೪೧.ಸವಾಲ್: ಗಂಡನಗಳಕಿ ಎರಡುಕೈಲಿಉಂಡಿ

ಗೆಳದಿ ಗಂಡನ ಮಾಡಿಕೊಂಡ
ಆ ಗಂಡನ ಗಳಕಿ ಎರಡು ಕೈಲಿ ಉಂಡ || ಪ ||

ಕೈಯಿಲ್ಲ ಕಾಲಿಲ್ಲ ಪೈಲೆನಿ ಮಂಡ
ನಾಮಿಲ್ಲ ರೂಪಿಲ್ಲ ತದ್ರುಪ ಗುಂಡ
ಕಣ್ಣು ಮೂಗು ಕಿವಿ ಇಲ್ಲ ತಾಯಿ ಶಿವ ಶಿವ ಅಖಂಡ || ಜೀ ||

ಕೂಡಂವಲ್ಲ ಕಾಡಂವ ಅಲ್ಲ ಕಾಡಿ ಕೂಡಿಕೊಂಡ
ಮಾಡಂಲ್ಲ ಮಟ್ಟಂವಲ್ಲ ಅರಿತಿರುವೆನು ಷಂಡ
ಈ ಷಂಡನ ಮಾಡಿಕೊಂಡು ಕಡಿಗೈತು ದಂಡ || ಜೀ ||

ಕುಲಾನಿಲ್ಲ ಛಲಾನಿಲ್ಲ ಕುಡಿತಾನ ಹೆಂಡ
ಸತ್ತ ಪಶು ಹೊತ್ತ ತಿರಗವ ಸದಾ ತಿಂತಾನ ಖಂಡ
ಮಾದಿಗರ ಚನ್ನಯ್ಯನಲಿ ಅಂಬಲಿ ಸುರಿದು ಎಬಶ್ಯಾನ ಹೊಲಿಬಂಡ || ಜೀ ||

ಮೂವತ್ತು ಮೂರು ದೇವತೆಗಳು ಆತನ ಹಿಂಡ
ಶರಪಿನ ವಸ್ತು ಕೊರಳಾಗ ಚೌರಿಯ ಝಂಡ
ಅಖಿಳಾಂಡ ಕೋಟಿ ಬ್ರಹ್ಮಾಂಡ ಅವಗ ಆಡತೈತಿ ಕೊಂಡ || ಜೀ ||

ಧರೆಯೊಳು ಹಿರೇ ಸಾವಳಗಿ ಗ್ರಾಮೈತಿ ಪುಂಡ
ಜಗದ್ಗುರು ಶ್ರೀ ಸಿದ್ಧಗ ಸದಾ ಹಸಿರು ಝಂಡ
ಕವಿಗಾರ ಮಹ್ಮದನಿಂದ ನಾನು ಮುತ್ತೈತನ ಕಂಡ || ಜೀ ||

 

೪೨.ಜವಾಬ್: ಉಂಡುಉಂಡಿಲ್ಲನಬೇಡಘಳಕಿ

ಉಂಡು ಉಂಡಿಲ್ಲನ ಬೇಡ ಘಳಕಿ
ಆ ಪುಂಡ ಗಂಡ ಕಂಡು ಹಿಡಿದು ಮಾಡಿದನು ಖಳಕಿ || ಪ ||

ಸಾವಿರದೆಂಟು ಬ್ರಹ್ಮಾಂಡ ಸೇರಿ ಮಾಡಿದನು ಹೊಳಕಿ
ಕೈ ಕಾಲು ಇಲ್ಲದ ಶಿವ ತಿಳಿ ತಿಳಿ ನಳಕಿ
ಚಿನ್ನದ ಚಿತ್ಕಾಲ ಚಿದ್ಬಂದು ಚಿತ್ರದ ಮೊಳಕಿ || ಜೀ ||

ಇಚ್ಛದ ಇಲಿ ಮಡಿ ಕಡಿದಿದು ನೋಡಿ ಅಳತಿದ ಬಿಕ್ಕಿ ಬಿಕ್ಕಿ
ಶಿವನಿಗೆ ಅರಿಯದೆ ಸಿಂಪಿಗ್ಯಾನ ಕೈಯೊಳುಸಿಕ್ಕಿ
ಶಿವ ನಿಜ ರೂಪ ತೋರಿಸಿ ಬಿಟ್ಟಿಲ್ಲೆನ ತಿಕ್ಕಿ || ಜೀ ||

ಡಂಬರ ಚೆನ್ನಿ ಕತ್ತಿಗಿ ಹೊತ್ತು ಶಿವಾ ತಂದಾನಂದಿ ಕರಕಿ
ನೀಲೂರ ನಂಬೆಕ್ಕನ ಮನಿಗಿ ಶಿವ ಸಾಂಬನ ಹರಕಿ
ಅತ್ರಿ ಅನುಷ್ಠಾನ ಮೆಚ್ಚಿಕೊಟ್ಟ ಕರುಣೇಶ ಕರಕಿ || ಜೀ ||

ಇಂದ್ರನ ಗುಡ ಯುದ್ಧ ಮಾಡಿ ಬಸವ ಐಶ್ವರ್ಯ ಗೆದ್ದ ದುಡಕಿ
ಇಂದ್ರ ವಿಷ್ಣು ಬ್ರಹ್ಮ ಮೂವರು ಅತ್ತಿರು ಮಿಡಕಿ
ಶಿವ ಬಸವನ ಗುಡ ಯುದ್ಧ ಮಾಡಿದನು ಹುಳಗಡಕಿ || ಜೀ ||

ಧರೆಯೊಳು ಹಿರೇ ಸಾವಳಗಿ ಗ್ರಾಮ ಐತಿ ಕಡಕಿ
ಶ್ರೀಮನ್ ಮಹಾ ಶಿವಯೋಗಿದು ವಾಹನ ಪಲ್ಲಕ್ಕಿ
ಕವಿಗಾರ ಮಹ್ಮದನ ಖ್ಯಾಲಿ ಮಾಡಿದ ಹರದಿ ಹಾದರ ಹುಡುಕಿ || ಜೀ ||