೧೭. ಸವಾಲ್: ಚಿಗರಿಸವಾಲ್

ಚಿಗರಿ ಸವಾಲ್ ತಂದು ಹೆಗರಿ ಹಾಡತಿದಿ ನಿಗರಬೇಡ ನಿಂದ್ರ ತುಸ
ನಿನ್ನ ಉಗರಾಗ ಬಲ್ಲ ಉಲ್ಲಾಸ ಖರೆ ಬರಿ ಕುಚದ ಹೆಂಗಸ
ಮುಜರಿ ಹೊಡೆದು ಹಾಜರಿ ಜವಾಬ ಕೊಟ್ಟು ಸುತ್ತುವೆ
ಮುರಗಿ ಮುಂಡಾಸ || ಜೀ ||

ಸಾತ ತಬಕ ಜಮಿನ ಸಾತ ತಬಕ ಆಸಮಾನ ಚೌದಾ ತಬಕ
ಆದವು ಸರಸ ಇದು ಅಲ್ಲದೆ ಮತ್ತು ಅರಸ ಖುರಸ
ಒಟ್ಟು ಹದಿನಾರು ಆದವು ಇಡು ದ್ಯಾಸ
ಏಳು ಮಂದಿ ಸ್ತ್ರೀಯರಿಗಿ ಒಂಬತ್ತು ಮಂದಿ ಪುರುಷರಿಗಿ
ಸರಿ ಮಾಡಿನಿ ಇಲ್ಲದೆ ಆಯಾಸ || ಜೀ ||

ವಾಸಸ್ಥಾನದ ಹೆಸರು ದ್ಯಾಸವಿಟ್ಟು ಕೇಳು ಬೇಸರವಿಲ್ಲದೆ ಹೇಳುವೆ ಹಸಾ
ನಾಸುತ ಮಲಕುತ ಜಬರುತ ಲೇಸ
ಲಾಹುತ ಯಾಹುತ ಬಹುತ ಇವು ಫಾಸ
ಸಾಹುತ ಅನಸಿರು ಮಹಮುದ ಜುಮಲಾ ಲೆಕ್ಕ ಮಾಡಿಕೋ ಹೆಂಗಸ || ಜೀ ||

ತಕೀಖತ್ ಹಕ್ಕಿಕತ್ ಮಾರಿಫತ್ ಶರಿಯತ್
ನಾಲ್ವರು ಅಣ್ಣ ತಮ್ಮರು ಸೊಗಸ
ಬಿಂಬ ಮುಂಬಯಿ ಪಟ್ಟಣ ಅವರ ರಹಿವಾಸ
ಅದಕ ಅಧಿಪತಿ ಹಾನ ಮನೋ ರಾಜ ಅರಸ
ಖುದರತು ಕರಾಮತು ಇವೆರಡು ಮಡ್ಡು
ಯಾವತ್ತು ಅದರಲ್ಲಿ ವಿಶ್ವಾಸ
ಸ್ಥೂಲ ಸೂಕ್ಷ್ಮ ಕಾರಣ ಇವು ಮೂರು ಆಗಿವು ನಾಸ
ಗುರು ಅಹಂಕಾರ ಡಾಂಬಿಕ ಮದಾಂದ ನಾಲ್ಕು ಚಿಗರಿ
ಮೈತಿವು ಖಾಸ || ಜೀ ||

ದುಮಾಲಿ :
ರಜ ತಮ ಸ್ವತ ಮೂರು ಹಗ್ಗ ಚಿತ್ತ ಇದಕ ಬಿರಕ
ಚಂಚಲ ಬುದ್ದಿ ನಡ ಐತಿ ಹರಕ || ಜೀ ||

ಕರ್ಮ ಕರಸಿ ಕಣಗ್ಯಾ ಕುರ್ಣ ಪೂರ್ಣ ಹತ್ತಿತು ಗಿರಕ
ಬಂಡ ಪುಂಡಿ ಚೆಂಡಿ ಕಡಿದವು ಸಾರಕ || ಜೀ ||

ಕಪ್ಪನ ಕಣ್ಣ ಇಲ್ಲದ ಕುರುಡ ಎರಳಿಗಿ ನೋಡಿದ ಅಂದಕ
ಅರು ಎಂಬುದು ಹಿಡಿದಿದ ಬಂದೂಕ || ಜೀ ||

ಗುರು ಬೋಧ ಗುಂಡ ಹಾಕಿ ಗುರುತಿಟ್ಟು ಹೊಡದಿದ ತಡಕ ಪಡಕ
ಎರಳಿ ಹೊರಳಿ ಬಿತ್ತು ಮರಕೊಂಡ ಹೆಡಕ || ಜೀ ||

