“ಬಣ್ಣ ಸಾಕಿದರ ಬೆಲೆ ಹೇಳೋ :
ದೆಡಿಗೆ ಸಾವರವಂದ ಮೊಳಕೆ ಸಾವರವಂದಾ
ಅದಕೇಳೂ ಸಾವರದಾ ಹಣವಂದಾ
ಅದಕೇಳ ಸಾವರದಾ ಹಣವಂಬದ್ನು ಇಸರರು
ಅದಕಲ್ಲೇ ಹಣವಾ ಸಲಸಾರೆ | ಇಸರರು
ಅದಕಲ್ಲೆ ಹಣವಾ ಸಲಸಾರೆ | ಇಸರರು
ಪಟ್ಟಿದಟ್ಟಿಯಲ್ಲೇ ಬಿಗಿದಾರೆ | ಇಸರರು

ಅಂಗ್ಡ ತೆಣಿಗಿಂದು ಕೆಳಗೆ ಇಳದಾರೆ | ಇಸರರು
ಚಿನವರನರಮನಗೇ ನೆಡದಾರೆ | ಇಸರರು
ಹೋಗಿ ಬಾಗಲ್ಲೇ ನಿಲೋವಾರೆ | ಇಸರರು
ಆಗೊಂದು ಮಾತಾ ನುಡಿದಾರೆ
“ಇಂದ್ರ ಲೋಕ್ದ ಸೊನಗಾರಾ ಇಂದೇ ಗದ್ದಗಿಹೂಡೋ
ತೋಳ್ಬಳಿ ಮಣಿ ಸರ‍್ನಾ ಗೆಯಿಕೋಡೋ
ಇಂದ್ರಲೋಕ್ದ ಸೊನಗಾರಾ ಇಂದೇ ಗದ್ದಗಿ ಹೂಡೋ
ಕಟ್ಟಾಣಿ ಮಣಿಸರ‍್ನೆ ಗೆಯಿಕೋಡೋ”

ಇಂದ್ರ ಲೋಕ್ದ ಸೊನಗಾರಾ ಇಂದೇ ಗದ್ದಗಿ ಹೂಡೆ
ತೋಳ್ಬಳಿ ಮಣಿ ಸರ‍್ನಾ ಗೆಯಿದಾನೆ| ಚಿನವರಾ
ಕಟ್ಟಾಣಿ ಮಣಿಸರ‍್ನಾ ಗೆಯಿದಾನೆ | ಚಿನವರಾ
ಇಸರರ ಬಲಗಯ್ಲಿ ಕೊಡೊವಾನೆ
ಇಸರರ ಬಲಗಯ್ಲಿ ಕೊಡುವುದ್ನು ಇಸರರು

ಎಯ್ಡು ಕಯ್ಯೊಡ್ಡೇ ತಡದಾರೆ | ಇಸರರು
ಚಿನ್ನದಟ್ಟಿಯಲ್ಲೇ ಬಿಗಿದಾರೆ | ಇಸರರು
ಅದಕಲ್ಲೇ ಹಣವಾ ಸಲಿಸಾರೆ| ಇಸರರು
ಅಂಗ್ಡಿ ತೆಣೆಗಿಂದು ಕೆಳಗೆ ಇಳದಾರೆ | ಇಸರರು
ತಮ್ಮ ಅರಮನಗೇ ಬರೋವಾರೆ | ಇಸರರು
ಬಂದೀ ರಾಜಂಗ್ಳ ನೆಗದತ್ತೇ | ಇಸರರು
ಮಾಳೂಗಿ ಒಳಗೆ ನೆಡದಾರೆ | ಇಸರರು
ಹಡಪವ ಇತ್ತೇ ಇಳೂಗಾರೆ | ಇಸರರು
ತೂಗು ಮಂಚಲ್ಲೆ ಕುಳೋವಾರೆ

ಮಾವನ ಮಗಳು ಲಗ್ಗನಾಗುತಂಕೆ
ಊಟದ ಗೊಡವೆ ತನಗಿಲ್ಲ | ಅಂದೇಳೆ
ಮಾಳೂಗಿ ಒಳಗೆ ನೆಡದಾನೆ | ಲಕಮಣ
ಅಟ್ಟತ್ತಿ ಪೆಟ್ಟಿಗೆಯ ತೆಗದಾನೆ | ಲಕಮಣ
ಮೆಟ್ಟ ಬೀಗವ ಕರದಾನೆ | ಲಕಮಣ
ಮುಚ್ಚೀಲ ತಗದೇ ಕಡಗಿಟ್ಟೇ

