|| ವೃತ್ತ ||

ಸುಖವೆ ಸುಖಾಭಿವೃದ್ಧಿಯೆ ಸುಖೋನ್ನತಿಯೇ ಸುಖಸಾರಸಿದ್ಧಿಯೇ
ಸುಖಪರಿಪೂರ್ತಿಯೇ ಸುಖಕಳಾಕೃತಿಯೇ ಸುಖ ಚಕ್ರವರ್ತಿಯೆ.
ಸುಖಮುಖಬಂಧುವೇ ಸುಖರಸಾಮೃತ ಸಿಂಧುವೆ ನಿನ್ನವರ್ಗೆ ನೀಂ
ಸುಖವನೆ ಮಾಳ್ಪುದಯ್ಯ ಪರಮಪ್ರಭುವೇ ಮಹದೈಪುರೀಶ್ವರಾ      

|| ವಚನ ||         

ತತ್ವಾತತ್ವಂಗಳಿಲ್ಲದಂದು, ಸಾಕ್ಷಿಸಭೆಗಳಿಲ್ಲದಂದು,
ಏನೇನಿಲ್ಲದಂದು, ಬಯಲು ಬಲಿವಂದು ಈ ಬಿಂದುವಾಯಿತ್ತು.
ಆ ಬಿಂದು ಅಕ್ಷತ್ರಯ ಗದ್ದಿಗೆಯಲ್ಲಿ ಕುಳ್ಳಿರಲು ಲೋಕರದುತು
ಪತಿಯಾಯಿತ್ತು
ನಾದದ ಬಲದಿಂದ ಮೂರ್ತಿಯಾದನೊಬ್ಬ ಶರಣ,
ಆ ಶರಣನಿಂದಾದುದು ಪ್ರಕೃತಿ,
ಆ ಪ್ರಕೃತಿಯಿಂದಾಯಿತು ಲೋಕ ಲೌಕಿಕ
ಆ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ
ಗುಹೇಶ್ವರ, ನಿಮ್ಮ ಶರಣ ಸಂಗನಬಸವಣ್ಣ

ಓಂ ವಿಶ್ವ ನಿರಾಕಾರ ನಿರವಯ ನಿರ್ವಿಕಾರ ಅವಗತವಗ್ಮನವಾಗತ
ಆಖಾಶ ಸಭಾಮೂರ್ತಿ ನಿರಾಕಾರವೆಂಬ ನಿಜಲಿಂಗವಪ್ಪ
ಪರಶಿವಾನಂದ ಮೂರ್ತಿ ತನ್ನೊಳು ತ್ರಿಗುಣಾತ್ಮಕನಾಗಿಹ         

ಅದೆಂತೆಂದಡೆ :
ಶಿವ ಸದಾಶಿವ ಮಹೇಶ್ವರನೆಂದು ಪರಶಿವನ ತ್ರಿಗುಣಾತ್ಮಕ
ಭೇದಂಗಳು, ಇಂತಪ್ಪ ಪರಶಿವನು ವಿಶ್ವದುತ್ಪತ್ಯಕಾರಣನಾಗಿ
ಪಂಚಸಾದಾಖ್ಯ ರೂಪಂಗಳಂ ಪ್ರತ್ಯೇಕ ತ್ರಿಗುಣಾತ್ಮಕರಾಗಿ
ಜ್ಯೋತಿಯಿಂಪೊತ್ತಿಸಲಾಪುದು
ಘನವಾದುದು ಕೀರ್ತಿದೆಂದು ಉಪಮಿಸಬಾರದ ಮಹಾಘನದಂತೆ
ಆ ಮಹಾಬೆಳಗು ತನ್ನೊಳೈದು ರೂಪಾಯಿತ್ತು.

ಅದೆಂತೆಂದಡೆ :
ಶಿವ  ಅಮೂರ್ತಿ ಮೂರ್ತಿ ಕರ್ತೃ ಕರ್ಮರೆಂಬ
ಪಂಚಬ್ರಹ್ಮ ಹುಟ್ಟಿದವು; ಅದಕೈವರು ಶಕ್ತಿಯರುದಯಿಸಿದರು.

