ಪದ್ಯದಲ್ಲಿರುವ ಒಳಪ್ರಾಸ ಅಂತ್ಯಪ್ರಾಸಗಳು ಕವಿತೆಯ ಅರ್ಥಕ್ಕೆ ಪೋಷಕ ವಾಗುತ್ತವೆ. ಮತ್ತೆ ಪ್ರತಿಸಾಲಿನ (ಒಂದು, ಎರಡು ಮತ್ತು ಮೂರು) ಎರಡನೆಯ ಗಣ ಮೂರು ಮಾತ್ರೆಗಳಾಗಿದ್ದು, ದೀರ್ಘಕರಣದಿಂದ ನಾಲ್ಕು ಮಾತ್ರೆಗಳಾಗುವ ಸಾಧ್ಯತೆಯನ್ನು ಒಳಗೊಳ್ಳುತ್ತವೆ – ಅದಕ್ಕಿಂತ ಮಿಗಿಲಾಗಿ ಮೂರು ಮಾತ್ರೆಯ ಗಣವೇ ಆಗಿ ಯತಿಸ್ಥಾನವಾಗಿಯೂ ಅರ್ಥಪೂರ್ಣವಾಗುತ್ತದೆ.

ಮೊದಲ ಸಾಲಿನಲ್ಲಿ ಮೊದಲ ಎರಡು ಗಣ (ನಾಲ್ಕು ಮಾತ್ರೆಗಳ ಗಣ) ಗಳಾದ ಮೇಲೆ ಮತ್ತೆ ನಾಲ್ಕು ಮಾತ್ರೆಯ (ಋತುಗಳು = ⋃⋃⋃⋃) ಗಣ, ಅನಂತರ ರಾಜ (– ⋃) ಎಂಬ ಮೂರು ಮಾತ್ರೆಯ ಗಣ ಬಂದು ವಸಂತ ಬಂದ ಎಂಬ ಲಯದಂತೆಯೇ ಇದೆ ಋತುಗಳ ರಾಜ ಎಂಬ ಭಾಗ. ಮುಂದಿನದು ಐದು ಮಾತ್ರೆಗಳ ( ತಾ = –; ಬಂದ = – ⋃) ಗಣವಾಗಿ ನಾಲ್ಕು ಮಾತ್ರೆಗಳು ಮತ್ತೆ ಮೇಲೊಂದು ಗುರುವಾಗುತ್ತದೆ. ಮೊದಲಿನ ಸಾಲಿನಲ್ಲಿ ಈ ವಿನ್ಯಾಸ ಎರಡು ಮತ್ತು ಮೂರನೆ ಸಾಲುಗಳ ವಿನ್ಯಾಸಕ್ಕಿಂತ ಭಿನ್ನವಾದರೂ ನಾಲ್ಕನೆ ಸಾಲಿನ ಲಯ ಮೊದಲ ಸಾಲಿನ ಲಯವನ್ನು ನಿಯಂತ್ರಿಸುತ್ತದೆ.

ಛಂದಸ್ಸು ಎಂದರೆ ಮಾತ್ರೆಗಳ ಗುಣಾಕಾರ ಅಲ್ಲ: ಗುರು ಲಘುಗಳ ಚೆಲ್ಲಾಟ ಅಲ್ಲ – ಅರ್ಥವನ್ನು ಪುಷ್ಟಿಗೊಳಿಸುವ ಓಟ, ಇದನ್ನೇ ‘ಲಯ’ ಎಂದು ಕರೆಯುವುದು. ಇಂಥ ಅರ್ಥಪೂರ್ಣ ಲಯವೇ ಒಂದು ಅರ್ಥಪೂರ್ಣ ಘಟಕವಾಗಿಬಿಡುತ್ತದೆ. ಈ ನಾಲ್ಕು ಮಾತ್ರೆಗಳ ಗಣವಿನ್ಯಾಸದಿಂದ ಪ್ರಾಪ್ತವಾಗುವ ಲಯವನ್ನು ಮಂದಾನಿಲ ಲಯವೆಂದೂ ಕರೆಯುವುದುಂಟು. ಇಲ್ಲಿನ ಕೆಲವು ವಿನ್ಯಾಸಗಳು-

.
೮+ಗು
.
 
. ೪+ಗು
  ೪+ಗು
. ೪+೪
೪೪+ಗುರು
. ೪+೪+೪+೪
  ೪+ಗು
. ೪+೪+೪+೪
೪+ಗುರು
. ೪+೪+೪+೪
  ೪+೪+ಗು
. ೪+೪+೪+೪
೪+೪+೪+ಗು
. ೪+೪
೪+ಗುರು
೪+ಗು
೪+ಗುರು

ಈ ವಿನ್ಯಾಸಗಳೇ ಅಲ್ಲದೆ ಈ ನಾಲ್ಕು ಗಣಗಳ ವಿನ್ಯಾಸವನ್ನು ನಾಲ್ಕು ಮಾತ್ರೆಗಳ ಮಂದಾನಿಲ ಲಯದಲ್ಲಿ ಮೊದಲ ಸಾಲಿನ ನಾಲ್ಕು ಗಣಗಳಲ್ಲಿ ಸಾಧ್ಯವಾಗುವ ಕೆಲವು ವಿನ್ಯಾಸಗಳು ಆ ಲಯದ ಸತ್ವದ ಸಾಧ್ಯತೆಗಳಿಗೆ ಮಾದರಿ. ೪, ೪, ೪, ೪ ಆಗುವ ಕವಿ ಇದನ್ನು ಭಿನ್ನ ಭಿನ್ನ ಮಾತ್ರೆಗಳ ಗಣಗಳ ಸಂಯೋಜನೆಗಳಲ್ಲಿ ತರುವುದು ವೈವಿಧ್ಯಕ್ಕಾಗಿ.

ಇದನ್ನು ತೀ. ನಂ. ಶ್ರೀ. ಯವರು ಹೇಳಿದ್ದು ಹೀಗೆ.”…. ಲಯದಲ್ಲಿ ಒಂದು ಬಳುಕನ್ನು ತರುವುದಕ್ಕಾಗಿ ಒಂದು ಜಾತಿಯ ಗಣಗಳ ಸ್ಥಾನದಲ್ಲಿ ಅದೇ ಮಾತ್ರಾ ಪರಿಮಿತಿಯ ಇನ್ನೊಂದು ಜಾತಿಯ ಗಣಗಳನ್ನು ಇರುಸುವುದಕ್ಕೆ ‘ಗಣಪರಿವೃತ್ತಿ’ ಯೆಂಬ ಹೆಸರನ್ನು ಕೊಟ್ಟಿದೆ.”