ಏರ :
ಮುಸಲ್ಮಾನ ರಸಿಯಾಲ ಹಿಂಗ ಖುಶಲಾ ಬರದೈತಿ
ಕನ್ನಡಗ್ಯಾರದು ಅಲ್ಲ ಈ ಜಿನಸ
ಅದಕ ಅವರಿಗೆ ಅದು ತಿಳಿಸಿನ ಖಾಸ
ಮುಂದೆ ಮುಸಲ್ಮಾನರು ಕೇಳಿರಿ ಖಿಸ || ಜೀ ||            ಚೌಕ

ಉರದ ಮಂದಿಗಿ ಖುರದ ಮುರದ ಆಗತೈತಿ ನಿರದಾರ
ಅವರಿಗೆ ಹೇಳುವೆ ನಿರಕ
ದಿಲ್ ಹಿಮ್ಮತ ಶೌಕತ ಮೆರದೈತರಿ ಹಿಡಿ ತರಕ
ನಾ ಮರದಾನೆ ಬಾಣ ನಡು ಐತಿ ಮುರಕ
ತನ್ನ ಎದಿರು ತಗದಿರು ಮಖದರ ಪ್ರಾರಬ್ದ
ಇದರ ಅರತ ಚಿತಿ ಇಡು ಸಾರಕ || ಜೀ ||

ಹಗ್ಗದ ತುದಿ ಬಡ್ಡಿ ಇಲ್ಲೆಂದು ಹಿಗ್ಗ ಜೊಗ್ಗಿ ಜೊಗ್ಗಿ ಹೇಳತಾಳ
ಹುಟ್ಟುದು ಬಡ್ಡಿ ಇದು ಇಲ್ಲ ಫರಕ
ತುದಿ ಮೋಕ್ಷಾ ಐತಿ ಮಾಡಬೇಡ ಮುರಕ
ಆಯುಷ ನಡು ಕಡ ಕಡದು ಆಗೋದು ಹರಕ
ದಿಲ್ ಖಯಾಲಂ ಹಾಲ್ ಹಾಲ ಹಲಾಲ ನಾಲ್ಕು ಚಿಗರಿ
ಆಗತಾವ ಕೇಳಕೋ ತಿರಕ || ಜೀ ||

ಜ್ಞಾನ ಬುದ್ದಿ ಚಿತ್ತ ಅಹಂಕಾರ ಬಾಣ ಕ್ರಾಂತಿ
ತಿರಬಿಟ್ಟಿರು ಅವಲಕ
ಚಿತ್ತ ಅಹಂಕಾರ ಚಿಗರಿ ಬಿದ್ದಿವು ನೆಲಕ
ಅರು ಹಗ್ಗಿಲೆ ಹಾಕಿಟ್ಟಿರು ಮಲಕ
ತನು ಎಂಬುವಂಥ ತಲಿ ಮೇಲಹೊತ್ತು ಘನವಾಗಿ
ನಡದಿರು ಉನ್ಮನಿ ಸ್ಥಲಕ || ಜೀ ||

ದುಮಾಲಿ :
ಕರ್ಮದ ಚರ್ಮ ಸುತ್ತಿದು ವರವಿಲ ಎಲು ಕಡದಾರ
ಕರ್ಮದ ಪಾಲ ಬಡದಾರ
ಚೌರ ಅಗಲೆ ಚಾಲಿಸ್ಥಾನ ಚೌರ ಊರೆಂದು ನಡುದಾರ
ಚೌದಾ ಲೋಕಕ ಜೈ ಭೇರಿ ಹೊಡದಾರ
ಚೌರ ವ್ಯರ ಚರ್ಮಂಬರಎಂದು ಚೌಕಾಸಿ ಮಾಡಿ ತಡದಾರ
ಚೌದಾ ಪಾಲ ಹಾಕಿ ಹಿಡದಾರ ||

ಏರ:
ಹಗರ ವಗರಾಣಿ ಹೊಡದು ಅಡಗಿ ಮಾಡತಿರು
ಗಡಗಿ ಕುಣಿತಿತ್ತು ಠಸಕಸಿ
ಅವರ ಉಗರ ಕಣ್ಣಾಗೆಲ್ಲ ಉಲ್ಲಾಸ
ಖರೆ ಬರಿ ಕುಚಾದ ಹೆಂಗಸ || ಜೀ || ಚೌಕ