ಮೂರು ಬೊಕ್ಸ ಹಣವಾ ಮೊಗದಾನೆ| ಲಕಮಣ
ಹಚ್ಚಡ ಸರಗಿಲಿ ಬಿಗಿದಾನೆ | ಲಕಮಣ್ಣ
ಪೆಟ್ಟೂಗಿ ಬಾಯಲ್ಲಿ ಮುಡುಗಾನೆ | ಲಕಮಣ್ಣ
ಮಾಳಗ್ಗಿಂದೆರಗೆ ಬರುವಾನೆ | ಲಕಮಣ್ಣ

ರಾಜಂಗ್ಳ ಮೆಟ್ಟ ಇಳೀದಾನೆ | ಲಕಮಣ್ಣ
ರಾಜಬೀದಿಗಾಗೇ ನೆಡದಾನೆ | ಲಕಮಣ್ಣ
ಜೋನಗರ ಮನಗೇ ನೆಡದಾನೆ | ಲಕಮಣ್ಣ
ಹೋಗಿ ಬಾಗಲ್ಲೇ ನಿಲೋವಾನೆ | ಲಕಮಣ್ಣ
“ಜೋನಗನೆ” ಅಂದೇ ಕರದಾನೆ
ಇಂದೂ ಕರದಂವಲ್ಲ ಬಂದನೇ ಜೋನಿಗ
ನಿಂದನೇ ಲಕಮಣ್ನ ಒಡನಲ್ಲೇ | ಲ್| ನಿಂತೀಗಂಡಿ

“ಏನು ಕಾರಣಲೆ ಕರದಿಯೋ”
“ಕರದಂ ಕಾರ್ಯವಿಲ್ಲ ಕಿರಿದಂಬೆಸರವಿಲ್ಲ
ಅಂಗೀಯ ಹೊಲಬಲ್ಯೋ ಜೋಳುಗಿ ಹೊಲಬಲ್ಯೋ
ಹೆಣ ಮಕ್ಕಳಿಗೆ ರವಕೀಯ  | ಹೊಲಬಲ್ಯೋ
ನನಗೊಂದ್ ಜೋಳಗಿಯ ಹೊಲಕೊಡ್ಯೋ”

“ಅಂಗೀಯ ಹೊಲಬಲ್ಲೆ ಜೋಳುಗಿ ಹೊಲ್ಬಲ್ಲೆ
ಹೆಣ್ಣ ಮಕ್ಕಳಿಗೆ ರವಕೀಯ| ಹೊಲಬಲ್ಲೆ
ನಿಂಗೊಂದ್ ಜೋಳಗಿಯ ಹೊಲಬಲ್ಲೆ | ಅಂದೇಳಿ
ಉಕ್ಕೀನ ಚೂರಿ ನುಗಲುಂಡಿ| ತಡಕಂಡಿ
ಅಂವ್ಗೊಂದ್ ಜೋಳಗಿಯ ಹೊಲದಾನೆ | ಜೋಣಗ

ಲಕಮಣನ ಬಲಗಯ್ಲಿ ಕೊಡೋವಾನೆ
ಲಕಮಣನ ಬಲಗಯ್ಲಿ ಕೊಡುವದ್ನು  ಲಕಮಣ
ಅದಕಲ್ಲೇ ಹಣವಾ ಸಲೀಸಾನೆ | ಲಕಮಣ್ಣ
ಗುಡುಗಾರ ಮನಗೇ ನೆಡದಾನೆ | ಲಕಮಣ್ಣ
ಹೋಗಿ ಬಾಗಲ್ಲೆ ನಿಲೋವಾನೆ | ಲಕಮಣ್ಣ

ಲಾಗೊಂದಾ ಮಾತಾ ನುಡಿದಾನೆ
ಆಗೊಂದು ಮಾತಾ ಏನಂದಿ ನುಡದಾನೆ
“ಮುತ್ತಿನ ಬಾಸಿಂಗ  ಗೆಯಿಕೋಡೋ”| ಗುಡಗಾರಣ್ಣ
ಮುತ್ತಿನ ತೊಂಡಲ ಗೆಯಿಕೋಡೋ ಗುಡಗಾರಣ್ಣ
ಅಟ್ಟಂಬು ಮಾತಾ ಕೇಳಾನೆ ಗುಡಗಾರಾ

ಮುತ್ತಿನ ಬಾಸಿಂಗ ಗೆಯಿದಾನೆ| ಗುಡಗಾರಾ
ಮುತ್ತಿನ ತೊಂಡಲ ಗೆಯಿದಾನೆ | ಗುಡಗಾರಾ
ಲಕಮಣ್ಣನ ಬಲಗಯ್ಲಿ ಕೊಡೊವಾನೆ
ಲಕಮಣನ ಬಲಗಯ್ಲಿ ಕೊಡುವದ್ನು ಲಕಮಣ್ಣ
ಎಯ್ಡು ಕಯ್ಯೊಡ್ಡೆ ತಡದಾನೆ| ಲಕಮಣ್ಣ

