|| ವೃತ್ತ ||           

ಭ್ರಮಿಸದೆ ಮಾಣ್ಭರೇ ಬಯಲಬೊಮ್ಮದ ಹಮ್ಮಿನ ಬಿಮ್ಮುಹತ್ತಿವಿ
ಶ್ರಮಿಸುವ ಬೇದಮಂ ತಿಳಿಯಲೊಲ್ಲದೆ ಯೋಗಿಗಳೆಂದು ದೃಷ್ಟಯೋ
ಗಮೆನಿಪ ಲಿಂಗಧಾರಣಸಮರ್ಚನ ಚಿಂತನ ನಿಶ್ಚಿತಕ್ರಿಯಾ
ಕ್ರಮಪರಿದೀಕ್ಷೆಯಿಲ್ಲದಿಹ ಮತ್ತಜನರ್ಭವದೋಳ್ ಶಿವಾಧವಾ.    

|| ವಚನ ||         

ಗುರು ತೋಱೆದ ಲಿಂಗವು ಮನಸ್ಥಲವಾಗಿರಲು
ಪವನಭೇದದಿಂದಱೆದೆನೆಂದಡೆ ಅದೇ ದ್ರೋಹವು.
ಇಡಾಪಿಂಗಳ ಸುಷುಮ್ನನಾಳದಿಂದ ಕಂಡೆಹೆನೆಮದಡೆ ಕೂಡಲಸಂಗಮದೇವರು
ಮೂಗಕೊಯ್ಯದೆ ಮಾಣ್ಬನೆ.

ಶ್ರೋತ್ರ, ನೇತ್ರ, ಜಿಹ್ವೆ, ತ್ವಕ್ಕು, ಘ್ರಾಣವೆಂಬ ಬುದ್ಧೇಂದ್ರಿಯಂಗಳ ಕೂಡಿಕೊಂಡು
ಇಚ್ಛೈಸುವ ವಾಯುಗಳಾವಾವೆಂದಡೆ :
ರೇಚಕ, ಪೂರಕ, ಕುಂಭಕರೂಪಿಂದ ಚೇಷ್ಟಿಸುವುದೊಂದೆ ಪ್ರಾಣವಾಯು
ರಸಂಗಳ ನೀರಸಂಗಳ ಮಾಡಿ ಮಲಮೂತ್ರಂಗಳ ನಡೆಸುವುದೊಂದು ಅಪಾನವಾಯು.
ಶಕ್ತಿ ಚೇಷ್ಟೆಯ ಮಾಡಿ ನಡೆಸುವುದೊಂದು ವ್ಯಾನವಾಯು.
ಪಾದವ ನೆಲಕ್ಕಿಕಿಸುವುದು ಉದಾನವಾಯುವು.
ಸಮಧಾತುಗಳಱೆದು ಅನ್ನಪಾದಿಗಳ ಪಸರಿಸುವುದೊಂದು ಸಮಾನವಾಯು.
ರಸವ್ಯಾಪ್ತಿಯ ಮಾಸುವುದೊಂದು ನಾಗವಾಯು.
ಮೃಗವಟ್ಟಗೆಯ ತೊಳೆಯುದೊಂದು ಕೂರ್ಮವಾಯು.
ಆಗಳಿಕೆ ಮೈಮುಱುಹ ಮಾಡುವುದೊಂದು ಕೃಕರವಾಯು.
ಓಕರಿಕೆಯ ಮಾಡುವದೊಂದು ದೇವದತ್ತವಾಯು.
ನುಡಿಯ ಬುದ್ಧಿಯ ಮಾಡಿ ನಡೆಸುವುದು ಧನಂಜಯವಾಯು.
ಇಂತೀ ದಶವಾಯುಗಳಿರೋ ಸ್ಥಾನವಾಗಳಾವಾವೆಂದಡೆ ;
ಗುಹ್ಯದಲ್ಲಿ ಅಪಾನವಾಯು, ನಾಭಿಯಲ್ಲಿ ಸಮಾನವಾಯು,
ಹೃದಯದಲ್ಲಿ ಪ್ರಾಣವಾಯು, ಕಂಠದಲ್ಲಿ ಉದಾನವಾಯು,
ಸಮಸ್ತಸಂದುಗಳಲ್ಲಿ ವ್ಯಾನವಾಯು, ಇಡನಾಳದಲ್ಲಿ ನಾಗವಾಯು,
ಪಿಂಗಳನಾಳದಲ್ಲಿ ಕೂರ್ಮವಾಯು, ಸುಷಿಮ್ನನಾಳದಲ್ಲಿ ಕೃಕರವಾಯು,
ಹಸ್ತದಲ್ಲಿ ದೇವದತ್ತವಾಯು, ಜಿಹ್ವೆಯಲ್ಲಿ ಧನಂಜಯವಾಯು.
ಇಂತೀ ವಾಯುಪ್ರಾಣಿಯನೆ ಕಳೆದು ಲಿಂಗಪ್ರಾಣಿಯ ಮಾಡಬಲ್ಲಡೆ
ಕೂಡಲಚನ್ನಸಂಗಯ್ಯನಲ್ಲಿ ಅದೇ ಯೋಗ.

