ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳಿಂದ ಕೂಡಿದ ಭಾಮಿನಿ ಷಟ್ಟದಿಯಲ್ಲೀತ ಭಿನ್ನ ಭಿನ್ನ ಮಾತ್ರ ಘಟಕಗಳ ಗಣಗಳನ್ನು ಯೋಜಿಸುತ್ತ ವೈವಿಧ್ಯಕ್ಕೆ ಮಾತ್ರ ಅಲ್ಲ ಅರ್ಥದ ಪುಷ್ಟಿಗೂ ಕಾರಣನಾಗುತ್ತಾನೆ.

ಕುಮಾರವ್ಯಾಸನ ಲಯವಿನ್ಯಾಸ ಆಸಾಧಾರಣವಾದುದು. ಶಲ್ಯಪರ್ವದಲ್ಲಿ ಬರುವ ಈ ಪದ್ಯವನ್ನೇ ಗಮನಿಸಿ:

ಒಳಗೆ ಢಗೆ  ⋃⋃⋃ ⋃⋃ ೩. ೨
ನಗೆ ಹೊರಗೆ ⋃⋃ ⋃⋃⋃ ೨, ೩
ಕಳವಳವೊಳಗೆ  ⋃⋃⋃⋃ + ⋃⋃⋃ ೪+೩
ಹೊರಗೆ ಸಘಾಢಮದ ⋃⋃⋃ +⋃ – ⋃⋃⋃ ೩, ೬
ಬಲುಬೇಗೆಯೊಳಗೊಳಗೆ ⋃⋃ – ⋃ + ⋃⋃⋃⋃⋃ ೫+೫
ಬಲುಹು ಹೊರಗೆ ⋃⋃⋃ ⋃⋃⋃ ೩, ೩
ಪರಾಭವದ ಕಂದು ಒಳಗೆ ⋃ – ⋃⋃⋃ – ⋃⋃ + ⋃⋃⋃ ೬, ೩, ೩
ಕಡುಹಿನ ಕಲಿತನದ ಹಳಹಳಿಕೆ ಹೊರಗೆ ⋃⋃⋃⋃ ⋃⋃⋃⋃⋃, ⋃⋃⋃⋃⋃, ⋃⋃⋃ ೪, ೫, ೫, ೩
ಮಹೀಶ ಹದನಿದು ನಿನ್ನ ನಂದನನ. ⋃ – ⋃ ⋃⋃⋃⋃ – ⋃ – ⋃⋃ – ೪, ೪, ೩, ೪+ ಗುರು

. , ಶಲ್ಯಪರ್ವ

ಭೀಷ್ಮ ದ್ರೋಣರು ಇಲ್ಲವಾಗಿದ್ದರೆ ಆದರೂ ಛಲದಂಕಮಲ್ಲನಾದ ಸುಯೋಧನ ತನ್ನ ಹಟವನ್ನು ಬಿಡದೆ ನಿಂತಿದ್ದಾನೆ. ಹಾಗೆ ನಿಂತವನ ಅಂತರಂಗ ಬಹಿರಂಗಗಗಳನ್ನು ಚಿತ್ರಿಸುತ್ತಿದೆ ಈ ಪದ್ಯ. ಒಳಗೊಳಗೆ ದುಃಖ; ಕಳವಳ; ಸೋಲಿನ ಅವಮಾನಗಳ ಕುದಿತವಿದ್ದಂತೆ ಚಕ್ರಾಧಿಪತಿಯಾದ ತಾನು ಅದರಲ್ಲೂ ಛಲದಂಕಮಲ್ಲ ಅವುಗಳನ್ನು ತೋರಿಸಿಕೊಳ್ಳುತ್ತಾನೇನು? ಆದ್ದರಿಂದಲೇ ಹೊರಗೆಲ್ಲ ನಗೆ: ಮದ; ಬಲಹು ಕಲಿತನಗಳ ಪ್ರದರ್ಶನ ನಡೆಸಿದ್ದಾನೆ. ಈ ಎರಡರ ಚಿತ್ರ ಇಲ್ಲಿನದು.

ಮೊದಲ ಸಾಲನ್ನು ಗಮನಿಸಿ. ಅಲ್ಲಿರುವುದು ಐದೇ ಮಾತ್ರೆಗಳು. ಸಾಮಾನ್ಯವಾಗಿ ಎರಡು ಮಾತ್ರೆಯ ಗಣ ಇಲ್ಲ. ಆದರೆ ಇಲ್ಲಿ ನೋಡಿ ಈ ಐದು ಮಾತ್ರೆಗಳು (⋃⋃, ⋃⋃⋃) ಎರಡು ಮತ್ತು ಮೂರು ಮಾತ್ರೆಗಳ ಸರ್ವಲಘು ಗಣಗಳಾಗಿವೆ. ಎರಡನೆ ಸಾಲಿನಲ್ಲೂ ಐದೇ ಮಾತ್ರೆಗಳು. ಆದರೆ ಇಲ್ಲಿ ಮೊದಲ ಗಣ ಎರಡು ಮಾತ್ರೆಗಳದು (⋃⋃) ಎರಡನೆಯ ಗಣ ಮೂರು (⋃⋃⋃) ಮಾತ್ರೆಗಳದು. ಮೊದಲ ಸಾಲಿನಂತೆ ಎರಡನೆಯ ಸಾಲಿನ ಗಣ ವಿನ್ಯಾಸ ಇಲ್ಲ. ಅದರೆ ಭಾವಾಭಿವ್ಯಕ್ತಿಗೆ ಬಾಧಕವಾಗಿಲ್ಲ; ಶಕ್ತಿ ತುಂಬಿ ಬಂದಿದೆ. ಮೊದಲ ಸಾಲಿನಲ್ಲಿ ಮೂರು ಮತ್ತು ಎರಡು ಮಾತ್ರೆಗಳ ಘಟಕಯಿದ್ದರೆ ಎರಡನೆ ಸಾಲಿನಲ್ಲಿ ಇದು ತಿರುವು ಮುರುವಾಗಿದೆ. ಎರಡು ಮತ್ತು ಮೂರು ಮಾತ್ರೆಗಳ ಘಟಕಗಳಾಗಿವೆ.

