ಅಶೋಕ ಶಿಲಾ ಶಾಸನ ಮಸ್ಕಿ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೬ ಕಿ.ಮೀ
ತಾಲೂಕ ಕೇಂದ್ರದಿಂದ: ೩೦ ಕಿ.ಮೀ

 

ರಾಜ್ಯದಲ್ಲಿಯೇ ಅತ್ಯಂತ ಹಳೆಯ ಗ್ರಾಮ ಮಸ್ಕಿ

[ಮಾಸಂಗಿಪುರ]

ಕಿ.ಪೂ. ೨೦೦-೩೦೦ ವರ್ಷಗಳ ಹಳೆಯ ಊರು ಮಸ್ಕಿಯಲ್ಲಿ ದೊರೆತ ಶಾತವಾಹನರಾಜ ಶಾತಮಿಪುತ್ರನ [ಕ್ರಿ.ಶ. ೧೮೬] ಕಾಲದ ನಾಣ್ಯಗಳು ಮತ್ತು ಉತ್ಖನನ ಕಾಲದ [ಕಿ.ಪೂ.೨೦೦-೩೦೦] ಎಲ್ಲವು ಚಕಮಕಿಕಲ್ಲು, ಮಣಿಸರ, ಆಭರಣಗಳೇ ಸಾಕ್ಷಿ ಇಲ್ಲಿ ದೊರೆತ ಎಲ್ಲಾ ಪ್ರಾಚೀನ ಅವಶೇಷಗಳನ್ನು ಹೈದ್ರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ ಸಂಗ್ರಹಿಸಿದ್ದರು ಇಂದು ಹೈದ್ರಾಬಾದ್, ದೆಹಲಿ ಮತ್ತು ಮದರಾಸಿನ ವಸ್ತು ಸಂಗ್ರಹಾಲಯದಲ್ಲಿವೆ.

೧೯೧೫ರಲ್ಲಿ ಚಿನ್ನದ ಗಣಿಯ ಇಂಜನಿಯರರಾಗಿದ್ದ ಬಿಡನ್ ಪತ್ತೆಹಚ್ಚಿದ ಅಶೋಕನ ಶಿಲಾಶಾಸನ ಕ್ರಿ.ಪೂ.೨೫೬ರಲ್ಲಿ ಬ್ರಾಹ್ಮಿಲಿಪಿಯಲ್ಲಿ ಬರೆಯಲ್ಪಟ್ಟ ಅಶೋಕನ ಹೆಸರನ್ನು ಒಳಗೊಂಡ ಮೊದಲ ಶಾಸನ ಇದಾಗಿದೆ.

 

ಮುದಗಲ್ಲು ವಿಜಯನಗರ ಅರಸರು ಮತ್ತು ಆದಿಲ್ ಶಾಹಿಗಳ ಕದನಕ್ಕೆ ಹೆಸರಾದ ಕಲ್ಲು ಮುದಗಲ್ಲು

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೬ ಕಿ.ಮೀ
ತಾಲೂಕ ಕೇಂದ್ರದಿಂದ: ೧೮ ಕಿ.ಮೀ