ಈಗ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿಂದ ಸಾಲಿನಲ್ಲಿ ಹೀಗೆ ‘ಬಳುಕನ್ನು’ ತರಲು ಯತ್ನಿಸಿದ ಕೆಲವು ರೀತಿಗಳನ್ನು ಗಮನಿಸಬಹುದು.

)        ಇದೊ                ನಲ್ವಾತಿನ          ನಲುಮೆಯ         ನನೆಗಳು
⋃⋃                  – – ⋃⋃                        ⋃ ⋃ ⋃ ⋃         ⋃⋃⋃⋃
೨ ಮಾತ್ರೆ           ೬ ಮಾತ್ರೆ           ನಾಲ್ಕು  ನಾಲ್ಕು ಮಾತ್ರೆ
)        ಆನಂದದ           ಕಂಬನಿಗಳ         ಧುನಿಗಳು
– – ⋃ ⋃           – ⋃⋃⋃⋃         ⋃⋃⋃⋃
(ಆರು)   (ಆರು)   (ನಾಲ್ಕು)
)        ಸುತ್ತಿವೆ  ಸವಿಸವಿಯಾಲಿಂಗನಗಳ
–⋃⋃    ⋃⋃⋃⋃ – – ⋃⋃⋃⋃
(ನಾಲ್ಕು)            (ಹನ್ನೆರಡು)
)        ಬಾನ     ಬುದ್ಭುವ             ತೇಜದಾಗರವೇ
– ⋃      – ⋃ ⋃  – ⋃ – ⋃⋃ –
(ಮೂರು)           (ನಾಲ್ಕು)            (ಒಂಬತ್ತು)
)        ಚಿತ್ತವ    ಹಗುರಾಗಿಸಿ        ಉಫ್‌    ಎನ್ನುತ
– ⋃⋃   ⋃⋃ – ⋃⋃        –         – ⋃⋃
(ನಾಲ್ಕು)            (ಆರು)   (ಎರಡು)            (ನಾಲ್ಕು)
)        ಈ        ತೇಜಂ   ಕೆಡೆ       ಜಡಂ    ತೋರಿತೋ
–          – –       ⋃⋃      ⋃ –      – ⋃ –
(ಎರಡು)            (ನಾಲ್ಕು)            (ಎರಡು)            (ಮೂರು)           (ಐದು)
)        ಅಳುವ   ಕಡಲೊಳೊ        ತೇಲಿ     ಬರುತಲಿದೆ
⋃⋃⋃   ⋃⋃ ⋃ –           – ⋃      ⋃⋃⋃⋃⋃
(ಮೂರು)           (ಐದು)   (ಮೂರು)           (ಐದು)

ಒಂದನೆಯ ಉದಾಹರಣೆಯಲ್ಲಿ ಎರಡು ಮಾತ್ರೆಗಳ ಗಣ, ನಾಲ್ಕು ಮಾತ್ರೆಗಳ ಗಣ ಮತ್ತೆ ನಾಲ್ಕು ಮಾತ್ರೆಗಳ ಎರಡು ಗಣಗಳ ಯೋಜನೆಯಿದೆ.

ಎರಡನೆಯ ಉದಾಹರಣೆಯಲ್ಲಿ ಆರು ಮಾತ್ರೆಗಳ ಗಣ, ಆರು ಮಾತ್ರೆಗಳ ಗಣ ಮತ್ತೆ ನಾಲ್ಕು ಮಾತ್ರೆಗಳ ಗಣಳಿವೆ.

ಮೂರನೆಯ ಉದಾಹರಣೆಯಲ್ಲಿ ನಾಲ್ಕು ಮಾತ್ರೆಗಳ ಮೊದಲ ಗಣವಾದ ಮೇಲೆ ಒಟ್ಟು ಹನ್ನೆರಡು ಮಾತ್ರೆಗಳ ಒಂದೇ ಗಣವಿದೆ (ಇದನ್ನು ಎರಡು ಮತ್ತು ಹತ್ತು ಮಾತ್ರೆಗಳ ಗಣಗಳಾಗಿಯೂ ಗುರುತಿಸಬಹುದು.)

ನಾಲ್ಕನೆಯ ಉದಾಹರಣೆಯಲ್ಲಿ ಮೊದಲ ಮೂರು ಗಣ ಮೂರು ಮಾತ್ರೆಗಳದು, ಎರಡನೆಯ ಗಣ ನಾಲ್ಕು ಮಾತ್ರೆಗಳದು (ಇದನ್ನು ಪದದ ಕೊನೆಯಕ್ಷರದ ದೀರ್ಘಿಕೆಯಿಂದ ಐದು ಮಾತ್ರೆಗಳ ಗಣವಾಗಿಯೂ ಗಮನಿಸಬಹುದು.) ಮುಂದೆ ಒಂಬತ್ತು ಮಾತ್ರೆಗಳ ಒಂದೇ ಗಣವಿದೆ.

ಐದನೆಯ ಉದಾಹರಣೆಯಲ್ಲಿ ಮೊದಲ ಗಣ ನಾಲ್ಕು ಮಾತ್ರೆಯದು. ಮುಂದಿನ ಗಣ ಆರು ಮಾತ್ರೆಗಳದು. ಅದರ ಮುಂದೆ ಎರಡು ಮಾತ್ರೆಗಳ ಗಣವಿದೆ. ಮುಂದೆ ನಾಲ್ಕು ಮಾತ್ರೆಗಳ ಗಣವಿದೆ.

ಆರನೆಯ ಉದಾಹರಣೆಯಲ್ಲಿ ಮೊದಲ ಗಣ ಎರಡು ಮಾತ್ರೆಗಳದು, ಮುಂದಿನ ಗಣ ನಾಲ್ಕು ಮಾತ್ರೆಗಳದು. ಅದರ ಮುಂದೆ ಮೂರು ಮಾತ್ರೆಗಳ ಗಣವಿದೆ. ಮುಂದಿನದು ಐದು ಮಾತ್ರೆಗಳ ಒಂದು ಗಣವಾಗಿದೆ.

ಏಳನೆಯ ಉದಾಹರಣೆಯಲ್ಲಿ ಮೊದಲ ಗಣ ಮೂರು ಮಾತ್ರೆಗಳದು; ಎರಡನೆಯ ಗಣ ಐದು ಮಾತ್ರೆಗಳದು; ಮೂರನೆ ಗಣ ಮೂರು ಮಾತ್ರೆಗಳದು. ನಾಲ್ಕನೆಯ ಗಣ ಐದು ಮಾತ್ರೆಗಳದು.

