ಈ ಪುಸ್ತಕದಲ್ಲಿಯ ಚಿತ್ರಾವಳಿಗಳಲ್ಲಿನ ಛಾಯಾಚಿತ್ರಗಳು ಡಾ. ಮ.ಶ್ರೀ. ಮಾಟೆ (ಕ್ರ.೯), ಪ್ರೊ. ಬಾಲಕೃಷ್ಣ ದಾಭಾಡೆ (ಕ್ರ.೮), ಡಾ. ಗುಂಢರ ಸೋಂಟ್ ಹಾಯಮರ (ಕ್ರ.೨೦), ಶ್ರೀ ಪ್ರಭಾಕರ ಕುಲಕರ್ಣಿ (ಕ್ರಮ.೨೩), ಡಾ. ಅಶೋಕ ಕಾಮತ್‌ (ಕ್ರ.೧೮) ಮತ್ತು ಡಾ. ಶಾಂ.ಬಾ. ದೇವ, ಪುರಾತತ್ವ ಇಲಾಖೆಯ ಮುಖ್ಯಸ್ಥರು, ಡೆಕ್ಕನ್ ಕಾಲೇಜು, ಪುಣೆ – ೬ (ಪ್ರಾಯಃ ಇತರೆಲ್ಲವೂ) ಇವರ ಸೌಜನ್ಯದಿಂದ ಉಪಲದ್ಧವಾಗಿರುವುವು.

೦೧. ಪ್ರಸವಾವಸ್ಥೆಯ ಮಾತೃದೇವತೆ – ಕಾಷ್ಠಶಿಲ್ಪ
(ದಕ್ಷಿಣ ಭಾರತ: ೧೮ನೆಯ ಶತಮಾನ)

೦೨. ಉತ್ಖನನದಲ್ಲಿ ದೊರೆತ ಯೋನಿಮೂರ್ತಿ: ನಾಲ್ಕು ಕಡೆಗಳಲ್ಲೂ ಕಮಲದ ಹೂವು.
(ತೇರ, ಜಿಲ್ಲೆ – ಉಸ್ಮಾನಾಬಾದ್, ಮಹಾರಾಷ್ಟ್ರ)

೦೩. ಉತ್ಖನನದಲ್ಲಿ ದೊರೆತ ಯೋನಿಮೂರ್ತಿ: ಶಿಲಾಶಿಲ್ಪ
(ನೇವಾಸೆ, ತಾಲೂಕ್‌ – ನೇವಾಸೆ, ಜಿಲ್ಲೆ – ಅಹಮದ್‌ ನಗರ, ಮಹಾರಾಷ್ಟ್ರ)

೦೪. ಸ್ತೂಪಶೀರ್ಷಾ ಯೋನಿಮೂರ್ತಿ: ಮೃತ್ತಿಕಾ ಶಿಲ್ಪ – ಕಮಲ ಚಿಹ್ನಾಂಕಿತ
(ನಾಗಾರ್ಜುನಕೊಂಡ, ಜಿಲ್ಲೆ – ಗುಂಟೂರು, ಆಂಧ್ರಪ್ರದೇಶ)

೦೫. ಮಹಾಕೋಟೇಶ್ವರ – ಮಂದಿರದಲ್ಲಿನ ಕಮಲಶೀರ್ಷಾ ಲಜ್ಜಾಗೌರಿ: ಭಗ್ನ ಶಿಲಾಶಿಲ್ಪ
(ಮಹಾಕೂಟ, ಬಾದಾಮಿ, ಜಿಲ್ಲೆ – ಬಾಗಲಕೋಟೆ, ಕರ್ನಾಟಕ)

೦೬. ಸಿದ್ದನಕೋಟೆಯ ಗುಹೆಯಲ್ಲಿನ ಲಜ್ಜಾಗೌರಿ ಮೂರ್ತಿಯ ರೇಖಾಚಿತ್ರ.
(ಕೇಲೂರು, ಉತ್ತರ ಕರ್ನಾಟಕ)

೦೭. ಡಾ. ಜಿ.ಎ.ಪಿ. ಹಂಟರ್‌ ಅವರಿಗೆ ದೊರೆತಿರುವ ಭೂದೇವಿಯ ಮೂರ್ತಿ.
(ಮಾಹೂರಝರಿ, ತಾಲೂಕ್ ಮತ್ತು ಜಿಲ್ಲೆ – ನಾಗಪುರ, ಮಹಾರಾಷ್ಟ್ರ)

೦೮. ಶೀರ್ಷಸ್ಥಾನದಲ್ಲಿ ಚಕ್ರಾಕಾರದ ಉಂಗುರವಿರುವ ಯೋನಿಸ್ತನ ಮೂರ್ತಿ.
(ಮಾಹೂರಝರಿ, ತಾಲೂಕ್‌ ಮತ್ತು ಜಿಲ್ಲೆ – ನಾಗಪುರ, ಮಹಾರಾಷ್ಟ್ರ)

೦೯. ಆಲಂಕೃತ ಯೋನಿಮೂರ್ತಿ: ಶಿಲಾಶಿಲ್ಪ
(ನಾಗಾರ್ಜುನಕೊಂಡ, ಜಿಲ್ಲೆ – ಗುಂಟೂರು, ಆಂಧ್ರಪ್ರದೇಶ)