ಕ್ರಿ.ಶ. ೧೨೪೯ರ ತಾಮ್ರ ಶಾಸನವೊಂದರ ಪ್ರಕಾರ ದೇವಗಿರಿಯ ಯಾದವರ ಅಮಾತ್ಯನ ಕೇಂದ್ರಸ್ಥಾನ. ಕ್ರಿ.ಶ. ೧೩೧೨ರಲ್ಲಿ ಮಲ್ಲಿಕಾಫರನ ದಾಳಿಗೆ ಕೋಟೆ ಹಾಳಾಯಿತಾದರೂ ಮುದರಂಗಪ್ಪ ಎಂಬುವನಿಂದ ಕಟ್ಟಲ್ಪಟ್ಟ ಬೃಹತ್ ಕೋಟೆ ಸುತ್ತಮುತ್ತ ಕೋಟೆಯ ಮಹಾದ್ವಾರ, ಗೋಡೆಗಳು ಗತವೈಭವ ಸಾರುತ್ತಾ ನಿಂತಿವೆ. ವಿಜಯನಗರದ ಅಭೇದ್ಯ ಕೋಟೆ ಮುದಗಲ್ ಕೋಟೆಯ ಪೂರ್ವದ ಮುಳ್ಳಗಸಿ, ಕಂಬಗಳ ಮೇಲೆ ಕೆತ್ತಿದ ಚಿತ್ರ ಚಿತ್ತಾರಗಳು ಕಂದಕ ಬುರುಜುಗಳು, ಗುಡ್ಡದ ತುದಿಯ ಮೇಲೆ ಬಾಲಾಹಿಸಾರ್ ಕೊತ್ತಲ ೧೪ ಅಡಿ ಉಕ್ಕ ೧೦ ಟನ್ನ್ ಭಾರದ ಪಂಚಲೋಹದ ತೋಪುಗಳೂ ಇವೆ. ಒಳಕೋಟೆಯಲ್ಲಿನ ರಾಮಲಿಂಗೇಶ್ವರ ದೇವಾಲಯವಿದ್ದು ಅದರ ಎಡಕ್ಕೆ ಕಿರಿಯಕಲ್ಲಿನಲ್ಲಿ ಕೆತ್ತಿದ ಶಿಲಾಶಾಸನವಿದೆ.

 

ಲಿಂಗಸೂಗೂರು ಐತಿಹಾಸಿಕ ಬಂಗಲೆ [ತಹಶೀಲ್ದಾರ ಕಾರ್ಯಾಲಯ]

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೬ ಕಿ.ಮೀ
ತಾಲೂಕ ಕೇಂದ್ರದಿಂದ: ೦೦ ಕಿ.ಮೀ

ಹೈದ್ರಾಬಾದ್ ನಿಜಾಮ್ ರ ಕಾಲದಲ್ಲಿ ಛಾವಣಿ ಹಿಂದೆ ಈ ಊರು ದಂಡಿನ ಠಾಣ್ಯವಾಗಿತ್ತು. ಬ್ರಿಟೀಷ ರೆಸಿಡೆಂಟ್ ಕ್ಯಾಪ್ಟನ್ ರ ವಾಸಸ್ಥಾನ ಇಂದು ಲಿಂಗಸೂಗೂರು ಎಂದು ಖ್ಯಾತಿಯಾಗಿದ ತಾಲೂಕು ಕೇಂದ್ರ ೧೯೦೫ಕ್ಕೆ ಮೊದಲು ಜಿಲ್ಲಾ ಕೇಂದ್ರವೂ ಹೌದು ವಿಶಾಲವಾದ ಕೆರೆ ಸರಕಾರಿ ಕೇರಿಗಳ ಸಂಕೀರ್ಣವು ೧೦೦ ವರ್ಷಗಳ ಹಿಂದೆ [೧೯೦೨] ’ಲಿಯೋ ನರ್ಡ್ ಮನ್’ ಸಾಹೇಬ [ಬ್ರಿಟಿಷ್ ಅಧಿಕಾರ] ದ ಕಾಲದಲ್ಲಿ ಕಟ್ಟಲ್ಪಟ್ಟಿದ್ದು ನೂರೊಂದು ಬಾಗಿಲುಗಳಿವೆ ಭವ್ಯಬಂಗಲೆ ವಾಸ್ತುಶೈಲಿ: ಮದ್ರಾಸ್ ಟೆರೇಸ್ ಪ್ಲ್ಯಾಟ್ ರೂಫಿ ಅಷ್ಟಕೋನಾಕಾರದ ಬಾವಿಗಳು ನಗರದಿಂದ ೩ ಕಿ.ಮೀ. ಅಂತರದಲ್ಲಿರುವ ಕಸಬಾ ಲಿಂಗಸೂಗೂರಿನ ಕುಪ್ಪೆರಯ ಸ್ವಾಮಿಯ ದೇವಾಲಯ ಲಕ್ಷ್ಮೇಗುಡಿ ಗೋರಬಾಳ ಹನುಮಂತರಾಯ [ದಾಸ ಪರಂಪರೆಯ] ಜನ್ಮಸ್ಥಳ.