ಈ ಮೇಲಿನ ಏಳೂ ಉದಾಹರಣೆಗಳನ್ನು ನಾಲ್ಕು ಮಾತ್ರೆಗಳ ಗಣಗಳಿಗೆ ಬದಲಾಗಿ ಬಳುಕನ್ನು ತರಲು, ಎರಡು ಮಾತ್ರೆಗಳು, ಮೂರು ಮಾತ್ರೆಗಳು, ನಾಲ್ಕು ಮಾತ್ರೆಗಳು, ಐದು ಮಾತ್ರೆಗಳು, ಆರು ಮಾತ್ರೆಗಳು, ಒಂಬತ್ತು ಮಾತ್ರೆಗಳು ಅಥವಾ ಏಳು ಮಾತ್ರೆಗಳು, ಹನ್ನೆರಡು ಮಾತ್ರೆಗಳು ಹೀಗೆ ಭಿನ್ನಭಿನ್ನ ಗಣಗಳನ್ನು ಬಳಸಿ ಬಳಕನ್ನು ತರಲಾಗಿದೆ.

ಇದನ್ನು I.A. Richards ಹೇಳುವುದು ಹೀಗೆ : The texture of expectations, satisfaction, disappointments surprisals, which the sequence of syllables bring about, is rhythm.

ನಿಜ ಕಾವ್ಯದ ನೇಯ್ಗೆಯಲ್ಲಿ ನಾಲ್ಕು ಮಾತ್ರೆಗಳ ಗಣವಿರಬೇಕೆಂಬ ನಿರೀಕ್ಷೆ, ಅದು ಬಂದಾಗಿನ ತೃಪ್ತಿ; ಹಾಗೆ ಬರದೆ ಬೇರೊಂದು ಗಣ, (೨ ಮಾತ್ರೆ, ೩ ಮಾತ್ರೆ, ೧೫ ಮಾತ್ರೆ, ೬ ಮಾತ್ರೆ, ೭ ಮಾತ್ರೆ, ೯ ಮಾತ್ರೆ, ೧೨ ಮಾತ್ರೆಗಳು) ಬಂದಾಗ ನಾಲ್ಕು ಮಾತ್ರೆಗಳ ಗಣ ಬರದ ನಿರಾಶೆಯನ್ನು ಭಿನ್ನ ಭಿನ್ನ ಗಣಗಳು ಬಂದು ವಿಸ್ಮಯಕರವಾದ ಲಯ ವೈವಿಧ್ಯವನ್ನು ತಂದಾಗ ಅವುಗಳ ಅನುಕ್ರಮಣಿಕೆಯನ್ನೇ ಲಯವೆನ್ನುತ್ತೇವೆ ಅಲ್ಲವೆ?

ಈ ಮಾತನ್ನೇ ಮುಂದುವರಿಸುತ್ತ ಆ ವಿಮರ್ಶಕ ಹೇಳಿದ ಬಹಳ ಮುಖ್ಯವಾದ ಮಾತು ಹೀಗಿದೆ : Rhythm and its specialized form, metre, depend upon repetition and expectancy. ನಿಜಲಯದಲ್ಲಿ ಮುಖ್ಯವಾದದ್ದು ಯಾವುದನ್ನು ತಾಳ ಅಥವಾ ಅರ್ಥಕಾರಣವಾದ ಕಾಲ ಎನ್ನುತ್ತೇವೆಯೋ ಅದರ ಪುನರಾವರ್ತನ ಮತ್ತು ನಿರೀಕ್ಷೆಗಳು ಛಂದಸ್ಸಿನ ಜೀವಾಳ ಆಗುತ್ತವೆ. ಆಶ್ಚರ್ಯವೆಂದರೆ ಆ ‘ತಾಳ’ ಅಥವಾ ‘ಕಾಲ’ಕ್ಕೆ ಆಳ, ಎತ್ತರ, ವಿಸ್ತಾರಗಳೂ ಇರುವುದರಿಂದ – ಇವುಗಳ ವಿಭಿನ್ನ ಸಂಯೋಜನೆಗಳ ಸಾಧ್ಯತೆಯೂ ಇರುವುದರಿಂದ – ಇದರ ಜೊತೆಗೆ ಅರ್ಥ ಕೂಡ ಸೇರಿಕೊಳ್ಳುವುದರಿಂದ ಈ ಲಯವು ಕಾವ್ಯದ ನಾಡಿಯ ಮಿಡಿತವೇ ಆಗಿಬಿಡುತ್ತದೆ. ಅಂಥ ಮಿಡಿತದಲ್ಲಿ ಹರ್ಷ ಶೋಕಾದಿ ಶಾಂತಿ ಸ್ಥಿತಿಗಳಲ್ಲಿ ಏರುಪೇರಾದಂತೆಯೇ ಲಯದಲ್ಲಿಯೂ ವೈವಿಧ್ಯವೆಂಬುದು ಅದರ ಶಕ್ತಿರೂಪವಾಗಿ ಬಿಡುತ್ತದೆ. ಆಗ ಆ ಲಯವೆಂಬುದು ತನ್ನ ‘ಕಾಲ’ (ತಾಳ)ದ ಏರಿಳಿತ ದೀರ್ಘತೆಗಳ ಸಂಯೋಜನೆಗಳ ಜೊತೆಗೆ ಸರಳಾಕ್ಷರ ಪುರುಷಾಕ್ಷರಗಳ ವಿವಿಧ ಸಂಯೋಜನೆಗಳಿಂದ ಅನಂತಮುಖವಾದ ವೈವಿಧ್ಯದ ಸಾಧ್ಯತೆಗಳನ್ನು ಪಡೆದುಕೊಂಡು ಬಿಡುತ್ತದೆ. ಆದ್ದರಿಂದಲೇ ಪಂಪನಿಂದ ಈವರೆಗೆ ಬಂದ ಕವಿಗಳು ಉತ್ಸಾಹ ಲಯ, ಮಂದಾನಿಲ ಲಯ, ಲಲಿತ ಲಯಗಳ ಜೊತೆಗೆ ಮೂರು ಮತ್ತು ನಾಲ್ಕು ಮಾತ್ರೆಗಳ ವಿಷಮ ಲಯಗಳನ್ನು ಆಶ್ರಯಿಸಿ ರಚನೆಗಳನ್ನು ಮಾಡಿದ್ದರೂ ಆ ಲಯಗಳ ಸಾಧ್ಯತೆಗಳಿಗೆ ‘ಮಿತಿ’ ಎಂಬುದೇ ಸಾಧ್ಯವಾಗಿಲ್ಲ. ಒಂದರ್ಥದಲ್ಲಿ ಈ ಲಯದ ವೈವಿಧ್ಯ ಪಡೆಯುವ ಶಕ್ತಿ ಅನಂತಮುಖವಾದದ್ದು ಹಾಗೂ ಅನಂತ ಸಾಧ್ಯತೆಗಳನ್ನು ಪಡೆದುಕೊಳ್ಳ ಬಲ್ಲಂಥದ್ದು. ಸೃಷ್ಟಿಯ ಸೌಂದರ್ಯ ಹಾಗೂ ಬದುಕಿನ ಡೈನಮಿಸಂ ಎಷ್ಟು ಅಮೂಲ್ಯ ಹಾಗೂ ಅಪರಿಮಿತ ಆದುದೋ ಅಷ್ಟೇ ಈ ‘ಲಯ’ದ ಸತ್ವ ಕೂಡ ಎನ್ನಬಹುದು.

