ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕಗಳು

ಯುಎನ್‌ಡಿಪಿ(ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಮಾನವ ಅಭಿವೃದ್ಧಿ ವರದಿಗಳನ್ನು ೧೯೯೦ ರಿಂದ ಪ್ರತಿ ವರ್ಷವೂ ಪ್ರಕಟಿಸಿಕೊಂಡು ಬರುತ್ತ್ತಿದೆ. ಅದರಲ್ಲಿ ವಿಶ್ವದ ೧೭೫ ರಿಂದ ೧೭೭ ದೇಶಗಳ ಅಭಿವೃದ್ಧಿಯನ್ನು ಸಾಂಪ್ರದಾಯಿಕ ವಾಗಿ ಜಿಡಿಪಿ/ಜಿಎನ್‌ಪಿಗಳನ್ನು ಬಳಸಿಕೊಂಡು ಮಾಪನ ಮಾಡುವುದಕ್ಕೆ ಪ್ರತಿಯಾಗಿ ಮಾನವ ಅಭಿವೃದ್ಧಿ ಸೂಚ್ಯಂಕವೆಂಬ ಮೂರು ಸೂಚಿಗಳನ್ನೊಳಗೊಂಡ ಸಂಯುಕ್ತ ಸೂಚ್ಯಂಕದಿಂದ ಮಾಪನ ಮಾಡಲಾಗುತ್ತದೆ. ಆದರೆ ಈ ಮಾನವ ಅಭಿವೃದ್ಧಿ ಸೂಚ್ಯಂಕ ದಲ್ಲಿ ಮಹಿಳೆಯರ ಅಭಿವೃದ್ಧಿಯನ್ನು ಮಾಪನ ಮಾಡಲು ನಮಗೆ ಯಾವುದೆ ಸೂಚಿಗಳು ದೊರೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಯುಎನ್‌ಡಿಪಿಯು ೧೯೯೫ರಲ್ಲಿ ಮಹಿಳೆಯರ ಅಭಿವೃದ್ಧಿ ಸಾಧನೆಯನ್ನು ಪುರುಷರ ಅಭಿವೃದ್ಧಿಗೆ ಸಾಪೇಕ್ಷವಾಗಿ ಪೃಥಕರಿಸಲು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕವೆಂಬ ಮಾಪನವನ್ನು ರೂಪಿಸಿತು.

ಮಾನವ ಅಭಿವೃದ್ಧಿ ಸೂಚ್ಯಂಕವೆನ್ನುವುದು ಜೀವನಾಯುಷ್ಯ, ಶೈಕ್ಷಣಿಕ ಸಾಧನೆ ಮತ್ತು ಸಂಪನ್ಮೂಲಗಳ ಮೇಲಿನ ಹಕ್ಕುದಾರಿಕೆಗಳೆಂಬ ಮೂರು ಸೂಚಿಗಳ ಸಂಯುಕ್ತ ಮಾಪನವಾಗಿದೆ. ಈ ಸೂಚ್ಯಂಕವನ್ನು ಲಿಂಗ ಸಂಬಂಧಿ ನೆಲೆಯಲ್ಲಿ ಬಳಸಿಕೊಂಡು ಮಹಿಳೆಯರು ಮತ್ತು ಪುರುಷರು ಅಭಿವೃದ್ಧಿಗೆ ಸಂಬಂದಿದಂತೆ  ಸಾಧಿಸಿಕೊಂಡಿರುವ  ಸಾಧನೆಯ ನಡುವಿನ ಅಸಮಾನತೆಯನ್ನು ಅಳೆಯಬಹುದಾಗಿದೆ. ಈ ಸೂಚ್ಯಂಕದ ವ್ಯಾಪ್ತಿಯು ಒಂದರಿಂದ ಶೂನ್ಯದವರೆಗಿರುತ್ತದೆ. ಈ ಸೂಚ್ಯಂಕವು ಒಂದಕ್ಕೆ ಹತ್ತಿರವಿದ್ದರೆ ಅಲ್ಲಿನ ಲಿಂಗ ಸಂಬಂಧಗಳಲ್ಲಿ ಅಸಮಾನತೆಯು ಕಡಿಮೆಯೆಂದು ಮತ್ತು ಅದು ಶೂನ್ಯಕ್ಕೆ ಹತ್ತಿರವಿದ್ದರೆ ಅಲ್ಲಿ ಲಿಂಗ ಅಸಮಾನತೆಯು ತೀವ್ರವಾಗಿದೆಯೆಂದು ತಿಳಿಯ ಬಹುದು. ಇಲ್ಲಿ ನೀಡಿರುವ ಕೋಷ್ಟಕದಲ್ಲಿ ಕರ್ನಾಟಕದ ಇಪ್ಪತ್ತೇಳು ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕಗಳ ವಿವರವನ್ನು ೧೯೯೧ ಮತ್ತು ೨೦೦೧ ಎರಡು ಕಾಲಘಟ್ಟಕ್ಕೆ ನೀಡಲಾಗಿದೆ.

ಕರ್ನಾಟಕದಲ್ಲಿ ಜಿಲ್ಲಾವಾರು ಮಾನವ ಅಭಿವೃದ್ಧಿ ಸೂಚ್ಯಂಕಗಳು ಮತ್ತು ಲಿಂಗ ಸಂಬಂಧಿ ಅಭಿವೃದ್ಧಿ

ಸೂಚ್ಯಂಕಗಳು : ೧೯೯೧ ಮತ್ತು ೨೦೦೧

ಕ್ರ.ಸಂ.

