ಗುರುವಿನ ಕರಣದಿಂದ ಹರವಿನೊಳು
ಅರವತ್ತು ಚಂದ ಮಾತು ಲೋಕಚಂದ
ಅರವಿರು ಮರವ ಸಣ್ಣ ಇರುವೆನು
ಲೋಕ ಚಂದ ಮಾಮ ಲೋಕ ಚಂದ ಮಾಮ         || ಗುರು ||

ಕುಂಡಳಸರ್ಪ ಭೂಮಂಡಲ ಇಳಿದಿತು
ಚಂದ ಮಾಮ ಲೋಕ ಚಂದ ಮಾಮ
ಅದರ ಮನೆಯೊಳು ಅಮೃತದ ಕಂದ
ಈಶಬನಲ್ಲಿ ಬಲ್ಲ ಚಂದಮಾಮ ಲೋಕ ಚಂದಮಾಮ  || ಗುರು ||

ಗಂಗೆ ನೀರಲಿ ಮಧ್ಯ ಲಿಂಗಾನ ಗುಡಿಯೊಳು
ಚಂದ ಮಾಮ ಲೋಕ ಚಂದಮಾಮ
ಲಿಂಗನ ಗುಡಿಯೊಳು ಕೆಂಡ ಬೆಳಗುತಿದೆ
ಚಂದಮಾಮ ಲೋಕ ಚಂದಮಾಮ || ಗುರು ||

ಏಳು ಸುತ್ತಿನ ಕೋಟೆ ಮೇಲೊಂದು ಗವಿಯುಂಟು
ಚಂದಮಾಮ ಲೋಕ ಚಂದ ಮಾಮ
ಅಲ್ಲಿ ಏಳೆಡೆ ಸರ್ಪವು ಬೋರಗುಟ್ಟುತ್ತಲಿದೆ
ಚಂದಮಾಮ ಲೋಕ ಚಂದ ಮಾಮ         || ಗುರು ||

ತೇರು ನಿಂದಿದೆ ನೋಡಿ ಕಳಸ ಐದು
ಇವೆ ಮೇಲೆ ಚಂದಮಾಮ ಲೋಕ ಚಂದಮಾಮ
ತೇರಿನೊಳೊಗೆ ನಿಜಲಿಂಗ ಕಾಣುತ್ತಿದೆ
ಚಂದಮಾಮ ಲೋಕ ಚಂದಮಾಮ || ಗುರು ||

ಭರವಸೆಯೊಳಗಿದೆ ಪೂರ್ಣಚಂದ್ರನ ಕಳೆ
ಚಂದಮಾಮ ಲೋಕ ಚಂದ ಮಾಮ
ನಮ್ಮ ಪರಮ ಆರೂಢ್ಯ
ಕೊಂಡ್ಯಾರು ಸಮರುವೆ ಬಲ್ಲಿ ಚಂದಮಾಮ
ಲೋಕ ಚಂದಮಾಮ      || ಗುರು ||