|| ವೃತ್ತ ||           

ಬಿಡು ಬಿಡು ಲಿಂಗಭಕ್ತನವಸಾನ ವಿಯುಕ್ತನನಾದಿಮುಕ್ತ ನೀ
ಕಡುಮರುಳಾಟದಾಳಿಕೆಯ ತೋಳದ ಮೇಳದನುತ್ತ ಲೀಲೆಯಾ
ಗಡದ ಸಮರ್ಥನಂತಹವಿಂತಹವಂ ಛಲಶೀಲವಂತೆನೆಂ.
ದಡಿಗಡಿಗುಬ್ಬಿ ಕೊಬ್ಬಿ ಯೋಗ್ಯನೆ ಪೇಳ್ ಶಿವಾಧವಾ.  

|| ವಚನ ||         

ಹಲವು ಮಣಿಯಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯ ವಿಭೂತಿಯ ಹೂಸಿ
ಗಣಾಡಂಬರದ ನಡುವೆ ನಲಿನಲಿದಾಡಿ,
ಉಂಡು ತಾಂಬೂಲಂಗೊಂಡು ಹೋಹುದೆಲ್ಲಾ            ತನು
ಮನ ಧನ ಸಮರ್ಪಿಸದವರ
ಕೂಡಲಸಂಗಮದೇವನೆಂತೊಲಿವ?

ಸುಖವನಱೆಯದ ಕಾರಣ ಹೆಂಗಸು ಸೂಳೆಯಾದಳು.
ಲಿಂಗವನಱೆಯದ ಕಾರಣ ಭಕ್ತ ಶೀಲವನಮತನಾದ.
ಉಭಯ ಕುಳಸ್ಥಲದಿರವು ನಿಷ್ಪತಿಯಾಗದವನ್ನಕ್ಕ
ಕೂಡಲಚನ್ನಸಂಗಮದೇವನೆಂತೊಲಿವ?

ಪೂರ್ನಗುಣವನೆಲ್ಲ ಅಳಿದು ಪುನರ್ಜಾತನಾದ ಬಳಿಕ
ಗುರುವಿನ ಕರಸ್ಥಲದಲ್ಲಿ ಉತ್ಪತ್ಯ, ಸದ್ಭಕ್ತರಲ್ಲಿ ಸ್ಥಿತಿ,
ಲಿಂಗದಲ್ಲಿ ಲಯ ಇಂತೀ ನಿರ್ಣಯವನಳೆಯದೆ
ಶೀಲವಂತರ ಶೀಲ ತಪ್ಪಿದಡೆ ಹೇಳಬಹುದೇ? ಹೇಳಬಾರದು.
ಸೋಳೆ ಮುತ್ತು ಗೊರವತಿಯಾದಂತೆ, ಬಂಟ ಮುತ್ತು ಬಾಗಿಲ ಕಾಯಿದಂತೆ
ನರಿ ಮುತ್ತು ಬಳ್ಳಾದಂತೆ, ಹಾವು ಮುತ್ತು ಸಿಂಗಿಯಾದಂತೆ,
ಎಲ್ಲದೇವರಿಗೆ ಮಸ್ತಕ ಪೂಜೆ, ಜಂಗಮದೇವರಿಗೆ ಪಾದಪೂಜೆ,
ಪಾದೋದಕ ಪ್ರಸಾದವ ಕೊಡುವ ಜಂಗಮದೇವರು
ಕಂಠಪಾವಡ, ಧೂಳುಪಾವಡ, ಸರ್ವಾಂಗ ಪಾವಡ
ಶೀಲ ಸಂಬಂಧವೆಂದಡೆ, ಕೇಸರಿ ಶುನಕನಾದಂತೆ
ಕಾಣಾ, ಗುಹೇಶ್ವರಾ.

ಮಡಕೆಗೆ ಮುಸುಕು, ತಮ್ಮ ಗುಹ್ಯಕ್ಕೆ ದಶಾವಸ್ಥೆ
ಬಾಹ್ಯದಲ್ಲಿ ಶೀಲ, ಅಂತರ್ಯಾಮಿಯಲ್ಲಿ ದುಶ್ಯೀಲ.
ಹೊಱಗೆ ವ್ರತ ಒಳಗೆ ಗತಕು, ಮಾಡಿಕೊಂಡು ವಿಧಿಯೆನಿಸುವದಕ್ಕೆ
ವಾದ್ಯದ ವ್ರತ್ತಿಯ ಹಿಡಿತದಲ್ಲೆಸಿಯಂತೆ ಇನ್ನಾರಿಗೆ ಹೇಳುವೆ
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗವೆ ನೀವೆ ಬಲ್ಲಿರಿ.

ಹೊಱಗೆ ಚಲುಮೆ ಒಳಗೆ ಮೂತ್ರದ ಕುಳಿ
ಹೊಱಗೆ ಸ್ವಯಂ ಪಾಕ ಒಳಗೆ ಅಧರ ಪಾಕ
ಹೊಱಗೆ ಭವಿನಿರಸನ ಒಳಗೆ ಭವಿಸಂಗ ಕೂಟ
ಇಂತಿವೆಲ್ಲವು ಆಡುನವಿದಾದಂತ ನೇಮ ಹಿಡಿದಂತಾಯಿತ್ತು
ಇಂತೀಗುಣವನನೊಪ್ಪ ಈಶಾನ್ಯಮೂರ್ತಿ ಮಲ್ಲಿಕಾರ್ಜುನ ಲಿಂಗವು.

