ಜನ್ಮಾಂಧರಾಗಿ ಹುಟ್ಟಿ, ಅಂಧತ್ವನ್ನು ಮೀರಿ ಸಂಗೀತದಲ್ಲಿ ಸಾಧನೆ ಮಾಡಿ ಹೆಸರು ಸಂಪಾದಿಸಿರುವ ಶ್ರೀ ಲಿಂಗರಾಜ ಗವಾಯಿಗಳು ಕರ್ನಾಟಕದ ಅಂಧ ಗಾಯಕರಲ್ಲಿರಲ್ಲೊಬ್ಬರಾಗಿದ್ದಾರೆ. ೧೯೨೦ರಲ್ಲಿ ಜನಿಸಿದ ಹುಟ್ಟು ಕುರುಡರಾದ ಶ್ರೀ ಲಿಂಗರಾಜ ಗವಾಯಿಗಳಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ಇದನ್ನು ಗಮನಿಸಿದ ಹಿರಿಯರೊಬ್ಬರು ಗವಾಯಿಗಳನ್ನು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸಿದರು. ಮೊದಲು ಅಲ್ಲಿ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳಿಂದ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಶಿಕ್ಷಣವಾಯಿತು.  ಆದರೆ ತಮಗೆ ಹಿಂದೂಸ್ಥಾನಿ ಪದ್ಧತಿಯಲ್ಲಿ ಆಸಕ್ತಿ ಹೆಚ್ಚು ಎಂಬುದನ್ನು ಲಿಂಗರಾಜರು ಗುರುಗಳಿಗೆ ತಿಳಿಸಿದಾಗ ಗುರುದ್ವಯರು ಹಿಂದೂಸ್ಥಾನಿ ಪದ್ಧತಿಯ ಶಿಕ್ಷಣ ಪ್ರಾರಂಭಿಸಿದರು.

ಅಂಧತ್ವವನ್ನು ಗೌಣವಾಗಿಸಿ ಅಖಂಡ ಸಾಧನೆ ಮಾಡಿದ ಲಿಂಗರಾಜ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮದ ಸಂಗೀತ ಪರೀಕ್ಷೆ, ಹುಬ್ಬಳ್ಳಿ ಸಂಗೀತ ಕಲೋದ್ಧಾರ ಸಮಿತಿಯ ಸಂಗೀತ ವಿಶಾರದ, ಪುಣೆಯ ಬಾಲ ಗಂಧರ್ವ ವಿದ್ಯಾಲಯದ ಉತ್ತರ ವಿಶಾರದ ಮುಂತಾದ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರು.

ಪಂಡಿತ್‌ ಬಾಲ ಗಂಧರ್ವರ ಕಛೇರಿಗಳಿಗೆ ಹಾರ್ಮೋನಿಯಂ ಸಾಥಿ ನೀಡಿದ ಹೆಗ್ಗಳಿಕೆ ಲಿಂಗರಾಜರದು.

ಸೊಲ್ಲಾಪುರ ಸಂಗಮೇಶ್ವರ ಕಾಲೇಜು, ಮುಧೋಳಿನ ಕಿಂಗ್‌ ಜಾರ್ಜ್‌ ಹೈಸ್ಕೂಲ್‌, ಬಾಗಲಕೋಟೆಯ ಬಸವೇಶ್ವರ ಹೈಸ್ಕೂಲ್‌, ಹುಬ್ಬಳ್ಳಿಯ ಮೂರು ಸಾವಿರ ಮಠದ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿರುವುದಲ್ಲದೆ ಹಳ್ಳಿಗಾಡುಗಳಲ್ಲಿ ಸಂಚರಿಸಿ ಗ್ರಾ

