೨೫.ಸವಾಲ್: ಶಕ್ತಿಸ್ವರೂಪ

ಶಕ್ತಿ ಸ್ವರೂಪ ಹೆಚ್ಚಿಗಾದ
ಬಲ್ಲವರಿಗಿ ಗೊತ್ತಾದ
ವಿರಕ್ತರಿಗಿ ತೊತ್ತಾದ
ಬೇಕಂತ ನಮ್ಮ ಮಾಯಿ
ವಿಶ್ವವ್ಯಾಪಿ ಹೊಂದ್ಯಾಳ ಜಗನ್ಮಾಯಿ || ಜೀ ||

ಪಂಚಭೂತಕ ಸಾಕ್ಷಿ ಹಾಳ
ಷಟ್‌ಸ್ಥಲದ ಕವಡಿಹಾಳ
ಚಿದ್ರೂಪನಲ್ಲಿ ನಿಷ್ಕಳ
ತೊಟ್ಟಿದ್ದಕಿ ತಾಯಿ
ತಾಯಿ ತರ್ಕ ಹಿಡಿಯೋ ಗಂಡ ನಾಯಿ || ಜೀ ||

ಶಿವಾದ್ವೈತ ನಿಜಗುಣ
ಅದರಂತೆ ಬಸವಣ್ಣ ಶಕ್ತಿ ಶರೀರ ಧಾರಣ
ಮಾಡ್ಯಾರ ಇದು ಎಂಥ ಅನ್ಯಾಯಿ
ಅಗಮ ತ್ರಯ ಪ್ರಜ್ಞಾನಕ ಆಶ್ರಯಿ || ಜೀ ||

ಧರೆಯೊಳು ಹಿರೇ ಸಾವಳಗಿ ಸ್ಥಳ
ಸಿದ್ಧಗ ಕಾಳಿ ಕರಣಿ ಮೂಲ
ಶಿವಲಿಂಗಮ್ಮನ ತ್ರಿಶೂಲ
ಮಹ್ಮದ ಮಾಡಿ ಗವಾಯಿ
ಹರದೇಶಂವಗ ಮಾಡಂದ್ರು ಗಿಲಾಯಿ || ಜೀ ||

 

೨೬.ಜವಾಬ್: ಅದಿಕಿನ್ನಅಚ್ಚಿಕಡಿಅನಾದಿ

ಗುರತಖಚ್ಚಿ ಕಿತ್ತೇನು ನಿನ ಮಡ್ಡಿ
ಶಕ್ತಿ ತರ್ಪೆಕಟ್ಟಿ ಶರ್ತಿಲಿ ನೀನು
ತೊಟ್ಟಿ ನಿಂತಿ ಚಡ್ಡಿ || ಜೀ ||

ಆದಿಶಕ್ತಿ ಅಧಿಕೆಂದು ಆಡಬೇಡ ಅಡ್ಡಿ
ಆದಿಕಿನ್ನ ಅಚಿಕಡಿ ಅನಾದಿ ಬಡ್ಡಿ
ಇದರ ಮರ್ಮ ತಿಳಿಯದೆ ಮಾತಾಡ ಬೇಡ
ಮಹಾಗಾಂವಿಯ ಕುಡ್ಡಿ || ಜೀ ||

ಯಕರ ವಕರ ಮಕರ ಮಹಾ ತತ್ವದ ಬಡ್ಡಿ
ನಕರ ಸಿಕರ ಜೊಂಯಿಂಟದೊಳು ಕೂಡ್ಯಾವ ದಡ್ಡಿ
ಕಾಲ ಕೆದರಿ ಕದನಾ ತಗಿಬ್ಯಾಡ ಕಲಬುರ್ಗಿ ಬುಡ್ಡಿ || ಜೀ ||

ಧರೆಯಳು ಹಿರೇ ಸಾವಳಗಿ ನಡುಗಡ್ಡಿ
ಶ್ರೀ ಜಗದ್ಗುರು ಶಿವಯೋಗಿಗಿ ಬೇಡಕೋ ಉಡ್ಡಿ ಒಡ್ಡಿ
ಮಹ್ಮದ ಕವಿಗಾರನ ಮುಂದ
ನಡಿಲಾರದು ನಾಗೇಶವರ ಫಡ್ಡಿ || ಜೀ ||