ನಿತ್ಯ ಚಲಿಯ ತೋಡುವಾತಂಗೆ ಉಚ್ಚಿಯ ಬಚ್ಚಲ ತೋಡಲಾಗದು.
ಭಕ್ತನಲ್ಲದ ಭವಿಯ ಬೇಡೆನೆಂಬಾತಂಗೆ ಅಚ್ಚೊತ್ತಿದ ಲಕ್ಷೀಯ ಮುದ್ರೆಯ ಹಿಡಿಯಲಾಗದು
ಕೊಂಡವ್ರತಕ್ಕೆ ಸಂದೇಹ ಕುಳ್ಳಿರೆ ಅಂಗವ ಹೊಗಲಾಗದು.
ಇಂತವನಳಿಯದೆ ನಾವ್ರತಸ್ಥನೆಂದು ಕೊಂಡಾಡುತಿರ್ಪ ಭಂಡನೊಪ್ಪ ಈಶಾನ್ಯಮೂರ್ತಿ
ಮಲ್ಲಿಕಾರ್ಜುನ ಲಿಂಗವು.

ಶೀಲವಂತ ಶೀಲವಂತರೆಂಬರು ನಾವಿದನಗೆಯೆವರಯ್ಯಾ.
ಅಂಗನೆಯರಧರಪಾನ ತನ್ನಧರವ ಹೋಗುವನ್ನಕ್ಕ ಶೀಲವೆಲ್ಲಿಯದೊ?
ಇದು ಬಾಲರಾಳಿಯಲ್ಲದೆ ಈಷಣತ್ರಯವೆಂಬ ಸೊಣಗ
ಬೆಂಬತ್ತಿ ಬರುತ್ತಿರಲು ಶೀಲವೆಲ್ಲಿಯದೋ?
ಮನವುಮಹಲಲ್ಲಿ ನಿಂದಡೆ, ಶೀಲ ಪರಿಣಾಮ ನೆಲೆಗೊಂಡಡೆ ಸೀಮೆ
ಇದು ಕೂಡಲ ಸಂಗಯ್ಯನಲ್ಲಿ ಶೀಲವಂತರಪೂರ್ವ.

ಮಡಕೆ ತುಂಬಿ ಪಾವಡವ ಕಟ್ಟುವರಲ್ಲದೆ,
ಸರ್ವಾಂಗವನು ಸದಾಛಾರವೆಂಬ ಪಾವಡೆಯಲ್ಲಿ ಕಟ್ಟುವರನಾರನು ಕಾಣೆನಯ್ಯಾ.
ಬಾಯತುಂಬ ಪಾವಡವ ಕಟ್ಟುವರಲ್ಲದೆ.
ಮೂಗಹೊಡೆವರಂತೆ ಭಾವ ತುಂಬಿ ನಿರ್ವಾಣವೆಂಬ ಪಾವಡವ ಕಟ್ಟುವರನಾರನು ಕಾಣೆನಯ್ಯಾ.
ಮುಖತುಂಬ ಪಾವಡವ ಕಟ್ಟುವರಲ್ಲದೆ,
ಮೂಗಹೊಡೆವರಂತೆ ಭಾವ ತುಂಬಿ ನಿರ್ವಾಣವೆಂಣಬ
ಪಾವಡವ ಕಟ್ಟುಪರನಾರವನು ಕಾಣೆನಯ್ಯಾ.
ಅಂಗವಾಚಾರದಲ್ಲಿ ಸಾವಧಾನವಾಗದೆ, ಮನವಱುಹಿನಲ್ಲಿ ಸಾವಧಾನವಾಗದೆ,
ಭಾವ ನಿರ್ವಾಣದಲ್ಲಿ ಸಾವಧಾನವಾಗದೆ ಬಱೆದ ಶೀಲವಂತ
ಶೀಲವಂತರೆಂದೇನಯ್ಯಾ?
ತನುಮನದವಗುಣವೆಂಬ   ಭಯವ ಕಳೆಯಹೊಱಗೆವ್ರತಿಗಳೆಂದಡೆ ಆರು ಮೆಚ್ಚುವರಯ್ಯಾ?
ಹುಚ್ಚರಿರಾ ಸುಮ್ಮನಿರಿ,
ಮಹಲಿಂಗಗುರುಶಿವಸಿದ್ಧೆಶ್ವರ ಪ್ರಭುವಿನ ಮೆಚ್ಚ ಕಾಣಿರೊ.

|| ತ್ರಿವಿಧಿ ||        

ಅಂಗ ಕರಣಂಗಳು ಲಿಂಗವನೋಡಲಿಯ್ಯವು   ಜಂಗಮ ಪ್ರಸಾದಕ್ಕೆ ತೆಱಪುಗೊಡವು
ಭಂಗ ಬಡಿಪಾಕ ರಣತತಿಗಳ ಕೆಲಕ್ಕೊತ್ತಿ
ಲಿಂಗ ಎನ್ನನು ಸಲಹು ಯೋಗಿನಾಥಾ.

೧೦

ಸುದತಿಯರ ಒಡನಾಡಿ ಅಧರ ಪಾನವನುಂಡು
ಉದಯದಲಿ ಜಂಗಮವನಱಸಿ ತಂದು
ಗದುಕಿನ ಪ್ರಸಾದನ ಚದುರಿಂದ
ಕೊಂಬವರ ಮದನಾರಿವಲ್ಲನೈ ಯೋಗಿನಾಥಾ.

೧೧

ಮುಂದುವರಿದಂಗನೆಯರ ಸಂಗಕ್ಕೆಳೆಸೋದು ಮನ
ಇಂದು ಶಿವಶೇಷವನೊಲ್ಲದಯ್ಯಾ
ಬೆಮದೆ ಪ್ರಪಂಚಿನಲ್ಲಿ ಕಂದಿ ಕುಂದಿದೆ ಶೀಲವನು
ಎಂದಿಗೆ ನೀಗುವೆನು ಯೋಗಿನಾಥಾ.