ಅದಕಲ್ಲೇ ಹಣವಾ ಸಲಸಾನೆ | ಲಕಮಣ್ಣ
ತೊಂಡಲ ಜೋಳಗಲಿ ಮಡಗಾನೆ | ಲಕಮಣ್ಣ
ನಾಗಾಲೋಕಕೆ ನೆಡದಾನೆ | ಲಕಮಣ್ಣ
ಅಂಗ್ಡೀ ತೆಣಿಮೆನೆ ಕುಳತಾನೆ | ಲಕಮಣ್ಣ
“ಅಂಗ್ಡಿ ಸೆಟ್ಟಿ” ಅಂದೇ ದೆನಿದೂರೇ
ಇಂದೂ ಕರದಂವಲ್ಲ ಬಂದನೆ ಅಂಗ್ಡಿ ಸೆಟ್ಟಿ
ನಿಂದನೇ ಲಕಮಣ್ನ ಒಡನಲ್ಲ| ನಿಂದಿ ಕಂಡಿ
“ಏನು ಕಾರಣಲೆ ಕರದಿಯೋ | ನಿಂದಿ ಕಂಡಿ
ಕರದಂ ಕಾರಣವಿಲ್ಲ ಕಿರಿದೆಂಬೆಸರಸಯ್ಯ
ನಾಗಾ ಪಟ್ಟಿ ನೋಡೇ ತೆಗತಾರೋ”
ಅಟ್ಟಂಬ ಮಾತಾ ಕೇಳಾನೆ ನಾಗಾ ಸೆಟ್ಟಿ
ಮಾಳೂಗಿ ಒಳಗೆ ನೆಡದಾನೆ | ನಾಗಾ ಸೆಟ್ಟಿ
ಜವಳಿಯ ದಿಂಡ ಬಿಡಸಾನೆ | ನಾಗಾ ಸೆಟ್ಟಿ
ನಾಗಾಪಟ್ಟಿ ನೋಡೇ ತೆಗೆದಾನೆ |ನಾಗಾ ಸೆಟ್ಟಿ
ಮಾಳಗ್ಗಿಂದೆರಗೇ ಬರೋವಾನೆ | ನಾಗಾ ಸೆಟ್ಟಿ
ಲಕಮಣ್ನ ಬಲಗಯ್ಲಿ ಕೊಡೋವಾನೆ
ಅಚಗಯ್ನ ಸೆರ‍್ಗಾ ಇಚಮಗ್ಚಿ ನೋಡಾನೆ
“ಬಣ್ಣ ಸಾಕಿದರಾ ಬೆಲೆ ಹೇಳೋ”

“ದೆಡಿಗೆ ಸಾವರವಂದಾ ಮೊಳಕೆ ಸಾವರವಂದಾ
ಅದಕೇಳು ಸಾವರದಾ ಹಣವಂದಾ ಸಾವರವಂದಾ
ಅದಕೇಳು ಸಾವರದಾ ಹಣವಂಬದ್ನು ಲಕ್ಮಣ
ಅದಕಲ್ಲೆ ಹಣವ ಸಲಸಾನೆ | ಲಕ್ಮಣ
ಜೋಳಗಲಿ  ಪಟ್ಟೆ ಮಡಗಾನೆ | ಲಕ್ಮಣ
ತೆಣೆಗಿಂದು ಕೆಳಗೆ ಇಳದಾನೆ | ಲಕ್ಮಣ
ಚಿನವರನರಮನಗೇ ನೆಡದಾನೆ | ಲಕ್ಮಣ
ಹೋಗಿ ಬಾಗಲ್ಲೆ ನಿಲೋವಾನೆ | ಲಕ್ಮಣ
ಆಗೊಂದು ಮಾತಾ ನುಡದಾನೆ

“ನಾಗಾಲೋಕ್ದ ಸೊನಗಾರಾ ಇಂದೇ ಗದ್ದಗಿ ಹೂಡೋ
ತೋಳ್ಬಳಿ ಮಣಿ ಸರ‍್ನಾ ಗೆಯಿಕೊಡೋ
ನಾಗಾಲೋಕ್ದ ಸೊನಗಾರಾ ಇಂದೇ ಗದ್ದಗಿ ಹೂಡೋ
ತೋಳ್ಬಳಿ ಮಣಿ ಸರ‍್ನಾ ಗೆಯಿಕೊಡೋ ”

ನಾಗಾಲೋಕ್ದ ಸೊನಗಾರಾ ಇಂದೇ ಗದ್ದಗಿ ಹೂಡೇ
ತೊಳ್ಬಳಿ ಮಣಿಸರ‍್ನಾ ಗೆಯಿದಾನೆ | ಚಿನವರಾ
ಕಟ್ಟಾಣಿ ಮಣಿಸರ‍್ನಾ ಗೆಯಿದಾನೆ | ಚಿನವರಾ
ಲಕ್ಮಣ್ನಾ ಬಲಗಯ್ಲಿ ಕೊಡೋವಾನೇ | ಚಿನವರಾ
ಲಕ್ಮಣ್ನಾ ಬಲಗುಯ್ಲೀ ಕೊಡುವುದ್ನು ಲಕಮಣ್ಣಾ