ಅವರ  ನಾಮಂಗಳು :
ಪರಶಕ್ತಿ ಆದಿಶಕ್ತಿ ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ
ಇಂತಿಂತು ಐವರನ ಪಂಚಬ್ರಹ್ಮರಿಗೆ ವಿವಾಹಂ ಮಾಡಿದೊಡಾ
ಶಿವಶಕ್ತಿಪಂಚಕದಿಂದೊಂದು ಓಂಕಾರವೆಂಬ ಬೀಜವಂ
ನಿರ್ಮಿಸಿದಡಾ ಓಂಕಾರ ಬೀಜದಿಂದೊಂದು ವಿರಾಟ ಸ್ವರೂಪಮಪ್ಪ
ಮಹಾಘನ ತೇಜೋಮಯವಪ್ಪ ಅನಾದಿರುದ್ರಸಹಸ್ರಾಂಶುವಿಂಗೆ
ಸಾವಿರ ಶಿರ ಸಾವಿರ ನಯನ ಸಾವಿರದೇಹ ಸಾವಿರಪಾದವುಳ್ಳ   ಸ್ವಯಂಭಯಮೂರ್ತಿ
ಆ ಸ್ವಯಂಭುಮೂರ್ತಿಯ ಮುಖದಲ್ಲಿ ಈಶ್ವರ ಪುಟ್ಟಿದ,
ಈಶ್ವರನ ವಾಮಭಾಗದಲ್ಲಿ ವಿಷ್ಣು ಪುಟ್ಟಿದ,
ದಕ್ಷಿಣಭಾಗದಲ್ಲಿ ಬ್ರಹ್ಮಪುಟ್ಟಿದ,
ಇಂತು ತ್ರಿದೇವತೆಯರೊಳಗಗ್ರಜನಪ್ಪ ಮಹಾಮಹಿಮ
ಈಶ್ವರನ ಪಂಚಮುಖದಲ್ಲಿ ಪಂಚಬ್ರಹ್ಮ ತೇಜೋಮಯ ರುದ್ರರು ಪುಟ್ಟಿದರು.

ಅವರ ನಾಮಂಗಳು :
ಸದ್ಯೋಜಾತ ವಾಮದೇವ ಅಘೋರ ತತ್ಪರುಷ ಈಶಾನ್ಯರೆಂದಿಂತು
ಅವರೋಳ್ಸಜ್ಯೊಜಾತನೆಂಬ ಅಗ್ರಜರುದ್ರ ಪುಟ್ಟಿದನು
ಆ ಸದ್ಯೋಜಾತಂಗೆ ಮಹಾರುದ್ರ ಪುಟ್ಟಿದನು.
ಆ ಮಾಹರುದ್ರಂಗೆ ಶ್ರೀರುದ್ರ ಪುಟ್ಟಿದನು
ಆ ಶ್ರೀರುದ್ರಂಗೆ ರುದ್ರ ಪುಟ್ಟಿದನು
ಆ ಶ್ರೀರುದ್ರಂಗೆ  ರುದ್ರ ಪುಟ್ಟಿದನು
ಆ ರುದ್ರಂಗೆ ಅಗ್ನಿಯು ಅವಗತ ಪುಟ್ಟಿದವು.
ಆ ಅಗ್ನಿಗೆ ಕಾಶ್ಯಪಬ್ರಹ್ಮ ಪುಟ್ಟಿದನು,
ಅವಗತಕ್ಕೆ ಮಾಯಾಸ್ವಪ್ನಬ್ರಹ್ಮ ಪುಟ್ಟಿದನು.

ಅದೆಂತೆಂದಡೆ :
ಮಾಯವೆ ಮರತ್ಯು, ಬ್ರಹ್ಮವೆ ಸತ್ಯ
ಇಂತಪ್ಪ ಬ್ರಹ್ಮವು ಮಾಯಾ ಅವಲಂಬಿಸಿಹುದಾಗಿ
ಅದು ಮಾಯಾಸ್ವಪ್ನಬ್ರಹ್ಮವೆನಿಸಿತ್ತು.
ಇಂತಪ್ಪ ಮಾಯಾ ಸ್ವಪ್ನಬ್ರಹ್ಮಂಗೆ ತ್ರಯೋದಸ ಕುಮಾರಿಯರು
ಪುಟ್ಟಿದರು.

