|| ವೃತ್ತ ||

ಇದರ ವಿಶೇಷವೇನಿದರ ದೊಡ್ಡಿ ತದೇನೊಳೆ ಬೆಳ್ಳೆಯಾದ ವೇ
ಷದ ಬಲುಹೇನಿದಕ್ಕೆ ಹೊಱಹಂಚಿಕೆಯಲೇನಹುದೇನಮಾಗದಾ
ಗದು ಬಿಡು ಕಾಡಬೇಡ ನಿಜ ಭಕ್ತಿನಿತ್ತು ಭವತ್ಪ್ರಸನ್ನತಾ
ಸದನದಲಿಂಬಿಡಯ್ಯಾ ಪರಮ ಪ್ರಭುವೆ ಮಹದೈಪುರೀಶ್ವರಾ

|| ವಚನ ||         

ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ ಹಿರಿಯರು,
ಪುರಾಣದ ಹಿರಿಯರು, ವೇಷದ ಹಿರಿಯರು, ಬಾಷೆಯ ಹಿರಿಯರು
ಇವರೆಲ್ಲರು ತಮ್ಮ ಮೆಱೆದರಲ್ಲದೆ ನಿಮ್ಮ ಮೆಱೆದುದಿಲ್ಲ.
ತಮ್ಮ ಮಱೆದು ನಿಮ್ಮ ಮಱೆದಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವರು.

ಅನ್ನದಾನಿ, ವಸ್ತ್ರದಾನಿ, ಹಿರಣ್ಯದಾನಿಗಳ
ಬಾಗಿಲ ಕಾಯಿದಿರಯ್ಯಾ ಬಹುವಿಧದ ವೇಷಧಾರಿಗಳು!

ಅದೆಂತದಡೆ :

ವಯೋವೃದ್ಭಾಸ್ತಪೋವೃದ್ಧಾ ವೇದವೃದ್ಧಾ ಬಹುಶ್ರುತಾಃ
ಸರ್ವೇ ತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ ||
ಎಂದುದಾಗಿ
ದೈನ್ಯಬಿಟ್ಟ ನಿರಾಭಾರಿಯ ತೋಱೆ ಬದುಕಿಸಯ್ಯಾ
ಕೂಡಲಚನ್ನಸಂಗಮದೇವಾ!

ವರವೇಷದ ವಿಭುತಿ ರುದ್ರಾಕ್ಷಿಯ ಧರಿಸಿಕೊಂಡು
ವೇದ ಶಾಸ್ತ್ರ ಪುರಾಣಾಗದ ಬಹುಪಾಠಿಗಳು
ಅನ್ನ ಹೊನ್ನು ವಸ್ತ್ರವ ಕೊಡುವನ ಬಾಗಿಲ ಕಾಯಿದು
ಮಣ್ಣ ಪುತ್ಥಳಿಯಂತೆ ಅನಿತ್ಯನೇಮದ ಹಿರಿಯರುಗಳು.
ಅದೆಂತೆಂದಡೆ :
ವೇದವೃದ್ಧ ವಯೋವೃದ್ಧ ಶಾಸ್ತ್ರವೃದ್ಧಾ ಬಹುಶ್ರಾತಾಃ ||
ಇತ್ಯೇತೆ ಧನವೃದ್ಧಸ್ಯ ದ್ವಾರೇತಿಷ್ಮಂತಿ ಕಿಂಕರಾಃ ||
ಎಲ್ಲಾ ಹಿರಿಯರುಗಳು ಲಕ್ಷಮಿಯ ದ್ವಾರಪಾಲಕರಾದರಯ್ಯ
ಅಱುಹಿಂಗೆ ವಿಧಿಗೆ ಗುಹೇಶ್ವರಾ.

