|| ವೃತ್ತ ||           

ಪರವಧವಂ ಪರದ್ರವಿಣಮಂ ಪರಹಿಂಸೆಯನೈದೆ ದೂರದಿಂ
ಪರಿಹರಿಸಿ ಸ್ವದೇಶಿಕ ನಿರೂಪಿತಮಪ್ಪ ಷಡರ್ಧ ಸಂಗ್ರಹಾ.
ಚರಣೆಯೊಳೇಕಲಿಂಗ ನಿನಿಷ್ಠೆ ಸಮಾಹಿತ ಮಾದೊಡಂತದೇ
ಪರಮ ಮಾಹೇಶ್ವರಸ್ಥಲದ ಲಕ್ಷಣ ವೃತ್ತಿವಿದಂ ಶಿವಾಧವಾ.

|| ವಚನ ||         

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ;   ಲಿಂಗವ ಮುಟ್ಟದ ಕೈ ಮೀಸಲು.
ಕಂಗಳೊಳೊಗೆಸೆದು ನೋಡ ಪರವಧುವ,
ಮನದಲ್ಲಿ ಅವ್ಯವ ನೆನೆಯ  ಮಾನವರ ಸೇವೆಯ ಮಾಡ; ಲಿಂಗವ ಬೇಡ,
ಲಿಂಗದ ಹಂಗನೊಲ್ಲ, ಧನದಲ್ಲಿ ವಂಚನೆಯಿಲ್ಲ,
ಕೂಡಲಸಂಗಮದೇವಾ, ನಿಮ್ಮ ಶರಣ.

ನಿಷ್ಠೆ ನಿಬ್ಬಱಗು ಘಟ್ಟಗೊಂಡಡೆ ಏಕೋಭಾವದಲ್ಲಿ ಸೊಮ್ಮುಸಂಬಂಧ;
ಆಹ್ವಾನ ವಿಸರ್ಜನೆ ದುರ್ಭಾವ ಬುದ್ಧಿಲಯವಾದಾತ ಮಹೇಶ್ವರನು;
ಪರದೈವ, ಮಾನವಸೇವೆ, ಪರಸ್ತ್ರೀ ಪರಮಧನಂ ಬಿಟ್ಟು ಏಕಲಿಂಗ
ನಿಷ್ಠಾಪರನಾಗಿ,
ದಾಸತ್ವಂ ವೀರದಾಸತ್ವಂ ಭೃತ್ಯತ್ವಂ ವೀರಭೃತ್ಯತಾ
ಸೌಜನ್ಯಂ ಸುಮನೋವಸ್ಥಾ ಸಮಯಾಚಾರಂಣತು ಷಡ್ವಿಧಂ ||
ಎಂಬ ಶ್ರುತಿಯರ್ಥದಲ್ಲಿ ನಿಹಿತನಾಗಬಲ್ಲಡೆ, ಆತ ಮಹೇಶ್ವರನಿಪ್ಪನಯ್ಯಾ.
ಗುರುಮಾರ್ಗವೇ ತನಗೆ ಸನ್ಮತನಾಗಿ, ತನ್ನ ಮಾರ್ಗವೇ ಗುರುವಿನಲ್ಲಿ
ಸನ್ಮತವಾಗಿ, ಇರಬಲ್ಲಡೆ ಆತನೇ ಮಹೇಶ್ವರನು.
ಈ ಮಾಟವನಱೆಯದೆ ನಾನು ಮಹೇಶ್ವರನೆಂಬ ,ಮೂಕೊಱೆಯನ
ಮೆಚ್ಚುವನೆ ಕೂಡಲಚನ್ನಸಂಗಮದೇವಾ.

ತನು ನಿಮ್ಮ ಪೂಜಿಸುವ ತೃಷೆಗೆ ಸಂದುದು
ಮನ ನಿಮ್ಮ ನೆನೆವ ಧ್ಯಾನಕ್ಕೆ ಸಂದುದು.
ಪ್ರಾಣ ನಿಮ್ಮ ರತಿಸುಖಕ್ಕೆ ಸಂದುದು
ಇಂತು ತನುಮನ ಪ್ರಾಣ ನಿಮಗೆ ಸಂದಿಪ್ಪ
ನಿಸ್ಸಂಗಿಯಾದ ನಿಶ್ಚಟ ಲಿಂಗೈಕ್ಯ ಕಾಣಾ, ಗುಹೇಶ್ವರಾ.

ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ
ಛಲಬೇಕು ಶರಣಂಗೆ ಪರಸತಿನೊಲ್ಲೆನೆಂಬ
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ
ಛಲಬೇಕು ಶರಣಂಗೆ ಲಿಂಗಜಂಗಮವೊಂದೆಂಬ
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲಬೇಕು, ಛಲವಿಲ್ಲದರ ಮೆಚ್ಚ
ನಮ್ಮ ಕೂಡಲಸಂಗಮದೇವಾ.

ನಿರ್ವಚನ, ನಿರ್ಜನಿತ, ನಿರ್ಲೇಪ, ನಿಃಕಪಟ,
ನಿರ್ವಚನೀಯ ವಚಿಸಲಿಕ್ಕಿಲ್ಲ ನಿಲ್ಲೊ. ನಿರಾಳ ನಿರಾಯಾಮ,
ನಿಸ್ಸಂಗಿ, ನಿರ್ಲಿಖಿತ,
ನಿರವಯನವಯವಕ್ಕೆ ತರಲಿಲ್ಲ ನಿಲ್ಲೊ.
ಸಿಮ್ಮೆಲಿಗೆಯ ಚನ್ನರಮನೆಂಬ
ಚರಲಿಂಗವನುಪಮಿಸಲಿಲ್ಲ ನಿಲ್ಲೊ.