ಏಕೆಂದರೆ ಮೇಲೆ ಹೇಳಿದ ಏಳು ಉದಾಹರಣೆಗಳ ಜೊತೆಗೆ ಈ ಎಂಟನೆಯ ಉದಾಹರಣೆ ಗಮನಿಸಿ:

ಹೇಳಲೆ ಹಕ್ಕಿ ಚೆಲುವನ್ನು ಸಿಕ್ಕಿ
ನನಗೆ ಮದುವೆಯೆಂದು

ಮೊದಲನೆಯ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಗಣ ಅನಂತರ ಮೂರು ಮಾತ್ರೆಗಳ ಗಣ ಬಂದಿದೆ. (ದೀರ್ಘೀಕರಣದಿಂದ ಇದು ನಾಲ್ಕು ಮಾತ್ರೆಯ ಗಣ ಆಗಬಹುದು.)

ಮುಂದಿನ ಮೂರನೆಯ ಗಣ ನಾಲ್ಕು ಮಾತ್ರೆಗಳದು, ನಾಲ್ಕನೆಯ ಗಣ ಮೂರು ಮಾತ್ರೆಗಳದು (ಇದು ದೀರ್ಘೀಕರಣದಿಂದ ಸಾಧ್ಯತೆ ಪಡೆದಿದೆ) ಸ್ವಾರಸ್ಯವೆಂದರೆ ಮೊದಲ ಗಣ ನಾಲ್ಕು ಮಾತ್ರೆಗಳದು; ಮೂರನೆಯ ಗಣವೂ ಅಷ್ಟೆ. ಆದರೆ ಗುರು ಲಘು ಯೋಜನೆಯಲ್ಲಿ ಮತ್ತೆ ಭಿನ್ನವಾಗಿವೆ.

ಮೂರು ನಾಲ್ಕು ಮಾತ್ರೆಗಳ ಗಣಗಳಾದ ಮೇಲೆ ನವೋದಯದ ಕವಿಗಳು ಬಳಸಿದ್ದ ವಿವಿಧ ಛಂದೋಪ್ರಕಾರಗಳಲ್ಲಿ ನಡೆಸಿದ ಪ್ರಯೋಗಗಳು ಗಮನಾರ್ಹವಾದವು. ಅವುಗಳಲ್ಲಿ ಷಟ್ಪದಿ ಬಳಕೆಯನ್ನು ಗಮನಿಸಿದರೆ ಬೇಂದ್ರೆ, ಅಡಿಗ ಮೊದಲಾದ ಕವಿಗಳು ವಾರ್ಧಕ ಷಟ್ಪದಿಯಲ್ಲಿ ಬಹಳಷ್ಟು ಕೈಯಾಡಿಸಿದ್ದುದುಂಟು.

ಅನಂತರ ಚೌಪದಿ ಸೀಸಪದ್ಯಗಳ ಪ್ರಕಾರದಲ್ಲೂ ಹಲವಾರು ಪ್ರಯತ್ನಗಳು ನಡೆಸಿದ್ದವು. ಗೋವಿನ ಹಾಡಿನ ಛಂದದಲ್ಲಿ ಕೂಡ ಪ್ರಯೋಗಗಳು ನಡೆದಿದ್ದವು. ವಾಸ್ತವವಾಗಿ ಶ್ರೀಯವರೇ ‘ಕಾರಿಹೆಗ್ಗಡೆಯ ಮಗಳು’ ಎಂಬ ಅನುವಾದಿತ ಕವನದಲ್ಲಿ ಅದನ್ನು ಬಳಸಿಕೊಂಡಿದ್ದರು:

ಪಡುವ ದಿಬ್ಬದ ಗೌಡನೊಬ್ಬನು
ಬಿಡದೆ ತೊರೆಯನ ಕೂಗಿಕೊಂಡನು
ತಡೆಯದೀಗಲೆ ಗಡುವ ಹಾಯಿಸು
ಕೊಡುವೆ ಕೇಳಿದ ಹೊನ್ನನು.

ಆಶ್ಚರ್ಯವೆಂದರೆ ಈ ಪದ್ಯಜಾತಿಯ ಮೂರು ಮತ್ತು ನಾಲ್ಕನೆ ಸಾಲುಗಳ ಇನ್ನೊಂದೇ ವಿಶಿಷ್ಟ ಛಂದೋಬಂಧಕ್ಕೆ ಕಾರಣವಾಗುವುದನ್ನು ಗಮನಿಸಬಹುದು. ಉದಾಹರಣೆಗೆ ಶ್ರೀಯವರೇ ಅನುವಾದಿಸಿದ ಬಾನಾಡಿ, ಹಳೆಯ ಪಳಕೆಯ ಮುಖಗಳು, ಮೊದಲಾದ ಕವಿತೆಗಳಲ್ಲಿ ನೋಡಬಹುದು. ಈ ಎರಡು ಉದಾಹರಣೆಗಳನ್ನು ಗಮನಿಸಿ:

. ಆರು ನೀನೆಲೆ ಹರುಷ ಮೂರುತಿ?
ಹಕ್ಕಿಯೆಂಬರೆ ನಿನ್ನನು?
ತೋರಿ ದಿವಿಜರು ಸುಳಿವ ಪರಿ, ಸುಖ
ವುಕ್ಕಿಬಹ ನಿನ್ನೆದೆಯನು
ಹಾರಿನೆನೆಯದೆ ಕಲೆಯ ಕುಶಲದಭೂರಿಗಾನದೊಳೆರೆಯುವೆ!

. ಕಂದ ಬಿದ್ದೆಯ ಎಂದು ಮುದ್ದಿಸಿ ನನಗೆ ಮರುಗುವರಿದ್ದರು;
ಅಂದಿನೋದಿನ ಸುಖದ ದಿನದಲಿ ಜತೆಗೆ ಕುಣಿಯುವರಿದ್ದರು.
ಎಲ್ಲ ಎಲ್ಲಾ ಮಾಯವಾದವು ಹಳೆಯ ಪಳಕೆಯ ಮುಖಗಳು.

