ಆದರೆ ೧೯೯೦ Enclyopaedia Brihanamicaದ ಹತ್ತನೆಯ ಸಂಪುಟದ ೩೩ನೇ ಪುಟದಲ್ಲಿ ಇದರ ವಿಶ್ಲೇಷಣೆ ಸಂಗೀತಕ್ಕೆ ಸಂಬಂಧಿಸಿದಂತೆ ಹೀಗಿದೆ:

By extension it becomes clear that rhythm is not just a matter of timing; it depends also on accentuation, interval, harmony and tone dour. ಬಹುಶಃ ಇದಕ್ಕೆ ಅರ್ಥ (meaning) ಎಂಬುದೂ ಸೇರಿದರೆ ಕಾವ್ಯಕ್ಕೂ ಅನ್ವಯವಾಗಬಲ್ಲದು. ಕಾವ್ಯಕ್ಕೆ ಸಂಬಂಧಿಸಿದಂತೆ ಅಲ್ಲಿ ಹೀಗಿದೆ: Rhythm, in poetry is the patterned recurrance, with in a range of regularity, of specific language features, unusually features of sound. (P. 33)

ಆಂದರೆ Rhythm ಪದದ ಅರ್ಥವನ್ನು ೧೯೬೫ರಲ್ಲಿ ಪ್ರಕಟವಾದ Encyloppaedia Brihanamica ಗ್ರೀಕ್‌ ಮತ್ತು ಇಂಗ್ಲಿಷ್‌ ಭಾಷೆಗಳೆರಡನ್ನೇ ಆಧಾರವಾಗಿಟ್ಟುಕೊಂಡು ವಿಶ್ಲೇಷಿಸತೊಡಗಿದ್ದವು.

ಆದರೆ ೧೯೬೮ರ ಆವೃತ್ತಿಯಲ್ಲಿ ಈ ವಿಶ್ಲೇಷಣೆ ಇನ್ನಷ್ಟು ಆಳವಾಯಿತು. ಇಲ್ಲಿ ಭಾಷೆ ಭಾಷೆಗಳ ಕಾವ್ಯದಲ್ಲಿ ಈ Rhythm ಅನ್ನು ಗುರುತಿಸುವ ಒಂದು ಸೂಕ್ಷ್ಮತೆ ಕಾಣಿಸಿತು.

೧೯೯೦ರ ಆವೃತ್ತಿಯಲ್ಲಿ ಅದು ಇನ್ನಷ್ಟು ಸೂಕ್ಷ್ಮತರವಾಯಿತು. ಇಲ್ಲಿ ಮುಖ್ಯವಾದುದು features of sonds, with in a range of regularity ಇದರಿಂದ ಸಾಧ್ಯವಾಗುವ patterned recurrance. ನಿಯಂತ್ರಣದೊಳಗಿರುವ ಶ್ರೇಣಿಯೊಳಗೆ ಒಂದು ಮಾದರಿಗೊಳಪಟ್ಟ ಆವರ್ತನವನ್ನು ಒಳಗೊಂಡ ಒಂದು ವಿಶಿಷ್ಟ ಭಾಷೆಯ ಕಾವ್ಯದ ವಲನ (ಚಲನ) ವನ್ನು Rhythm ಎಂದು ಕರೆಯಬಹುದು.

ಇಲ್ಲಿ ಕಾವ್ಯ ಎಂಬ ಪದ ಬಳಕೆಯಾಗಿರುವುದರಿಂದ ಅದಕ್ಕೊಂದು ಆರ್ಥದ ಆಗತ್ಯವೂ ಇದೆಯೆಂಬುದನ್ನು ಸೂಚಿತವಾದಂತಿದೆ.

ಈಗ ಮತ್ತೊಮ್ಮೆ ಇಂಗ್ಲಿಷಿನ Rhythm ಎಂಬ ಶಬ್ಧಕ್ಕೆ Encylopaedia Britannica ದಲ್ಲಿ ಬಂದಿರುವ ವಿಶ್ಲೇಷಣೆ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಲಯ ಎಂಬ ಶಬ್ದದ ವಿಶ್ಲೇಷಣೆಯನ್ನು ಗಮನಿಸಬಹುದು.

ಆರಂಭದಲ್ಲಿ ಇದರ ವಿಶ್ಲೇಷಣೆ ನಡೆಸಿದ ತೀ. ನಂ. ಶ್ರೀ. ಅವರು ಲಯವನ್ನು ವಿಶ್ಲೇಷಿಸಿದುದು ಹೀಗೆ: ತಾಳಗಳು ಬೀಳುವಾಗ ಒಂದಕ್ಕೊಂದಕ್ಕೆ ನಡುವೆ ಒಂದೇ ಸಮನಾದ ಕಾಲದ ಅಂತರ ಇರುತ್ತದೆಂಬುದು ಅನುಭವದ ವಿಷಯ. ಹೀಗೆ ನಿಯತವಾದ ಕಾಲದ ಅಂತರದಲ್ಲಿ ತಾಳಗಳು ಆವರ್ತನೆಯಾಗುವುದಕ್ಕೆ ಲಯ (Rhythm) ಎಂದು ಹೆಸರು.

ಇಂಗ್ಲಿಷಿನ ಛಂದಸ್ಸಿನಲ್ಲಿ ಬಳಕೆಯಲ್ಲಿರುವ ರಿದಂ (Rhythm) ಎಂಬುದು ಇದಕ್ಕೆ ಸಂವಾದಿಯಾದುದು, ಎಂದು ನಾರಾಯಣ ಪ್ರಸಾದ್‌ ಸೂಚಿಸುತ್ತಾರೆ.

ಇದಕ್ಕೆ Rhythm is percived in a sequence of events when they recur so regulalrly, equal to one another or symmetrical ಎಂಬ ವ್ಯಾಖ್ಯಾನವೂ ಇದೆ.

Encylopaedia Brihanamica ದಲ್ಲಿ ಮೂಡಿರುವ ವಿಶ್ಲೇಷಣೆಯೊಡನೆ ಮೇಲಿನ ಮೂರು ಅಭಿಪ್ರಾಯವನ್ನು ತುಲನೆ ಮಾಡಬಹುದು. ಈ ನಾಲ್ಕರಲ್ಲೂ ಸಮಾನವಾದುದು ನಿರ್ದಿಷ್ಟವಾದ ಆವರ್ತನ ಎಂಬುದು ಮತ್ತು ಈ ಆವರ್ತನೆಗೆ ಮೂಲದಲ್ಲಿ ಮುಖ್ಯವಾದುದು ಅಂತರ ಅಥವಾ ತಾಳ ಎಂಬುದು. ಇಲ್ಲಿ ‘ತಾಳ’ ಎಂಬ ಪದದ ಬಳಕೆ ತೀನಂಶ್ರೀಯವರಲ್ಲಿ ಆಗಿದೆ. ಆದರೆ ಈ ‘ತಾಳ’ ಎನ್ನುವುದಕ್ಕೆ ಬದಲಾಗಿ Encylopaedia Brihanamica ಇದನ್ನು with in a rangae of regularity ಎಂದು ಇನ್ನಷ್ಟು ಸೂಕ್ಷ್ಮವಾಗಿ ವಿಶ್ಲೇಷಿಸಿದೆ. ಅಂದರೆ ಇಲ್ಲಿ ತಾಳದ ಬದಲು ನಿಯಂತ್ರಿತವಾದ ಶ್ರೇಣಿಯ ಅಂತರ ಎಂದು ಸೂಚಿಸಿರುವುದು ಗಮನಾರ್ಹ. ಇಂಥ ಕೆಲವು ನಿಯಂತ್ರಿತ ಶ್ರೇಣಿಗಳು ಎಂಬ ಮಾತಿನಲ್ಲಿ ಮೂರು ಮಾತ್ರೆಯ ಗಣಗಳು, ನಾಲ್ಕು ಮಾತ್ರೆಯ ಗಣಗಳು, ಐದು ಮಾತ್ರೆಯ ಗಣಗಳು ಎಂದು ಗುರುತಿಸಬಹುದು. (ಮಾತ್ರಾಗಣ ವ್ಯವಸ್ಥೆಯಾದಾಗ) ಅಥವಾ ಅಂಶಗಣ ರಚನೆಯಾದಾಗ ಅವುಗಳನ್ನು ಬ್ರಹ್ಮಗಣ, ವಿಷ್ಣುಗಣ ಮತ್ತು ರುದ್ರಗಣಗಳೆಂದು ವಿಶ್ಲೇಷಿಸಬಹುದು.

