|| ವೃತ್ತ ||           

ಪವನಸಮುದ್ಧ ತಾಂಬುರುಹಪತ್ರಪಯಃಕಣದಂತೆ ಚಂಚಲ
ತ್ವವನಿರದೈದಿ ಜೀವಿಸುವ ಜೀವನದಲ್ಲಿ ಭವಸ್ಪ್ರಸಾದಮು
ಳ್ಳವನೆ ಕೃತಾರ್ಥನೇವೆನೆನಗಿಲ್ಲೆನಲೆಂದಯ ಗೈಯ್ವ ಬುದ್ಧಿಶಂ
ಭುವೆ ನಿನಗುಂಟೆಯಿಲ್ಲ ಪ್ರರಮಪ್ರಭುವೇ ಮಹದೈಪುರೀಶ್ವರಾ || 

|| ವಚನ ||         

        

ರತ್ನೇ ಪ್ರಸಾದವನಾರಿಧಿಸುತ್ತಲು ಆ ಪ್ರಸಾದವನಲ್ಲ್ಲಿ
ಬೀಳುತ್ತ ಆಳುತ್ತಲಿದ್ದಿತ್ತು ನೊಡಾ
ಅದು ಹಲಬರು ನೋಡಿ ನೋಡಿ ಹೋರುತ್ತಿದ್ದಾರು
ಆ ಪ್ರಸಾದ ತಾನೇ ಬಂದು ಎನ್ನ ಸುತ್ತಿಕೊಂಡಿತ್ತು
ಇದರ ಪದಾರ್ಥವ ಮಾಡಿಕೊಡಯ್ಯಾ ಕೂಡಲಸಂಗಮದೇವ.

         

ಮನೆಯೊಳಗಣ ಕಿಚ್ಚು ಕಾನನವ ಸುಟ್ಟು ಕಾನನ ಬೆಂದಲ್ಲಿ
ಮನೆ ಉರಿಹತ್ತಿತ್ತು, ಅಲ್ಲಿ ಒಂದು ಕಂಬ ಉಳಿಯಿತ್ತು.
ಆ ಕಂಬದ ಮೇಲೊಂದು ರತ್ಮವಿದ್ದುದ ಕಂಡೆ.
ಅದರ ಬೆಳಗು ಮೂಱು ಲೋಕವ ತುಂಬಿತಲ್ಲಾ !
ಇದು ಕಾರಣ, ಕೂಡಲಚನ್ನಸಂಗಯ್ಯನಲ್ಲಿ
ಪ್ರಭುದೇವರ ನಿಲವಿಂಗೆ ನಾನು ಶರಣೆನುತಿರ್ದೆನು.

ಧರೆಯ ಮೇಲೊಂದು ಅರಿದಪ್ಪ ರತ್ನ ಹುಟ್ಟಿರಲು
ಅದನಱಸಲಱಸ ಹೋಯಿತ್ತಯ್ಯ.
ನಡುನೀರೊಳಗೆ ಮುಳುಗಿ ಆಳವಱಿದು ನೋಡಿ ಕಂಡಿಹೆನೆಂದಡೆ
ಕಾಣಬಾರದು.
ಧಾರೆವಟ್ಟಲ ಕಳೆದುಕೊಂಡು ನೀರ ಶೋಧಿಸಿ ನೋಡಿದಡೆ
ದೂರದಲ್ಲಿ ಕಾಣಬರುತ್ತಿಹುದು ನೋಡಾ.
ಸಾರಕ್ಕೆ ಹಿಡಿದುಕೊಂಡಿಹೆನೆಂಬ ಧೀರರೆಲ್ಲರ ಮತಿಯ ಬಗೆಯ ನುಂಗಿತ್ತು
ಗುಹೇಶ್ವರಾ.

        

 ರಂಜಕರೆಲ್ಲರು ರತ್ನವ ಕೆಡಿಸಿ ಅಂಧಕಾರದಲ್ಲಿ ಬಂದಱಸುವರು ಅದರಂದರ ತಿಳಿಯರು.
ಚಂದ ತಿಳಿಯದು ಬಂದಬಟ್ಟೆಯಲ್ಲಿ ತೊಳಲುವರು.
ಸಂದೇಹವಿಡಿದು ಬಂದವರೆಲ್ಲ ಅಂದಂದಿಗೆ ದೂರ ಮಾರೇಶ್ವರಾ.