ಅಡಗಿ ಮಾಡಿ ಗಡಗಿ ಮೇಲ ಇಟ್ಟರು ಐದು ಗಜ
ಹೋಯಿತು ಎತ್ತರ
ಹಾಯ್ ಹಾಯ್ ಎನ್ನುತ ಅವರು ಕುತ್ತಾರ
ಎಲ್ಲಾ ಹ್ಯಾಂಗ ಮಾಡುಣು ಅಂತಾರ
ಒಬ್ಬರ ಹೆಗಲ ಮೇಲೆ ಒಬ್ಬರು ನಿಂತಿದು
ಸವ್ವಾಮಳ ಏಳತಿದ್ದಿತು ಅಂತರ || ಜೀ ||

ಅಲಾಹಂ ಸೂರ ಮಂತ್ರ ಪಠಸಿರು ಗಡಗಿ ಕೈಗಿ ಬರಬೇಕು ಸ್ವತಂತ್ರ
ಬಿಸಮಿಲ್ಲ ಬರಕತರೆಲ್ಲ ಅಂತಂತರ ಖುಸಿ ಖುಸಿಲೆ ಊಟಕ ಕುಂತಾರ
ಹಾದಿಕಾರ ಗಾದಿ ಅರಸ ಪರಮೇಶ್ವರ ಎಲುಪಾಲ ಖೆಡವಿದ ಸರ್ವಂತರ || ಜೀ ||

ಹರದೇಶವರಿಗೆ ಮೂಲಾಗ್ಯಾರ ಮೂಳಾದರ ಇಲ್ಲದೆ ಮೂಗ್ಯಾರ
ಮುಂದಿನ ಸುದ್ದಿ ಒಂದುಳಿಯದೆ ಕೇಳಿರಿ ಚಂದದಿಂದ ಹೇಳುವೆನು ನಾಗ್ಯಾರ || ಜೀ ||

ದುಮಾಲಿ :
ಐದು ಮಳಾ ತೆಗಿ ಅಂದ್ರ ಐದುಸೂರ ಆಗತಾವ ಫರಜ
ಸಂಜಿ ವಕ್ತ ಅಂತಾರ ನಮಾಜ || ಜೀ ||

ಪಾಕ ಪರವರದಿಗಾರ ಫಕೀರಾಗಿ ಬಂದಿದಾನು ಸಹಜ
ಹಕ್ಯಾ ಹಲಲ ಎಲೂ ಕೊಟ್ಟಿರು ತಾಜ || ಜೀ ||

ಅದೇ ಹಕ್ನ ತಗೊಂಡು ಮಹ್ಮದ ಪೈಗಂಬರ ಹೋದ್ರು ಮಹಿರಾಜ
ನಿನ್ನ ಜವಾಬ ತಗೋ ಇಲ್ದೆ ದರಜ || ಜೀ ||

ಯಾ ದಿವಸ ಮಹಿರಾಜಕ ಹೋದ್ರು ಇಷ್ಟೆ ಹೇಳಿ ಹಾಡು ನೂರಜ
ಇಲ್ಲದರ ಹಾಡೂವದೆ ಇಲ್ಲ ನಿನ್ನ ಗರಜ || ಜೀ ||

ಏರ:
ಧರೆಯೊಳಧಿಕ ಮೆರೆಯುವ ಹಿರೇ ಸಾವಳಗಿ
ಜಗದ್ಗುರು ಶಿವಯೋಗಿ ರಹಿವಾಸ
ಅಲ್ಲಿ ಮಹ್ಮದ ಕವಿಗಾರ ಹರದಾಸ || ಜೀ ||                 ಚೌಕ

 

೧೮.ಜವಾಬ್: ಚಿಗರಿಜವಾಬ್

ಶಹಬ್ಬಾಸ್ರೆ ಶಾಹೀರ ಶರತ ಕಟ್ಟಿ ಹೊಡದಂತ ನೀ ಲಗ್ಗುರಿ
ಮುಜರಿ ಹಿಡಿದು ಜಪ್ಪಿಸಿ ಹೊಡದರ ತಪ್ಪೋದಿಲ್ಲ ಎಂದಿಗು ಗುರಿ || ಜೀ ||