ಅವರ ನಾಮಂಗಳು :
ಬೃಹತಿ, ಅದಿತಿ, ದಿತಿ, ವಿನುತಾದೇವಿ, ಕದ್ರು,
ಸುವರ್ಣಪ್ರಭೆ, ಕುಮುದಿನಿ, ಪ್ರಭಾದೇವಿ, ಕಾಳಿದಂಡಿ,
ಮೇಘದಂಡಿ, ದಾತೃಪ್ರಭೆ, ಕುಸುಮಾವತಿ, ಪಾರ‍್ವಂದಿನಿ
ಎಂದಿಂತು ತ್ರಯೋದಶಕುಮಾರಿಯರು ಪುಟ್ಟಿದರು.
ಇದಕ್ಕೆ ಆದಿ ಪರಮೇಶ್ವರನು ಸೃಷ್ಟಿ ನಿರ್ಮಿತ ಜಗದುತ್ಪತ್ಯ, ಸ್ಥಿತಿ,
ಲಯಗಾಗಬೇಕೆಂದು ಆ ಕಾಶ್ಯಪಬ್ರಹ್ಮಗು ತ್ರಯೋದಶ
ಸ್ತ್ರೀಯರಿಗೆಯು ವಿವಾಹವ ಮಾಡಿದನು.
ಆ ಕಾಶ್ಯಪ ಬ್ರಹ್ಮನ ಮೊದಲ ಸ್ತ್ರೀಯ ಪೆಸರು ಬರಹತಿ.
ಆ ಬೃಹತಿಗೆ ಪುಟ್ಟಿದ ಮಕ್ಕಳ ಪೆಸರು ಹಿರಣ್ಯಕಾಂಕ್ಷ,
ಹಿರಣ್ಯಕಾಂಕ್ಷನ ಮಗ ಪ್ರಹರಾಜ, ಪ್ರಹರಾಜನ ಮಗ ಕುಂಭಿ,
ಆ ಕುಂಭಿಯ ಮಗ ನಿಃಕುಂಭಿ, ನಿಃಕುಂಭಿಯ ಮಗ ದುಂದುಭಿ,
ಆ ದುಂದುಭಿಯ ಮಗ ಬಲಿ, ಬಲಿಯ ಮಗ ಬಾಣಾಸುರ,
ಇಂತವರು ಮೊದಲಾದ ಚಪ್ಪನ್ನಕೋಟಿ ರಾಕ್ಷಸರು ಪುಟ್ಟಿದರು.
ಎರಡನೆಯ ಸ್ತ್ರೀಯ ಪೆಸರು ಅದಿತಿ.
ಆ ಅದಿತಿಗೆ ಸೂರ್ಯ ಮೊದಲಾದ ಮೂವ್ವತ್ತುಕೋಟಿ
ದೇವರ್ಕಳು ದೇವಗಣ ಪುಟ್ಟಿದರು.
ಮೂರನೆಯ ಸ್ತ್ರೀಯರ ಪರಸರು ದಿತಿದೇವಿ,
ಆ ದಿತಿದೇವಿಗೆ ಕೂರ್ಮ ಮೊದಲಾದ ಜಲಚರಂಗಳು ಪುಟ್ಟಿದರು.
ನಾಲ್ಕನೆಯ ಸ್ತ್ರೀಯ ಪೆಸರು ವಿನುತಾದೇವಿ,
ಆ ವಿನುತಾದೇವಿಗೆ ಸಿಡಿಲು, ಮಿಂಚು, ವರುಣ, ಗರುಡ
ಮೊದಲಾದ ಖಗಜಾತಿಗಳು ಪುಟ್ಟಿದವು.
ಐದನೆಯ ಸ್ತ್ರೀಯ ಪೆಸರು ಕದ್ರುದೇವಿ
ಆ ಕದ್ರುದೇವಿಗೆ ಶೇಷ, ಅನಂತ, ವಾಸುಗಿ, ಶಂಖಪಾಳ, ಕಕ್ಷರ, ಕರ್ಕೋಟ,
ಕರಾಂಡ, ಭುಜಂಗ, ಕುಳ್ನಿಕ, ಅಲ್ಲಮಾಚಾರ್ಯ,
ಇಂತಿವು ಮೊದಲಾದ ನವಕುಲನಾಗಂಗಳು ಪುಟ್ಟಿದವು.
ಆರನೆಯ ಸ್ತ್ರೀಯ ಪೆಸರು ಸುವರ್ಣ ಪ್ರಭೆ,
ಆ ಸುವರ್ಣಪ್ರಭೆಗೆ ಚಂದ್ರ, ತಾರಾಗಣ,
ನಕ್ಷತ್ರಂಗಳು ಪುಟ್ಟಿದವು.
ಏಳನೆಯ ಸ್ತ್ರೀಯ ಪೆಸರು ಕುಮುದಿನಿ
ಆ ಕುಮುದಿನಿಗೆ ಐರಾವತ, ಪುಂಡರೀಕ, ಪುಷ್ಪದಂತ, ವಾಮನ
ಸುಪ್ರದೀಪ, ಆಂಜನ, ಸಾರ್ವಭೌಮ, ಕುಮುದ, ಭಗದತ್ತ
ಇಂತಿವು ಮೊದಲಾದ ಮೃಗಕುಲಾದಿ ವ್ಯಾಘ್ರ ಶರಭ
ಶಾರ್ದೂಲಂಗಳು ಪುಟ್ಟಿದವು.
ಎಂಟನೆಯ ಸ್ತ್ರೀಯ ಪೆಸರು ಪ್ರಭಾದೇವಿ
ಆ ಪ್ರಭಾದೇವಿಗೆ ಕನಕಗಿರಿ,. ರಜತಗಿರಿ, ಸೇನಗಿರಿ, ನೀಲಗಿರಿ,