ಮೂರನೆಯ ಸಾಲು ಏಳು ಮಾತ್ರೆಗಳಿಂದ (⋃⋃⋃⋃, ⋃⋃⋃ = ನಾಲ್ಕು ಮತ್ತು ಮೂರು) ಕೂಡಿದೆ. ನಾಲ್ಕನೆಯ ಸಾಲು ಒಂಬತ್ತು ಮಾತ್ರೆಗಳಿಂದ ಕೂಡಿದೆ (೩+೬ = ⋃⋃⋃ + ⋃ – ⋃⋃⋃). ಐದನೆಯ ಸಾಲು ಹತ್ತು ಮಾತ್ರೆಗಳಿಂದ ಕೂಡಿದೆ. (೫+೫ = ⋃⋃ – ⋃ + ⋃⋃⋃⋃⋃). ಅರನೆಯ ಸಾಲು ಅರು ಮಾತ್ರೆಗಳಿಂದ ಕೂಡಿದೆ. (೩+೩ ⋃⋃⋃ ⋃⋃⋃) ಅಷ್ಟೇ ಅಲ್ಲ ಎರಡೂ ಪದಗಳಲ್ಲಿ ಅರ್ಥಯತಿ (ಅಲ್ಪಯತಿ) ಯಾಗಿ ಅರ್ಥಕ್ಕೆ ಅವಧಾರಣೆ ಬಂದಿದೆ. ಏಳನೆಯ ಸಾಲು ಇದಕ್ಕೆ ಭಿನ್ನಭಾವ ಪ್ರದರ್ಶಿಸುತ್ತ ಹನ್ನೆರಡು ಮಾತ್ರೆಗಳಿಂದ ಕೂಡಿದೆ – ⋃ – ⋃⋃⋃ – ⋃ + ⋃⋃⋃ (= ೬, ೩+೩). ಎಂಟನೆಯ ಸಾಲು ಒಂಬತ್ತನೆಯ ಸಾಲು ಹದಿನೇಳು ಮಾತ್ರೆಗಳಿಂದಲೇ ಕೂಡಿದೆ. ಆದರೆ ಎಂಟನೆ ಸಾಲಿನ ಗಣವಿನ್ಯಾಸಕ್ಕಿಂತ ಭಿನ್ನವಾಗಿದೆ ಇದು. ಹದಿನೇಳು ಮಾತ್ರೆಗಳ ಘಟಕವಾಗಿ ದುರ್ಯೋಧನ ಮನಸ್ಥಿತಿಯನ್ನು ವ್ಯಂಜಿಸುತ್ತಿದೆ (⋃⋃⋃⋃, ⋃⋃⋃⋃⋃, ⋃⋃⋃⋃⋃, ⋃⋃⋃) ಇಡೀ ಪದ್ಯ ಗಮನಿಸಿದಾಗ ಮೂರು ನಾಲ್ಕು ಮಾತ್ರೆಗಳ ವಿಷಮಗಣಗಳ ಯೋಜನೆಯನ್ನು ಕುಮಾರವ್ಯಾಸ ಅರ್ಥಾಭಿವ್ಯಕ್ತಿಗಾಗಿ ಎರಡು ಮಾತ್ರೆ , ಮೂರು ಮಾತ್ರೆ, ನಾಲ್ಕು ಮಾತ್ರೆ, ಐದು ಮಾತ್ರೆ – ಹೀಗೆ ಭಿನ್ನ ಭಿನ್ನ ಗಣಪ್ರಮಾಣಗಳ ನಿಯೋಜನೆಯಿಂದಾಗಿ ಸಾಧಿಸುವುದು ಕಾವ್ಯ ಸಿದ್ಧಿ.

ಕರುಣರಸದ ಪ್ರಸಂಗ ಚಿತ್ರದಲ್ಲಿ ಈತನ ಭಾಮಿನಿ ಷಟ್ಪದಿಯ ಲಯ ಪಡೆಯುವ ಬಳಕುಗಳನ್ನು ಹಾಗೂ ಛಂದೋವಿಲಾಸಗಳನ್ನು ಗಮನಿಸೋಣ. ಅಸಾಮಾನ್ಯ ಶೂರನಾದ ಓರ್ವ ಅಭಿಮನ್ಯು ಸತ್ತಾಗ ಅರ್ಜುನನ ಪ್ರಲಾಪವನ್ನು ಕರ್ಣ ಇಲ್ಲದಾಗ ದುರ್ಯೋಧನ ನಡೆಸಿದ ಪ್ರಲಾಪವನ್ನು ಒಟ್ಟೊಟ್ಟಿಗೆ ಗಮನಿಸಬಹುದು-

