|| ವೃತ್ತ ||           

ಯಮನಿಯಮಾದಿಕಾಷ್ಟ ವಿಧಯೋಗದೊಳುತ್ತರಬಾಗ ಪೂರ್ವಭಾ
ಗ ಮನನು ಮಾನದೃಷ್ಟಿ ವಿಮಳಶ್‌ಉತದಿಂದಱೆದಲ್ಲಿ ಪೂರ್ವಭಾ
ಗಮನನುಳಿದುತ್ತರಾರ್ಧ ಶಿವಯೋಗಸಮಾಹಿತಭಕ್ತಿ ಸತ್ಕ್ರೀಯಾ
ಶ್ರಮ ಪರಮಾರ್ಥಮಂ ಬಿಡದೆ ವರ್ತಿಸುವರ್ ಶರಣರ್ ಶಿವಧವಾ.     

|| ವಚನ ||         

ಬೆಳಗಿನೊಳಗಣ ಮಹಾ ಬೆಳಗು !
ಶಿವಶಿವಾ ! ಪರಮಾಶ್ರಯವೆ ತಾನಾಗಿ,
ಶತಪತ್ರಕಮಲಕರ್ಣಿಕಾಮಧ್ಯದಲ್ಲಿ ಸ್ವತಃಸಿದ್ಧನಾಗಿಪ್ಪ
ನಮ್ಮ ಕೂಡಲಸಂಗಮದೇವಾ.

ಮಂತ್ರಯೋಗ, ಹಠಯೋಗ, ಲಯಯೋಗ.
ಭಕ್ತಿಯೋಗದ ಮೇಲೆ ನಿಂದು ರಾಜಯೋಗದ ಮೇಲೆ
ನುಡಿವುದುಕಾಣರೆ ಯೋಗಾತೀತ ಮನೋತೀತ ಭಾವಾತೀತಂ ನಿರಂಜನಂ |
ಸರ್ವಶೂನ್ಯನಿರಾಕಾರಂ ಪರಮಾನಂದಮವ್ಯಯಂ || ಎಂದುದಾಗಿ
ಶಿವಜೀವ ಲಿಂಗಪ್ರಾಣಿ ಶಿವಯೋಗವೆಂಬುದೆ ಐಕ್ಯ
ಮಹಲಿಂಗಐಕ್ಯರನಿಲವ ಅನುಮಾಇಗಳೆತ್ತ ಬಲ್ಲರು
ಕೂಡಲಸಂಗಮದೇವಾ.

ಖೇಚರ ಪವನದಂತೆ ಜಾತಿಯೋಗಿಯ ನಿಲುವು
ಮಾತಿನೊಳು, ಧಾತುವನುಂಗಿ ಉಗುಳವದಿನ್ನೆಂತೋ !
ಭೂಚಕ್ರವಳಯವನು ಆಚಾರ್ಯ ರಚಿಸಿದ
ಗ್ರಾಮವೆಲ್ಲವ ಸುಟ್ಟು ನೇಮ ನೆಲಗತವಾಯಿತ್ತು.
ನೇಮ ನಾಮವ ನುಂಗಿ, ಗ್ರಾಮ ಪ್ರಭುವನೆ ನುಂಗಿ,
ಗುಹೇಶ್ವರ ಗುಹೇಶ್ವರನೆನುತ ನಿರ್ವಯಲಾಯಿತ್ತು.

ಕಾಲಚಕ್ರ, ಕರ್ಮಚಕ್ರ, ನಾದಚಕ್ರ, ಬಿಂದುಚಕ್ರ,
ಈ ನಾಲ್ಕು ಚಕ್ರವ ಸಾಧಿಸಿಹೆವೆಂಬಹಿರಿಯರೆಲ್ಲರು ಕೆಟ್ಟುಹೋದರು ನೋಡಾ        
ಕಾಲಚಕ್ರ ಘ್ರಾಣದಿಂದ ನಡೆವುದು;
ಕರ್ಮಚಕ್ರ ನಯನದಿಂದ ನಡೆವುದು;
ನಾದಚಕ್ರ ಶ್ರೋತ್ರದಿಂದ ನಡೆವುದು;
ಬಿಂದುಚಕ್ರ ಚಿಹ್ವೆಯಿಂದ ನಡೆವುದು;
ಕಾಲಚಕ್ರ ಗುರುಕ್ಷೇತ್ರ; ಕರ್ಮಚಕ್ರ ಲಿಂಗಕ್ಷೇತ್ರ
ನಾದಚಕ್ರ ಜಂಗಮಕ್ಷೇತ್ರ; ಬಿಂಚಕ್ರ ಪ್ರಸಾದಕ್ಷೇತ್ರ.
ಈ ನಾಲ್ವರ ಮನದ ಕೊನೆಯ ಮೊನೆಯ ಮೇಲೆ ಸಿಂಹಾಸನವಾಗಿಪ್ಪ
ಕೂಡಲಚನ್ನಸಂಗಮದೇವ.