ಎಯ್ಡೂ ಕಯ್ಯೊಡ್ಡೆ ತಡದಾನೆ | ಲಕಮಣ್ಣಾ
ಜೋಳಗಲಿ ಅದ್ರಾ ಮಡಗಾನೆ | ಲಕಮಣ್ಣಾ
ಅದಕಲ್ಲೆ ಹಣವಾ ಸಲಸಾನೆ | ಲಕಮಣ್ಣಾ    
ತೆಣೆಗಿಂದು ಕೆಳಗೆ ಇಳದಾನೆ | ಲಕಮಣ್ಣಾ
ತನ್ನಲರ ಮನಗೇ ಬರೊವಾನೆ | ಲಕಮಣ್ಣಾ
ಬಂದಿ ರಾಜಂಗ್ಳಾ ನೆಗದತ್ತೇ | ಲಕಮಣ್ಣಾ
ಮಳೂಗಿ ಒಳಗೇ ನೆಡದಾನೆ | ಲಕಮಣ್ಣಾ
ತೂಗು ಮಂಚಲ್ಲೆ ಕುಳತಾನೆ | ಲಕಮಣ್ಣಾ

ಪಟ್ಟೀಯ ತಗದಿ ಕೊಡೋವಾನೆ
ತಾಯಿ ಸೆರಗ್ ತಡ್ದೀ ನಾರಿಯೋರ್ ನೆರಿಯಾ ಹೊಯ್ದಿ
ಪಟ್ಟೀ ಜೋಳಗಲೆ ಮಡಗಾರೆ
ಪಟ್ಟೀ ಜೋಳಗಲೆ ಮಡಗ್ವದ್ನು ಲಕಮಣ್ಣಾ
ಜೋಳಗೀಯ ಎತ್ತೇ ಹೋಗಲೀಗೆ| ಹಾಯಿಕಂಡೇ
ದೆವರ ಬುಡಕೋಗೆ ನಿಲೋವಾನೆ | ಲಕ್ಮಣ್ಣಾ
ದೆವರಿಗೆ ಕಯ್ಯಾ ಮುಗೋವಾನೆ

ಲಕ್ಮಣನಂಬೆಸ್ರೂ ಇಲ್ಲಿಂದಿತ್ತಾಗಿರ‍್ಲೆ
ಜೋಗಿ ಅಂಬೆಸ್ರು ನಡೀಯಾಲೆ | ಲ| ಂದೇಳಿ
ರಾಜಂಗ್ಳ ಮೆಟ್ಟ ಇಳೀದಾನೆ | ಜೋಗಿಯೋ
ರಾಜಬೀದಿಗಾಗೆ ನೆಡದಾನೆ | ಜೋಗಿಯೋ
ನಾರಿಯರ ಕೇರಿಗಾಗೆ ನೆಡದಾನೆ
ಆಗೊಂದು ಮಾತಾ ನುಡೀದಾನೆ

“ಮೆನ್ನಕೇರಿ ಅಕ್ ದಿರ್ಯಾ ಕೆಳಗ್ನ ತಂಗ್ ದೀರ್ಯಾ
ಮದ್ವಿಮನಿಗೋಪಾ ಬರೂವಿರೇ”
“ಗಂಡ್ನ ಕೆಳ್ಗ್ನ ಹೆಂಡರು ಅತ್ತೀ ಕೆಳಗ್ನ ಸೋಸ್ದಿರು
ಜೋಗಿ ಬೆನ್ನತ್ತಿ ಬರೋದಿಲ್ಲ” | ಅಂಬುದ್ನು
ಪನ್ನೀ ಮರಿಯಲ್ಲಿ ಮುಗುಳುನೆಗ್ಗೆ | ಆಡೀತಾ

ಇಸರರ ಮನಗೇ ನೆಡದಾನೆ | ಜೋಗಿಯೇ
ಹೋಗಿ ಬಾಗಲ್ಲೇ ನಿಲೋವಾನೆ | ಜೋಗಿಯೇ
ಅಂಗಳದಲ್ಲೇ ಕುಳೋವಾನೆ
ಅಂಗಳದಲ್ಲೆ ಕುಳುವುದನು ಇಸರರು
ಮಾಳೂಗಿ ಒಳಗೆ ನೆಡದಾರೆ | ಇಸರರು
ಮುತ್ತಿನ ಚಪ್ಪರಾ ಇಡೋವಾರೋ
ಮುತ್ತಿನ ಚಪ್ಪರ ಇಡುವುದನ್ನು ಜೋಗಿಯು
ಆಗೊಂದು ಮಾತಾ ನುಡೀದಾನೆ