ಯೋಗವಿಯೋಗವೆಂಬ ಹೊಲಬಬಲ್ಲವರನಾರನು ಕಾಣೆ.
ನವನಾಳದ ಸುಳುಹ ತಿಳಿದು ಅಷ್ಟದಳ ಕರ್ಣಿಕೆಯ
ತಿಳಿದು ಸಿಲುಕಿದೆನೆಂಬುದು ಯೋಗವಲ್ಲ.
ಐವತ್ತರಡಕ್ಷರದ ಶಾಸನದ ಲಿಪಿಯನೋದಬಲ್ಲೆವೆಂಬುದು ಯೋಗವಲ್ಲ.
ಅಂತರಂಗವೆ ವಾಜ್ಷ್ಮನಾತಿತ ಬಹಿರಂಗವಂದಡೆ ಕ್ರಿಯಾರಹಿತ.
ನಮ್ಮ ಗುಹೇಶ್ವರ ಲಿಂಗವು ಷಡುಚಕ್ರದ ಮೇಲಿಲ್ಲ
ಕಾಣಾ ಸಿದ್ಧರಾಮಯ್ಯಾ.

ಇಡಾಪಂಗಳ ಸುಷುಮ್ನನಾಡಿಗಳಲ್ಲಿನ ಆತ್ಮನ
ಸಂಚರಿಸಬಾರದೆಂಬ ಯೋಗಾಂಗದಣ್ಣಗಳು ನೀವು ಕೇಳಿರಯ್ಯಾ.
ವಾಯುವಧೋಮುಖಕ್ಕೆ ತರಬಾರದೆಂದು ಊರ್ಧ್ವಮುಖಕ್ಕೆ ತಂದು
ಅಮೃತವನುಂಡೆನೆಂಬುವುದೆಲ್ಲವು ಹುಸಿಯಲ್ಲದೆ.
ಅಮೃತವನುಂಡೆನೆಂಬ ಅಷ್ಟಾಂಗ ಕರ್ಮಿಗಳು ನೀವು ಕೇಳಿರೊ!
ಶರೀರದಲ್ಲಿ ಶುಕ್ಲಶೋಣಿತ ಮಜ್ಜೆಮಾಂಸ ಇದರೊಳಗಾದ
ಸಾಕಾರದ ತಲೆಯಲ್ಲಿ ನಿರಾಕಾರದ ಮೃತವನುಂಡೆನೆಂಬುದೆಲ್ಲವು ಹುಸಿಯಲ್ಲವೆ.
ಬಂಜೆಯಾವಿಗೆ ಕ್ಷೀರದ ಕೆಚ್ಚಲುಂಟೆ? ಕಲ್ಲಿನ ಹಳ್ಳದಲ್ಲಿ ಚಿಲುಮೆಯಿಂದು ಸಾರವುಂಟೆ?
ಹೊಲ್ಲಹದೇಹದಲ್ಲಿನಲ್ಲೆ ಕ್ಷೀರವುಂಟೆ? ಇವೆಲ್ಲವನಱೆಯದೆ
ಬಲ್ಲತನವ ಸೂಱೆಗೊಟ್ಟಗೆಲ್ಲ ಗೂಳಿಗೆಲ್ಲಿಯದೋ ಲಿಂಗಾಂಗಯೋಗ.
ಪರಿವವಾರಿಧಿಗೆ ನೆರೆಪಾಂಸೆ ಮುಸುಕುವುದೆ? ಸುಡುವ ಅನಲಂಗೆ ತೃಣ ಕಟ್ಟುವಡೆವುದೆ?
ಅಱೆ ಪರಂಜ್ಯೋತಿ ಪ್ರಕಾಶಂಗೆ ತನುವದಂಡಿಸಿ ಕಂಡೆನೆಮಬ ಭ್ರಾಂತೆಲ್ಲಿಹುದೊ?
ಆತನಿರತವು ಘಠಮಠದೊಳಗೆ ಗ್ರಹಿಸಿದ್ಧ ಬಯಲಿನ ಇರವಿನಂತೆ,
ರವಿಯೊಳಗೆ ಸೂಸೂವ ಕಿರಣದಂತೆ, ವಾಯುವಿನ ಬೆಂಬಳಿಯ ಗಂಧದಂತೆ,
ಬಿತ್ತಳಿದ ರಜ್ಜುವಿನ ತೈಲದಕೂಡೆ ಬೆಳಗುವ ಕಳೆಯಂತೆ
ಭಾವದ ಮಧ್ಯದಲ್ಲಿ ನಿಂದು ಓಂಕಾರ ಸ್ವರೂಪವನಱೆಯದೆ
ಕೆಟ್ಟರಲ್ಲ ಕರ್ಮಕಾಂಡಿಗಳು, ಪಳುಕಿನ ಶಿಲೆಯಲ್ಲಿ ನಿಂದ ವಾರಣದಂತೆ
ನಿನ್ನ ನೀ ತಿಳಿಯಾ ನಿಷ್ಕಳಂಕ ಮಲ್ಲಿಕಾರ್ಜುನನಲ್ಲಿ
ಸರ್ವಾಂಗಭರಿತವಾದ ಶರಣಂಗಲ್ಲದಿಲ್ಲ.