 

ಸಜ್ಜಲಗುಡ್ಡ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೧೧೦ ಕಿ.ಮೀ
ತಾಲೂಕ ಕೇಂದ್ರದಿಂದ: ೪೦ ಕಿ.ಮೀ

ತಮ್ಮ ಆಧ್ಯಾತ್ಮಿಕ ಹಾಗೂ ಸಮಾಜ ಸೇವೆಗೆ ಹೆಸರಾದ ಮಾತೃಶ್ರೀ ಶರಣಮ್ಮನವರ ಗದ್ದುಗೆ ಇದೆ. ಇದು ಮುದಗಲ್ ನಿಂದ ಇಲಕಲ್ ಮಾರ್ಗದಲ್ಲಿದೆ.

 

ಜಲದುರ್ಗ ಛಾಯಭಾಗವತಿ ಡ್ರಾಪ್

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೬ ಕಿ.ಮೀ
ತಾಲೂಕ ಕೇಂದ್ರದಿಂದ: ೨೭ ಕಿ.ಮೀ

ಏಳುಸುತ್ತಿನ ಕೋಟೆ ಏಳು ಅಗಸಿಬಾಗಿಲುಗಳು ಕೃಷ್ಣೆಯೊಡಲ ನಡುಗಡ್ಡೆಯಿಂದ ಕಂಗೊಳಿಸುವ ನಿಸರ್ಗನಿರ್ಮಿತ ರಮಣೀಯ ಸ್ಥಳ ಜಲದುರ್ಗ, ೧೨ನೇ ಶತಮಾನದಲ್ಲಿ ದೇವಗಿರಿ ಯಾದವರಾಜನಿಂದ ಕಟ್ಟಲ್ಪಟ್ಟ ಏಳುಸುತ್ತಿನ ಕೋಟೆ ಗೋಡೆಯನ್ನು ಮೆದೋಸ್ ಟೇಲರ್ ಎಂಬ ಸಂಶೋಧಕನು ನೋಬಲ್ ಕ್ವೀನ್(೧೮೭೧) ಎಂಬ ಗ್ರಂಥದಲ್ಲಿ ಕೋಟೆ ಬಗ್ಗೆ ಉಲ್ಲೇಖಿಸಿದ್ದಾರೆ ವಿಜಯನಗರ ಮತ್ತು ಅದಿಲ್ ಶಾಹಿಗಳ ಆಡಳಿತಕ್ಕೊಳಪಟ್ಟಿದ್ದ ಆಯಕಟ್ಟಿನ ಸೈನಿಕಠಾಣಿ ವಿಜಯನಗರಕಾಲದ ಗಲ್ಲುಕಂಬದ ಸ್ಥಳ ೪೦೦-೫೦೦ ಅಡಿ ಆಳದ ಕೃಷ್ಣನದಿಯ ಕಮರಿಯ ಹಾಗೂ ಕೃಷ್ಣೆ ಎರಡು ಟಿಸಿಳಾಗಿ ಒಡೆದು ಬಂಡೆಗಳ ಮೇಲೆ ಧುಮುಕಿಬರುವ ಜಲಧಾರೆ ನೋಡಲು ನಯನ ಮನೋಹರ ಛಾಯಾಜಲಪಾತಗಳೆಂದು ಕಲ್ಪನೆ.