ಮೊದಲ ಉದಾಹರಣೆಗಳಲ್ಲಿ ಮೂರು ನಾಲ್ಕು, ಮೂರು ನಾಲ್ಕು ಮಾತ್ರೆಗಳ ನಾಲ್ಕು ಗಣಗಳು ಮೊದಲ ಸಾಲಿನಲ್ಲೂ ಮೂರು ನಾಲ್ಕು ಮಾತ್ರೆಗಳ ಮೂರು ಗಣಗಳು ಎರಡು ಮತ್ತು ನಾಲ್ಕನೆಯ ಸಾಲುಗಳಲ್ಲೂ ಬಂದಿವೆ; ಐದನೆಯ ಸಾಲಿನ ಗಣವಿನ್ಯಾಸ ಒಂದು ಮತ್ತು ಎರಡು ಸಾಲುಗಳ ಅಥವಾ ಮೂರು ಮತ್ತು ನಾಲ್ಕನೆಯ ಸಾಲುಗಳ ಒಟ್ಟು ಮೊತ್ತದಿಂದ ಏಳು ಗಣಗಳಿಂದ ಕೂಡಿದೆ. ಅಂದರೆ : ಈ ಛಂದಸ್ಸಿನಲ್ಲಿ ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳ – ಅಂದರೆ ಮಿಶ್ರಗಣಗಳ ಬಳಕೆಯಾಗಿದೆ.

ಈ ಛಂದಸ್ಸಿನ ವಿವಿಧ ಪ್ರಯೋಗಗಳು ಶ್ರೀಯವರ ಭರತ ಮಾತೆ, ಪಂಜೆಯವರ ಹುತ್ತರಿ ಹಾಡು, ಕುವೆಂಪು ಅವರ ಹೋಗುವೆನು ನಾ ಮೊದಲಾದ ಪದ್ಯಗಳಲ್ಲಿ ಬಂದಿದ್ದು ಅವುಗಳನ್ನು ಪ್ರತ್ಯೇಕವಾಗಿಯೇ ವಿಶ್ಲೇಷಸಲಾಗಿದೆ. ಸಂಸ್ಕೃತದ ಅಕ್ಷರ ವೃತ್ತವಾದ ಮಲ್ಲಿಕಾಮಾಲೆಗಿಂತ ಹೆಚ್ಚು ವೈವಿಧ್ಯಗಳನ್ನು ಮಾತ್ರಾವೃತ್ತವಾಗಿ ಹೇಗೆ ಪಡೆದುಕೊಳ್ಳುತ್ತದೆಂಬುದನ್ನು ವಿಶದವಾಗಿಯೇ ವಿಶ್ಲೇಷಿಸಲಾಗಿದೆ. (ನೋ. ಪು. ೮೬-೧೦೧)

ಗೋವಿನ ಹಾಡಿನ ಲಯದಿಂದಲೇ ಹೇಗೆ ಭಿನ್ನಧಾಟಿಗಳನ್ನು ಕಂಡುಕೊಂಡಿದ್ದಾರೆ ಎಂಬುದು ನವೋದಯ ಕವಿಗಳ ಯಶಸ್ಸಿಗೆ ಕಾರಣವಾಗಿದೆ.

ನವೋದಯ ಕವಿಗಳಲ್ಲಿ ಬೇಂದ್ರೆಯವರು ಸೊಗಸಾದ ತ್ರಿಪದಿಗಳನ್ನು ಬಳಸಿಕೊಂಡಿರುವುದನ್ನು ಮರೆಯಲಾಗದು.

ಜಾನಪದ ಲಯಗಳನ್ನು ಬಳಸಿಕೊಳ್ಳುವಾಗ ನವೋದಯದ ಕವಿಗಳು ಅಂಶಗಣ ಛಂದದ ಬೆಡಗಿಗೂ ಮಾರುಹೋಗಿದ್ದಾರೆ; ಸೊಗಸಾದ ಪದ್ಯಗಳನ್ನು ರಚಿಸಿದ್ದಾರೆ.

ಶ್ರೀಯವರಲ್ಲಿಯೇ ಬ್ಲೆನ್‌ಹಿಮ್‌ ಕದನದಲ್ಲಿ ಈ ಛಂದಸ್ಸು ಬಳಕೆಯಾಗಿದೆ.

ಬೆಸಗೆಯಲಿ ಸಂಜೆಯಾಯಿತು; ಕೆಲಸವ
ಮುತ್ತಜ್ಜ ತೀರಿಸಿಕೊಂಡ.
ಹಟ್ಟಿಯ ಬಾಗಿಲ ಬಳಿಯಲಿ ನೋಡುತ
ಹೊಂಬಿಸಿಲಲಿ ಕುಳಿತುಕೊಂಡ.

ಈ ಲಯವನ್ನು ಪುತಿನ ಬೇಂದ್ರೆ ಮೊದಲಾದವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.

ಹುಲು ಮನಸಿಯ ಪಾಡು ಹಿಂಗಯ್ತೆ ನಮ್ಮವ್ವ
ಮಲೆದೇವ್ರ ಪಾಡ ಏನೆಳ್ಳಿ!
ಸುಲಭಾನೆ ಲೋಕದ ಸಂಸಾರ ನಡೆಸೋದು?
ಅಳುಬಂತು ನಮ್ಮಪ್ಪಗಾಗಿ!

ಈ ಲಯದ ಶ್ರೇಷ್ಠ ಪ್ರಯೋಗಗಳಲ್ಲಿ ಒಂದು ಬೇಂದ್ರೆಯವರ ಸಖೀಗೀತ. ಸಾವಿರ ಪಂಕ್ತಿಗಳಿಗೆ ಸಮೀಪವಾಗಿರುವ ಈ ಆತ್ಮಕಥನಾತ್ಮಕ ಗೀತೆಯಲ್ಲಿ ಅಂಶಲಯದ ಸೊಗಸನ್ನೆಲ್ಲ ಸೂರೆ ಮಾಡಿದ್ದಾರೆ.

. ಕಲ್ಯಾಣ ಶಕ್ತಿಯ ಕೈಯ ಕುಶಲತೆಯಿಂದ
ಪಾಕವಾಗಲಿ ಪ್ರೇಮ ಎನ್ನುವೆನೇ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ

. ಕೊಟ್ಟಿದ್ದೆ ರೂಪವು ಇಟ್ಟಿದ್ದೆ ನಾಮವು
ಕಟ್ಟಿದ್ದೆ ಹುರುಳೆಂಬ ಮನದೊಳಿರೆ
ಬ್ರಹ್ಮಪಟ್ಟವನೇರಿ ರೂಪಕ ಶಕ್ತಿಯು
ಸೃಷ್ಟಿಯನಳೆದಿತು ದೃಷ್ಟಿಯೊಳೆ

ವಾಸ್ತವವಾಗಿ ನವೋದಯ ಕಾಲದಲ್ಲಿ ಬಳಕೆಯಾದ ಈ ಛಂದಸ್ಸು ಒಂದರ್ಥದಲ್ಲಿ ಅಕ್ಷರ ಮತ್ತು ಸಾಂಗತ್ಯ ಛಂದಸ್ಸುಗಳ ಕಸಿ ರೂಪವಾದದ್ದು ಎಂಬುದನ್ನು ಬೇಂದ್ರೆಯವರೇ ಗುರುತಿಸಿರುವುದು ಅವರ ಜಾನಪದ ಪ್ರಜ್ಞೆಗೆ ಸಾಕ್ಷಿಯಾಗಿದೆ.