. ಮಗನ ಮಣಿರಥವೆಲ್ಲಿ? ⋃⋃⋃ ⋃⋃⋃⋃ – ⋃ ೩, ೪ + ೩
ಹೂಡಿದ ವಿಗಡ ತೇಜಿಗಳೆಲ್ಲಿ? – ⋃⋃, ⋃⋃⋃, – ⋃⋃ – ⋃ ೪, ೩, ೭
ಮಣಿವೆಳಗುಗಳ ಛತ್ರವದೆಲ್ಲಿ? ⋃⋃, ⋃⋃⋃⋃⋃, – ⋃⋃ – ⋃ ೨ + ೫, ೭
ಚಾಮರವೆಲ್ಲಿ? – ⋃⋃ – ⋃ ೪ + ೩
ಧನುವೆಲ್ಲಿ? ⋃⋃ – ⋃, ೨ + ೩
ಹಗೆಯರಲಿ ಹತವಾದನೇ ⋃⋃⋃⋃⋃, ⋃⋃ – ⋃ – , ೫, ೨ + ೫
ಹಾ – ,
ಸುಗುಣನಿಲ್ಲಿಗೆ ಬಾರನೇ ⋃⋃⋃ – ⋃⋃, – ⋃ – ೩ + ೪, ೫
ತಾ ಮೊಗವ ಕಾಣದೆ ಹೋದನೇ – , ⋃⋃⋃, – ⋃⋃, – ⋃ – ೨, ೩, ೪, ೫
ಎನಗೇನುಗತಿ + ಎಂದ ⋃⋃ – ⋃, ⋃⋃, – ⋃ ೫ + ೨ + ೩
ಕಂದ ಬಾರೋ – ⋃, – – , ೩, ೪
ಎನ್ನ ಮನಕಾನಂದ ಬಾರೋ – ⋃, ⋃⋃ – – ⋃, – – , ೩, ೨ + ೫, ೪
ಬಾಲಕರ ಪೂರ್ಣೇಂದು ಬಾರೋ – ⋃⋃⋃, – – ⋃, – – , ೫, ೫, ೪
ರಿಪುಕುಲಾಂತಕ ನಿಪುಣ ಮುಖದೋರೋ ⋃⋃⋃ – ⋃⋃, ⋃⋃⋃, ⋃⋃ – ⋃ ೨ + ೫ + ೩ + ೫
ತಂದೆ – ⋃
ನಿನಗೆನ್ನಲ್ಲಿ ಋಣಸಂಬಂಧ ಸವೆದುದೆ ⋃⋃ – – ⋃, ⋃⋃, – – ⋃, ⋃⋃⋃⋃ ೨ + ೫, ೨ + ೫, ೪
ಶಿವ ಶಿವಾ ⋃⋃, ⋃ – , ೨ + ೩
ತಾ ಮಂದಭಾಗ್ಯಂಗಣುದಕ್ಕುವನಲ್ಲ ಎನಗಂದ. – , – ⋃ – – ⋃⋃⋃, – ⋃⋃ – ⋃, ⋃⋃ – – ೨, ೯, ೭, ೬
. ೨೦೨೧; ಸಂ.
. ಕರ್ಣಾ ಹಾ ಹಾ – ⋃, – – ೩, ೨ + ೨
ಸೂತಸುತ ಹಾ – ⋃, ⋃⋃, – , ೩ + ೨, ೨
ಕರ್ಣ ಹಾ – ⋃, – , ೩, ೨
ರಾಧಾತನುಜ ಹಾ – – , ⋃⋃⋃, – , ೪ + ೩, ೨
ಕರ್ಣ ಹಾ – ⋃, – , ೩, ೨
ಎನ್ನಾಣೆ ಹಾ – – ⋃, – , ೫, ೨
ಬಹಿರಂಗ ಜೀವನವೆ ⋃⋃ – ⋃, – ⋃⋃⋃, ೫, ೫
ನಿರ್ಣಯವು ಕುರುಕುಲಕೆ ಹಾಹಾ – ⋃⋃⋃, ⋃⋃⋃⋃⋃, – – , ೫, ೪, ೨ + ೨
ಕರ್ಣ ಮಡಿದೈ ತಂದೆ + ಎನುತವೆ – ⋃, ⋃⋃ – , – ⋃, ⋃⋃⋃⋃ ೩, ೪ + ೩, ೪
ನಿನ್ನ ಮಗ ರಥದಿಂದ ಧೊಪ್ಪನೆ ಕೆಡೆದವನಿಯಲಿ – ⋃, ⋃⋃, ⋃⋃ – ⋃, – ⋃⋃, ⋃⋃⋃⋃⋃⋃⋃ ೨, ೨, ೫, ೪, ೯
ರಾಯ ಹಮ್ಮೈಸಿದನು – ⋃, – – ⋃⋃⋃, ೩, ೭
ಹಾ ರಾಧೇಯ – , – – ⋃, ೨, ೫
ಹಾ ರಾಧೇಯ – , – – ⋃, ೨, ೫
ಹಾ ರಾಧೇಯ – , – – ⋃, ೨, ೫
ಹಾ – ,
ಎನ್ನಾಣೆ ಬಾರೈ – – ⋃, – – , ೫ + ೪
ನಿನ್ನ ತೋರೆನುತ – ⋃, – ⋃⋃⋃, ೩ + ೫
ಬಾಯಿ ಬಿಟ್ಟುದು – ⋃, – ⋃⋃, ೩, ೪
ಕಯ್ಯ ಕೈದುವ ಹಾಯಿಕಿತು – ⋃, – ⋃⋃, – ⋃⋃⋃ ೩, ೪, ೫
ಕಂಬನಿಯ ಕಡಲೊಳು ಹಾಯಿದೆದ್ದುದು – ⋃⋃⋃, ⋃⋃⋃⋃, – ⋃ – ⋃⋃⋃ ೫, ೪, ೩ + ೫
ಹೊರಳುತಿರ್ದುದು ಕೂಡೆ ಪರಿವಾರ ⋃⋃⋃ – ⋃⋃, – ⋃, ⋃⋃ – – ೩ + ೪, ೩, ೪ + ೬

೨೫೨೬, ಸಂ. ೨೭, ಕರ್ಣ ಪರ್ವ

ಮೊದಲ ಎರಡು ಷಟ್ಪದಿಗಳಲ್ಲಿ ಪ್ರಥಮ ಷಟ್ಪದಿಯ ಲಯವೇ ಬೇರೆ; ಎರಡನೆಯದರ ಲಯವೇ ಬೇರೆ.

ಮೊದಲಿನ ಪದ್ಯದಲ್ಲಿ ಅರ್ಧಭಾಗ ಶೂರನಾದ ತನ್ನ ಮಗ ಎದುರುಗೊಳ್ಳಲು ಬಂದಾಗ ಇರಲೇಬೇಕಿದ್ದ ರಾಜಗೌರವಗಳು ಯಾವುವು ಎಂಬುದರ ಚಿತ್ರಗಳಿದ್ದು ಅವುಗಳಿಲ್ಲದ್ದು ತನ್ನ ಮಗ ಇನ್ನಿಲ್ಲದರ ಸೂಚನೆ ಎಂದು ಧ್ವನಿಪೂರ್ಣವಾಗುತ್ತದೆ.