ಜಂಗಮಲಿಂಗವಾದಲ್ಲಿ ಜಗದ ಜಂಗುಳಿಗಳ ಬಾಗಿಲಕಾಯಿದಿರಬೇಕು
ಒಡೆಯನ ವೇಳೆಯ ಬಂಟಕಾಯಬೇಕಲ್ಲದೆ
ಬಮಟನ ವೇಳೆಯ ಒಡೆಯ ಕಾಯಬಲ್ಲನೆ?
ಇಂತಿನಱೆದು ರಾಜಮಂದಿರದಲ್ಲಿ, ಗ್ರಹಸ್ಥಾಶ್ರಯದಲ್ಲಿ
ವೇಳೆ ಅಱೆತು ಭುಂಜಿಸಿಹೆನೆಂಬ ದರ್ಶನ ಜಂಗುಳಿಗಳಿಗೆ
ಜಂಗಮಸ್ಥಲವಿಲ್ಲಯೆಂದೆ ಸದಾಶಿವಮೂರ್ತಿಲಿಂಗವು
ಅವರಂಗಕ್ಕೆ ಮುನ್ನವೆ ಇಲ್ಲವೆಂಬೆ.

ವಚನದ ರಚನೆಯ ಬಲ್ಲ ಹಿರಿಯರೆಲ್ಲರು
ಮೂರುಳ್ಳವನ ಮನೆಯ ಬಾಗಿಲ ಕಾಯಿದಿದ್ದಾರೆ.
ಹೇಳಿಕೇಳಿ ಬಲ್ಲತನ ವಾದೆನೆಂಬುವರೆಲ್ಲರು
ಬಾಗಿಲಲ್ಲಿಯ ಸಿಕ್ಕಿದರು.
ಸ್ಥಾವರಾದಿಗಳು ಮೊದಲಾಗಿ ಇದಿರಿಟ್ಟು ಕುಱುಹೆಲ್ಲವು
ವಿಕಾರದ ಠಾವಿಂಗೆ ತೀರಿಸಿಕೊಂಬುದಕಿಂದ ಕಡಿಮೆ,
ಅಱೆವುಳ್ಳ ಜ್ಞಾನಿಗಳೆಂಬ ಅಜ್ಞಾನಿಗಳು.
ಇದು ಕಾರಣ, ಸಂಚಿತ ಪ್ರಾರಬ್ಧ ಆಗಾಮಿ ಎಂಬ ಕರ್ಮ
ಎಲ್ಲಿದ್ದರೂ ತಪ್ಪದು,
ಹೆಲುಬಿ ಹರಿದಾಡಬೇಡ, ಸದಾಶಿವಮೂರ್ತಿ ಲಿಂಗದ
ಒಲವರವಿಲ್ಲದೆ ನೆರೆನೆಂಬು.

ಆಶೆಯೆಂಬೊ ಶೂಲದ ಮೇಲೆ ವೇಷವೆಂಬ ಹೆಣನ ಕುಳ್ಳಿರಿಸಿ
ದೇಶದ ಮೇಲುಳ್ಳ ಹಿರಿಯರು ಹೀಗೆ ಸವೆದು ಹೋದರು ನೋಡಾ
ಆಶೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರೆ ಕಂಡು
ಹೇಸಿಕೆಯಾಯಿತ್ತು ಕಾಣಾ ಗುಹೇಶ್ವರಾ.