ಜನ್ಮಾಂಧರಾಗಿ ಹುಟ್ಟಿ, ಅಂಧತ್ವನ್ನು ಮೀರಿ ಸಂಗೀತದಲ್ಲಿ ಸಾಧನೆ ಮಾಡಿ ಹೆಸರು ಸಂಪಾದಿಸಿರುವ ಶ್ರೀ ಲಿಂಗರಾಜ ಗವಾಯಿಗಳು ಕರ್ನಾಟಕದ ಅಂಧ ಗಾಯಕರಲ್ಲಿರಲ್ಲೊಬ್ಬರಾಗಿದ್ದಾರೆ. ೧೯೨೦ರಲ್ಲಿ ಜನಿಸಿದ ಹುಟ್ಟು ಕುರುಡರಾದ ಶ್ರೀ ಲಿಂಗರಾಜ ಗವಾಯಿಗಳಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ಇದನ್ನು ಗಮನಿಸಿದ ಹಿರಿಯರೊಬ್ಬರು ಗವಾಯಿಗಳನ್ನು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸಿದರು. ಮೊದಲು ಅಲ್ಲಿ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳಿಂದ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಶಿಕ್ಷಣವಾಯಿತು.  ಆದರೆ ತಮಗೆ ಹಿಂದೂಸ್ಥಾನಿ ಪದ್ಧತಿಯಲ್ಲಿ ಆಸಕ್ತಿ ಹೆಚ್ಚು ಎಂಬುದನ್ನು ಲಿಂಗರಾಜರು ಗುರುಗಳಿಗೆ ತಿಳಿಸಿದಾಗ ಗುರುದ್ವಯರು ಹಿಂದೂಸ್ಥಾನಿ ಪದ್ಧತಿಯ ಶಿಕ್ಷಣ ಪ್ರಾರಂಭಿಸಿದರು.

ಅಂಧತ್ವವನ್ನು ಗೌಣವಾಗಿಸಿ ಅಖಂಡ ಸಾಧನೆ ಮಾಡಿದ ಲಿಂಗರಾಜ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮದ ಸಂಗೀತ ಪರೀಕ್ಷೆ, ಹುಬ್ಬಳ್ಳಿ ಸಂಗೀತ ಕಲೋದ್ಧಾರ ಸಮಿತಿಯ ಸಂಗೀತ ವಿಶಾರದ, ಪುಣೆಯ ಬಾಲ ಗಂಧರ್ವ ವಿದ್ಯಾಲಯದ ಉತ್ತರ ವಿಶಾರದ ಮುಂತಾದ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರು.

ಪಂಡಿತ್‌ ಬಾಲ ಗಂಧರ್ವರ ಕಛೇರಿಗಳಿಗೆ ಹಾರ್ಮೋನಿಯಂ ಸಾಥಿ ನೀಡಿದ ಹೆಗ್ಗಳಿಕೆ ಲಿಂಗರಾಜರದು.

ಸೊಲ್ಲಾಪುರ ಸಂಗಮೇಶ್ವರ ಕಾಲೇಜು, ಮುಧೋಳಿನ ಕಿಂಗ್‌ ಜಾರ್ಜ್‌ ಹೈಸ್ಕೂಲ್‌, ಬಾಗಲಕೋಟೆಯ ಬಸವೇಶ್ವರ ಹೈಸ್ಕೂಲ್‌, ಹುಬ್ಬಳ್ಳಿಯ ಮೂರು ಸಾವಿರ ಮಠದ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿರುವುದಲ್ಲದೆ ಹಳ್ಳಿಗಾಡುಗಳಲ್ಲಿ ಸಂಚರಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಸಂಗೀತ ಪ್ರಸಾರ ಮಾಡಿದ್ದಾರೆ.

ಶ್ರೀಯುತರ ಸಂಗೀತ ಸೇವೆಯನ್ನು ಗುರುತಿಸಿ ‘ಸಂಗೀತ ಸಾಗರ’, ‘ಚಿಂತಾಮಣಿ’, ‘ಸಂಗೀತ ಸಾಮ್ರಾಟ್‌’, ‘ಗಂಭೀರ ಸಂಗೀತ ರತ್ನ’ ಮುಂತಾದ ಬಿರುದುಗಳನ್ನು ನೀಡಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೦-೦೧ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಮಾಂತರ ಪ್ರದೇಶಗಳಲ್ಲಿ ಸಂಗೀತ ಪ್ರಸಾರ ಮಾಡಿದ್ದಾರೆ.