ರಸವಾದಂಗಳ ಕಲಿತಲ್ಲಿ ಲೋಹಸಿದ್ಧಿಯಲ್ಲದೆ ರಸ ಸಿದ್ಧಿಯಾಡುದಿಲ್ಲ
ನಾನಾ ಕಲ್ಪಯೋಗ ಅನೃಶ ಕರಣಂಗಳ ಕಲಿತಲ್ಲಿ ಕಾಯಸಿದ್ಧಿಯಲ್ಲದೆ ಆತ್ಮಸಿದ್ಧಿಯಾದುದುಂಟೆ?
ನಾನಾ ವಾಗ್ವದಂಗಳಿಂದ ಹೋರಿ ಮಾತಿನ ಮಾಲೆ ಯಾಯಿತ್ತಲ್ಲದೆ ಆತ್ಮನಿಹಿತವಾದುದಿಲ್ಲ.
ನೀನಾನೆಂದಲ್ಲಿ ನೀನು ನಾನಾದೆಯಲ್ಲದೆ ನಾನು ನೀನಾದುದಿಲ್ಲ. ಗೋರಕ್ಷಪಾಲಕ ಮಹಾಪ್ರಭು
ದ್ಧಸೋಮನಾಥಲಿಂಗವಾದೆಯಲ್ಲದೆ ಲಿಯ್ಯವಾಗಿ ಆ ಲಿಂಗನೆಯಾದುದಿಲ್ಲ.

ಷಡಾಧಾರದಲ್ಲಿ ಅಡಿಗದ್ದಿ ಹೋಹರೆಕಂಡೆ,
ತತ್ವಂಗಳ ಗೊತ್ತು ಹೇಳಿ ಮುಟ್ಟದೆ ಹೋಹರ ಕಂಡೆ,
ಮಾತಿನಲ್ಲಿ ಬ್ರಹ್ಮವನಾಡಿ ವಸ್ತುವನಱೆಯದೆ ಭ್ರಾಂತಾಗಿ ಕೆಟ್ಟವರ ಕಂಡೆ,
ಅಷ್ಟಾಂಗಯೋಗವನಱೆದಿಹೆವೆಂದು ಘಟಕೆಟ್ಟು ನಷ್ಟವಾದವರ ಕಂಡೆ,
ಇಂತಿವನಱೆದು ಕರ್ಮಯೋಗವ ಮಾಡದೆ ವರ್ಮಗಳನಱೆತು,
ಸರ್ವಗುಣ ಸಂಪನ್ನನಾಗಿ ತನ್ನತಾನಱೆದಾತ್ಮಂಗೆ ತನಗೇನು
ಅನ್ನ ಬಿನ್ನವಿಲ್ಲ ಪ್ರಸನ್ನಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವು ತಾನಾದವಂಗೆ.