ಜಾತಿವಿಡಿದು ಜಂಗಮನ ಮಾಡಬೇಕೆಂಬ ಪಾತಕರು ನೀವು ಕೇಳಿರೋಃ
ಜಾತಿ ಘನವೋ, ಗುರುದೀಕ್ಷೆ ಘನವೋ?
ಜಾತಿಯೇ ಘನವಾದ ಬಳಿಕ ಆ ಜಾತಿಯೇ ಗುರುವಾಗಿರಬೇಕಲ್ಲದೆ,
ಗುರುದೀಕ್ಷೆಗಳ ಪಡೆದು ಗುರುಕರಜಾತರಾಗಿ ಜಾತಕವಕಳೆದು
ಪುನರ್ಜಾತರಾದೆವೆಂದು ಏತಕ್ಕೆ ಬೊಗಳುವಿರೋ?
ಜಾತಿವಿಡಿದು ಕಳೆಯಿತ್ತೆ ಜೋತಿತಮವು?
ಅಜಾತಂಗೆ ಆವುದು ಕುಲ? ಅವಕುಲವಾದಡೇನು,
ದೇವನೊಲಿದಾತನೇ ಕುಲಜನು.
ಅದೆಂತದಡೆ ;
ದೀಯತೇ ಜ್ಞಾನ ಸಂಬಂಧಃ ಕ್ಷೀಯತೇಚ ಮಲತ್ರಯಂ!
ದೀಯತೇ ಕ್ಷೀಯತೇಯೇನ ಸಾದೀಕ್ಷೇತಿನಿದಗದ್ಯತೇ ||
ಎಂಬುದನಱೆದು ಜಾತಿ ನಾಲ್ಕುವಿಡಿದು ಬಂದ ಜಂಗಮವೇ
ಶ್ರೇಷ್ಠವೆಂದು, ಅವರ ನೊಡಗೂಡಿಕೊಂಡು ನಡೆದು
ಜಾತಿಯೆಂಜಲುಗಳ್ಳರಾಘಿ, ಉಳಿದ ಜಂಗಮವ
ಕುಲವನೆತ್ತಿನುಡಿದು, ಅವನತಿಗಳಖೆದು,
ಕುಲವೆಂಬಸರ್ಪ ಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ,
ಹಂದಿನಾಯಂತೆ ಒಡಲಹೊರೆವ ದರುಶನ ಜಂಗುಳಿಗಳು ಜಂಗಮ
ಪಥಕ್ಕೆ ಸಲ್ಲರಾಗಿ,
ಅವರಿಗೆ ಗುರುವಿಲ್ಲ, ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ,
ಜಂಗಮವಿಲ್ಲ, ಜಂಗಮಪ್ರಸಾದವಿಲ್ಲ.
ಇಂತೀ ತ್ರಿವಿಧ ಪ್ರಸಾದಕ್ಕೆ ಹೊಱಗಾದ ನರಕ ಜೀವಿಗಳ
ಗುರು ಚರ ಪರವೆಂದಾರಾಧಿಸಿ ಪ್ರಸಾದವಕೊಳಸಲ್ಲದು ಕಾಣಾ,
ಕೂಡಲಚನ್ನಸಂಗಯ್ಯ.

ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನು ಕೂಡಿಕೊಂಡು
ಹಳ್ಳಿ ಹಿರಿಯರು ಪಟ್ಟಣದಲ್ಲಿ ತಿರಿದುಂಡು
ಅಲ್ಲದಾಟವನಾಡಿದಡೆ ತಮ್ಮ ಬಲ್ಲತನಕ್ಕೆ ಭಂಗವಾತಯಿತ್ತು.
ಆಶನ, ವ್ಯಸನ, ಹಸಿವು, ತೃಷೆ, ನಿದ್ರೆ ಇಚ್ಛೆಗೆ    ಹರಿದಾಡುವರೆಲ್ಲ ಇನ್ನು ಬಲ್ಲರೆ ಹೇಳಿರೆ
ಅನಮತ ಮೇಳಾಪದಚ್ಚಗೋಷ್ಠಿಯ  ಭಂಡರೆಲ್ಲ ಇನ್ನು ಬಲ್ಲರೆ ! ಹೇಳರೆ !
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿನಿಚ್ಚೆಗೆ
ಹರಿದಾಡುವ ಹಮದಿಗಳೆಲ್ಲ ನಾಯನೊಡನಾಡಿದ ಕಂದನಂತಾಯಿತ್ತು
ಗುಹೇಶ್ವರಾ.