        

ಹೊರಸಿನ ಯೆಕ್ಕೆಯ ಶಂಖದ ಮಣಿಯ ಪವಣಿಸುವರು
ನೀವಾರಾದರು ಪವಣಿಸಿರೋ ಇದನಾನಱಿಯೆನು.
ಒಂದು ತಾಳಮರದ ಮೇಲೆ ಮೂಱು ರತ್ನವಿಹವು ನಾ ಬಲ್ಲೆನು.
ಒಂದು ರತ್ನವು ಉತ್ಪತ್ತಿ ಸ್ಥಿತಿ ಲಯಕ್ಕೊಳಗಾಯಿತ್ತು.
ಒಂದು ರತ್ನ ಹದಿನಾಲ್ಕು ಲೋಕಕ್ಕೆಣೆಹಾಯಿತ್ತು.
ಇನ್ನೊಂದು ರತ್ನಕ್ಕೆ ಬೆಲೆಯಿಲ್ಲವೆಂದು ಗುಹೇಶ್ವರಲಿಂಗದಲ್ಲಿ
‘ನಿಶ್ಯಬ್ದಂ ಬ್ರಹ್ಮ ಉಚ್ಯತೇ ’ ಎಂದುದು ವೇದ.           
         ಕರಗಿಸಿ ನೋಡಿರಣ್ಣಾ ಕರಿಯ ಘಟ್ಟಿಯ
ಆ ಕರಿಯ ಘಟ್ಟಿಯೊಳಗೊಂದು ರತ್ನವಿಪ್ಪುದು.
ಆ ರತ್ನವ ಬಲ್ಲೆನೆಂಬ ಅಱು ಹಿರಿಯರೆಲ್ಲ ಮರುಳಾಗಿ ಹೋದರು.
ಆ ಕರಿಯ ಘಟ್ಟಿಯ ಬಿಳಿದು ಮಾಡಿ ಮುಖಮುದ್ರೆಯ
ನೊಡೆಯಬಲ್ಲವರಿಗಲ್ಲದೆ ಗುಹೇಶ್ವರ ಲಿಂಗವು ಕಾಣಬಾರದು ಕೇಳಿರಣ್ಣಾ.

ಏನೇನು ಎನಲಿಲ್ಲದ ನಿರಾಲಯದಿಂದಾಯಿತ್ತು ಸಹಜ.
ಆ ಸಹಜದಿಂದಾಯಿತ್ತು ಸೃಷ್ಟಿ, ಸೃಷ್ಟಿಯಿಂದಾಯಿತ್ತು ಸಂಸಾರ.
ಸಂಸಾರದಿಂದಾಯಿತ್ತು ಅಜ್ಞಾನ ಅಜ್ಞಾನದಿಂದಾಯಿತ್ತು ಮಱವೆ.
ಆ ಮಱವೆಯಿಂದವೆ ಜ್ಞಾನರತ್ನವ ಮಱಿದು ತಾಮಸಕ್ಕೊಳಗಾದಲ್ಲಿ
ನಾನೀನೆಂಬೆ ಅಹಂಕಾರ ತಲೆದೋಱಿತ್ತು.
ಆ ಅಹಂಕಾರದಿಂದ ಸೀಮೆಗೆಟ್ಟು ದುಷ್ಕಾರ್ಮಕ್ಕೀಡಾಗಿ ನೀನೆಂಬುದ ಮಱೆದೆನಯ್ಯಾ.
ಇನ್ನು ಕೃಪೆಯ ಮಾಡು ಕೃಪೆಯ ಮಾಡು ಶಿವಧೋ ಶಿವಧೋ
ಎನ್ನಯ್ಯಪ್ರಿಯ ಇಮ್ಮಡಿ ನಿಷ್ಕಳಂಕ ಮಲ್ಲಿಕಾರ್ಜುನಾ.