ಹುಟ್‌ದಲ್ ಅಣತಮ್ ದಿರಿಲ್ವೋ ಕೊಟ್ಟಲ್ ಅಳೀದಿರ್ ಇಲ್ವೋ
ನೀವೊಬ್ಬರ್ ಚಪ್ಪರವ ಇಡೋವಾರಿ | ಅಂದೇಳಿ
ತಾಬಂದು ಸೆರಗಾ ತಡದಾನೆ
ಮುತ್ತಿನಾ ಚಪ್ಪರಾ  ಮುನ್ನೂರು ಗಾವುದ್ದಾ
ಮುತ್ತೀನಾ ಸರಜಲ್ಲಿ ಬಿಡಸಾರೆ | ತನ್ನಾಲೋ
ಮುದ್ದೀನಾ ಮಗಳಾ  ಮೊದವೀಗೆ
ಹಗಳದ ಚಪ್ಪರ ಹನ್ನೆಯ್ಡು ಗಾವುದ್ದಾ
ಹಗ್ಳದ ಸರಜಲ್ಲಿ ಬಿಡಸಾರೆ | ತನ್ನಾಲೋ

ಮುದ್ದೀನಾ ಮಗಳಾ ಮೊದವೀಗೆ | ಇಸರರಾ
ಚಪ್ಪರ‍ದ ಕೆಲ್ಸಾ ಮುಗೀದಾವೇ
ಚಪ್ಪರ‍ದ ಕೆಲ್ಸಾ ಮುಗುವದ್ನು ಇಸ್ರರ ಮನ್ಗೆ
ಆಚಾರಿ ಬಂದಿ ನೆರದಾನೆ | ಇಸ್ರರ ಮನ್ಗೆ
ಬಾಗಲ ತೋರಣವಾ ಇಡೋವಾನೆ | ಇಸ್ರರ ಮನ್ಗೆ
ಬಿನ್ನಾಣಿ ಬಂದಿ ನೆರದಾನೆ
ಬಿನ್ನಾಣಿ ಬಂದಿ ನೆರವದ್ನು ಇಸ್ರರು

ಹೊನ್ನಾ ಮಣಿಯೊಂದಾ ಮಡಗಾರೆ
ಹೊನ್ನಾ ಮಣಿಯೊಂದಾ ಮಡಗ್ವದ್ನು ಬಿನ್ನಾಣಿ
ಹೊನ್ನಾ ಮಣಿಮೆನೇ ಕುಳತಾನೆ
ಹೊನ್ನಾ ಮಣಿ ಮೇನೇ ಕುಳುವುದ್ನು ಇಸ್ರರ ಮನಗೆ
ಕುಂಬರ ಬಂದೇ ನೆರದಾನೆ
ಕುಂಬಾ ಕುಂಬಾ ಗೆಯ್ದೇ ಕುಂಬಗೆ ಮುಚ್ಚಳ ಗೆಯ್ದೇ
ತಂದಿರಸನಿಯೇ ದೊಡ್ಡಾ ಜಗಲ್ಯಲ್ಲೇ | ಇಸರ ಮನಗೆ

ಹಸಗನು ಬಂದೇ ನೆರದಾನಿಯೇ | ಇಸರರ ಮನಗೆ
ಮುತ್ತಿನ ಮೇಲ್ಗಟ್ಟಾ ಇಡೋವಾನೆ | ಇಸರರ ಮನಗೆ
ನಾರಿಯೋರು ಬಂದೇ ನೆರದಾರಿಯೇ | ಇಸರರ ಮನಗೆ
ನಿಸ್ತ್ರೀಯೋರು ಬಂದೆ ನೆರದಾರೆ  | ಇಸರರ ಮನಿಯಾ

ಮೂಡನ ಸಗರವಾ ತೊಳದಾರೆ | ನಾರಿಯೋರು
ಮೂಡನ ಸಗರವಾ ಬರದಾರೆ
ಮೂಡನ ಸಗರವಾ ಬರುವದ್ನು ಇಸರರ ಮಡದಿ
ಅಂಕನ ಸೇಡಿಯಾ ಬರದಾಳೆ
ಅಂಕನ ಸೇಡಿಯಾ ಬರುವದನು ಇಸರರು
ಮಂಟಪೋಡ್ವದಕೆ ನೆಡದಾರೆ

ಮಂಟಪೊಡ್ವದಕೆ ನೆಂಟರಿಗೆ ಬರವೇಳಿ
ಎಂಟು ಚವ್ಕದಲೆ ಮನೆ ಮಾಡೇ | ಮಂಟಪ ಹೂಡೇ
ನೆಡ್ಗೇ ತಿದ್ದರಿಯೇ ಕಳಸಾವೇ | ಇಸರರ ಮಡದಿ
ಮಾಳೂಗೀ ಒಳಗೆ ನೆಡದಾಳೆ | ಇಸರರ ಮಡದಿ
ಎಣ್ಣೀಯ ಗಿಂಡೀ ಬಲಗಯ್ಲಿ | ತಡಕಂಡಿ