ಸೀರಿ ಕುಪ್ಪಸ ಆಯೇರಿ ಮಾಡಲಾಕ ಕಲಗೆಯವರಿಗ ಇದು ಸಲ್ಲದೆ
ತುರತ ಕಟ್ಟಿ ನಿನ್ನತುರಬಿಗ ದಂಡಿ ತುರಾದವಗ ಇದು ಅಲ್ಲದೆ || ಜೀ ||

ಹಾರ ತುರಾ ಶಿರಪೇಚ ಸಲ್ಲುವದು ಸರ್ಕಾರದಾಗ
ಗಂಡಿನ ಬಿರದೆ ದರಕಾರ ಇಲ್ಲದೆ ನಿನ್ನ ಜವಾಬ
ತಗೋ ಕಾನೂನು ಪ್ರಕಾರ ಶಾಸ್ತ್ರ ತಗದ || ಜಿ ||

ಅಘಾದ ಸವಾಲ ನಮ್ಮ ಮ್ಯಾಲ ಹಾಕಿದಿ
ಮರ್ತ್ಯದಾಗ ಇದು ಇಲ್ಲದೆ ಒಂಬತ್ತು ಮಂದಿ
ತಂದಿ ಮತ್ತು ಏಳ ಮಂದಿ ತಾಯಿ ಸರಿಪಾಲ ಮಾಡು ನನಗ ಅಂದಿ || ಜೀ ||

ಅರಸೆ ಕುರಸೆ ಸಾತ ಆಸ್ಮಾನ ಶಾಲದ ನಿಟ್ಟರ ಬರದೆ
ಸಾತ ತಬಕ ಈ ಜಮೀನ ತಾಯಿ ಪಾಲಾ ಹಾಕಿನಿ ಹಂಚಿನಿ ಹರದೆ || ಜೀ ||

ಏಳ ತಾಯಿ ಹೊಟ್ಟಿಲಿ ನಾಲ್ಕು ಮಂದಿ ಮಕ್ಕಳ ಹುಟ್ಯಾರ
ಬರೆ ಬತಲೆ ದೋತರ ಇಲ್ಲ ಖರೆ ಮಾತ ಇದು ಸುಳ್ಳಲ್ಲ ಕೇಳೋ
ಆವುತ ಜಾವುತ ಬಲಾಯತ ಮಲಕುತ ಹೆಸರ
ಇವು ಖುಲ್ಲಾ ನಾಲ್ಕು ಮಕ್ಕಳಿದ್ದಾರಪ್ಪ ಮೊದಲ || ಜೀ ||

ಅವರು ನಾಲ್ಕು ಮಂದಿ ಕಲ್ತು ಒಂದು ಶಹರ ಪಟ್ಟಣ
ಸಂತಿ ಬಾಜಾರಕ ಹೋದರಲ್ಲ ಬಾಜಾರಕ ಹೋಗಲ್ದೆ ಬಾಗಿಲ್ಲ
ಆ ಬಾಜಾರದಾಗ ನಾಲ್ಕು ಬಾಣ ಖರೆ ಖರೆಸಿ ಮಾರಾಕ ಇಟ್ಟಾರಲ್ಲ
ದುಡ್ಡು ಕೊಟ್ಟ ತಗೊಂಡಾರ ಆ ಬಿಲ್ಲ ನಾಲ್ಕು ಮಂದಿ ನಾಲ್ಕು ಬಾಣ
ಚೌವಿಸ ಮಂದಿ ಬಾಜಾರದವರ ಹೆಸರ ಲೆಕ್ಕ ತಗೋ ಇಲ್ಲದಂಗ
ಸಿಲ್ಲಕ ವಜು ಆತ ಓದಿಲ ಗುರದಾ ಪೇಡ ಶಾ ಖಾನಾ ಆಪನೆಸಿ ರಕ್ಮಾ || ಜೀ ||

ಅಸ್ತಿ ಚರ್ಮ ರಕ್ತ ಮಾಂಸ ಕೇಳೋ ದಶ ಇಂದ್ರಿ ತಿಳಿ
ಮಸ್ತಿಕಾ ಕಲಸಿದ ಗುರುವಿನ ಜಲ್ದ ಕರಿಯೋ ನಿನ್ನ
ಜವಾಬ ತಗೋ ಇದು ಸುಸ್ತ್ಯಾಕ || ಜೀ ||