ಘಟಸ್ಥಾವರದೊಳಗನೊಡೆದು ಕೆಚ್ಚುವ ಹೊರೆಯ ಕಡೆಗಾಣಿಸಿ
ಮಿಕ್ಕಾಲು ಹೊರೆಯಗಳ ಹೊರೆಯ ತಿಗುಡಂ ಕೆತ್ತಿ ಕಂಬವ ಶದ್ಧೈಸಿ
ನೆಲವಟ್ಟಕ್ಕೆ ಚದುರಸವನಿಂಬುಗೊಳಿಸಿ ಮೇಲಣ ಪಟ್ಟಕ್ಕೆ
ವರ್ತುಳಕಾರದಿಂ ಶುದ್ಧಮಾಡಿ ಏಕೋತ್ರಯವನೇಕೀಕರಿಸಿ
ಒಂದು ದ್ವಾರದ ಬೋದಿಗೆಯಲ್ಲಿ ಕಂಬವ ತೊಡಿಸಿ
ಕಂಬಯಶವಿಲ್ಲದೆ ನಿಂದ ಮತ್ತೆ ಚದುರಸನ ಬೆದ
ಅಷ್ಟದಿಕ್ಕಿನ ಬಟ್ಟೆಯ ಕಟ್ಟುವ ನವರಸದ ಬಾಗಿಲು
ಮುಚ್ಚಿ  ತ್ರಿಕೋಣೆಯ ಉಲುಹು ಕೆಟ್ಟು ಹಿಂದಣ ಬಾಗಿಲು
ಮುಚ್ಚಿ ಮುಂದಿನ ಬಾಗಿಲು ಕೆಟ್ಟು ನಿಜವೆಮನದೆ ಬಾಗಿಲಾಯಿತ್ತು.
ಆ ಕಂಬದ ನಡುವೆ ನಿಂದು ನೋಡಲಾಗಿ ಮಂಗಳಮಯವಾಯಿತ್ತು
ಇದು ಯೋಗಸ್ಥಲವಲ್ಲ, ಇದು ಘನಲಿಂಗಸ್ಥಲ.
ಇಂತೀ ತೆಱನ ತಿಳಿದಡೆ, ಬಸವಣ್ಣಪ್ರಿಯ ವಿಶ್ವಕರ್ಮಠಕ್ಕೆ
ಕಾಳಿಕಾ ವಿಮಲರಾಜೇಶ್ವರ ಲಿಂಗವಲ್ಲದಿಲ್ಲವೆಂಬೆ.