ಮೊದಲ ಸಾಲಿನಲ್ಲಿ ಹತ್ತು ಮಾತ್ರೆಗಳಿವೆ, ಮೂರು, ನಾಲ್ಕು ಮತ್ತು ಮೂರು ಮಾತ್ರೆಗಳ ಗಣಗಳಿಂದ ಕೂಡಿ; ಐದು ಮಾತ್ರೆಯ ಎರಡು ಗಣಗಳ ರೀತಿಯಲ್ಲಿದೆ ಇಲ್ಲಿನ ಯೋಜನೆ. ಎರಡನೆ ಮತ್ತು ಮೂರನೆಯ ಸಾಲುಗಳಲ್ಲಿ ೧೪; ೧೪ ಮಾತ್ರೆಗಳಿದ್ದರೂ ಅವುಗಳ ಸಂಯೋಜನೆ ಭಿನ್ನ ಭಿನ್ನವಾಗಿವೆ; ಎರಡನೆಯ ಸಾಲಿನಲ್ಲಿ ೪, ೩, ೭ ಮಾತ್ರೆಗಳ ಗಣ ಯೋಜನೆಯಿದ್ದರೆ ಮೂರನೆಯ ಸಾಲಿನಲ್ಲಿ ಏಳು ಮಾತ್ರೆಗಳು ಎರಡು ಮತ್ತು ಐದು ಮಾತ್ರೆಗಳ ಘಟಕಗಳಾಗುತ್ತವೆ. ಮುಂದಿನ ಸಾಲುಗಳು ಅರ್ಥದ ವೇಗವನ್ನು ಹೆಚ್ಚಿಸುತ್ತವೆ. ಮೊದಲನೆಯದು ಏಳು ಮಾತ್ರೆಗಳ ಗಣಯೋಜನೆಯಾಗಿದ್ದರೆ ಮುಂದಿನದು ಐದು ಮಾತ್ರೆಗಳ ಗಣವಾಗಿದೆ. ಮತ್ತೆ ಮುಂದಿನ ಸಾಲು ಹನ್ನೆರಡು ಮಾತ್ರೆಗಳಿಂದ ಯೋಜಿತವಾಗಿದೆ. ಮುಂದಿನ ಎರಡು ಮಾತ್ರೆಯ ಗಣ ಮುಂದಿನ ಸಾಲಿನೊಂದಿಗೆ ಸೇರಬಹುದು; ಇಲ್ಲವೆ ಅರ್ಥಕ್ಕೆ ತಕ್ಕಂತೆ ಹಿಂದಿನ ಸಾಲಿಗೂ ಸೇರಬಹುದು, ಆಶ್ಚರ್ಯವೆಂದರೆ ‘ಹಗೆಯರಲಿ ಹತನಾದನೇ’ ಎಂಬುದೂ ಹನ್ನೆರಡೇ ಮಾತ್ರೆಗಳಿಂದ ಕೂಡಿದ್ದರೂ ‘ಸುಗಣನಿಲ್ಲಿಗೆ ಬಾರನೇ’ ಎಂಬಲ್ಲಿನ ಹನ್ನೆರಡು ಮಾತ್ರೆಗಳ ಯೋಜನೆಗೆ ಭಿನ್ನವಾಗಿ ವೈವಿಧ್ಯವನ್ನು ತಳೆದಿದೆ. (೫+೭ ಒಂದು ಘಟಕವಾದರೆ ಇನ್ನೊಂದು ಘಟಕ ೩+೪+೫ ಗಣಯೋಜಿತವಾಗಿದೆ.)

ಮುಂದಿನ ಸಾಲುಗಳ ಲಯವೂ ಅಷ್ಟೇ –

ಓಂಬತ್ತನೆಯ ಸಾಲು ಹದಿನಾಲ್ಕು ಮಾತ್ರೆಗಳದು (೨, ೩, ೪, ೫) ಹತ್ತನೆಯ ಸಾಲು ಹತ್ತು ಮಾತ್ರೆಗಳಿಂದ ಕೂಡಿದೆ (೭+೩) ಹನ್ನೊಂದನೆ ಸಾಲು ಏಳು ಮಾತ್ರೆಗಳದು (೩, ೪) ಹನ್ನೆರಡನೆಯ ಸಾಲು ಹದಿನಾಲ್ಕು ಮಾತ್ರೆಗಳದು. ಹದಿಮೂರನೆ ಸಾಲೂ ಅಷ್ಟೇ ಹದಿನಾಲ್ಕು ಮಾತ್ರೆಗಳದೇ, ಆದರೆ ಹನ್ನೆರಡನೆ ಸಾಲಿನಲ್ಲಿ ೨, ೭ ಮತ್ತು ೪ ಮಾತ್ರೆಗಳ ಗಣಗಳಿದ್ದರೆ ಹದಿಮೂರನೆ ಸಾಲಿನಲ್ಲಿ ೫, ೫, ೪ ಮಾತ್ರೆಗಳ ಗಣಗಳಿವೆ. ಮುಂದಿನ ಸಾಲಿನಲ್ಲಿ (ಹದಿನಾಲ್ಕು ಸಾಲು) ಹದಿನೈದು ಮಾತ್ರೆಗಳಿವೆ (೨+೫+೩+೫) ಹದಿನಾಲ್ಕನೆ ಸಾಲಿನಲ್ಲಿ ಮತ್ತೆ ಮೂರು ಮಾತ್ರೆಗಳ ಗಣವಿದೆ. ಮುಂದಿನ ಸಾಲಿನಲ್ಲಿ (ಹದಿನೈದನೆ ಸಾಲಿನಲ್ಲಿ) ಹದಿನಾಲ್ಕು ಮಾತ್ರೆಗಳಿವೆ. ಕೊನೆ ಸಾಲಿನಲ್ಲಿ ಇಪ್ಪತ್ತೈದು ಮಾತ್ರೆಗಳಿವೆ. ಹದಿನಾಲ್ಕನೆಯ ಸಾಲಿನ ಸಂಬೋಧನಾ ಪದ ಮೂರು ಮಾತ್ರೆಗಳದಾದರೆ ಹದಿನಾರನೆಯ ಸಾಲಿನ ಉದ್ಗಾರವಾಚಿ ಪದ ಐದು ಮಾತ್ರೆಗಳದಾಗಿದೆ.

ಕರುಣರಸ ಪ್ರಧಾನವಾದ ಮೇಲಿನೆರಡು ಪದ್ಯಗಳಲ್ಲಿ ಅರ್ಜುನನ ಪುತ್ರಶೋಕ ಚಿತ್ರಿತವಾಗಿದೆ. ಮೊದಲ ಪದ್ಯ ತನ್ನ ಮಗನ ವೈಭವಾದಿಗಳನ್ನು ಸ್ಮರಿಸಿ ಶೋಕತಪ್ತವಾದರೆ ಎರಡನೆಯದರಲ್ಲಿ ಅಂಥವನಿಲ್ಲದ ಶೂನ್ಯತೆಯನ್ನು ಕುರಿತ ಹಂಬಲ ತುಂಬಿದೆ.