ಜಿಲ್ಲೆಗಳು

ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕಗಳು

ಮಾನವ ಅಭಿವೃದ್ಧಿ ಸೂಚ್ಯಂಕಗಳು

೧೯೯೧

೨೦೦೧

೧೯೯೧

೨೦೦೧

೧. ಬೆಳಗಾವಿ ೦.೫೪೫ ೦.೬೪೮ ೦.೫೨೫ ೦.೬೩೫
೨. ವಿಜಾಪುರ ೦.೫೦೪ ೦.೫೮೯ ೦.೪೮೬ ೦.೫೭೩
೩. ಬಾಗಲಕೋಟೆ ೦.೫೦೫ ೦.೫೯೧ ೦.೪೮೩ ೦.೫೭೧
೪. ಗುಲಬರ್ಗಾ ೦.೪೫೩ ೦.೫೬೪ ೦.೪೩೨ ೦.೫೪೩
೫. ರಾಯಚೂರು ೦.೪೪೩ ೦.೫೪೭ ೦.೪೨೨ ೦.೫೩೦
೬. ಕೊಪ್ಪಳ ೦.೪೪೬ ೦.೫೮೨ ೦.೪೨೮ ೦.೫೬೧
೭. ಧಾರವಾಡ ೦.೫೩೯ ೦.೬೪೨ ೦.೫೩೧ ೦.೬೨೬
೮. ಗದಗ ೦.೫೧೬ ೦.೬೩೪ ೦.೫೦೨ ೦.೬೨೫
೯. ಹಾವೇರಿ ೦.೪೯೬ ೦.೬೦೩ ೦.೪೮೦ ೦.೫೯೬
೧೦. ಬಳ್ಳಾರಿ ೦.೫೧೨ ೦.೬೧೭ ೦.೪೯೯ ೦.೬೦೬
೧೧. ಚಿತ್ರದುರ್ಗ ೦.೫೩೫ ೦.೬೨೭ ೦.೫೧೪ ೦.೬೧೮
೧೨. ದಾವಣಗೆರೆ ೦.೫೪೮ ೦.೬೩೫ ೦.೫೩೦ ೦.೬೨೧
೧೩. ಶಿವಮೊಗ್ಗ ೦.೫೮೪ ೦.೬೭೩ ೦.೫೭೨ ೦.೬೬೧
೧೪. ಚಿಕ್ಕಮಗಳೂರು ೦.೫೫೯ ೦.೬೪೭ ೦.೫೫೦ ೦.೬೩೬
೧೫. ತುಮಕೂರು ೦.೫೩೯ ೦.೬೩೦ ೦.೫೨೮  ೦.೬೧೮
೧೬. ಬೀದರ್ ೦.೪೯೬ ೦.೫೯೯ ೦.೪೭೭ ೦.೫೭೨
೧೭. ಕೋಲಾರ ೦.೫೨೨ ೦.೬೨೫ ೦.೫೦೫ ೦.೬೧೩
೧೮. ಬೆಂಗಳೂರು(ನ) ೦.೬೨೩ ೦.೭೫೩ ೦.೫೯೨ ೦.೭೩೧
೧೯. ಬೆಂಗಳೂರು(ಗ್ರಾ) ೦.೫೩೯ ೦.೬೫೩ ೦.೫೨೪ ೦.೬೪೦
೨೦. ಮಂಡ್ಯ ೦.೫೧೧ ೦.೬೦೯ ೦.೪೯೧ ೦.೫೯೩
೨೧. ಉತ್ತರ ಕನ್ನಡ ೦.೫೬೭ ೦.೬೫೩ ೦.೫೪೮ ೦.೬೩೯
೨೨ ಹಾಸನ ೦.೫೧೯ ೦.೬೩೯ ೦.೫೦೭ ೦.೬೩೦
೨೩ ದಕ್ಷಿಣ ಕನ್ನಡ ೦.೬೬೧ ೦.೭೨೨ ೦.೬೪೫ ೦.೭೧೪
೨೪ ಉಡುಪಿ ೦.೬೫೯ ೦.೭೧೪ ೦.೬೪೪ ೦.೭೦೪
೨೫ ಕೊಡಗು ೦.೬೨೩ ೦.೬೯೭ ೦.೬೧೭ ೦.೬೯೦
೨೬ ಮೈಸೂರು ೦.೫೨೪ ೦.೬೩೧ ೦.೪೯೬ ೦.೬೦೫
೨೭ ಜಾಮರಾಜನಗರ ೦.೪೮೮ ೦.೫೭೬ ೦.೪೭೨ ೦.೫೫೭
ರಾಜ್ಯ ಕರ್ನಾಟಕ ೦.೫೪೧ ೦.೬೫೦ ೦.೫೨೫ ೦.೬೩೭

ಮೂಲ : ಕರ್ನಾಟಕ ಸರ್ಕಾರ ೨೦೦೬.ಕರ್ನಾಟಕ ಮಾನವ ಅಭಿವೃದ್ಧಿ ವರದಿ-೨೦೦೫: ಪು: ೧೯ ಮತ್ತು ೨೪