ಉದಕದ ಬಾವಿಯಲ್ಲಿ ಒಂದು ರಸದ ಗಿರಿ ಹುಟ್ಟಿ
ಹೊಸಮಾಣಿಕ್ಯವ ನುಂಗಿತ್ತ ಕಂಡೆ    ನುಂಗುವಾಗ ಒಂದು;
ಘುಟುಕಿಸುವಾಗ ಎರಡು, ಸ್ವಸ್ಥಾನದಲ್ಲಿ ನಿಂದಾಗ ಮೂಱು.
ಅದಱಂಗವ ತಿಳಿದು ಕಳೆಯಬಲ್ಲಡೆ ನಿಷ್ಕಳಂಕಮಲ್ಲಿಕಾರ್ಜುನ ಲಿಂಗವ ಬಲ್ಲವ.

         

ಅಂಗೈಯೊಳಗ ನಾರಿವಾಳದ ಸಸಿ ಅಂಬರದೆರಳೆಯನುಂಗಿತ್ತಲ್ಲಾ.
ಕಂಭದೊಳಗಣ ಮಾಣಿಕ್ಯವು ನವಕೋಟಿ ಬ್ರಹ್ಮರ ನುಂಗಿತ್ತಾಲ್ಲಾ.
ಅಂಡಜನೆಂಬ ತತ್ತಿ ಹಲವು ಪಕ್ಷಿಯನುಂಗಿ ನಿರ್ವಯಲಾಯಿತ್ತು ಗುಹೇಶ್ವರಾ.

೧೦

ರತ್ನ ಭಂಡಾರ ಮತ್ತು ವಸ್ತ್ರದ ಪೆಟ್ಟಿಗೆಯೆಂದಲ್ಲಿ
ಬಾಹ್ಯವಸ್ತು ತಾ ವಾಪ್ಪನೆ ?
ಬಯಕೆಯ ದೃಷ್ಟವಲ್ಲದೆ ಗುಣವಸ್ತುವೂಳಗಿಲ್ಲ್ಲದೆರೆ
ಬಿದಿರು ಮರ ಲೋಹ ಮುಂತಾದ ಇದಿಱಿಟ್ಟು ಕರಂಡಕೆಲ್ಲಕ್ಕು
ಒಳಗಣ ಗುಣವಸ್ತುವಿಲ್ಲದಿರೆ ಆತ್ಮನೈದಿದ ಘಟದಂತಿಪ್ಪವು.
ಈ ಗುಣವಸ್ತು ವಸ್ತುಕದ ಲಕ್ಷದ ನಿರ್ಲಕ್ಷವ ತಿಳಿದು ತಾನೇನ ಹಿಡಿದು ಧರಿಸಿದಲ್ಲಿಯು.
ಅವು ತಾನಲ್ಲ, ಅವಱೂಳು ತಾನಿಲ್ಲ ಆ ಗುಣ ಮನಭ್ರಾಂತಿಯಲ್ಲದೆ
ಲೀಲೋಲ್ಲಾಸತೆ ಅವಿವರ ಗುಣಭಾವಳಿದು ಆ ವಸ್ತು ನಿನಗನ್ಯ ಭಿನ್ನಲಿಲ್ಲ.
ತಿಳಿದಡೆ ಕರಂಡಗೋಗಡಗಿದ ಅಡಗಿಸಿಕೊಂಡ ಬಾಹ್ಯಗುಣ ವಸ್ತು
ವಿನಂತಾಹೆ. ಗೋಳಕಾಕಾರ ವಿಶ್ವವಿರಹಿತ ಲಿಂಗವನಱಿದು
ಉಭಯ ಸಂಗದ ಗುಣಾ.

