Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಲಕ್ಷ್ಮಣ್ ತೆಲಗಾವಿ

ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಲಕ್ಷ್ಮಣ ತೆಲಗಾವಿ ಸಂಶೋಧನಾ ವಿಭಾಗದಲ್ಲಿ ಮಾಡಿರುವ ಸಾಧನೆ ಅನನ್ಯ. ಚಿತ್ರದುರ್ಗದವರಾದ ಲಕ್ಷ್ಮಣ ತೆಲಗಾವಿ ಚಿತ್ರದುರ್ಗದ ಅಮೂಲಾಗ್ರ ಸಂಶೋಧನೆ ನಡೆಸಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.
ತೆಲಗಾವಿಯವರು ಕರ್ನಾಟಕದ ಚಾರಿತ್ರಿಕ ಪುಟಗಳನ್ನು ಸಮರ್ಥ ಸಂಶೋಧನೆ ಹಾಗೂ ಉತ್ಪನನದ ಮೂಲಕ ಕಟ್ಟಿಕೊಟ್ಟಿದ್ದು, ಅವು ಅತ್ಯಂತ ಶ್ರೇಷ್ಠ ಆಕರಗಳಾಗಿವೆ. ಸಂಶೋಧನೆ ಹಾಗೂ ಸಾಹಿತ್ಯವನ್ನು ಬೆಸುಗೆ ಮಾಡಿರುವ ಲಕ್ಷ್ಮಣ ತೆಲಗಾವಿಯವರು ಕರ್ನಾಟಕ ಇತಿಹಾಸಕ್ಕೆ ಕೊಟ್ಟಿರುವ ಕೊಡುಗೆ ಅತ್ಯಂತ ಗಮನಾರ್ಹ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಹು ಉಪಯೋಗಿ ಸಂಶೋಧನಾ ವಿಭಾಗವನ್ನು ರೂಪಿಸಿರುವ ಲಕ್ಷ್ಮಣ ತೆಲಗಾವಿ ಅವರು ಸಾಹಿತ್ಯ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಅಕರಗಳನ್ನು ಮತ್ತು ಮಾರ್ಗದರ್ಶನ ನೀಡುವವರಲ್ಲಿ ಪ್ರಮುಖರೆನಿಸಿದ್ದಾರೆ.