ಅನಂತರ ಇಂಥ ಕೆಲವು ನಿಯಂತ್ರಿತ ಶ್ರೇಣಿಯ ಅಂತರದಲ್ಲಿ patterned recurrance ಆಗುವುದು ಅಂದರೆ ಮಾದರಿಗೊಂಡ ಒಂದು ಆವರ್ತನ ಎಂದು ಕರೆಯಬಹುದು. ಹೀಗೆ ಮಾದರಿಗೊಂಡ ಆವರ್ತನೆ ನಿಯಂತ್ರಿತ ಶ್ರೇಣಿಗಳಲ್ಲಿ ಆಗುವಂಥ ಅಂತರ ಅಥವಾ ಕಾಲವನ್ನು ‘ಲಯ’ ಎಂದು ಕರೆಯಬಹುದು.

ಆಶ್ಚರ್ಯವೆಂದರೆ ಈ ಅಂತರ (= ಕಾಲ) ಕೇವಲ ಅಂತರ ಮಾತ್ರವಾಗಿರದೆ ಆರ್ಥಘಟಕವೂ ಆಗಿರುವುದು ಗಮನಾರ್ಹ. ಭಾಷೆ ಎಂದಾಗಲೇ ಈ ಕಾಲ ಅಥವಾ ಅಂತರ ಆರ್ಥವನ್ನೂ ಒಳಗೊಂಡಿದ್ದು ಎಂದು ಗ್ರಹಿಸಬೇಕಾಗುತ್ತದೆ. ಇಂಥ ಅರ್ಥ ಘಟಕವಾದ ಅಂತರವು (= ಕಾಲವು) ನಿಯಂತ್ರಿತವಾದ ಶ್ರೇಣಿಗಳಲ್ಲಿ ಮಾದರಿಗೊಂಡು ಆವರ್ತನೆಯಾಗುವುದು ಲಯದ ವೈಶಿಷ್ಟ್ಯ.

ಇದನ್ನು ಇನ್ನಷ್ಟು ವಿಶದಪಡಿಸುವುದಾದರೆ: ಮೂರು ಮಾತ್ರೆ ಅಥವಾ ನಾಲ್ಕು ಮಾತ್ರೆ ಅಥವಾ ಐದು ಮಾತ್ರೆಗಳ ಅಥವಾ ಆರು ಮಾತ್ರೆ ಮತ್ತು ವಿಭಿನ ಶ್ರೇಣಿಗಳಿಂದ ನಿಯಂತ್ರಿತವಾದ ಅರ್ಥ ಕಾರಣವಾದ ಕಾಲದ ಅಥವಾ ಅಂತರದ ಮಾದರಿಗೊಳಪಟ್ಟ ಆವರ್ತನವನ್ನೇ ‘ಲಯ’ ಎನ್ನುವುದು.

ಇಷ್ಟು ಹೇಳಿದ ಗಮನಿಸಬೇಕಾದ ಮತ್ತೊಂದು ಪ್ರಮುಖವಾದ ಅಥವಾ ಗಮನಾರ್ಹ ಆಗಿರುವ ಅಂಶವೆಂದರೆ ಅರ್ಥ ಕಾರಣವಾದ ಈ ಅಂತರ (= ಕಾಲ) ಕ್ಕೆ ತನ್ನದೇ ಆದ ಆಳ, ಅಗಲ ಮತ್ತು ವಿಸ್ತಾರಗಳು ಇವೆಯೆಂಬುದು. ಇದರ ಜೊತೆ ಜೊತೆಗೇ ಇಲ್ಲಿ ಬಳಕೆಯಾಗುವ ಪದಗಳಲ್ಲಿರುವ ಸರಳ ಹಾಗೂ ಪರುಷಾಕ್ಷರಗಳ ವಿಭಿನ್ನವಾದ ಸಂಯೋಜನೆಗಳ ರಚನೆಗಳ ಸಾಧ್ಯತೆ. ಇವು ‘ಲಯ’ ವೈವಿಧ್ಯವನ್ನು ಹೆಚ್ಚಿಸುತ್ತದೆ.

ಅಲ್ಲದೆ ಅಗಲದೊಂದಿಗೆ ಆಳ (ಕಾಶ್ಮೀರ), ಆಳದೊಂದಿಗೆ ಎತ್ತರ (ರಾಜೇಂದ್ರ), ಆಳದೊಂದಿಗೆ ವಿಸ್ತಾರ (ಸೀತಾ) ಹೀಗೆ ಎಂಟು ಬಗೆಯ ವೈವಿಧ್ಯ ಮತ್ತೆ ಈ ಅಂತರದ ವೈವಿಧ್ಯ ಸತ್ವವನ್ನು ಗುಣಿತಗೊಳಿಸುತ್ತದೆ. (ಇಷ್ಟು ಸಾಲದೆಂಬಂತೆ ಈ ‘ಕಾಲ’ ದ ಆಳ ಅಗಲ ಮತ್ತು ಎತ್ತರಗಳ ವಿವಿಧ ಸಾಧ್ಯತೆಗಳೇ ಅಲ್ಲದೆ ಭಾಷೆಯಲ್ಲಿರುವ ಅಲ್ಪಪ್ರಾಣ ಮತ್ತು ಮಹಾಪ್ರಾಣಾಕ್ಷರಗಳ ವಿಧವಿಧವಾದ ಸಂಯೋಜನೆಗಳು ಈ ‘ಕಾಲ’ದ ಬಹುಮುಖತೆಯನ್ನು ಹೆಚ್ಚಿಸುತ್ತಲೇ ಹೋಗುತ್ತವೆ. ಇವನ್ನೆಲ್ಲ ಆಳದಲ್ಲಿ ಆರ್ಥ ಕೂಡಾ ನಿಯಂತ್ರಿಸುವುದು ಇದರ ‘ಶಕ್ತಿ’ ಸಾಧ್ಯತೆಗಳ ಬಹುಮುಖಗಳನ್ನು ಇನ್ನಷ್ಟು ವಿಶಿಷ್ಟ ಗೊಳಿಸುತ್ತದೆ.)