ಹಗಲು ನಾಲ್ಕು ಜಾವ ಆಶನಕ್ಕೆ ಕುದಿವರು
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು
ಕಂಡವರ ಕಂಡು ಮಂಡೆಯ ಬೋಳಿಸಿ ಕೊಂಬುವನು
ಉಂಬುವರ ಕಂಡು ಉಂಬುವರು
ಪುಣ್ಯಕ್ಷೇತ್ರ, ಪುರುಷಕ್ಷೇತ್ರ, ಅಷ್ಟವಿಧಾರ್ಚನೆ,
ಷೋಡಶೋಪಚಾರವೆಂಬದಲ್ಲದೆ ತಮ್ಮ ನಿಧಾನವ
ಸಾದಿಸುವ ಭೇದವನಱೆಯದೆ ಷಡುಸ್ಥಲ ಜ್ಞಾನಿಗಳೆಲ್ಲ ಸತ್ತರಲ್ಲ ಗುಹೇಶ್ವರಾ.

೧೦

ತನು ಬತ್ತಲೆಯಾಗಿದ್ದರೇನೋ ಮನಶುಚಿಯಾಗದನ್ನಕ್ಕರ?
ಮಂಡೆ ಬೋಳಾದಡೇನೋ ಭಾವ ಬಯಲಾಗದನ್ನಕ್ಕರ?
ಭಸ್ಮವಹೂಸಿದಡೇನೋ ಕರಣಾದಿ ಗುಣಂಗಳನೊತ್ತಿ    ಮೆಟ್ಟ ಸುಡದನ್ನಕ್ಕರ?
ಈ ಆಶೆಯ ವೇಷದ ಭಾಷೆಗೆ ನೀನೆ ಸಾಕ್ಷಿಯಗಿ
ಛೀ ಎಂಬೆ ಕಾಣಾ, ಗುಹೇಶ್ವರಾ.

೧೧

ಉಡಲು ಸೀರೆಯ ಕಾಣದೆ ಬತ್ತಲೆಯಿಪ್ಪರಯ್ಯಾ
ಉಣಲಿಕನ್ನವ ಕಾನದೆ ಹಸಿದಿಪ್ಪರಯ್ಯಾ.
ಮೀಯಲೆಣ್ಣೆಯಕಾಣದೆ ಮಂಡೆಯ ಬೋಳುಮಾಡಿಕೊಂಡಿಪ್ಪರಯ್ಯಾ
ದಿಟದಿಂ ಬಿಡಿಸಬಾರದಂತೆ ಈ ಸಟೆಯ ನಿಃಸಂಸಾರವ ಧರಿಸಿಪ್ಪವರಿಗಂಜುವೆ ಕಾಣಾ,
ಸಕಳೇಶ್ವರಾ.

೧೨

ಕಂಗಳೊಳಗಣ ಕಟ್ಟಗೆಯ ಮುಱೆಯದೆ
ಕಾದೊಳಗಣ ಕಪ್ಪರವನೊಡೆಯದೆ
ತನ್ನೊಳಗಿಪ್ಪ ನಿಕ್ಷೇಪವ ಭೇದಿಸಿ ಉಣಲಱೆಯದ
ಬಿನುಗರೆಲ್ಲ ಹಲುಗಿರಿವುತ್ತಹರು ಕಾಣಾ ಗುಹೇಶ್ವರಾ.

೧೩

ರಚನೆಯ ರಂಜಕವ ನುಡಿವಾತ ಜಂಗಮವಲ್ಲ.
ನರರ ಹಾಡಿಹೊಗಳಿ ಬೇಡಿಕೊಂಡುಂವಾತ ಜಂಗಮವಲ್ಲ.
ನರರ ಕೈವಾರಿಸುತ ಜಂಗಮವಲ್ಲ.   ನರರ ಸ್ತುತಿಸುವಾತ ಜಂಗಮವಲ್ಲ.
ಇದು ಕಾರಣ-ಕೂಡಲಸಂಗಯ್ಯನಲ್ಲಿ.
ಪ್ರಭುವೇ ಜಂಗಮ, ಬಸವನೇ ಭಕ್ತ.