ಮುಂದಿನೆರಡು ಪದ್ಯಗಳೂ ಕರುಣರಸ ಪೋಷಕವಾದುವೇ. ಆದರೆ ಇಲ್ಲಿನ ಬಂಧ – ಸಂಬಂಧ ಬೇರೆಯದಾಗಿದೆ.

ದುರ್ಯೋಧನ ಮತ್ತು ಕರ್ಣರ ಮೈತ್ರಿ ಪಂಪನಲ್ಲಿ ಅನಂತರ ಕುಮಾರವ್ಯಾಸನಲ್ಲಿ ಚಿತ್ರಿತವಾಗಿರುವ ವೈಖರಿಯೇ ಬೇರೆ. ‘ಶ್ರೀ’ ಅವರ ಅಶ್ವತ್ಥಾಮನ್‌ ನಾಟಕದಲ್ಲಿ ಅಶ್ವತ್ಥಾಮನೇ ತನ್ನನ್ನು ಹಂಗಿಸಿಕೊಳ್ಳಲಿಲ್ಲವೇ ತನಗೂ ದುರ್ಯೋಧನನಿಗೂ ಇರುವ ಸಂಬಂಧ ಸ್ಮರಿಸುತ್ತ ಶೃಂಗಾರವೇ ಕರ್ಣನ್‌ ಎಂದು.

ಅಂಥ ಕರ್ಣನನ್ನು ಕುರಿತು ದುರ್ಯೋಧನ ಇಲ್ಲಿ ಹಂಬಲಿಸುತ್ತಿದ್ದಾನೆ. ಇಲ್ಲಿ ಆತನ ದುಃಖ ಮುಮ್ಮಡಿಯಾಗಲು ಕಾರಣ, ಸೈನ್ಯಾಧಿಪಟ್ಟದಲ್ಲಿದ್ದ ಭಿಷ್ಮ ಶರಶಯ್ಯೆಯಲ್ಲಿದ್ದಾರೆ, ತನಗಿನ್ನು ನೆರವಾಗದಂತೆ. ದ್ರೋಣಾಚಾರ್ಯರೂ ಮಡಿದಿದ್ದಾರೆ. ಪೂರ್ಣವಾಗಿ ತಾನು ನಂಬಿದ್ದ ಸೂರ್ಯಪುತ್ರ ಕರ್ಣನೂ ಈಗ ಇಲ್ಲವಾಗಿದ್ದಾನೆ. ಆದ್ದರಿಂದಲೇ ಆತನ ಶೋಕ ಮುಮ್ಮಡಿಸಿದೆ.

ಮೊದಲ ಸಾಲು ೭ ಮಾತ್ರೆಗಳಿಂದ ಕೂಡಿದೆ.

ಎರಡು ಮೂರು ಮತ್ತು ನಾಲ್ಕನೆಯ ಸಾಲುಗಳು ಏಳೇಳು ಮಾತ್ರೆಗಳಿಂದ ಕೂಡಿರುವುದೇ ಅಲ್ಲದೆ ಕರ್ಣನನ್ನು ಕುರಿತ ಉದ್ಗಾರ ಮೂರು ಸಲ ಬಂದು ದುರ್ಯೋಧನ ದುಃಖಾಧಿಕ್ಯವನ್ನು ವ್ಯಂಜಿಸುತ್ತಿದೆ.

ಐದನೆಯ ಸಾಲು ಎರಡು ಮಾತ್ರೆಗಳದಾಗಿದ್ದು ಉದ್ಗಾರವಾಚಿಯಾಗಿದೆ.

ಆರನೆಯ ಸಾಲಿನಲ್ಲಿ ೫ ಮಾತ್ರೆ ಮತ್ತು ೪ ಮಾತ್ರೆಗಳ ಗಣಗಳಿದ್ದರೆ,

ಏಳನೆಯ ಸಾಲಿನಲ್ಲಿ ೩+೫ ಮಾತ್ರೆಗಳ ಗಣಗಳಿವೆ.

ಎಂಟನೆಯ ಸಾಲಿನಲ್ಲಿ ೭ ಮಾತ್ರೆಗಳ (೩+೪) ಗಣಗಳಿವೆ.

ಒಂಬತ್ತನೆಯ ಸಾಲಿನಲ್ಲಿ ಹನ್ನೆರಡು ಮಾತ್ರೆಗಳಿವೆ.

ಹತ್ತನೆಯ ಸಾಲಿನಲ್ಲಿ ೨೨ ಮಾತ್ರೆಗಳಿದ್ದು ೫, +೫+೪+೯ ಮಾತ್ರೆಗಳ ಗಣಗಳಾಗಿವೆ. ಒಂದನೆಯ ಸಾಲಿನಲ್ಲಿ ‘ಹಾ’ ಎಂಬ ಉದ್ಗಾರವಾಚಿ ಎರಡು ಸಲ ಬಳಕೆಯಾದರೆ ಎರಡು ಮೂರು ನಾಲ್ಕು ಐದು ಆರನೆಯ ಸಾಲುಗಳಲ್ಲಿ ಒಮ್ಮೆ ಮಾತ್ರ ಬಳಕೆಯಾಗಿದೆ ಲಯ ವೈವಿಧ್ಯಕ್ಕಾಗಿ, ಎಂಟನೆಯ ಸಾಲಿನಲ್ಲಿ ‘ಹಾ’ ಉದ್ಗಾರವಾಚಿ ಎರಡು ಸಲ ಬಳಕೆಯಾಗಿದೆ. ಕರುಣ ರಸವುಕ್ಕಿಸುವ ದುರ್ಯೋಧನ ಪ್ರಲಾಪವನ್ನು ಇಲ್ಲಿ ಧೃತರಾಷ್ಟ್ರನಿಗೆ ನಿವೇದಿಸಲಾಗುತ್ತಿದೆ.

ಮುಂದಿನ ಪದ್ಯವೂ ಇದೇ ರೀತಿಯದು; ದುರ್ಯೋಧನನ ದುಃಖತಪ್ತ ಸ್ಥಿತಿಯನ್ನು ವರ್ಣಿಸುವುದಾಗಿದೆ.