ನವೋದಯದ ಕವಿಗಳು ವಚನ ಪ್ರಕಾರದಿಂದಲೂ ಪ್ರಭಾವಿತರಾಗಿ ಕನ್ನಡದ ಬಹು ವಿಶಿಷ್ಟವಾದ ಆ ಪ್ರಕಾರದಲ್ಲಿ ಪ್ರಯೋಗಗಳನ್ನು ನಡೆಸಿದ್ದಾರೆ. ಕುವೆಂಪು ಅವರು ಕಿಂಕಿಣಿ, ಆನಂದರ ಪಕ್ಷಿಗಾನ, ಬೇಂದ್ರೆಯವರ ಕರುಳಿನ ವಚನಗಳು ಈ ಪರಂಪರೆಗೆ ಸೇರಿದವು. ಮುಂದಂತೂ ಎಸ್‌.ವಿ. ರಂಗಣ್ಣ, ಎಸ್‌. ವಿ. ಪರಮೇಶ್ವರಭಟ್ಟ, ಸಿದ್ಧಯ್ಯ ಪುರಾಣಿಕ, ಮಹದೇವ ಬಣಕಾರ ಮೊದಲಾದವರು ಈ ಪ್ರಕಾರವನ್ನು ಬೆಳೆಸುವ ಯತ್ನದಲ್ಲಿ ಶ್ರಮಿಸಿದ್ದಾರೆ.

ಜಾನಪದ ಲಯಗಳನ್ನು ಬಳಸುವಲ್ಲಿ ಬೇಂದ್ರೆಯವರ ಪ್ರತಿಭೆ ಚೇತೋಹಾರಿಯಾಗಿದೆ. ಅವರ ಕಾವ್ಯ ಗ್ರಾಂಥಿಕ ಭಾಷೆಯ ಮೂಲಕವೂ ಯಶಸ್ವಿಯಾಗಿದೆ; ಉತ್ತರ ಕನ್ನಡದ ಜಾನಪದ ಭಾಷೆಯಲ್ಲಿ ಅದಕ್ಕಿಂತ ಮಿಗಿಲಾಗಿ ವಿಜೃಂಭಿಸಿದೆ. ಹೀಗೆ ಅವರ ಕವಿತೆಗಳನ್ನು ಓದುವಾಗ ಇಬ್ಬರು ಕವಿಗಳು ಬರೆದರೆಂಬ ಭಾವ ಬರುತ್ತದೆಂಬ ಅಭಿಪ್ರಾಯವೂ ಹುಟ್ಟಿಕೊಂಡಿದೆ. ಆದರೆ, ಅವರ ಕವಿತೆಗಳಲ್ಲಿ ಜಾನಪದ ಲಯಗಳು ಎಷ್ಟು ಸಹಜವಾಗುತ್ತವೆಂದರೆ ಅವು ಆಂಶಗಣ ಹಾಗೂ ಮಾತ್ರಾಗಣ ಲಯಗಳೆಡರಲ್ಲೂ ಲೀಲಾಜಾಲವಾಗಿ ಓಡಾಡಿದರೂ ಅಭಿವ್ಯಕ್ತಿಗೆ ಯಾವ ತೊಡಕೂ ಉಂಟಾಗುವುದಿಲ್ಲ. ಉದಾಹರಣೆಗೆ ಈ ಕೆಲವು ಉಕ್ತಿಗಳನ್ನು ಗಮನಿಸಬಹುದು:

. ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯತಲಿತ್ತು

. (ಯಾರಿಗೂ ಹೇಳೋಣು ಬ್ಯಾಡ ಕವಿತೆಯ)
ಮಲ್ಲಿಗೆ ಮಂಟಪದಾಗ
ಗಲ್ಲಕ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತ
ನಿದ್ದಿ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಹೋಗೋಣಂತ.

. ತಲಿಮ್ಯಾಲ ಬಿಂದಿಗೆ ಕಾಲಾಗ ಅಂದಿಗೆ
ತುಮ್ತುಮಕು ತುಂಬಿದೆ | ಬಿಂದಿಗೆ ಅಂತಿದೆ ||
ಝಣ್ಝಣ ಅಂದಿಗೆ | ಅಂದಾವ ಹೊಂದಿಗೆ
(
ಸಂಜೀಯ ಜಾವಿಗೆ)

. ಗಾಳಿ ತಬ್ಬತಾವ ಹೂಗಂಪ
ಚಂದ್ರನ ತೆಕ್ಕಿಗಿದೆ ತಂಪ
ನಿನ ಕಂಡರ ಕವದಾವ ಜೊಂಪ
ನೀ ಹೊರಟಿದ್ದೀಗ ಎಲ್ಲಿಗಿ?
……….
ಕೆರಿ ತೆರಿ ನೂಕತಾವ ದಡಕ
ನೆಲಳಲ್ಲಾಡತಾವ ಮರದ ಬುಡಕ
ನೀ ಹೀಂಗ ಬಿಟ್ಟು ನನ್ನ ನಡಕ
ರಾಯರ ನೀವು ಹೊರಟಿದ್ದೀಗ ಎಲ್ಲಿಗಿ?
(
ಗಮಗಮಾಗಮಾಡಸ್ತಾವ ಮಲ್ಲಿಗಿ)

. ಬಾಣಂತಿಯೆಲುಬ ಸಾ
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಲ್ಲಿ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣಿನ ಕವಡೆಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೊ.
(
ಕುರುಡ ಕಾಂಚಾಣ)

ಪೂರ್ಣ ಜಾನಪದವೇ ಆಗಿ, ಅಂಶಲಯದಲ್ಲಿ ಮಾತ್ರ ಉಳಿದ ಗೇಯ ಕವಿತೆಗಳೂ ಅಷ್ಟಿವೆ. ಉದಾಹರಣೆಗೆ:

. ನೀ ಹಿಂಗ ನೋಡಬ್ಯಾಡಾ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲಿ ನಿನ್ನ?
ನೀ ಹಿಂಗ ನೋಡಬ್ಯಾಡ ನನ್ನ
ತಂಬಲs ಹಾಕದs ತುಂಬ ಕೆಂಪು ಗಿಡಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತ್ತು? ಯಾವ ಗಾಳಿಗೆ ಹೀಂಗ
ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆನಗ ಇಲ್ಲದ ಭೀತಿ.