ನಿಷಧಗಿರಿ, ಮೇರುಗಿರಿ, ಮಾನಸಗಿರಿ ಇಂತಿವು ವೊಳಗಾದ
ಪರ್ವತಂಗಳು ಪುಟ್ಟಿದವು.
ಒಂಭತ್ತನೆಯ ಸ್ತ್ರೀಯ ಪೆಸರು ಕಾಳಿದಂಡಿ,
ಆ ಕಾಳಿದಂಡಿಗೆ ಸಪ್ತ ಋಷಿಯರು ಮೊದಲಾದ ಅಸ್ವಾಸೀತಿ
ಸಹಸ್ರ ಋಷಿಗಳು ಪುಟ್ಟಿದರು.
ಹತ್ತನೆಯ ಸ್ತ್ರೀಯ ಪೆಸರು ಮೇಘದಂಡಿ,
ಆ ಮೇಘದಂಡಿಗೆ ನೀಲಮೇಘ, ಕುಂಭಮೇಘ, ದ್ರೋಣಮೇಘ,
ಧೂಮಮೇಘ, ಕಾರ್ಮೇಘ, ಇಂತಿವು ಮೊದಲಾದ
ಮೇಘಂಗಳು ಪುಟ್ಟಿದವು.
ಹನ್ನೊಂದನೆಯ ಸ್ತ್ರೀಯ ಪೆಸರು ಧಾತೃಪ್ರಭೆ,
ಆ ಧಾತೃಪ್ರಭೆಗೆ ಚಿಂತಾಮಣಿ ಮೊದಲಾದ
ನವರತ್ನಂಗಳು ಪುಟ್ಟಿದವು.
ಹನ್ನೆರಡನೆಯ ಸ್ತ್ರೀಯ ಪೆಸರು ಕುಸುಮಾವತಿ,
ಆ ಕುಸುಮಾವತಿಗೆ ಕಾಮಧೇನು,
ಕಲ್ಪವೃಕ್ಷಂಗಳು ಪುಟ್ಟಿದವು.
ಹದಿಮೂಱನೆಯ ಸ್ತ್ರೀಯ ಪೆಸರು ಪಾರ್ವಂದಿನಿ
ಆ ಪಾರ್ವಂದಿನಿಗೆ ಅಷ್ಟದಿಕ್ಪಾಲಕರು ಪುಟ್ಟಿದರು.
ಇಂತಿರುವರು ರಜಸ್ಸೀಲಾಶೋಣಿತದಿಂದ ಸಹಸ್ರವೇದಿ
ಮೊದಲಾದ ಅಷ್ಟ ಪಾಷಾಣಂಗಳು ಪುಟ್ಟಿದವು.
ಇವರುಗಳ ಮಲಮೂತ್ರದಿಂದ ಪರುಷರಸ ಇದ್ಧರಸ
ನಿರ್ಜರೋಧಕ ಪುಟ್ಟಿದವು.
ಇಂತಿವಱುಗಳ ಬೆಚ್ಚು ಬೆದಱಿಂದ ದೇವಗ್ರಹ, ಯಕ್ಷಗ್ರಹ,
ನಾಗಗ್ರಹ, ಗಾಂಧರ್ವಗ್ರಹ, ಪಿಶಾಚಗ್ರಹ, ಪೆಂತರಗ್ರಹ,
ಬ್ರಹ್ಮರಾಕ್ಷಸಗ್ರಹ,
ಶತಕೋಟಿ ದೇವಗ್ರಹ, ಸರ್ವದರ್ಪಗ್ರಹ, ಶಾಕಿನಿ, ಡಾಕಿನಿ,
ಮೊದಲಾದ ಗ್ರಹಭೂತ ಪ್ರೇತರ ಪೇತ ಪಿಶಾಚಂಗಳು ಪುಟ್ಟಿದವು.
ಇವರುಗಳ ಪ್ರಸೂತಕಾಲ ಮಾಸಿನಿಂದ ಅಷ್ಟಲೋಹ ಪಾಷಾಣಂಗಳು ಪುಟ್ಟಿದವು.
ಕಾಲರಾಶಿ, ಕರಣರಾಶಿ, ಭೂತರಾಶಿ, ಮೂಲರಾಶಿ, ಪ್ರಾಣರಾಶಿಗಳು
ಮೊದಲಾದ ಕೀಟಕ ಜಾತಿಗಳು ಪುಟ್ಟಿದವು.
ಇವಱುಗಳು ಇಂತು ಚತುರ್ದಶ ಭುವನಂಗಳು, ಈವತ್ತಾಱುಕೋಟಿರಾಕ್ಷಸರು,
ದ್ವಾದಶಾದಿತ್ಯರು, ಮೂವತ್ತು ಮೂಱುಕೋಟಿ ದೇವರ್ಕಗಳು, ದೇವಗಣ
ಸುರಪತಿ, ಖಗಪತಿ, ಸಿಡಿಲು, ಮಿಂಚು, ವರುಣ, ಗರುಡ, ನವಕುಲ,
ನಾಗಂಗಳು, ಚಿಂತಾಮಣಿನವರತ್ನಂಗಳು, ಕಾಮಧೇನು, ಕಲ್ಪವೃಕ್ಷ,
ಪರುಷರಸ, ಸಿದ್ಧರಸ, ನಿರ್ಜರೋಧಕ ದಿಕ್ಕರಿಗಳು, ಕೂರ್ಮಮೊದಲಾದ
ಜಲಚರಂಗಳು, ಚಂದ್ರತಾರಾಗಣ ನಕ್ಷತ್ರಗಳು ಪುಟ್ಟಿದವು.

