ಲಿ ಉಳಿಯುವ ಕಾಕಂಬಿ (Molaces) ನಿಂದ, ಕೃಷಿ ತ್ಯಾಜ್ಯ ವಸ್ತುಗಳಿಂದ, ಗೋವಿನ ಜೋಳ ಮತ್ತು ಇತರೆ ನಾರಿನಂಶ ಜಾಸ್ತಿ ಇರುವ ವಸ್ತುಗಳಿಂದ ಎಥೆನಾಲ್ ತಯಾರಿಸಬಹುದಾಗಿದೆ. ಅಲ್ಲದೇ ಮಳೆಯಾಧಾರಿತ ಕೃಷಿ ಕ್ಷೇತ್ರಗಳಲ್ಲಿ ಹರಳು, ಪುಂಡಿಯಂತಹ ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಎಣ್ಣೆ ಕಾಳುಗಳನ್ನು ಸಹ ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಬಹುದು.

ಜೈವಿಕ ಇಂಧನ ಉತ್ಪಾದನೆಗಾಗಿ ಬೇಕಾಗಿರುವ ಕಚ್ಚಾ ವಸ್ತುಗಳಿಗೆ ಕೃಷಿಯೇ ಮೂಲವಾಗಿದೆ. ಆದ್ದರಿಂದ ರೈತರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ರೈತರು ತಮ್ಮ ಜಮೀನಿನ ಬದುಗಳಲ್ಲಿ, ಹಿತ್ತಲು, ಬಂಜರು ಭೂಮಿಗಳಲ್ಲಿ ಈ ಮರಗಳನ್ನು ಬೆಳೆಸಬಹುದಾಗಿದೆ. ಇದರಿಂದ ಬೆಳೆಗಳಿಗೆ ಬೇಕಾದ ನೆರಳು ದೊರೆಯುವುದು, ಹಸಿರೆಲೆ ಗೊಬ್ಬರ ಜೊತೆಗೆ ಎಣ್ಣೆ ತೆಗೆದು ಬರುವ ಹಿಂಡಿಯನ್ನು ತಮ್ಮ ಭೂಮಿಗೆ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ, ನೈಸರ್ಗಿಕ ಸಮತೋಲನವನ್ನೂ ಕಾಪಾಡಬಹುದು. ಇದರಿಂದ ರೈತರು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ. ರೈತರು ತಮ್ಮ ಬಿಡುವಿನ ವೇಳೆಯಲ್ಲಿ ಎಣ್ಣೆ ತೆಗೆದು ಮಾರುವುದರಿಂದಲೂ ಹೆಚ್ಚುವರಿ ಆದಾಯಗಳಿಸಬಹುದು, ಜೊತೆಗೆ ಉದ್ಯೋಗವೂ ದೊರೆತಂತಾಗುವುದು.  ಸಣ್ಣ, ಅತಿಸಣ್ಣ ರೈತರು ತಮ್ಮ ಹೊಲದ ಬದುಗಳ ಮೇಲೆ, ಬೇಲಿಯ ಸುತ್ತ ಮತ್ತು ಮನೆಯ ಹಿತ್ತಲಿನಲ್ಲಿ ಕೆಲವು ಗಿಡಗಳನ್ನು ಬೆಳೆಯಬಹುದು.  ದೊಡ್ಡ ರೈತರು ತಮ್ಮ ಜಮೀನಿನ ಬಂಜರು, ಕೊರಕಲು, ವ್ಯವಸಾಯ ಮಾಡದೇ ಇರುವ ಜಾಗದಲ್ಲಿ ಜೈವಿಕ ಇಂಧನ ಮರಗಳನ್ನು ಮಿಶ್ರತೋಪನ್ನಾಗಿ ಬೆಳೆಯಬಹುದು.

ಇಂತಹ ಕಾರ್ಯಯೋಜನೆಯಿಂದ ಪ್ರತಿ ರೈತ ತಿಂಗಳಿಗೆ ರೂ. ೨೦೦ ರಿಂದ ರೂ. ೨೦೦೦ ದಷ್ಟು ಹೆಚ್ಚುವರಿ ಆದಾಯವನ್ನು ಗಳಿಸಬಹುದಾಗಿದೆ. ಈ ಕಾರ್ಯಕ್ರಮದಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ೧೫ ರಿಂದ ೩೦ ದಿನಗಳ ಉದ್ಯೋಗವನ್ನು ದೊರಕಿಸಬಹುದು.