. ಸಚ್ಚಿದಾನಂದ, ಸಚ್ಚಿದಾನಂದ, ಸಚ್ಚಿದಾನಂದ, ಸಚ್ಚಿದಾನಂದೋಂ ಸಚ್ಚಿದಾನಂದ ||||
ಬಾs ಹಾಕು ರಿಂಗಣಾ ಗಗನದಂಗಣsದಾss ನನ್ನ ಕಾಲಾಗ
ಒಳಗೊಳಗ ಕುದಿನ ಭೂಕಂಪ
ಹೊರಗ ಹಸಿತಂಪ
ಮೇಲೆ ನರುಗಂಪೋ | ಮೇಲೆ ನರುಗಂಪು
ಬಂತೆಲ್ಲ ನೆಲದ ಬಸಿರಿಂದ | ಮನೆಯ ನೆಲದಿಂದ | ಅನ್ನಮಣ್ಣಿಂದ ಮೈಯು
ಅದರಿಂದೋಸಚ್ಚಿದಾನಂದ, ಸಚ್ಚಿದಾನಂದ.

. ಮರಮರದ ಗೋನೀಗೆ ಕೂತು
ಹಾರಿ ಮೈಸೋಕು
ತೆಪ್ಪಗs ಗಾsಳಿs
ತೆಪ್ಪಗs ಗಾಳಿ
ತೂಕಡಸತs ತಾನೀಗ
ಜಂಪು ಬಂಧಾಗ
ಜಂಬು ಬಂಧಾಂss
ಇದು ಅದರ ತುಪ್ಪಳದ ಗೂss
ಬೆಳುದಿಂಗಳ ನೋಡs ||
ಬೆಳದಿಂಗಳ ನೋಡ

ಅಂಶ ಲಯವೇ ಅಲ್ಲದೆ ವೈದಿಕ, ಛಂದದ ನಡಿಗೆಯ ರಚನೆಗಳೂ ಕಲವಿದೆ.

. ಮೌನಾs, ಮೌನಾss, ಮೌನಾsss, ಮೌನವಿಮಾನಾರೂಢಾ
ಅಮೃತಾತ್ಮಾ, ತರ! ಉತ್ತರ! ಭೋs ಉರ್ಧ್ವೋದ್ವೋ, ಭೋ

……..
ವಿಶಾಲಾ, ಅಚಲಾ, ಅಕ್ಷರಾ, ಆರೂಪಾ, ಅದ್ಭುತ ಭೂತ
ಸ್ವರ್ಗೋಪರಿ ಸ್ವರ್ಗಾ, ಅಗಲಾ ಬ್ರಹ್ಮಾಂಡಕು ಮಿಗಿಲಾ ಮೌನ

. ಇಗೋss ಮೌನಾ ಸತ್ತೂಮುತ್ತೂ ಜಗದಗಲಾ ವಾಚಾತೀತಾ
ಶ್ವೇತಾss ಶುಭ್ರಾ ಸ್ಫೀತಾ ಖಗಮಾಲಾ ಸಾಗರ ಮಗ್ನಾ
ದಿಗಂತೋಡ್ಡಿನಾ ಲೀನಾ!
(
ಐಕ್ಯ ಸಾಗರ)

ಬೇಂದ್ರೆಯವರ ಪ್ರತಿಭೆಯೇ ಜಾನಪದೀಯವೂ ಹೆಚ್ಚು ಆಶುಕವಿತಾ ಕ್ರಮದ್ದೂ ಆಗಿರುವುದೇ ಈ ಛಂದೋವಿಲಾಸಗಳಿಗೆ ಕಾರಣವೆನ್ನಬಹುದು. ಈ ಬಗೆಗೆ ಅವರೇ ‘ಪ್ರಕೃತಿ ಪ್ರೇರಕಶಕ್ತಿ, ಆ ಪ್ರೇರಣೆಯಿಂದ ಮೈತಾಳುತ್ತದೆ ಛಂದಸ್ಸು’ ಎಂದು ಹೇಳಿಬಿಟ್ಟಿದ್ದಾರೆ. ಛಂದೋಬದ್ಧತೆಯ ಜೊತೆಗೆ ಮುಕ್ತಛಂದದ ಕಡೆಗೂ ಆರಂಭದಿಂದಲೇ ಅಂದರೆ ೧೯೨೦-೨೧ರಿಂದಲೇ ಅವರ ಚಿಂತನೆ ಹರಿದಾಡುತ್ತಿತ್ತು. ತಮ್ಮ ಕರುಳಿನ ವಚನಗಳ ಬಗೆಗೆ ಬರೆಯುತ್ತ “ಪ್ರಾಚೀನರ ವಚನಗಳು ಶುದ್ಧಪಾರಮಾರ್ಥಿಕ ಸಾಧನೆಯ ಮಾರ್ಗದೊಳಗಿನವು, ಕರುಳಿನ ವಚನಗಳೊ ಲೌಕಿಕ ಭಾವದ ಪ್ರಕಟನೆಗೆ ಬಳಸಿಕೊಂಡಂಥವು” ಎಂದಿದ್ದಾರೆ.

ಅಂಶಗಣ ಲಯ, ಮಾತ್ರಾಗಣ ಲಯ ಈ ಎರಡರಲ್ಲೂ ಯಾವ ತೊಡಕುಗಳೂ ಇಲ್ಲದೆ ಪಾತರಗಿತ್ತಿಯಂತೆ ಲೀಲಾಲೋಲವಾಗುವ ಇವರ ಲಯಗಳ ಹಿಂದೆ ಆಶುಕವಿತಾ ಪ್ರತಿಭೆಯ ಆಟವೂ ಇದ್ದಂತಿದೆ.