ಹೊನ್ನಾ ಮಣೆಯೊಂದಾ ತಡದಾಳೆ | ಇಸರರ ಮಡದಿ
ಅಕ್ಸತಿ ಬಟ್ಟಲವಾ ತಡೋದಾಳೆ | ಇಸರರ ಮಡದಿ
ಮಾಳಗ್ಗಿಂದೆರಗೇ ಬರೋವಾಳೆ | ಇಸರರ ಮಡದಿ
ಮಂಟದಲ್ಲೇ ಮಡೋಗಾಳೆ | ಇಸರರ ಮಡದಿ
ಹೊನ್ನಾ ಮಣೆಯೊಂದಾ ಮಡೋಗಾಳೆ
ಹೊನ್ನಾ ಮಣೆಯೊಂದಾ ಮಡಗ್ವದನ್ನು ಮಾದೇವಿ

ಮಣೆಯ ಮೆನೋಗೇ ಕುಳತಾಳೆ
ಮಣೆಯ ಮೆನೋಗೆ ಕುಳುವುದ್ನು ಮಾದೇವಿ ತಾಯಿ
ಮಾದೇವಿಗೆ ಸೆಸೀ ಇಡೋವಾಳೆ
ಮಾದೇವಿಗೆ ಸೆಸೀ ಇಡುವುದ್ನು ಜೋಗಿಯು
ತಾನೆಯ್ಡು ಸೆಸೀ ತಳಕಂಡಿ| ನಾರಿಯೋರು
ಆಗೊಂದು ಮಾತಾ ನುಡದಾರೆ

“ನಮ್ಮಾ  ಮಾದೇವಿಯ ಮೂರುತಕ್ಕೆ ತಂದಾ ಸೆಸೀ
ನೀ ಎಂತಕೆ ಜೋಗಿ ತಳಕಂಡ್ಯೋ ”
ಸೆಸೀಯ ಕಾಣದೆ ಹನ್ನೆಯ್ಡು ವರಸಾದೋ
ಕಂಡಲ್ಲೆಯ್ಡು ಸೆಸೀ ತಳಕಂಡ್ನೇ | ಅಂಬುದ್ನು
(ಮಾದೇವಿ ತಾಯಿ) ಮಾದೇವಿಗೆ ಚಿಗರಾ ಉಗರಾಡೇ
ಮಾದೇವಿಗೆ ಚಿಗರಾ ಉಗರಾಡಿ |ನಾರಿಯೋರು
ಆಗೊಂದು ಮಾತಾ ನುಡದಾರೆ

“ನಮ್ಮ ಮಾದೇವಿಯ ಮೂರುತಕೆ ತಂದಾಚಿಗರಾ
ನೀ ಎಂತಕೆ ಜೋಗಿ ಉಗರಾಡದ್ಯೋ”
ಚಿಗ್ರಾ ಕಾಣದೆ ಹನ್ನೆಯ್ಡು ವರಸಾದೊ
ಕಂಡಲ್ಲಿಟ್ಟು ಚಿಗ್ರಾ ತಳಕಂಡೆ | ಅಂಬುದ್ನು ಬಿನ್ನಾಣಿ
ತಾ ಮುಂದೆ ಬಂದೇ ಕುಳತಾನೆ| ಬಿನ್ನಾಣಿ
ಮಾದೇವಿ ಸಿರ‍್ಪನ್ನಿ ಗೆಯಿದಾನೆ.
ಮಾದೇವಿ ಸಿರ‍್ಪನ್ನಿ ಗೆಯೀಕಂಡೇ | ನಾರಿಯೋರು
ಆಗೊಂದು ಮಾತಾ ನುಡೀದಾರೆ.

“ನಮ್ಮ ಮಾದೇವಿ ಮೂರುತಕ್ಕೆ ತಂದಾ ಬಿನ್ನಾಣಿ
ನೀ ಎಂತಕೆ ಪನ್ನೀ ಗೆಯೀಕಂಡ್ಯೋ”
“ಪನ್ನೀ ಕಾಣದ ಹನ್ನೆಯ್ಡು ವರಸಾದೋ
ಕಂಡಲ್ಲಿಟ್ಟು ಪನ್ನೀ ಗೇಯಿಕಂಡನೆ| ಅಂಬುದನು
ಪನ್ನೀಯ ಕೆಲಸಾ ಮುಗೀದಾವೇ
ಆಯ್ದು ಮಂದ್ ಬಾವ್ ದಿರು ಆಯ್ದು ಬಂದಿಯನ್ನಿಟ್ಟೇ
ಜೋಡಲಿ ಕೊಡಪನವಾ ತಡದರಿಯೇ| ಬಾವಾದಿರು
ರನ್ನದೊಂದೀಳ್ಯ ತಡದಾರಿಯೇ | ಬಾವಾದಿರು
ಮೂಡನೆಗ್ಗೆರಿಗೇ ನೆದರಿಯೆ | ಬಾವಾದಿರು
ಹಗ್ಗೆರೆ ತಡಿಯಲ್ಲಿ ನಿಲೂವಾರೇ