ಅಕ್ಷರ ಲೆಕ್ಕ, ಗಣಿತ, ಗಂಧರ್ವ, ಜ್ಯೋತಿಷ್ಯ, ಆತ್ಮವಿದ್ಯ, ತರ್ಕ,   ವ್ಯಾಕರಣ,
ಅಮರಸಿಂಹ, ಛಂದಸ್ಸು, ನಿಘಂಟು, ಸಾಲಿಗೋತ್ರ,
ಗ್ರಹವಾದ, ಗಾರುಡ ದೂತ ವೈಶಿಕ ಶಾಸ್ತ್ರ,
ಸಾಮುದ್ರಿಕ ಶಾಸ್ತ್ರ,
ಅಶ್ವಪರೀಕ್ಷೆ, ಗಜಪರೀಕ್ಷೆ, ಗೋಕರ್ಣದಾಡಾಬಂಧ,
ಮೂಲಕಸಿದ್ಧಿ        ಭೂಚರತ್ವ, ಅತೀತಾನಾಗತ, ವರ್ತಮಾನಸ್ಥೂಲ ಸೂಕ್ಷ್ಮ
ಇಂದ್ರಜಾಲ, ಮಹೀಂದ್ರಜಾಲ, ಒಡ್ಡ, ಮಲ್ಲೇಶ್ವರ, ಪರಕಾಯ
ಪ್ರವೇಶ, ದೂರದೃಷ್ಟಿ, ದೂರ ಶ್ರವಣ, ಋಗ್ಯಜ್ಜುಸ್ಸಾಮಾಥರ್ವಣ,
ಶ್ರತಿ, ಸ್ಮೃತಿ, ಆಯುರ್ದಾಯನಷ್ಟ ಮುಷ್ಟಿ
ಚಿಂತನೆ ಚೋರವಿದ್‌ಎ ಅಮೃತೋದಾಯ ಭಾಷಾ ಪರೀಕ್ಷೆ
ದಿಣಾವಿದ್ಯ, ಭೃಂಗಿ ವಿದ್ಯ, ಶಾಸ್ತ್ರ ವಿದ್ಯ, ಧನುರ್ವಿಧ್ಯ,
ಅಗ್ನಿಸ್ತಂಭನ, ಜಲಸ್ತಂಭನ, ವಾಯುಸ್ತಂಭನ, ವಾದವಶ್ಯ,
ಅಂಜನಾಸಿದ್ಧಿ, ಘಟಕಾಸಿದ್ಧಿ, ಮಂತ್ರತಂತ್ರ ಸಿದ್ಧಿ ಇವಲ್ಲವ ಕಲಿತಡೇನೊ
ಚೌಷಷ್ಠಿ ವಿದ್ಯ ಕಳಾವಿದನೆನಿಸಿಕೊಂಬನಲ್ಲದೆ ಲಿಂಗವಂತನೆನಿಸಿಕೊಂಬುದಿಲ್ಲ.
ಲಿಂಗವುಳ್ಳ ಶಿವಭಕ್ತಂಗೆ ಇವರೆಲ್ಲ ಕೂಡಿ ಸರಿಬಾರರೆಂದ,
ಕಲಿದೇವರದೇವಾ.