ಇದಕ್ಕೆ ಶೃತಿ :
ಓಂ ವಿಶ್ವಕರ್ಮ ಹೃದಯೆ ಬ್ರಹ್ಮಚಂದ್ರಮಾ ಮನಸೋಜಾತಃ
ಚಕ್ಷೋಸ್ಸೂರ್ಯದಯಾಭ್ಯೋ ಸರ್ವಾಂಗ ಭೂಷಿಣೆ ದೇವಸ್ಯ ಬಾಹುದ್ವಯಾಶಂಕಃ
ಪ್ರತಿಭಾಹು ವಿಷ್ಣುಮೇವಚ ಮಣಿಬಂಧ ಪಿತಾಮಹ
ಜೇಷ್ಟಾಂಗುತೀದೇವೇಂದ್ರತರ್ಜಂನ್ಯಂಗುತೀಶಾನ್ಯ ಪ್ರೋಕ್ತ
ಮಧ್ಯಮಾದಾಂಗು ತೀಮಾಧವಾ ಅನಿಮಿಷಾಂಗುತೀ ಅಗ್ನಿದೇವಸ್ಯ
ಕನಿಷ್ಟಾಂಗುತೀ ಭಾಸ್ಕರಾ ಅಚಲಕಚಿತ ಮಧ್ಯೇ ವನರ್ಚಪಾದ
ಆಹ್ವಾನಾಂತು ಜಗಂ ವಿಶ್ವಕರ್ಮಣಾಂ
ಇಂತು ಕಾಶ್ಯಪಬ್ರಹ್ಮನ ಹದಿಮೂಱು ಸ್ತ್ರೀಯರುಗಳಿಗೆ ಸಚರಾಚರಂಗಳು
ಪುಟ್ಟಿದವಾಗಿ ಇವರ ಪರಿಪ್ರಮಾಣ ನಮ್ಮ ಶರಣಸ್ಥಲದಲ್ಲಿದ್ದವರು  ಬಲ್ಲರು;
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯ,
ಪಂಚವಕ್ತ್ರ, ಆದಿಲಿಂಗ, ಅನಾದಿಶರಣ ಇವರೆಲ್ಲರು ಸಾಕ್ಷಿಯಾಗಿ
ಕೂಡಲ ಚನ್ನಸಂಗಯ್ಯನೆ ವಿಕರ್ಮ ಜಗದ್ಗುರು