ಈ ಮೇಲೆ ಹೇಳಿದ ‘ಲಯ’ ದ ಅಂತರಕ್ಕಿರುವ ಸಾಧ್ಯತೆಗಳನ್ನು ಸೋದಾಹರಣವಾಗಿ ಗಮನಿಸಬಹುದು. ಮೊದಲಿಗೆ ಈ ಅಂಶವು ಬಹಳ ಕಿರಿದಾಗಿರುವ ಉತ್ಸಾಹ ಲಯದ ಮೂರು ಮಾತ್ರೆಗಳ ಗಣದ ಸಾಧ್ಯತೆಗಳಲ್ಲಿ ಕೆಲವನ್ನು ಗಮನಿಸಬಹುದು.

ಮೂರು ಮಾತ್ರೆಗಳ ಗಣಗಳಲ್ಲಿ ಬರುವ ವಿವಿಧ ವಿನ್ಯಾಸಗಳನ್ನು ಗುರುತಿಸುವ ಮೊದಲು ಕೇವಲ ಮೂರು ಮಾತ್ರೆಗಳ ಕೆಲವು ಪದ (ಗಣ) ಗಳನ್ನು ಗಮನೊಸೋಣ.

ಅಂಸ
ಹಂಸ
ಕಂಸ
ಧ್ವಂಸ

ಮೇಲಿನ ನಾಲ್ಕು ಪದಗಳೂ ಮೂರು ಮಾತ್ರೆಗಳ ಮಾನದವು. ಆದರೆ ಅಂಸ ಪದದಲ್ಲಿ ಬರುವ ಬಿಂದು ಹಂಸ ಪದದಲ್ಲಿ ಬರುವ ಬಿಂದುವಿಗಿಂತ ಭಿನ್ನ. ಅಲ್ಲದೆ ಮೊದಲ ಪದದ ಆದಿಯಲ್ಲಿ ಆ ಎಂಬ ಸ್ವರವಿದ್ದರೆ ಎರಡನೆಯರಲ್ಲಿ ‘ಹ’ ಎಂಬ ಅವರ್ಗೀಯ ವ್ಯಂಜನವಿದೆ. ಉಚ್ಚಾರಣೆಯಲ್ಲಿ ಭಿನ್ನತೆ ತನಗೆ ತಾನೇ ವೇದ್ಯ. ಕಂಸ- ಇಲ್ಲಿವರ್ಗಿಯ ವ್ಯಂಜನವಾದ ಕ ಇದ್ದರೆ ಮುಂದಿನ ಧ್ವಂಸದಲ್ಲಿ ‘ಧ್ವ’ ಎಂಬ ಮಹಾಪ್ರಾಣಾಕ್ಷರದ ಜೊತೆಗೆ ‘ವ’ ಕಾರ ಕೂಡ ಸೇರಿ ಉಚ್ಚಾರಣೆ ಭಿನ್ನವಾಗಿದೆ.

ಮೇಲಿನ ನೋಟಕ್ಕೆ ಈ ನಾಲ್ಕು ಪದಗಳು ಮೂರು ಮಾತ್ರೆಗಳೇ ಆಗಿದ್ದರೂ ವ್ಯಂಜನಗಳ ಭಿನ್ನತೆಯಿಂದ ಮತ್ತೆ ಉಚ್ಚಾರದ ಕಾಲದಿಂದ ಭಿನ್ನವಾಗಿದೆ.

ಕಲಿತ
ಬಲಿತ
ದಲಿತ
ವಲಿತ

ಈ ನಾಲ್ಕು ಪದಗಳಲ್ಲಿಯೂ ಎರಡು ಮತ್ತು ಮೂರನೆ ವರ್ಣಗಳು ಒಂದೇ ಆಗಿದ್ದರೂ ಆರಂಭದ ವರ್ಣಗಳ ಕ, ಬ, ದ ಮತ್ತು ವ -ಗಳು ಭಿನ್ನವಾಗಿವೆ, ಉಚ್ಚಾರಣೆಯಲ್ಲಿ ಭಿನ್ನತೆಯುಂಟಾಗಿದೆ, ಅವುಗಳ ಉಚ್ಚಾರಣಾ ಸ್ಥಾನಗಳ ಭಿನ್ನತೆಯಿಂದಾಗಿ ಮೊದಲಿನದು () ಕಂಠ್ಯ; () ಔಷ್ಠ್ಯ, ದಂತ್ಯ, ದಂತೋಷ್ಠ್ಯ

ನರಂ
ಗರಂ
ಅಹಂ
ಗಿಹಂ

ಇಲ್ಲಿ ನಾಲ್ಕು ಪದಗಳಲ್ಲಿ ಕೊನೆಗೆ ಬಿಂದುವಿದೆ ಅಥವಾ ‘ಮ್‌’ ವ್ಯಂಜನವಿದೆ. ಆದರೆ ಮೊದಲೆರಡು ಪದಗಳಲ್ಲಿ ಕೊನೆಯ ವರ್ಣದಲ್ಲಿ ವ್ಯತ್ಯಾಸವಿಲ್ಲ. ಆದರೆ ಉಳಿದೆರಡು ಸಾಲುಗಳ ವರ್ಣಗಳಲ್ಲಿ ‘ಹ’ ಇದೆ.

ಇಲ್ಲಿಯೂ ಉಚ್ಚಾರಣೆ ಭಿನ್ನವಾಗಿರುವುದು ವೇದ್ಯ. ಎರಡು ಗಣಗಳ ಕೆಲವು ರಚನೆಗಳನ್ನು ಗಮನಿಸಬಹುದು.

ಅಸ್ವತಂತ್ರೆ
ಸುಸ್ವತಂತ್ರೆ
ಹೇ ಸುವರ್ಣೆ
ಹೇ ಅವರ್ಣೆ
ಉಷಸ್‌ಪೀತೆ

ದಿವಾಶ್ವೇತೆ
ಅಸಾಮಾನ್ಯೆ
ಲೋಕಮಾನ್ಯೆ
ನಮಸ್‌ಸತ್ಯೆ
ನಮೋನಿತ್ಯೆ

ಇಲ್ಲಿ ಮೊದಲ ಎರಡು ಸಾಲುಗಳಲ್ಲಿ ಅಂತ್ಯಪದ ‘ತಂತ್ರೆ’ ಸಮಾನವಾಗಿದೆ. ಆದರೆ ಮೊದಲ ಸಾಲಿನಲ್ಲಿ ಮೊದಲಕ್ಷರ ‘ಅ’ ಆದರೆ ಎರಡನೆ ಸಾಲಿನ ಮೊದಲ ಆಕ್ಷರ ‘ಸು’ ಆಗಿದೆ; ಉಚ್ಚಾರಣೆಯಲ್ಲಿ ಸೂಕ್ಷ್ಮ ಬದಲಾವಣೆಯಿದೆ.

