೪೩.ಸವಾಲ್: ತಿಂಡಿಗಿಬಂದಳಾಪೋರಿ

ಹಿಂಡಿ ತಿಂದು ತಿಂಡಿಗಿ ಬಂದಾಳ ಪೋರಿ
ಖಿಂಡಿ ಬಿಟ್ಟು ಫಂಡಿಲೆತ್ತಿ ತೋರಶ್ಯಾಳ ಉಟ್ಟಂತ ಗಗ್ಗರಿ || ಪ ||

ಸ್ವಚ್ಛ ಪ್ರಕಾಶ ಅಚ್ಚ ಬಿಳಿದು ನೋಡ್ಯಾಳಪ್ಪ ಹೋರಿ
ಅಚ್ಚ ಬಿಚ್ಚಿ ಮುಚ್ಚ ತೆರದು ಹೊಡಿ ಅಂತಾಳ ಹಾರಿ
ಪೋರಿ ಹಾರಿ ರುಚಿಗಾಗಿ ಹಾಕ್ಯಾಳ ಎಂಬತ್ನಾಲ್ಕು ಫೇರಿ || ಜೀ ||

ರಂಡಿಯಾಗಿ ದಂಡಿಕಟ್ಯಾ ಬೈರುಂಡಿ ಮುಂಡಿ ನಾರಿ
ಕುಂಡಿತಾನ ಕೂದಲ ಬಿಟ್ಟು ಹೆಂಡಿ ಹೊತ್ತಾಳ ಚೋರಿ
ಪುಂಡ ಗಂಡನ ಕೊಳ್ಳಿಗಿ ಬಿದ್ದು ಹೊಡದಾಳ ಹಕಾರಿ || ಜೀ ||

ರಬಸದಿಂದ ಕುಬಸ ಹರಕೊಂಡು ನಗತಾಳ ಚುಲಬುರಿ
ಉಬ್ಬಸ ಹೆಚ್ಚಾಗಿ ಉಬ್ಬಿತು ಪಿಂಡದ ನಗಾರಿ
ಘಾರಿ ಕುರಡಗಿ ಕುಣಿಯುತ್ತ ತಿಂದು ಇಟ್ಟಿತು ವಾಕರಿ || ಜೀ ||

ಸುಬ್ಬಿ ಉಬ್ಬಿ ಮಬ್ಬಿಲೆ ನಡದಾಳ ಕುಂಡಿ ಠಿಗರಿ
ರಂಗ ಸಂಗ ಕೊಟ್ಟ ಬಡಿದ ತೊಡಕಲದಾಗ ತಗೋರಿ
ಕುಂಡಿಯ ಸೊಂಟ ವಾರಿಯಾಗಿ ಖಂಟ ಮುರದಿತ್ತು ಬರೋ ಬರಿ || ಜೀ ||

ಅಕ್ಕಾ ಪಕ್ಕಾ ಯಾರು ಇಲ್ಲ ಸಿಕ್ಕಾಗ ಸಿರಚೋರಿ
ತುಕ್ಕ ಹಿಡಿಯುವ ರೊಕ್ಕ ಬಿಡಬೇಡಿ ಲೆಕ್ಕಿನ ಸಿರಿ
ಸೀರಿಗಿ ನಾರಿ ವಾರಿ ಮಾಡಿ ಉಟ್ಟಿಳು ಪಾರನ ಪರಬಾರಿ || ಜೀ ||

ಉಟ್ಟ ಸೀರಿ ದಿಟ್ಟ ಕಳದು ಎಳದು ಮೂರು ಬಾರಿ
ಅಳದ ನೋಡಿದ ಕಳದ ರಾತ್ರಿ ಕತ್ತಲ್ಯಾಗ ಕಿರಿಕಿರಿ
ಕಿರಿ ಕಿರಿ ತಾಳಲಾರದೆ ತನ್ನ ತಾನೆ ಸೇರಿಳು ಶಿವಪುರಿ || ಜೀ ||

