೨೭.  ಸವಾಲ್: ಕರಿತಿನಿಬಾರೈಯ್ಯಾ

ನೀನು ಯಾರ ಮಗು ಯಾರೈಯಾ
ನಾ ನಿನ್ನ ಕರಿತೀನಿ ಬಾರೈಯಾ || ಪ ||

ಪರಮಾನಂದ ಪುರುಷನಿಗೆ ಮಾಡಿನಿ ದೂರೈಯಾ
ಜಾರ ಕರ್ಮ ಆಗ್ಯಾದ ಎನಗ ಅಮೃತ ಕ್ಷಿರಯಾ
ಪ್ರಾಯ ಉಕ್ಕೇರಿ ಹೊಡಿತೈತಿ ಥೆರಿಯಾ || ಜೀ ||

ಬಂಗಾರದಂತ ಕಾಯಕ ಹಚ್ಚಿನಿ ಉರಿಯಾ
ಗುರುಲಿಂಗ ಜಂಗಮನ ಅವಯವಂಗಳು ತೆರಿಯಾ
ಲಿಂಗದಂತ ಕುಚ ಪಿಡಿಯೋ ಪ್ರಿಯಾ || ಜೀ ||

ಮನ ಎಂಬೋ ಮಡದಿದಾಗಿ ಹೊಲ ಮನಿ ಮಾರೈಯಾ
ತನವು ಎಂಬುವಂಥ ಹಣವು ತಂದಂಗ ತಾರೈಯಾ
ಹಣ ಇಲ್ದವನ ಮುಖ ಹೆಣದ ಸರಿಯಾ || ಜೀ ||

ನೀಲೂರ ಶರಣರು ಸ್ವರ್ಗದ ದೊರಿಯಾ
ಕವಿ ಮೀರಾಸಾಬ ಅವರ ಕಾಲಾನ ಮರಿಯಾ
ಪ್ಯಾಲ ಕುಡಿದು ಆಗಿದ ಮಳ್ಳ ಕುರಿಯಾ || ಜೀ ||

 

೨೮.ಜವಾಬ್: ನೀಯಾರೋಬಂದಿದ್ಯಾಕ

ನೀ ಯಾರೋ ಬಂದಿದ್ಯಾಕ ಯಾರೆಂಬುದು ಇಲ್ಲ ದ್ಯಾನಕ
ಬರಂಗೆ ಬಂದಿದಿ ನರಜನ್ಮಕ
ಮೂರು ದಿನದ ಸಂತಿ ಬಾಜಾರ
ಮುಳಗಿ ಹೋಗತಾವ ತಮ್ಮ ಮೂರು ಲೋಕ || ಜೀ ||

ಹುಟ್ಟೋದು ಸಾಯೋದು ಸಾಯೋದು ಹುಟ್ಟೋದು
ಯುಗ ಯುಗ ಅಂತರ ಯಾದಿ ಲೆಕ್ಕ
ಗೂಟ ಆದ ಇದು ಗಾರುಡಗ್ಯಾನ ಆಟ
ಆಟದ ಡಾಂವ ಕೊಟ್ಟು ಆಗೋ ಕಡಿಯಾಕ || ಜೀ ||

ಮುಂಚ ಅವಾ ಇವು ಪಂಚ ತತ್ವಗಳು
ಪಂಚಭೂತ ಕಲ್ತು ಆಗ್ಯಾವ ಏಕ
ಹಂಚಿ ಪಾಲಾಹಾಕಿ ಐದು ಮಂದಿ ಹಾರಿಹೋದ್ರು
ಹಂಚಾಗಿ ಎಲವುಗಳು ಬಿದ್ದಾವ ನೆಲಕ || ಜೀ ||

ತಿಂಡಿಗಾಗಿ ನೀವು ಹುಟ್ಟಿ ಬಂದಿರಿ
ದಂಡಿಗಾಗಿ ಮತ್ತ ಮಡಿದ ಹೋಗದಕ
ಗುಂಡಾಗಿರಿ ಮಾಡದವರಿಗಿ ಗುಂಡ ಹಾಕಿ ಹೊಡಿರೆದ
ಪುಂಡ ದ್ಯಾಗಾಯಿ ಈಶನ ಕವಿಗೋಳ ಠಳಕ || ಜೀ ||