ಕೃತಯುಗ, ತ್ರೇತಾಯುಗ, ದ್ವಾಪರಾ, ಕಲಿಯುಗಂಗಳು ಭವರಾಟಳದಲ್ಲಿ
ತಿರುಗಿ ಬರುತಿಪ್ಪಲ್ಲಿ, ಅನಂತ ಕೋಟಾನ ಕೋಟಿಯುಗಂಗಳು ಮಡಿದು ಹೋದವು,
ಅನಂತ ಪ್ರಳಯಂಗಳು ಸುಳಿಸುಳಿದು ಹೋದವು,
ಹದಿನಾಲ್ಕು ಲೋಕಂಗಳೆಂಬ ಅನಂತಕೋಟಿ ಬ್ರಹ್ಮಾಂಡಂಗಳೆಲ್ಲ ಲಯವಾಗಿ ಹೋದುವು.
ಇದಱೊಳಗೆ ಅವಲೋಕದಲ್ಲಿಯೂ ಅವಯುಗದಲ್ಲಿಯೂ
ಆರು ಪ್ರಾಣಲಿಂಗ ಲಿಂಗಪ್ರಾಣಭೇದವನಱುಹಿದವರಾರು ಹೇಳಾ?
ಗಂಗೆ ಗೌರೀವಲ್ಲಭರು ಮೊದಲಾದ ಅನಂತಕೋಟಿ ರುದ್ರಗಣಾದಿಗಳೆಲ್ಲರು
ಪ್ರಾಣಲಿಂಗಸಂಬಂಧದ ಹೊಲಬನಱಿಯದೆ ಅಣಿಮಾದಿ ಚತುರ್ವಿಧ ಫಲಪ್ರಾಪ್ತಿಕ್ಕೊಳಗಾದರು.
ಶಿವಾಚಾರದ ವಿಚಾರವನಱಿಯದೆ ಜಗವು ಕೆಟ್ಟಿಹುದೆಂದು ಪರಪುರುಷಾರ್ಥಕಾರಣವಾಗಿ
ಮರ್ತ್ಯದಲ್ಲಿ ಅವತರಿಸಿ ಗುರುಲಿಂಗ ಜಂಗಮ ಪಾದೋದಕ ಪ್ರಸಾದವೆಂಬ
ಪಂಚಾಚಾರ ಸ್ಥಲವನೆಲೆಗೊಳಿಸಿ, ಷಟ್ಸ್ಥಲವೆಂಬ ಮಹಾನುಭಾವಮಂ ಕರತಳಾಮಳಕವಾಗಿ
ಸ್ಥಿರಗೊಳಿಸಿ, ಪ್ರಾಣಲಿಂಗ ಲಿಂಗಪ್ರಾಣವೆಂಬ ಭೇದವನೆನಗೆತಿಳುಹಿ
ಎನ್ನ ಭ್ರಾಂತುಸೂತಕವ ಬಿಡಿಸಿ, ಲಿಂಗೈಕ್ಯವೆಂಬುದನೆನಗೆ ತೋಱsದಿಯಾಗಿ
ನಿನ್ನಿಂದಲಾನು ಸಂಗನಬಸವಣ್ಣನೆಂಬ ಪೆಸರವಡೆದನು            .
ಕೂಡಲಸಂಗಮದೇವರ ಸಾಕ್ಷಿಯಾಗಿ
ಎನಗೆ ನೀವು ಪರಮಾರಾಧ್ಯರು ಕಾಣಾ ಚನ್ನಬಸವಣ್ಣಾ.