ಅಂಬಿಕಾಯೋಗಿಗಳ ಡೊಂಬರಿಗೆ ಸರಿಯೆಂಬೆ.
ಹಠಯೋಗಿಗಳ ಅಟಮಟಕಾಱರೆಂಬೆ.
ಅಷ್ಟಾಂಗಯೋಗಿಗಳ ಕಷ್ಟಕರ್ಮಿಗಳೆಂಬೆ.
ಪವನ ಯೋಗಿಗಳ ಪ್ರಪಂಚಿಗಳೆಂಬೆ.
ಲಯಯೋಗಿಗಳ ನಾಯಗಿಂದ ಕಡೆಯೆಂಬೆ.
ಅದೇನು ಕಾರಣವೆಂದಡೆ ;
ಲಯಯೋಗವೆಂಬುದು ನಾನಾದರ್ಶನದಲ್ಲಿ ವರ್ತಿಸುವುದಾಗಿ ಆದ ಶಿವಯೋಗಿಗಳೊಲ್ಲಬ್ಬರು.
ಮಂತ್ರಯೋಗವೆಂಬುದು ಸರ್ವರನು ಸಂದೇಹಕ್ಕಿಕ್ಕಿಕೊಲುತ್ತಿಪ್ಪುದು.
ಅದೇನು ಕಾರಣವೆಂದಡೆ :  ಮಂತ್ರವೇ ಲಿಂಗ, ಲಿಂಗವೇ ಮಂತ್ರವೆಂದಱೆದು
ಲಿಂಗ ನೆನಹ ಸಂಬಂಧಿಸಿಕೊಳಲಱೆಯದೆ ಲಿಂಗವಿರಹಿತವಾಘಿ
ಮಾಡುತ್ಪ್ಪರಾಗಿ ಆದ ಅಂಗಲಿಂಗ ಸಂಬಂಧಿಗಳು ಮೆಚ್ಚರು ನೋಡಾ.
ಅದೇನು ಕಾರಣವೆಂದಡೆ :  ಕೆಲವು ಶೈವರುಗಳು ಮಾಡುವರಾಗಿ
ರಾಜಯೋಗವೆಂಬುದು ಗಾಜುಗೋಜು ನೋಡಾ.
ಅದನು ಲಿಂಗ ವಿರಹಿತವಾಗಿ ಜ್ಞಾತೃಜ್ಞಾನಜ್ಞೇಯ ವೋಂದಾದಲ್ಲಿಯೇ
ಯೋಗವೆನುತಿಪ್ಪರಾಗಿ ಇವು ಒಂದೂ ಲಿಂಗಾಂಗದ  ಯೋಗದ ಹೆಜ್ಜೆಯಲ್ಲ.
ಅದು ಕಾರಣ ಲಿಂಗನಿಷ್ಠರು ಮೆಚ್ಚರು.
ಅದೇನು ಕಾರಣವೆಂದಡೆ :
ಲಿಂಗವ ತೆಗೆದಡೆ ಲಿಂಗದೊಡನೆ ಪ್ರಾಣ ಹೋಗದಾಗಿ
ಅವೆಲ್ಲಿಯ ಯೋಗವೈ ಭ್ರಾಂತುಯೋಗ.
ಇದು ಕಾರಣ ನಿಮ್ಮಲಿಂಗ ಪ್ರಾಣಿಗಳು
ಪ್ರಾಣಲಿಂಗ ಸಂಬಂಧಿಗಳು ಪ್ರಸಾದ ಮುಕ್ತರು.
ಈ ಮೂಱು ಪ್ರಕಾರದಲ್ಲಿ ಕೂಡುತಿಪ್ಪರು ಶಿವಯೋಗಿಗಳು.
ಇಸು ಕಾರಣ; ನಿಮ್ಮ ಶರಣರು ಸ್ವಾನುಭಾವಜ್ಞಾನಶುದ್ಧ ಶಿವಯೋಗದಲ್ಲಿ
ಪ್ಪರು ಕಾಣಾ, ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ.

|| ತ್ರಿವಿಧಿ ||

ಕರ್ಮಕೌಶಲ್ಯದಿಂ ನಿಮ್ಮನಱೆದೆಹೆನೆಂದು
ಬೊಮ್ಮನ ನುಡಿದು ಭ್ರಮಿತನಾದೆ.   ನಿರ್ಮಲ ಶಿವಯೋಗಧರ್ಮವನಱೆಯದೆ
ಹಮ್ಮಿನೊಳಿರ್ದೆನೈ ಯೋಗಿನಾಥಾ.

೧೦

ಎಲವೆಲವೊ ಮೂಜಗದ ಪರಿಯಲ್ಲ ಶಿವಯೋಗ
ಒದವಿನ ಬ್ರಹ್ಮಾಂಡದಂತ್ಯವಲ್ಲಾ
ಬದವಿದ ಸಾಯುಜ್ಯ ಪದಮೀಱೆದ ಭಕ್ತಿ
ಮದಕರಿಗೆಪ್ಪುದೆ ಯೋಗಿನಾಥಾ

೧೧
ಭಕ್ತಿಯೆಂಬಾ ಗಜವು ಮತ್ತನಾಗಿಯೆ ಬರೆ ವಿ
ಚಿತ್ರತರವೆಂದೆನಿಪ ಮಾವತಿಗನು
ಅಷ್ಟಾಂಗಯೋಗದಲಿ ಮೆಟ್ಟ ನಿಲಿಸುವ ಭೇದ ಮತ್ತಾರು
ಬಲ್ಲರೈ ಯೋಗಿನಾಥಾ.