ಮೂರು ಮತ್ತು ನಾಲ್ಕನೆ ಸಾಲುಗಳಲ್ಲಿ ಎರಡೆರಡು ಪದಗಳಿವೆ. ಎರಡೂ ಪದಗಳ ಸಂಭೋಧನಾರ್ಥದ ‘ಹೇ’ ಇಂದಲೇ ಆರಂಭವಾಗಿದ್ದರೆ ಮುಂದಿನ ಪದಗಳು ಸುವರ್ಣೆ ಮತ್ತು ಅವರ್ಣೆ ಎಂದಿದ್ದೂ ಇಲ್ಲಿಯ ಗಣವಿನ್ಯಾಸ ಎರಡು ಮಾತ್ರೆಗಳು ಮತ್ತು ನಾಲ್ಕು ಮಾತ್ರೆಗಳ ಗಣದಿಂದ ಕೂಡಿರುವುದೇ ಅಲ್ಲದೆ ಇಲ್ಲಿ ಮೂರು ಮಾತ್ರೆಗಳ ಗಣ ಭಿನ್ನತೆ ಪಡೆದಿದೆ. ಇದನ್ನು ಗಣಪರಿವೃತ್ತಿ ಎಂದಿದ್ದಾರೆ ತೀ.ನಂ. ಶ್ರೀ. ಅವರು. ಜೊತೆಗೆ ಅವರ್ಣೆ ಮತ್ತು ಸುವರ್ಣೆ ಪದಗಳ ಉಚ್ಚಾರಣೆಯಲ್ಲಿಯೂ ಬಿನ್ನತೆ ಗೋಚರವಾಗುತ್ತದೆ

ಐದು ಮತ್ತು ಅರನೆ ಪದಗಳು ಆರು ಮಾತ್ರೆಗಳ ಗಣದಿಂದ ಕೂಡಿದ್ದರೂ ಇಲ್ಲಿ ಸಾಲು ಸಾಲಿನಲ್ಲಿ ಗಣವಿನ್ಯಾಸ ಭಿನ್ನವಾಗಿದೆ. ಐದನೆ ಸಾಲಿನ ಮೊದಲಲ್ಲಿ ಮೂರು ಮಾತ್ರೆಗಳ ಗಣ (ಉಷಸ್‌ = ⋃ –) ಇದೆ. ಆದರೆ ಆರನೆ ಸಾಲಿನ ಮೊದಲ ಮೂರು ಮಾತ್ರೆಗಳ ಗಣವೂ ಮೂರು ಮಾತ್ರೆಗಳದೇ ಆಗಿದ್ದರೂ ಇಲ್ಲಿ (ದಿವಾ = ⋃ –) ಮೊದಲ ಲಘುವಾದ ಮೇಲೆ ದೀರ್ಘಾಕ್ಷರದಿಂದ ಗುರು ಇದ್ದರೆ ಹಿಂದಿನ ಸಾಲಿನಲ್ಲಿ ವ್ಯಂಜನ ಸೇರಿದ ‘ಶ’ ವರ್ಣ ಗುರುವಾಗಿದೆ. ಅಂದರೆ ಗಣವಿನ್ಯಾಸದಲ್ಲಿ ದೀರ್ಘದ ಬದಲು ವ್ಯಂಜನಯುತ ಗುರುವಿದೆ.

ಏಳು ಮತ್ತು ಎಂಟನೆಯ ಸಾಲುಗಳು ಇನ್ನಷ್ಟು ಭಿನ್ನ : ಅರು ಮಾತ್ರೆಗಳ ಒಂದೇ ಗಣವಿದೆ. ಎಳನೆಯ ಸಾಲಿನಲ್ಲಿ ಅಸಾಮಾನ್ಯೆ (⋃ – – ⋃) ಎಂದು; ಮುಂದಿನ ಸಾಲಿನಲ್ಲಿ ಮೂರು ಮೂರು ಮಾತ್ರೆಗಳ ಎರಡು ಭಿನ್ನ ಗಣಗಳೇ ಇವೆ – ಲೋಕ (= – ⋃) ಮಾನ್ಯ (– ⋃) ಎಂದು, ಒಂಬತ್ತು ಮತ್ತು ಹತ್ತನೆ ಸಾಲುಗಳ ರಚನೆ ಕೂಡ ಭಿನ್ನವಾದದುವು.

ಇಲ್ಲಿಯೂ ಅಷ್ಟೇ ಮೊದಲ ಸಾಲಿನಲ್ಲಿ ಆರು ಮಾತ್ರೆಗಳ ಒಂದೇ ಗಣ (⋃ – – ⋃) ಇದ್ದರೆ ಎರಡನೆ ಸಾಲಿನಲ್ಲಿ ಮೂರು ಮಾತ್ರೆಗಳ ಎರಡು ಗಣಗಳಿವೆ (⋃ –, – ⋃) ಆದರೆ ಗುರು ಲಘುಗಳ ಸ್ಥಾನಗಳಲ್ಲಿ ಭಿನ್ನತೆಯಿಲ್ಲದಿದ್ದರೂ ಇಲ್ಲಿ ಪದಾದಿಯ ಎರಡನೆ ಪದದ ಗುರುವಿನಲ್ಲಿ (ಮಸ್‌, ಮೋ) ಭಿನ್ನತೆಯಿದೆ.

ಎರಡು ಗಣಗಳ ಯೋಜನೆಯಲ್ಲಿ ಹೀಗೆ ಕೆಲವು ವೈವಿಧ್ಯಗಳನ್ನು ಗುರುತಿಸಿದ ಮೇಲೆ ಪ್ರತಿ ಪಂಕ್ತಿಯಲ್ಲಿ ಅಂದರೆ ಮೂರು ಮಾತ್ರೆಗಳ ನಾಲ್ಕು ಗಣಗಳ ಯೋಜನೆಯಲ್ಲಿ ಸಾಧ್ಯವಾಗುವ ಕೆಲವು ವೈವಿಧ್ಯಗಳನ್ನು ಈಗ ಗುರುತಿಸಬಹುದು.

ಅನಂತದಿಂ ದಿಗಂತದಿಂ
ಅನಂತತಾ ದಿಗಂತದಿಂ

ಈ ಎರಡು ಸಾಲುಗಳ ಗಣ ವಿನ್ಯಾಸ ದ್ವಿಲಗ ರಚನೆಯದು. ಅಂದರೆ
⋃ – ⋃ –
⋃ – ⋃ –

ಆದರೆ ಮೊದಲ ಸಾಲಿನಲ್ಲಿ ಅನಂತದಿಂ ದಿಗಂತದಿಂ ಎಂಬಲ್ಲಿ ಒಂದು ಬಗೆಯ ವೇಗವೇ ಇದೆ. ಅದು ಮೊದಲು ಅನಂತವನ್ನು ಅನಂತರ ದೃಗ್ಗೋಚರವಾದ ದಿಗಂತವನ್ನು ಗಮನಿಸಿ ಅಲ್ಲಿಂದ ಚಾಲನೆಗೊಂಡರೆ ಮುಂದಿನ ಸಾಲಿನಲ್ಲಿಯೂ ದ್ವಿಲಗ (⋃ – ⋃ –) ಇದ್ದರೂ ಮೊದಲ ಪದ ಇಲ್ಲಿ ಅನಂತತಾ ಎಂದು ದೀರ್ಘವಾಗಿ ಅನಂತದಿಂ ಎಂಬುದಕ್ಕಿಂತ ಭಿನ್ನ ವಿಸ್ತಾರವನ್ನು ಪಡೆಯುತದೆ. ಇದೆ ರೀತಿಯ ದ್ವಿಲಗ ಕ್ರಮ ವೈದಿಕ ಛಂದಸ್ಸಿನಲಿ (ಗಾಯತ್ರಿಯಲ್ಲಿ) ಹೀಗಿದೆ-

ವಿಮೋಮದೇ ವಿವಕ್ಷಸೇ
ಮರುದ್ಭಿರಗ್ನಿ ಗಹಿ
ಮಹೇರಭಾಯ ಚಕ್ಷುಸೇ

ಇಲ್ಲಿಯ ಲಯ ಅನಂತದಿಂ ಸಾಲುಗಳ ಲಯದಿಂದ ಭಿನ್ನವಾಗಿರುವುದು ತಟ್ಟನೆ ಕಿವಿಗರಿವಾಗುತ್ತದೆ.

