ನಮ್ಮ ಮಿದುಳಿನ ಬಗ್ಗೆ ನಮಗಿರುವ ತಿಳುವಳಿಕೆ ಅತ್ಯಲ್ಪ. ಕೇವಲ ಒಂದೂವರೆ ಕಿಲೋಗ್ರಾಂ ತೂಗುವ ಈ ಅಂಗದ ರಚನೆ ಮತ್ತು ಕಾರ್ಯವೈಖರಿ ಊಹಿಸಲಾಗದಷ್ಟು ನರಕೋಶಗಳೊಳಗೆ ನಡೆಯುವ ರಾಸಾಯನ ಕ್ರಿಯೆಗಳು, ಈ ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗುವ ನರವಾಹಕಗಳು ನಮ್ಮ ನಡೆ ನುಡಿ ಭಾವನೆಗಳನ್ನು ನಿರ್ಧರಿಸುತ್ತವೆ! ಇಂದು ಎಂ.ಆರ್.ಐ. ಸಿಟಿ ಸ್ಕ್ಯಾನ್ ಮುಖಾಂತರ ಮಿದುಳಿನ ರಚನೆಯಲ್ಲಿನ ನ್ಯೂನತೆಗಳನ್ನು ಪೆಟ್ ಸ್ಕ್ಯಾನ್, ಫಂಕ್ಷನಲ್ ಎಂ.ಆರ್.ಐ. ಮುಖಾಂತರ, ಮಿದುಳು ಕೆಲಸ ಮಾಡುವ ವಿಧಾನವನ್ನು ಕಣ್ಣಾರೆ ಕಾಣಬಹುದು. ಈ ಹಿಂದೆ, ಕಾರಣ ಅಸ್ಪಷ್ಟವಾದದ್ದು ಎಂದು ಹೇಳಲಾದ ಅಥವಾ ಸುಪ್ತ ಮನಸ್ಸಿನ ದ್ವಂದ್ವಗಳಿಂದ ಬರಬಹುದು ಎನ್ನಲಾದ ಸ್ಕಿಜೋಫ್ರೀನಿಯಾ (ಹುಚ್ಚು ಕಾಯಿಲೆ) ಖಿನ್ನತೆ, ಗೀಳು ಮನೋರೋಗ, ಅತಿಭಯ ಅಥವಾ ಹಠಾತ್ ಭಯಗಳೆಲ್ಲ ಮಿದುಳಿನ ರೋಗಗಳೆಂದೇ ಈಗ ಸಾಬೀತಾಗಿದೆ.
೨೦೦೧ ರ ಮಾರ್ಚ್ ತಿಂಗಳ ೧೨ನೇ ತಾರೀಖಿನಿಂದ ೧೮ನೇ ತಾರೀಖಿನವರೆಗೆ ನಡೆದ ಅಂತರರಾಷ್ಟ್ರೀಯ ಮಿದುಳು ಜಾಗೃತಿ ಸಪ್ತಾಹದ ಅಂಗವಾಗಿ, ಆರೋಗ್ಯ ಮತ್ತು ಅನಾರೋಗ್ಯದಲ್ಲಿ ಮಿದುಳಿನ ರಚನೆ ಮತ್ತು ಕಾರ್ಯ ವಿಧಾನ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. ಈ ಪ್ರಕಟಣೆಗೆ ನೆರವಾದ ನವದೆಹಲಿಯ ರಾಷ್ಟ್ರೀಯ ಮಿದುಳು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ|| ವಿಜಯಲಕ್ಷ್ಮಿ ರವೀಂದ್ರನಾಥ್, ನಿಮ್ಹಾನ್ಸ್ನ ಮನೋವೈದ್ಯ ವಿಭಾಗದ ಮುಖ್ಯಸ್ಥ ಡಾ|| ಎನ್. ಜಾನಕೀರಾಮಯ್ಯ, ಸಹೋದ್ಯೋಗಿಗಳಾದ ಡಾ|| ಸುಮಂತ್ ಖನ್ನ ಡಾ|| ವೈ ಜನಾರ್ಧನ ರೆಡ್ಡಿ, ನಿಮ್ಹಾನ್ಸ್ನ ನಿರ್ದೇಶಕರಾದ ಡಾ|| ಎಂ. ಗೌರೀದೇವಿ, ಅಂದವಾಗಿ ಮುದ್ರಿಸಿರುವ ಶ್ರೀ ಸಿ. ರಮೇಶ್ ಬಾಬು ಈ ಎಲ್ಲರಿಗೆ ನನ್ನ ನಮನಗಳು.
ಡಾ|| ಸಿ. ಆರ್. ಚಂದ್ರಶೇಖರ್
ನಿಮ್ಹಾನ್ಸ್, ಬೆಂಗಳೂರು
ಮಾರ್ಚ್ ೨೦೦೧
ಮಾನ್ಯರೇ, ಮೆದುಳಿನ ರೋಗಗಳಲ್ಲಿ ಅಪಸ್ಮಾರ ರೋಗವು ಒಂದಲ್ಲವೇ? ಆ ಬಗ್ಗೆ ಲೇಖನವಿದ್ದರೆ ಅನುಕೂಲವಲ್ಲವೆ? ರೋಗಿಗಳಿಂದ ಅಥವಾ ರೋಗಿಗಳ ಪೋಷಕರಿಂದ ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರೆ ಅನುಕೂಲವಾಗುತ್ತದೆ. ನಿಮ್ಮ ತಾಣದ ಆರೋಗ್ಯ ವಿಭಾಗದಲ್ಲಿ ಪ್ರಪಂಚದಲ್ಲಿಯೇ ಹೆಚ್ಚು ಕಾಡುತ್ತಿರುವ ರೋಗಗಳಾದ, ಮಧುಮೇಹ, ರಕ್ತದೊತ್ತಡ, ಥೈರಾಯಿಡ್, ಅಪಸ್ಮಾರ, ಮುಂತಾದ ರೋಗಗಳ ಬಗ್ಗೆ ವಿವರವಾದ ಲೇಖನ ಬರೆಯುವುದಲ್ಲದೆ. ಓದುಗರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ವ್ಯವಸ್ಠೆ ಇದ್ದರೆ. ಅನುಕೂಲವಲ್ಲವೇ? ಲೇಖನ ಸಹ ಪರಿಪೂರ್ಣವಾದಂತಾಗುತ್ತದಲ್ಲವೆ? ಧನ್ಯವಾದಗಳೊಡನೆ, ವಂದನೆಗಳು