೧೧

ಕ್ರಿಯೆಯಲ್ಲಿ ವಸ್ತುವಿಪ್ಪುಡೆ ದಿಟವಾದಡೆ ಇನ್ನು ತಿಳಿದು ನೋಡಿದಲ್ಲಿ ವಸ್ತುವಿನಲ್ಲಿ ಕ್ರಿಯೆಯಿಪ್ಪುದೆ ದಿಟ.
ಇನ್ನು ಉಭಯವ ತಿಳಿದು ನೋಡಿದಲ್ಲಿ ವಸ್ತುವಿಗು, ಕ್ರಿಯೆಗು ಭಿನ್ನವುಂಟೆ  ?
ಅದೆಂತೆಂದಡೆ:
ಸಕ್ಕರೆಯ ಕುಂಭವೆನಲಿಕ್ಕೆ ತುಪ್ಪದ ಕಂದಲೆನಲಿಕ್ಕೆ, ಕರ್ಪುರದಕರಂಡವೆನಲಕ್ಕೆ
ಆ ವಸ್ತು ದೃಷ್ಟ ದಿಟವೆ ?
ಕುಂಭ ಸಕ್ಕರೆಯಲ್ಲ; ಸಕ್ಕರೆಯ ಕುಂಭವಲ್ಲ. ತುಪ್ಪ ಕಂದಲಲ್ಲ;
ಕಂದಲ ತುಪ್ಪವಲ್ಲ.
ಕರಂಡ ಕರ್ಪುರವಲ್ಲ; ಕರ್ಪುರ ಕರಂಡವಲ್ಲ.
ಅಲ್ಲಿದ್ದ ವಸ್ತು ಹೋದ ಮತ್ತೆ ಉಪದೃಷ್ಟದ ಮಾತಡಗಿತ್ತು.
ಬಂಧವಿಲ್ಲದ ಮತ್ತೆ ಬಂಗಾರವೆಂಬ ಕುಱುಹುಂಟೆ ?
ಸಕ್ಕರೆ ತುಪ್ಪ ಕರ್ಪುರ ಹೋದ ಮತ್ತೆ ಘಟವಲ್ಲದೆ ವಸ್ತುನಾಮವಿಲ್ಲ.
ವಸ್ತು ವಸ್ತುಕದಂತೆ, ಘಟ ಘಟದಂತೆ ಉಭಯಕ್ಕು ಭಿನ್ನವಿಲ್ಲದೆ.
ಸಿದ್ಧಿಯಾಗಿ ಆ ಸಿದ್ಧಿ ಪ್ರಸಿದ್ಧಿಯಾಗಿ, ಆ ಪ್ರಸಿದ್ಧಿ ಪ್ರಸನ್ನವಾಗಿ
ಆ ಪ್ರಸನ್ನ ಪ್ರಸನ್ನಕ್ಕೆ ಒಡಲಱತುದು.
ಗೋಳಕಾಕಾರ ವಿಶ್ವರಹಿತ ಲಿಂಗವು ತಾನಾದುದು.

೧೨

ಹುತ್ತದೊಳಗಣ ಹಾವ, ಮಡುವಿನೊಳಗಣ ಮತ್ಸ್ಯವ, ಮಹಾಕಾನನದ
ವಾನರವ ಹಿಡಿವಪರಿ ಇನ್ನೆಂತೊ ?
ಹುತ್ತವನಗಿದು ಮಡುವ ಹೂಳಿ ಕಾನನವ ತಱಿದು ಇಂತಿವ ಹಿಡಿಯಬೇಕು.
ಸಕಲೇಂದ್ರಿಯದೊಳಗಿರ್ದ ವಸ್ತುವನಱಿದೆಹೆನೆಂಬ ಮಿಟ್ಟಿಯ ಭಂಡರನೊಪ್ಪ
ಏಣಾಂಕಧರಸೋಮೇಶ್ವರಲಿಂಗವು.

೧೩

ವಸ್ತುವಿಪ್ಪ ಭೇದವ ಬಲ್ಲೆನೆಂದೆಡೆ
ಪರ್ಣದೊಳಗಿಪ್ಪ ಪಚ್ಚೆಯಂತೆ
ಹೊನ್ನಿನೊಳಗಿಪ್ಪ ಬಣ್ಣದಂತೆ
ಶುಕ್ತಿಯೊಳಗಿಪ್ಪ ಅಪ್ಪುವಿನಂತೆ
ಅದು ನೆಪ್ಪಿಗೆ ಬಾರದು
ಒಪ್ಪವಲ್ಲದೆ ಆ ವಸ್ತುವನಪ್ಪುದರ
ನಾರನು ಕಾಣೆ ನಿಷ್ಕಳಂಕ ಮಲ್ಲಿಕಾರ್ಜುನಾ.