ಈಗ ಎರಡು ಸಾಲುಗಳ ಒಂದು ಘಟಕ ಗಮನಿಸಬಹುದು:

ಕವಿಧಮನಿಯ ರಕುತದಲ್ಲಿ
ತೇಲಾಡಿತು ಹಿಮಾಲಯಾ

ಮೊದಲು ಸಾಲಿನಲ್ಲಿ ಕವಿಧಮನಿಯ (⋃⋃ + ⋃⋃⋃⋃) ರಕುತದಲ್ಲಿ (⋃⋃⋃ – ⋃) ಎರಡು ಮತ್ತು ನಾಲ್ಕು ಮಾತ್ರೆಗಳು ಸೆರಿದ ಆರು ಮಾತ್ರೆಗಳ ಗಣವಿದ್ದರೆ ರಕುತದಲಿ (⋃⋃) ಮುಂದೆ ಬರುವ ಆರು ಮಾತ್ರೆಗಳ ವಿನ್ಯಾಸ ಮೂರು ಮಾತ್ರೆಗಳ ರೀತಿ (⋃⋃⋃, ⋃ –) ಯಲ್ಲಿದೆ. ಅಂದರೆ ಇಲ್ಲಿಯ ವಿನ್ಯಾಸ ಭಿನ್ನಭಿನ್ನವಾಗಿದೆ. ಮುಂದಿನ ಸಾಲಿನ ವಿನ್ಯಾಸ ಇನ್ನಷ್ಟು ಭಿನ್ನವಾದದ್ದು.

ಇಲ್ಲಿಯ ಹನ್ನೆರಡು ಮಾತ್ರೆಗಳು ಆರು ಮತ್ತು ಆರು ಮಾತ್ರೆಗಳ ಗಣವಿನ್ಯಾಸಗಳಿಂದ ಕೂಡಿ ಭಿನ್ನವಾಗಿದೆ.

ಮೊದಲ ಗಣ ತೇಲಾಡಿತು ( – – ⋃ ⋃) ಎಂಬಲ್ಲಿ ಎರಡು ಗುರುಗಳಾದ ಮೇಲೆ ಎರಡು ಲಘುಗಳು ಒಂದು ವಿಭಿನ್ನ ಅರ್ಥಕ್ಕೆ ಕಾರಣವಾಗುತ್ತದೆ. ಮೊದಲ ಎರಡು ಸಾಲುಗಳಲ್ಲಿ ಕವಿಧಮನಿಯ ರಕುತದಲ್ಲಿ ಆಳವಿದ್ದರೆ ಈಗ ಇಲ್ಲಿ ತೇಲುವ ಮಾಂತ್ರಿಕತೆಯನ್ನು ‘ತೇಲಾಡಿತು’ ಪದದ ಗಣವಿನ್ಯಾಸ ಸೂಚಿಸುತ್ತದೆ. ಹೀಗೆ ತೇಲಿದ್ದು ಯಾವುದು ಎಂದರೆ ಹಿಮಾಲಯಾ (⋃ – ⋃ –) ಅಂಥ ಪೂರ್ವ ಪಶ್ವಿಮ ದಿಕ್ಕುಗಳಿಗೆ ಮಾನದಂಡದಂತಿರುವ ಮಹಾ ಹಿಮಾಲಯವೇ ಇಲ್ಲಿ ತೇಲುವ ಮಾಂತ್ರಿಕತೆಯಿದೆ. ಆಶ್ಚರ್ಯವೆಂದರೆ ಹಿಮಾಲಯಾ ಪದದ ದ್ವಿಲಗ (⋃ – ⋃ –) ಯೋಜನೆ ವಿಲೋಮದೇ, ಅನಂತದಿಂ, ದಿಗಂತದಿಂ, ಅನಂತತಾ, ಅನಂತದಿಂ ಎಂಬ ಪದಗಳ ದ್ವಿಲಗಕ್ಕಿಂತ ಭಿನ್ನವಾಗಿದೆ.

ಇನ್ನು ವರ್ಣಸಂಯೋಜನೆಯ ಕೆಲವು ಉದಾಹರಣೆಗಳನ್ನು ಗಮನಿಸಬಹುದು.

. ಬನದಬಿನದದಿನಿದು ನಿನದ
ಮನದೊಳಾಡುತಿರುವುದು

. ಬುಗುರಿಯೀಯೆ ಶಬರಿಕಾಯೆ
ರಾಮನಿಲ್ಲಿ ಬಂದನೆ

. ಸುಲಿದ ಪಲ್ಲ ಸುಲಲಿತಾಂಗಿಧವಳವಸನದಮೃತಮೂರ್ತಿ

. ಛಲದಲಲನೆ ನಲವಿನೊಲವೆ ಶಿವನ ಭವನ ಭುವನ ಕೀರ್ತಿ

. ಜಟಾಕಟಾಹಸಂಭ್ರಮದ್ರಮನ್ನಿಲಿಂಪನಿರ್ಝರೀ ವಿಲೋಲವೀಚಿವಲ್ಲರೀ

. ಗಿರಿಯ ಬಿತ್ತರ
ಶಿಖರದೆತ್ತರ
ಅನುಭವಿಸುವ ರಸಋಷಿಮತಿಗತಿ ಮಹತ್ತರ.

ಮೇಲಿನ ಉದಹರಣೆಯಲ್ಲಿ ಎರಡೆರಡು ಸಾಲುಗಳ ರಚನೆಯಿದೆ.

ಇದರಲ್ಲಿ ಮೊದಲ ಸಾಲಿನ ರಚನೆಯಲ್ಲಿ ಸರಳಾಕ್ಷರಗಳಿಂದ ಕೂಡಿದ ನಾಲ್ಕು ಗಣಗಳು ಅನಂತರ ಎರಡನೆ ಸಾಲಿನಲ್ಲಿ, ಮೂರು ಮಾತ್ರೆಗಳ ಮೂರು ಗಣಗಳು ಮತ್ತೆ ಒಂದು ಗುರುವಿದೆ.

ಇಲ್ಲಿಯ ರಚನೆ ಮೂರು ಮಾತ್ರೆಗಳ ನಾಲ್ಕು ಗಣಗಳ ಸಾಲಿನ ಮುಂದುವರಿಕೆಯಾಗಿ ಎರಡನೆ ಸಾಲಿಗೂ ರಚನೆ ಮುಂದುವರಿದಿರುವುದು- ಯತಿಗಾಗಿ ಕೊನೆಗೆ ಗುರುವನ್ನು ಪಡೆದಿರುವುದು.

