ಲಲಿತಾ ದೊರೈ ಅವರು ದಿನಾಂಕ ೯-೧-೧೯೨೬ರಲ್ಲಿ ಜನಿಸಿದರು. ಇವರದು ಕಲಾವಿದರ ಕುಟುಂಬ. ತಂದೆ ಎಫ್.ಜಿ. ನಟೇಶ ಅಯ್ಯರ್ ಅವರ ಸಹೋದರ ಎನ್.ತ್ಯಾಗರಾಜನ್ ಉತ್ತಮ ನೃತ್ಯಪಟು. ಲಲಿತಾ ಅವರ ಪ್ರಾಥಮಿಕ ಶಿಕ್ಷಣ ಅಣ್ಣ ತ್ಯಾಗರಾಜನ್ ಅವರಲ್ಲೇ ನಡೆಯಿತು. ಅನಂತರ ಮತ್ತೊಬ್ಬ ಸೋದರ ಕಲ್‌ಐಮಾಮಣಿ ನಟನಂ ಮಣಿ ಅವರಲ್ಲಿ ಉಚ್ಚ ಶಿಕ್ಷಣ , ಗೃಹಸ್ಥಾಶ್ರಮದ ನಂತರ ಬೆಂಗಳೂರಿಗೆ ಬಂದ ಲಲಿತಾ ಅವರು ಬಸವನಗುಡಿ ಸ್ತ್ರೀ ಸಮಾಜದ ಆಶ್ರಯದಲ್ಲಿ ೧೯೫೦ರಲ್ಲಿ “ಶ್ರೀ ಗಣೇಶ ನಾಟ್ಯ ಮಂದಿರ” ಎಂಬ ನೃತ್ಯ ಶಾಲೆಯನ್ನು ಪ್ರಾರಂಭಿಸಿದರು. ಪ್ರಭಾತ್ ಶಿಶು ವಿಹಾರದ ಕರಿಗಿರಿ ಆಚಾರ್ ಹಾಗೂ ಟಿ.ವಿ.ಗೋಪಿನಾಥಾಚಾರ್ ಅವರ ಪ್ರೋತ್ಸಾಹ ಉತ್ತೇಜನ ಇವರಿಗೆ ಲಭಿಸಿತು.ಇಂದಿನವರೆಗೆ ಸುಮಾರು ೭೦೦ ಮಂದಿ ಶಿಷ್ಯರನ್ನು ನೃತ್ಯ ಕ್ಷೇತ್ರಕ್ಕೆ ನೀಡಿದ ಹೆಗ್ಗಳಿಕೆ ಇವರದ್ದು.

ಅನೇಕ ನಾಟ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ, ಮುಖ್ಯ ಪರೀಕ್ಷಕರಾಗಿ ಕರ್ನಾಟಕ ಸರಕಾರದಿಂದ ಮಾನ್ಯತ ಎಪಡೆದಿದ್ದಾರೆ.

ಇವರ ನೃತ್ಯ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೩-೯೪ರ ಪ್ರಶಸ್ತಿ ನೀಡುವುದರೊಂದಿಗೆ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.