೧೪

ಭೇರಿಯೊಳಗಣ ನಾದವ ಭೇದಿಸಬಲ್ಲಡೆ
ಅಭೇದ್ಯವ ಭೇದಿಸಿದರೆಂಬೆ.
ಚೋದ್ಯದೊಳಗಣ ಸ್ವರೂಪದ ಸಾಧಿಸಿ ಭೋಗಿಸಬಲ್ಲಡೆ
ವಸ್ತುವ ಸಾಧಿಸಬಲ್ಲರೆಂಬೆ.
ಇಂತಿವರಾಗು ಹೋಗುವವನಱಿಯದೆ ಜ್ಞಾನಕ್ಕೆ ತಾವೆ ಅಱುಹರೆಂಬ
ಕಾಳುಕುಲ್ಲರನೋಡಿ ಜಾಣನಾಗಿ ಅಡಗಿದೆಯಲ್ಲ ನಿಷ್ಕಳಂಕಮಲ್ಲಿಕಾರ್ಜುನಾ.

೧೫

ಎನ್ನ ಸದ್ಗುರು ತನ್ನ ಕರಕ್ಕೆ ಮಹತ್ತಪ್ಪ ದಿವ್ಯಲಿಂಗದೊಳಗೆ
ಆ ಮಹಾಘನಗುರುವಪ್ಪ ಪರಶಿವಮೂರ್ತಿಗೊಂಡನು.
ಆ ಮೂರ್ತಿಯ ನಿಶ್ಚೈಸಲೆಂದು ಪ್ರಸನ್ನಿಸಿದವು
ಶ್ರೀ ವಿಭೂತಿ ರುದ್ರಾಕ್ಷಿಗಳೆಂಬ ಜ್ಯೋತಿ ಲಿಪಿಯ ಮುದ್ರೆಗಳು.
ಇಂತಪ್ಪ ದಿವ್ಯಸಾಧನವಿಡಿದು ಆತನ ಕರಸ್ಥಲದೊಳೊಪ್ಪುತಿಪ್ಪ
ದಿವ್ಯವಸ್ತುವಕಾಣಲೊಲ್ಲದೆ  ಅಜ್ಞಾನವಶದಿಂದ ಕೈವಶವಾದ ವಸ್ತುವಿನ ಬಿಟ್ಟು ಅತ್ತ
ಬೇರೆ ವಸ್ತುವುಂಟೆಂದುಬಯಲನಾಹ್ವಾನಿಸಿ ಅಲ್ಲಿ ವಸ್ತುವಿನ ನಿಶ್ಚಯಕಾಣದೆ
ಭವ ಭವದ ಲೆಂಕರಾಗಿ ಬಱಿದೆ ಬಳಲುತ್ತಿಪ್ಪ ಈ ತಾಮಸಜೀವಿಗಳಿಗೆ
ಲಿಂಗದ ಹಂಗಿನ್ನಾತಕಯ್ಯಾ ಬಸವಪ್ರಿಯ ಕೂಡಲ ಚನ್ನಸಂಗಮದೇವಾ.