ಪದ್ಮದೊಳಗಣ, ಪತ್ರದೊಳಗಣ, ದ್ವಿದಳದೊಳಗಣ
ಸಂಸಾರದ ಮಲದ ಬಲಿಕೆಯೊಳಗಣ, ಕರ್ಣಿಕೆಯ ಕುಹರದೊಳಗಣ
ಅಜಸ್ಥಾನದೊಳಗಣ, ಅಹಿಮಧ್ಯದೊಳಗಣ ಹಲವು ಕುಟಿಲ ಭಾವದಲ್ಲಿ
ಸಂಸಾರದ ವರ್ಮವ ಕೆಡಿಸಿಹೆನೆಂದು ಅನಂತನಾಳದಲ್ಲಿ
ನಿರ್ಭಂಧಮಂ ಮಾಡಿ ಅಮೃತರಾದೆವೆಂದು
ನಾನಾಕುಟಲಭಾವದಲ್ಲಿ ಸಂಸಾರದ ಕರ್ಮವ ಕೆಡಿಸಿಹೆನೆಂದು
ಯೋಗಿಗಳೆಂಬವರು ಭವದ ಬಾಗಿಲಲೈದಾರೆ ಕಾಣಾ.
ಅಯ್ಯಾ ಶಿವಾಚಾರದ ಕುಳವನಱೆಯದೆ ನಾನಾ ಯೋಗಿಗಳಲ್ಲಿ ಜನಿಸಿದರು ಕಾಣಾ.
ಅಯ್ಯಾ ಶಿವಾಚಾರದ ಕುಳವನಱೆಯದೆ ಅನೇಕ  ಬಂಧನಗಳಲ್ಲಿ ಸಿಲುಕಿದರು ಕಾಣಾ.
ಅಯ್ಯಾ ನೀವು ಚತುರ್ವಿಧಸ್ಥಲವ ಮಂಟಪವ ಮಾಡಿ
ಚತುರಾಶ್ರಯದ ಸಿಂಹಾಸನದ ಮೇಲೆ ಕುಳ್ಳಿರ್ದು
ನಿತ್ಯರಿಗೆ ಭಕ್ತಿಯನೀವುದಕಂಡು ಭಕ್ತರು ನಿತ್ಯರು.
ನಿಮ್ಮ ಶರಣು ಗತಿ ಹೊಕ್ಕು ಮಹಪ್ರಸಾದ ದೇವ ಆತ್ಮನು
ಪರಿಭವಕ್ಕೆ ಬಪ್ಪನೆ ಎಂದು ಕೇಳಲು ಅದು ಹುಸಿ ಕಾಣಿರೆ.
ಆತ್ಮನಿಪ್ಪ ನೆಲೆಯ ಹೇಳಹೆ ಕೇಳಿರೆ :
ಗುರುಭಕ್ತಿಯಲ್ಲಿಪ್ಪ, ಲಿಂಗಭಕ್ತಿಯಲ್ಲಿಪ್ಪ,
ಜಂಗಮಭಕ್ತಿಯಲ್ಲಿಪ್ಪ, ಅರ್ಪಿತಪ್ರಸಾದದಲ್ಲಿಪ್ಪ,
ಜಂಗಮಕ್ಕೆ ಮಾಡುವಲ್ಲಿಪ್ಪ, ಮಾಡಿಸಿಕೊಂಬಲ್ಲಿಪ್ಪ,
ತನುಮನಧನವೊಂದಾಗಿ ನಿವೇದಿಸುವಲ್ಲಿಪ್ಪ,
ಪರಿಪೂರ್ಣಾತ್ಮವೆಂದು ನಿತ್ಯರಿಗೆ ನೀವು ಕಾರುಣ್ಯವ ಮಾಡಿದಿರಿ
ನಿಮ್ಮ ಕಟಾಕ್ಷದಲ್ಲಿ ಬಸವಣ್ಣನಲ್ಲದೆ ಮಾಡುವರಿಲ್ಲ
ಆ ಬಸವಣ್ಣ ಹೇಳಿತ್ತಮೀರೇ ಕಾಣಾ, ಕಲಿದೇವರ ದೇವಾ