ಅದೇ ಜಾಣರಾದ ನಾಲ್ಕು ಮಂದಿ ಬಾಣ ತಗೊಂಡು
ಆಗಿ ನಿಂತಾರ ಜಾಕೋ ಅಟ್ಟ ಅರಣ್ಯದೊಳು ಹೋಗಿ
ನೋಡ್ಯಾರ ಜ್ಞಾನ ದೃಷ್ಠಿ ಎಂಬುವದೆ ಅಷ್ಟದಿಕ್ಕ
ಸುತ್ತಮುತ್ತ ಅಲ್ಲಿ ನೋಡದರಾಗೆ ಸತ್ತ ಚಿಗರಿ
ಹತ್ಯಾವ ಮೇಯಿಲಾಕ ಸ್ವಚಿತ ಎಂಬೋ ಬಾಣಿಲಿ
ಹೊಡದರ ಕರ್ಮ ಎಂಬೋ ಚಿಗರಿ ಸತ್ತ ಬಿತ್ತೊ ನೆಲಕ || ಜೀ ||

ಮನಸ ಎಂಬೋ ಬಡ್ಡಿ ತುದಿಯಿಲ್ಲದೆ ಹಿಗ್ಗಿಲಿ ಚಿಗರಿ
ಕಾಲಕಟ್ಟಿ ಹೊತ್ಯಾರ ಬೇಸ್ಯಾಕ ಚಿಗರಿ ಹೊತಕೊಂಡು
ಒಳ್ಳೆ ನಿಗರಿಲಿ ಹೊಂಟಾರ ಕೊಯ್ದು ಉಣಬೇಕೆಂಬ ಆಶಾಕ || ಜೀ ||

ನಾಲ್ಕು ಮನಿ ಹಳ್ಳ ಊರಿಗಿ ಬಂದ್ರ ಹಾಳ ಊರ ಇತ್ತೋ ಎಪ್ಪ
ಬಾಳ ಮ್ಯಾಲಕ ಚಿಗರಿ ಒಯ್ದು ಖಂಡ ಕಡದು ನುಗ್ಗ ಮಾಡಿ
ಗಡಗಿ ಮಾಡಿ ನೋಡ್ಯಾರ ಮ್ಯಾಲಕ ಮಾಡಿ ಹೆಡಕ || ಜೀ ||

ಒಬ್ಬರ ಮ್ಯಾಲ ಒಬ್ಬರ ನಿಂತರು ಇಬ್ಬರು ಮೂರು ನಾಲ್ಕು
ಮಂದಿಗ ಆ ಗಡಗಿ ನಿಲಕಿಲ್ಲ ಹಾರಿ ಗಗನಕ ಬಂದು
ಗಾರಿ ಅಗಳಿ ಕುಂತಾರ ಣ್ಯಾಲ ಮಾರಿ ಮಾಡಿ ನೋಡಿದ್ರ
ಹಾರಿ ಗಡಗಿ ಬಂತೋ ಹಂತ್ಯಾಕ ಸ್ಥೂಲ ತನು ಸೂಕ್ಷ್ಮಮ
ಮತಕಾರಣ ಮಹಾಕಾರಣ ತನು ಮನಿ ನಾಲ್ಕು || ಜೀ ||

ಸೂಕ್ಷ್ಮಮ ತನು ಎಂಬೋ ಮನಿ ಗಾರ‍್ಯಾಗ ಅಡಿಗಿ ಮಾಡಿ
ನಾಲ್ಕು ಮಂದಿ ಕುಂತಾರ ಊಟಕ ಆ ಒಂದನೆಯವ ಅಂದ
ಕೊಡರಿ ನನ್ನ ಪಾಲವು ಹಂಚಿ ಕೊಟ್ಟರ ಬಂದಿತು ಒಂದ ಎಲವು || ಜೀ ||

ಆ ಎಲವು ಐದನೆದವ ಮೂತತ್ವ ಆಗಿ ಮಣ್ಣಿನಪಾಲವು
ಆ ಮಣ್ಣಿನಾಗೆ ಎಲವು ಎಲವು ಕಲ್ತು ಮಣ್ಣ ಆಗ್ಯಾದ ಹೇಳೋ
ಏಸ ದಿನವು ಆ ಮಣ್ಣಿನ ದೇಹ ಮಣ್ಣಿನಾಗ ಹೋಯಿತೋ
ಏಸ ವರ್ಷಿಗ ಮಣ್ಣ ಆಗ್ಯಾದ ಹೇಳೋ ಲೆಕ್ಕವು ಹೇಳಿ ಹಾಡೋ || ಜೀ ||