೧೬

ಶ್ರುತಿಯ ನಂಬದಿರೋ ಶ್ರುತಿಯ ನಂಬದಿರೋ,
ಆ ಶ್ರುತಿ ತತಿಗಳು ಮುನ್ನವೆ ಶಿವನಡಿಯ ಕಾಣದೆ
ಶ್ರುತಿ ‘ಚಕಿತಮಭಿಧತ್ತೇ’ ಎಂದೆನ್ನುತ್ತ
ಹಲವು ಮುಖದಲಱಸಿ ಮುನ್ನವೆ ತೊಳಲುತ್ತವೆ
ಇದುಕಾರಣ ಶ್ರುತಿಹೇಳಿದತ್ತ ಹಱಿದು ಹಱಿದು ಬಳಲದಿರೋ.
ಶೂನ್ಯಕ್ಕೆ ತಲೆಯಾರನಿಕ್ಕದಿರೋ,
ವಸ್ತು ಹೃದಯದಲುಂಟೆಂದು ಭ್ರಮಿಸದಿರೋ
ವಸ್ತು ಭ್ರೂಮಧ್ಯದೊಳಗುಂಟೆಂದು ನೆನೆಯದಿರೋ
ವಸ್ತು ಭಹ್ಮರಂಧ್ರದಲುಂಟೆಂದು ಹೊಲಬುಗೆಡದಿರೋ
ನಮ್ಮ ಗುಹೇಶ್ವರಲಿಂಗವೆಂಬ ದಿವ್ಯವಸ್ತುವ ಕಾಬಡೆ
ಎನ್ನ ಪರಮಗುರು ಅನಿಮಿಷದೇವನಂತೆ ಎನ್ನ ಕರಸ್ಥಲದಲ್ಲಿ ನಿಶ್ಚೈಸಿ
ವಸ್ತು ನಿಶ್ಚೈಯವಕಂಡು ನಿಬ್ಬೆಱಗಾಗೋ ಮರುಳೆ.

೧೭

ಸಿದ್ಧರಸ ಲೇಸೆಂದಡೆ ತಾನಿದ್ದ ಕುಡಿಕೆ ಹೇಮವಾದುದಿಲ್ಲ, ಲೋಹಕ್ಕಲ್ಲದೆ ವೇಧಿಸೂದಿಲ್ಲ
ವಸ್ತು ಸರ್ವದಲ್ಲಿ ಸಂಪೂರ್ಣವಾಗಿರ್ದಡೇನು
ತನ್ನನಱುವರ ಹೃದಯದಲಲ್ಲದೆ ಇರದು.
ಸದಾಶಿವಮೂರ್ತಿಲಿಂಗದ ಇರವು ಇಂದ್ರಿಯವಕಟ್ಟಿ ವಸ್ತುವನಱಿದಿಹೆನೆಂದಡೆ ಕಱೆವ ಹಸುವಲ್ಲ.
ಇಂದ್ರಿಯ ಯವ ಬಿಟ್ಟು ವಸ್ತುವ ಹಿಡಿದೆಹೆನೆಂದಡೆ ಬಿಡಾಡಿಯಲ್ಲ.
ವನಱೆವುದಕ್ಕೆ ಎರಡಳಿದು ಒಂದುಳಿಯಬೇಕು.
ಆ ಸಂದಿನ ಬೆಸುಗೆಯಲ್ಲಿ ಸಂದಿರಿತಿಪ್ಪವರ ಅಂದವ ನೋಡಾ ನಿಷ್ಕಳಂಕಮಲ್ಲಿಕಾರ್ಜುನಾ.

೧೮

ಒಂದು ವಾರ್ಣದಿಂದ ಬೇದಕ್ರಮದಿಂ ಕೂಡಲಾಗಿ ಪಂಚವರ್ಣವಾಯಿತ್ತು.
ಶ್ವೇವವರ್ಣ ಮೊದಲು ಕರಿಕ್ರಮದಿಂ ಷಡುವರ್ಣವಾಯಿತ್ತು
ಆ ವರ್ಣದ ಭೇದ ಬೆಳುವಿನ ಶಾಖೆಯಲಡಗಿತ್ತು
ಇಂತೀ ಪರಮನಿಂದ ಇಂದ್ರಿಯ ವಿಕಾರವಾದುದನಱಿಯದೆ
ಆತ್ಮಂಗೆ ಪರಿಬ್ರಮಣವೆಂದು ಸಂದೇಹವ ಮಾಡುವ ಬಂಧಮೋಕ್ಷ
ಕರ್ಮಂಗಳಿಗೆ
ಮನಮನ ಸಂದ ಹರಿದಲ್ಲದೆ ಊರ್ಧ್ವರೇತೋಮೂರ್ತಿ
ಶ್ವೇತಸ್ವಯಂಭು ಕಪಿಲೇಶ್ವರಲಿಂಗವು ಸಾಧ್ಯವಲ್ಲಾ.