ಮೊದಲ ಸಾಲಿನಲ್ಲಿ ದುರ್ಯೋಧನ ರಾಧೇಯನಿಗಾಗಿ ಹಂಬಲಿಸಿದುದನ್ನು ಸೂಚಿಸುತ್ತಿದ್ದಾನೆ. ಮೂರು ಮತ್ತು ಏಳು ಮಾತ್ರೆಗಳ ಗಣ ಸಂಯೋಜನೆಯಿಂದ. ಎರಡನೆಯ ಸಾಲಿನಲ್ಲಿ ಐದು ಮತ್ತು ಎರಡು ಮಾತ್ರೆಗಳ ಗಣಗಳಿದ್ದು ರಾಧೇಯನನ್ನು ಕುರಿತ ಆರ್ತತೆ ಮೂರು ಸಲ ಬಂದಿದ್ದು ಅವನ ಹಂಬಲಿಕೆಯ ತೀವ್ರತೆಯನ್ನು ಧ್ವನಿಸುತ್ತದೆ. ಐದನೆಯ ಸಾಲನ್ನು ಹಿಂದಿನ ಸಾಲಿನೊಂದಿಗೂ ಸೇರಿಸಬಹುದು; ಪ್ರತ್ಯೇಕವಾಗಿಯೂ ಉಳಿಸಿಕೊಳ್ಳಬಹುದು; ಏಳು ಮಾತ್ರೆಗಳ (೨+೫) ಗಣಗಳಿಂದ ಕೂಡಿದೆ. ನಾಲ್ಕನೆಯ ಸಾಲು ಮತ್ತೆ ಎರಡು ಐದು ನಾಲ್ಕು ಮೂರು ಮತ್ತು ಐದು ಮಾತ್ರೆಗಳ ಗಣಗಳಿಂದ ಕೂಡಿದ್ದು ಕರ್ಣ ಶೋಕಪ್ಲಾವಿತನಾಗಿರುವ ರೀತಿಯನ್ನು ಗಮನಿಸಬಹುದು. ಮುಂದಿನ ಮೂರು ಸಾಲುಗಳು ಈ ಬಗೆಯ ಆರ್ತತೆಯಿಂದ ಕೂಡಿದ ದುರ್ಯೋಧನ ಸ್ಥಿತಿಯ ಚಿತ್ರವನ್ನು ಒಳಗೊಳ್ಳುತ್ತವೆ.

ಎಂಟನೆಯ ಸಾಲಿನಲ್ಲಿ ಏಳು ಮಾತ್ರೆಗಳಿವೆ (೩+೪) ದುಃಖದಿಂದ ಕೂಡಿದ ದುರ್ಯೋಧನ ಬಾಯಿ ತೆರೆದ ಚಿತ್ರದೊಂದಿಗೆ. ಒಂಭತ್ತನೆಯ ಸಾಲು ದುಃಖೋದ್ವೇಗದಿಂದುಂಟಾದ ‘ಅವಶ’ ಸ್ಥಿತಿಯಲ್ಲಿ ಕೈಯ ಆಯುಧ ಜಾರಿದ್ದನ್ನು ಸೂಚಿಸುತ್ತದೆ. ಮೂರು ನಾಲ್ಕು ಮತ್ತು ಐದು ಮಾತ್ರೆಗಳ ಗಣಗಳಿಂದ, ಮುಂದಿನ ಎರಡೂ ಸಾಲುಗಳನ್ನು ಒಟ್ಟಿಗೆ ಗಮನಿಸಬಹುದು. ಚಕ್ರವರ್ತಿಯೇ ಮೂರ್ಛಾವಸ್ಥೆಗಿಳಿದ ಮೇಲೆ ಇನ್ನು ಸೈನ್ಯದ ಸ್ಥಿತಿ ಏನಾದೀತು? ಅದು ಮಣ್ಣಿನಲ್ಲಿ ಹೊರಳಾಡತೊಡಗಿತು. ಆ ಚಿತ್ರವನ್ನು ಐದು, ಐದು, ಏಳು, ಏಳು, ಮೂರು ಮತ್ತು ಆರು ಮಾತ್ರೆಗಳ ಗಣಗಳಿಂದ ರಚಿಸಲಾಗಿದೆ. ಅಭಿಮನ್ಯು ವಿಲಾಪದಲ್ಲೂ ಎರಡು ಭಾಮಿನಿ ಷಟ್ಟದಿಗಳಿವೆ; ದುರ್ಯೋಧನ ವಿಲಾಪದಲ್ಲೂ ಎರಡು ಭಾಮಿನಿ ಷಟ್ಟದಿಗಳಿವೆ.

ಅಭಿಮನ್ಯು ವಿಲಾಪದಲ್ಲೂ ಅರ್ಜುನ ತನಗಿನ್ನೂ ಕೂಸೇ ಆಗಿ ಕಾಣಿಸುವ ಅಭಿಮನ್ಯುವನ್ನು ನೆನೆಯುವುದು, ಅವನು ಶೋಭಾಯಮಾನವಾಗಿ ಎದುರಾಗುತ್ತಿದ್ದ ಮಣಿರಥದ ಕುದುರೆಗಳು, ರಥ; ಬೆಳ್ಗೊಡೆ ಬಿಲ್ಲುಗಳನ್ನು ಕೇವಲ ರಥ, ಕುದುರೆ ಬೆಳ್ಗೊಡೆಗಳೇ ಅಲ್ಲದೆ ಅವುಗಳಿಗೆ ಜೀವ ತುಂಬುತ್ತಿದ್ದ ತನ್ನ ಮಗನೇ ಇಲ್ಲವಾದ ತಲ್ಲಣ ಅವನಲ್ಲಾಗಿದೆ. ಆದ್ದರಿಂದ ಆತನ ದುಃಖ ವರ್ಧಿಸುತ್ತಿದೆ. ಆದರೆ ಕರ್ಣನಿಲ್ಲದ ಸ್ಥಿತಿಯನ್ನು ಕಂಡ ದುರ್ಯೋಧನ ಸ್ಥಿತಿಯನ್ನು ವರ್ಣಿಸುವುದು ಮುಂದಿನೆರಡು ಷಟ್ಟದಿಗಳ ಉದ್ದೇಶ.