ಕೃಷಿ ಅಭಿವೃದ್ಧಿಗಾಗಿ ರೈತರಿಗೆ ಅಗತ್ಯವಿರುವ ಪ್ರಮುಖವಾದ ವಸ್ತುಗಳಲ್ಲಿ ಗೊಬ್ಬರವೂ ಒಂದಾಗಿದೆಪ್ರಸ್ತುತ ಅಧಿಕ ರಾಸಾಯನಿಕ ಬಳಕೆಯಿಂದ ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತಿದ್ದು ಅಧಿಕ ಕ್ಷಾರತೆ ಹೊಂದುತ್ತಿದೆಇದೇ ರೀತಿ ಮುಂದಿವರಿದಿದ್ದಲ್ಲಿ ಮುಂಬರುವ ದಿನಗಳಲ್ಲಿ  ಮಣ್ಣಿನ ಗುಣಮಟ್ಟ ಸಂಪೂರ್ಣ ಹಾಳಾಗಿ ಮುಂದೊಂದು ದಿನ ಕೃಷಿಗೆ ಯೋಗ್ಯವಾಗಿರದೆ ಬಂಜರು ಭೂಮಿಯಾಗುವ ದಿನ ಎದುರಿಸಬೇಕಾಗುತ್ತದೆಆದುದರಿಂದ ರೈತ ಸಾವಯವ ಕೃಷಿ ಕಡೆ ಹೆಚ್ಚಿನ ಒಲವು ತೋರಿಸಬೇಕಾಗಿದೆಜೈವಿಕ ಇಂಧನ ಕೃಷಿಯಲ್ಲಿ ತೊಡಗುವ ರೈತರುಗಳಿಗೆ ಮುಖ್ಯವಾಗಿ ಕೃಷಿಗೆ ಅಗತ್ಯವಿರುವ ಸಾವಯವ ಗೊಬ್ಬರ ಲಭಿಸಿದಂತಾಗುತ್ತದೆರಾಸಾಯನಿಕ ಗೊಬ್ಬರಕ್ಕಾಗಿ ಸಾಲ ಮಾಡಿ ಗೊಬ್ಬರ ಖರೀದಿಸದೆ ಹಾಗೂ ಅದರ ಮೇಲೆ ಅವಲಂಭಿಸದೆ ಜೈವಿಕ ಇಂಧನ ಕೃಷಿಯೊಂದಿಗೆ ಸಾವಯವ ಗೊಬ್ಬರವೂ ಪುಕ್ಕಟೆಯಾಗಿ ಪಡೆಯಬಹುದಾಗಿದೆ.   ಪ್ರತಿ ಕೆ.ಜಿ. ಎಣ್ಣೆ ಉತ್ಪಾದಿಸುವುದರೊಂದಿಗೆ ರೈತನಿಗೆ ಕೆ.ಜಿ. ಹಿಂಡಿ ಸಾವಯವ ಗೊಬ್ಬರವಾಗಿ ಪಡೆಯುತ್ತಾನೆಇದರಿಂದ ರಾಸಾಯನಿಕ ಗೊಬ್ಬರಕ್ಕಾಗಿ ಖರ್ಚು ಮಾಡಬೇಕಿರುವ ಹಣ ಉಳಿತಾಯ ಮಾಡುವುದರೊಂದಿಗೆ ತಲೆತಲಾಂತರದಿಂದ ಪಡೆದ ಭೂಮಿಯ ಮಣ್ಣಿನ ಸಾರಾಂಶವನ್ನು ಸಹ ಸಾವಯವ ಗೊಬ್ಬರದಿಂದ ಪಡೆದಂತಾಗುತ್ತದೆ.

ಜೈವಿಕ ಇಂಧನ ಯೋಜನೆಯ ಅನುಷ್ಟಾನದಿಂದಾಗುವ ಲಾಭಗಳು

೧. ಎಣ್ಣೆಬೀಜಗಳ ಮಾರಾಟದಿಂದ ರೈತರಿಗೆ ನೇರ ಆರ್ಥಿಕ ಲಾಭ

೨. ಗೃಹ-ಪ್ರಮಾಣದ ಎಣ್ಣೆ-ಉತ್ಪಾದನಾ ಘಟಕದ ಬಳಕೆಯಿಂದ ರೈತರಿಗೆ ಹೆಚ್ಚುವರಿ ಆದಾಯ – ಮಾರಾಟಕ್ಕೆ ಯೋಗ್ಯವಾದ ಗುಣಮಟ್ಟದ ಎಣ್ಣೆ ಹಾಗೂ ಹಿಂಡಿಯ ಬಳಕೆಯಿಂದ ಮಣ್ಣಿನ ಫಲವತ್ತತೆಯಲ್ಲಿ ಹೆಚ್ಚಳ

೩. ಗ್ರಾಮೀಣ ಮಟ್ಟದಲ್ಲಿ ಜನರಿಗೆ ಉದ್ಯೋಗಾವಕಾಶಗಳ ನಿರ್ಮಾಣ

೪. ಗ್ರಾಮೀಣ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದು

೫. ಅರಣ್ಯ ವಿಸ್ತೀರ್ಣದ ಹೆಚ್ಚಳದಿಂದ ಸುಸ್ಥಿರ ಪರಿಸರದ ನಿರ್ಮಾಣವಾಗುವುದು

೬. ಹಳ್ಳಿಗಳಲ್ಲಿ ಜೈವಿಕ ಇಂಧನವನ್ನು ತಮ್ಮ ಟ್ರಾಕ್ಟರ್, ನೀರೆತ್ತುವ ಪಂಪುಗಳು, ಜನರೇಟರ್‌ಗಳಲ್ಲಿ ಬಳಸಬಹುದು.

೭. ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಗಣನೀಯವಾದ ಪಾತ್ರ ವಹಿಸುವುದು

೮. ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಹಾಗೂ ವಾತಾವರಣದ ತಾಪಮಾನದಲ್ಲಿ ಇಳಿಮುಖ

೯. ಪೆಟ್ರೋಲಿಯಂ ಇಂಧನದ ಬಳಕೆಯಲ್ಲಿ ಉಳಿತಾಯ ಮತ್ತು ಆಮದು ಮಾಡಿಕೊಳ್ಳಲು ತಗಲುವ ವಿದೇಶಿ ವಿನಿಮಯದಲ್ಲಿ ಗಮನಾರ್ಹ ಉಳಿತಾಯ