೧೯

ಕಾಯದ ಮೊದಲಿಂಗೆ ಬೀಜವಾವುದೆಂದಱಿಯದೀ ಲೋಕ.
ಇಂದ್ರಿಯಂಗಳು ಬೀಜವಲ್ಲ. ಕಳಾಭೇದ ಬೀಜವಲ್ಲ.
ಸ್ವಪ್ನಬಂದೆಱಗಿತಲ್ಲಾ, ಇದಾವಂಗೆಯೂ ಶುದ್ಧಸುಯಿಧಾನವಿಲ್ಲ
ಕಾಣಾ ಗುಹೇಶ್ವರಾ.

೨೦

ಬಾಯೆ ಭಗವಾಗಿ ಕೈಯೆ ಶಿಶ್ನವಾಗಿ ಇಕ್ಕುವ ತುತ್ತುಗಳೆಲ್ಲ ಇಂದ್ರಿಯಕಾಣಿರೋ
ಪ್ರಥಮ ವಿಷಯವಿಂತಿರಲು ಗುಹೇಶ್ವರ ಏಕೋ ಅದ್ವೈತ.

೨೧

ಅಕ್ಕಟಾ ಜೀವನ ತ್ರಿವಿಧವೇ ಮೂಱಕ್ಕೆ ಮುಟ್ಟದೆ ಹೋದೆಯಲ್ಲಾ !
ಬಿಂದುವಿನ ಕೊಡವ ಹೊತ್ತು ಅಂದಚಂದವಗೆಟ್ಟು ಆಡುವರಯ್ಯಾ !
ಗುಹೇಶ್ವರಾ ನಿರಾಳವೆ, ಐದಱಿಂದ ಕೆಟ್ಟತ್ತು ಮುಱುಲೋಕವಲ್ಲ.

೨೨      

ತೋಱದೆ ತೋಱದೆ ನೆರಳಿನ ನೆಳಲು ಬಿಂದುವನುಂಗಿ
ಬಾರದ ಬಯಲುವ ಬಳಲುವ ಕಾರಣಮದೇನೋ ?
ಬಂದುದನಳಿದುದನುಳಿದುದರಂದವ ಬಯಲು ತಾನಱಿಯದು,
ಅದು ಭೂತಪ್ರಭೆಯಲ್ಲಿ ನಿಷ್ಪತಿಯೆಂಬುದನಱೆಯಾ.
ಬಿಂದು ಆಶ್ರಯವಿಲ್ಲ ನಿಮ್ಮ ನಿರವಯವು ಚಿಕ್ಕಯ್ಯಪ್ರಿಯಸಿದ್ದಲಿಂಗ
ಇಲ್ಲ ಇಲ್ಲ ನಿಲ್ಲು ಮಾಣು.

೨೩      

ಅಂದಾದಿ ಬಿಂದುವಿನ ಹೊಂದಿದ ಹುಟ್ಟನು ಆ ಕುಟ್ಟನೆ ಹಿಡಿದು
ಅಂದಚಂದದಲ್ಲಿ ತೊಳಲಿಯಾಡುತ್ತಿದ್ದರು ಜಗವೆಲ್ಲ ಅಂದಗೆಟ್ಟವರೆಲ್ಲ
ಬಂದೇಱಿಹರಗುಲವ ಇದನೊಂದೇ ಹುಟ್ಟಿನಲ್ಲಿ ಇಳುವುವೆನೆಂದ
ನಂಬಿಗರ ಚೌಡಯ್ಯ.

೨೪      

ಅಂಗದೊಳಗಣ ಸವಿ ಸಂಗದೊಳಗಣ ರುಚಿ
ಅಂಗನೆಯ ನಖದೊಳಗೆ ಬಂದು ಮೂರುತಿಯಾಯಿತ್ತು.
ಚಂದಕಾಂತದ ಶಿಲೆಗೆ ಬಿಂದು ತೃಪ್ತಿಯಸಂಚ
ಅದಱಂಗದೊಳಗಣ ಭ್ರಮೆಯ ಪಿಂಡದಾಹುತಿ ನುಂಗಿ,
ಚಂದ್ರನ ಷೋಡಶ ಕಳೆಯ ಇಂದ್ರನ ವಾಹನನುಂಗಿ,
ಗುಹೇಶ್ವರನೆಂಬ ನಿಲವ ನಖದ ಮುಖವ ನುಂಗಿತ್ತು .