ಇಲ್ಲಿ ದುರ್ಯೋಧನ ಕರ್ಣನಿಗಾಗಿ ಹಂಬಲಿಸುವಾಗಿನ ಸ್ಥಿತಿ ಹತಾಶೆಯದು. ಆ ದುಃಖ ಅವನನ್ನು ಪೂರ್ಣವಾಗಿ ವಿಸ್ಮರಣೆಗೊಳಗಾಗಿಸಿಬಿಟ್ಟಿದೆ. ಆದ್ದರಿಂದಲೇ ಕರ್ಣ, ರಾಧೇಯ ಎನ್ನಾಣೆ ಎನ್ನುತ್ತ ‘ಹಾ’ ಎಂದು ಹಂಬಲಿಸುವ ಚಿತ್ರವಿದೆ, ಈ ಹಂಬಲಿಕೆಯ ತೀವ್ರತೆ ಹೆಚ್ಚಾಗಿ ಆತ ಎಚ್ಚರ ತಪ್ಪುವ ಹಂತಕ್ಕೂ ಮುಟ್ಟಿ ಬಾಯಿಬಿಟ್ಟುಕೊಂಡುರಲುವುದು, ಕೈಯ ಆಯುಧ ಕೈಯಿಂದ ಜಾರುವುದು – ಇವೆಲ್ಲವನ್ನೂ ಕಂಡ ಪರಿವಾರ ತಾನು ಕಂಬನಿಯ ಕಡಲಲ್ಲಿ ಮುಳುಗಿ ಹೊರಳಾಡುವುದು ಇಷ್ಟೆಲ್ಲವನ್ನೂ ಚಿತ್ರಿಸುತ್ತದೆ.

ಕೇವಲ ಲಯದ ವೈವಿಧ್ಯಕ್ಕಾಗಿ ಅಲ್ಲ ಈ ಪದ್ಯಗಳು ಮುಖ್ಯವಾಗುವುದು; ಶೋಕತಪ್ತ ಹೃದಯಗಳ ಚಿತ್ರಣದಲ್ಲೂ ಆವು ವೈವಿಧ್ಯವನ್ನು ಮನಗಾಣಿಸುತ್ತವೆ. ಇಲ್ಲಿ ಬದುಕಿನ ವಿಭಿನ್ನ ಅನುಭವಗಳಿಗೆ ನಮ್ಮನ್ನು ಮುಖಾಮುಖಿಯಾಗಿಸಿದೆ ಎನ್ನುವುದು ಮುಖ್ಯವಾಗುತ್ತದೆ.

ಅತ್ಯಂತ ಸಂಕೀರ್ಣವಾದ ಚಿತ್ರವೊಂದನ್ನು ನೀಡುವಾಗಲೂ ಕುಮಾರವ್ಯಾಸನ ಷಟ್ಟದಿ ಕಾತರದಿಂದ ಕೂಡಿರುತ್ತದೆ. ಉದಾಹರಣೆಗೆ ಕೀಚಕನ ಮಾನಾಪಹರಣದ ಪ್ರಯತ್ನದಿಂದ ಪಾರಾಗಿ ಬಂದ ದ್ರೌಪದಿ ತನ್ನ ಅಹವಾಲನ್ನು ಹೇಳಿಕೊಳ್ಳಲು ಕತ್ತಲಾಗುವವರೆಗೂ ಕಾಯಬೇಕಾದ ಸಂಕಟಕ್ಕೆ ಗುರಿಯಾಗಿದ್ದಾಳೆ. ಅಂತಃಪುರದಿಂದ ನುಸುಳಿ ಬಂದ ಆಕೆ ಬಾಣಸದ ಮನೆಯನ್ನು ಹೊಕ್ಕರೆ ಭೀಮ ಅಲ್ಲಿ ನಿದ್ರಾಭಾವದಿಂದ ಮಂಚದಲ್ಲೊರಗಿರುವುದನ್ನು ಕಂಡ ಸಂದರ್ಭ ಇದು. ಎರಡು ಪದ್ಯಗಳನ್ನು ಗಮನಿಸೋಣ –

ಎಬ್ಬಿಸಲು ಭುಗಿಲೆಂಬನೋ – ⋃⋃⋃, ⋃⋃ – ⋃ –, ೫,೭
ಮೇಣ್‌ –,
ಒಬ್ಬಳೇತಕೆ ಬಂದೆ – ⋃,– ⋃⋃,– ⋃, ೩+೪, ೩
ಮೋರೆಯ ಮಬ್ಬಿದೇಕೆ – ⋃⋃, – ⋃, – ⋃, ೪,೬
ಎಂದು + ಎನ್ನ ಸಂತೈಸುವನೊ – – ⋃, – , – ⋃⋃⋃ ೫+೭
ಸಾಮದಲಿ ತುಬ್ಬುವುದೊ – ⋃⋃⋃, – ⋃⋃⋃ ೫, ೫
ತಾಬಂದ ಬರವು+ಇದು – – ⋃, ⋃⋃⋃⋃ ೫,೪
ನಿಬ್ಬರವಲಾ ಜನದ ಮನಕೆ – ⋃⋃⋃ – , ⋃⋃⋃, ⋃⋃⋃ ೭, ೩, ೩
ಇನ್ನು+ಎಬ್ಬಿಸಿಯೆ ನೋಡುವೆನು – – ⋃⋃⋃, – ⋃⋃⋃ ೭, ೫
ಎನುತ ಸಾರಿದಳು ವಲ್ಲಭನ ⋃⋃⋃, – ⋃⋃⋃, – ⋃⋃– (೩+೫+೬)
ಮೆಲ್ಲ ಮೆಲ್ಲನೆ – ⋃, – ⋃⋃ ೩, ೪
ಮುಸುಕ ಸಡಲಿಸಿ ⋃⋃⋃, ⋃⋃⋃⋃, ೩, ೪
ಗಲ್ಲವನು ಹಿಡಿದಲುಗಲು + * – ⋃⋃⋃, ⋃⋃⋃⋃⋃, ೫+೬
ಅಪ್ರತಿಮಲ್ಲನೆದ್ದನು – ⋃⋃ – ⋃ – ⋃⋃ ೭+೪
ನೋಡಿದನು ಪಾಂಚಾಲ ನಂದನೆಯ – ⋃⋃⋃, – – ⋃, – ⋃⋃⋃, ೫, ೫, ೫
ವಲ್ಲಭೆಯೆ ಬರವೇನು – ⋃⋃⋃, ⋃⋃ – ⋃, ೫, ೫
ಮುಖದಲಿ ತಲ್ಲಣವೆ ತೋರುತಿದೆ ⋃⋃⋃⋃, – ⋃⋃⋃, – ⋃⋃⋃ ೪, ೫, ೫
ತಳುವಿಲ್ಲದುಸುರು+ ⋃⋃ –, ⋃⋃⋃ ೪+೩
ಇರುಳೇಕೆ ಬಂದೆ ಲತಾಂಗಿ ಹೇಳೆಂದ ⋃⋃ – ⋃ – ⋃, ⋃ – ⋃ – – – ೫-೩, ೪-೬