“ಒಂದು ಸಿಂಗಾರುಸಿ ಒಂದು ಈಳ್ಯದ ಪಟ್ಟಿ
ಒಪ್ಪಿತೇ ಗಂಗಾತಾಯೆ ನಿನ್ನಾ ಚಾಜಾ| ಗಂಗಾತಾಯೆ
ತುಂಬಿಕೊಡೆ ಚಂಬೂ ಕೊಡಪಾನಾ | ವಾನಾವಿನ್ನು
ತುಂಬುವೋ ಕೀಲು ಕಳಸಾಕೆ | ಮಿಕ್ಕಿದನೀರಾ
ಹಾಲಿಸಸಿಗೊಯ್ದೆ ಸಲಗೂವೋ”.
ಹಾಲಿಯಾ ಸಸಿಬಂದೋ ಇಲಿಯಾ ಮಣೆ ಬಂದೋ
ಅಂದಾ ಚಂದದಲೆ ಮಣೆಬಂದೊ | ಮಾದೇವಿ

ಎಳ್ಯಾ ಮೂರುತವೇ ಒದಗೇಬಂದೋ | ಮಾದೇವಿತಾಯಿ
ತಾಳೀ ಬಂದೀಯ ತಡಕಂಡೇ
ಸುತ್ತಣದೆವರಿಗೂ ಸರಣಂದೇ | ಮಾದೇವಿತಾಯಿ
ಬಂದೇ ಕಳ್ಸ್ ನೀರಿಗೆ ಅರಗಾಳೆ
ಬಂದೇ ಕಳ್ಸ ನೀರಿಗೆ ಅರಗ್ವದ್ನು ಜೋಗಿಯು
ತಾನಿಟ್ಟು ಕಳ್ಸ ನೀರಾ ತಳಕಂಡೇ| ತಾಯಿಯು
“ನಮ್ಮ ಮಾದೇವಿ ಮೂರ್ತಕ ಕಳ್ಸನೀರಾ
ಜೋಗಿ ನೀ ಎಂತಕೆ ತಳಕಂಡ್ಯೋ ”

“ಕಳ್ಸ್ ನೀರಾ ಕಾಣದೇ ಹನ್ನೆಯ್ಡು ವರಸಾದೋ
ಕಂಡಲ್ ನಿಟ್ ಕಳ್ಸ್ ನೀರಾ ತಳಕಂಡ್ನೆ |ಅಂಬುದ್ನು ನಾರಿಯೋರು
ಮಾದೇವಿಯ ಕರಕಂಡೇ ನೆಡದಾರೆ | ನಾರಿಯೋರು
ಮಾದೇವಿಗೆ ನೀರಾ ಎರದಾರೆ
ಮದೇವಿಗೆ ನೀರ ಎರ‍್ವದ್ನು ಜೋಗಿಯು
ತಾನಿಟ್ಟು ನೀರ ಎರಡಕಂಡೆ | ನಾರಿಯೋರು
ನಮ್ಮ ಮಾದೇವಿಯ ಮೂರತದಾ ನೀರಾ
ನೀ ಎಂತಕೆ ಜೋಗಿ ಎರಡಕಂಡೋ ” | ಅಂಬುದ್ನು

“ಮೂರ್ತ ನೀರ ಕಾಣದೇ ಹನ್ನೆಯ್ಡು ವರಸಾದೋ
ಕಂಡಲ್ ಇಟ್ ಮೂರ್ತ ನೀರ ಎರಕಂಡ್ನೇ”
ಬಳ್ ಮಿಂದ ಮಾದೇವಿಗೆ ಬಂದವೇ ಜವ್ಳೀದಿಂಡು
ಮೂಡಣರಜಿಣರಾ ಜವಳಿಯೋ
ಮೂಡರ ಜಿಣರಾಜವಳಿ ದಿಂಡಿನ ಮೆನೇ

ಪಾದಾ ಚಳಿ ಉದ್ದೇ ಮಡಗಿರಸೇ| ನಾರಿಯೋರು
ಪಟ್ಟೀ ನೆರಿ ಹೊಯ್ದೇ ಉಡಸರಿಯೇ | ನಾರಿಯೋರು
ಮಾದೇವಿ ಸಿರ್ಮುಡಿಯಾ ಸೆಳ್ದ ಕಟ್ಟೇ | ನಾರಿಯೋರು
ಎಳಿಯಾ ಸಿಂಗರವಾ ಮುಡಿಸರಿಯೇ | ನಾರಿಯೋರು
ನುಸುಲಿಗೆ ಸಿರಿಗಂದಾ ಇಡೋವಾರೆ | ನಾರಿಯೋರು
ಮಾದೇವಿ ಕರಕಂಡೇ ಬರೋವಾರೆ | ಮಾದೇವಿ
ಬಂದೀ ಬಾಗಲ್ಲೇ ನಿಲೋವಾಳೆ