ಪ್ರಥಮದಲ್ಲಿ ನಿರಾಕಾರ ಪರವಸ್ತು ತಾನೊಂದೆ ,
ಆ ನಿರಾಕಾರ ಪರವಸ್ತುವಿನಲ್ಲಿ ಮಹಾಜ್ಞಾನ ಉದಯವಾಗಿ,
ಆ ಮಹಾಜ್ಞಾನವೆ ಅನಾದಿಶರಣ ರೂಪಾಗಿ,
ಆ ನಿರಾಕಾರ ಪರವಸ್ತುವಾಧಾರವಾಗಿ ಚಿನ್ನ ಬಣ್ಣದ ಹಾಂಗೆ
ಭಿನ್ನವಿಲ್ಲದಿಪ್ಪುದ ನೀನೆ ಬಲ್ಲೆಯಲ್ಲವೆ ಮತ್ತಾರು ಬಲ್ಲರು ಹೇಳಾ?
ಆ ನಿರಾಕಾರ ಪರವಸ್ತುವೆ ನಿಷ್ಕಲ ಲಿಂಗವಾದಲ್ಲಿ
ಆ ನಿಷ್ಕಲ ಲಿಂಗದಿಂದ ಜ್ಞಾನ ಚಿತ್ತು ಉದಯವಾಗಿ,
ಆ ಜ್ಞಾನ ಚಿತ್ತುವೆ ಶರಣರೂಪವಾಗಿ, ಆನಿಷ್ಕಲ ಲಿಂಗಕ್ಕಾಶ್ರಯವಾಗಿ
ಆ ಚಿದಂಗಸ್ವರೂಪನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ?
ಆ ನಿಷ್ಕಲಜ್ಞಾನಚಿತ್ತೆ ಬಲಿದು ಚಿಚ್ಛಕ್ತಿಯಾದಲ್ಲಿ
ಆ ಚಿಚ್ಛಕ್ತಿಯ ಸಂಗದಿಂದ ನೀನು ಮಹಲಿಂಗವಾದಲ್ಲಿ
ಆ ಶಾಂತಾತಿತೋತ್ತರೆಯೆಂಬ ಕಲೆಯಿಂದ ನಾನುದಯವಾಗಿ,
ಆ ಮಹಾಲಿಂಗಕ್ಕಾಶ್ರಯವಾಗಿ, ಐಕ್ಯನಮಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ?
ಆ ಚಿಚ್ಛಕ್ತಿಯಿಂದ ಪರಶಕ್ತಿಯುದಯವಾಗಿ,
ಆ ಪರಶಕ್ತಿಯ ಸಂಗದಿಂದ ನೀನು ಪ್ರಸಾದಲಿಂಗವಾದಲ್ಲಿ,
ಆ ಶಾಂತಾತೀತಯೆಂಬ ಕಲೆಯಲ್ಲಿ ನಾನುದಯವಾಗಿ
ಆ ಪ್ರಸಾದ ಲಿಂಗಕ್ಕಾಶ್ರಯವಾಗಿ ಶರಣನಾಗಿಪ್ಪುದ
ನೀಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ?
ಆ ಪರಶಕ್ತಿಯಿಂದಾದಿ ಶಕ್ತಿಯುದಯವಾಗಿ,
ಆ ಆದಿಶಕ್ತಿಯ ಸಂಗದಿಂದ ನೀನು ಶುದ್ಧಸುಜ್ಞಾನವೆಂಬ
ಜಂಗಮಲಿಂಗವಾದಲ್ಲಿ ಆ ಶಾಂತಿಯೆಂಬ ಕಲೆಯಲ್ಲಿ
ನಾನುದಯವಾಗಿ ಆ ಜಂಗಮ ಲಿಂಗಕ್ಕಾಶ್ರಯವಾಗಿ,
ಪ್ರಾಣಲಿಂಗಿಯಾಗಿಪ್ಪುದ ನೀಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ?
ಆ ಆದಿಶಕ್ತಿಯೀಂದಿಚ್ಛಾಶಕ್ತಿಯುದಯವಾಗಿ,
ಆ ಇಚ್ಛಾಶಕ್ತಿಯ ಸಂಗದಿಂದ ನೀನು ಶಿವಲಿಂಗಾಕಾರವಾದಲ್ಲಿ
ಅವಿದ್ಯೆಯೆಂಬ ಕಲೆಯಲ್ಲಿ ನಾನುದಯವಾಗಿ ಆ ಶಿವಲಿಂಗಕ್ಕಾಶ್ರಯವಾಗಿ
ಪರಮಪ್ರಸಾದಿಯಾಗಿಪ್ಪುದ ನೀಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ?
ಆ ಇಚ್ಛಾಶಕ್ತಿಯಿಂದ ಸುಜ್ಞಾನ ಶಕ್ತಿಯುದಯವಾಗಿ,
ಆ ಸುಜ್ಞಾನ ಶಕ್ತಿಯಸಂಗದಿಂದ ನೀನು ಗುರುಲಿಂಗವಾದಲ್ಲಿ,
ಆ ಪ್ರತಿಷ್ಠೆಯೆಂಬ ಕಲೆಯಲ್ಲಿ ನಾನುದಯವಾಗಿ,
ಆ ಗುರುಲಿಂಗಕ್ಕಾಶ್ರಯವಾಗಿ, ಮಹೇಶ್ವರನಾಗಿಪ್ಪುದ
ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ?
ಆ ಸುಜ್ಞಾನಶಕ್ತಿಯಿಂದ ಕ್ರಿಯಾಶಕ್ತಿಯುದಯವಾಗಿ
ಆಚಾರಲಿಂಗಕ್ಕಾಶ್ರಯವಾಗಿ; ಆಕ್ರಿಯಾಶಕ್ರಿಯ ಸಂಗದಿಂದ
ನೀನಾಚಾರಲಿಂಗವಾದಲ್ಲಿ, ಆ ನಿವೃತ್ತಿಯೆಂಬ ಕಲೆಯಲ್ಲಿ
ನಾನುದಯವಾಗಿ, ಆ ಆಚಾರಲಿಂಗಕ್ಕಾಶ್ರಯವಾಗಿ
ಸದ್ಭಕ್ತನಾಗಿಪ್ಪುದ ನೀಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ?
ನೀ ನಿನ್ನ ಸ್ವಲೀಲೆಯಿಂದ ನಾನಾರೂಪದಲ್ಲಿ, ನಿನ್ನ ಬೆಂಬಳಿವಿಡಿದು
ನಾನು ನಾನಾರೂಪಾಗಿರ್ದೆನಯ್ಯಾ.
ನೀನಾವಾವ ರೂಪಾದೆ, ನಾನು ಆಯಾಯ ರೂಪಾಗಿರ್ದೆನಯ್ಯಾ.
ಇದುಕಾರಣ-ಶರಣಲೀಂಗವೆರಡಕ್ಕು ಭಿನ್ನವಿಲ್ಲವೆಂಬುದನು
ಸ್ವಾನುಭಾವ ವಿವೇಕದಿಂದಱಿದುದು ಅಱುಹಲ್ಲದೆ
ಆಗಮಯುಕ್ತಿಯಿಂದಱಿದುದು ಅಱುಹಲ್ಲ       