೧೪

ಜಂಗಮ ಜಂಗಮವೆಂದೇನೋ ಲಜ್ಜ ಭಂಡರಿರಾ?
ಜಂಗಮವಂತೆ ಕಳಂಕಿಯೆ? ಅಪೇಕ್ಷಿಯೇ? ಅಸಕನೆ?
ಪಾಶಜೀವಿಗಳನೆಂತು ಜಂಗಮವೆಂಣಬೆನಯ್ಯಾ?
ಜಂಗಮವೇನು ದೋಷಿಯೆ? ದುರ್ಗುಣಿಯೇ? ಅಸತ್ಯನೇ
ಅನಾಚಾರಿಯೇ? ಅಲ್ಲ ಕಾಣಿರಯ್ಯಾ.
ಹೇಳಿಹೆ ಕೇಳಿ :
ನಿಕಷ್ಕಳಂಕ, ನಿರಾಪೇಕ್ಷಚ, ನಿರಾಸಕ, ನಿರ್ದೋಷಿ, ನಿಷ್ಪುರುಷ,
ಸತ್ಯ, ದಯೆ, ಕ್ಷಮೆ, ಶಾನಮತಿ, ಸೈರಣೆ, ಸಮಾಧಾನ  ಸಮತೋಷ,
ಪರಿಣಾಮ, ನಡೆತತ್ವ, ನಡೆ, ಪಾವನ,
ಸುಳುಹು, ವಸಂತ, ಗಾಳಿ, ಜಗಧಾರಾದ್ಯ, ಸ್ವಯ,
ಸ್ವತಂತ್ರ, ಚರಪರಿಣಾಮಿ, ಪರಿಪೂರ್ಣ ಪ್ರಕಾಶ,
ಸರ್ವತತ್ವಾಶ್ರಯ, ಶೂನ್ಯ ನಿಶೂನ್ಯ ನಿರಾಳನೆ
ಜಮಗಮದೇವ ಕಾಣಿರೊ,
ಕೇಳಿ ಮಹಾಲಿಂಗ ಗುರುಶಿವಸಿದ್‌ಏಶ್ವರ ಪ್ರಭುವಿನ ಘನವಾ.

೧೫

|| ತ್ರಿವಿಧಿ ||

ಬಣ್ಣ ಹೆಲವಪ್ಪಲ್ಲಿ ಬಣ್ಣ ತಾ ಹಲವಾಗಿ ಬಣ್ಣ ಮೂಜಗಕೆ ಮುಕ್ಕಣ್ಣ ತಾನೆ.
ಬಣ್ಣಕರು ಬಣ್ಣದೊಳಗಾಳುವುದನೇ ಕಂಡು
ಅಣ್ಣ ನಗುತಿರ್ದೆನೈ ಯೋಗಿನಾಥಾ.

೧೬

ಆಶೆಯೆಂಬೊ ಪಾಶ ಮೋಸವನು ಮಾಡಿತ್ತು  ಈಶನ ವೇಷವನು ಧರಿಸಿ ಏವೆ?
ಭಾಸುರ ಕೋಟಪ್ರಕಾಶನೆ ಕರುಣಿಸೈ
ವೇಷದ ಹೊಲಬನು ಯೋಗಿನಾಥಾ.

೧೭

ಆಸೆಯಿಂದವೆ ಹುಟ್ಟಿ, ಆಸೆಯಿಂದವೆ ಬೆಳೆದು,
ವೇಷದಿಂದಲಿ ನಾನು ನೈನಱೆದೆನು  ಈಷಣತ್ರಯವೆಮಬ ಪಾಶನಂ ಪಱೆದು ನಿ
ಮ್ಮಾಸೆಯೊಳಿರಿಸೆನ್ನ ಯೋಗಿನಾಥಾ.