೨೫

ಅಂದಾದಿ ಬಿಂದುವಿಲ್ಲದಂದು ಅಂದಾ ಜೀವನೆಲ್ಲಿಪ್ಪುದೊ ?
ಪಿಂಡ ರೂಪಿಸುವಲ್ಲಿ ಆ ಜೀವವಂದ ಪರಿಯಂತುಟೊ ?
ಇದನಱಿದಡೆ ಗುರುವೆಂಬೆ, ಲಿಂಗವೆಂಬೆ, ಜಂಗಮವೆಂಬೆ.
ಅಲ್ಲದಿದ್ದಡೆ ನರನೆಂಬೆ ಕಾಣಾ, ಗುಹೇಶ್ವರಾ ||

೨೬

ಅಂಭುಧಿಯ ಸಂಚದ ಕುಳವನಱಿಯರು;
ಪ್ರಾಣನಾಥನ ಬಿಂದುವಿನ ಅನುವನಱಿಯರು;
ತಂಡವಿಯ ಬಿಂದುವಿನ ಠಾವನಱಿಯರು,
ಈ ತ್ರಿವಿಧದ ಮುಖವನಱಿತಡೆ ಕೂಡಲಚನ್ನಸಂಗಯ್ಯನೆಂಬೆ.

೨೭

ದಶಪಂಚಕಳೆಯದ ಶಶಿಲಿಂದುಕಳೆಯದ
ದಶಪಂಚಕವ ನುಂಗಿ, ದಶಪಂಚಕವನುಗುಳಿತ್ತು
ಅದಱ ದೆಶೆಯನಱಿಯದೆ ಹೋದರು.

೨೮

ಬಿಂದುವಿನೊಳಗೆ ನಾದಹೊಂದಿರ್ದಭೇದವನು,
ಲಿಂಗದೊಳಗೆ ಶರಣಸಂದಿರ್ದಭೇದವನು,
ಲೋಕದ ಸಂದೇಹಿಗಳೆತ್ತಬಲ್ಲರೈ ರಾಮನಾಥಾ.

೨೯      

ಒಡಲೆಂಬಾರಣ್ಯದ ಪಡುವಣ ಕಾಳುಗಟ್ಟಿದ ಗಂಹರದ ನವದ್ವಾರದೊಳಗೆ
ಅಡಗಿಪ್ಪ ಐವರ ಕಳ್ಳರ ತಿಳಿದು ನೋಡಿರಯ್ಯಾ.
ಆ ಕಳ್ಳರು ಇಹನ್ನಕ್ಕರ ಊರಿಗುಪಟಳ ಮನೆಗೆ ಮಾರಿ,
ಚೌಕ ಗ್ರಾಮದ ಮಧ್ಯದವರಿಗುಳುಹಿಲ್ಲ.
ತನುಪ್ರಪಂಚಿಗಳು, ಮನಪ್ರಪಂಚಿಗಳು, ಧನಪ್ರಪಂಚಿಗಳು
ವಾದಿಗಳು, ತರ್ಕಿಗಳು ನಾನಾಕುಟಿಲ ಕುಹಕಬಹುಪಾಟಿಗಳೆಲ್ಲ ನೆರೆದು
ಆ ಕಳ್ಳರ ಹಿಡಿದಿಹೆವೆನುತ್ತಿಹರಯ್ಯ.
ಅದಕ್ಕೆಂಟು ಬೀದಿ ಒಂಬತ್ತು ವೋಡುಗಂಡಿ ಕಾಣಬಾರದ ಕತ್ತಲೆ
ಹೆಜ್ಜೆಯ ಹೊಲ ಬ ಕಂಡೆಹೆನೆಂಬವನ ಭ್ರಾಂತ ನೋಡಾ.