ಧರೆಯೊಳು ಹಿರೇ ಸಾವಳಗಿ ಸಿದ್ದನ ಕಮರಿ
ಹರದಾಸ ಮಹ್ಮದ ತಿರವಿದ ಅರವಿನ ಠಿಗರಿ
ಠಿಗರಿಯ ನೆರಳಲ್ಲಿ ಬುಗರಿ ಆಡಿದ ಕಂದ ದಸ್ತಗಿರಿ || ಜೀ ||

 

೪೪. ಜವಾಬ್: ಕುಂಡಿತಿರವ್ಯಾನಚೋರ

ಹಂಡಪಾರ ಬಂಡ ಮಾಡಿ ಗಂಡಂತಾನ ಜೋರ
ಗಂಡಿನ ಗುರ್ತ ತುರ್ತಂದರ ಕುಂಡಿ ತಿರವ್ಯಾನ ಚೋರ || ಪ ||

ನೆಟ್ಟಿನ ಮಾತು ನೆಟ್ಟಗ ಆಡಿದರ ಹಟ್ಟಂಗ ಬರೋಬರ
ಸಿಟ್ಟಿಗಿ ಬಂದು ಶಂಟ ಹರಕೊಂಡ ತನ್ನ ತಾನೆ ತರಾತುರ
ಬಂಡನ ಕುಂಡ್ಯಾಗ ಗುಂಡಿಟ್ಟು ಹೊಡಿರಿ ಕುಟ್ಟಿದಂಗ ಖಾರ || ಜೀ ||

ಗಂಡುಗಲಿ ಗಂಡನ ಮಾತು ರುಂಡ ಮಲಿರುಂಡ ಹಾರ
ಕಣ್ಣು ಮುಚ್ಚಿ ಕಚಿ ಪಿಚಿ ಆಣಿ ತುಳಿದಂಗ ಬಾವಾ ಪೀರ
ಗಚ್ಚಿನ ಗ್ವಾಡ್ಯಾನ ಗುಂಡ ಹೊಡದಂಗ ಷಂಡನ ಹಣಿಬಾರ || ಜೀ ||

ಹಿಜಡ್ಯಾನ ಹಿರ್ಸ ಹೊರ್ಸಿಗಿ ಬಾರಿ ಅರ್ಸಿಗಿ ಆಸರ
ಸಣ್ಣ ಪಾರಗ ಕಣ್ಣ ಹೊಡಿತಾನ ಇಲ್ಲದೆ ಬ್ಯಾಸರ
ಹಗಲು ರಾತ್ರಿ ಬಗಲಾಗ ತಿಕ್ರಿ ತಗೋದಿಲ್ಲ ಬಸರ || ಜೀ ||

ಮಣ್ಣ ಮಡಕ್ಯಾಗ ಗಿಣ್ಣಕಾಸಿ ಬೇಡತಾದ ಕಣ್ಣಿ ಮಸರ
ಕಣ್ಣಿಲ್ಲ ಇವಗ ಕಾಮಣಾಗ್ಯಾದ ಕಂಡವರಿಗಂತ ಹಸರ
ಅಯ್ಯಯ್ಯೋ ಕಾಮಣೆಂತಾದು ಹಲ್ಲಿಗೆ ಮಲ್ಲಿ ಬಸರ || ಜೀ ||

ಕೊರಳಲ್ಲಿ ಕವಡಿಸರ ಹಿರೋಡ್ಯಾ ಇವನ ಹೆಸರ
ಕರಿಯದೆ ಕರದಲ್ಲಿ ಬರತಾನ ಬದ್ದಗೇಡಿ ಬ್ಯಾಸರ
ಕಣ್ಣ ಮುಚ್ಚಿ ಕತ್ತಲ್ಯಾಗ ಇರತಾನ ಮಾಡಿದಂಗ ಇಸಾರ || ಜೀ ||

ಧರೆಯೊಳು ಹಿರೇ ಸಾವಳಗಿ ಧರಿಗಿರಿ ಧರಿಸುರ
ಶ್ರೀಮನ್ ಶಿವಯೋಗಿ ನೆನದಲ್ಲಿ ವರಪುರ
ಕಂದ ದಸ್ತಗಿರಿ ವೃಂದಗ ಬೆಳಗಿದ ಕರ್ಪೂರ || ಜೀ ||