ಉಪಾಧಿಯುಳ್ಳನ್ನಕ್ಕ ಗುರುವಲ್ಲ,
ವೇಷವ ಹೊತ್ತು ಬಾಗಿಲ ಕಾಯಿವನ್ನಕ್ಕ ಜಂಗಮವಲ್ಲ.
ಶಕ್ತಿ ಸಹಿತವುಳ್ಳನ್ನಕ್ಕ ಲಿಂಗವಸ್ತುವಲ್ಲ.
ಅದೆಂತದಡೆ :
ಏತರಲ್ಲಿರ್ದಡೂ ಅಹಿಶರೀರ ಬಲಿದು ತದ್ರೂಪ ಹಾಕಿದಂತಿರಬೇಕು.
ಇದು ಅಱೆವಿನ ಮೊದಲು ಮೂರ್ತಿಲಿಂಗದಿರೆವು.

ಅಪ್ಪು ಚಿಪ್ಪಿನಲ್ಲಿ ನಿಂದು ಅಪ್ಪುವ ಬೆರಸದಂತೆ
ಮೃತ್ತಿಕೆ ತೇಜದಲ್ಲಿ ಬೆಂದು ಪೃಥ್ವಿಯ ಕೂಡದಂತೆ
ಹಾಂಗಿರಬೇಕು, ಭಕ್ತವಿರಕ್ತನ ಭೇದ, ಇಷ್ಟ ಪ್ರಾಣದಿರವು.
ಇದು ನಿಶ್ಚಯ ಲಿಂಗಾಂಗ, ಕಾಯಭಕ್ತ, ಪ್ರಾಣಜಂಗಮವಾದ ಸ್ವಾನುಭಾವ ಸಿದ್ಧಿ
ಈ ತೆಱ ತಾನೆ ಸದಾಶಿವ ಮೂರ್ತಿಲಿಂಗವು.

ಅಕ್ಷರಪಂಚಕವನಱೆದಡೆ ಬೋಳು,
ಕುಕ್ಷಿಯೊಳಗೈವತ್ತೆರಡಕ್ಷರದ ಲಕ್ಷಣವನಱೆದಡೆ ಬೋಳು;
ಅಕ್ಷಯನಿಧಿ ಕೂಡಲಚನ್ನಸಂಗಯ್ಯಾ,
ಭಚಕ್ಕೆ ಬಾರದುದೆ ಬೋಳು.

ಕುಱುಹ ಮುಟ್ಟದೆ ಹೊಂದುದೆ ಬೋಳು,
ಕೂದಲ ಹರಿಯದೆ ಬೋಳಾಗಬೇಕು.
ಕಾಯಬೋಳೊ, ಕಪಾಲ ಬೋಳೊ ಹೊಂದುವದು ಬೋಳೊ?
ಹುಟ್ಟದೆ ಹೊಂದದೆ ಹೋದುದು ಬೋಳೊ
ಕಾಣಾ ಗುಹೇಶ್ವರಾ.

೧೦

ಅನೈತ, ಅನಾಚಾರ, ಅನ್ಯಹಿಂಸೆ, ಪರಧನ, ಪರಸ್ತ್ರೀ
ಪರನಿಂದ್ಯವ ಬಿಟ್ಟು ಲಿಂಗನೈಷ್ಟೆಯಿಂದ ಶುದ್ಧಾತ್ಮನಾಗಿರಬಲ್ಲಡೆ
ಮಹೇಶ್ವರಸ್ಥಲವಿದೆಂಬೆನಯ್ಯಾ,
ಮಹಾಲಿಂಗಗುರುಶಿವಸಿದ್ಧೇಶ್ವರ ಪ್ರಭುವಚವೆ.

|| ತ್ರಿವಿಧಿ ||        

೧೧

ಹುಟ್ಟಿದ ಹೊಲೆಯಳಿದು ಕಷ್ಟಗುಣಗಳ ಕಳೆದು ನೈಷ್ಠೆಯಲಿ ಸೂತಕವ ತೊರೆದು, ಹರಿದು
ಅಷ್ಟ ವಿಧಾರ್ಚಣೆಯಿಂದ ಅಷ್ಟತನುಗಳನಳಿದು
ನಿಷ್ಟವಮತನಾದೆನೈ ಯೋಗಿನಾಥಾ.

೧೨

ಲಿಂಗಾಂಗ ಸಮರಸದಂಗ ತಾ ನೆಲೆಗೊಂಡು  ಲಿಂಗಪ್ರಸಾದ ತಲ್ಲೀಯವಾಗಿ
ಅಂಗಗುಣಗಳನಳಿದು ಮಂಗಳಮಯನಾಗಿ
ಲಿಂಗ ನಾ ನೀನಾದೆ ಯೋಗಿನಾಥಾ.

೧೩

ಆರಾರು ಓರಂತೆ ಏನೇನನೆಂದಡು
ಆರೈದುಯಂನುವ ಸಲಹುತಿರ್ಪ
ಸಾಲೋಕ್ಯ ಫಲಪದವಿ ಮೀಱೆಪ್ಪ ಭ್ರಾಂತಂಗೆ
ಆರೆಂದಡೆನಗೇನು ಯೋಗಿನಾಥಾ.