ಮುಂದಿನ ಎರಡು ಸಾಲುಗಳಲ್ಲಿ ಮಾತ್ರೆಗಳ ಲೆಕ್ಕ ಮೊದಲ ಎರಡು ಸಾಲುಗಳಂತೆಯೇ ಇದ್ದರೂ ಇಲ್ಲಿನ ರಚನೆ ಭಿನ್ನವಾಗಿದೆ. ಒಂದನೆಯದು ಮೊದಲ ಸಾಲಿನಲ್ಲಿ ಒಳಪ್ರಾಸವಿರುವುದು ಯೀಯೆ | ಕಾಯೆ ಎಂಬ ಪದಗಳಲ್ಲಿ, ಹಿಂದೆ ಗಮನಿಸಿದ ಮೊದಲ ಸಾಲಿಗಿಂತ ಭಿನ್ನವಾಗಿಯೂ ಇದೆ ಮೂರನೆ ಉದಾಹರಣೆಯಲ್ಲಿ ಇಲ್ಲಿಯ ಗಣ ವಿನ್ಯಾಸ, ಎಂಟು ಸಾಲಿನಲ್ಲಿ ಇರುವುದೆಲ್ಲ ಸರಳವಾದ ಮೂರು ಮೂರು ಮಾತ್ರೆಗಳ ಗಣಗಳೇ. ಮೊದಲ ಗಣ ಸರಳವಾಗಿ ಮೂರು ಲಘುಗಳಿಂದ ಕೂಡಿದ್ದರೂ ಇಲ್ಲಿಯೂ ಹೀಗೇ ಇದೆ. ಆದರೆ ಎರಡು ಮತ್ತು ನಾಲ್ಕನೆ ಗಣಗಳ ವಿನ್ಯಾಸ ಲಘುಗಳಿಂದ ಆಗಿಲ್ಲ; ಗುರುಲಘುಗಳ (– ⋃; – ⋃;) ವಿನ್ಯಾಸದಿಂದಾಗಿದೆ. ಒಂದೆ ಸಾಲಿನ ರಚನೆಗಿಂತ ಭಿನ್ನವಾದ ರಚನೆ ಇಲ್ಲಿದ್ದು ಗಣವಿನ್ಯಾಸ – ಲಯವಿನ್ಯಾಸದಲ್ಲಿ ವೈವಿಧ್ಯವನ್ನು ತಂದಿದೆ.

ಮೂರು ನಾಲ್ಕನೆ ಉದಾಹರಣೆಗಳಲ್ಲಿ
ಮೂರು ಮಾತ್ರೆಗಳ ನಾಲ್ಕು ಗಣಗಳಿಗೆ ಬದಲಾಗಿ
ಎಂಟು ಗಣಗಳಿಗೆ ಇಲ್ಲಿ ವಿಸ್ತಾರವಿದೆ.

ಐದನೆಯ ಉದಾಹರಣೆಯಲ್ಲೂ ಮೂರು ಮೂರು ಮಾತ್ರೆಗಳ ಹನ್ನೆರಡು ಗಣಗಳೇ ಇರುವುದು.

ಒಂದು ರೀತಿಯಲ್ಲಿ ಇಲ್ಲಿ ಗುರು ಲಘು ವಿನ್ಯಾಸ-

ಅನಂತದಿಂ ದಿಗಂತದಿಂ
ಅನಂತತಾ ದಿಗಂತದಿಂ

ಎಂಬ ರೀತಿಯ ದ್ವಿಲಗ (⋃ –) ಗಣಗಳಿಂದಲೇ ಕೂಡಿದ್ದರೂ ಇಲ್ಲಿರುವ ದ್ವಿಲಗ (⋃ –) ರಚನೆ ‘ಅನಂತದಿಂ’ ರಚನೆಯ ವಿನ್ಯಾಸಕ್ಕಿಂತ ಭಿನ್ನವಾಗಿದೆ.

ಅದರಲ್ಲಿಯೂ ಇಲ್ಲಿ ಬರುವ ಸಂಯುಕ್ತಾಕ್ಷರ ರಚನೆ ಲಯದಲ್ಲಿ ಅರ್ಥಾನು ಸಾರಿಯಾಗಿ ಶಿವನ ಮುಡಿಯಲ್ಲಿರುವ ‘ಗಂಗಾ’ ನಿರ್ಝರಿಯ ಸ್ವರೂಪವನ್ನೇ ಆಭಿನಯಿಸುವಂತೆಯೇ ಇದೆ. ಜೊತೆಗೆ ಇಲ್ಲಿನ ರಚನೆಯಲ್ಲಿ ಉಚ್ಚರಿಸುವಾಗ ಇಲ್ಲಿ (⋃ –) ಈ ದ್ವಿಲಗದ ಲಕ್ಷಣವೇ ಬೇರೆಯಾಗಿ ಮೊದಲ ಲಘು ಹುಸಿಯಾಗಿ ಇದೇ ರಚನೆ (– ⋃) ಗುರು ಲಘುಗಳಿಂದ ಮೂರು ಮಾತ್ರೆಗಳ ಗಣಗಳಂತೆ ಮತ್ತೆ ಕೊನೆಗೊಂದು ಗುರ ಯತಿ ಸ್ಥಾನವಾಗಿ ಇರುವಂತೆ ಭಾಸವಾಗಿಬಿಡುತ್ತದೆ.

ಇದರ ಇನ್ನೊಂದು ವಿಶಿಷ್ಟತೆ ಈ ಸಾಲಿನ ರಚನೆ ಮುಂದಿನ ಸಾಲಿಗೂ ವಿಸ್ತಾರಗೊಳ್ಳುವುದು – ಕೇವಲ ಲಯದ ಕಾರಣವಾಗಿ ಅಲ್ಲ; ಅರ್ಥದ ಕಾರಣವಾಗಿಯೂ ಎಂಬುದು ತಿಳಿದಾಗ ಮೂರು ಮಾತ್ರೆಗಳ ಗಣ ವಿನ್ಯಾಸದಲ್ಲಿ ಪ್ರತಿಭೆ ಸಾಧಿಸಬಹುದಾದ ವೈವಿಧ್ಯಗಳತ್ತ ನಮ್ಮ ಮನಸ್ಸು ಓಡುತ್ತದೆ.

ಆರನೆಯ ರಚನೆಗೆ ಬಂದರೆ ಮೂರು ಮಾತ್ರೆಗಳ ವಿನ್ಯಾಸದಲ್ಲಿ ಕವಿ ತರಬಯಸುವ ವೈವಿಧ್ಯಗಳತ್ತ ನಮ್ಮ ಮನಸ್ಸು ಓಡುತ್ತದೆ.

ಇಲ್ಲಿನ ಮೊದಲ ಸಾಲಿನಲ್ಲಿ ಮೂರು ಮಾತ್ರೆಗಳ ಎರಡು ಗಣಗಳು ಮತ್ತು ಒಂದು ಗುರುವಿದೆ (ಯತಿ ಸ್ಥಾನವಾಗಿ) ಅದೇ ರೀತಿ ಎರಡನೆಯ ಸಾಲಿನ ರಚನೆಯೂ ಇದೆ. ಜೊತೆಗೆ ಇರುವ ಅಂತ್ಯಪ್ರಾಸ (ಯತಿ ಸ್ಥಾನವನ್ನು ನಿರ್ದೇಶಿಸುತ್ತದೆ. ಮೂರನೆಯ ಸಾಲಿಗೆ ಬಂದರೆ ಮತ್ತೆ ಅಂತ್ಯಪ್ರಾಸ ಇರುವುದರ ಜೊತೆಗೆ ಇಲ್ಲಿನ ಮೂರು ಮಾತ್ರೆಗಳ ಗಣವಿನ್ಯಾಸ ವಿಶೇಷ ರೀತಿಯದಾಗಿ ಆರು ಮಾತ್ರೆಗಳು (ಅನುಭವಿಸುವ = ⋃⋃⋃⋃⋃⋃) ಅನಂತರ ಎರಡೆರಡು ಮಾತ್ರೆಗಳ (ರಸಋಷಿಮತಿಗತಿ = ⋃⋃⋃⋃⋃⋃⋃⋃) ಎಂಟು ಮಾತ್ರೆಗಳು ಅನಂತರ ಮಹತ್ತರ (⋃ – ⋃ –) ಎಂಬ ಆರು ಮಾತ್ರೆಗಳ ಗಣಗಳಿಂದ ಕೂಡಿ ಮೂರು ಮಾತ್ರೆಗಳ ಗಣಗಳ ಬದಲು ಆರು ಮಾತ್ರೆಗಳ, ಎಂಟು ಮಾತ್ರೆಗಳು ಮತ್ತು ನಾಲ್ಕು ಮಾತ್ರೆಗಳು ಮೇಲೆ ಒಂದು ಗುರು ಹೀಗಾಗಿ ವಿಭಿನ್ನ ಸಂಯೋಜನೆಗಳನ್ನು ಪಡೆದಿದೆ.