ಪೃಥ್ವಿ ಸಕಲವ ಧರಿಸಿಕೊಂಡಿಪ್ಪಂತೆ ಶಿವಯೋಗಿ ಸಮಾಧಾನಿಯಾಗಿರಬೇಕು.
ಅಪ್ಪುವಿನ ನಿರ್ಮಳದಂತೆ ಶಿವಯೋಗಿ ನಿರ್ಮಳವಾಗಿರಬೇಕು.
ಪಾವಕನು ಸಕಲ ದ್ರವ್ಯಂಗಳದಹಿಸಿಯು ಲೇಪವಿಲ್ಲದ ಹಾಂಗೆ
ಶಿವಯೋಗಿ ನಿರ್ಲೇಪಿಯಾಗಿರಬೇಕು.
ವಾಯು ಸಕಲ ದ್ರವ್ಯಂಗಳಲ್ಲಿ ಸ್ಪರ್ಶನವ ಮಾಡಿಯು ಆ ಸಕಲ
ಗುಣಮುಟ್ಟದ ಹಾಂಗೆ ಶಿವಯೋಗಿ ನಿರ್ಮಳವಾಗಿರಬೇಕು
ಅದು ಹೇಗೆಂದಡೆ :
ಆ ಶಿವಯೋಗಿಯು ಸಕಲ ಭೋಗಂಗಳನು ಭೋಗಿಸಿ ತಾನು
ಸಕಲ ಗುಣಂಗಳನು ಮುಟ್ಟಯು ಮುಟ್ಟದ ನಿರ್ಲೇಪಿಯಾಗಿರಬೇಕು.
ಆಕಾಶವು ಸಕಲದಲ್ಲಿ ಪರಿಪೂರ್ಣವಾಗಿಹ ಹಾಂಗೆ ಶಿವಯೋಗಿ
ಸಕಲದಲ್ಲಿ ಪೂರ್ಣನಾಗಿರಬೇಕು.
ಇಂದುವಿನಂತೆ ಶಿವಯೋಗಿ ಶಾಂತನಾಗಿರಬೇಕು.
ಜ್ಯೋತಿ ತಮವನಳಿದು ಪ್ರಕಾಶವ ಮಾಡುವ ಹಾಂಗೆ
ಶಿವಯೋಗಿಯ ಅವಿದ್ಯೆಯಂ ತೊಲಗಿಸಿ ಸುವಿದ್ಯೆಯಂ ಮಾಡಬೇಕು.
ಇದು ಕಾರಣ, ಸದ್ಗುರು ಪ್ರೀಯ ಶಿವಸಿದ್ಧರಾಮೇಶ್ವರನ ಕರುಣ
ಹಡೆದ ಶಿವಯೋಗಿಗಿದೆ ಚಿನ್ಹ.

ನಾದಬಿಂದು ಕಳಾ ಭೇದವ ತಿಳಿದಲ್ಲದೆ ಅಱಕ್ಷರವಾದ
ತೆಱದನನಱೆಯಬಾರದು.
ನಾದ ಬೆಳಗಿನ ಕಳೆಯ ನೋಡಿ ಕಂಡಲ್ಲದೆ ರಾಜ ಶಿವಯೋಗಿಯಾಗಬಾರದು.
ರಾಜ ಶಿವಯೋಗಿಯೆಂಬುದು ಆದಿಯಲ್ಲಿ ಶಿವಬೀಜವಾದ
ಮಹಾಮಹಿಮರಿಗೆ ಸಾಧ್ಯವಪ್ಪುದಲ್ಲದೆ
ತ್ರೈಜಗದಲಾರಿಗೂ ಅಸಾಧ್ಯ ನೋಡಾ,
ಮಹಾಲಿಂಗ ಗುರುಶಿವಸಿದ್ಧೇಶ್ವರ ಪ್ರಭುವೆ.    

|| ತ್ರಿವಿಧಿ ||        

ವರ್ಣಾಕ್ಷರವು ಎಂಟು, ತನ್ನ ಗುಣ ಹದಿನಾಱು.
ಉನ್ನತೋನ್ನತ ಬಿಂದು ಮೂಱು.
ಸನ್ನುತಾಱರ ಒಳಗೆ ಲೀಯವಾದಂಗವನು
ಇನ್ನು ಶಿವಯೋಗಿ ಬಲ್ಲ ಯೋಗಿನಾಥ

೧೦

ಆರೇನನೆಂದಡೆಯು ಮೌನಗೊಂಬುದೆ ಸಮತೆ.
ಧ್ಯಾನಾರೂಢನಾಗು ಶಿವಧ್ಯಾನದಿ.
ನಾನಾ ಪ್ರಕಾರದಲಿ ದೀಪ್ತಿ ಪ್ರಜ್ವಲಿಸಲಿಕೆ
ಯೋಗವಪ್ಪುದು ಸಮತೆ ಯೋಗಿನಾಥಾ

೧೧

ಇಷ್ಟಕೃತ್ಯದ ನೆಂಟ ಬಂದೆನ್ನ ಕರಸ್ಥಲಕೆ
ನಿಷ್ಠೆಗೆ ನಿಜರೂಪ ಬಂದನಯ್ಯಾ
ಭ್ರಷ್ಟಯೋಗಾಪಹಾರಿ ಬಂದ ಕರುಣದಿಂದ
ಇಷ್ಟ ನಾನೀನಾದೆ ಯೋಗಿನಾಥ.