 

ಲಿಂಗಸೂಗೂರು ತಾಲೂಕಿನ ಇತರೆ ಪ್ರಮುಖ ಸ್ಥಳಗಳು

ಸ್ಥಳ ತಾಲೂಕಿನಿಂದ ದೂರ ವೈಶಿಷ್ಟ್ಯ

ಸಂತೆಕಲ್ಲೂರು ೧೫ ಕಿ.ಮೀ. ಕೃಷಿ ಖುಷಿ ಘನಮಠ ಶಿವಯೋಗಿಗಳು ನೆಲೆ ನಿಂತು ಪವಿತ್ರ ತಾಣ ಕೃಷಿ‌ಜ್ಞಾನ ಪ್ರದೇಶಕ್ಕೆ ಗ್ರಂಥಕರ್ತೃರು ಸಂಗೀತಗಾರರ, ಕವಿಗಳ ತವರುಮನೆಯಾಗಿತ್ತು.

ಛತ್ರ ೩೫ ಕಿ.ಮೀ. ಶ್ರೀ ಮಾರುತೇಶ್ವರನ (ಆಂಜಿನೇಯ್ಯ) ದೇವಸ್ಥಾನ ಸಹಸ್ರಾರು ಭಕ್ತಾದಿಗಳನ್ನು ಆಕರ್ಷಿಸುವ ಪುಣ್ಯಕ್ಷೇತ್ರ ಮುದಗಲ್ ತಾವರಗೇರ ಮಧ್ಯ.

ಚಿಕ್ಕನಗನೂರು ೨೫ ಕಿ.ಮೀ. ಪುರಾತನ ಶಿವಲಿಂಗೇಶ್ವರ ದೇವಸ್ಥಾನ ಇದೆ ಪಾಮನಕಲ್ಲುರು ನಿಂದ ಹಟ್ಟಿ ಮಾರ್ಗ.

ಐದನಾಳ ೩ ಕಿ.ಮೀ. ನೀರಲಕೇರಿ ಬಸವಲಿಂಗ ಶಿವಯೋಗಿಗಳ ಐಕ್ಯಸ್ಥಳ.

 

ಗುಡಗುಂಟ ಅಮರೇಶ್ವರ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೬ ಕಿ.ಮೀ
ತಾಲೂಕ ಕೇಂದ್ರದಿಂದ: ೧೫ ಕಿ.ಮೀ

ತಾಲೂಕಿನ ಪ್ರಾಚೀನ ಕ್ಷೇತ್ರಗಳಲ್ಲಿ ಗುಡುಗುಂಟ ಶ್ರೀ ಅಮರೇಶ್ವರ ಕ್ಷೇತ್ರದ ಒಂದು. ದಕ್ಷಿಣೋತ್ತರವಾಗಿ ಹಬ್ಬಿದ ಗುಡ್ಡಗಳ ಆಳವಾದ ಕೊಳ್ಳದಲ್ಲಿ ಶ್ರೀ ಅಮರೇಶ್ವರ ಮೂಲ ಉದ್ಬವಲಿಂಗವಿದೆ. ಅಂತರ್ಜಲವಾಗಿ ಹೊರಹೊಮ್ಮುತ್ತಿರುವ ತಿಳಿನೀರಿನ ಝರಿಯ ಗಂಗಾಸ್ಥಳಕ್ಕೆ (ಗಾಡಿಗಿಬಾಗಿ) ಎಂದು ಪ್ರಸಿದ್ಧಿ ಇಲ್ಲಿನ ನೀರು ಅಮರೇಶ್ವರ ಲಿಂಗದ ಸುತ್ತಲೂ ಹರಿದು ಕೊಳದಲ್ಲಿ ಸೇರುತ್ತದೆ ಇಲ್ಲಿ ಸ್ನಾನ ಮಾಡುವುದೇ ಸರ್ವಪಾಪ ನಿವಾರಣೆಯ ಪುಣ್ಯಭಾಗ್ಯವೆಂದು ನಂಬಿಕೆ ಇದೆ. ಇಲ್ಲಿ ರಾಮಾಯಣ ಕಾಲದ ಪ್ರಸಿದ್ಧ ರಾಮತೀರ್ಥವೆಂಬ ಜಲಧಾರೆ ಇದೆ.