೧೦. ಮತ್ತು ೧೧. ಕಮಲಶೀರ್ಷಾ ಯೋನಿಮೂರ್ತಿ: ಶಿಲಾಶಿಲ್ಪ ಅಧೋ ಭಾಗ ಮತ್ತು ಊರ್ಧ್ವ ಭಾಗವನ್ನು ದರ್ಶಿಸುವ ೨ ಛಾಯಾಚಿತ್ರಗಳು.
(ಆಲಂಪುರ, ಜಿಲ್ಲೆ – ಮೆಹಬೂಬ್‌ ನಗರ, ಆಂಧ್ರಪ್ರದೇಶ)

೧೨. ಯೋನಿಸ್ತನ ಮೂರ್ತಿ: ಮೃತ್ತಿಕಾ ಶಿಲ್ಪ.
(ತೇರ, ಜಿಲ್ಲೆ – ಉಸ್ಮಾನಾಬಾದ್, ಮಹಾರಾಷ್ಟ್ರ)

೧೩. ಪಕ್ಕದಲ್ಲಿ ನಂದಿ ಇರುವ ಯೋನಿಮೂರ್ತಿ: ಶಿಲಾಶಿಲ್ಪ
(ಜಯರಾಮಸ್ವಾಮಿಯ ವಡಗಾಂವ, ಜಿಲ್ಲೆ – ಸಾತಾರಾ, ಮಹಾರಾಷ್ಟ್ರ)

೧೪. ಇಬ್ಬರು ಪರಿಚರರು ಸಹಿತ ಇರುವ ಶಿರೋಯುಕ್ತ ನಗ್ನದೇವಿ.
(ರಾಮೇಶ್ವರ ಗುಹೆ: ಕ್ರ.೨೧, ವೇರುಳ, ಜಿಲ್ಲೆ – ಔರಂಗಾಬಾದ್, ಮಹಾರಾಷ್ಟ್ರ)

೧೫. ಕಮಲಶೀರ್ಷಾ ಯೋನಿಸ್ತನ ಮೂರ್ತಿ: ಮೃತ್ತಿಕಾ ಶಿಲ್ಪ.
(ಭೀಟಾ, ಉತ್ತರಪ್ರದೇಶ: ಸದ್ಯೆ ಇಂಡಿಯನ್ ಮ್ಯೂಸಿಯಂ, ಕೋಲ್ಕತ್ತ)

೧೬. ಕಮಲಶೀರ್ಷಾ ಯೋನಿಸ್ತನ ಮೂರ್ತಿ.
(ಝಾಂಸಿ, ಉತ್ತರ ಪ್ರದೇಶ: ಸದ್ಯೆ ಅಲಹಾಬಾದ್ ಮ್ಯೂಸಿಯಂ)

೧೭. ಶಿರೋಯುಕ್ತ ಪದ್ಮಹಸ್ತಾ ನಗ್ನದೇವಿ.
(ಉತ್ತರ – ಪೂರ್ವ ಭಾರತ)

೧೮. ಸಾಂತೇರಿ – ಮಂದಿರದೊಳಗಣ ಹುತ್ತಿನ – ರೂಪದಲ್ಲಿರುವ ಸಾಂತೇರಿ.
(ವೇಗುರ್ಲೆ, ಜಿಲ್ಲೆ – ರತ್ನಾಗಿರಿ, ಮಹಾರಾಷ್ಟ್ರ)

೧೯. ಶಿಲಾಛತ್ರಸಹ ಶಂಕ್ವಾಕಾರ ಯೋನಿಶಿಲಾ: ಅರ್ಥಾತ್ ಯೋನಿದ್ವಾರ ಸಹಿತ
ಗರ್ಭಗೃಹ (ಕೇರಳ).

೨೦. ಹುತ್ತಿನ – ರೂಪದಲ್ಲಿರುವ ಆದಿ ಮೈಲಾರ.
(ಕರ‍್ಹಾ ನದಿಯ ದಡ, ಜೇಜೂರಿ, ತಾಲೂಕ್ – ಪುರಂದರ, ಜಿಲ್ಲೆ – ಪುಣೆ, ಮಹಾರಾಷ್ಟ್ರ)

೨೧. ಯೋನಿಪೂಜಾ – ದೃಶ್ಯ: ಶಿಲಾಶಿಲ್ಪ.
(ಅರವತ್ನಾಲ್ಕು – ಯೋಗಿನಿಯರ – ಮಂದಿರ, ಭೇಡಾಘಾಟ್, ಮಧ್ಯಪ್ರದೇಶ)

೨೨. ಕಮಲಶೀರ್ಷಾ ಯೋನಿಸ್ತರ ಮೂರ್ತಿ.
(ಸ್ಟೇಟ್ ಮ್ಯೂಸಿಯಂ, ಧುಬೇಲಾ, ನೌಗಾಂಗ್, ಬುಂದೇಲಖಂಡ, ವಿಂಧ್ಯಪ್ರದೇಶ)

೨೩. ಎರಡು ಯೋನಿಪ್ರವಿಷ್ಟ ನಾಗಸಹಿತವಿರುವ ನಗ್ನದೇವಿ.
(ಪೇಡಗಾಂವದಲ್ಲಿಯ ಭೈರವ ಮಂದಿರದಲ್ಲಿನ ಸ್ತಂಭ, ತಾಲೂಕ್‌ – ಶ್ರೀಗೋಂದೆ, ಜಿಲ್ಲೆ – ಅಹಮದ್‌ ನಗರ, ಮಹಾರಾಷ್ಟ್ರ).