ಈ ಛಂದೋರೂಪಗಳ ಹಿಂದೆ ನಮಗೆ ಅರಿವಾಗುವುದು ನಮ್ಮ ಕವಿಗಳಿಗಿರುವ ಅಸಾಧರಾಣವಾದ ಛಂದೋಪರಂಪರೆ. ಇದನ್ನು ಗಮನಿಸಿಯೇ “ಹರಿಹರ ಕುಮಾರ ವ್ಯಾಸಾದಿಗಳು ಹಳಗನ್ನಡವನ್ನು ಬಿಟ್ಟು ನಡುಗನ್ನಡಕ್ಕೆ ತಿರುಗಿ ಅದನ್ನು ಕಾವ್ಯಕ್ಕೆ ತಕ್ಕುದಾಗುವ ಹಾಗೆ ಕಡೆದಂತೆ ಹೊಸಗನ್ನಡವನ್ನು ಪಳಗಿಸಬೇಡವೇ? ಎಂಬುದು ಶ್ರೀಯವರ ಮನಸ್ಸಿನ ಹಾರೈಕೆ ಲೇಖನಿಯ ಸಾಧನೆ.” (ಪು. XXIV, ಪ್ರಸ್ತಾವನೆ – ಇಂಗ್ಲಿಷ್‌ ಗೀತೆಗಳು, ೧೯೮೨) ಎಂದು ತೀನಂಶ್ರೀ ಉಲ್ಲೇಖಿಸುತ್ತಾರೆ.

ಬೇಂದ್ರೆಯವರ ಇನ್ನೊಂದು ಮಾತು – ಷಟ್ಪದಿಯನ್ನು ಕರಿತದ್ದು ಅದು ಹೀಗಿದೆ. “ಇಕ್ಕಾಟ್ಟಾದ ಮಾತ್ರಾಮಿತಿಗಳುಳ್ಳ ಷಟ್ಪದಿಗಳು ನನ್ನ ಸ್ವಾಭಾವಿಕ ಸ್ವಾತಂತ್ರ್ಯಪ್ರಿಯ ಆತ್ಮಕ್ಕೆ ಹಿಡಿಸಿರಲಿಕ್ಕಿಲ್ಲ.”

ಬಹುಶಃ ಆ ಕಾರಣಕ್ಕೆ ಭೋಗಷಟ್ಪದಿ, ವಾರ್ಧಕ ಷಟ್ಪದಿಗಳ ಸಾಲುಗಳನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ನವೋದಯದ ಕವಿಗಳು ಬಳಸಿಕೊಂಡರು. ಜೊತೆಗೆ ಚೌಪದಿ ಮೊದಲಾದ ಲಯಗಳನ್ನು ಬಳಸಿಕೊಂಡರು.

ಪಂಚ ಮಾತ್ರಾಗಣಕ್ಕೆ ಸಂಬಂಧಿಸಿದಂತೆ ಕನ್ನಡದ ಛಂದೋಪ್ರತಿಭೆ ಅನ್ಯಾದೃಶವಾಗಿ ವಿಕಾಸಗೊಂಡುಬಿಟ್ಟಿದೆ.

ಐದು ಮಾತ್ರೆಗಳ ಗಣ : ಮೂರು ಮಾತ್ರೆಗಳ ಗಣದ ಲಯವನ್ನು ಉತ್ಸಾಹ ಲಯವೆಂದರೆ ನಾಲ್ಕು ಮಾತ್ರೆಗಳ ಗಣದ ಲಯವನ್ನು ಮಂದಾನಿಲ ಎನ್ನುವುದುಂಟು ಐದು ಮಾತ್ರೆಗಳ ಗಣ ಲಯವನ್ನು ಲಲಿತ ಲಯ ಎನ್ನುವುದುಂಟು.

ಲಲಿತ ಲಯದ ಈ ಗಣವು ಉತ್ಸಾಹಲಯ ಹಾಗೂ ಮಂದಾನಿಲ ಲಯಗಳಿಗಿಂತ ಹೆಚ್ಚು ವಿಸ್ತಾರವನ್ನು ಅದರ ಕಾರಣವಾಗಿ ಹೆಚ್ಚಿನ ವೈವಿಧ್ಯವನ್ನು ಒಳಗೊಳ್ಳುವ ಸಾಧ್ಯತೆಗಳನ್ನು ಪಡೆದಿದೆ. ಷಟ್ಪದಿಗಳಲ್ಲಿ ಭೋಗ ಷಟ್ಪದಿ ಹಾಗೂ ಮಿಶ್ರಗಣಗಳ ಭಾಮಿನೀ ಷಟ್ಪದಿ ಆದ ಮೇಲೆ ಹೆಚ್ಚು ಪ್ರಚುರವಾದದ್ದು ಐದು ಮಾತ್ರೆಗಳ ಗಣಗಳಿಂದ ಕೂಡಿದ ವಾರ್ಧಕ ಷಟ್ಪದಿ. ಅದರ ಪೂರ್ವಾರ್ಧದ ವಿನ್ಯಾಸ ಗಮನಿಸಿದರೆ. (ಪೂರ್ವಾರ್ಧ ಹಾಗೂ ಉತ್ತರಾರ್ಧ ಎರಡೂ ಸಮವಾಗಿರುತ್ತವೆ.) ಈ ಬಂಧದಿಂದ ಎಷ್ಟೊಂದು ವಿಭಿನ್ನ ವಿನ್ಯಾಸಗಳನ್ನು ರಚಿಸಬಹುದೆಂಬುದರ ಸ್ವಲ್ಪಮಟ್ಟಿನ ಅರಿವು ಸಾಧ್ಯವಾದೀತು.

ಜಯ ಜಯ ಜಗನ್ನಾಥ ವರಸುಪರ್ಣವರರೂಢ
ಜಯ ಜಯ ರಮಾಕಾಂತ ಶಮಿತದುರಿತಧ್ವಾಂತ
ಜಯ ಜಯ ಸುರಾಧೀಶ ನಿಗಮ ನಿರ್ಮಲಕೋಶ
ಕೋಟಿ ಸೂರ್ಯ ಪ್ರಕಾಶ

೫         ೫         ೫         ೫
⋃⋃⋃ + ⋃,       – – ⋃,  ⋃⋃⋃ – ,          ⋃⋃ – ⋃
೫         ೫         ೫         ೫
⋃⋃⋃⋃ ⋃,       +– – ⋃,            ⋃⋃⋃⋃⋃,        – – ⋃
⋃⋃⋃⋃ + ⋃,    – – ⋃,  ⋃⋃⋃ – ,          ⋃⋃ – ⋃
– ⋃ – , – ⋃ – , – ಗುರು

ಇಲ್ಲಿ ಬರುವ ಮೂರನೆಯ ಸಾಲು ಒಂದು ಮತ್ತು ಎರಡನೆಯ ಸಾಲುಗಳ ಒಂದೂವರೆಯಷ್ಟು ಮತ್ತೆ ಮೇಲೊಂದು ಗುರುವಿನಿಂದ ಕೂಡಿರುತ್ತದೆ. ಅಂದರೆ ಐದು ಮಾತ್ರೆಗಳ ಆರು ಗಣಗಳ ಮೇಲೆ ಒಂದು ಗುರುವಿರುವುದು ಮೂರನೆಯ ಸಾಲಿನ ವಿನ್ಯಾಸ.