 

ಗುರುಗುಂಟಾ ಸಂಸ್ಥಾನ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೬ ಕಿ.ಮೀ
ತಾಲೂಕ ಕೇಂದ್ರದಿಂದ: ೧೯ ಕಿ.ಮೀ

ಗಿಡಗಂಟೆ, ಗುಡ್ಡಗಂಟೆ ಎಂಬ ಪರ್ಯಾಯ ನಾಮಗಳಿಂದ ಮುಂದುವರೆದು ಗುರುಗುಂಟ ಎಂದು ಹೆಸರು ವಾಸಿಯಾಗಿದೆ. ನಾಯಕ ಮನೆತನದ ರಾಜ ಸೋಮನಾಥನಾಯಕ, ರಾಜ ನರಸಿಂಹನಾಯಕ ಅರಸರು ಆಳಿದ ಪ್ರತೀತಿ ಇದೆ ರಾಜರ ಅರಮನೆ ದರ್ಬಾರ, ಕೋಟೆ, ಅಗಸಿಗಳು, ಗರಡಿಮನೆಗಳು, ದೇವಾಲಯಗಳು, ಐತಿಹಾಸಿಕ ಪ್ರಸಿದ್ಧಿಗೆ ಕಾರಣವಾಗಿವೆ.

 

ಬಸವಸಾಗರ ಅಣೆಕಟ್ಟು

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೬ ಕಿ.ಮೀ
ತಾಲೂಕ ಕೇಂದ್ರದಿಂದ: ೧೫ ಕಿ.ಮೀ

ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಜಿಲ್ಲೆಗಳ ಸಂಗಮ ಸ್ಥಳ ಜಾವೂರದಲ್ಲಿ ಕೃಷ್ಣ ನದಿಗೆ ನಿರ್ಮಿಸಿದ ಅಣೆಕಟ್ಟು ಒಂದು ಪ್ರೇಕ್ಷಣೀಯ ಸ್ಥಳ. ಅಣೆಕಟ್ಟಿ ಹಿನ್ನಿರಿನಲ್ಲಿರುವ ನವಲಿಯ ಜಡೇಶ್ವರ ಲಿಂಗ ದೇವಾಲಯ ಶಂಕರ ದಾಸಮಯ್ಯನವರ ತಪೋಭೂಮಿಯಾಗಿದೆ. ಇದು ನಾರಾಯಣಪೂರ ಅಣೆಕಟ್ಟು ಎಂದು ಪ್ರಸಿದ್ಧಿಯಾಗಿದೆ.

 

ಹಟ್ಟಿ ಚಿನ್ನದ ಗಣಿ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೮೩ ಕಿ.ಮೀ
ತಾಲೂಕ ಕೇಂದ್ರದಿಂದ: ೨೫ ಕಿ.ಮೀ

ಅನ್ನ ಬೆಳೆಯುವ ನಾಡಿದು, ಚಿನ್ನ ಬೆಳೆಯುವ ನಾಡಿದು ಎಂಬ ಸಾಲುಗಳಿಗೆ ಸಾಕ್ಷಿಯಾಗಿರುವ ಹುಟ್ಟಿಯ ಚಿನ್ನದ ಗಣಿಯು ಜಿಲ್ಲೆಯ ಪ್ರಮುಖ ಕೈಗಾರಿಕೆ ಹಾಗೂ ರಾಷ್ಟ್ರದ ಕೈಗಾರಿಕಾ ರಂಗದಲ್ಲಿ ಪಾಲುದಾರನಾದ ಪುಟ್ಟಗ್ರಾಮ. ಕ್ರಿಸ್ತಪೂರ್ವದಿಂದಲೇ ಬಂಗಾರ ತೆಗೆಯುವ ಕಾರ್ಯ ಪ್ರಾರಂಭಗೊಂಡು ವಿಜಯನಗರದ ಅರಸರ ಚಿನ್ನದ ತಯಾರಿಕೆ ಕೊಟ್ಟಿಲಾಗಿ ಇದು ರಾಷ್ಟ್ರದಲ್ಲಿ ಚಿನ್ನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.