ಅದೇನು ಕಾರಣವೆಂದೆಡೆ:
ಶೃತಿ ಜ್ಞಾನದಿಂದ ಸಂಕಲ್ಪ ಭ್ರಾಂತಿ ತೊಲಗದಾಗಿ
ಈ ಷಟ್ಸ್ಥಲ ಮಾರ್ಗವನು ದ್ವೈತಾದ್ವೈತದೊಳಗೆ
ಕೊಡಲಿಕ್ಕೆ ನುಡಿಯಲಾಗದು.
ಈ ಲಿಂಗಾಂಗ ಸಂಬಂಧ ಸಾಮರಸ್ಯೈಕ್ಯವ ತಿಳಿದ ಬಳಿಕ
ನಿತ್ಯನಿರಂಜನ ಪರತತ್ವವು ತಾನೆ ನೋಡ
ಮಹಾಲಿಂಗ ಗುರುಶಿವ ಸಿದ್ಧೇಶ್ವರ ಪ್ರಭುವೆ.

|| ತ್ರಿವಿಧಿ ||

ವಸುಧೆಯಿಲ್ಲದ ಮುನ್ನ ದೇಶಯೆಂಟ ನಿರ್ಮಿಸದೆ
ಶಶಿ ರವಿಗಳೆಂಬವರ ನಾಮವಿಲ್ಲ
ವಶವಲ್ಲದಾನತದ ದೆಶೆಗೆಟ್ಟುಲಿಂಗವನು
ಹೆಸರಿಟ್ಟ ಗುರುಬಸವ ಯೋಗಿನಾಥ!

        

ಆದಿಯಾಧಾರದಲಿ ಆದಿಲಿಂಗವು ಇರಲು
ಆದಿಲಿಂಗವನು ಹೆತ್ತ ಮಾತೆ ಗುರುವೆ
ಶ್ರೋತ್ರೇಂದ್ರಿಯಲಿ ಭಾವಿಸಿ ನಿಷ್ಕಲವಾದಜಾತ
ಶಿವ ಜನನವೈ ಯೋಗಿನಾಥ

         

ತನುಮನದ ಮಧ್ಯದಲಿ ಬೆಳಗುತಿರ್ಪುದು
ಒಂದು ಘನ ತರದ ದೀಪ
ಶಾಖಾಧಿಪತಿಯ ತೊಳಗಿ ಬೆಳಗುವ
ನಿತ್ಯ ಘನತರಾಕ್ಷರದಲ್ಲ ಶಿವಲಿಂಗ ಜನನವೈ ಯೋಗಿನಾಥ.