ಆರಂಕಣ ಅರಮನೆ ಮೂರಂಕಣ ಮುಚ್ಚೀಲಾ
ಹನ್ನೆಯ್ಡುಂಕಣದಾ ಅರಮನೆ ಒಳಗಿದ್ದೆ
ತಾಯವ್ವಾರತೀಯಾ ತರೋವಾಳೆ
ತಾಯವ್ವಾರತಿಯಾ ತರುವದ್ನು ಮಾದೇವಿ
ಆರತಿಗೊಮ್ಮೆ ಸರಣಂದೇ| ಮಾದೇವಿ
ಮಾಳೂಗಿ ಒಳಗೆ ನಡೆದಾಳೆ | ಮಾದೇವಿ
ದೆವರ ಬುಡಕೋಗೇ ನಿಲೋವಾಳೇ

“ಒಳಗಿದ್ದಪ್ಪಯ್ಯ ಒಳಗೇನೆ ಮಾಡೂತೀ
ಹೆಣ್ಣು ಈಳ್ಯವ ತೆಗತಾರೋ | ನಿನ್ನಾಲುಮಗಳು
ದೇವರ ಸವ್ಯಕೆ ಬರೂತದೆ.
ಒಳಗಿದ್ದಪ್ಪಯ್ಯ ಒಳಗೇನ  ಮಾಡೂತೀ
ಕಾಯಾ ಕತ್ತೀಯ ತೆಗೆತಾರೋ | ನಿನ್ನಾಲುಮಗಳು
ದೇವರ ಸೆಯಕೆ ಬರೂತದೆ. ” ಅಂಬುದ್ನು ಇಸ್ರರು

ತೇದಿ ಗಂದವಾ  ಇಡವಾರೇ | ಇಸರರು
ಹಣ್ಣು ಈಳ್ಯವಾ ಹೊರುಗಾರೆ | ಇಸರರು
ದೀಪ ದೂಪೆಲ್ಲಾ ಕಸೀದಾರೆ | ಇಸರರು
ತೆಂಗಿನೆಳಗಾಯಾ ಒಡೆದಾರೆ | ಇಸರರು
ಕಪರದಾರತೀಯೂ ಬೆಳಗಾರೆ | ಇಸರರು
ಕಪರದಾರತಿಯೂ ಬೆಳಗ್ವದ್ನು ಮಾದೇವಿ
ದೆವರಿಗೆ ಕಯ್ಯಾ ಮುಗುದಾಳೆ
ದೇವರಿಗೆ ಕಯ್ಯಾ ಮುಗುವುದ್ನು ಜೋಗಿಯು
ದೆವರಿಗೆ ಕಯ್ಯಾ ಮುಗುದಾನೆ.

ದೇವರಿಗೆ ಕಯ್ಯಾಮುಗುವದ್ನು ಇಸ್ರರು
ಮಾದೇವಿಗೆ ಪರ್ಸದಾ ಕೊಡೋವಾರೆ.
ಮಾದೇವಿಗೆ ಪರ್ಸದಾ ಕೊಡುವದ್ನು ಮಾದೇವಿ
ಮಾಳೂಗಿ ಒಳಗೆ ನೆಡದಾಳೆ | ಮಾದೇವಿ
ಹಸಗರದಲ್ಲೇ ಕುಳತಾಳೆ
ಹಸಗರದಲ್ಲೇ ಕುಳುವುದ್ನು ಕವ್ಲರದಿಬ್ಣಾ
ಬಾಳಿಬನದಲ್ಲೇ ಬರೋವಾದೆ | ಕವ್ಲರದಿಬ್ಣಾ

ಬಂದೀ ಬಾಗಲ್ಲೆ ನಿಲೋವಾದೆ
ಬಂದೀ ಬಾಗಲ್ಲೇ ನಿಲುವದ್ನು ಇಸ್ರರು
ಓಡಾಡೇ ನೀರಾ ಹೊರುವರು
ಓಡಾಡೇ ನೀರಾ ಹೊರುವುದ್ನು ಜೋಗಿಯು
ಆಗೊಂದು ಮಾತಾ ನುಡಿದಾನೇ
“ಹುಟದಲ್ ಅಣತಮ್ ದಿರಿಲ್ವೋ ಕೊಟ್ಟಲ್ ಳಿಯಾದಿರಿಲ್ವೋ