ಇಷ್ಟೇ ಅಲ್ಲದೆ ಇನ್ನು ಕೆಲವು ಉದಾಹರಣೆಗಳನ್ನು ನೀಡಲಾಗಿದೆ.

ಢಂ ಎನುತ್ತ ಢಮುಕಿ ಹೊಡೆದು
ಢಂ ಢಣಣಣ ಢಮ್ಎನುತ್ತ
ಢಣ ಢಣ ಢಣ ಢಮ್ಎನುತ್ತ
ಢಣಂ ಢಣಂ ಢಣ್ಎನುತ್ತ
ಢಣ ಢಣ ಢಣ ಢಣರು ಗುಟ್ಟಿ
ತನನ ತನನ ತಂ ಎನುತ್ತ

ಎಂಬ ಉದಾಹರಣೆಯಲ್ಲಿ

ದುಕೂಲದಲ್ಲಿ ಕೂಸು
ಹಾ ಎನುತ್ತ ಬಂದಿತಲ್ಲ
ಹೋ ಎನುತ್ತ ಹೋಯಿತಲ್ಲ
ಹೇ ಎನುತ್ತ ಕಿರುಚಿತಲ್ಲ

ಎಂಬ ಉದಾಹರಣೆಯಲ್ಲಿ

ಓಹೋಹೋ ಎಂದರೇನು
ಆಹಾಹಾ ಎನ್ನಬಹುದೆ
ಹೀಹೀಹೀ ಎನುತ ನಕ್ಕು
ಹೇಹೇಹೇ ಎನ್ನಬಹುದೆ?
ಎಂಬಲ್ಲಿ
ನಿರುದ್ವಿಗ್ನ ಮರುತ್ಸುತನ
ಭೇಟಿಯಾದನುದ್ವಿಗ್ನನು.

ಎಂಬ ಉದಾಹರಣೆಯಲ್ಲಿ ಮೂರು ಮಾತ್ರೆಗಳ ಗಣಗಳೇ ಇದ್ದರೂ ಅವುಗಳ ವಿನ್ಯಾಸ ಭಿನ್ನವಾಗುವುದನ್ನು ಗಮನಿಸಿದರೆ ಇಂಥ ಇನ್ನೂ ಎಷ್ಟೋ ಸಾಧ್ಯತೆಗಳು ನಮಗೆ ಗೋಚರಿಸಲು ಸಾದ್ಯ, ನಿಜವಾದ ಕವಿಪ್ರತಿಭೆ ಇಂಥ ಸಾಧ್ಯತೆಗಳನ್ನು ಕಾವ್ಯದಲ್ಲಿ ಸಿದ್ಧಮಾಡಿ ಯಶಸ್ಸು ಗಳಿಸುತ್ತದೆ ಅಲ್ಲವೆ! ಇದೇ ‘ಲಯ’ದ ನಿಜವಾದ ರಹಸ್ಯ. ಆದ್ದರಿಂದಲೇ ಒಬ್ಬ ಖ್ಯಾತ ವಿಮರ್ಶಕ ಹೇಳಿದ್ದು: ಕಾವ್ಯದಲ್ಲಿ ಒಂದು ಹೊಸ ಲಯ ಎಂದರೆ ಒಂದು ಹೊಸ ಅರ್ಥವೇ ಎಂದು.

ಈ ‘ಕಾಲ’ ಅಥವಾ ಅಂತರ ಅಥವಾ ತಾಳವು ಹೆಚ್ಚು ಕಡಿಮೆಯಾಗ ಬಹುದೆನ್ನುವ ಸಾಧ್ಯತೆಯೆ ಲಯದ ವಿರಾಡ್‌ಶಕ್ತಿಗೆ ಅವಕಾಶ ಮಾಡುವಂಥದ್ದು. ಉದಾಹರಣೆಗೆ ಆರು ಪದಗಳನ್ನು ಗಮನಿಸೋಣ –

ಔದುಂಬರ
ಕೌಟುಂಬಿಕ
ನೀಲಾಂಬರ
ಕಾಲಾಂತರ
ಆಂದೋಲನ
ಆಡುಂಬೋಲ

ಎಲ್ಲ ಪದಗಳು ಆರು ಮಾತ್ರೆಗಳ ಮಾನದವೇ ಆಗಿವೆ ಮಾತ್ರಾಗಣದ ಲೆಕ್ಕದಲ್ಲಿ. ಆದರೆ ಈ ಆರು ಮಾತ್ರೆಗಳ ಪದಗಳ ರಚನೆಯಲ್ಲಿ ಒಂದು ವಿಶಿಷ್ಟತೆಯಿದೆ.

ಅದು – ಮೊದಲೆರಡು ವರ್ಣಗಳು ಗುರುಗಳಾಗಿದ್ದು ಮುಂದಿನೆರಡು ವರ್ಣಗಳು ಲಘುಗಳಾಗಿರುವುದು. ಆದರೆ ಇಲ್ಲಿಯ ಎರಡೆರಡು ಗುರುಗಳು ವಿನ್ಯಾಸಗೊಂಡಿರುವ ರೀತಿಗಳಲ್ಲಿ ಎಷ್ಟೊಂದು ಭಿನ್ನತೆಗಳಿವೆ ನೋಡಿ.

ಮೊದಲೆರಡು ಪದಗಳ ಮೊದಲ ಅಕ್ಷರಗಳು ಕಂಠೋಷ್ಠ್ಯಗಳಾದ ದೀರ್ಘಗಳೇ. ಆದರೆ ಮೊದಲಿನದು ಕೇವಲ ಸ್ವರದಿಂದ ಕೂಡಿದ ಕಂಠೋಷ್ಠ್ಯ ಆಗಿದ್ದರೆ ಎರಡನೆಯದು ಕಂಠ್ಯವಾದ ಕ ಕಾರದಿಂದ ಕೂಡಿದ್ದುದಾಗಿದೆ. ಭಿನ್ನ ಉಚ್ಛಾರಣಾ ಸ್ಥಾನದಿಂದ ಭಿನ್ನ ಧ್ವನಿಯಾಗಿದೆ. ಎರಡನೆಯ ವರ್ಣ ಎರರಲ್ಲೂ ಅನುಸಾರ (ಬಿಂದು) ಸಮೇತವಾಗಿದೆ. ಆದರೆ ಮೊದಲಿನ ವ್ಯಂಜನ ದಂತ್ಯವಾದರೆ ಎರಡನೆಯ ಉದಾಹರಣೆಯ ವ್ಯಂಜನ ಮೂರ್ಧನ್ಯವಾಗಿದೆ. ಮೊದಲ ಉದಾಹರಣೆಯ ಕೊನೆಯ ಎರಡು ಅಕ್ಷರಗಳು ಲಘುಗಳೇ. ಆದರೆ ಮೊದಲಿನದು ಔಷ್ಠ್ಯ ಎರಡನೆಯದು ಮೂರ್ಧನ್ಯ.