. ೨೯, ೪೦ ವಿ.

ದ್ರೌಪದಿಯ ಮನದ ತುಮುಲ ಇಲ್ಲಿರುವುದು.

ಮೊದಲ ಸಾಲಿನಲ್ಲಿ ಐದು ಮತ್ತು ಏಳು ಮಾತ್ರೆಗಳ ಗಣಗಳಿದ್ದು ಮಲಗಿರುವ ಭೀಮ ಎಲ್ಲಿ ಕೋಪಗೊಂಡು ಬಿಡುತ್ತಾನೋ ಎನ್ನುವ ಕಳವಳವನ್ನು ಅಭಿವ್ಯಕ್ತಿಸುತ್ತವೆ.

ಎಡನೆಯ ಸಾಲು ಎರಡೆ ಮಾತ್ರೆಗಳಿಂದ ಕೂಡಿದೆ. ಅದರೆ ಅರ್ಥಸಂಪತ್ತು ಅಪಾರ. ‘ಅಥವಾ’ ಅವಳು ಇನ್ನೊಂದು ದಿಕ್ಕಿನಲ್ಲಿ ಚಿಂತಿಸುವಾಗ ಅವಳ ಮನಸಿನ ಉಯ್ಯಲಾಟವನ್ನದು ಧ್ವನಿಸುತ್ತದೆ. ಅಕ್ಕರೆಯಿಂದಾತ ಮಾತನಾಡಿಸಬಹುದಲ್ಲದೆ ಎಂಬ ಆಸೆಯನ್ನು ಹುಟ್ಟಿಸುತ್ತದೆ.

ಆದಕ್ಕಾಗಿಯೇ ಮೂರನೆಯ ಸಾಲು – ನೀನು ಒಂಟಿಯಾಗಿ ಏಕೆ ಬಂದೆ ಎಂದು ಆತ ಪ್ರಶ್ನಿಸಬಹುದಲ್ಲವೆ ಎಂದು ಆಸೆಗೊಳ್ಳುತ್ತದೆ. ೩, ೪, ೩ ಮಾತ್ರೆಗಳ ಗಣಗಳಿಂದ ಕೂಡಿ.

ನಾಲ್ಕನೆಯ ಸಾಲು ಅಂಥ ನೆಮ್ಮದಿಯ ಸ್ಥಿತಿಯಲ್ಲಿ ಆಕೆ ತನಗೆ ತಾನೇ ಸಮಾಧಾನ ಪಡಿಸಿಕೊಂಡು ಉತ್ಸಾಹಿತಳಾಗುವಂತೆ ಮಾಡಿದ್ದರಿಂದಲೇ ನಾಲ್ಕು ಮತ್ತು ಐದು + ಐದು + ಮೂರು + ಏಳು + ಮಾತ್ರೆಗಳ ಗಣಗಳು ಕೂಡಿವೆ, ತನ್ನನ್ನಾತ ಸಂತೈಸಬಹುದೆಂಬ ಆಸೆಯಿಂದ. ಆದ್ದರಿಂದಲೇ ಆಕೆ ಒಂದು ನಿರ್ಣಯಕ್ಕೆ ಬಂದು ಉಪಾಯವಾಗಿ ಅಥವಾ ಪ್ರೀತಿಯಿಂದ ಇವನನ್ನು ಎಚ್ಚರಗೊಳಿಸಿಯೇ ಬಿಡುತ್ತೇನೆಂಬ ತೀರ್ಮಾನಕ್ಕೆ ಬರುತ್ತಾಳೆ, ವಲ್ಲಭನ ಸಮೀಪಕ್ಕೆ ಬಂದು.

ಈವರೆಗಿನ ಚಿತ್ರದ್ದು ಒಂದು ಸೊಗಸಾದರೆ, ಮುಂದಿನ ಪದ್ಯದ ಸೊಗಸು ಬೇರೆಯದೇ ರೀತಿಯದು.

ಆಕೆ ತನ್ನ ವಲ್ಲಭನನ್ನು ಸಮೀಪಿಸಿದ್ದಾಳೆ. ಸಾಮೀಪ್ಯದ ಸುಖ ಪ್ರಾಪ್ತವಾಗಿದೆ; ವಲ್ಲಭನೆಂಬಕ್ಕರೆ ತುಳುಕಿದೆ. ಆದ್ದರಿಂದಲೆ ಆಕೆ ಅಕ್ಕರೆಯಿಂದ ಮೆಲ್ಲ ಮೆಲ್ಲನೆ ನಿಧಾನವಾಗಿ ಮುಸುಕು ಸಡಿಲಿಸುತ್ತಾಳೆ ಎನ್ನುತ್ತಾನೆ ಕವಿ. ಎಚ್ಚರಿಸಿದಳು ಎಂದೇನೂ ಹೇಳುವುದಿಲ್ಲ – ಗಲ್ಲವನು ಹಿಡಿದಲುಗಿದಳು ಎಂದು ಅಜ್ಞಾತ ವಾಸಾವಧಿಯ ಪ್ತ್ರೀತಿಯನ್ನೆಲ್ಲ ಸುರಿದು ಬಿಟ್ಟಿದ್ದಾನೆ ಕವಿ, ಗಲ್ಲವನ್ನು ಹಿಡಿದಲುಗಿಸುವ ಕ್ರಿಯೆಯಲ್ಲಿ.