ಮೂರು ಮತ್ತು ನಾಲ್ಕನೆ ಉದಾಹರಣೆಗಳ ಮೊದಲ ಎರಡು ಅಕ್ಷರಗಳು ವಿಸ್ತಾರದ ದೀರ್ಘವನ್ನು ಪಡೆದಿವೆ, ಎರಡನೆಯ ಅಕ್ಷರ ದೀರ್ಘದ ವಿಸ್ತಾರದೊಂದಿಗೆ ಬಿಂದು (ಅನುಸ್ವಾರ) ಯುಕ್ತವಾಗಿವೆ. ಕೊನೆಯ ಎರಡಕ್ಷರಗಳಲ್ಲಿ ಎರಡರಲ್ಲಿಯೂ ಕೊನೆಗೆ ಮೂರ್ಧನ್ಯವಾದ ‘ರ’ವೇ ಇದೆ. ಆದರೆ ಹಿಂದಿನ ವ್ಯಂಜನ ಮೂರನೆ ಉದಾಹರಣೆಯಲ್ಲಿ ಔಷ್ಠ್ಯವಾಗಿದ್ದರೆ ನಾಲ್ಕನೆಯದರಲ್ಲಿ ಅದು ದಂತ್ಯವಾಗಿದೆ.

ಐದನೆಯ ಉದಾಹರಣೆಯಲ್ಲಿ ಮೊದಲ ಅಕ್ಷರ ವಿಸ್ತಾರದ ದೀರ್ಘತೆ ಜೊತೆಗೆ ಅನುಸಾರ ಪಡೆದಿದ್ದರೆ ಆರನೆ ಉದಾಹರಣೆಯನ್ನು ಅದು ಕೇವಲ ವಿಸ್ಥಾರದ ದೀರ್ಘತೆಯಾಗಿದೆ. ಎರಡನೆಯ ಅಕ್ಷರ ಐದನೆ ಉದಾಹರಣೆಯಲ್ಲಿ ಔಷ್ಠ್ಯವಾದ ದೀರ್ಘ ಪಡೆದಿದ್ದರೆ, ಆರನೆ ಉದಾಹರಣೆಯ ಎರಡನೆಯ ಅಕ್ಷರ ಮೂರ್ಧನ್ಯದಾಗಿದ್ದು ಬಿಂದುವಿನ ಕಾರಣ ಗುರುವಾಗಿದೆ. ಐದನೆಯ ಉದಾಹರಣೆಯ ಎರಡನೆ ಗುರುವಿನ ರಚನೆ ಆರನೆ ಉದಾಹರಣೆಯ ಗುರು ರಚನೆಗಿಂತ ಭಿನ್ನ. ಐದನೆಯ ಉದಾಹರಣೆಯ ಮೂರನೆ ಅಕ್ಷರ ದಂತ್ಯವಾಗಿದೆ, ನಾಲ್ಕನೆ ಅಕ್ಷರ ಮೂರ್ಧನ್ಯವಾಗಿದೆ, ಎರಡೂ ಹ್ರಸ್ವಸ್ವರಗಳಾಗಿವೆ – ವಿಸ್ತಾರವಿದ್ದೂ ಅದು ಹ್ರಸ್ವಗೊಂಡಿದೆ. ಆರನೆ ಉದಾಹರಣೆಯ ಮೊದಲ ಅಕ್ಷರ ಲ- ದಂತ್ಯವಾಗಿದ್ದರೂ ಅದರ ಜೊತೆಗಿರುವ ಸ್ವರ – ಔಷ್ಠ್ಯವಾಗಿದೆ, ಮುಂದಿನ ಅಕ್ಷರ ಹ್ರಸ್ವ ಲ ಆಗಿದ್ದು ದಂತ್ಯವಾಗಿದೆ.

ಅಂದರೆ ಉಚ್ಚಾರಣಾ ಸ್ಥಾನಗಳ ಭಿನ್ನತೆಯಿಂದ ಗುರುಗಳಾಗುವ ವಿಭಿನ್ನ ಕಾರಣಗಳ ಕಾರಣವಾಗಿ ಆರು ಮಾತ್ರೆಗಳ ಮೇಲಿನ ಆರೂ ಉದಾಹರಣೆಗಳು ಉಚ್ಚಾರಣಾ ಕಾಲದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಆರು ಮಾತ್ರೆಗಳ ಲೆಕ್ಕಕ್ಕೆ ಬರುತ್ತವೆ. ಮಾತ್ರಾಗಣದ ಲೆಕ್ಕಾಚಾರದಿಂದ, ಅಂದರೆ ‘ಲಯ’ದಲ್ಲಿ ಪ್ರಾಪ್ತವಾಗುವ ವಿಶೇ ಅಂತರಗಳೇ ಅದರ ವೈವಿಧ್ಯಕ್ಕೂ ಶಕ್ತಿಗೂ ಕಾರಣ ಅಲ್ಲವೆ?

ಮೂರು ಮಾತ್ರೆಗಳ (ಉತ್ಸಾಹಲಯ) ಮತ್ತು ನಾಲ್ಕು ಮಾತ್ರೆಗಳ (ಮಂದಾನಿಲ ಲಯ) ವಿನ್ಯಾಸಕ್ಕಿಂತ ಐದು ಮಾತ್ರೆಗಳ ಗಣವಿನ್ಯಾಸ ಇನ್ನೂ ಹೆಚ್ಚಿನ ಸಾಧ್ಯತೆಗಳನ್ನು ಪಡೆದುಕೊಳ್ಳುವುದಕ್ಕೆ ಕಾರಣ ಪಂಚಮಾತ್ರಾ ಗಣಗಳ ವಿಭಿನ್ನ ಸಂಯೋಜನೆಗಳ ಸಾಧ್ಯತೆ (ಲಕ್ಷ್ಮೀಶ ಕವಿಯ ಛಂದಸ್ಸಿನ ಸಾಧನೆ ಗಮನಿಸುವಲ್ಲಿ ಇದು ಇನ್ನಷ್ಟು ವಿಶದವಾಗುತ್ತದೆ.) ಜೊತೆಗೆ ಅಲ್ಲಿ ಒಂದು ಪಂಕ್ತಿಗೆ ಸಾಧ್ಯವಾಗುವ ಇಪ್ಪತ್ತು ಮಾತ್ರೆಗಳ ವಿಸ್ತಾರದ ಜೊತೆಗೆ ಮೂರರಿಂದ ಹಿಡಿದು ನೂರು ಮಾತ್ರೆಗಳ ಒಟ್ಟು ವಿಸ್ತಾರಗಳನ್ನು ಪಡೆದು ಅನಂತ ಸಾಧ್ಯತೆಗಳಿಗೆ ಅವಕಾಶವಾಗಿಬಿಡುತ್ತದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)